1. ನಾನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಒಬ್ಬ ನೋಂದಾಯಿತ ಟ್ಯಾಕ್ಸ್ ಪ್ರೊಫೆಷನಲ್ -ತೆರಿಗೆ ವೃತ್ತಿಪರನಾಗಿದ್ದೇನೆ (CA) ನನ್ನ ಗ್ರಾಹಕರ ಬಗೆಗಿನ ಅರ್ಜಿ ಸಲ್ಲಿಸಲು ಬಾಕಿ ಇರುವ ಮತ್ತು ಪರಿಶೀಲನೆಗಾಗಿ ಬಾಕಿ ಇರುವ ಫಾರ್ಮ್‌ಗಳ ಕುರಿತಾದ, ಪ್ರಮುಖ ಪರಿಷ್ಕರಣೆಗಳನ್ನು ಎಲ್ಲಿ ಹುಡುಕಬಹುದು?
ನೀವು ಅಂತಹ ವಿವರಗಳನ್ನು ನಿಮ್ಮ ಇ-ಫೈಲಿಂಗ್ ಖಾತೆಗೆ ಲಾಗ್ ಇನ್ ಆಗುವ ಮೂಲಕ ಮತ್ತು ನಿಮ್ಮ ಇ-ಫೈಲಿಂಗ್ ಡ್ಯಾಶ್‌ಬೋರ್ಡ್‌%3sಡ್ಯಾಶ್‌ಬೋರ್ಡ್‌%4sನಲ್ಲಿ ಬಾಕಿ ಇರುವ ಕ್ರಿಯೆಗಳನ್ನು ಆಯ್ಕೆಮಾಡುವ ಮೂಲಕ ಹುಡುಕಬಹುದು. ತೆರಿಗೆದಾರರ ಹೆಸರುಗಳು ಮತ್ತು PANಗಳನ್ನು ಪಟ್ಟಿ ಮಾಡಲಾಗಿದೆ. ಇದರ ಜೊತೆಗೆ ಅವರ ಅಹವಾಲು ಪತ್ರಗಳ ಪಟ್ಟಿಯ ಪ್ರಸ್ತುತ ಸ್ಥಿತಿ, ಸಲ್ಲಿಸಲು ಬಾಕಿ ಉಳಿದಿರುವ ಪರಿಶೀಲನೆಗಾಗಿ ಬಾಕಿ ಉಳಿದಿರುವ ಪಟ್ಟಿಯನ್ನು ಮಾಡಲಾಗಿದೆ. ತೆರಿಗೆದಾರರ ಹೆಸರು ಅಥವಾ ಬಾಕಿ ಉಳಿದಿರುವ ಐಟಂ ಮೇಲೆ ಕ್ಲಿಕ್ ಮಾಡುವ ಮೂಲಕ, ನಿಮ್ಮನ್ನು ಮುಂದಿನ ಕಾರ್ಯ ನಿರ್ವಹಿಸಲು ತೆರಿಗೆ ತೆರಿಗೆದಾರರ ವರ್ಕ್ ಲಿಸ್ಟ್ - ಕಾರ್ಯಪಟ್ಟಿಯ ಎಲ್ಲಾ ವೀಕ್ಷಿಸಿ ಪೇಜ್‍ಗೆ ಕರೆದೊಯ್ಯಲಾಗುತ್ತದೆ.

2. ಫೈಲಿಂಗ್ ವಿಧವನ್ನು ಪರಿಷ್ಕರಿಸಿದ ಪಕ್ಷದಲ್ಲಿ, ವರ್ಕ್ ಲಿಸ್ಟ್ - ಕಾರ್ಯಪಟ್ಟಿಯ ಫೈಲಿಂಗ್ ಮಾಡಲು ಬಾಕಿ ಇರುವ ಸೆಕ್ಷನಿನ್ನಲ್ಲಿ, ಫೈಲ್ ಫಾರ್ಮ್ ಅನ್ನು ಕ್ಲಿಕ್ ಮಾಡಿದಾಗ ಏನಾಗುತ್ತದೆ?
ಫೈಲಿಂಗ್ ವಿಧವನ್ನು ಪರಿಷ್ಕರಿಸಿದ ಪಕ್ಷದಲ್ಲಿ, ಫೈಲ್ ಫಾರ್ಮ್ ಕ್ಲಿಕ್ ಮಾಡಿದರೆ ನೀವು ಈ ಕೆಳಗಿನ ಕಾರಣಗಳನ್ನು ಆಯ್ಕೆ ಮಾಡಬೇಕಾಗುತ್ತದೆ (ಅನ್ವಯವಾಗುವಂತೆ):

  • ಕಂಪನಿಯ ಖಾತೆಗಳ ಪರಿಷ್ಕರಣೆ
  • ಕಾನೂನಿನ ಬದಲಾವಣೆ ಉದಾ., ಪೂರ್ವಾವಲೋಕನ ತಿದ್ದುಪಡಿ
  • ವ್ಯಾಖ್ಯಾನದಲ್ಲಿ ಬದಲಾವಣೆ, ಉದಾ., CBDTಯ ಸುತ್ತೋಲೆ
  • ಇತರೆ (ನಿರ್ದಿಷ್ಟಪಡಿಸಿ)

ಕಾರಣ(ಗಳನ್ನು) ನಿರ್ದಿಷ್ಟಪಡಿಸಿದ ನಂತರ, ನೀವು ಫಾರ್ಮ್ ಅನ್ನು ಫೈಲ್ ಮಾಡುವ ಪೇಜ್‌ಗೆ ಹೋಗಬಹುದು. ನೀವು ಫೈಲ್ ಮಾಡಲು ಆನ್‌ಲೈನ್ ವಿಧಾನವನ್ನು ಆಯ್ಕೆ ಮಾಡಿದರೆ, ಈ ಯಾವುದೇ ಎರಡು ಆಯ್ಕೆಗಳನ್ನು ಬಳಸಿಕೊಂಡು ನೀವು ಮುಂದುವರಿಯಬಹುದು:

  • ಹೊಸ ಫಾರ್ಮ್ ಅನ್ನು ಫೈಲ್ ಮಾಡಿ
  • ಹಿಂದೆ ಸಲ್ಲಿಸಿದ ಫಾರ್ಮ್ ಅನ್ನು ತಿದ್ಧಿ/ಪರಿಷ್ಕರಿಸಿ

3. ಮೂಲ ಫೈಲಿಂಗ್ ವಿಧವಿರುವ ಕಾರ್ಯಪಟ್ಟಿಯಲ್ಲಿನ ಫೈಲಿಂಗ್‌ಗೆ ಬಾಕಿ ಇದೆ ವಿಭಾಗದಲ್ಲಿ, ಫಾರ್ಮ್ ಫೈಲ್ ಮಾಡಿ ಕ್ಲಿಕ್ ಮಾಡಿದಾಗ ಏನಾಗುತ್ತದೆ?
ಮೂಲ ಫೈಲಿಂಗ್ ವಿಧವಿರುವ ವರ್ಕ್ ಲಿಸ್ಟ್ ಆಗಿದ್ಧರೆ, ಫೈಲ್ ಫಾರ್ಮ್ ಅನ್ನು ನೀವು ಕ್ಲಿಕ್ ಮಾಡಿದಾಗ, ನಿಮ್ಮನ್ನು ನೇರವಾಗಿ ಫಾರ್ಮ್ ಅನ್ನು ಫೈಲ್ ಮಾಡಬಹುದಾದ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಆನ್‌ಲೈನ್ ವಿಧಾನದಲ್ಲಿ, ನೀವು ಫಾರ್ಮ್ ಅನ್ನು ಭರ್ತಿ ಮಾಡಬಹುದು, ಉಳಿಸಬಹುದು, ಡೌನ್ಲೋಡ್ ಮಾಡಬಹುದು ಹಾಗೂ ಪ್ರಿವ್ಯು ನೋಡಬಹುದು ಮತ್ತು ಫೈಲ್ ಮಾಡಬಹುದು.

ನೀವು ಆಫ್‌ಲೈನ್ ಮೋಡ್ ಅನ್ನು ಆರಿಸಿದರೆ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ನೀವು ಆಯಾ ಫಾರ್ಮ್‌ಗಾಗಿ ಉಪಯುಕ್ತತೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು, ಮೊದಲೇ ಭರ್ತಿ ಮಾಡಿದ XML / JSON ಅನ್ನು ಡೌನ್‌ಲೋಡ್ ಮಾಡಿ, ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಫೈಲ್ ಮಾಡಲು, XML / JSON ಅನ್ನು ರಚಿಸಬೇಕು (ಒಂದೇ ಲಗತ್ತಿನ ಗರಿಷ್ಠ ಗಾತ್ರ 5MB ಆಗಿರಬೇಕು).