1. ITNS 280N ಎಂದರೇನು?

ITNS 280N ಎಂಬುದು ಆದಾಯ ತೆರಿಗೆ ಕಾಯಿದೆ, 2025ರ ಅಡಿಯಲ್ಲಿ ವಿವಿಧ ರೀತಿಯ ಆದಾಯ ತೆರಿಗೆಗಳನ್ನು ಪಾವತಿಸಲು ಬಳಸುವ ಚಲನ್ ಫಾರ್ಮ್‌ ಆಗಿದೆ. ಇದನ್ನು ಸಾಮಾನ್ಯವಾಗಿ ಈ ಕೆಳಗಿನ ಪಾವತಿಗಳಿಗಾಗಿ ಬಳಸಲಾಗುತ್ತದೆ:ಸ್ವಯಂ ಮೌಲ್ಯಮಾಪನ ತೆರಿಗೆ,ಮುಂಗಡ ತೆರಿಗೆ,ನಿಯಮಿತ ಮೌಲ್ಯಮಾಪನದ ಮೇಲಿನ ತೆರಿಗೆ,ದ್ವಿತೀಯ ಹೊಂದಾಣಿಕೆ ತೆರಿಗೆ,ಸಂಚಯ ತೆರಿಗೆ (Accretion Tax),PAN ಅನ್ನು ಆಧಾರ್‌ಗೆ ಲಿಂಕ್ ಮಾಡುವಲ್ಲಿ ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ,ಸೆಕ್ಷನ್ 429ರ ಅಡಿಯಲ್ಲಿ ವಿಳಂಬ ಶುಲ್ಕ (ಫಾರ್ಮ್ 113 ಮತ್ತು ಫಾರ್ಮ್ 114),ಮೇಲ್ಮನವಿ ಶುಲ್ಕ ಮತ್ತು ಸಂಯೋಜನಾ ಶುಲ್ಕಗಳು.‌

2. ITNS 280N ಅಡಿಯಲ್ಲಿ ಯಾವ ಪ್ರಮುಖ ಶೀರ್ಷಿಕೆಗಳು ಮತ್ತು ಉಪ ಶೀರ್ಷಿಕೆಗಳು ಒಳಗೊಂಡಿವೆ?

ITNS 280N ಅಡಿಯಲ್ಲಿ ಒಳಗೊಂಡಿರುವ ಪ್ರಮುಖ ಶೀರ್ಷಿಕೆಗಳು: ಕಾರ್ಪೊರೇಷನ್ ತೆರಿಗೆ (0020) ಮತ್ತು ಆದಾಯ ತೆರಿಗೆ (ಕಂಪನಿಗಳನ್ನು ಹೊರತುಪಡಿಸಿ)(0021). ಉಪ ಶೀರ್ಷಿಕೆಗಳು: ಸ್ವಯಂ ಮೌಲ್ಯಮಾಪನ ತೆರಿಗೆ (300),ಮುಂಗಡ ತೆರಿಗೆ (100),ನಿಯಮಿತ ಮೌಲ್ಯಮಾಪನದ ಮೇಲಿನ ತೆರಿಗೆ (400), ದ್ವಿತೀಯ ಹೊಂದಾಣಿಕೆ ತೆರಿಗೆ (110), ಸಂಚಯ ತೆರಿಗೆ (111),PAN ಅನ್ನು ಆಧಾರ್‌ಗೆ ಲಿಂಕ್ ಮಾಡುವಲ್ಲಿ ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ (500),ಸೆಕ್ಷನ್ 429ರ ಅಡಿಯಲ್ಲಿ ವಿಳಂಬ ಶುಲ್ಕ (ಫಾರ್ಮ್ 113 ಮತ್ತು ಫಾರ್ಮ್ 114) (500), ಮೇಲ್ಮನವಿ ಶುಲ್ಕ (500) ಮತ್ತು ಸಂಯೋಜನಾ ಶುಲ್ಕಗಳು (500).

3. ಆದಾಯ ತೆರಿಗೆ ಪಾವತಿಗಳನ್ನು ಮಾಡಲು ITNS 280N ಅನ್ನು ನಾನು ಎಲ್ಲಿ ಪ್ರವೇಶಿಸಬಹುದು?

ಲಾಗಿನ್ ನಂತರ, ITNS 280N ಅನ್ನು ಈ ಮಾರ್ಗದ ಮೂಲಕ ಪ್ರವೇಶಿಸಬಹುದು: ಇ-ಸಲ್ಲಿಕೆ → ಇ-ತೆರಿಗೆ-ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → ಹೊಸ ಪಾವತಿ → ಆದಾಯ ತೆರಿಗೆ/ನಿಗಮ ತೆರಿಗೆ ಟೈಲ್‌ ಅಥವಾ ನಿಯಮಿತ ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿ‌ ಟೈಲ್. ಲಾಗಿನ್ ಮಾಡುವ ಮೊದಲು,ಈ ಮಾರ್ಗದ ಮೂಲಕ ಪ್ರವೇಶಿಸಬಹುದು: ಡ್ಯಾಶ್ ಬೋರ್ಡ್ → ಇ-ತೆರಿಗೆ-ಪಾವತಿ (ತ್ವರಿತ ಲಿಂಕ್) → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → PAN ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಪರದೆ → OTP ಪರಿಶೀಲನೆ → ಆದಾಯ ತೆರಿಗೆ/ನಿಗಮ ತೆರಿಗೆ ಟೈಲ್‌ ಅಥವಾ ನಿಯಮಿತ ‌ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿ ಟೈಲ್.

4. ಉಪ ಶೀರ್ಷಿಕೆ 500 ಅಡಿಯಲ್ಲಿ ಯಾವೆಲ್ಲಾ ಪಾವತಿಗಳನ್ನು ಮಾಡಬಹುದು?

ಉಪ ಶೀರ್ಷಿಕೆ 500 ಅಡಿಯಲ್ಲಿ ಈ ಕೆಳಗಿನ ಪಾವತಿಗಳನ್ನು ಮಾಡಬಹುದು: PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ, ಸೆಕ್ಷನ್ 429ರ ಅಡಿಯಲ್ಲಿ ವಿಳಂಬ ಶುಲ್ಕ (ಫಾರ್ಮ್ 113 ಮತ್ತು ಫಾರ್ಮ್ 114),ಮೇಲ್ಮನವಿ ಶುಲ್ಕ, ಮತ್ತು ಸಂಯೋಜನಾ ಶುಲ್ಕಗಳು.

5. ಉಪ ಶೀರ್ಷಿಕೆ 500 ಅಡಿಯಲ್ಲಿ ಯಾವುದೇ ಪಾವತಿಯನ್ನು ಜಮಾ ಮಾಡುವಾಗ, ತೆರಿಗೆ ವಿಭಜನೆ ವಿವರಗಳು ವಿಭಾಗದಲ್ಲಿ ಯಾವ ಕ್ಷೇತ್ರವನ್ನು ಬಳಸಬೇಕು?

ಮೇಲ್ಮನವಿ ಶುಲ್ಕ, ಸೆಕ್ಷನ್ 429ರ ಅಡಿಯಲ್ಲಿ ವಿಳಂಬ ಶುಲ್ಕ, PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ ಮತ್ತು ಸಂಯೋಜನಾ ಶುಲ್ಕಗಳನ್ನು ಜಮಾ ಮಾಡಲು,“ಪಾವತಿಯ ವಿಧ” ಅಡಿಯಲ್ಲಿ ಉಪ ಶೀರ್ಷಿಕೆ “ಇತರೆ ಸ್ವೀಕೃತಿಗಳು (500)” ಅನ್ನು ಆಯ್ಕೆ ಮಾಡಬೇಕು ಹಾಗೂ ತೆರಿಗೆ ವಿಭಜನೆ ವಿವರಗಳು ಪರದೆಯಲ್ಲಿರುವ “ಇತರೆ” ಕ್ಷೇತ್ರದಲ್ಲಿ ಪಾವತಿಸಬೇಕಾದ ಮೊತ್ತವನ್ನು ನಮೂದಿಸಬೇಕು.

6. PAN ಅನ್ನು ಆಧಾರ್ ಗೆ ಲಿಂಕ್ ಮಾಡಲು ನಾನು ಪಾವತಿಯನ್ನು ಹೇಗೆ ಮಾಡಬಹುದು?

PAN ಅನ್ನು ಆಧಾರ್ ಗೆ ಲಿಂಕ್ ಮಾಡಲು ಪಾವತಿಯನ್ನು ಈ ಕೆಳಗಿನ ಮಾರ್ಗದ ಮೂಲಕ ಮಾಡಬಹುದು:‌ ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆಮಾಡಿ → ಆದಾಯ ತೆರಿಗೆ ಕಾಯಿದೆ, 2025 → ಹೊಸ ಪಾವತಿ → ಆದಾಯ ತೆರಿಗೆ ಟೈಲ್ → ಪಾವತಿಯ ವಿಧ (ಉಪ ಶೀರ್ಷಿಕೆ) → ಇತರೆ ಸ್ವೀಕೃತಿಗಳು (500) → ಪಾವತಿಯ ಉಪ-ವಿಧ → PAN ಅನ್ನು ಆಧಾರ್ ಗೆ ಲಿಂಕ್ ಮಾಡಲು ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ.

7. ನಾನು ಪಾವತಿಯನ್ನು ಯಶಸ್ವಿಯಾಗಿ ಮಾಡಿದ್ದೇನೆ. BSR ಕೋಡ್ ಅಥವಾ ಚಲನ್ ಕ್ರಮ ಸಂಖ್ಯೆಯನ್ನು ನಾನು ಎಲ್ಲಿ ಪಡೆಯಬಹುದು?

7 ಅಂಕಿಗಳ BSR ಕೋಡ್, ಪಾವತಿ ದಿನಾಂಕ ಮತ್ತು ಚಲನ್ ಕ್ರಮ ಸಂಖ್ಯೆಗಳನ್ನು ಇ-ತೆರಿಗೆ ಪಾವತಿ → ಪಾವತಿ ಇತಿಹಾಸ → ಕ್ರಮಗಳು → ವಿವರಗಳನ್ನು ವೀಕ್ಷಿಸಿ ನಲ್ಲಿ ಪಡೆಯಬಹುದು. ಈ ವಿವರಗಳನ್ನು ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಪ್ರವೇಶಿಸಬಹುದು.

8. ಒಂದೇ ಚಲನ್ (ITNS 280N) ಅನ್ನು ವಿವಿಧ ಉಪ ಶೀರ್ಷಿಕೆಗಳ ಅಡಿಯಲ್ಲಿ ಪಾವತಿಗಳನ್ನು ಮಾಡಲು ಬಳಸಬಹುದೇ?

ಇಲ್ಲ. ಪ್ರತಿ ಉಪ ಶೀರ್ಷಿಕೆ ಅಡಿಯಲ್ಲಿ ಪಾವತಿಯನ್ನು ಮಾಡಲು ಪ್ರತ್ಯೇಕ ಚಲನ್ (ITNS 280N) ಅನ್ನು ಬಳಸಬೇಕು. ಉದಾಹರಣೆಗೆ, ಸ್ವಯಂ ಮೌಲ್ಯಮಾಪನ ತೆರಿಗೆ ಮತ್ತು ಮುಂಗಡ ತೆರಿಗೆ ಪಾವತಿಸಲು ಪ್ರತ್ಯೇಕ ಚಲನ್‌ಗಳನ್ನು ಬಳಸುವುದು ಕಡ್ಡಾಯವಾಗಿದೆ.

9. PAN ಲಾಗಿನ್ ಮೂಲಕ ನಿಯಮಿತ ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿಯನ್ನು ನಾನು ಹೇಗೆ ಮಾಡಬಹುದು?

ನಿಯಮಿತ ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿ ಯನ್ನು PAN ಲಾಗಿನ್ ಮೂಲಕ, ಬೇಡಿಕೆ ಉಲ್ಲೇಖ ಸಂಖ್ಯೆ (DRN)ಯೊಂದಿಗೆ ಅಥವಾ ಅದಿಲ್ಲದೇ ಮಾಡಬಹುದು. DRN ಇಲ್ಲದೆ, ಲಾಗಿನ್ ಮಾಡುವ ಮೊದಲು ಅಥವಾ ಲಾಗಿನ್ ಮಾಡಿದ ನಂತರ, ಈ ಮಾರ್ಗದ ಮೂಲಕ ಪಾವತಿ ಮಾಡಬಹುದು:ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಆದಾಯ ತೆರಿಗೆ ಕಾಯಿದೆ → ಹೊಸ ಪಾವತಿ → ನಿಯಮಿತ ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿ. DRN ಜೊತೆಗೆ ಪಾವತಿ ಮಾಡಲು, ಮೊದಲು PAN ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಬೇಕು. ನಂತರ ಮೇಲಿನ ಅದೇ ಮಾರ್ಗವನ್ನು ಅನುಸರಿಸಿ, ಬೇಡಿಕೆ ಉಲ್ಲೇಖ ಸಂಖ್ಯೆ (DRN) ಬಳಸಿ ಪಾವತಿಯನ್ನು ಪೂರ್ಣಗೊಳಿಸಬೇಕು.

10. DRN ಜೊತೆಗೆ ಮತ್ತು DRN ಇಲ್ಲದೆ ಪಾವತಿ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವಿದೆಯೇ?

ಹೌದು. ಬೇಡಿಕೆ ಉಲ್ಲೇಖ ಸಂಖ್ಯೆ (DRN) ಬಳಸಿ ಪಾವತಿ ಮಾಡುವಾಗ, DRN ಆಯ್ಕೆಯನ್ನು ಆರಿಸಿದ ಕೂಡಲೇ DRNಗೆ ಸಂಬಂಧಿಸಿದ ಎಲ್ಲಾ ವಿವರಗಳು ಸ್ವಯಂಚಾಲಿತವಾಗಿ ಪಡೆಯಲ್ಪಟ್ಟು, ಬಳಕೆದಾರರನ್ನು ನೇರವಾಗಿ ಪಾವತಿ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಈ ಸೌಲಭ್ಯವು PAN ಲಾಗಿನ್ ಮಾಡಿದ ನಂತರ ಮಾತ್ರ ಲಭ್ಯವಿರುತ್ತದೆ. DRN ಇಲ್ಲದೆ ಪಾವತಿ ಮಾಡುವಾಗ, ಬಳಕೆದಾರರು ಪರದೆಯಲ್ಲಿ ಪ್ರದರ್ಶಿಸಲಾದ ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡಿ, (ಲಾಗಿನ್ → ಬೇಡಿಕೆ ಟೈಲ್ → ಮುಂದುವರಿಯಲು ಲಿಂಕ್‌) ಎಂಬ ಮಾರ್ಗವನ್ನು ಅನುಸರಿಸಬೇಕು ಮತ್ತು ಈ ಆಯ್ಕೆಯು ಲಾಗಿನ್ ಮಾಡುವ ಮೊದಲು ಮತ್ತು ಲಾಗಿನ್ ಮಾಡಿದ ನಂತರ ಎರಡೂ ವಿಧಾನಗಳಲ್ಲಿ ಲಭ್ಯವಿರುತ್ತದೆ.

11. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ DRN ಬಳಸಿ ಬೇಡಿಕೆ ಪಾವತಿಯನ್ನು ನಾನು ಹೇಗೆ ಮಾಡಬಹುದು?

ಅನ್ವಯವಾಗುವ ವರ್ಷಗಳಿಗಾಗಿ ಪಾವತಿ ಪರದೆಯಲ್ಲಿ ಲಭ್ಯವಿರುವ DRN ರೇಡಿಯೋ ಬಟನ್ ಅನ್ನು ಆಯ್ಕೆ ಮಾಡುವ ಮೂಲಕ ಬೇಡಿಕೆ ಉಲ್ಲೇಖ ಸಂಖ್ಯೆ (DRN) ಬಳಸಿ ಬೇಡಿಕೆ ಪಾವತಿಯನ್ನು ಮಾಡಬಹುದು, ನಂತರ, ವ್ಯವಸ್ಥೆಯು (System) DRNಗೆ ಸಂಬಂಧಿಸಿದ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆಯುತ್ತದೆ ಮತ್ತು ಬಳಕೆದಾರರನ್ನು ಪಾವತಿ ಪುಟಕ್ಕೆ ಮರುನಿರ್ದೇಶಿಸಿ, ಪಾವತಿ ವ್ಯವಹಾರವನ್ನು ಪೂರ್ಣಗೊಳಿಸಲು ಅವಕಾಶ ನೀಡುತ್ತದೆ.

12. ನನ್ನ ಬಳಿ DRN ಇಲ್ಲ. ನಾನು ಬೇಡಿಕೆ ಪಾವತಿಯನ್ನು ಹೇಗೆ ಮಾಡಬಹುದು?

ಬೇಡಿಕೆ ಉಲ್ಲೇಖ ಸಂಖ್ಯೆ (DRN) ಲಭ್ಯವಿಲ್ಲದಿದ್ದರೂ, ಪಾವತಿ ಪರದೆಯಲ್ಲಿ ಪ್ರದರ್ಶಿಸಲಾದ ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡಿ, ಲಾಗಿನ್ → ಪಾವತಿ ಟೈಲ್ → ಲಿಂಕ್ ಎಂಬ ಮಾರ್ಗವನ್ನು ಅನುಸರಿಸುವ ಮೂಲಕ ಬೇಡಿಕೆ ಪಾವತಿಯನ್ನು ಮಾಡಬಹುದು. ಇದರಿಂದ ಬಳಕೆದಾರರನ್ನು ಪಾವತಿ ಮುಂದುವರಿಸಲು ಮತ್ತು ಪೂರ್ಣಗೊಳಿಸಲು ಸೂಕ್ತ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.