1. ಇ-ಪ್ರಕ್ರಿಯೆಗಳು ಎಂದರೇನು?

ಇ-ಪ್ರಕ್ರಿಯೆಗಳು ಎಂಬುದು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ವಿದ್ಯುನ್ಮಾನ ರೀತಿಯಲ್ಲಿ ನಡೆಸಲು ಒದಗಿಸಲಾದ ವೇದಿಕೆಯಾಗಿದೆ. ಈ ಸೇವೆಯ ಮೂಲಕ, ಯಾವುದೇ ನೋಂದಾಯಿತ ಬಳಕೆದಾರರು (ಅಥವಾ ಅವರ ಅಧಿಕೃತ ಪ್ರತಿನಿಧಿ) ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಯಾವುದೇ ನೋಟಿಸ್ / ಸೂಚನೆ / ಪತ್ರವನ್ನು ವೀಕ್ಷಿಸಬಹುದು ಹಾಗೂ ಅದಕ್ಕೆ ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು.

2. ಇ-ಪ್ರಕ್ರಿಯೆಗಳ ಪ್ರಯೋಜನಗಳೇನು?

ಇ-ಪ್ರಕ್ರಿಯೆಗಳು ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಎಲ್ಲಾ ನೋಟಿಸ್‌ಗಳು / ಸೂಚನೆಗಳು / ಪತ್ರಗಳಿಗೆ ವಿದ್ಯುನ್ಮಾನ ರೀತಿಯಲ್ಲಿ ಪ್ರತಿಕ್ರಿಯೆ ಸಲ್ಲಿಸುವ ಸರಳ ವಿಧಾನವಾಗಿದೆ. ಇದರಿಂದ ತೆರಿಗೆದಾರರು ಆದಾಯ ತೆರಿಗೆ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲದ ಕಾರಣ ಅನುಸರಣೆ ಹೊರೆ ಕಡಿಮೆಯಾಗುತ್ತದೆ. ಜೊತೆಗೆ, ಭವಿಷ್ಯದ ಉಲ್ಲೇಖಕ್ಕಾಗಿ ಫೈಲಿಂಗ್ ಗಳ ಮೇಲ್ವಿಚಾರಣೆ ಮತ್ತು ದಾಖಲೆ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದು.

3. ನನಗೆ ನೀಡಲಾದ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಿದ ನಂತರ, ನಾನು ನನ್ನ ಪ್ರತಿಕ್ರಿಯೆಯನ್ನು ವೀಕ್ಷಿಸಬಹುದೇ?

ಹೌದು, ಇ-ಪ್ರಕ್ರಿಯೆಗಳಲ್ಲಿ ನೀವು ಅಥವಾ ನಿಮ್ಮ ಅಧಿಕೃತ ಪ್ರತಿನಿಧಿಯು ಸಲ್ಲಿಸಿದ ಪ್ರತಿಕ್ರಿಯೆಯನ್ನು ವೀಕ್ಷಿಸಬಹುದು.

ದಾರಿ: ಡ್ಯಾಶ್‌ಬೋರ್ಡ್ >> ಬಾಕಿ ಇರುವ ಕ್ರಮಗಳು >> ಇ-ಪ್ರಕ್ರಿಯೆಗಳು >> ನಿಮ್ಮ ಮಾಹಿತಿಗಾಗಿ

4. ನನಗೆ ನೀಡಲಾದ ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 143(1)(a) / ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 270(1)(a) ಅಡಿಯಲ್ಲಿ ಮಾಡಲಾದ ಹೊಂದಾಣಿಕೆಗೆ ಸಂಬಂಧಿಸಿ ನಾನು ನೀಡಿದ ಪ್ರತಿಕ್ರಿಯೆಯ ವಿರುದ್ಧ ಯಾವುದೇ ಪ್ರಶ್ನೆಯನ್ನು ಕೇಳಲಾಗಿದೆಯೇ ಎಂಬುದನ್ನು ನಾನು ಎಲ್ಲಿ ನೋಡಬಹುದು?

ಆದಾಯ ತೆರಿಗೆ ಇಲಾಖೆಯಿಂದ ಕೇಳಲಾದ ಪ್ರಶ್ನೆಗಳನ್ನು ನೀವು ಇ-ಪ್ರಕ್ರಿಯೆಗಳಲ್ಲಿ ವೀಕ್ಷಿಸಬಹುದು.

ದಾರಿ: ಡ್ಯಾಶ್‌ಬೋರ್ಡ್ >> ಬಾಕಿ ಇರುವ ಕ್ರಮಗಳು >> ಇ-ಪ್ರಕ್ರಿಯೆಗಳು >> ನಿಮ್ಮ ಕ್ರಮಕ್ಕಾಗಿ

5. ಪ್ರಕ್ರಿಯೆಯ ಅವಧಿ ಮಿತಿ ದಿನಾಂಕಕ್ಕೆ ಇನ್ನೂ 4 ದಿನಗಳು ಬಾಕಿ ಇರುವಾಗಲೂ ನಾನು ನನ್ನ ಪ್ರತಿಕ್ರಿಯೆಯನ್ನು ಏಕೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ?

ನಿಮ್ಮ ಪ್ರಕ್ರಿಯೆಯ ಸ್ಥಿತಿಯು ತೆರೆದಿದ್ದರೆ,ಪ್ರತಿಕ್ರಿಯೆ ಸಲ್ಲಿಸಿ ಆಯ್ಕೆಯು ಪ್ರಕ್ರಿಯೆಯ ಅವಧಿ ಮಿತಿ ದಿನಾಂಕಕ್ಕೆ 7 ದಿನಗಳು ಬಾಕಿ ಇರುವವರೆಗೆ, ಸಂಜೆ 6 ಗಂಟೆಯವರೆಗೆ ಮಾತ್ರ ಲಭ್ಯವಿರುತ್ತದೆ. ಪ್ರಕ್ರಿಯೆಯ ಅವಧಿ ಮಿತಿ ದಿನಾಂಕವಿಲ್ಲದಿದ್ದರೆ, ಆದಾಯ ತೆರಿಗೆ ಪ್ರಾಧಿಕಾರವು ಇ-ಸಲ್ಲಿಕೆ ಆಯ್ಕೆಯನ್ನು ಮುಚ್ಚಬಹುದು. ಆದಾಗ್ಯೂ, ಆದಾಯ ತೆರಿಗೆ ಪ್ರಾಧಿಕಾರದ ವಿವೇಚನೆಯ ಮೇರೆಗೆ, ಪ್ರಕ್ರಿಯೆಯ ಅವಧಿ ಮಿತಿ ದಿನಾಂಕದವರೆಗೆ ಸಲ್ಲಿಕೆ ಅವಕಾಶವನ್ನು ಪುನಃ ಸಕ್ರಿಯಗೊಳಿಸಬಹುದು.

6. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಟೀಸಿಗೆ ಪ್ರತಿಕ್ರಿಯಿಸಿದ ನಂತರ ನನ್ನ ಪ್ರತಿಕ್ರಿಯೆಯನ್ನು ನಾನು ತಿದ್ದುಪಡಿ ಮಾಡಬಹುದೇ?

ಇಲ್ಲ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಒಮ್ಮೆ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ ಅದನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ.

7. ಆದಾಯ ತೆರಿಗೆ ಕಾಯಿದೆ, 1961 ಮತ್ತು ಆದಾಯ ತೆರಿಗೆ ಕಾಯಿದೆ, 2025ರ ಪ್ರಕಾರ ಇ-ಪ್ರಕ್ರಿಯೆಗಳ ಅಡಿಯಲ್ಲಿ ನಾನು ಯಾವ ನೋಟಿಸ್‌ಗಳು/ಆದೇಶಗಳಿಗೆ ಪ್ರತಿಕ್ರಿಯೆ ಸಲ್ಲಿಸಬಹುದು?

ಆದಾಯ ತೆರಿಗೆ ಇಲಾಖೆ ಮತ್ತು CPC ವತಿಯಿಂದ ನೀಡಲಾಗುವ ಎಲ್ಲಾ ನೋಟಿಸ್‌ಗಳು / ಸೂಚನೆಗಳು / ಪತ್ರಗಳು ಇ-ಪ್ರಕ್ರಿಯೆಗಳ ಅಡಿಯಲ್ಲಿ ಲಭ್ಯವಿರುತ್ತವೆ. ಇವುಗಳನ್ನು ನೀವು ವೀಕ್ಷಿಸಬಹುದು ಹಾಗೂ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಂಬಂಧಿತ ಲಗತ್ತುಗಳನ್ನು ಅಪ್‌ಲೋಡ್ ಮಾಡುವ ಮೂಲಕ ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು. ಈ ಸೇವೆಯ ಮೂಲಕ ಕೆಳಗಿನ ನೋಟಿಸ್‌ಗಳಿಗೆ ನೀವು ಪ್ರತಿಕ್ರಿಯೆಗಳನ್ನು ವೀಕ್ಷಿಸಿ ಮತ್ತು ಸಲ್ಲಿಸಬಹುದು.

  • ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 139(9) ಅಥವಾ ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 263(7)ರ ಅಡಿಯಲ್ಲಿ ನೀಡಲಾದ ದೋಷಪೂರಿತ ನೋಟಿಸ್
  • ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 143(1)(a) ಅಥವಾ ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 270(1)(a)ರ ಅಡಿಯಲ್ಲಿ ಮೇಲ್ನೋಟಕ್ಕೆ ತೋರುವ ಹೊಂದಾಣಿಕೆ
  • ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 154 ಅಥವಾ ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 284ರ ಅಡಿಯಲ್ಲಿ ಸುಯೋ-ಮೋಟೋ (ಸ್ವಯಂಪ್ರೇರಿತ) ತಿದ್ದುಪಡಿ
  • ತೆರಿಗೆ ಮೌಲ್ಯಮಾಪನ ಅಧಿಕಾರಿಯಿಂದ ನೀಡಲಾದ ನೋಟಿಸ್‌ಗಳು
  • ‘ಸ್ಪಷ್ಟೀಕರಣವನ್ನು ಕೋರಿಕೆ’ ಸಂವಹನ

ದಾರಿ : ಡ್ಯಾಶ್‌ಬೋರ್ಡ್ >> ಬಾಕಿ ಇರುವ ಕ್ರಮಗಳು >> ಇ-ಪ್ರಕ್ರಿಯೆಗಳು >> ನಿಮ್ಮ ಕ್ರಮಕ್ಕಾಗಿ

8. ತೆರಿಗೆ ಮೌಲ್ಯಮಾಪನ ಅಧಿಕಾರಿಯಿಂದ ನೀಡಲಾದ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸುವಾಗ, ಲಗತ್ತುಗಳ ಸಂಖ್ಯೆ ಅಥವಾ ಗಾತ್ರವು ಅನುಮತಿಸಲಾದ ಮಿತಿಯನ್ನು ಮೀರಿದ್ದರೆ ನಾನು ಏನು ಮಾಡಬೇಕು?

ಒಂದು ಲಗತ್ತಿಗೆ ಅನುಮತಿಸಲಾದ ಗರಿಷ್ಠ ಗಾತ್ರವು 5 MB ಆಗಿದೆ. ನೀವು ಅಪ್‌ಲೋಡ್ ಮಾಡಲು ಒಂದಕ್ಕಿಂತ ಹೆಚ್ಚು ದಾಖಲೆಗಳನ್ನು ಹೊಂದಿದ್ದರೆ, ಗರಿಷ್ಠ 10 ಲಗತ್ತುಗಳನ್ನು ಆಯ್ಕೆ ಮಾಡಬಹುದು. ಎಲ್ಲಾ ಲಗತ್ತುಗಳ ಒಟ್ಟು ಗಾತ್ರವು 50 MB ಮೀರಬಾರದು. ಒಂದು ದಾಖಲೆಯ ಗಾತ್ರವು ಅನುಮತಿಸಲಾದ ಮಿತಿಯನ್ನು ಮೀರಿದ್ದರೆ, ಫೈಲ್‌ನ ಗಾತ್ರವನ್ನು ಕಡಿಮೆ ಮಾಡುವ ಮೂಲಕ ದಾಖಲೆಯನ್ನು ಉತ್ತಮಗೊಳಿಸಬಹುದು.

9. ದೋಷಪೂರಿತ ಆದಾಯ ತೆರಿಗೆ ರಿಟರ್ನ್ ಎಂದರೇನು?

ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 139(9) ಅಥವಾ ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 263(7)ರ ಪ್ರಕಾರ, ಆದಾಯ ತೆರಿಗೆ ರಿಟರ್ನ್‌ನಲ್ಲಿರುವ ಅಪೂರ್ಣ ಅಥವಾ ಅಸಂಗತ ಮಾಹಿತಿಯಿಂದ, ಅಥವಾ ಅದರ ಅನುಸೂಚಿಗಳಲ್ಲಿರುವ ಅಪೂರ್ಣ ಅಥವಾ ಅಸಂಗತ ಮಾಹಿತಿಯಿಂದ, ಅಥವಾ ಯಾವುದೇ ಇತರೆ ಕಾರಣಗಳಿಂದ ರಿಟರ್ನ್ ಅನ್ನು ದೋಷಪೂರಿತವೆಂದು ಪರಿಗಣಿಸಬಹುದು.

10. ನನ್ನ ಆದಾಯ ತೆರಿಗೆ ರಿಟರ್ನ್ ದೋಷಪೂರಿತವಾಗಿದೆಯೇ ಎಂಬುದನ್ನು ನಾನು ಹೇಗೆ ತಿಳಿದುಕೊಳ್ಳಬಹುದು?

ನಿಮ್ಮ ಆದಾಯ ತೆರಿಗೆ ರಿಟರ್ನ್ ದೋಷಪೂರಿತವಾಗಿದೆ ಎಂದು ಕಂಡುಬಂದರೆ, ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 139(9) ಅಥವಾ ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 263(7)ರ ಅಡಿಯಲ್ಲಿ ದೋಷಪೂರಿತ ನೋಟಿಸ್ ಅನ್ನು ನಿಮ್ಮ ನೋಂದಾಯಿತ ಇಮೇಲ್ IDಗೆ ಕಳುಹಿಸುತ್ತದೆ. ಅದನ್ನು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ ವೀಕ್ಷಿಸಬಹುದು.

ದಾರಿ: ಡ್ಯಾಶ್‌ಬೋರ್ಡ್ >> ಬಾಕಿ ಇರುವ ಕ್ರಮಗಳು >> ಇ-ಪ್ರಕ್ರಿಯೆಗಳು >> ನಿಮ್ಮ ಕ್ರಮಕ್ಕಾಗಿ

11. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ, ನಾನು ನನ್ನ ಪ್ರತಿಕ್ರಿಯೆಯನ್ನು ನವೀಕರಿಸಬಹುದೇ ಅಥವಾ ಹಿಂತೆಗೆದುಕೊಳ್ಳಬಹುದೇ?

ಇಲ್ಲ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಒಮ್ಮೆ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ ಅದನ್ನು ನವೀಕರಿಸಲು ಅಥವಾ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ.

12. ನನ್ನ ದೋಷಪೂರಿತ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ನಾನು ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ನೀಡಬಹುದೇ?

ಹೌದು, ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 139(9) ಅಥವಾ ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 263(7)ರ ಅಡಿಯಲ್ಲಿ ನೀಡಲಾದ ದೋಷಪೂರಿತ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ನೀವು ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ನೀಡಬಹುದು.

13. ಆದಾಯ ತೆರಿಗೆ ಇಲಾಖೆಯು ಕಳುಹಿಸಿದ ದೋಷಪೂರಿತ ನೋಟಿಸ್‌ಗೆ ನಾನು ಯಾವ ಕಾಲಮಿತಿಯೊಳಗೆ ಪ್ರತಿಕ್ರಿಯೆ ಸಲ್ಲಿಸಬಹುದು?

ನಿಮ್ಮ ಆದಾಯ ತೆರಿಗೆ ರಿಟರ್ನ್ ದೋಷಪೂರಿತವಾಗಿದೆ ಎಂದು ಕಂಡುಬಂದರೆ, ನಿಮಗೆ ನೋಟಿಸ್ ಸ್ವೀಕರಿಸಿದ ದಿನಾಂಕದಿಂದ 15 ದಿನಗಳ ಅವಧಿ ಅಥವಾ ನೋಟಿಸ್‌ನಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯೊಳಗೆ ನೀವು ಸಲ್ಲಿಸಿದ ರಿಟರ್ನ್‌ನಲ್ಲಿರುವ ದೋಷವನ್ನು ಸರಿಪಡಿಸಲು ಅವಕಾಶ ನೀಡಲಾಗುತ್ತದೆ. ಆದಾಗ್ಯೂ, ನೀವು ಮುಂದೂಡಿಕೆಯನ್ನು ಕೋರಬಹುದು ಮತ್ತು ಅವಧಿ ವಿಸ್ತರಣೆಗೆ ವಿನಂತಿಸಬಹುದು.

ದಾರಿ: ಡ್ಯಾಶ್‌ಬೋರ್ಡ್ >> ಬಾಕಿ ಇರುವ ಕ್ರಮಗಳು >> ಇ-ಪ್ರಕ್ರಿಯೆ >> ನಿಮ್ಮ ಕ್ರಮಕ್ಕಾಗಿ

14. ನಾನು ದೋಷಪೂರಿತ ನೋಟೀಸಿಗೆ ಪ್ರತಿಕ್ರಿಯಿಸದಿದ್ದರೆ ಏನಾಗುತ್ತದೆ?

ನಿಗದಿತ ಅವಧಿಯೊಳಗೆ ನೀವು ದೋಷಪೂರಿತ ನೋಟೀಸಿಗೆ ಪ್ರತಿಕ್ರಿಯಿಸಲು ವಿಫಲವಾದರೆ, ನಿಮ್ಮ ರಿಟರ್ನ್ ಅನ್ನು ಅಮಾನ್ಯವೆಂದು ಪರಿಗಣಿಸಬಹುದು. ಅದರ ಪರಿಣಾಮವಾಗಿ, ಆದಾಯ ತೆರಿಗೆ ಕಾಯಿದೆ, 1961 ಅಥವಾ ಆದಾಯ ತೆರಿಗೆ ಕಾಯಿದೆ, 2025ರ ಪ್ರಕಾರ ದಂಡ, ಬಡ್ಡಿ, ನಷ್ಟಗಳನ್ನು ಮುಂದಿನ ವರ್ಷಗಳಿಗೆ ಸಾಗಿಸುವ ಅವಕಾಶದ ನಷ್ಟ ಅಥವಾ ನಿರ್ದಿಷ್ಟ ವಿನಾಯಿತಿಗಳ ನಷ್ಟ ಮುಂತಾದ ಪರಿಣಾಮಗಳು ಉಂಟಾಗಬಹುದು.

15. ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 139(9) ಅಥವಾ ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 263(7)ರ ಅಡಿಯಲ್ಲಿ ದೋಷಪೂರಿತ ರಿಟರ್ನ್ ಕುರಿತು ನನಗೆ ತಿಳಿಸಲಾಗಿದೆ. ಆ ಮೌಲ್ಯಮಾಪನ ವರ್ಷ / ತೆರಿಗೆ ವರ್ಷಕ್ಕಾಗಿ ನಾನು ಹೊಸ ರಿಟರ್ನ್ ಅನ್ನು ಸಲ್ಲಿಸಬಹುದೇ?

ಹೌದು, ನಿರ್ದಿಷ್ಟ ಮೌಲ್ಯಮಾಪನ ವರ್ಷ/ತೆರಿಗೆ ವರ್ಷಕ್ಕೆ ರಿಟರ್ನ್ ಸಲ್ಲಿಸಲು ನೀಡಲಾದ ಅವಧಿ ಮುಕ್ತಾಯವಾಗಿರದಿದ್ದರೆ, ನೀವು ಹೊಸ ಅಥವಾ ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಬಹುದು. ಪರ್ಯಾಯವಾಗಿ, ಸೆಕ್ಷನ್ 139/263ರ ಅಡಿಯಲ್ಲಿ ನೀಡಲಾದ ನೋಟೀಸ್‌ಗೆ ಪ್ರತಿಕ್ರಿಯಿಸುವುದನ್ನೂ ಆಯ್ಕೆ ಮಾಡಬಹುದು.

ಆದಾಗ್ಯೂ, ನಿರ್ದಿಷ್ಟ ಮೌಲ್ಯಮಾಪನ ವರ್ಷ/ತೆರಿಗೆ ವರ್ಷಕ್ಕೆ ರಿಟರ್ನ್ ಸಲ್ಲಿಸಲು ನೀಡಲಾದ ಅವಧಿ ಮುಕ್ತಾಯಗೊಂಡ ನಂತರ, ನೀವು ಹೊಸ ಅಥವಾ ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ ಮತ್ತು ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 139(9) ಅಥವಾ ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 263(7)ರ ಅಡಿಯಲ್ಲಿ ನೀಡಲಾದ ನೋಟೀಸ್‌ಗೆ ಪ್ರತಿಕ್ರಿಯಿಸಬೇಕಾಗುತ್ತದೆ. ನೀವು ನೋಟೀಸ್‌ಗೆ ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದರೆ, ಆ ಮೌಲ್ಯಮಾಪನ ವರ್ಷಕ್ಕೆ ನಿಮ್ಮ ರಿಟರ್ನ್ ಅನ್ನು ಅಮಾನ್ಯ ಅಥವಾ ಸಲ್ಲಿಸದ ರಿಟರ್ನ್ ಎಂದು ಪರಿಗಣಿಸಲಾಗುತ್ತದೆ.

ದಾರಿ: ಡ್ಯಾಶ್‌ಬೋರ್ಡ್ >> ಬಾಕಿ ಇರುವ ಕ್ರಮಗಳು >> ಇ-ಪ್ರಕ್ರಿಯೆ >> ನಿಮ್ಮ ಕ್ರಮಕ್ಕಾಗಿ

16. ರಿಟರ್ನ್ ದೋಷಪೂರಿತವಾಗಲು ಕಾರಣವಾಗುವ ಕೆಲವು ಸಾಮಾನ್ಯ ದೋಷಗಳು ಯಾವುವು?of the common errors that make a return defective?

ರಿಟರ್ನ್ ದೋಷಪೂರಿತವಾಗಲು ಕಾರಣವಾಗುವ ಕೆಲವು ಸಾಮಾನ್ಯ ತಪ್ಪುಗಳು ಈ ಕೆಳಗಿನಂತಿವೆ:

  • TDS ಗಾಗಿ ಕ್ರೆಡಿಟ್ ಅನ್ನು ಕ್ಲೈಮ್ ಮಾಡಲಾಗಿದೆ ಆದರೆ ತೆರಿಗೆ ಸಂದಾಯಕ್ಕೆ ಅನುಗುಣವಾಗಿರುವ ರಶೀದಿಗಳು/ಆದಾಯ ಘೋಷಿಸುವುದನ್ನು ಕೈ ಬಿಡಲಾಗಿದೆ
  • TDS ಗಾಗಿ ಕ್ರೆಡಿಟ್ ಅನ್ನು ಕ್ಲೈಮ್ ಮಾಡಿರುವ ಫಾರ್ಮ್ 26AS ಮತ್ತು AIS ನಲ್ಲಿ ತೋರಿಸಿರುವ ಒಟ್ಟು ಸ್ವೀಕೃತಿಗಳು, ಆದಾಯ ರಿಟರ್ನ್‌ನಲ್ಲಿ ಎಲ್ಲಾ ಆದಾಯ ಶೀರ್ಷಿಕೆಗಳ ಅಡಿಯಲ್ಲಿ ತೋರಿಸಿರುವ ಒಟ್ಟು ಸ್ವೀಕೃತಿಗಳಿಗಿಂತ ಹೆಚ್ಚಾಗಿವೆ.
  • ಒಟ್ಟು ನಿವ್ವಳ ಆದಾಯ ಮತ್ತು ಎಲ್ಲಾ ಆದಾಯ ಶೀರ್ಷಿಕೆಗಳ ಅಡಿಯಲ್ಲಿ ಆದಾಯವನ್ನು ಶೂನ್ಯ ಅಥವಾ 0 ಎಂದು ನಮೂದಿಸಲಾಗಿದೆ, ಆದರೆ ತೆರಿಗೆ ಬಾಧ್ಯತೆಯನ್ನು ಲೆಕ್ಕಹಾಕಿ ಪಾವತಿಸಲಾಗಿದೆ.
  • ITR ನಲ್ಲಿ ನಮೂದಿಸಲಾದ ತೆರಿಗೆದಾರರ ಹೆಸರು, PAN ದತ್ತಾಂಶದಲ್ಲಿರುವ ಹೆಸರಿನೊಂದಿಗೆ ಹೊಂದಿಕೆಯಾಗುವುದಿಲ್ಲ.
  • ತೆರಿಗೆದಾರರು "ವ್ಯವಹಾರ ಅಥವಾ ವೃತ್ತಿಯಿಂದ ಉಂಟಾಗುವ ಲಾಭ ಮತ್ತು ಆದಾಯ" ಶೀರ್ಷಿಕೆಯ ಅಡಿಯಲ್ಲಿ ಆದಾಯ ಹೊಂದಿದ್ದರೂ, ಲೆಕ್ಕಪತ್ರದ ಆಯವ್ಯಯ ಮತ್ತು ಲಾಭ-ನಷ್ಟ ಖಾತೆಯನ್ನು ಭರ್ತಿ ಮಾಡಿಲ್ಲ.

17. ‘‘ಸ್ಪಷ್ಟೀಕರಣಕ್ಕಾಗಿ ವಿನಂತಿ’’ ಸಂವಹನ ಎಂದರೇನು?

ರಿಟರ್ನ್‌ನ ಶೆಡ್ಯೂಲ್ ಅಥವಾ ಅನುಬಂಧಗಳ ಅಡಿಯಲ್ಲಿ ಒದಗಿಸಲಾದ ಮಾಹಿತಿಯು ಅಪೂರ್ಣವಾಗಿದ್ದರೆ ಅಥವಾ ಅಸಮರ್ಪಕವಾಗಿದ್ದರೆ ಮತ್ತು ತೆರಿಗೆದಾರರು ಮಾಡಿರುವ ಕೆಲವು ಹಕ್ಕು ದಾವೆಗಳ ಕುರಿತು ಸ್ಪಷ್ಟೀಕರಣ ಅಗತ್ಯವಿದ್ದರೆ, ತೆರಿಗೆದಾರರಿಗೆ ‘ಸ್ಪಷ್ಟೀಕರಣಕ್ಕಾಗಿ ವಿನಂತಿ’ ಸಂವಹನವನ್ನು ಕಳುಹಿಸಲಾಗುತ್ತದೆ.

ದಾರಿಯನ್ನು ಅನುಸರಿಸಿ: ಡ್ಯಾಶ್‌ಬೋರ್ಡ್ >> ಬಾಕಿ ಇರುವ ಕ್ರಮಗಳು >> ಇ-ಪ್ರಕ್ರಿಯೆ >> ನಿಮ್ಮ ಕ್ರಮಕ್ಕಾಗಿ

18. ಇ-ಪ್ರಕ್ರಿಯೆಗಳ ಸೇವೆಯ ಮೂಲಕ ಪ್ರತಿಕ್ರಿಯೆಗಳನ್ನು ವೀಕ್ಷಿಸಲು ಮತ್ತು ಸಲ್ಲಿಸಲು ನಾನು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಬೇಕೆ?

ಹೌದು, ಇ-ಪ್ರಕ್ರಿಯೆಗಳ ಸೇವೆಯ ಮೂಲಕ ಪ್ರತಿಕ್ರಿಯೆಗಳನ್ನು ವೀಕ್ಷಿಸಲು ಮತ್ತು ಸಲ್ಲಿಸಲು ನೀವು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಬೇಕಾಗುತ್ತದೆ.

ದಾರಿ: ಡ್ಯಾಶ್‌ಬೋರ್ಡ್ >> ಬಾಕಿ ಇರುವ ಕ್ರಮಗಳು >> ಇ-ಪ್ರಕ್ರಿಯೆ

19. ಇ-ಪ್ರಕ್ರಿಯೆಗಳ ಸೇವೆಯನ್ನು ಬಳಸಿಕೊಂಡು ಸಲ್ಲಿಸಿದ ಪ್ರತಿಕ್ರಿಯೆ / ಸಲ್ಲಿಕೆಯನ್ನು ನಾನು ಇ-ಪರಿಶೀಲನೆ ಮಾಡಬೇಕೇ?

ಇಲ್ಲ, ಇ-ಪ್ರಕ್ರಿಯೆಗಳ ಸೇವೆಯನ್ನು ಬಳಸಿಕೊಂಡು ನೀವು ಸಲ್ಲಿಸಿದ ಪ್ರತಿಕ್ರಿಯೆಗೆ ಇ-ಪರಿಶೀಲನೆ ಮಾಡುವ ಅಗತ್ಯವಿಲ್ಲ

20. ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗದೆ ‘ಸ್ಪಷ್ಟೀಕರಣಕ್ಕಾಗಿ ವಿನಂತಿ’ ನೋಟೀಸ್‌ಗೆ ನಾನು ಪ್ರತಿಕ್ರಿಯಿಸಬಹುದೇ?

ಇಲ್ಲ, ‘ಸ್ಪಷ್ಟೀಕರಣಕ್ಕಾಗಿ ವಿನಂತಿ’ ಸಂವಹನಕ್ಕೆ ಪ್ರತಿಕ್ರಿಯಿಸಲು ನೀವು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಬೇಕಾಗುತ್ತದೆ. ನಿಮಗೆ ನೀಡಲಾದ ನೋಟೀಸ್ ಅನ್ನು ವೀಕ್ಷಿಸಲು ಅಥವಾ ಆ ನೋಟೀಸ್‌ಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ದಾರಿ: ಡ್ಯಾಶ್‌ಬೋರ್ಡ್ >> ಬಾಕಿ ಇರುವ ಕ್ರಮಗಳು >> ಇ-ಪ್ರಕ್ರಿಯೆ >> ನಿಮ್ಮ ಕ್ರಮಕ್ಕಾಗಿ

21. ಇ-ಪ್ರಕ್ರಿಯೆಗಳ ಸೇವೆಯನ್ನು ಬಳಸಿಕೊಂಡು ಆದಾಯ ತೆರಿಗೆ ಪ್ರಾಧಿಕಾರವು ನನಗೆ ನೀಡಿರುವ ನೋಟೀಸ್‌ಗಳಿಗೆ ನನ್ನ ಪರವಾಗಿ ಬೇರೆ ಯಾರಾದರೂ ಪ್ರತಿಕ್ರಿಯಿಸಬಹುದೇ?

ಹೌದು, ಇ-ಪ್ರಕ್ರಿಯೆಗಳ ಸೇವೆಯನ್ನು ಬಳಸಿಕೊಂಡು ನಿಮ್ಮ ಪರವಾಗಿ ನೋಟೀಸ್‌ಗೆ ಪ್ರತಿಕ್ರಿಯಿಸಲು ನೀವು ಅಧಿಕೃತ ಪ್ರತಿನಿಧಿಯನ್ನು ಸೇರಿಸಬಹುದು.

22. ಈಗಾಗಲೇ ಸೇರಿಸಿರುವ / ಅಸ್ತಿತ್ವದಲ್ಲಿರುವ ಅಧಿಕೃತ ಪ್ರತಿನಿಧಿಯನ್ನು ನಾನು ತೆಗೆದುಹಾಕಬಹುದೇ?

ಹೌದು, ನೀವು ಅಧಿಕೃತಗೊಳಿಸಿರುವ ಪ್ರತಿನಿಧಿಯನ್ನು ತೆಗೆದುಹಾಕಬಹುದು ಅಥವಾ ಅವರ ಅಧಿಕಾರವನ್ನು ಹಿಂತೆಗೆದುಕೊಳ್ಳಬಹುದು.

23. ನನಗೆ ನೀಡಲಾದ ನೋಟೀಸ್‌ಗೆ ಪ್ರತಿಕ್ರಿಯಿಸಲು ನಾನು ಇಬ್ಬರು ಅಧಿಕೃತ ಪ್ರತಿನಿಧಿಗಳನ್ನು ಸೇರಿಸಬಹುದೇ?

ಇಲ್ಲ, ಯಾವುದೇ ಒಂದು ಪ್ರಕ್ರಿಯೆಗೆ ಒಂದು ಸಮಯದಲ್ಲಿ ಒಬ್ಬ ಅಧಿಕೃತ ಪ್ರತಿನಿಧಿ ಮಾತ್ರ ಸಕ್ರಿಯವಾಗಿರಬಹುದು.

24. ನಾನು ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಿದ್ದೇನೆ. ನನಗೆ ನೀಡಲಾದ ‘ಸ್ಪಷ್ಟೀಕರಣಕ್ಕಾಗಿ ವಿನಂತಿ’ ಸಂವಹನಕ್ಕೆ ಇನ್ನೂ ನಾನು ಪ್ರತಿಕ್ರಿಯಿಸಬೇಕೇ?

ಇಲ್ಲ, ಅದೇ ಮೌಲ್ಯಮಾಪನ ವರ್ಷ/ತೆರಿಗೆ ವರ್ಷಕ್ಕೆ ನೀವು ಈಗಾಗಲೇ ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಿದ್ದರೆ, ಪ್ರತಿಕ್ರಿಯೆಯನ್ನು ಸಲ್ಲಿಸಲು ಅನುಮತಿಸಲಾಗುವುದಿಲ್ಲ. "ಈ ನೋಟೀಸ್‌ಗೆ ಸಂಬಂಧಿಸಿದಂತೆ ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಲಾಗಿದೆ; ಯಾವುದೇ ಮುಂದಿನ ಕ್ರಮದ ಅಗತ್ಯವಿಲ್ಲ" ಎಂಬ ಸಂದೇಶವು ಪ್ರದರ್ಶಿಸಲಾಗುತ್ತದೆ.

25. ನನಗೆ ನೀಡಲಾದ ‘ಸ್ಪಷ್ಟೀಕರಣಕ್ಕಾಗಿ ವಿನಂತಿ’ ಸಂವಹನಕ್ಕೆ ಪ್ರತಿಕ್ರಿಯಿಸುವುದು ಕಡ್ಡಾಯವೇ? ಹೌದಾದರೆ, ನನ್ನ ಪ್ರತಿಕ್ರಿಯೆಯನ್ನು ನಾನು ಯಾವ ಅವಧಿಯೊಳಗೆ ಸಲ್ಲಿಸಬೇಕು?

ನಿಮಗೆ ನೀಡಲಾದ ಸಂವಹನದಲ್ಲಿ ಉಲ್ಲೇಖಿಸಲಾದ ಅಂತಿಮ ದಿನಾಂಕದೊಳಗೆ ನೀವು ನಿಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬೇಕು / ಒದಗಿಸಬೇಕು. ಅಂತಿಮ ದಿನಾಂಕವು ಕಳೆದಿದ್ದರೆ ಮತ್ತು ಯಾವುದೇ ಪ್ರತಿಕ್ರಿಯೆಯನ್ನು ಒದಗಿಸದಿದ್ದರೆ, CPC ತನ್ನ ಬಳಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ರಿಟರ್ನ್ ಅನ್ನು ಪ್ರಕ್ರಿಯೆಗೊಳಿಸುತ್ತದೆ.

ನಿಮಗೆ ನೀಡಲಾದ ಸಂವಹನದಲ್ಲಿ ಉಲ್ಲೇಖಿಸಲಾದ ಅಂತಿಮ ದಿನಾಂಕದೊಳಗೆ ನೀವು ನಿಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬೇಕು / ಒದಗಿಸಬೇಕು. ಅಂತಿಮ ದಿನಾಂಕವು ಕಳೆದಿದ್ದರೆ ಮತ್ತು ಯಾವುದೇ ಪ್ರತಿಕ್ರಿಯೆಯನ್ನು ಒದಗಿಸದಿದ್ದರೆ, CPC ತನ್ನ ಬಳಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ರಿಟರ್ನ್ ಅನ್ನು ಪ್ರಕ್ರಿಯೆಗೊಳಿಸುತ್ತದೆ.

"ಪ್ರತಿಕ್ರಿಯೆ ಸಲ್ಲಿಸಿ" ಬಟನ್ ಈ ಕೆಳಗಿನ ಕಾರಣಗಳಿಂದ ಸಕ್ರಿಯವಾಗಿಲ್ಲದಿರಬಹುದು:

  • CPC ನೋಟೀಸ್‌ಗಳಿಗಾಗಿ - ಪ್ರತಿಕ್ರಿಯೆ ಸಲ್ಲಿಸುವ ಅಂತಿಮ ದಿನಾಂಕವು ಕಳೆದಿದ್ದರೆ.
  • ITBA ನೋಟೀಸ್‌ಗಳಿಗಾಗಿ - ಆದಾಯ ತೆರಿಗೆ ಪ್ರಾಧಿಕಾರವು ಪ್ರಕ್ರಿಯೆಯ ಸ್ಥಿತಿಯನ್ನು ಮುಚ್ಚಿದ್ದರೆ / ನಿರ್ಬಂಧಿಸಿದ್ದರೆ.