PAN ಲಾಗಿನ್ ಮೂಲಕ ಚಾಲಾನ್ ಸೃಷ್ಟಿಸಿ

(ಪಾವತಿಗಳಿಗಾಗಿ ತ್ವರಿತ ಚಲನ್ ರಚಿಸಿ)

(ಪಾವತಿಗಳಿಗಾಗಿ ತ್ವರಿತ ಚಲನ್ ರಚಿಸಿ)

Frequently Asked Questions

ITNS 280N ಕುರಿತು ಆಗಾಗ ಕೇಳಲಾಗುವ ಪ್ರಶ್ನೆಗಳು(FAQs)

1. ITNS 280N ಎಂದರೇನು?

ITNS 280N ಎಂಬುದು ಆದಾಯ ತೆರಿಗೆ ಕಾಯಿದೆ, 2025ರ ಅಡಿಯಲ್ಲಿ ವಿವಿಧ ರೀತಿಯ ಆದಾಯ ತೆರಿಗೆಗಳನ್ನು ಪಾವತಿಸಲು ಬಳಸುವ ಚಲನ್ ಫಾರ್ಮ್‌ ಆಗಿದೆ. ಇದನ್ನು ಸಾಮಾನ್ಯವಾಗಿ ಈ ಕೆಳಗಿನ ಪಾವತಿಗಳಿಗಾಗಿ ಬಳಸಲಾಗುತ್ತದೆ:ಸ್ವಯಂ ಮೌಲ್ಯಮಾಪನ ತೆರಿಗೆ,ಮುಂಗಡ ತೆರಿಗೆ,ನಿಯಮಿತ ಮೌಲ್ಯಮಾಪನದ ಮೇಲಿನ ತೆರಿಗೆ,ದ್ವಿತೀಯ ಹೊಂದಾಣಿಕೆ ತೆರಿಗೆ,ಸಂಚಯ ತೆರಿಗೆ (Accretion Tax),PAN ಅನ್ನು ಆಧಾರ್‌ಗೆ ಲಿಂಕ್ ಮಾಡುವಲ್ಲಿ ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ,ಸೆಕ್ಷನ್ 429ರ ಅಡಿಯಲ್ಲಿ ವಿಳಂಬ ಶುಲ್ಕ (ಫಾರ್ಮ್ 113 ಮತ್ತು ಫಾರ್ಮ್ 114),ಮೇಲ್ಮನವಿ ಶುಲ್ಕ ಮತ್ತು ಸಂಯೋಜನಾ ಶುಲ್ಕಗಳು.‌

2. ITNS 280N ಅಡಿಯಲ್ಲಿ ಯಾವ ಪ್ರಮುಖ ಶೀರ್ಷಿಕೆಗಳು ಮತ್ತು ಉಪ ಶೀರ್ಷಿಕೆಗಳು ಒಳಗೊಂಡಿವೆ?

ITNS 280N ಅಡಿಯಲ್ಲಿ ಒಳಗೊಂಡಿರುವ ಪ್ರಮುಖ ಶೀರ್ಷಿಕೆಗಳು: ಕಾರ್ಪೊರೇಷನ್ ತೆರಿಗೆ (0020) ಮತ್ತು ಆದಾಯ ತೆರಿಗೆ (ಕಂಪನಿಗಳನ್ನು ಹೊರತುಪಡಿಸಿ)(0021). ಉಪ ಶೀರ್ಷಿಕೆಗಳು: ಸ್ವಯಂ ಮೌಲ್ಯಮಾಪನ ತೆರಿಗೆ (300),ಮುಂಗಡ ತೆರಿಗೆ (100),ನಿಯಮಿತ ಮೌಲ್ಯಮಾಪನದ ಮೇಲಿನ ತೆರಿಗೆ (400), ದ್ವಿತೀಯ ಹೊಂದಾಣಿಕೆ ತೆರಿಗೆ (110), ಸಂಚಯ ತೆರಿಗೆ (111),PAN ಅನ್ನು ಆಧಾರ್‌ಗೆ ಲಿಂಕ್ ಮಾಡುವಲ್ಲಿ ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ (500),ಸೆಕ್ಷನ್ 429ರ ಅಡಿಯಲ್ಲಿ ವಿಳಂಬ ಶುಲ್ಕ (ಫಾರ್ಮ್ 113 ಮತ್ತು ಫಾರ್ಮ್ 114) (500), ಮೇಲ್ಮನವಿ ಶುಲ್ಕ (500) ಮತ್ತು ಸಂಯೋಜನಾ ಶುಲ್ಕಗಳು (500).

3. ಆದಾಯ ತೆರಿಗೆ ಪಾವತಿಗಳನ್ನು ಮಾಡಲು ITNS 280N ಅನ್ನು ನಾನು ಎಲ್ಲಿ ಪ್ರವೇಶಿಸಬಹುದು?

ಲಾಗಿನ್ ನಂತರ, ITNS 280N ಅನ್ನು ಈ ಮಾರ್ಗದ ಮೂಲಕ ಪ್ರವೇಶಿಸಬಹುದು: ಇ-ಸಲ್ಲಿಕೆ → ಇ-ತೆರಿಗೆ-ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → ಹೊಸ ಪಾವತಿ → ಆದಾಯ ತೆರಿಗೆ/ನಿಗಮ ತೆರಿಗೆ ಟೈಲ್‌ ಅಥವಾ ನಿಯಮಿತ ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿ‌ ಟೈಲ್. ಲಾಗಿನ್ ಮಾಡುವ ಮೊದಲು,ಈ ಮಾರ್ಗದ ಮೂಲಕ ಪ್ರವೇಶಿಸಬಹುದು: ಡ್ಯಾಶ್ ಬೋರ್ಡ್ → ಇ-ತೆರಿಗೆ-ಪಾವತಿ (ತ್ವರಿತ ಲಿಂಕ್) → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → PAN ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಪರದೆ → OTP ಪರಿಶೀಲನೆ → ಆದಾಯ ತೆರಿಗೆ/ನಿಗಮ ತೆರಿಗೆ ಟೈಲ್‌ ಅಥವಾ ನಿಯಮಿತ ‌ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿ ಟೈಲ್.

4. ಉಪ ಶೀರ್ಷಿಕೆ 500 ಅಡಿಯಲ್ಲಿ ಯಾವೆಲ್ಲಾ ಪಾವತಿಗಳನ್ನು ಮಾಡಬಹುದು?

ಉಪ ಶೀರ್ಷಿಕೆ 500 ಅಡಿಯಲ್ಲಿ ಈ ಕೆಳಗಿನ ಪಾವತಿಗಳನ್ನು ಮಾಡಬಹುದು: PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ, ಸೆಕ್ಷನ್ 429ರ ಅಡಿಯಲ್ಲಿ ವಿಳಂಬ ಶುಲ್ಕ (ಫಾರ್ಮ್ 113 ಮತ್ತು ಫಾರ್ಮ್ 114),ಮೇಲ್ಮನವಿ ಶುಲ್ಕ, ಮತ್ತು ಸಂಯೋಜನಾ ಶುಲ್ಕಗಳು.

5. ಉಪ ಶೀರ್ಷಿಕೆ 500 ಅಡಿಯಲ್ಲಿ ಯಾವುದೇ ಪಾವತಿಯನ್ನು ಜಮಾ ಮಾಡುವಾಗ, ತೆರಿಗೆ ವಿಭಜನೆ ವಿವರಗಳು ವಿಭಾಗದಲ್ಲಿ ಯಾವ ಕ್ಷೇತ್ರವನ್ನು ಬಳಸಬೇಕು?

ಮೇಲ್ಮನವಿ ಶುಲ್ಕ, ಸೆಕ್ಷನ್ 429ರ ಅಡಿಯಲ್ಲಿ ವಿಳಂಬ ಶುಲ್ಕ, PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ ಮತ್ತು ಸಂಯೋಜನಾ ಶುಲ್ಕಗಳನ್ನು ಜಮಾ ಮಾಡಲು,“ಪಾವತಿಯ ವಿಧ” ಅಡಿಯಲ್ಲಿ ಉಪ ಶೀರ್ಷಿಕೆ “ಇತರೆ ಸ್ವೀಕೃತಿಗಳು (500)” ಅನ್ನು ಆಯ್ಕೆ ಮಾಡಬೇಕು ಹಾಗೂ ತೆರಿಗೆ ವಿಭಜನೆ ವಿವರಗಳು ಪರದೆಯಲ್ಲಿರುವ “ಇತರೆ” ಕ್ಷೇತ್ರದಲ್ಲಿ ಪಾವತಿಸಬೇಕಾದ ಮೊತ್ತವನ್ನು ನಮೂದಿಸಬೇಕು.

6. PAN ಅನ್ನು ಆಧಾರ್ ಗೆ ಲಿಂಕ್ ಮಾಡಲು ನಾನು ಪಾವತಿಯನ್ನು ಹೇಗೆ ಮಾಡಬಹುದು?

PAN ಅನ್ನು ಆಧಾರ್ ಗೆ ಲಿಂಕ್ ಮಾಡಲು ಪಾವತಿಯನ್ನು ಈ ಕೆಳಗಿನ ಮಾರ್ಗದ ಮೂಲಕ ಮಾಡಬಹುದು:‌ ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆಮಾಡಿ → ಆದಾಯ ತೆರಿಗೆ ಕಾಯಿದೆ, 2025 → ಹೊಸ ಪಾವತಿ → ಆದಾಯ ತೆರಿಗೆ ಟೈಲ್ → ಪಾವತಿಯ ವಿಧ (ಉಪ ಶೀರ್ಷಿಕೆ) → ಇತರೆ ಸ್ವೀಕೃತಿಗಳು (500) → ಪಾವತಿಯ ಉಪ-ವಿಧ → PAN ಅನ್ನು ಆಧಾರ್ ಗೆ ಲಿಂಕ್ ಮಾಡಲು ವಿಳಂಬವಾದಲ್ಲಿ ಪಾವತಿಸಬೇಕಾದ ಶುಲ್ಕ.

7. ನಾನು ಪಾವತಿಯನ್ನು ಯಶಸ್ವಿಯಾಗಿ ಮಾಡಿದ್ದೇನೆ. BSR ಕೋಡ್ ಅಥವಾ ಚಲನ್ ಕ್ರಮ ಸಂಖ್ಯೆಯನ್ನು ನಾನು ಎಲ್ಲಿ ಪಡೆಯಬಹುದು?

7 ಅಂಕಿಗಳ BSR ಕೋಡ್, ಪಾವತಿ ದಿನಾಂಕ ಮತ್ತು ಚಲನ್ ಕ್ರಮ ಸಂಖ್ಯೆಗಳನ್ನು ಇ-ತೆರಿಗೆ ಪಾವತಿ → ಪಾವತಿ ಇತಿಹಾಸ → ಕ್ರಮಗಳು → ವಿವರಗಳನ್ನು ವೀಕ್ಷಿಸಿ ನಲ್ಲಿ ಪಡೆಯಬಹುದು. ಈ ವಿವರಗಳನ್ನು ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಪ್ರವೇಶಿಸಬಹುದು.

8. ಒಂದೇ ಚಲನ್ (ITNS 280N) ಅನ್ನು ವಿವಿಧ ಉಪ ಶೀರ್ಷಿಕೆಗಳ ಅಡಿಯಲ್ಲಿ ಪಾವತಿಗಳನ್ನು ಮಾಡಲು ಬಳಸಬಹುದೇ?

ಇಲ್ಲ. ಪ್ರತಿ ಉಪ ಶೀರ್ಷಿಕೆ ಅಡಿಯಲ್ಲಿ ಪಾವತಿಯನ್ನು ಮಾಡಲು ಪ್ರತ್ಯೇಕ ಚಲನ್ (ITNS 280N) ಅನ್ನು ಬಳಸಬೇಕು. ಉದಾಹರಣೆಗೆ, ಸ್ವಯಂ ಮೌಲ್ಯಮಾಪನ ತೆರಿಗೆ ಮತ್ತು ಮುಂಗಡ ತೆರಿಗೆ ಪಾವತಿಸಲು ಪ್ರತ್ಯೇಕ ಚಲನ್‌ಗಳನ್ನು ಬಳಸುವುದು ಕಡ್ಡಾಯವಾಗಿದೆ.

9. PAN ಲಾಗಿನ್ ಮೂಲಕ ನಿಯಮಿತ ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿಯನ್ನು ನಾನು ಹೇಗೆ ಮಾಡಬಹುದು?

ನಿಯಮಿತ ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿ ಯನ್ನು PAN ಲಾಗಿನ್ ಮೂಲಕ, ಬೇಡಿಕೆ ಉಲ್ಲೇಖ ಸಂಖ್ಯೆ (DRN)ಯೊಂದಿಗೆ ಅಥವಾ ಅದಿಲ್ಲದೇ ಮಾಡಬಹುದು. DRN ಇಲ್ಲದೆ, ಲಾಗಿನ್ ಮಾಡುವ ಮೊದಲು ಅಥವಾ ಲಾಗಿನ್ ಮಾಡಿದ ನಂತರ, ಈ ಮಾರ್ಗದ ಮೂಲಕ ಪಾವತಿ ಮಾಡಬಹುದು:ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಆದಾಯ ತೆರಿಗೆ ಕಾಯಿದೆ → ಹೊಸ ಪಾವತಿ → ನಿಯಮಿತ ಮೌಲ್ಯಮಾಪನ ತೆರಿಗೆ (400)ಯಾಗಿ ಬೇಡಿಕೆ ಪಾವತಿ. DRN ಜೊತೆಗೆ ಪಾವತಿ ಮಾಡಲು, ಮೊದಲು PAN ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಬೇಕು. ನಂತರ ಮೇಲಿನ ಅದೇ ಮಾರ್ಗವನ್ನು ಅನುಸರಿಸಿ, ಬೇಡಿಕೆ ಉಲ್ಲೇಖ ಸಂಖ್ಯೆ (DRN) ಬಳಸಿ ಪಾವತಿಯನ್ನು ಪೂರ್ಣಗೊಳಿಸಬೇಕು.

10. DRN ಜೊತೆಗೆ ಮತ್ತು DRN ಇಲ್ಲದೆ ಪಾವತಿ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವಿದೆಯೇ?

ಹೌದು. ಬೇಡಿಕೆ ಉಲ್ಲೇಖ ಸಂಖ್ಯೆ (DRN) ಬಳಸಿ ಪಾವತಿ ಮಾಡುವಾಗ, DRN ಆಯ್ಕೆಯನ್ನು ಆರಿಸಿದ ಕೂಡಲೇ DRNಗೆ ಸಂಬಂಧಿಸಿದ ಎಲ್ಲಾ ವಿವರಗಳು ಸ್ವಯಂಚಾಲಿತವಾಗಿ ಪಡೆಯಲ್ಪಟ್ಟು, ಬಳಕೆದಾರರನ್ನು ನೇರವಾಗಿ ಪಾವತಿ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಈ ಸೌಲಭ್ಯವು PAN ಲಾಗಿನ್ ಮಾಡಿದ ನಂತರ ಮಾತ್ರ ಲಭ್ಯವಿರುತ್ತದೆ. DRN ಇಲ್ಲದೆ ಪಾವತಿ ಮಾಡುವಾಗ, ಬಳಕೆದಾರರು ಪರದೆಯಲ್ಲಿ ಪ್ರದರ್ಶಿಸಲಾದ ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡಿ, (ಲಾಗಿನ್ → ಬೇಡಿಕೆ ಟೈಲ್ → ಮುಂದುವರಿಯಲು ಲಿಂಕ್‌) ಎಂಬ ಮಾರ್ಗವನ್ನು ಅನುಸರಿಸಬೇಕು ಮತ್ತು ಈ ಆಯ್ಕೆಯು ಲಾಗಿನ್ ಮಾಡುವ ಮೊದಲು ಮತ್ತು ಲಾಗಿನ್ ಮಾಡಿದ ನಂತರ ಎರಡೂ ವಿಧಾನಗಳಲ್ಲಿ ಲಭ್ಯವಿರುತ್ತದೆ.

11. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ DRN ಬಳಸಿ ಬೇಡಿಕೆ ಪಾವತಿಯನ್ನು ನಾನು ಹೇಗೆ ಮಾಡಬಹುದು?

ಅನ್ವಯವಾಗುವ ವರ್ಷಗಳಿಗಾಗಿ ಪಾವತಿ ಪರದೆಯಲ್ಲಿ ಲಭ್ಯವಿರುವ DRN ರೇಡಿಯೋ ಬಟನ್ ಅನ್ನು ಆಯ್ಕೆ ಮಾಡುವ ಮೂಲಕ ಬೇಡಿಕೆ ಉಲ್ಲೇಖ ಸಂಖ್ಯೆ (DRN) ಬಳಸಿ ಬೇಡಿಕೆ ಪಾವತಿಯನ್ನು ಮಾಡಬಹುದು, ನಂತರ, ವ್ಯವಸ್ಥೆಯು (System) DRNಗೆ ಸಂಬಂಧಿಸಿದ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆಯುತ್ತದೆ ಮತ್ತು ಬಳಕೆದಾರರನ್ನು ಪಾವತಿ ಪುಟಕ್ಕೆ ಮರುನಿರ್ದೇಶಿಸಿ, ಪಾವತಿ ವ್ಯವಹಾರವನ್ನು ಪೂರ್ಣಗೊಳಿಸಲು ಅವಕಾಶ ನೀಡುತ್ತದೆ.

12. ನನ್ನ ಬಳಿ DRN ಇಲ್ಲ. ನಾನು ಬೇಡಿಕೆ ಪಾವತಿಯನ್ನು ಹೇಗೆ ಮಾಡಬಹುದು?

ಬೇಡಿಕೆ ಉಲ್ಲೇಖ ಸಂಖ್ಯೆ (DRN) ಲಭ್ಯವಿಲ್ಲದಿದ್ದರೂ, ಪಾವತಿ ಪರದೆಯಲ್ಲಿ ಪ್ರದರ್ಶಿಸಲಾದ ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡಿ, ಲಾಗಿನ್ → ಪಾವತಿ ಟೈಲ್ → ಲಿಂಕ್ ಎಂಬ ಮಾರ್ಗವನ್ನು ಅನುಸರಿಸುವ ಮೂಲಕ ಬೇಡಿಕೆ ಪಾವತಿಯನ್ನು ಮಾಡಬಹುದು. ಇದರಿಂದ ಬಳಕೆದಾರರನ್ನು ಪಾವತಿ ಮುಂದುವರಿಸಲು ಮತ್ತು ಪೂರ್ಣಗೊಳಿಸಲು ಸೂಕ್ತ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

ITNS 282N ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

1. ITNS 282N ಎಂದರೇನು?

ITNS 282N ಎಂಬುದು ಭದ್ರತೆ ವಹಿವಾಟು ತೆರಿಗೆ, ಸರಕು ವಹಿವಾಟು ತೆರಿಗೆ, ಸೆಕ್ಷನ್‌ 379 ರ ಅಡಿಯಲ್ಲಿ e-DRS ಯೋಜನೆ ಮತ್ತು ಇತರೆ ತೆರಿಗೆ ಸೇರಿದಂತೆ ವಿವಿಧ ರೀತಿಯ ನೇರ ತೆರಿಗೆಗಳನ್ನು ಪಾವತಿಸಲು ಬಳಸುವ ಚಾಲನ್ ಫಾರ್ಮ್‌ ಆಗಿದೆ.

2. ITNS 282N ಅಡಿಯಲ್ಲಿ ಯಾವ ಪ್ರಧಾನ ಮತ್ತು ಉಪ ಶೀರ್ಷಿಕೆಗಳು ಒಳಗೊಂಡಿವೆ?

ಪ್ರಧಾನ ಶೀರ್ಷಿಕೆ:
ಭದ್ರತೆ ವಹಿವಾಟು ತೆರಿಗೆ (0034)
ಸೆಕ್ಷನ್‌ 379 ರ ಅಡಿಯಲ್ಲಿ e-DRS ಯೋಜನೆ (0075)
ಇತರೆ ತೆರಿಗೆ (0028)

ಉಪ ಶೀರ್ಷಿಕೆ:
ಸ್ವಯಂ-ಮೌಲ್ಯಮಾಪನ ತೆರಿಗೆ (300)
ಮುಂಗಡ ತೆರಿಗೆ (100)
ನಿಯಮಿತ ನಿರ್ಧರಣೆಯ ಮೇಲಿನ ತೆರಿಗೆ (400)
ವಿವಿಧ ರಸೀದಿಗಳು (800)
ಸರಕು ವಹಿವಾಟು ತೆರಿಗೆ (800)

3. ಆದಾಯ ತೆರಿಗೆ ಪಾವತಿಗಳನ್ನು ಮಾಡಲು ನಾನು ITNS 282N ಅನ್ನು ಎಲ್ಲಿ ಪ್ರವೇಶಿಸಬಹುದು?

ಲಾಗಿನ್‌ ಅನಂತರ:
ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯ್ದೆಯನ್ನು ಆಯ್ಕೆಮಾಡಿ → ಹೊಸ ಪಾವತಿ → STT / CTT / ಸೆಕ್ಷನ್‌ 379 ರ ಅಡಿಯಲ್ಲಿ e-DRS / ಇತರೆ ತೆರಿಗೆ ಟೈಲ್

ಲಾಗಿನ್‌ ಆಗುವ ಮೊದಲು:
ಡ್ಯಾಶ್‌ಬೋರ್ಡ್ → ಇ-ತೆರಿಗೆ ಪಾವತಿ (ತ್ವರಿತ ಲಿಂಕ್) → ಅನ್ವಯವಾಗುವ ಆದಾಯ ತೆರಿಗೆ ಕಾಯ್ದೆಯನ್ನು ಆಯ್ಕೆಮಾಡಿ → PAN ಮತ್ತು ಮೊಬೈಲ್ ಸಂಖ್ಯೆ → OTP ಪರಿಶೀಲನೆ → STT / CTT / ಸೆಕ್ಷನ್‌ 379 ರ ಅಡಿಯಲ್ಲಿ e-DRS / ಇತರೆ ತೆರಿಗೆ ಟೈಲ್

4. ಭದ್ರತೆ ವಹಿವಾಟು ತೆರಿಗೆಯನ್ನು ಪಾವತಿಸಲು ಯಾವ ಪ್ರಧಾನ ಮತ್ತು ಉಪ ಶೀರ್ಷಿಕೆಯ ಸಂಯೋಜನೆಯನ್ನು ಆಯ್ಕೆ ಮಾಡಬೇಕು?

ಭದ್ರತೆ ವಹಿವಾಟು ತೆರಿಗೆ ಪಾವತಿಗಾಗಿ, ಪಾವತಿಯ ವಿಧ ಅಡಿಯಲ್ಲಿ ಪ್ರದಾನ ಶೀರ್ಷಿಕೆ – ಭದ್ರತೆ ವಹಿವಾಟು ತೆರಿಗೆ (0034) ಮತ್ತು ಉಪ ಶೀರ್ಷಿಕೆ – ಸ್ವಯಂ-ಮೌಲ್ಯಮಾಪನ ತೆರಿಗೆ (300) ಅನ್ನು ಆಯ್ಕೆ ಮಾಡಿ.

5. ಸರಕು ವಹಿವಾಟು ತೆರಿಗೆಯನ್ನು ಪಾವತಿಸಲು ಯಾವ ಪ್ರಮುಖ ಮತ್ತು ಉಪ ಶೀರ್ಷಿಕೆಯ ಸಂಯೋಜನೆಯನ್ನು ಆಯ್ಕೆ ಮಾಡಬೇಕು?

ಸರಕು ವಹಿವಾಟು ತೆರಿಗೆ ಪಾವತಿಗಾಗಿ, ಪಾವತಿಯ ವಿಧ ಅಡಿಯಲ್ಲಿ ಪ್ರಧಾನ ಶೀರ್ಷಿಕೆ – ಭದ್ರತೆ ವಹಿವಾಟು ತೆರಿಗೆ (0034) ಮತ್ತು ಉಪ ಶೀರ್ಷಿಕೆ – ಸರಕು ವಹಿವಾಟು ತೆರಿಗೆ (800) ಅನ್ನು ಆಯ್ಕೆ ಮಾಡಿ.

6. e-DRS ಶುಲ್ಕವನ್ನು ಪಾವತಿಸಲು ಯಾವ ಪ್ರಧಾನ ಮತ್ತು ಉಪ ಶೀರ್ಷಿಕೆಯ ಸಂಯೋಜನೆಯನ್ನು ಆಯ್ಕೆ ಮಾಡಬೇಕು?

e-DRS ಶುಲ್ಕ ಪಾವತಿಗಾಗಿ, ಪಾವತಿಯ ವಿಧ ಅಡಿಯಲ್ಲಿ ಪ್ರಧಾನ ಶೀರ್ಷಿಕೆ – ಸೆಕ್ಷನ್‌ 379 ರ ಅಡಿಯಲ್ಲಿ e-DRS ಯೋಜನೆ (0075) ಮತ್ತು ಉಪ ಶೀರ್ಷಿಕೆ – ವಿವಿಧ ರಸೀದಿಗಳು (800) ಅನ್ನು ಆಯ್ಕೆ ಮಾಡಿ.

ITNS 288N ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ITNS 288N ಎಂದರೇನು?

ITNS 288N ಎಂಬುದು ಆದಾಯ ತೆರಿಗೆ ಕಾಯಿದೆ, 2025ರ ಅಡಿಯಲ್ಲಿ ಬ್ಲಾಕ್ ಮೌಲ್ಯಮಾಪನ ಸಂಬಂಧಿತ ಸ್ವಯಂ-ಮೌಲ್ಯಮಾಪನ ತೆರಿಗೆ ಹಾಗೂ ಮೌಲ್ಯಮಾಪನ ಬೇಡಿಕೆ ಪಾವತಿಸಲು ಬಳಸುವ ಚಲನ್ ಫಾರ್ಮ್‌ ಆಗಿದೆ.

2. ITNS 288N ಅಡಿಯಲ್ಲಿ ಯಾವ ಪ್ರಧಾನ ಶೀರ್ಷಿಕೆಗಳು ಮತ್ತು ಉಪ ಶೀರ್ಷಿಕೆಗಳು ಒಳಗೊಂಡಿವೆ?

ಪ್ರಧಾನ ಶೀರ್ಷಿಕೆ:
-ನಿಗಮ ತೆರಿಗೆ (0020)
-ಆದಾಯ ತೆರಿಗೆ (ಕಂಪನಿಗಳನ್ನು ಹೊರತುಪಡಿಸಿ) (0021)
ಉಪ ಶೀರ್ಷಿಕೆ :
-ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ-ಮೌಲ್ಯಮಾಪನ ತೆರಿಗೆ (311)
-ಬ್ಲಾಕ್ ಅವಧಿಗೆ ಸಂಬಂಧಿಸಿದ ಶೋಧ ಮೌಲ್ಯಮಾಪನದ ತೆರಿಗೆ ಬೇಡಿಕೆ ಪಾವತಿ (411)

3. 01/04/2026 ರಿಂದ ಆರಂಭವಾಗುವ ಶೋಧಗಳಿಗೆ ಯಾವ ಆದಾಯ ತೆರಿಗೆ ಕಾಯಿದೆ ಅನ್ವಯವಾಗುತ್ತದೆ?

ಬಳಕೆದಾರರು 01/04/2026 ರಿಂದ ಆರಂಭವಾದ ಶೋಧಗಳಿಗೆ ಸಂಬಂಧಿಸಿದ ಬ್ಲಾಕ್ ಅವಧಿಯ ತೆರಿಗೆ ಪಾವತಿಯನ್ನು ಮಾಡಲು ಬಯಸಿದರೆ, ಆದಾಯ ತೆರಿಗೆ ಕಾಯಿದೆ, 2025 ಅನ್ವಯವಾಗುತ್ತದೆ. ಇಲ್ಲದಿದ್ದರೆ, ಆದಾಯ ತೆರಿಗೆ ಕಾಯಿದೆ, 1961 ಅನ್ನು ಆಯ್ಕೆ ಮಾಡಬೇಕು. ಹಣಕಾಸು ವರ್ಷ 2026–27ರಲ್ಲಿ ಆರಂಭವಾದ ಶೋಧಗಳಿಗೆ ಆರಂಭಿಕ ತೆರಿಗೆ ವರ್ಷ 2020 ಆಗಿರುತ್ತದೆ.

4. ಆದಾಯ ತೆರಿಗೆ ಪಾವತಿಗಳನ್ನು ಮಾಡಲು ITNS 288N ಅನ್ನು ನಾನು ಎಲ್ಲಿ ಪ್ರವೇಶಿಸಬಹುದು?

ಲಾಗಿನ್ ನಂತರ :
ಇ-ಸಲ್ಲಿಕೆ → ಇ-ತೆರಿಗೆ-ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → ಹೊಸ ಪಾವತಿ → ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ-ಮೌಲ್ಯಮಾಪನ ತೆರಿಗೆ (311) ಮತ್ತು ಬ್ಲಾಕ್ ಅವಧಿಗೆ ಸಂಬಂಧಿಸಿದ ಶೋಧ ಮೌಲ್ಯಮಾಪನದ ತೆರಿಗೆ ಬೇಡಿಕೆ ಪಾವತಿ (411)
ಲಾಗಿನ್ ಮಾಡುವ ಮೊದಲು :
ಡ್ಯಾಶ್ ಬೋರ್ಡ್ → ಇ-ತೆರಿಗೆ-ಪಾವತಿ ತ್ವರಿತ ಲಿಂಕ್ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → PAN ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಪರದೆ → OTP ಪರಿಶೀಲನೆ→ ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ-ಮೌಲ್ಯಮಾಪನ ತೆರಿಗೆ (311) ಟೈಲ್

5. ITNS 288N ಅನ್ನು ಬಳಸಿಕೊಂಡು ಮಾಡಿದ ಪಾವತಿಯು ಆರಂಭಿಕ ತೆರಿಗೆ ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ಸಂಪೂರ್ಣ ಬ್ಲಾಕ್ ಅವಧಿಗೆ ಅನ್ವಯಿಸುತ್ತದೆಯೇ?

ITNS 288N ಅನ್ನು ಬಳಸಿಕೊಂಡು ಮಾಡಿದ ಪಾವತಿಯು, ಚಲನ್‌ನಲ್ಲಿ ನಮೂದಿಸಿದ ಆರಂಭಿಕ ತೆರಿಗೆ ವರ್ಷಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಬದಲಾಗಿ, ಅದು ಸಂಬಂಧಿತ ಸಂಪೂರ್ಣ ಬ್ಲಾಕ್ ಅವಧಿಗೆ ಅನ್ವಯಿಸುತ್ತದೆ.

6. ಶೋಧಕ್ಕೆ ಒಳಪಟ್ಟ ವ್ಯಕ್ತಿಯ (ನಿರ್ದಿಷ್ಟ ವ್ಯಕ್ತಿಯ) ಸಂದರ್ಭದಲ್ಲಿ ಬ್ಲಾಕ್ ಅವಧಿಗೆ ಆರಂಭಿಕ ತೆರಿಗೆ ವರ್ಷ ಯಾವುದು?

ಚಲನ್‌ನ ಮೇಲ್ಭಾಗದಲ್ಲಿ ನಮೂದಿಸಬೇಕಾದ 'ಬ್ಲಾಕ್ ಅವಧಿಯ ಆರಂಭಿಕ ತೆರಿಗೆ ವರ್ಷ' ಎಂಬುದು ಸಂಬಂಧಿತ ಬ್ಲಾಕ್ ಅವಧಿಯನ್ನು ಒಳಗೊಂಡಿರುವ ಆರಂಭಿಕ ತೆರಿಗೆ ವರ್ಷಕ್ಕೆ ಅನುಗುಣವಾಗಿರಬೇಕು. ಉದಾಹರಣೆ:
ಶೋಧವನ್ನು ಆರಂಭಿಸಿದ ದಿನಾಂಕ 20/04/2026 ಆಗಿದ್ದು, ಆ ಶೋಧಕ್ಕೆ ಸಂಬಂಧಿಸಿದ ಕೊನೆಯ ಅಧಿಕೃತ ಅನುಮತಿಯ ಜಾರಿಯ ದಿನಾಂಕ 15/05/2026 ಆಗಿದ್ದರೆ, ಬ್ಲಾಕ್ ಅವಧಿಯು 01/04/2020 ರಿಂದ 15/05/2026 ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ, ಚಲನ್‌ನ ಮೇಲಿನ ಬಲ ಮೂಲೆಯಲ್ಲಿ ನಮೂದಿಸಬೇಕಾದ 'ಬ್ಲಾಕ್ ಅವಧಿಯ ಆರಂಭಿಕ ತೆರಿಗೆ ವರ್ಷ'2020 ಆಗಿರುತ್ತದೆ.

7. ಮೇಲ್ಮನವಿ ಶುಲ್ಕವನ್ನು ಪಾವತಿಸಲು ಯಾವ ವಿಭಾಗವನ್ನು ಬಳಸಬೇಕು?

ಮೇಲ್ಮನವಿ ಶುಲ್ಕವನ್ನು ಪಾವತಿಸುತ್ತಿದ್ದರೆ, 'ಪಾವತಿಗಳ ವಿವರಗಳು' ವಿಭಾಗದ ಅಡಿಯಲ್ಲಿ 'ಇತರೆ' ಎಂಬಲ್ಲಿ ಆ ಮೊತ್ತವನ್ನು ನಮೂದಿಸಬೇಕು.

8. ಒಂದೇ ಚಲನ್ ಅನ್ನು ವಿವಿಧ ರೀತಿಯ ಪಾವತಿಗಳಿಗಾಗಿ ಬಳಸಬಹುದೇ?

ಇಲ್ಲ. ಒಂದೇ ಚಲನ್ ಅನ್ನು ವಿವಿಧ ರೀತಿಯ ಪಾವತಿಗಳಿಗಾಗಿ ಬಳಸಲಾಗುವುದಿಲ್ಲ. ಪ್ರತಿಯೊಂದು ರೀತಿಯ ಪಾವತಿಗಾಗಿ ಪ್ರತ್ಯೇಕ ಚಲನ್ ಅನ್ನು ರಚಿಸಬೇಕು:
a) ಈ ಕೆಳಗಿನ ಪಾವತಿಗಳಿಗೆ ಒಂದೇ ಚಲನ್ ಅನ್ನು ಬಳಸಬೇಕು:
ತೆರಿಗೆ, ಸರ್ಚಾರ್ಜ್ ಮತ್ತು ಸೆಸ್
b) ಈ ಕೆಳಗಿನ ಪ್ರತಿಯೊಂದು ಪಾವತಿಗಾಗಿ ಪ್ರತ್ಯೇಕ ಚಲನ್ ಅನ್ನು ಬಳಸಬೇಕು:
ಬಡ್ಡಿ
ದಂಡ
ಇತರೆ (ಮೇಲ್ಮನವಿ ಶುಲ್ಕ ಇತ್ಯಾದಿ)

9. ಬ್ಲಾಕ್ ಮೌಲ್ಯಮಾಪನಕ್ಕೆ ಸಂಬಂಧಿಸಿದ ಬೇಡಿಕೆಯ ಪಾವತಿಯನ್ನು ನಾನು ಹೇಗೆ ಮಾಡಬಹುದು?

ಬ್ಲಾಕ್ ಮೌಲ್ಯಮಾಪನ ಅಡಿಯಲ್ಲಿ ಉಂಟಾಗಿರುವ ಬೇಡಿಕೆಯನ್ನು, ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ → ಹೊಸ ಪಾವತಿ → ಬ್ಲಾಕ್ ಅವಧಿಗೆ ಸಂಬಂಧಿಸಿದ “ಶೋಧ ಮೌಲ್ಯಮಾಪನದ ತೆರಿಗೆ ಬೇಡಿಕೆ ಪಾವತಿ (411)” ಗೆ ತಲುಪುವ ಮೂಲಕ ಪಾವತಿಸಬಹುದು. ಅಂತಹ ಪಾವತಿಗಳಿಗಾಗಿ DRN (ಬೇಡಿಕೆ ಉಲ್ಲೇಖ ಸಂಖ್ಯೆ) ಕಡ್ಡಾಯವಾಗಿರುತ್ತದೆ. DRN ಬಳಸಿ ಪಾವತಿ ಮಾಡುವಾಗ, ಸಂಬಂಧಿತ ವರ್ಷದ ಪಾವತಿ ಪರದೆಯಲ್ಲಿ “DRN” ಆಯ್ಕೆಯನ್ನು ಆರಿಸಬೇಕು. ಅದನ್ನು ಆಯ್ಕೆ ಮಾಡಿದ ನಂತರ, ವ್ಯವಸ್ಥೆಯು ಸಂಬಂಧಿತ ಬೇಡಿಕೆಯ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆಯುತ್ತದೆ ಮತ್ತು ನಿಮ್ಮನ್ನು ಪಾವತಿ ಪುಟಕ್ಕೆ ಮರುನಿರ್ದೇಶಿಸುತ್ತದೆ. ಅಲ್ಲಿ ನೀವು ಪಾವತಿಯನ್ನು ಪೂರ್ಣಗೊಳಿಸಬಹುದು.

10. ಬ್ಲಾಕ್ ಮೌಲ್ಯಮಾಪನಗಳಿಗೆ ಸಂಬಂಧಿಸಿದಂತೆ ‘ನಿರ್ದಿಷ್ಟ ವ್ಯಕ್ತಿ’ ಮತ್ತು ‘ಇತರ ವ್ಯಕ್ತಿ’ ಎಂಬುದರ ಅರ್ಥವೇನು?

‘ನಿರ್ದಿಷ್ಟ ವ್ಯಕ್ತಿ’ ಎಂದರೆ, ಸೆಕ್ಷನ್ 247ರ ಅಡಿಯಲ್ಲಿ ಶೋಧ ನಡೆಸಲಾದ ವ್ಯಕ್ತಿ ಅಥವಾ ಸೆಕ್ಷನ್ 248ರ ಅಡಿಯಲ್ಲಿ ಯಾರ ಲೆಕ್ಕಪತ್ರಗಳು, ಇತರೆ ದಾಖಲೆಗಳು ಅಥವಾ ಯಾವುದೇ ಆಸ್ತಿಗಳನ್ನು ಕೋರಿಕೆ ಮೂಲಕ ಪಡೆದುಕೊಳ್ಳಲಾಗಿದೆಯೋ ಆ ವ್ಯಕ್ತಿಯನ್ನು ಸೂಚಿಸುತ್ತದೆ. ‘ಇತರ ವ್ಯಕ್ತಿ’ ಎಂದರೆ, ಶೋಧಕ್ಕೆ ಒಳಪಟ್ಟ ವ್ಯಕ್ತಿ (ನಿರ್ದಿಷ್ಟ ವ್ಯಕ್ತಿ) ಹೊರತುಪಡಿಸಿ, ನಿರ್ದಿಷ್ಟ ವ್ಯಕ್ತಿಯ ಮೇಲೆ ನಡೆಸಲಾದ ಶೋಧದ ವೇಳೆ ಅಥವಾ ಸೆಕ್ಷನ್ 248ರ ಅಡಿಯಲ್ಲಿ ನಿರ್ದಿಷ್ಟ ವ್ಯಕ್ತಿಯ ಪ್ರಕರಣದಲ್ಲಿ ಕೋರಿಕೆ ಮೂಲಕ ಪಡೆದುಕೊಳ್ಳಲಾದ ದಾಖಲೆಗಳು, ಲೆಕ್ಕಪತ್ರಗಳು ಅಥವಾ ಆಸ್ತಿಗಳು ಸಂಬಂಧಿಸಿರುವ ಬೇರೆ ವ್ಯಕ್ತಿಯನ್ನು ಸೂಚಿಸುತ್ತದೆ.

11. ಬ್ಲಾಕ್ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ‘ಇತರ ವ್ಯಕ್ತಿ’ಗಾಗಿ ಪಾವತಿಗಳನ್ನು ಮಾಡುವ ಸಂದರ್ಭದಲ್ಲಿ ಸೂಕ್ತ ಆರಂಭಿಕ ತೆರಿಗೆ ವರ್ಷ ಯಾವುದು?

‘ಇತರ ವ್ಯಕ್ತಿ’ಗೆ ಸಂಬಂಧಿಸಿದಂತೆ ಬಹಿರಂಗಪಡಿಸದ ಆದಾಯವು ಈ ಕೆಳಕಂಡ ಅವಧಿಗೆ ಮಾತ್ರ ಸಂಬಂಧಿಸಿದಿದ್ದರೆ.––
(A)(i)ಶೋಧ ಅಥವಾ ಕೋರಿಕೆ ಪ್ರಾರಂಭಗೊಂಡ ವರ್ಷದ ತಕ್ಷಣದ ಹಿಂದಿನ ತೆರಿಗೆ ವರ್ಷದಿಂದ (ಇದನ್ನು ‘ನಿರ್ದಿಷ್ಟ ವರ್ಷ’ ಎಂದು ಉಲ್ಲೇಖಿಸಲಾಗುತ್ತದೆ) ಆರಂಭಿಸಿ; ಮತ್ತು 
(ii)ಶೋಧ ಪ್ರಾರಂಭಗೊಂಡ ದಿನಾಂಕ ಅಥವಾ ಕೋರಿಕೆ ಮಾಡಲಾದ ದಿನಾಂಕದಂದು ಅಂತ್ಯಗೊಳ್ಳುವ ಅವಧಿಗೆ ಸಂಬಂಧಿಸಿದಿದ್ದರೆ, ಆಗ ಸೆಕ್ಷನ್ 301(a)ರ ನಿಬಂಧನೆಗಳಿಗಿಂತ ಹೊರತಾಗಿಯೂ, ಅಂತಹ ‘ಇತರ ವ್ಯಕ್ತಿ’ಗೆ ಸಂಬಂಧಿಸಿದ ಬ್ಲಾಕ್ ಅವಧಿಯು ನಿರ್ದಿಷ್ಟ ತೆರಿಗೆ ವರ್ಷ ಹಾಗೂ ಶೋಧ ಪ್ರಾರಂಭಗೊಂಡ ಅಥವಾ ಕೋರಿಕೆ ಮಾಡಲಾದ ತೆರಿಗೆ ವರ್ಷದ ಏಪ್ರಿಲ್ 1ರಿಂದ ಪ್ರಾರಂಭವಾಗಿ, ಆ ಶೋಧ ಅಥವಾ ಕೋರಿಕೆಗೆ ಸಂಬಂಧಿಸಿದ ಕೊನೆಯ ಅಧಿಕೃತ ಅನುಮತಿಯ ಅನುಷ್ಠಾನದ ದಿನಾಂಕದಂದು ಅಂತ್ಯಗೊಳ್ಳುವ ಅವಧಿಯನ್ನು ಒಳಗೊಂಡಿರುತ್ತದೆ. 
(B) ‘ಇತರ ವ್ಯಕ್ತಿ’ ಗೆ ಸಂಬಂಧಿಸಿದ ಬಹಿರಂಗಪಡಿಸದ ಆದಾಯವು, ನಿರ್ದಿಷ್ಟ ತೆರಿಗೆ ವರ್ಷಕ್ಕೆ ಹಿಂದಿನ ಐದು ತೆರಿಗೆ ವರ್ಷಗಳಲ್ಲಿ ಯಾವುದಾದರೂ ಒಂದು ತೆರಿಗೆ ವರ್ಷಕ್ಕೆ ಮಾತ್ರ ಸಂಬಂಧಿಸಿದ್ದರೆ, ಸೆಕ್ಷನ್ 301(a)ರ ನಿಬಂಧನೆಗಳಿಗಿಂತ ಹೊರತಾಗಿಯೂ, ಅಂತಹ ‘ಇತರ ವ್ಯಕ್ತಿ’ಗೆ ಸಂಬಂಧಿಸಿದ ಬ್ಲಾಕ್ ಅವಧಿ ಆ ಒಂದೇ ತೆರಿಗೆ ವರ್ಷವನ್ನು ಮಾತ್ರ ಒಳಗೊಂಡಿರುತ್ತದೆ.
(C)ಮೇಲಿನ ಸಂದರ್ಭಗಳಿಗೆ ಒಳಪಡದ ಪ್ರಕರಣಗಳಲ್ಲಿ, ಬ್ಲಾಕ್ ಅವಧಿಯ ಆರಂಭಿಕ ತೆರಿಗೆ ವರ್ಷವು ಶೋಧಕ್ಕೆ ಒಳಪಟ್ಟ ವ್ಯಕ್ತಿ(ನಿರ್ದಿಷ್ಟ ವ್ಯಕ್ತಿ)ಗೆ ಅನ್ವಯಿಸುವ ಆರಂಭಿಕ ತೆರಿಗೆ ವರ್ಷದಂತೆಯೇ ಇರುತ್ತದೆ.

Detailed guides and documentation