1. ನಾನು ಚಲನ್ ಅನ್ನು ಏಕೆ ರಚಿಸಬೇಕು?
ಇ-ಫೈಲಿಂಗ್ ಪೋರ್ಟಲ್ ಮೂಲಕ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ಯಾವುದೇ ಆದಾಯ ತೆರಿಗೆ ಪಾವತಿ ಮಾಡಲು, ನೀವು ಅದಕ್ಕಾಗಿ ಚಲನ್ ಅನ್ನು ರಚಿಸಬೇಕಾಗುತ್ತದೆ.
2. ಚಲನ್ ಅನ್ನು ಯಾರು ರಚಿಸಬಹುದು?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಅಥವಾ ನೋಂದಾಯಿಸದ ಬಳಕೆದಾರರು (ಕಾರ್ಪೊರೇಟ್ / ಕಾರ್ಪೊರೇಟೇತರ ಬಳಕೆದಾರರು, ERI ಗಳು ಮತ್ತು ಪ್ರತಿನಿಧಿ ತೆರಿಗೆದಾರರು) ಚಲನ್ ಅನ್ನು ರಚಿಸಬಹುದು.
3. ನಾನು ಯಾವ ರೀತಿಯ ಕಾರ್ಪೊರೇಟ್ ತೆರಿಗೆ ಪಾವತಿಗಳನ್ನು ಮಾಡಬಹುದು?
ಕಾರ್ಪೊರೇಟ್ ತೆರಿಗೆ ಆಯ್ಕೆಗಳ ಅಡಿಯಲ್ಲಿ ನೀವು ಈ ಕೆಳಗಿನವುಗಳನ್ನು ಪಾವತಿಸಬಹುದು:
- ಮುಂಗಡ ತೆರಿಗೆ
- ಸ್ವಯಂ-ಮೌಲ್ಯಮಾಪನ ತೆರಿಗೆ
- ನಿಯಮಿತ ತೆರಿಗೆ ಮೌಲ್ಯಮಾಪನದ ಮೇಲಿನ ತೆರಿಗೆ
- ಕಂಪನಿಗಳ ವಿತರಣಾ ಲಾಭದ ಮೇಲಿನ ತೆರಿಗೆ
- ಯುನಿಟ್ ಹೊಂದಿರುವವರಿಗೆ ವಿತರಿಸಿದ ಆದಾಯದ ಮೇಲಿನ ತೆರಿಗೆ.
- ಹೆಚ್ಚುವರಿ ತೆರಿಗೆ
- ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 92CE ಅಡಿಯಲ್ಲಿ ದ್ವಿತೀಯ ಹೊಂದಾಣಿಕೆ ತೆರಿಗೆ
- ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 115TD ಅಡಿಯಲ್ಲಿ ಸಂಚಿತ ತೆರಿಗೆ
4. ನಾನು ಯಾವ ರೀತಿಯ ಆದಾಯ ತೆರಿಗೆ ಪಾವತಿಗಳನ್ನು ಮಾಡಬಹುದು?
ಕಾರ್ಪೊರೇಟ್ ತೆರಿಗೆ ಆಯ್ಕೆಗಳ ಅಡಿಯಲ್ಲಿ ನೀವು ಈ ಕೆಳಗಿನವುಗಳನ್ನು ಪಾವತಿಸಬಹುದು:
- ಮುಂಗಡ ತೆರಿಗೆ
- ಸ್ವಯಂ-ಮೌಲ್ಯಮಾಪನ ತೆರಿಗೆ
- ನಿಯಮಿತ ತೆರಿಗೆ ಮೌಲ್ಯಮಾಪನದ ಮೇಲಿನ ತೆರಿಗೆ
- ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 92CE ಅಡಿಯಲ್ಲಿ ದ್ವಿತೀಯ ಹೊಂದಾಣಿಕೆ ತೆರಿಗೆ
- ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 115TD ಅಡಿಯಲ್ಲಿ ಸಂಚಿತ ತೆರಿಗೆ.
5. ನಾನು ಯಾವ ಶುಲ್ಕಗಳು ಅಥವಾ ಇತರೆ ತೆರಿಗೆ ಪಾವತಿಗಳನ್ನು ಮಾಡಬಹುದು?
ಶುಲ್ಕ / ಇತರ ಪಾವತಿಗಳ ಅಡಿಯಲ್ಲಿ ನೀವು ಈ ಕೆಳಗಿನವುಗಳನ್ನು ಪಾವತಿಸಬಹುದು:
- ಸಂಪತ್ತು ತೆರಿಗೆ
- ಫ್ರಿಂಜ್ ಲಾಭ ತೆರಿಗೆ
- ಬ್ಯಾಂಕಿಂಗ್ ನಗದು ವಹಿವಾಟು ತೆರಿಗೆ
- ಬಡ್ಡಿ ತೆರಿಗೆ
- ಹೋಟೆಲ್ ರಶೀದಿಗಳ ತೆರಿಗೆ
- ಉಡುಗೊರೆ ತೆರಿಗೆ
- ಆಸ್ತಿ ತೆರಿಗೆ
- ವೆಚ್ಚ / ಇತರೆ ತೆರಿಗೆ
- ಮೇಲ್ಮನವಿ ಶುಲ್ಕ
- ಇತರೆ ಯಾವುದೇ ಶುಲ್ಕ
6. ಚಲನ್ ಫಾರ್ಮ್ ಅನ್ನು ರಚಿಸಿದ ನಂತರ ನಾನು ತೆರಿಗೆ ಪಾವತಿಸುವುದು ಹೇಗೆ?
ನೀವು ಈ ಕೆಳಗಿನವುಗಳ ಮೂಲಕ ಪಾವತಿಸಬಹುದು:
- ನೆಟ್ ಬ್ಯಾಂಕಿಂಗ್; ಅಥವಾ
- ಡೆಬಿಟ್ ಕಾರ್ಡ್; ಅಥವಾ
- ಪಾವತಿ ಗೇಟ್‌ವೇ ಮೂಲಕ (ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಅಧಿಕೃತವಲ್ಲದ ಬ್ಯಾಂಕ್‌ಗಳ ನೆಟ್ ಬ್ಯಾಂಕಿಂಗ್ ಅಥವಾ UPI ಬಳಸಿ); ಅಥವಾ
- ನಿಮ್ಮ ಬ್ಯಾಂಕಿನ ಕೌಂಟರ್‌ನಲ್ಲಿ; ಅಥವಾ
- RTGS / NEFT
7. ಆಣತಿ ಫಾರ್ಮ್ ಎಂದರೇನು? ಅದು ಯಾವಾಗ ಬೇಕಾಗುತ್ತದೆ?
ನೀವು ತೆರಿಗೆ ಪಾವತಿ ವಿಧಾನವನ್ನು RTGS / NEFT ಆಗಿ ಆಯ್ಕೆ ಮಾಡಿದಾಗ ಆಣತಿ ಫಾರ್ಮ್ ಅನ್ನು ರಚಿಸಲಾಗುತ್ತದೆ. ನಿಮ್ಮ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಅನ್ನು ಬಳಸಬಹುದು ಅಥವಾ ಚಲನ್ ರಚಿಸಿದ ನಂತರ ಆಣತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು ಹಾಗೂ ಪಾವತಿಸಲು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು.
8. ಚಲನ್ ರಚಿಸಿದ ನಂತರ ನಾನು ತಕ್ಷಣ ಪಾವತಿಸದಿದ್ದರೆ, ಅದರ ಅವಧಿ ಮುಕ್ತಾಯಗೊಳ್ಳುತ್ತದೆಯೇ?
ಹೌದು, ನೀವು ಚಲನ್ ರಚನೆಯಿಂದ 15 ದಿನಗಳಲ್ಲಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ (ಅಂದರೆ CRN ರಚನೆಯ ದಿನಾಂಕದಿಂದ 15 ದಿನಗಳು). ಮುಂಗಡ ತೆರಿಗೆಯ ಸಂದರ್ಭದಲ್ಲಿ, CRN ರಚನೆಯ ದಿನಾಂಕದಿಂದ 15 ದಿನಗಳಲ್ಲಿ ಅಥವಾ ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ 31 ರಂದು ನೀವು ತೆರಿಗೆ ಪಾವತಿ ಮಾಡಬೇಕಾಗುತ್ತದೆ, ಯಾವುದು ಮುಂಚೆ ಬರುವುದೋ ಅಂದು.
9. ನಾನು ನನ್ನ ಚಲನ್ ವಿವರಗಳನ್ನು ಎಲ್ಲಿ ವೀಕ್ಷಿಸಬಹುದು? ನಾನು ನನ್ನ ಅವಧಿ ಮೀರಿದ ಚಲನ್‌ಗಳನ್ನು ವೀಕ್ಷಿಸಬಹುದೇ?
ರಚಿಸಲಾದ ಚಲನ್‌ಗಳು ಟ್ಯಾಬ್ ಅಡಿಯಲ್ಲಿ ಇ-ಪಾವತಿ ತೆರಿಗೆ ಪೇಜ್‌ನಲ್ಲಿ ನಿಮ್ಮ ರಚನೆಯಾದ ಚಲನ್‌ಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ.ನಿಮ್ಮ ಅವಧಿ ಮೀರಿದ ಚಲನ್‌ಗಳು ಇ-ಪಾವತಿ ತೆರಿಗೆ ಪೇಜ್‌ನಲ್ಲಿ ರಚಿಸಿದ ಚಲನ್‌ಗಳು ಟ್ಯಾಬ್‌ನ ಅಡಿಯಲ್ಲಿ ಮಾನ್ಯವಾದ ದಿನಾಂಕದಿಂದ ಒಂದು ತಿಂಗಳವರೆಗೆ ಲಭ್ಯವಿರುತ್ತವೆ (ನಿಮ್ಮ ಚಲನ್‌ನಲ್ಲಿ ಲಭ್ಯವಿದೆ).