ಮರುಪಾವತಿ ಸ್ಥಿತಿ ಕುರಿತು ಬಳಕೆದಾರರ ಕೈಪಿಡಿ

 

1. ಪಕ್ಷಿನೋಟ

ಆದಾಯ ತೆರಿಗೆ ರೀಫಂಡ್ ಎಂದರೆ, ಪಾವತಿಸಬೇಕಾದ ನಿಜವಾದ ತೆರಿಗೆ ಮೊತ್ತ(TDS ಅಥವಾ TCS ಅಥವಾ ಮುಂಗಡ ತೆರಿಗೆ ಅಥವಾ ಸ್ವಯಂ-ಮೌಲ್ಯಮಾಪನ ತೆರಿಗೆಯ ರೂಪದಲ್ಲಿ)ಕ್ಕಿಂತ ಹೆಚ್ಚು ತೆರಿಗೆ ಪಾವತಿಸಿದ್ದರೆ, ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಮರುಪಾವತಿಸುವ ಮೊತ್ತವಾಗಿದೆ. ಆದಾಯ ತೆರಿಗೆ ಇಲಾಖೆಯು ನಿರ್ಧರಣೆಯ ವೇಳೆ ಅನ್ವಯವಾಗುವ ಎಲ್ಲಾ ಕಡಿತಗಳು ಮತ್ತು ವಿನಾಯಿತಿಗಳನ್ನು ಪರಿಗಣಿಸಿ ತೆರಿಗೆಯನ್ನು ಲೆಕ್ಕಹಾಕುತ್ತದೆ.

ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್‌ಗೆ ಇ-ಪರಿಶೀಲನೆ ಪೂರ್ಣಗೊಳಿಸಿದ ನಂತರವೇ ಆದಾಯ ತೆರಿಗೆ ಇಲಾಖೆಯು ರೀಫಂಡ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ, ಈ‌ ರೀಫಂಡ್‌ನ ಮೊತ್ತವು ತೆರಿಗೆದಾರರ ಬ್ಯಾಂಕ್ ಖಾತೆಗೆ ಜಮೆಯಾಗಲು 4–5 ವಾರಗಳು ಬೇಕಾಗುತ್ತದೆ. ಆದರೆ, ಈ ಅವಧಿಯೊಳಗೆ ರೀಫಂಡ್ ಆಗದಿದ್ದರೆ, ಆದಾಯ ತೆರಿಗೆ ರಿಟರ್ನ್‌ನಲ್ಲಿ ಯಾವುದೇ ವ್ಯತ್ಯಾಸಗಳ ಕುರಿತು ಮಾಹಿತಿ ಬಂದಿದೆಯೇ ಎಂದು ಪರಿಶೀಲಿಸಬೇಕು ಹಾಗೂ ರೀಫಂಡ್‌ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಅಧಿಸೂಚನೆ ಬಂದಿದೆಯೇ ಎಂದು ತಮ್ಮ ಇಮೇಲ್‌ ಅನ್ನು ಪರಿಶೀಲಿಸಬೇಕು. ಕೆಳಗೆ ವಿವರಿಸಿರುವ ಪ್ರಕ್ರಿಯೆಯಂತೆ ತೆರಿಗೆದಾರರು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ರೀಫಂಡ್‌ನ ಸ್ಥಿತಿಯನ್ನೂ ಪರಿಶೀಲಿಸಬಹುದು.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

  • ಮಾನ್ಯವಾದ ಬಳಕೆದಾರರ ID ಮತ್ತು ಪಾಸ್‌ವರ್ಡ್
  • PAN ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿದೆ
  • ರೀಫಂಡ್ ನ್ನು ಕೋರಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಿರಬೇಕು.

3. ಪ್ರಕ್ರಿಯೆ/ಹಂತ ಹಂತದ ಮಾರ್ಗದರ್ಶನ

3.1 ರೀಫಂಡ್‌ ಸ್ಥಿತಿ

ಹಂತ 1: ಇ-ಸಲ್ಲಿಕೆ ಪೋರ್ಟಲ್‌ನ ಮುಖಪುಟಕ್ಕೆ ಹೋಗಿ.

Data responsive


ಹಂತ 2: ಬಳಕೆದಾರರ ID ಮತ್ತು ಪಾಸ್‌ವರ್ಡ್ ನಮೂದಿಸಿ.

Data responsive

 

ವೈಯಕ್ತಿಕ ಬಳಕೆದಾರರಿಗಾಗಿ, PAN ಅನ್ನು ಆಧಾರ್ ಗೆ ಲಿಂಕ್ ಮಾಡದಿದ್ದರೆ, ನಿಮ್ಮ PAN ಅನ್ನು ಆಧಾರ್ ಗೆ ಲಿಂಕ್ ಮಾಡದ ಕಾರಣ ಅದು ನಿಷ್ಕ್ರಿಯಗೊಂಡಿದೆ ಎಂಬ ಪಾಪ್‌-ಅಪ್ ಸಂದೇಶವು ಪ್ರದರ್ಶಿಸಲಾಗುತ್ತದೆ.

PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು ಈಗ ಲಿಂಕ್ ಮಾಡಿ ಬಟನ್ ಅನ್ನು ಕ್ಲಿಕ್ ಮಾಡಿ, ಇಲ್ಲದಿದ್ದರೆ ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.

Data responsive


‌ಹಂತ 3: ಇ-ಸಲ್ಲಿಕೆ > ಆದಾಯ ತೆರಿಗೆ ರಿಟರ್ನ್‌ಗಳು>ಸಲ್ಲಿಸಿದ ರಿಟರ್ನ್‌ಗಳನ್ನು ವೀಕ್ಷಿಸಿ ಟ್ಯಾಬ್ ಗೆ ಹೋಗಿ.

Data responsive


ಹಂತ 4: ಈಗ ನೀವು ಅಗತ್ಯವಿರುವ ನಿರ್ಧರಣೆ ವರ್ಷದ ರೀಫಂಡ್‌ ನ ಸ್ಥಿತಿಯನ್ನು ಪರಿಶೀಲಿಸಬಹುದು.

ವಿವರಗಳನ್ನು ವೀಕ್ಷಿಸಿ ಅನ್ನು ಕ್ಲಿಕ್ ಮಾಡಿ. ಇಲ್ಲಿ ನೀವು ಸಲ್ಲಿಸಿದ ITR ನ ಜೀವನವೃತ್ತವನ್ನೂ ಪರಿಶೀಲಿಸಬಹುದು.

 

Data responsive

ಸ್ಥಿತಿ 1: ರೀಫಂಡ್ ಅನ್ನು ನೀಡಿದಾಗ:

Data responsive

ಸ್ಥಿತಿ 2: ರೀಫಂಡ್‌ ಅನ್ನು ಭಾಗಶಃ ಹೊಂದಾಣಿಕೆ ಮಾಡಿದಾಗ:

Data responsive

ಸ್ಥಿತಿ 3: ರೀಫಂಡ್‌ ಅನ್ನು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿದಾಗ:

Data responsive

ಸ್ಥಿತಿ 4: ರೀಫಂಡ್‌ ವಿಫಲವಾದಾಗ:

Data responsive

ಗಮನಿಸಿ: ನಿಮ್ಮ PAN ನಿಷ್ಕ್ರಿಯವಾಗಿದ್ದರೆ, ನಿಮ್ಮ ರೀಫಂಡ್‌ ವಿಫಲವಾಗುತ್ತದೆ ಮತ್ತು ನಿಮ್ಮ PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು ಎಚ್ಚರಿಕೆ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

Data responsive

ರೀಫಂಡ್‌ ವಿಫಲವಾಗಲು ಇತರ ಕಾರಣಗಳು:

ಮೇಲೆ ತಿಳಿಸಿರುವುದರ ಜೊತೆಗೆ, ಆದಾಯ ತೆರಿಗೆ ಇಲಾಖೆಯಿಂದ ಪಾವತಿಸಲು ನಿಗದಿಪಡಿಸಲಾದ ರೀಫಂಡ್‌ ಈ ಕೆಳಗಿನ ಕಾರಣಗಳಿಂದ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗದೆ ವಿಫಲವಾಗಬಹುದು:

1. ಬ್ಯಾಂಕ್ ಖಾತೆಯನ್ನು ಪೂರ್ವ-ಮೌಲ್ಯೀಕರಿಸದಿದ್ದರೆ. ಈಗ ನಿಮ್ಮ ಬ್ಯಾಂಕ್ ಖಾತೆಯನ್ನು ಪೂರ್ವ-ಮೌಲ್ಯೀಕರಿಸುವುದು ಕಡ್ಡಾಯವಾಗಿದೆ.

2. ಬ್ಯಾಂಕ್ ಖಾತೆಯಲ್ಲಿ ಸೂಚಿತವಾಗಿರುವ ಹೆಸರು PAN ಕಾರ್ಡ್‌ನಲ್ಲಿರುವ ವಿವರಗಳಿಗೆ ಹೊಂದಿಕೆಯಾಗದಿದ್ದರೆ.

3. IFSC ಕೋಡ್ ಅಮಾನ್ಯವಾಗಿದ್ದರೆ.

4. ನೀವು ITR ನಲ್ಲಿ ನಮೂದಿಸಿರುವ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದ್ದರೆ.