ನಿಮ್ಮ ಪಾಸ್‌ವರ್ಡ್ ಬದಲಾಯಿಸಿ - ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1. ನನಗೆ ನನ್ನ ಯೂಸರ್ ಐಡಿ ನೆನಪಿಲ್ಲ ನನ್ನ ಖಾತೆಗೆ ನಾನು ಹೇಗೆ ಲಾಗಿನ್ ಆಗಬಹುದು?
ಇ-ಫೈಲಿಂಗ್ ಪೋರ್ಟಲ್‌ಗೆ ನಿಮ್ಮ ಪ್ಯಾನ್ ಸಂಖ್ಯೆಯು ನಿಮ್ಮ ಬಳಕೆದಾರ ಐ.ಡಿಯಾಗಿದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮ್ಮ ಪ್ಯಾನ್‌ನೊಂದಿಗೆ ಲಿಂಕ್ ಆಗಿದ್ದರೆ ಮಾತ್ರ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಕೆದಾರರ ಐ.ಡಿಯಾಗಿ ಬಳಸಬಹುದು.
2. ನನ್ನ ಪಾಸ್‌ವರ್ಡ್ ಅನ್ನು ನನ್ನ ಹಿಂದಿನ ಪಾಸ್‌ವರ್ಡ್‌ಗಳಲ್ಲಿ ಒಂದಕ್ಕೆ ಬದಲಾಯಿಸಬಹುದೇ?
ಹೌದು, ನೀವು ಬದಲಾಯಿಸಬಹುದು. ಆದರೂ, ಹೊಸ ಪಾಸ್‌ವರ್ಡ್ ನಿಮ್ಮ ಹಿಂದಿನ ಮೂರು ಪಾಸ್‌ವರ್ಡ್‌ಗಳಂತೆಯೇ ಇರುವಂತಿಲ್ಲ.
3. ನನ್ನ ಪಾಸ್‌ವರ್ಡ್ ಅಪ್‌ಡೇಟ್ ಆಗಿದೆ ಎಂದು ನನಗೆ ಹೇಗೆ ತಿಳಿಯುತ್ತದೆ?
ವಹಿವಾಟು ಐ.ಡಿ ಯೊಂದಿಗೆ ನಿಮಗೆ ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಇದರ ಜೊತೆಗೆ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐ.ಡಿಗೆ ನೀವು ದೃಢೀಕರಣ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.
4. ಪಾಸ್‌ವರ್ಡ್ ಬದಲಾವಣೆ ವಿಫಲವಾದರೆ ನಾನು ಏನು ಮಾಡಬೇಕು?
ಕೆಳಗಿನ ಹಂತಗಳನ್ನು ಅನುಸರಿಸಿ:
- ನಿಮ್ಮ ವೆಬ್ ಬ್ರೌಸರ್‌ನಿಂದ ನಿಮ್ಮ ತಾತ್ಕಾಲಿಕ ಫೈಲ್‌ಗಳನ್ನು ಅಳಿಸಿ
- ನಿಮ್ಮ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ಪುನಃ ಬದಲಾಯಿಸಲು ಪ್ರಯತ್ನಿಸಿ.
5. "ಪಾಸ್‌ವರ್ಡ್ ಬದಲಾವಣೆ" ಪೇಜ್‌ನಲ್ಲಿ "ರದ್ದು ಮಾಡಿ" ಬಟನ್ ಅನ್ನು ಒತ್ತಿದಲ್ಲಿ ಏನಾಗುತ್ತದೆ?
ನಿಮ್ಮ ಪಾಸ್‌ವರ್ಡ್ ಅಪ್‌ಡೇಟ್ ಆಗದೆ, ನಿಮ್ಮ ಡ್ಯಾಶ್‌ಬೋರ್ಡ್‌ಗೆ ಮರುನಿರ್ದೇಶಿಸಲಾಗುತ್ತದೆ.
6. ನನ್ನ ಬಳಕೆದಾರ ಐ.ಡಿ ಮತ್ತು ಪಾಸ್‌ವರ್ಡ್ ಅನ್ನು ನಾನು ಮರೆತಿದ್ದೇನೆ. ನಾನು ಅವುಗಳನ್ನು ಹೇಗೆ ಮರುಪಡೆಬಹುದು?
ನಿಮ್ಮ ಪ್ಯಾನ್ ಸಂಖ್ಯೆಯು (ಅಥವಾ ಆಧಾರ್ ಸಂಖ್ಯೆ, ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಿಂಕ್ ಆಗಿದ್ದರೆ) ನಿಮ್ಮ ಬಳಕೆದಾರರ ಐ.ಡಿಯಾಗಿರುತ್ತದೆ.
ಇದನ್ನು ಬಳಸಿಕೊಂಡು ನಿಮ್ಮ ಪಾಸ್‌ವರ್ಡ್ ಅನ್ನು ಮರುಹೊಂದಿಸಲು ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪಾಸ್‌ವರ್ಡ್ ಮರೆತಿದ್ದೇನೆ ವೈಶಿಷ್ಟ್ಯವನ್ನು ಬಳಸಬಹುದು:
- ಆಧಾರ್ ಓ.ಟಿ.ಪಿ; ಅಥವಾ
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಓ.ಟಿ.ಪಿ ಅನ್ನು ಸ್ವೀಕರಿಸಲಾಗಿದೆ; ಅಥವಾ
- ಇ.ವಿ.ಸಿ (ಎಲೆಕ್ಟ್ರಾನಿಕ್ ಪರಿಶೀಲನಾ ಕೋಡ್) ಪೂರ್ವ-ಮೌಲೀಕೃತ ಬ್ಯಾಂಕ್ ಖಾತೆ / ಡಿಮ್ಯಾಟ್ ಖಾತೆ; ಅಥವಾ
- ಡಿ.ಎಸ್.ಸಿ (ಡಿಜಿಟಲ್ ಸಹಿ ಪ್ರಮಾಣಪತ್ರ) ಮೂಲಕ ಜನರೇಟ್ ಮಾಡಲಾಗಿದೆ