ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಿ ಕುರಿತು ಬಳಕೆದಾರರ ಕೈಪಿಡಿ

 

1. ಪಕ್ಷಿನೋಟ

ಲಾಗಿನ್ ಸರ್ವಿಸ್ ನೋಂದಾಯಿತ ಇ-ಫೈಲಿಂಗ್ ಪೋರ್ಟಲ್ ಬಳಕೆದಾರರಿಗೆ ಇ-ಸಲ್ಲಿಕೆ ಪೋರ್ಟಲ್ ಮತ್ತು ಪೋರ್ಟಲ್‌ನಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳನ್ನು ಬಳಸಲು ಅವಕಾಶ ನೀಡುತ್ತದೆ.

ವಿವಿಧ ವಿಧಾನಗಳಿಂದ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್‌ ಆಗಬಹುದು. ನಮೂದಿಸಬೇಕಾದ ಕ್ರೆಡೆನ್ಷಿಯಲ್ಸ್ ಜೊತೆಗೆ ಎಲ್ಲಾ ಲಾಗಿನ್ ವಿಧಾನಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
 

ಲಾಗಿನ್ ವಿಧಾನ ನಮೂದಿಸಬೇಕಾದ ವಿವರಗಳು

ನೆಟ್ ಬ್ಯಾಂಕಿಂಗ್

(ಇ-ಸಲ್ಲಿಕೆ ಭದ್ರತಾಭಂಡಾರದ ಹೆಚ್ಚುವರಿ ಭದ್ರತೆ ಸಕ್ರಿಯವಾಗಿಲ್ಲ)
ನೆಟ್ ಬ್ಯಾಂಕಿಂಗ್ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್

ನೆಟ್ ಬ್ಯಾಂಕಿಂಗ್

(ಇ-ಸಲ್ಲಿಕೆ ಭದ್ರತಾಭಂಡಾರದ ಹೆಚ್ಚುವರಿ ಭದ್ರತೆ ಸಕ್ರಿಯವಾಗಿದೆ)
ಯೂಸರ್‌ ಐಡಿ(PAN) ಮತ್ತು ಪಾಸ್‌ವರ್ಡ್ + ದ್ವಿತೀಯ ಅಂಶದ ದೃಢೀಕರಣಕ್ಕಾಗಿ ನೆಟ್ ಬ್ಯಾಂಕಿಂಗ್ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್

ಬ್ಯಾಂಕ/ಡಿಮ್ಯಾಟ್‌ ಖಾತೆ EVC

(ಇ-ಸಲ್ಲಿಕೆ ಭದ್ರತಾಭಂಡಾರದ ಹೆಚ್ಚುವರಿ ಭದ್ರತೆ ಸಕ್ರಿಯವಾಗಿದೆ)
ಯೂಸರ್‌ ಐಡಿ(PAN) ಮತ್ತು ಪಾಸ್‌ವರ್ಡ್ + 2ನೇ ಅಂಶದ ದೃಢೀಕರಣಕ್ಕಾಗಿ  ಬ್ಯಾಂಕ EVC
 DSC ಯೂಸರ್‌ ಐಡಿ(PAN) ಮತ್ತು ಪಾಸ್‌ವರ್ಡ್ + 2ನೇ ಅಂಶದ ದೃಢೀಕರಣಕ್ಕಾಗಿDSC
ಯೂಸರ್‌ ಐಡಿ ಬಳಸಿ ಲಾಗಿನ್-‌ CA, TAN ಬಳಕೆದಾರ, ERI, ಬಾಹ್ಯ ಏಜೆನ್ಸಿ, ITDREIN ಬಳಕೆದಾರರಿಗಾಗಿ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್

ಪ್ರಮುಖ ಬ್ಯಾಂಕುಗಳು ನಿಮಗೆ ತಮ್ಮ ನೆಟ್ ಬ್ಯಾಂಕಿಂಗ್ ಸೇವೆಗಳ ಮೂಲಕ ಇ-ಸಲ್ಲಿಕೆ ಪೋರ್ಟಲ್ ಅನ್ನು ಪ್ರವೇಶಿಸಲು ಅವಕಾಶ ನೀಡುತ್ತವೆ.ತೆರಿಗೆ ಸಂಬಂಧಿತ ಸೇವೆಗಳಿಗೆ ಇ-ಸಲ್ಲಿಕೆ ಖಾತೆಗಳಿಗೆ ಲಾಗಿನ್ ಮಾಡಲು ಇದು ಸುರಕ್ಷಿತ ಮತ್ತು ಸುಲಭ ಮಾರ್ಗವಾಗಿದೆ.
ನಿಮ್ಮ ಬ್ಯಾಂಕ್ ಇದನ್ನು ಒದಗಿಸುತ್ತಿದೆಯೇ ಎಂದು ಪರಿಶೀಲಿಸಲು, ನೀವು ಆದಾಯ ತೆರಿಗೆ ಇ-ಸಲ್ಲಿಕೆ ವೆಬ್‌ಸೈಟ್‌ನಲ್ಲಿ ನೆಟ್ ಬ್ಯಾಂಕಿಂಗ್ ಆಯ್ಕೆಯನ್ನು ನೋಡಬಹುದು.
ಈ ಯೂಸರ್ ಮ್ಯಾನ್ಯುವಲ್‌ನಲ್ಲಿ ನಾವು ನೆಟ್ ಬ್ಯಾಂಕಿಂಗ್ ಮೂಲಕ ಇ-ಸಲ್ಲಿಕೆ ಪೋರ್ಟಲ್‌ಗೆ ಹೇಗೆ ಲಾಗಿನ್ ಮಾಡಬೇಕೆಂದು ವಿವರಿಸುತ್ತೇವೆ (ಇ-ಫೈಲಿಂಗ್ ವಾಲ್ಟ್ ಹೆಚ್ಚುವರಿ ಭದ್ರತೆ ಸಕ್ರಿಯೆಗೊಳ್ಳುವಿಕೆ ಸಕ್ರಿಯಗೊಂಡಿದೆಯೇ/ಸಕ್ರಿಯಗೊಂಡಿಲ್ಲವೇ).

2.ಪೂರ್ವಾಪೇಕ್ಷಿತ:

1. ಇ-ಸಲ್ಲಿಕೆ ಯೂಸರ್ ಐಡಿ ಮತ್ತು ಪಾಸ್ವರ್ಡ್ (ನೀವು ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ಇ-ಸಲ್ಲಿಕೆ ವಾಲ್ಟ್ ಅನ್ನು ಸಕ್ರಿಯ ಮಾಡಿದ್ದರೆ)
2. ಬ್ಯಾಂಕ್ ಖಾತೆಗಳು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಧೃಢೀಕೃತವಾಗಿರಬೇಕು ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ಅರ್ಹತೆ ಇರಬೇಕು.
3. ನೆಟ್ ಬ್ಯಾಂಕಿಂಗ್ ಯೂಸರ್ ಐಡಿ ಮತ್ತು ಪಾಸ್‌ವರ್ಡ್
4. ತೆರಿಗೆದಾರರು ಇ-ಫೈಲಿಂಗ್ ಖಾತೆಗೆ ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡುವ ಮೊದಲು ಕನಿಷ್ಠ ಒಂದು ಬಾರಿಯಾದರೂ ನೆಟ್ ಬ್ಯಾಂಕಿಂಗ್ ಲಾಗಿನ್ ಮಾಡಿರಬೇಕು.

3. ಹಂತ ಹಂತವಾದ ಪ್ರಕ್ರಿಯೆ:

ಹಂತ 1: ಇ-ಸಲ್ಲಿಕೆ ಪೋರ್ಟಲ್‌ ನ ಮುಖ್ಯಪುಟಕ್ಕೆ ಹೋಗಿ. 'ಲಾಗಿನ್‌' ಮಲೆ ಒತ್ತಿರಿ.

Data responsive

ಹಂತ 2: ಲಾಗಿನ್‌ ಪುಟದಲ್ಲಿ 'ನೆಟ್‌ ಬ್ಯಾಂಕಿಂಗ್‌' ಮೇಲೆ ಒತ್ತಿರಿ.

Data responsive

ದಯವಿಟ್ಟು ಗಮನಿಸಿ: 
1. ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ಇ-ಸಲ್ಲಿಕೆ ವಾಲ್ಟ್ ಹೆಚ್ಚುವರಿ ಭದ್ರತೆ ಸಕ್ರಿಯವಾಗಿದ್ದರೆ - ಮೊದಲು, ನೀವು ಇ-ಸಲ್ಲಿಕೆ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ, ನಂತರ ನೆಟ್ ಬ್ಯಾಂಕಿಂಗ್ ಬ್ಯಾಂಕ್ ಅನ್ನು ಆಯ್ಕೆಮಾಡಬೇಕು.
2. ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ಇ-ಸಲ್ಲಿಕೆ ವಾಲ್ಟ್ ಹೆಚ್ಚುವರಿ ಭದ್ರತೆ ಸಕ್ರಿಯಗೊಂಡಿಲ್ಲದಿದ್ದರೆ - ಲಾಗಿನ್ ಪುಟದಲ್ಲಿ, ನೆಟ್ ಬ್ಯಾಂಕಿಂಗ್ ಆಯ್ಕೆಯನ್ನು ಒತ್ತಿರಿ. 

ಹಂತ 3: ನೆಟ್‌ ಬ್ಯಾಂಕಿಂಗ್‌ ಪುಟದಿಂದ ಬ್ಯಾಂಕ್‌ ಮೂಲಕ ಲಾಗಿನ್‌ ಆಗಿರಿ.

Data responsive

ಹಂತ 4: ಬ್ಯಾಂಕ್ ಆಯ್ಕೆ ಮಾಡಿದಾಗ, ಒಂದು ಪಾಪ್-ಅಪ್ ಸಂದೇಶ ಬರುತ್ತದೆ ‘You will be leaving e-Filing Portal and entering website operated by other partiesʼ. ‘Continue’ ಅನ್ನು ಒತ್ತಿರಿ.

Data responsive

ಹಂತ 5: ನಿಮ್ಮ ನೆಟ್‌ ಬ್ಯಾಂಕಿಂಗ್‌ ವಿವರಗಳೊಂದಿಗೆ ನೆಟ್‌ ಬ್ಯಾಂಕಿಂಗ್‌ ಪುಟದಿಂದ ಲಾಗಿನ್‌ ಆಗಿರಿ. 

Data responsive

ದಯವಿಟ್ಟು ಗಮನಿಸಿ: ನೆಟ್ ಬ್ಯಾಂಕಿಂಗ್ ಬ್ಯಾಂಕ್ ಖಾತೆ ಇ-ಸಲ್ಲಿಕೆ ಪೋರ್ಟಲ್ನಲ್ಲಿ ದೃಢೀಕೃತವಾಗಿರಬೇಕು ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ನಿರ್ದೇಶನ ನೀಡಿರಬೇಕು.

ಹಂತ 6: ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಆದಾಯ ತೆರಿಗೆ ಇ-ಸಲ್ಲಿಕೆ ಟ್ಯಾಬ್ ಅನ್ನು ಗುರುತಿಸಿ (ಪ್ರತಿಯೊಂದು ಬ್ಯಾಂಕಿನ ನ್ಯಾವಿಗೇಷನ್ ವಿಭಿನ್ನವಾಗಿರುತ್ತದೆ) ಬ್ಯಾಂಕ್ ವೆಬ್‌ಸೈಟ್‌ನಲ್ಲಿ ‘Login to Income Tax e-filing’ನ್ನು ಒತ್ತಿರಿ.

Data responsive

ಹಂತ 7: ನಿಮ್ಮನ್ನು ಇಲ್ಲಿಂದ ನೇರವಾಗಿ ಇ-ಸಲ್ಲಿಕೆ ವೆಬ್‌ ಪುಟಕ್ಕೆ ರೀಡೈರೆಕ್ಟ್‌ ಮಾಡಲಾಗುತ್ತದೆ

Data responsive