1. ITNS 288N ಎಂದರೇನು?

ITNS 288N ಎಂಬುದು ಆದಾಯ ತೆರಿಗೆ ಕಾಯಿದೆ, 2025ರ ಅಡಿಯಲ್ಲಿ ಬ್ಲಾಕ್ ಮೌಲ್ಯಮಾಪನ ಸಂಬಂಧಿತ ಸ್ವಯಂ-ಮೌಲ್ಯಮಾಪನ ತೆರಿಗೆ ಹಾಗೂ ಮೌಲ್ಯಮಾಪನ ಬೇಡಿಕೆ ಪಾವತಿಸಲು ಬಳಸುವ ಚಲನ್ ಫಾರ್ಮ್‌ ಆಗಿದೆ.

2. ITNS 288N ಅಡಿಯಲ್ಲಿ ಯಾವ ಪ್ರಧಾನ ಶೀರ್ಷಿಕೆಗಳು ಮತ್ತು ಉಪ ಶೀರ್ಷಿಕೆಗಳು ಒಳಗೊಂಡಿವೆ?

ಪ್ರಧಾನ ಶೀರ್ಷಿಕೆ:
-ನಿಗಮ ತೆರಿಗೆ (0020)
-ಆದಾಯ ತೆರಿಗೆ (ಕಂಪನಿಗಳನ್ನು ಹೊರತುಪಡಿಸಿ) (0021)
ಉಪ ಶೀರ್ಷಿಕೆ :
-ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ-ಮೌಲ್ಯಮಾಪನ ತೆರಿಗೆ (311)
-ಬ್ಲಾಕ್ ಅವಧಿಗೆ ಸಂಬಂಧಿಸಿದ ಶೋಧ ಮೌಲ್ಯಮಾಪನದ ತೆರಿಗೆ ಬೇಡಿಕೆ ಪಾವತಿ (411)

3. 01/04/2026 ರಿಂದ ಆರಂಭವಾಗುವ ಶೋಧಗಳಿಗೆ ಯಾವ ಆದಾಯ ತೆರಿಗೆ ಕಾಯಿದೆ ಅನ್ವಯವಾಗುತ್ತದೆ?

ಬಳಕೆದಾರರು 01/04/2026 ರಿಂದ ಆರಂಭವಾದ ಶೋಧಗಳಿಗೆ ಸಂಬಂಧಿಸಿದ ಬ್ಲಾಕ್ ಅವಧಿಯ ತೆರಿಗೆ ಪಾವತಿಯನ್ನು ಮಾಡಲು ಬಯಸಿದರೆ, ಆದಾಯ ತೆರಿಗೆ ಕಾಯಿದೆ, 2025 ಅನ್ವಯವಾಗುತ್ತದೆ. ಇಲ್ಲದಿದ್ದರೆ, ಆದಾಯ ತೆರಿಗೆ ಕಾಯಿದೆ, 1961 ಅನ್ನು ಆಯ್ಕೆ ಮಾಡಬೇಕು. ಹಣಕಾಸು ವರ್ಷ 2026–27ರಲ್ಲಿ ಆರಂಭವಾದ ಶೋಧಗಳಿಗೆ ಆರಂಭಿಕ ತೆರಿಗೆ ವರ್ಷ 2020 ಆಗಿರುತ್ತದೆ.

4. ಆದಾಯ ತೆರಿಗೆ ಪಾವತಿಗಳನ್ನು ಮಾಡಲು ITNS 288N ಅನ್ನು ನಾನು ಎಲ್ಲಿ ಪ್ರವೇಶಿಸಬಹುದು?

ಲಾಗಿನ್ ನಂತರ :
ಇ-ಸಲ್ಲಿಕೆ → ಇ-ತೆರಿಗೆ-ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → ಹೊಸ ಪಾವತಿ → ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ-ಮೌಲ್ಯಮಾಪನ ತೆರಿಗೆ (311) ಮತ್ತು ಬ್ಲಾಕ್ ಅವಧಿಗೆ ಸಂಬಂಧಿಸಿದ ಶೋಧ ಮೌಲ್ಯಮಾಪನದ ತೆರಿಗೆ ಬೇಡಿಕೆ ಪಾವತಿ (411)
ಲಾಗಿನ್ ಮಾಡುವ ಮೊದಲು :
ಡ್ಯಾಶ್ ಬೋರ್ಡ್ → ಇ-ತೆರಿಗೆ-ಪಾವತಿ ತ್ವರಿತ ಲಿಂಕ್ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → PAN ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಪರದೆ → OTP ಪರಿಶೀಲನೆ→ ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ-ಮೌಲ್ಯಮಾಪನ ತೆರಿಗೆ (311) ಟೈಲ್

5. ITNS 288N ಅನ್ನು ಬಳಸಿಕೊಂಡು ಮಾಡಿದ ಪಾವತಿಯು ಆರಂಭಿಕ ತೆರಿಗೆ ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ಸಂಪೂರ್ಣ ಬ್ಲಾಕ್ ಅವಧಿಗೆ ಅನ್ವಯಿಸುತ್ತದೆಯೇ?

ITNS 288N ಅನ್ನು ಬಳಸಿಕೊಂಡು ಮಾಡಿದ ಪಾವತಿಯು, ಚಲನ್‌ನಲ್ಲಿ ನಮೂದಿಸಿದ ಆರಂಭಿಕ ತೆರಿಗೆ ವರ್ಷಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಬದಲಾಗಿ, ಅದು ಸಂಬಂಧಿತ ಸಂಪೂರ್ಣ ಬ್ಲಾಕ್ ಅವಧಿಗೆ ಅನ್ವಯಿಸುತ್ತದೆ.

6. ಶೋಧಕ್ಕೆ ಒಳಪಟ್ಟ ವ್ಯಕ್ತಿಯ (ನಿರ್ದಿಷ್ಟ ವ್ಯಕ್ತಿಯ) ಸಂದರ್ಭದಲ್ಲಿ ಬ್ಲಾಕ್ ಅವಧಿಗೆ ಆರಂಭಿಕ ತೆರಿಗೆ ವರ್ಷ ಯಾವುದು?

ಚಲನ್‌ನ ಮೇಲ್ಭಾಗದಲ್ಲಿ ನಮೂದಿಸಬೇಕಾದ 'ಬ್ಲಾಕ್ ಅವಧಿಯ ಆರಂಭಿಕ ತೆರಿಗೆ ವರ್ಷ' ಎಂಬುದು ಸಂಬಂಧಿತ ಬ್ಲಾಕ್ ಅವಧಿಯನ್ನು ಒಳಗೊಂಡಿರುವ ಆರಂಭಿಕ ತೆರಿಗೆ ವರ್ಷಕ್ಕೆ ಅನುಗುಣವಾಗಿರಬೇಕು. ಉದಾಹರಣೆ:
ಶೋಧವನ್ನು ಆರಂಭಿಸಿದ ದಿನಾಂಕ 20/04/2026 ಆಗಿದ್ದು, ಆ ಶೋಧಕ್ಕೆ ಸಂಬಂಧಿಸಿದ ಕೊನೆಯ ಅಧಿಕೃತ ಅನುಮತಿಯ ಜಾರಿಯ ದಿನಾಂಕ 15/05/2026 ಆಗಿದ್ದರೆ, ಬ್ಲಾಕ್ ಅವಧಿಯು 01/04/2020 ರಿಂದ 15/05/2026 ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ, ಚಲನ್‌ನ ಮೇಲಿನ ಬಲ ಮೂಲೆಯಲ್ಲಿ ನಮೂದಿಸಬೇಕಾದ 'ಬ್ಲಾಕ್ ಅವಧಿಯ ಆರಂಭಿಕ ತೆರಿಗೆ ವರ್ಷ'2020 ಆಗಿರುತ್ತದೆ.

7. ಮೇಲ್ಮನವಿ ಶುಲ್ಕವನ್ನು ಪಾವತಿಸಲು ಯಾವ ವಿಭಾಗವನ್ನು ಬಳಸಬೇಕು?

ಮೇಲ್ಮನವಿ ಶುಲ್ಕವನ್ನು ಪಾವತಿಸುತ್ತಿದ್ದರೆ, 'ಪಾವತಿಗಳ ವಿವರಗಳು' ವಿಭಾಗದ ಅಡಿಯಲ್ಲಿ 'ಇತರೆ' ಎಂಬಲ್ಲಿ ಆ ಮೊತ್ತವನ್ನು ನಮೂದಿಸಬೇಕು.

8. ಒಂದೇ ಚಲನ್ ಅನ್ನು ವಿವಿಧ ರೀತಿಯ ಪಾವತಿಗಳಿಗಾಗಿ ಬಳಸಬಹುದೇ?

ಇಲ್ಲ. ಒಂದೇ ಚಲನ್ ಅನ್ನು ವಿವಿಧ ರೀತಿಯ ಪಾವತಿಗಳಿಗಾಗಿ ಬಳಸಲಾಗುವುದಿಲ್ಲ. ಪ್ರತಿಯೊಂದು ರೀತಿಯ ಪಾವತಿಗಾಗಿ ಪ್ರತ್ಯೇಕ ಚಲನ್ ಅನ್ನು ರಚಿಸಬೇಕು:
a) ಈ ಕೆಳಗಿನ ಪಾವತಿಗಳಿಗೆ ಒಂದೇ ಚಲನ್ ಅನ್ನು ಬಳಸಬೇಕು:
ತೆರಿಗೆ, ಸರ್ಚಾರ್ಜ್ ಮತ್ತು ಸೆಸ್
b) ಈ ಕೆಳಗಿನ ಪ್ರತಿಯೊಂದು ಪಾವತಿಗಾಗಿ ಪ್ರತ್ಯೇಕ ಚಲನ್ ಅನ್ನು ಬಳಸಬೇಕು:
ಬಡ್ಡಿ
ದಂಡ
ಇತರೆ (ಮೇಲ್ಮನವಿ ಶುಲ್ಕ ಇತ್ಯಾದಿ)

9. ಬ್ಲಾಕ್ ಮೌಲ್ಯಮಾಪನಕ್ಕೆ ಸಂಬಂಧಿಸಿದ ಬೇಡಿಕೆಯ ಪಾವತಿಯನ್ನು ನಾನು ಹೇಗೆ ಮಾಡಬಹುದು?

ಬ್ಲಾಕ್ ಮೌಲ್ಯಮಾಪನ ಅಡಿಯಲ್ಲಿ ಉಂಟಾಗಿರುವ ಬೇಡಿಕೆಯನ್ನು, ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → ಹೊಸ ಪಾವತಿ → ಬ್ಲಾಕ್ ಅವಧಿಗೆ ಸಂಬಂಧಿಸಿದ “ಶೋಧ ಮೌಲ್ಯಮಾಪನದ ತೆರಿಗೆ ಬೇಡಿಕೆ ಪಾವತಿ (411)” ಗೆ ತಲುಪುವ ಮೂಲಕ ಪಾವತಿಸಬಹುದು. ಅಂತಹ ಪಾವತಿಗಳಿಗಾಗಿ DRN (ಬೇಡಿಕೆ ಉಲ್ಲೇಖ ಸಂಖ್ಯೆ) ಕಡ್ಡಾಯವಾಗಿರುತ್ತದೆ. DRN ಬಳಸಿ ಪಾವತಿ ಮಾಡುವಾಗ, ಸಂಬಂಧಿತ ವರ್ಷದ ಪಾವತಿ ಪರದೆಯಲ್ಲಿ “DRN” ಆಯ್ಕೆಯನ್ನು ಆರಿಸಬೇಕು. ಅದನ್ನು ಆಯ್ಕೆ ಮಾಡಿದ ನಂತರ, ವ್ಯವಸ್ಥೆಯು ಸಂಬಂಧಿತ ಬೇಡಿಕೆಯ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆಯುತ್ತದೆ ಮತ್ತು ನಿಮ್ಮನ್ನು ಪಾವತಿ ಪುಟಕ್ಕೆ ಮರುನಿರ್ದೇಶಿಸುತ್ತದೆ. ಅಲ್ಲಿ ನೀವು ಪಾವತಿಯನ್ನು ಪೂರ್ಣಗೊಳಿಸಬಹುದು.

10. ಬ್ಲಾಕ್ ಮೌಲ್ಯಮಾಪನಗಳಿಗೆ ಸಂಬಂಧಿಸಿದಂತೆ ‘ನಿರ್ದಿಷ್ಟ ವ್ಯಕ್ತಿ’ ಮತ್ತು ‘ಇತರ ವ್ಯಕ್ತಿ’ ಎಂಬುದರ ಅರ್ಥವೇನು?

‘ನಿರ್ದಿಷ್ಟ ವ್ಯಕ್ತಿ’ ಎಂದರೆ, ಸೆಕ್ಷನ್ 247ರ ಅಡಿಯಲ್ಲಿ ಶೋಧ ನಡೆಸಲಾದ ವ್ಯಕ್ತಿ ಅಥವಾ ಸೆಕ್ಷನ್ 248ರ ಅಡಿಯಲ್ಲಿ ಯಾರ ಲೆಕ್ಕಪತ್ರಗಳು, ಇತರೆ ದಾಖಲೆಗಳು ಅಥವಾ ಯಾವುದೇ ಆಸ್ತಿಗಳನ್ನು ಕೋರಿಕೆ ಮೂಲಕ ಪಡೆದುಕೊಳ್ಳಲಾಗಿದೆಯೋ ಆ ವ್ಯಕ್ತಿಯನ್ನು ಸೂಚಿಸುತ್ತದೆ. ‘ಇತರ ವ್ಯಕ್ತಿ’ ಎಂದರೆ, ಶೋಧಕ್ಕೆ ಒಳಪಟ್ಟ ವ್ಯಕ್ತಿ (ನಿರ್ದಿಷ್ಟ ವ್ಯಕ್ತಿ) ಹೊರತುಪಡಿಸಿ, ನಿರ್ದಿಷ್ಟ ವ್ಯಕ್ತಿಯ ಮೇಲೆ ನಡೆಸಲಾದ ಶೋಧದ ವೇಳೆ ಅಥವಾ ಸೆಕ್ಷನ್ 248ರ ಅಡಿಯಲ್ಲಿ ನಿರ್ದಿಷ್ಟ ವ್ಯಕ್ತಿಯ ಪ್ರಕರಣದಲ್ಲಿ ಕೋರಿಕೆ ಮೂಲಕ ಪಡೆದುಕೊಳ್ಳಲಾದ ದಾಖಲೆಗಳು, ಲೆಕ್ಕಪತ್ರಗಳು ಅಥವಾ ಆಸ್ತಿಗಳು ಸಂಬಂಧಿಸಿರುವ ಬೇರೆ ವ್ಯಕ್ತಿಯನ್ನು ಸೂಚಿಸುತ್ತದೆ.

11. ಬ್ಲಾಕ್ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ‘ಇತರ ವ್ಯಕ್ತಿ’ಗಾಗಿ ಪಾವತಿಗಳನ್ನು ಮಾಡುವ ಸಂದರ್ಭದಲ್ಲಿ ಸೂಕ್ತ ಆರಂಭಿಕ ತೆರಿಗೆ ವರ್ಷ ಯಾವುದು?

‘ಇತರ ವ್ಯಕ್ತಿ’ಗೆ ಸಂಬಂಧಿಸಿದಂತೆ ಬಹಿರಂಗಪಡಿಸದ ಆದಾಯವು ಈ ಕೆಳಕಂಡ ಅವಧಿಗೆ ಮಾತ್ರ ಸಂಬಂಧಿಸಿದಿದ್ದರೆ.––
(A)(i)ಶೋಧ ಅಥವಾ ಕೋರಿಕೆ ಪ್ರಾರಂಭಗೊಂಡ ವರ್ಷದ ತಕ್ಷಣದ ಹಿಂದಿನ ತೆರಿಗೆ ವರ್ಷದಿಂದ (ಇದನ್ನು ‘ನಿರ್ದಿಷ್ಟ ವರ್ಷ’ ಎಂದು ಉಲ್ಲೇಖಿಸಲಾಗುತ್ತದೆ) ಆರಂಭಿಸಿ; ಮತ್ತು 
(ii)ಶೋಧ ಪ್ರಾರಂಭಗೊಂಡ ದಿನಾಂಕ ಅಥವಾ ಕೋರಿಕೆ ಮಾಡಲಾದ ದಿನಾಂಕದಂದು ಅಂತ್ಯಗೊಳ್ಳುವ ಅವಧಿಗೆ ಸಂಬಂಧಿಸಿದಿದ್ದರೆ, ಆಗ ಸೆಕ್ಷನ್ 301(a)ರ ನಿಬಂಧನೆಗಳಿಗಿಂತ ಹೊರತಾಗಿಯೂ, ಅಂತಹ ‘ಇತರ ವ್ಯಕ್ತಿ’ಗೆ ಸಂಬಂಧಿಸಿದ ಬ್ಲಾಕ್ ಅವಧಿಯು ನಿರ್ದಿಷ್ಟ ತೆರಿಗೆ ವರ್ಷ ಹಾಗೂ ಶೋಧ ಪ್ರಾರಂಭಗೊಂಡ ಅಥವಾ ಕೋರಿಕೆ ಮಾಡಲಾದ ತೆರಿಗೆ ವರ್ಷದ ಏಪ್ರಿಲ್ 1ರಿಂದ ಪ್ರಾರಂಭವಾಗಿ, ಆ ಶೋಧ ಅಥವಾ ಕೋರಿಕೆಗೆ ಸಂಬಂಧಿಸಿದ ಕೊನೆಯ ಅಧಿಕೃತ ಅನುಮತಿಯ ಅನುಷ್ಠಾನದ ದಿನಾಂಕದಂದು ಅಂತ್ಯಗೊಳ್ಳುವ ಅವಧಿಯನ್ನು ಒಳಗೊಂಡಿರುತ್ತದೆ. 
(B) ‘ಇತರ ವ್ಯಕ್ತಿ’ ಗೆ ಸಂಬಂಧಿಸಿದ ಬಹಿರಂಗಪಡಿಸದ ಆದಾಯವು, ನಿರ್ದಿಷ್ಟ ತೆರಿಗೆ ವರ್ಷಕ್ಕೆ ಹಿಂದಿನ ಐದು ತೆರಿಗೆ ವರ್ಷಗಳಲ್ಲಿ ಯಾವುದಾದರೂ ಒಂದು ತೆರಿಗೆ ವರ್ಷಕ್ಕೆ ಮಾತ್ರ ಸಂಬಂಧಿಸಿದ್ದರೆ, ಸೆಕ್ಷನ್ 301(a)ರ ನಿಬಂಧನೆಗಳಿಗಿಂತ ಹೊರತಾಗಿಯೂ, ಅಂತಹ ‘ಇತರ ವ್ಯಕ್ತಿ’ಗೆ ಸಂಬಂಧಿಸಿದ ಬ್ಲಾಕ್ ಅವಧಿ ಆ ಒಂದೇ ತೆರಿಗೆ ವರ್ಷವನ್ನು ಮಾತ್ರ ಒಳಗೊಂಡಿರುತ್ತದೆ.
(C)ಮೇಲಿನ ಸಂದರ್ಭಗಳಿಗೆ ಒಳಪಡದ ಪ್ರಕರಣಗಳಲ್ಲಿ, ಬ್ಲಾಕ್ ಅವಧಿಯ ಆರಂಭಿಕ ತೆರಿಗೆ ವರ್ಷವು ಶೋಧಕ್ಕೆ ಒಳಪಟ್ಟ ವ್ಯಕ್ತಿ(ನಿರ್ದಿಷ್ಟ ವ್ಯಕ್ತಿ)ಗೆ ಅನ್ವಯಿಸುವ ಆರಂಭಿಕ ತೆರಿಗೆ ವರ್ಷದಂತೆಯೇ ಇರುತ್ತದೆ.