ಆದಾಯ ತೆರಿಗೆ ಕ್ಯಾಲ್ಕುಲೇಟರ್ ಕುರಿತು ಬಳಕೆದಾರರ ಕೈಪಿಡಿ
1. ಅವಲೋಕನ
ಆದಾಯ ತೆರಿಗೆ ಕ್ಯಾಲ್ಕುಲೇಟರ್ ಸೌಲಭ್ಯವು ನೋಂದಾಯಿತ ಹಾಗೂ ನೋಂದಾಯಿಸದ ಇ-ಸಲ್ಲಿಕೆ ಬಳಕೆದಾರರಿಗೆ, ಆದಾಯ ತೆರಿಗೆ ಕಾಯಿದೆ, ಆದಾಯ ತೆರಿಗೆ ನಿಯಮಗಳು, ಅಧಿಸೂಚನೆಗಳು ಇತ್ಯಾದಿಗಳಲ್ಲಿನ ವಿಧಿಗಳ ಪ್ರಕಾರ, ಗಳಿಸಿದ ಆದಾಯ(ಗಳು) ಮತ್ತು ಕಾಯಿದೆಯನ್ವಯ ಪಡೆದಿರುವ ಕಡಿತಗಳ ವಿವರಗಳನ್ನು ನಮೂದಿಸುವ ಮೂಲಕ ತೆರಿಗೆಯನ್ನು ಲೆಕ್ಕಹಾಕಲು ಅನುವು ಮಾಡಿಕೊಡುತ್ತದೆ.
ಈ ಸೇವೆಯು ಹಳೆಯ ಮತ್ತು ಹೊಸ ತೆರಿಗೆ ಪದ್ದತಿ ಪ್ರಕಾರ ತೆರಿಗೆಯ ಹೋಲಿಕೆಯೊಂದಿಗೆ ಹಳೆಯ ಅಥವಾ ಹೊಸ ತೆರಿಗೆ ಪದ್ದತಿ ಅಡಿಯಲ್ಲಿ ತೆರಿಗೆಯ ಲೆಕ್ಕಾಚಾರವನ್ನೂ ಸಹ ಒದಗಿಸುತ್ತದೆ.
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
ಇ-ಸಲ್ಲಿಕೆ ಪೋರ್ಟಲ್ಲಿಗೆ ಪ್ರವೇಶಾವಕಾಶ
3. ಹಂತ-ಹಂತದ ಮಾರ್ಗದರ್ಶಿ
ಹಂತ 1: ಇ-ಸಲ್ಲಿಕೆ ಪೋರ್ಟಲ್ ಮುಖಪುಟಕ್ಕೆ ಹೋಗಿ.
ಹಂತ 2: ಕ್ವಿಕ್ ಲಿಂಕ್‌ಗಳ ವಿಭಾಗದಲ್ಲಿ ‘ಆದಾಯ ತೆರಿಗೆ ಕ್ಯಾಲ್ಕುಲೇಟರ್’ ಮೇಲೆ ಕ್ಲಿಕ್ ಮಾಡಿ.
ನಿಮ್ಮನ್ನು ‘ಆದಾಯ ತೆರಿಗೆ ಕ್ಯಾಲ್ಕುಲೇಟರ್’ ಪುಟಕ್ಕೆ ಕರೆದೊಯ್ಯಲಾಗುತ್ತದೆ.
ಇಲ್ಲಿ ನೀವು ಆದಾಯ ತೆರಿಗೆ ಕಾಯಿದೆ, 2025 ಹಾಗೂ ಆದಾಯ ತೆರಿಗೆ ಕಾಯಿದೆ, 1961 ಎರಡರ ಪ್ರಕಾರವೂ ನಿಮ್ಮ ತೆರಿಗೆಯನ್ನು ಲೆಕ್ಕಹಾಕಬಹುದು.
ಅಲ್ಲಿ ಎರಡು ಟ್ಯಾಬ್‌ಗಳು ಕಾಣಸಿಗುತ್ತವೆ –
1.ಸರಳ ಕ್ಯಾಲ್ಕುಲೇಟರ್’ ಮತ್ತು
2.ಸುಧಾರಿತ ಕ್ಯಾಲ್ಕುಲೇಟರ್.
‘ಸರಳ ಕ್ಯಾಲ್ಕುಲೇಟರ್’ ಟ್ಯಾಬ್ ಅನ್ನು ಪೂರ್ವನಿಯೋಜಿತವಾಗಿ ಆಯ್ಕೆ ಮಾಡಲಾಗಿರುತ್ತದೆ.
ದಯವಿಟ್ಟು ಗಮನಿಸಿ:
• ಆದಾಯ ತೆರಿಗೆ ಕಾಯಿದೆ, 2025 ಅನ್ನು ಪೂರ್ವನಿಯೋಜಿತವಾಗಿ ಆಯ್ಕೆ ಮಾಡಲಾಗಿರುತ್ತದೆ ಮತ್ತು 2026–27 ರ ತೆರಿಗೆ ವರ್ಷ ಮಾತ್ರ ಲಭ್ಯವಿರುತ್ತದೆ.
• ನೀವು ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ ತೆರಿಗೆಯನ್ನು ಲೆಕ್ಕಹಾಕಲು ಬಯಸಿದರೆ, ಆದಾಯ ತೆರಿಗೆ ಕಾಯಿದೆ, 1961 ಮತ್ತು ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ.
ಹಂತ 3a: ‘ಸರಳ ಕ್ಯಾಲ್ಕುಲೇಟರ್’ ಟ್ಯಾಬ್‌ನಲ್ಲಿ PAN, ತೆರಿಗೆದಾರರ ಹೆಸರು, ಅನ್ವಯವಾಗುವ ಕಾಯಿದೆ (ಆದಾಯ ತೆರಿಗೆ ಕಾಯಿದೆ, 2025 ಅಥವಾ ಆದಾಯ ತೆರಿಗೆ ಕಾಯಿದೆ, 1961), ತೆರಿಗೆ ವರ್ಷ (TY)/ಮೌಲ್ಯಮಾಪನ ವರ್ಷ (AY), ತೆರಿಗೆದಾರರ ವರ್ಗ, ವಯಸ್ಸು, ವಸತಿ ಸ್ಥಿತಿ, ಒಟ್ಟು ವಾರ್ಷಿಕ ಆದಾಯ ಹಾಗೂ ಹಳೆಯ ತೆರಿಗೆ ಪದ್ಧತಿಯಡಿ ಒಟ್ಟು ಭತ್ಯೆಗಳು / ವಿನಾಯಿತಿಗಳು ಮತ್ತು ಅಧ್ಯಾಯ VIA/VIIIA ಅಡಿಯಲ್ಲಿ ಕಡಿತಗಳಂತಹ ಅಗತ್ಯ ವಿವರಗಳನ್ನು ನಮೂದಿಸಿ. ನೀವು ನಮೂದಿಸಿದ ವಿವರಗಳ ಆಧಾರದ ಮೇಲೆ ತೆರಿಗೆ ಲೆಕ್ಕಾಚಾರವು ‘ತೆರಿಗೆ ಸಾರಾಂಶ’ ವಿಭಾಗದಲ್ಲಿ ಕಾಣಬರುತ್ತದೆ.

ಸೂಚನೆ 1:ಆಯ್ಕೆ ಮಾಡಿದ ತೆರಿಗೆದಾರರ ವರ್ಗ ಮತ್ತು ವಸತಿ ಸ್ಥಿತಿಯ ಆಧಾರದ ಮೇಲೆ, ತೆರಿಗೆ ಕ್ಯಾಲ್ಕುಲೇಟರ್ ಪರದೆಯಲ್ಲಿರುವ ಸಂಬಂಧಿತ ಕ್ಷೇತ್ರಗಳನ್ನು ಬಳಕೆದಾರರ ಇನ್‌ಪುಟ್‌ಗಾಗಿ ಸಕ್ರಿಯಗೊಳಿಸಲಾಗುತ್ತದೆ ಅಥವಾ ನಿಷ್ಕ್ರಿಯಗೊಳಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಉದಾಹರಣೆಗೆ, ಮೇಲಿನ ಪರದೆಯಲ್ಲಿ ತೆರಿಗೆದಾರರ ವರ್ಗವನ್ನು HUF ಎಂದು ಮತ್ತು ವಸತಿ ಸ್ಥಿತಿಯನ್ನು ನಿವಾಸಿ ಎಂದು ಆಯ್ಕೆ ಮಾಡಿದರೆ, ವಯಸ್ಸು ಕ್ಷೇತ್ರವು ನಿಷ್ಕ್ರಿಯಗೊಳ್ಳುತ್ತದೆ.
ತೆರಿಗೆ ಕ್ಯಾಲ್ಕುಲೇಟರ್ ಬಳಸಲು ಮುಂದುವರಿಯುವ ಮೊದಲು, ತೆರಿಗೆದಾರರು ಸರಿಯಾದ ತೆರಿಗೆದಾರರ ವರ್ಗ ಮತ್ತು ವಸತಿ ಸ್ಥಿತಿಯನ್ನು ಆಯ್ಕೆ ಮಾಡಬೇಕು.
ಸೂಚನೆ 2: ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ಅಡಿಯಲ್ಲಿ ತೆರಿಗೆಯ ವಿವರವಾದ ಹೋಲಿಕೆಯನ್ನು ನೋಡಲು ‘ಹೋಲಿಕೆಯನ್ನು ವೀಕ್ಷಿಸಿ’ ಮೇಲೆ ಕ್ಲಿಕ್ ಮಾಡಿ.

ಹಂತ 3b:ನೀವು ‘ಸುಧಾರಿತ ಕ್ಯಾಲ್ಕುಲೇಟರ್’ ಅನ್ನು ಆಯ್ಕೆ ಮಾಡಿದರೆ, ಈ ಕೆಳಗಿನ ವಿವರಗಳನ್ನು ನಮೂದಿಸಿ:
PAN, ತೆರಿಗೆದಾರರ ಹೆಸರು, ಅನ್ವಯವಾಗುವ ಕಾಯಿದೆ (‘ಆದಾಯ ತೆರಿಗೆ ಕಾಯಿದೆ, 2025’ ಅಥವಾ ‘ಆದಾಯ ತೆರಿಗೆ ಕಾಯಿದೆ, 1961’), ITR ಪ್ರಕಾರ (‘ನವೀಕರಿಸಿದ ರಿಟರ್ನ್’ ಅಥವಾ ‘ನವೀಕರಿಸಿದ ರಿಟರ್ನ್ ಹೊರತುಪಡಿಸಿ’), ಆದ್ಯತೆಯ ತೆರಿಗೆ ಪದ್ಧತಿ, ತೆರಿಗೆ ವರ್ಷ (TY)/ನಿರ್ಧರಣೆ ವರ್ಷ (AY), ತೆರಿಗೆದಾರರ ವರ್ಗ, ವಯಸ್ಸು, ವಸತಿ ಸ್ಥಿತಿ, ಸಲ್ಲಿಕೆಗೆ ನಿಗದಿತ ಅಂತಿಮ ದಿನಾಂಕ ಮತ್ತು ರಿಟರ್ನ್‌ನ ನೈಜ ಸಲ್ಲಿಕೆ ದಿನಾಂಕ.
ದಯವಿಟ್ಟು ಗಮನಿಸಿ:
• ಆದಾಯ ತೆರಿಗೆ ಕಾಯಿದೆ, 2025 ಅನ್ನು ಪೂರ್ವನಿಯೋಜಿತವಾಗಿ ಆಯ್ಕೆ ಮಾಡಲಾಗುತ್ತದೆ ಮತ್ತು ತೆರಿಗೆ ವರ್ಷವು 2026–27 ಮಾತ್ರ ಲಭ್ಯವಿರುತ್ತದೆ.
• ನೀವು ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ ತೆರಿಗೆಯನ್ನು ಲೆಕ್ಕಹಾಕಲು ಬಯಸಿದರೆ, ಅನ್ವಯವಾಗುವಂತೆ ‘ಆದಾಯ ತೆರಿಗೆ ಕಾಯಿದೆ, 1961’ ಅನ್ನು ಆಯ್ಕೆ ಮಾಡಿ.
• ನೀವು ನವೀಕರಿಸಿದ ರಿಟರ್ನ್‌ಗಾಗಿ ತೆರಿಗೆಯನ್ನು ಲೆಕ್ಕಹಾಕಲು ಬಯಸಿದರೆ, ಅನ್ವಯವಾಗುವ ಕಾಯಿದೆಯಾಗಿ ಆದಾಯ ತೆರಿಗೆ ಕಾಯಿದೆ, 1961 ಅನ್ನು ಆಯ್ಕೆ ಮಾಡಿ, ನಂತರ ನವೀಕರಿಸಿದ ರಿಟರ್ನ್‌ಗೆ ಸಂಬಂಧಿಸಿದ ನಿರ್ಧರಣೆ ವರ್ಷ (AY)ವನ್ನು ಆಯ್ಕೆ ಮಾಡಿ. ತೆರಿಗೆ ವರ್ಷ 2026–27ಕ್ಕೆ ಸಂಬಂಧಿಸಿದ ನವೀಕರಿಸಿದ ರಿಟರ್ನ್ ಸಲ್ಲಿಕೆಯು 01/01/2028 ನಂತರ ಮಾತ್ರ ಅನ್ವಯವಾಗುತ್ತದೆ. ಅದರಂತೆ, ಈ ಆಯ್ಕೆಯನ್ನು ಪೋರ್ಟಲ್‌ನಲ್ಲಿ ಆ ದಿನಾಂಕದ ನಂತರ ಸಕ್ರಿಯಗೊಳಿಸಲಾಗುತ್ತದೆ.
ಆದಾಯ ಮತ್ತು ತೆರಿಗೆ ಲೆಕ್ಕಾಚಾರ ವಿವರಗಳ ಅಡಿಯಲ್ಲಿ, ಕೆಳಗಿನ ವಿವರಗಳನ್ನು ನಮೂದಿಸಿ:
•ವೇತನಗಳುಶೀರ್ಷಿಕೆಯ ಅಡಿಯಲ್ಲಿ ಆದಾಯ,
•ಗೃಹ ಆಸ್ತಿಶೀರ್ಷಿಕೆಯ ಅಡಿಯಲ್ಲಿ ಆದಾಯ,
•ಬಂಡವಾಳ ಲಾಭಗಳುಶೀರ್ಷಿಕೆಯ ಅಡಿಯಲ್ಲಿ ಆದಾಯ,
•ವ್ಯವಹಾರ ಅಥವಾ ವೃತ್ತಿಶೀರ್ಷಿಕೆಯ ಅಡಿಯಲ್ಲಿ ಆದಾಯ, ಮತ್ತು
•ಇತರೆ ಮೂಲಗಳುಶೀರ್ಷಿಕೆಯ ಅಡಿಯಲ್ಲಿ ಆದಾಯ.
‘ಕಡಿತ ವಿವರಗಳು’ ಅಡಿಯಲ್ಲಿ, ನಿಮಗೆ ಅನ್ವಯವಾಗುವ ಸಂಬಂಧಿತ ಕಡಿತಗಳನ್ನು ನಮೂದಿಸಿ, ಇದರಲ್ಲಿ PPF, LIC, ಗೃಹ ಸಾಲ, NPS, ಮೆಡಿಕ್ಲೇಮ್, ಉನ್ನತ ಶಿಕ್ಷಣ ಸಾಲ ಇತ್ಯಾದಿಗಳು ಸೇರಿದ್ದು, ಆದರೆ ಇವಕ್ಕೆ ಮಾತ್ರ ಸೀಮಿತವಲ್ಲ.
‘ತೆರಿಗೆಗೆ ಒಳಪಡುವ ಆದಾಯ’ದ ಅಡಿಯಲ್ಲಿ, TDS/TCS/MAT/AMT ಕ್ರೆಡಿಟ್ ಹಾಗೂ ಸ್ವಯಂ-ಮೌಲ್ಯಮಾಪನ ತೆರಿಗೆ / ಮುಂಗಡ ತೆರಿಗೆಯನ್ನು ನಮೂದಿಸಿ.

ನೀವು ಪಾವತಿಸಬೇಕಾದ ಒಟ್ಟು ತೆರಿಗೆ ಮತ್ತು ಬಡ್ಡಿಯನ್ನು ಪುಟದ ಕೊನೆಯಲ್ಲಿ ಪ್ರದರ್ಶಿಸಲಾಗುತ್ತದೆ.
ಹಂತ 4: ‘ಡೌನ್‌ಲೋಡ್’ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಲೆಕ್ಕಾಚಾರದ PDF ಅನ್ನು ಡೌನ್‌ಲೋಡ್ ಮಾಡಬಹುದು.
ಹಂತ 5: ಲೆಕ್ಕಾಚಾರದ PDF ಅನ್ನು ಡೌನ್‌ಲೋಡ್ ಆಗುತ್ತದೆ.








