ತೆರಿಗೆ ಕ್ರೆಡಿಟ್ ಹೊಂದಾಣಿಕೆಯನ್ನು ವೀಕ್ಷಿಸುವ ಕುರಿತು ಬಳಕೆದಾರರ ಕೈಪಿಡಿ

 

1. ಅವಲೋಕನ


ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆ ಸೇವೆಯು ಇ-ಸಲ್ಲಿಕೆ ಪೋರ್ಟಲ್‌ನಲ್ಲಿರುವ ಎಲ್ಲಾ ನೋಂದಾಯಿತ ಬಳಕೆದಾರರಿಗೆ (ERI ಗಳನ್ನು ಒಳಗೊಂಡಂತೆ) ಲಭ್ಯವಿದೆ. ಈ ಸೇವೆಯ ಮೂಲಕ, ಸಂಬಂಧಿತ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಅನ್ನು ಅಪ್‌ಲೋಡ್ ಮಾಡಿದ ತಕ್ಷಣ, ಯಾವುದೇ ಸಂಖ್ಯೆಯ ದಾಖಲೆಗಳಿಗೆ ನಿಮ್ಮ ಇ-ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್‌ಗಳ ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆಯನ್ನು ವೀಕ್ಷಿಸಬಹುದು.

ಈ ಸೇವೆಯು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ನೀವು ವರದಿ ಮಾಡಿದ ಮೂಲದಲ್ಲಿ ಕಡಿತಗೊಳಿಸಿದ ತೆರಿಗೆ (TDS), ಮೂಲದಲ್ಲಿ ಸಂಗ್ರಹಿಸಿದ ತೆರಿಗೆ (TCS), ಮುಂಗಡ ತೆರಿಗೆ ಅಥವಾ ನಿಯಮಿತ ಮೌಲ್ಯಮಾಪನ ತೆರಿಗೆ ಮೊತ್ತಗಳಲ್ಲಿ ಇರುವ ಯಾವುದೇ ಹೊಂದಾಣಿಕೆ ಕೊರತೆಯನ್ನು ತೋರಿಸುತ್ತದೆ. ಹೊಂದಾಣಿಕೆ ಕೊರತೆ ಕಂಡುಬಂದಲ್ಲಿ, ನೀವು ನಿಮ್ಮ ಮಟ್ಟದಲ್ಲಿ ದೋಷಗಳನ್ನು ಸರಿಪಡಿಸಬಹುದು ಅಥವಾ TDS ರಿಟರ್ನ್‌ಗಳು/ಫಾರ್ಮ್‌ಗಳಲ್ಲಿ (24Q, 26Q, 27Q, 27EQ ಮುಂತಾದವು) ತಿದ್ದುಪಡಿ ಮಾಡುವ ಮೂಲಕ ತೆರಿಗೆ ಕಡಿತದಾರರ ಕಡೆಯಿಂದ ಅವುಗಳನ್ನು ಸರಿಪಡಿಸಬಹುದು (ತಿದ್ದುಪಡಿಯ ವಿನಂತಿಯನ್ನು ಸಲ್ಲಿಸುವ ಮೂಲಕ ಅಥವಾ ಪರಿಷ್ಕೃತ ರಿಟರ್ನ್ ಸಲ್ಲಿಸುವ ಮೂಲಕ).

2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು

  • ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಮಾನ್ಯತೆ ಹೊಂದಿದ ಬಳಕೆದಾರರ ID ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿತ ಬಳಕೆದಾರರು
  • ಮಾನ್ಯವಾದ ಮತ್ತು ಸಕ್ರಿಯವಾದ PAN
  • ಆ ವರ್ಷದ ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆಯನ್ನು ಪರಿಶೀಲಿಸಲು ಸಂಬಂಧಿತ ಮೌಲ್ಯಮಾಪನ ವರ್ಷಕ್ಕೆ (AY) ಕನಿಷ್ಠ ಒಂದು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿರಬೇಕು.
  • ಇ-ಸಲ್ಲಿಕೆ ಪೋರ್ಟಲ್‌ನಲ್ಲಿನ ಫಾರ್ಮ್ 26AS ನಲ್ಲಿ TDS ಮತ್ತು/ಅಥವಾ TCS ಮತ್ತು/ಅಥವಾ ಪಾವತಿಸಿದ ಆದಾಯ ತೆರಿಗೆ ಪ್ರತಿಫಲಿಸಬೇಕು.
  • ERI ಗಳಿಗಾಗಿ: ERI ಗಳನ್ನು ಸೇರಿಸಿರಬೇಕು ಮತ್ತು ERI ಯು ತೆರಿಗೆದಾರರನ್ನು ಗ್ರಾಹಕರಾಗಿ ಸೇರಿಸಿರಬೇಕು.
  • ERI ಗಳಿಗಾಗಿ: ERI ಯ ಸ್ಥಿತಿಯು ಸಕ್ರಿಯವಾಗಿರಬೇಕು.

3. ಹಂತ-ಹಂತದ ಮಾರ್ಗದರ್ಶಿ


3.1. ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆಯನ್ನು ವೀಕ್ಷಿಸಿ

ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ.

Data responsive


ಹಂತ 2: ನಿಮ್ಮ ಡ್ಯಾಶ್‌ಬೋರ್ಡ್ ನಲ್ಲಿ, ಸೇವೆಗಳು > ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆ ಮೇಲೆ ಕ್ಲಿಕ್ ಮಾಡಿ.

Data responsive


ಹಂತ 3: ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆ ಪುಟದಲ್ಲಿ,ಮೌಲ್ಯಮಾಪನ ವರ್ಷ(ಯಾವ ವರ್ಷಕ್ಕೆ ನೀವು ಹೊಂದಾಣಿಕೆ ಕೊರತೆಯ ವಿವರಗಳನ್ನು ನೋಡಲು ಬಯಸುತ್ತೀರೋ ಅದನ್ನು) ಆಯ್ಕೆ ಮಾಡಿ ಮತ್ತು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.

Data responsive


ಸೂಚನೆ: PAN ಆಯ್ಕೆಯ ಅಡಿಯಲ್ಲಿ ನಿಮ್ಮ PAN ಪೂರ್ವಭರಿತವಾಗಿರುತ್ತದೆ.

ಹಂತ 4: ಆದಾಯ ತೆರಿಗೆ ರಿಟರ್ನ್‌ನಲ್ಲಿ ನೀವು ಒದಗಿಸಿದ ಮತ್ತು ಫಾರ್ಮ್ 26AS ನಲ್ಲಿ ಪ್ರತಿಫಲಿಸುವ TDS ಮತ್ತು/ಅಥವಾ TCS ಮತ್ತು/ಅಥವಾ ಪಾವತಿಸಿದ ಆದಾಯ ತೆರಿಗೆ ವಿವರಗಳ ನಡುವಿನ ಹೊಂದಾಣಿಕೆ ಕೊರತೆಯನ್ನು ಪ್ರದರ್ಶಿಸಲಾಗುತ್ತದೆ.

Data responsive


ಸೂಚನೆ:

  • ಹೊಂದಾಣಿಕೆ ಕೊರತೆಯ 10 ಕ್ಕಿಂತ ಹೆಚ್ಚು ದಾಖಲೆಗಳಿದ್ದರೆ, ಅದನ್ನು (PDF / XLS ಸ್ವರೂಪದಲ್ಲಿ) ಡೌನ್‌ಲೋಡ್ ಮಾಡಲು ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿ .
  • ಹೊಂದಾಣಿಕೆ ಕೊರತೆಯ 10 ಅಥವಾ ಅದಕ್ಕಿಂತ ಕಡಿಮೆ ದಾಖಲೆಗಳಿದ್ದರೆ, ನೀವು ಅವುಗಳನ್ನು ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆ ಪುಟದಲ್ಲಿ ವೀಕ್ಷಿಸಬಹುದು. ನೀವು ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡುವ ಮೂಲಕ ಅವುಗಳನ್ನು (PDF / XLS ಸ್ವರೂಪದಲ್ಲಿ) ಡೌನ್‌ಲೋಡ್ ಮಾಡಬಹುದು.

Data responsive


3.2. (ERI ಗಳಿಗಾಗಿ) ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆಯನ್ನು ನೋಡಿ

ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ.

Data responsive


ಹಂತ 2: ನಿಮ್ಮ ಡ್ಯಾಶ್‌ಬೋರ್ಡ್ ನಲ್ಲಿ, ಸೇವೆಗಳು > ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆ ಮೇಲೆ ಕ್ಲಿಕ್ ಮಾಡಿ.

Data responsive


ಹಂತ 3: ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆ ಪುಟದಲ್ಲಿ, PAN (ಯಾರ ವಿವರಗಳನ್ನು ನೀವು ಪರಿಶೀಲಿಸಲು ಬಯಸುತ್ತೀರೋ ಅದನ್ನು) ನಮೂದಿಸಿ, ಮೌಲ್ಯಮಾಪನ ವರ್ಷ(ನೀವು ಹೊಂದಾಣಿಕೆ ಕೊರತೆಯ ವಿವರಗಳನ್ನು ವೀಕ್ಷಿಸಲು ಬಯಸುವ) ಆಯ್ಕೆ ಮಾಡಿ ಮತ್ತು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.

Data responsive


ಹಂತ 4: ಆಯ್ಕೆಮಾಡಿದ PAN ಗಾಗಿ ಸಲ್ಲಿಸಿದ ITR ನಲ್ಲಿ ಒದಗಿಸಿದ TDS ಮತ್ತು/ಅಥವಾ TCS ಮತ್ತು/ಅಥವಾ ಪಾವತಿಸಿದ ಆದಾಯ ತೆರಿಗೆ (TDS / TCS ಹೊರತುಪಡಿಸಿ) ವಿವರಗಳು ಮತ್ತು ಫಾರ್ಮ್ 26AS ನಲ್ಲಿ ಪ್ರತಿಫಲಿಸುವ ವಿವರಗಳ ನಡುವಿನ ಹೊಂದಾಣಿಕೆ ಕೊರತೆಯನ್ನು ಪ್ರದರ್ಶಿಸಲಾಗುತ್ತದೆ.

Data responsive

ಸೂಚನೆ:

  • ಹೊಂದಾಣಿಕೆ ಕೊರತೆಯ 10 ಕ್ಕಿಂತ ಹೆಚ್ಚು ದಾಖಲೆಗಳಿದ್ದರೆ, ಅದನ್ನು (PDF/XLS ಸ್ವರೂಪದಲ್ಲಿ) ಡೌನ್‌ಲೋಡ್ ಮಾಡಲು ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿ .
  • ಹೊಂದಾಣಿಕೆ ಕೊರತೆಯ 10 ಅಥವಾ ಅದಕ್ಕಿಂತ ಕಡಿಮೆ ದಾಖಲೆಗಳಿದ್ದರೆ, ನೀವು ಅವುಗಳನ್ನು ತೆರಿಗೆ ಕ್ರೆಡಿಟ್ ಹೊಂದಾಣಿಕೆ ಕೊರತೆ ಪುಟದಲ್ಲಿ ವೀಕ್ಷಿಸಬಹುದು. ನೀವು ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡುವ ಮೂಲಕ ಅವುಗಳನ್ನು (PDF / XLS ಸ್ವರೂಪದಲ್ಲಿ) ಡೌನ್‌ಲೋಡ್ ಮಾಡಬಹುದು.

Data responsive


4. ಸಂಬಂಧಿತ ವಿಷಯಗಳು