|
ಮೌಲ್ಯಮಾಪನ ವರ್ಷ 2026-27ಕ್ಕೆ ಹಿರಿಯ ನಾಗರಿಕರು ಮತ್ತು ಅತಿ ಹಿರಿಯ ನಾಗರಿಕರಿಗೆ ಅನ್ವಯಿಸುವ ರಿಟರ್ನ್‌ಗಳು ಮತ್ತು ಫಾರ್ಮ್‌ಗಳು |
|---|
|
ಘೋಷಣೆ: ಈ ಪುಟದಲ್ಲಿರುವ ವಿಷಯವು ಕೇವಲ ಸಾಮಾನ್ಯ ತಿಳುವಳಿಕೆ ಮತ್ತು ಮಾರ್ಗದರ್ಶನ ನೀಡುವ ಉದ್ದೇಶಕ್ಕಾಗಿ ಮಾತ್ರವಾಗಿದ್ದು, ಸಮಗ್ರ ಮಾಹಿತಿಯನ್ನು ಒಳಗೊಂಡಿಲ್ಲ.
ಸಂಪೂರ್ಣ ವಿವರಗಳು ಮತ್ತು ಮಾರ್ಗಸೂಚಿಗಳಿಗಾಗಿ ದಯವಿಟ್ಟು ಆದಾಯ ತೆರಿಗೆ ಕಾಯಿದೆ, 1961 ರ ಫಾರ್ಮ್‌ಗಳು, ನಿಯಮಗಳು ಮತ್ತು ಅಧಿಸೂಚನೆಗಳನ್ನು ನೋಡಿ.
"ಹಿಂದಿನ ವರ್ಷದ ಯಾವುದೇ ಸಮಯದಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸು ಹೊಂದಿದ್ದು, ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸು ಹೊಂದಿರುವ ನಿವಾಸಿ ವ್ಯಕ್ತಿಯನ್ನು ಆದಾಯ ತೆರಿಗೆ ಉದ್ದೇಶಗಳಿಗೆ ಹಿರಿಯ ನಾಗರಿಕ (Senior Citizen) ಎಂದು ಪರಿಗಣಿಸಲಾಗುತ್ತದೆ. ಹಿಂದಿನ ವರ್ಷದ ಯಾವುದೇ ಸಮಯದಲ್ಲಿ 80 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸು ಹೊಂದಿರುವ ನಿವಾಸಿ ವ್ಯಕ್ತಿಯನ್ನು ಅತಿ ಹಿರಿಯ ನಾಗರಿಕ (Super Senior Citizen) ಎಂದು ಪರಿಗಣಿಸಲಾಗುತ್ತದೆ." |
ಈ ರಿಟರ್ನ್ ಈ ಕೆಳಗಿನ ಯಾವುದೇ ಮೂಲಗಳಿಂದ ₹ 50 ಲಕ್ಷದವರೆಗಿನ ಒಟ್ಟು ಆದಾಯವನ್ನು ಹೊಂದಿರುವ ದೇಶವಾಸಿ (NOR-"ಸಾಮಾನ್ಯವಾಗಿ ನಿವಾಸಿಯಲ್ಲ" ವರ್ಗಕ್ಕೆ ಸೇರದ) ವ್ಯಕ್ತಿಗೆ ಅನ್ವಯಿಸುತ್ತದೆ.
|
ಸಂಬಳ / ಪಿಂಚಣಿ |
ಒಂದು ಗೃಹ ಆಸ್ತಿ |
ಇತರ ಮೂಲಗಳು (ಬಡ್ಡಿ, ಕುಟುಂಬ ಪಿಂಚಣಿ, ಲಾಭಾಂಶ ಇತ್ಯಾದಿ.) |
₹ 5,000 ವರೆಗಿನ ಕೃಷಿ ಆದಾಯ |
112A ಸೆಕ್ಷನ್ ಅಡಿಯಲ್ಲಿ ರೂ. 125000 ವರೆಗೆ ಬಂಡವಾಳ ಲಾಭಗಳು |
|
|
ಸೂಚನೆ: ಕೆಳಗಿನವರಿಂದ ITR-1 ಅನ್ನು ಬಳಸಲಾಗುವುದಿಲ್ಲ: (a) ಕಂಪನಿಯೊಂದರಲ್ಲಿ ನಿರ್ದೇಶಕರಾಗಿದ್ದರೆ (b) ಅಲ್ಪಾವಧಿಯ ಬಂಡವಾಳ ಲಾಭವನ್ನು ಹೊಂದಿದ್ದರೆ (c) ಆದಾಯ ತೆರಿಗೆ ಕಾಯ್ದೆ, 1961 ರ 112A ಸೆಕ್ಷನ್ ಅಡಿಯಲ್ಲಿ ರೂ. 1.25 ಲಕ್ಷ ಮೀರಿದ ಬಂಡವಾಳ ಲಾಭಗಳ ಹೊಂದಿದ್ದರೆ. (d) ಕಳೆದ ವರ್ಷದಲ್ಲಿ ಯಾವುದೇ ಸಮಯದಲ್ಲಿ ಪಟ್ಟಿಮಾಡದ ಇಕ್ವಿಟಿ ಷೇರುಗಳನ್ನು ಹೊಂದಿದ್ದರೆ (e) ಭಾರತದ ಹೊರಗೆ ಆಸ್ತಿಯನ್ನು (ಯಾವುದೇ ಘಟಕದಲ್ಲಿ ಹಣಕಾಸಿನ ಆಸಕ್ತಿ ಸೇರಿದಂತೆ) ಹೊಂದಿದ್ದರೆ (f) ಭಾರತದ ಹೊರಗಿರುವ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿದ್ದರೆ (g) ಭಾರತದ ಹೊರಗಿನ ಯಾವುದೇ ಮೂಲದಿಂದ ಆದಾಯವಿದ್ದರೆ (h) ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ ಅಡಿಯಲ್ಲಿ ಸೆಕ್ಷನ್ 194N ಅಡಿಯಲ್ಲಿ ತೆರಿಗೆಯನ್ನು ಕಡಿತಗೊಳಪಟ್ಟಿದ್ದ ವ್ಯಕ್ತಿ (i) ESOP ಮೇಲೆ ತೆರಿಗೆಯ ಪಾವತಿ ಅಥವಾ ತೆರಿಗೆ ಕಡಿತವನ್ನು ಮುಂದೂಡಿದ ವ್ಯಕ್ತಿಯಾಗಿದ್ದರೆ (j) ಒಟ್ಟು ಆದಾಯ ರೂ. 50 ಲಕ್ಷ ಮೀರಿದರೆ |
ಈ ರಿಟರ್ನ್ ವ್ಯಕ್ತಿ (Individual) ಹಾಗೂ ಹಿಂದೂ ಅವಿಭಕ್ತ ಕುಟುಂಬಕ್ಕೆ (HUF) ಅನ್ವಯಿಸುತ್ತದೆ.
|
“ವ್ಯವಹಾರ ಅಥವಾ ವೃತ್ತಿಯಿಂದ ಲಾಭ ಅಥವಾ ಆದಾಯ” ಎಂಬ ಶೀರ್ಷಿಕೆಯಡಿಯಲ್ಲಿ ಆದಾಯ ಹೊಂದಿರದವರು. |
ITR-1 ಸಲ್ಲಿಸಲು ಅರ್ಹರಲ್ಲದವರು |
ಈ ರಿಟರ್ನ್ ವ್ಯಕ್ತಿ (Individual) ಹಾಗೂ ಹಿಂದೂ ಅವಿಭಕ್ತ ಕುಟುಂಬಕ್ಕೆ (HUF) ಅನ್ವಯಿಸುತ್ತದೆ.
|
ವ್ಯವಹಾರ ಅಥವಾ ವೃತ್ತಿಯಿಂದ ಲಾಭ ಅಥವಾ ಆದಾಯ ಎಂಬ ಶೀರ್ಷಿಕೆಯಡಿಯಲ್ಲಿ ಆದಾಯ ಹೊಂದಿರುವವರು |
ITR-1, 2 ಅಥವಾ 4 ಸಲ್ಲಿಸಲು ಅರ್ಹರಲ್ಲದವರು |
ಈ ರಿಟರ್ನ್, NOR-"ಸಾಮಾನ್ಯವಾಗಿ ನಿವಾಸಿಯಲ್ಲ" ವರ್ಗಕ್ಕೆ ಸೇರಿರದ ನಿವಾಸಿ ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ (HUF) ಅಥವಾ LLP ವರ್ಗಕ್ಕೆ ಸೇರದ ನಿವಾಸಿ ವ್ಯವಹಾರ ಸಂಸ್ಥೆಗೆ, ಅನ್ವಯಿಸುತ್ತದೆ. ಅಲ್ಲದೇ ಅವರ ಒಟ್ಟು ಆದಾಯ ₹50 ಲಕ್ಷವನ್ನು ಮೀರದಂತಿರಬೇಕು. ಜೊತೆಗೆ, ಅವರ ವ್ಯವಹಾರ ಅಥವಾ ವೃತ್ತಿಯಿಂದಾಗುವ ಆದಾಯವನ್ನು ಅಂದಾಜಿನ ಆಧಾರದ ಲೆಕ್ಕ ಹಾಕಿರಬೇಕು ಹಾಗೂ ಕೆಳಗಿನ ಯಾವುದಾದರೂ ಮೂಲಗಳಿಂದ ಆದಾಯ ಹೊಂದಿರಬೇಕು.
|
ಸಂಬಳ / ಪಿಂಚಣಿ |
ಒಂದು ಗೃಹ ಆಸ್ತಿ |
ಇತರ ಮೂಲಗಳು (ಬಡ್ಡಿ, ಕುಟುಂಬ ಪಿಂಚಣಿ, ಲಾಭಾಂಶ ಇತ್ಯಾದಿ.) |
5,000 ವರೆಗಿನ ಕೃಷಿ ಆದಾಯ |
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 44AD / 44ADA / 44AE ಅಡಿಯಲ್ಲಿ ಅಂದಾಜಿನ ಆಧಾರದ ಮೇಲೆ ಲೆಕ್ಕ ಹಾಕಿದ ವ್ಯವಹಾರ / ವೃತ್ತಿಯಿಂದಾದ ಆದಾಯ. |
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 112A ಅಡಿಯಲ್ಲಿ ₹1,25,000 ವರೆಗೆ ಇರುವ ಬಂಡವಾಳದ ಮೇಲಿನ ಲಾಭ. |
|
|
ಸೂಚನೆ: ಕೆಳಗಿನವರಿಂದ ITR-4 ಅನ್ನು ಬಳಸಲಾಗುವುದಿಲ್ಲ: (a) ಕಂಪನಿಯೊಂದರಲ್ಲಿ ನಿರ್ದೇಶಕರಾಗಿದ್ದರೆ (b) ಅಲ್ಪಾವಧಿಯ ಬಂಡವಾಳ ಲಾಭವನ್ನು ಹೊಂದಿದ್ದರೆ (c) ಆದಾಯ ತೆರಿಗೆ ಕಾಯ್ದೆ, 1961 ರ 112A ಸೆಕ್ಷನ್ ಅಡಿಯಲ್ಲಿ ರೂ. 1.25 ಲಕ್ಷ ಮೀರಿದ ಬಂಡವಾಳ ಲಾಭಗಳ ಹೊಂದಿದ್ದರೆ. (d) ಕಳೆದ ವರ್ಷದಲ್ಲಿ ಯಾವುದೇ ಸಮಯದಲ್ಲಿ ಪಟ್ಟಿಮಾಡದ ಇಕ್ವಿಟಿ ಷೇರುಗಳನ್ನು ಹೊಂದಿದ್ದರೆ (e) ಭಾರತದ ಹೊರಗೆ ಆಸ್ತಿಯನ್ನು (ಯಾವುದೇ ಘಟಕದಲ್ಲಿ ಹಣಕಾಸಿನ ಆಸಕ್ತಿ ಸೇರಿದಂತೆ) ಹೊಂದಿದ್ದರೆ (f) ಭಾರತದ ಹೊರಗಿರುವ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿದ್ದರೆ (g) ಭಾರತದ ಹೊರಗಿನ ಯಾವುದೇ ಮೂಲದಿಂದ ಆದಾಯವಿದ್ದರೆ (h) ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 194N ಅಡಿಯಲ್ಲಿ ತೆರಿಗೆ ಕಡಿತ (TDS) ಮಾಡಲ್ಪಟ್ಟಿರುವ ವ್ಯಕ್ತಿ. (i) ESOP ಮೇಲೆ ತೆರಿಗೆಯ ಪಾವತಿ ಅಥವಾ ತೆರಿಗೆ ಕಡಿತವನ್ನು ಮುಂದೂಡಿದ ವ್ಯಕ್ತಿಯಾಗಿದ್ದರೆ (j) ಒಟ್ಟು ಆದಾಯ ರೂ. 50 ಲಕ್ಷ ಮೀರಿದರೆ
ಸೂಚನೆ: 2 ITR-4 (ಸುಗಮ್) ಕಡ್ಡಾಯವಲ್ಲ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 44AD, 44ADA ಅಥವಾ 44AE ಅಡಿಯಲ್ಲಿ ಅಂದಾಜು ಆಧಾರದ ಮೇಲೆ ವ್ಯವಹಾರ ಮತ್ತು ವೃತ್ತಿಯಿಂದಾದ ಲಾಭ ಹಾಗೂ ಆದಾಯವನ್ನು ಘೋಷಿಸಲು ಅರ್ಹನಾಗಿದ್ದರೆ, ತೆರಿಗೆದಾರನು ತನ್ನ ಇಚ್ಛೆಯಂತೆ ಈ ಸರಳೀಕೃತ ರಿಟರ್ನ್ ಫ಼ಾರ್ಮ್ ಬಳಸಬಹುದು. |
ಸೂಚನೆ:
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 194P ಪ್ರಕಾರ, 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾದ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವುರಿಂದ ಷರತ್ತುಗಳಿಗೆ ಒಳಪಟ್ಟು ವಿನಾಯಿತಿ ನೀಡಲಾಗಿದೆ.
ವಿನಾಯಿತಿ ನೀಡಲು ಇರುವ ಷರತ್ತುಗಳು:
- ಹಿರಿಯ ನಾಗರಿಕರ ವಯಸ್ಸು 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿರಬೇಕು.
- ಹಿರಿಯ ನಾಗರಿಕರು ಹಿಂದಿನ ವರ್ಷದಲ್ಲಿ ‘ನಿವಾಸಿ’(“Resident”)ಗಳಾಗಿರಬೇಕು.
- ಹಿರಿಯ ನಾಗರಿಕರಿಗೆ ಪಿಂಚಣಿ ಆದಾಯ ಮತ್ತು ಬಡ್ಡಿ ಆದಾಯ ಮಾತ್ರವಿರಬೇಕು; ಮತ್ತು ಬಡ್ಡಿ ಆದಾಯವು ಅವರು ಪಿಂಚಣಿ ಪಡೆಯುತ್ತಿರುವ ಅದೇ ನಿರ್ದಿಷ್ಟ ಬ್ಯಾಂಕ್‌ನಿಂದ ಬಂದಿರಬೇಕು.
- ಹಿರಿಯ ನಾಗರಿಕರು ನಿರ್ದಿಷ್ಟ ಬ್ಯಾಂಕ್‌ಗೆ ಒಂದು ಘೋಷಣಾಪತ್ರ ಸಲ್ಲಿಸಬೇಕು.
- ಆ ಬ್ಯಾಂಕ್ ಕೇಂದ್ರ ಸರ್ಕಾರದಿಂದ ಅಧಿಸೂಚಿತ “ನಿರ್ದಿಷ್ಟ ಬ್ಯಾಂಕ್” ಆಗಿರಬೇಕು. ಇಂತಹ ಬ್ಯಾಂಕ್‌ಗಳು ಅಧ್ಯಾಯ VI-A ಅಡಿಯಲ್ಲಿ ಇರುವ ತೆರಿಗೆ ಕಡಿತಗಳು ಹಾಗೂ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 87A ಅಡಿಯಲ್ಲಿ ಇರುವ ರಿಯಾಯಿತಿಯನ್ನು ಪರಿಗಣಿಸಿ ಹಿರಿಯ ನಾಗರಿಕರ TDS ಕಡಿತಕ್ಕೆ ಹೊಣೆಗಾರರಾಗಿರುತ್ತವೆ.
- ಮೇಲೆ ತಿಳಿಸಿದ, ನಿರ್ದಿಷ್ಟಪಡಿಸಿದ ಬ್ಯಾಂಕ್, 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಒಮ್ಮೆ ತೆರಿಗೆಯನ್ನು ಕಡಿತಗೊಳಿಸಿದರೆ, ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್‌ಗಳನ್ನು ಒದಗಿಸುವ ಅಗತ್ಯವಿರುವುದಿಲ್ಲ.
ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ ಅನ್ವಯವಾಗುವ ಫಾರ್ಮ್‌ಗಳು
1. ಫಾರ್ಮ್ 15H - ತೆರಿಗೆ ಕಡಿತವಿಲ್ಲದೆ ಕೆಲವು ಆದಾಯಗಳನ್ನು ಪಡೆಯಲು ಅರ್ಹತೆಯನ್ನು ಕೋರುವ, 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಯು ಸಲ್ಲಿಸಬೇಕಾದ ಘೋಷಣೆ
|
ಸಲ್ಲಿಸಿದವರು |
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು |
|
60 ವರ್ಷ ಅಥವಾ ಮೇಲ್ಪಟ್ಟ ವಯಸ್ಸಿನ ನಿವಾಸಿ ವ್ಯಕ್ತಿ, ಬಡ್ಡಿ ಆದಾಯದ ಮೇಲೆ TDS ಕಡಿತಗೊಳಿಸದಂತೆ ಬ್ಯಾಂಕ್ಗೆ ಸಲ್ಲಿಸುವ ಮನವಿ |
ಹಣಕಾಸು ವರ್ಷಕ್ಕೆ ಅಂದಾಜು ಆದಾಯ |
|
ಒದಗಿಸುವವರು: |
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು |
|
ಉದ್ಯೋಗಿಯಿಂದ ತನ್ನ ಉದ್ಯೋಗದಾತರಿಗೆ |
ಮೂಲದಲ್ಲಿ ತೆರಿಗೆ ಕಡಿತಗೊಳಿಸಬೇಕಾದ ತೆರಿಗೆ (TDS) ಯನ್ನು ಲೆಕ್ಕಾಚಾರ ಮಾಡುವ ಉದ್ದೇಶಕ್ಕಾಗಿ, HRA, LTC, ಎರವಲು ಪಡೆದ ಬಂಡವಾಳದ ಮೇಲಿನ ಬಡ್ಡಿಯ ತೆರಿಗೆ ಕಡಿತ, ತೆರಿಗೆ ಉಳಿತಾಯದ / ತೆರಿಗೆ ಕಡಿತಗಳ ಪುರಾವೆಗಳು ಅಥವಾ ವಿವರಗಳು. |
|
ಒದಗಿಸುವವರು: |
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು |
|
ಉದ್ಯೋಗಿಯಿಂದ ತನ್ನ ಉದ್ಯೋಗದಾತರಿಗೆ |
ವೇತನವಾಗಿ ಪಾವತಿಸಿದ ಮೊತ್ತ, ಪಾವತಿಸಬೇಕಾದ / ಮರುಪಾವತಿಸಬಹುದಾದ ತೆರಿಗೆಯನ್ನು ಲೆಕ್ಕಾಚಾರ ಮಾಡುವ ಉದ್ದೇಶಕ್ಕಾಗಿ ಪಾವತಿಸಿದ ಸಂಬಳ, ತೆರಿಗೆ ಕಡಿತಗಳು / ವಿನಾಯಿತಿಗಳು ಮತ್ತು ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾದ ತೆರಿಗೆ. |
|
ಒದಗಿಸುವವರು: |
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು |
|
ತೆರಿಗೆ ಕಡಿತದಾರರಿಂದ ತೆರಿಗೆ ಕಡಿತದಾರರಿಗೆ |
ಫಾರ್ಮ್ 16A ತ್ರೈಮಾಸಿಕದಲ್ಲಿ ನೀಡಲಾದ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (TDS) ಪ್ರಮಾಣಪತ್ರವಾಗಿದ್ದು, ಇದು TDS, ಪಾವತಿಗಳ ಸ್ವರೂಪ ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿ ಠೇವಣಿ ಮಾಡಿದ TDS ಪಾವತಿಗಳ ಮಾಹಿತಿಯನ್ನು ಹೊಂದಿದೆ. |
|
ಫ಼ಾರ್ಮ್ 26 AS |
AIS (ವಾರ್ಷಿಕ ಮಾಹಿತಿ ಸ್ಟೇಟ್‌ಮೆಂಟ್) |
|
ಒದಗಿಸಿದವರು: ಆದಾಯ ತೆರಿಗೆ ಇಲಾಖೆ (ಇದು ಇ-ಫ಼ೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ:) ಲಾಗಿನ್ > ಇ-ಫೈಲ್ > ಆದಾಯ ತೆರಿಗೆ ರಿಟರ್ನ್ > 26AS ಫಾರ್ಮ ನೋಡಿ ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು: ಮೂಲದಲ್ಲೇ ಕಡಿತಗೊಂಡ/ಸಂಗ್ರಹಿಸಿದ ತೆರಿಗೆ |
ಒದಗಿಸಿದವರು: ಆದಾಯ ತೆರಿಗೆ ಇಲಾಖೆ (ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಇದನ್ನು ಪ್ರವೇಶಿಸಬಹುದು) ಇ-ಫೈಲಿಂಗ್ ಪೋರ್ಟಲ್ > ಲಾಗಿನ್ > AIS ಗೆ ಹೋಗಿ ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು:
ಇತರೆ ಮಾಹಿತಿ (ಉದಾಹರಣೆಗೆ ಬಾಕಿ ಇರುವ/ಪೂರ್ಣಗೊಂಡ ಪ್ರಕರಣಗಳು, GST ಮಾಹಿತಿ, ವಿದೇಶಿ ಸರ್ಕಾರದಿಂದ ಪಡೆದ ಮಾಹಿತಿ ಇತ್ಯಾದಿ) |
|
ಆದಾಯ ತೆರಿಗೆ ರಿಟರ್ನ್‌ನಲ್ಲಿ ಸೆಕ್ಷನ್ 89(1) ಅಡಿಯಲ್ಲಿ ತೆರಿಗೆ ಪರಿಹಾರ ಪಡೆಯಲು ತೆರಿಗೆದಾರರು ಸಲ್ಲಿಸುವುದು |
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು |
|
ಉದ್ಯೋಗಿಯಿಂದ ಆದಾಯ ತೆರಿಗೆ ಇಲಾಖೆಗೆ |
|
|
ಸಲ್ಲಿಸಿದವರು |
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು |
|
ತೆರಿಗೆದಾರ |
ಭಾರತದ ಹೊರಗಿನ ದೇಶ ಅಥವಾ ನಿರ್ದಿಷ್ಟ ಪ್ರದೇಶದಿಂದ ಪಡೆದ ಆದಾಯ ಹಾಗೂ ಪಡೆಯಲಾದ ವಿದೇಶಿ ತೆರಿಗೆ ರಿಯಾಯಿತಿ. |
|
ಸಲ್ಲಿಸಿದವರು |
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು |
|
ಆದಾಯ ತೆರಿಗೆ ಕಾಯಿದೆ, 1961 ರ 44AB ಸೆಕ್ಷನ್ ಅಡಿಯಲ್ಲಿ ಅಕೌಂಟೆಂಟ್ ಮೂಲಕ ತನ್ನ ಖಾತೆಗಳನ್ನು ಆಡಿಟ್ ಮಾಡಿಸಬೇಕಾದ ತೆರಿಗೆದಾರ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139 ರ ಉಪವಿಭಾಗ (1) ಅಡಿಯಲ್ಲಿ ಆದಾಯ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿ ಸಲ್ಲಿಸಬೇಕು. |
ಆದಾಯ ತೆರಿಗೆ ಕಾಯಿದೆ, 1961 ರ 44AB ಸೆಕ್ಷನ್ ಅಡಿಯಲ್ಲಿ ಒದಗಿಸಬೇಕಾದ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯ ವರದಿ ಮತ್ತು ವಿವರಗಳ ಹೇಳಿಕೆ. |
|
ಸಲ್ಲಿಸಿದವರು |
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು |
|
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 92E ಅಡಿಯಲ್ಲಿ, ಅಂತರರಾಷ್ಟ್ರೀಯ ವ್ಯವಹಾರ ಅಥವಾ ನಿರ್ದಿಷ್ಟ ದೇಶೀಯ ವ್ಯವಹಾರ ನಡೆಸುವ ಸಂದರ್ಭದಲ್ಲಿ ಅಕೌಂಟೆಂಟ್‌ರಿಂದ ವರದಿ ಪಡೆಯುವುದು ಕಡ್ಡಾಯವಾಗಿರುವ ತೆರಿಗೆದಾರರು. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139 ರ ಉಪವಿಭಾಗ (1) ಅಡಿಯಲ್ಲಿ ಆದಾಯ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿ ಸಲ್ಲಿಸಬೇಕು. |
ಅಂತರರಾಷ್ಟ್ರೀಯ ವ್ಯವಹಾರಗಳು ಮತ್ತು ನಿರ್ದಿಷ್ಟ ದೇಶೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 92E ಅಡಿಯಲ್ಲಿ ಸಿದ್ಧಪಡಿಸಲಾದ ಲೆಕ್ಕಪರಿಶೋಧನಾ ವರದಿ. |
ಮೌಲ್ಯಮಾಪನ ವರ್ಷ 2026-27*** ತೆರಿಗೆ ಸ್ಲ್ಯಾಬ್‌ಗಳು
- ಹೊಸ ತೆರಿಗೆ ಪದ್ದತಿ ಎದುರು ಹಳೆಯ ತೆರಿಗೆ ಪದ್ಧತಿ:
- ಹಣಕಾಸು ಕಾಯಿದೆ, 2023 ರ ಮೂಲಕ, ಮೌಲ್ಯಮಾಪನ ವರ್ಷ 2024–25 ರಿಂದ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 115BAC ರ ವಿಧಿಗಳನ್ನು ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ, ವೈಯಕ್ತಿಕ ವ್ಯಕ್ತಿ (Individual), ಹಿಂದೂ ಅವಿಭಜಿತ ಕುಟುಂಬ (HUF), ವ್ಯಕ್ತಿಗಳ ಸಂಘ (AOP) (ಸಹಕಾರ ಸಂಘಗಳನ್ನು ಹೊರತುಪಡಿಸಿ), ವ್ಯಕ್ತಿಗಳ ಸಮೂಹ (BOI) ಅಥವಾ ಕೃತಕ ನ್ಯಾಯಿಕ ವ್ಯಕ್ತಿ (Artificial Juridical Person) ಇವರಿಗೆ ಹೊಸ ತೆರಿಗೆ ಪದ್ಧತಿಯನ್ನು ಮೂಲ ತೆರಿಗೆ ಪದ್ಧತಿಯಾಗಿ ಮಾಡಲಾಗಿದೆ. ಆದಾಗ್ಯೂ, ಅರ್ಹ ತೆರಿಗೆದಾರರಿಗೆ ಹೊಸ ತೆರಿಗೆ ಪದ್ಧತಿಯಿಂದ ಹೊರಬಂದು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆಮಾಡುವ ಅವಕಾಶ ಇದೆ. ಹಳೆಯ ತೆರಿಗೆ ಪದ್ಧತಿ ಎಂದರೆ, ಹೊಸ ತೆರಿಗೆ ಪದ್ಧತಿ ಜಾರಿಗೆ ಬರುವ ಮೊದಲು ಇದ್ದ ಆದಾಯ ತೆರಿಗೆ ಲೆಕ್ಕಾಚಾರ ಮತ್ತು ತೆರಿಗೆ ಶ್ರೇಣಿಗಳ ವ್ಯವಸ್ಥೆ. ಈ ಪದ್ಧತಿಯಲ್ಲಿ ತೆರಿಗೆದಾರರು ವಿವಿಧ ತೆರಿಗೆ ಕಡಿತಗಳು ಮತ್ತು ವಿನಾಯಿತಿಗಳನ್ನು ಪಡೆಯುವ ಆಯ್ಕೆ ಇದೆ. ಆದರೆ ಮೂಲ (ಹೊಸ) ತೆರಿಗೆ ಪದ್ಧತಿಯಲ್ಲಿ ತೆರಿಗೆ ದರಗಳು ಸಾಮಾನ್ಯವಾಗಿ ಹಳೆಯ ತೆರಿಗೆ ಪದ್ಧತಿಗಿಂತ ಭಿನ್ನವಾಗಿವೆ.
ವ್ಯವಹಾರವಲ್ಲದ ಪ್ರಕರಣಗಳು:
"ವ್ಯವಹಾರ ಪ್ರಕರಣಗಳಲ್ಲಿ", ತೆರಿಗೆ ಪದ್ಧತಿಯನ್ನು ಆಯ್ಕೆಮಾಡುವ ಅವಕಾಶವನ್ನು ಪ್ರತಿ ವರ್ಷ ನೇರವಾಗಿ ಆದಾಯ ತೆರಿಗೆ ರಿಟರ್ನ್ (ITR) ನಲ್ಲಿ ಬಳಸಬಹುದು. ಅಂತಹ ರಿಟರ್ನ್ ಅನ್ನು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139(1) ಅಡಿಯಲ್ಲಿ ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಅಥವಾ ಅದಕ್ಕೂ ಮೊದಲು ಸಲ್ಲಿಸಬೇಕು.
ವ್ಯವಹಾರ ಪ್ರಕರಣಗಳು:
ವ್ಯವಹಾರ ಮತ್ತು ವೃತ್ತಿಯಿಂದ ಆದಾಯ ಹೊಂದಿರುವ ಅರ್ಹ ತೆರಿಗೆದಾರರ ಸಂದರ್ಭದಲ್ಲಿ, ಅವರು ಪೂರ್ವನಿಯೋಜಿತ (ಹೊಸ) ತೆರಿಗೆ ಪದ್ಧತಿಯಿಂದ ಹೊರಬಂದು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆಮಾಡಲು ಬಯಸಿದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದಕ್ಕಾಗಿ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139(1) ಅಡಿಯಲ್ಲಿ ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಫಾರ್ಮ್ 10-IEA ಅನ್ನು ಸಲ್ಲಿಸಬೇಕು.ಅದೇ ರೀತಿ, ಈ ಆಯ್ಕೆಯನ್ನು ಹಿಂತೆಗೆದುಕೊಂಡು ಮತ್ತೆ ಹೊಸ ತೆರಿಗೆ ಪದ್ಧತಿಗೆ ಸೇರುವುದಕ್ಕೂ ಫಾರ್ಮ್ 10-IEA ಯನ್ನೇ ಸಲ್ಲಿಸಬೇಕು. ಆದಾಗ್ಯೂ, ಹಳೆಯ ತೆರಿಗೆ ಪದ್ಧತಿಯಿಂದ ಹೊರಬಂದು ಮತ್ತೆ ಪೂರ್ವನಿಯೋಜಿತ (ಹೊಸ) ತೆರಿಗೆ ಪದ್ಧತಿಗೆ ಸೇರುವ ಅವಕಾಶವು ಮುಂದಿನ ಮೌಲ್ಯಮಾಪನ ವರ್ಷದಿಂದ (AY) ಮಾತ್ರ ಲಭ್ಯವಾಗುತ್ತದೆ. ವ್ಯವಹಾರ ಮತ್ತು ವೃತ್ತಿಯಿಂದ ಆದಾಯ ಹೊಂದಿರುವ ಅರ್ಹ ತೆರಿಗೆದಾರರಿಗೆ ಈ ಅವಕಾಶ ಜೀವನದಲ್ಲಿ ಕೇವಲ ಒಮ್ಮೆ ಮಾತ್ರ ದೊರೆಯುತ್ತದೆ.
|
ಹಳೆಯ ತೆರಿಗೆ ಪದ್ಧತಿ |
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 115BAC ಅಡಿಯಲ್ಲಿ ಪೂರ್ವನಿಯೋಜಿತ ತೆರಿಗೆ ಪದ್ಧತಿ |
||||
|
ಆದಾಯ ತೆರಿಗೆ ಸ್ಲ್ಯಾಬ್ |
ಆದಾಯ ತೆರಿಗೆ ದರ |
|
ಆದಾಯ ತೆರಿಗೆ ಸ್ಲ್ಯಾಬ್ |
ಆದಾಯ ತೆರಿಗೆ ದರ |
|
|
₹ 3,00,000 ವರೆಗೆ |
ಶೂನ್ಯ |
|
₹ 4,00,000 ಗಳವರೆಗೆ |
ಶೂನ್ಯ |
|
|
₹ 3,00,001 - ₹ 5,00,000** |
₹ 3,00,000 ಮೇಲ್ಪಟ್ಟ ಆದಾಯಕ್ಕೆ 5% |
|
₹ 4,00,001 - ₹ 8,00,000** |
₹ 4,00,000 ಮೇಲ್ಪಟ್ಟ ಆದಾಯಕ್ಕೆ 5% |
|
|
₹ 5,00,001 - ₹ 10,00,000 |
₹ 5,00,000 ಮೇಲ್ಪಟ್ಟ ಆದಾಯಕ್ಕೆ 20% + ₹ 10,000 |
|
₹ 8,00,001 - ₹ 12,00,000 |
₹ 8,00,000 ಮೇಲ್ಪಟ್ಟ ಆದಾಯಕ್ಕೆ 10% + ₹ 20,000 |
|
|
₹ 10,00,000 |
₹ 8,00,000 ಮೇಲ್ಪಟ್ಟ ಆದಾಯಕ್ಕೆ 30% + ₹ 1,10,000 ₹ 10,00,000 |
|
₹ 12,00,001 - ₹ 16,00,000 |
₹ 12,00,000 ಮೇಲ್ಪಟ್ಟ ಆದಾಯಕ್ಕೆ 15% + ₹ 60,000 |
|
|
|
|
|
₹ 16,00,001 - ₹ 20,00,000 |
₹ 16,00,000 ಮೇಲ್ಪಟ್ಟ ಆದಾಯಕ್ಕೆ 20% + ₹ 1,20,000 |
|
|
|
|
|
₹ 20,00,001 - ₹ 24,00,000 |
₹ 20,00,000 ಮೇಲ್ಪಟ್ಟ ಆದಾಯಕ್ಕೆ 25% + ₹ 2,00,000 |
|
|
|
|
|
₹ 24,00,000 ಕ್ಕಿಂತ ಮೇಲ್ಪಟ್ಟು |
₹ 24,00,000 ಮೇಲ್ಪಟ್ಟ ಆದಾಯಕ್ಕೆ 30% + ₹ 3,00,000 |
|
|
ಹಳೆಯ ತೆರಿಗೆ ಪದ್ಧತಿ |
ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ದತಿ |
||||
|
ಆದಾಯ ತೆರಿಗೆ ಸ್ಲ್ಯಾಬ್ |
ಆದಾಯ ತೆರಿಗೆ ದರ |
|
ಆದಾಯ ತೆರಿಗೆ ಸ್ಲ್ಯಾಬ್ |
ಆದಾಯ ತೆರಿಗೆ ದರ |
|
|
₹ 5,00,000 ಗಳವರೆಗೆ |
ಶೂನ್ಯ |
|
₹ 3,00,000 ಗಳವರೆಗೆ |
ಶೂನ್ಯ |
|
|
₹ 5,00,001 - ₹ 10,00,000 |
₹ 5,00,000 ಮೇಲ್ಪಟ್ಟ ಆದಾಯಕ್ಕೆ 20% |
|
₹ 3,00,001 - ₹ 7,00,000** |
₹ 3,00,000 ಮೇಲ್ಪಟ್ಟ ಆದಾಯಕ್ಕೆ 5% |
|
|
₹ 10,00,001- ₹ 50,00,000 |
₹ 10,00,000 ಮೇಲ್ಪಟ್ಟ ಆದಾಯಕ್ಕೆ 30% + ₹ 1,00,000 |
|
₹ 7,00,001 - ₹ 10,00,000 |
₹ 7,00,000 ಮೇಲ್ಪಟ್ಟ ಆದಾಯಕ್ಕೆ 10% + ₹ 20,000 |
|
|
|
|
|
₹ 10,00,001 - ₹ 12,00,000 |
₹ 10,00,000 ಮೇಲ್ಪಟ್ಟ ಆದಾಯಕ್ಕೆ 15% + ₹ 50,000 |
|
|
|
|
|
₹ 12,00,001 - ₹ 15,00,000 |
₹ 12,00,000 ಮೇಲ್ಪಟ್ಟ ಆದಾಯಕ್ಕೆ 20% + ₹ 80,000 |
|
|
|
|
|
₹ 15,00,001- ₹ 50,00,000 |
₹ 15,00,000 ಮೇಲ್ಪಟ್ಟ ಆದಾಯಕ್ಕೆ 30% + ₹ 1,40,000 |
|
|
|
|
|
₹ 50,00,001- ₹ 100,00,000 |
₹ 15,00,000 ಮೇಲ್ಪಟ್ಟ ಆದಾಯಕ್ಕೆ 30% + ₹ 1,40,000 |
|
|
|
|
|
₹ 100,00,001- ₹ 200,00,000 |
₹ 15,00,000 ಮೇಲ್ಪಟ್ಟ ಆದಾಯಕ್ಕೆ 30% + ₹ 1,40,000 |
|
|
|
|
|
₹ 200,00,001 ಮೇಲ್ಪಟ್ಟು |
₹ 15,00,000 ಮೇಲ್ಪಟ್ಟ ಆದಾಯಕ್ಕೆ 30% + ₹ 1,40,000 |
|
*ಗಮನಿಸಿ: ಹೆಚ್ಚಿಸಿದ ಸರ್‌ಚಾರ್ಜ್ ದರವಾದ 25% ಮತ್ತು 37% ಅನ್ನು, ಸಂದರ್ಭಾನುಸಾರವಾಗಿ, ಸೆಕ್ಷನ್ 111A, 112, 112A ಅಡಿಯಲ್ಲಿ ತೆರಿಗೆಗೊಳಪಟ್ಟ ಆದಾಯ ಹಾಗೂ ಲಾಭಾಂಶ ಆದಾಯ (Dividend Income) ಮೇಲೆ ವಿಧಿಸಲಾಗುವುದಿಲ್ಲ. ಆದ್ದರಿಂದ, ಇಂತಹ ಆದಾಯಗಳ ಮೇಲೆ ಪಾವತಿಸಬೇಕಾದ ತೆರಿಗೆಯ ಗರಿಷ್ಠ ಹೆಚ್ಚುವರಿ ತೆರಿಗೆ ದರ 15% ಆಗಿರುತ್ತದೆ. ಆದರೆ ಆದಾಯವು ಸೆಕ್ಷನ್ 115A, 115AB, 115AC, 115ACA ಮತ್ತು 115E ಅಡಿಯಲ್ಲಿ ತೆರಿಗೆಗೊಳಪಟ್ಟ ಸಂದರ್ಭಗಳಲ್ಲಿ ಇದು ಅನ್ವಯಿಸುವುದಿಲ್ಲ.
ಅನ್ವಯವಾಗುವ ಸರ್‌ಚಾರ್ಜ್ ದರ:
|
ಆದಾಯ ಮಿತಿ |
ಆದಾಯ ತೆರಿಗೆ ಮೊತ್ತದ ಮೇಲೆ ವಿಧಿಸಲಾಗುವ ಸರ್‌ಚಾರ್ಜ್ ದರ
(ಹೊಸ ತೆರಿಗೆ ಪದ್ಧತಿ) |
ಆದಾಯ ತೆರಿಗೆ ಮೊತ್ತದ ಮೇಲೆ ವಿಧಿಸಲಾಗುವ ಸರ್‌ಚಾರ್ಜ್ ದರ
(ಹಳೆಯ ತೆರಿಗೆ ಪದ್ಧತಿ)
|
|
ರೂ.50 ಲಕ್ಷ ಗಳವರೆಗೆ |
ಶೂನ್ಯ |
ಶೂನ್ಯ |
|
₹50 ಲಕ್ಷದಿಂದ ₹1 ಕೋಟಿವರೆಗೆ |
10% |
10% |
|
ರೂ. 1 ಕೋಟಿಯಿಂದ ರೂ. 2 ಕೋಟಿಯವರೆಗೆ |
15% |
15% |
|
ರೂ. 2 ಕೋಟಿಯಿಂದ ರೂ. 5 ಕೋಟಿಯವರೆಗೆ |
25% |
25% |
|
ರೂ. 5 ಕೋಟಿಗೂ ಮೇಲ್ಪಟ್ಟು |
25% |
37% |
*ಗಮನಿಸಿ: ಹೆಚ್ಚಿಸಿದ ಸರ್‌ಚಾರ್ಜ್ ದರವಾದ 25% ಮತ್ತು 37% ಅನ್ನು, ಸಂದರ್ಭಾನುಸಾರವಾಗಿ, ಸೆಕ್ಷನ್ 111A, 112, 112A ಅಡಿಯಲ್ಲಿ ತೆರಿಗೆಗೊಳಪಟ್ಟ ಆದಾಯ ಹಾಗೂ ಲಾಭಾಂಶ ಆದಾಯ (Dividend Income) ಮೇಲೆ ವಿಧಿಸಲಾಗುವುದಿಲ್ಲ. ಆದ್ದರಿಂದ, ಇಂತಹ ಆದಾಯಗಳ ಮೇಲೆ ಪಾವತಿಸಬೇಕಾದ ತೆರಿಗೆಯ ಗರಿಷ್ಠ ಹೆಚ್ಚುವರಿ ತೆರಿಗೆ ದರ 15% ಆಗಿರುತ್ತದೆ. ಆದರೆ ಆದಾಯವು ಸೆಕ್ಷನ್ 115A, 115AB, 115AC, 115ACA ಮತ್ತು 115E ಅಡಿಯಲ್ಲಿ ತೆರಿಗೆಗೊಳಪಟ್ಟ ಸಂದರ್ಭಗಳಲ್ಲಿ ಇದು ಅನ್ವಯಿಸುವುದಿಲ್ಲ.
|
ತೆರಿಗೆ ಪದ್ಧತಿ |
ರಿಯಾಯತಿ ಮಿತಿ |
ರಿಯಾಯತಿಯ ಷರತ್ತು |
|
ಹೊಸ ತೆರಿಗೆ ಪದ್ಧತಿ |
₹ 60,000 |
ತೆರಿಗೆಗೊಳಪಡುವ ಆದಾಯವು 12,00,000 ಮೀರಬಾರದು |
|
ಹಳೆಯ ತೆರಿಗೆ ಪದ್ಧತಿ |
₹ 12,500 |
ತೆರಿಗೆಗೊಳಪಡುವ ಆದಾಯವು 5,00,000 ಮೀರಬಾರದು |
**ಸೂಚನೆ: ಎರಡೂ ತೆರಿಗೆ ಪದ್ಧತಿಗಳಲ್ಲಿ, ಆದಾಯ ತೆರಿಗೆ ಮೊತ್ತ ಹಾಗೂ ಸರ್‌ಚಾರ್ಜ್ (ಇದ್ದಲ್ಲಿ) ಒಟ್ಟು ಮೊತ್ತದ ಮೇಲೆ 4% ದರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೆಸ್ ಪಾವತಿಸಬೇಕು.
ಹಳೆಯ ತೆರಿಗೆ ಪದ್ಧತಿಯಲ್ಲಿ, ಆದಾಯವು ಕ್ರಮವಾಗಿ ₹50 ಲಕ್ಷ, ₹1 ಕೋಟಿ, ₹2 ಕೋಟಿ ಅಥವಾ ₹5 ಕೋಟಿಯನ್ನು ಸ್ವಲ್ಪ ಪ್ರಮಾಣದಲ್ಲಿ ಮೀರಿದಾಗ, ವಿಧಿಸಲಾಗುವ ಸರ್‌ಚಾರ್ಜ್‌ನಿಂದ ಮಿತ ಪರಿಹಾರ (Marginal Relief) ಪಡೆಯಬಹುದು. ಅಂತೆಯೇ ಹೊಸ ತೆರಿಗೆ ಪದ್ಧತಿಯಲ್ಲಿ, ಆದಾಯವು ಕ್ರಮವಾಗಿ ₹50 ಲಕ್ಷ, ₹1 ಕೋಟಿ ಅಥವಾ ₹2 ಕೋಟಿಯನ್ನು ಸ್ವಲ್ಪ ಪ್ರಮಾಣದಲ್ಲಿ ಮೀರಿದಾಗ, ವಿಧಿಸಲಾಗುವ ಸರ್‌ಚಾರ್ಜ್‌ನಿಂದ ಮಿತ ಪರಿಹಾರ (Marginal Relief) ಪಡೆಯಬಹುದು.
|
ನಿವ್ವಳ ಆದಾಯ ಶ್ರೇಣಿ |
ಕನಿಷ್ಠ ಪರಿಹಾರ |
|
|
ಮೀರಿದಾಗ (ರೂಪಾಯಿಗಳಲ್ಲಿ) |
ಮೀರದಾಗ (ರೂಪಾಯಿಗಳಲ್ಲಿ)
|
|
|
50 ಲಕ್ಷ |
1 ಕೋಟಿ |
ಒಟ್ಟು ಆದಾಯದ ಮೇಲೆ ಪಾವತಿಸಬೇಕಾದ ಆದಾಯ ತೆರಿಗೆ ಮತ್ತು ಸರ್‌ಚಾರ್ಜ್ ಮೊತ್ತವು, ಒಟ್ಟು ಆದಾಯ ರೂ.50 ಲಕ್ಷವಾಗಿದ್ದರೆ ಪಾವತಿಸಬೇಕಾಗುವ ಆದಾಯ ತೆರಿಗೆಯ ಮೊತ್ತಕ್ಕಿಂತ, ರೂ.50 ಲಕ್ಷವನ್ನು ಮೀರಿದ ಆದಾಯದ ಪ್ರಮಾಣಕ್ಕಿಂತ ಹೆಚ್ಚು ಇರಬಾರದು. ಈ ನಿಯಮವು ಎರಡೂ ತೆರಿಗೆ ಪದ್ಧತಿಗಳಿಗೂ ಅನ್ವಯಿಸುತ್ತದೆ. |
|
1 ಕೋಟಿ |
2 ಕೋಟಿಗಳು |
ಒಟ್ಟು ಆದಾಯದ ಮೇಲೆ ಪಾವತಿಸಬೇಕಾದ ಆದಾಯ ತೆರಿಗೆ ಮತ್ತು ಸರ್‌ಚಾರ್ಜ್ ಮೊತ್ತವು, ಒಟ್ಟು ಆದಾಯ ರೂ.1 ಕೋಟಿಯಾಗಿದ್ದರೆ ಪಾವತಿಸಬೇಕಾಗುವ ಆದಾಯ ತೆರಿಗೆಯ ಮೊತ್ತಕ್ಕಿಂತ, ರೂ.1 ಕೋಟಿಯನ್ನು ಮೀರಿದ ಆದಾಯದ ಪ್ರಮಾಣಕ್ಕಿಂತ ಹೆಚ್ಚು ಇರಬಾರದು. ಈ ನಿಯಮವು ಎರಡೂ ತೆರಿಗೆ ಪದ್ಧತಿಗಳಿಗೂ ಅನ್ವಯಿಸುತ್ತದೆ. |
|
2 ಕೋಟಿಗಳು |
5 ಕೋಟಿಗಳು |
ಒಟ್ಟು ಆದಾಯದ ಮೇಲೆ ಪಾವತಿಸಬೇಕಾದ ಆದಾಯ ತೆರಿಗೆ ಮತ್ತು ಸರ್‌ಚಾರ್ಜ್ ಮೊತ್ತವು, ಒಟ್ಟು ಆದಾಯ ರೂ.2 ಕೋಟಿಯಾಗಿದ್ದರೆ ಪಾವತಿಸಬೇಕಾಗುವ ಆದಾಯ ತೆರಿಗೆಯ ಮೊತ್ತಕ್ಕಿಂತ, ರೂ.2 ಕೋಟಿಯನ್ನು ಮೀರಿದ ಆದಾಯದ ಪ್ರಮಾಣಕ್ಕಿಂತ ಹೆಚ್ಚು ಇರಬಾರದು. ಈ ನಿಯಮವು ಎರಡೂ ತೆರಿಗೆ ಪದ್ಧತಿಗಳಿಗೂ ಅನ್ವಯಿಸುತ್ತದೆ. |
|
5 ಕೋಟಿಗಳು |
– |
ಒಟ್ಟು ಆದಾಯದ ಮೇಲೆ ಪಾವತಿಸಬೇಕಾದ ಆದಾಯ ತೆರಿಗೆ ಮತ್ತು ಸರ್‌ಚಾರ್ಜ್ ಮೊತ್ತವು, ಒಟ್ಟು ಆದಾಯ ರೂ.೫ ಕೋಟಿಯಾಗಿದ್ದರೆ ಪಾವತಿಸಬೇಕಾಗುವ ಆದಾಯ ತೆರಿಗೆಯ ಮೊತ್ತಕ್ಕಿಂತ, ರೂ.೫ ಕೋಟಿಯನ್ನು ಮೀರಿದ ಆದಾಯದ ಪ್ರಮಾಣಕ್ಕಿಂತ ಹೆಚ್ಚು ಇರಬಾರದು. ಈ ನಿಯಮವು ಎರಡೂ ತೆರಿಗೆ ಪದ್ಧತಿಗಳಿಗೂ ಅನ್ವಯಿಸುತ್ತದೆ. |
A. ಸೆಕ್ಷನ್ 115BAC (1A) ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೆ ಈ ಕೆಳಗಿನ ತೆರಿಗೆ ಕಡಿತಗಳು ಲಭ್ಯವಿರುತ್ತವೆ:
1. ಸೆಕ್ಷನ್ 24(b) – ಗೃಹ ಸಾಲದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ ಗೃಹ ಆಸ್ತಿಯಿಂದ ಬರುವ ಆದಾಯದ ಮೇಲಿನ ತೆರಿಗೆ ಕಡಿತ:
|
ಆಸ್ತಿಯ ಸ್ವರೂಪ |
ಸಾಲದ ಉದ್ದೇಶ |
ಅನುಮತಿಸಬಹುದಾದ (ಗರಿಷ್ಠ ಮಿತಿ) |
ITR ಅನ್ನು ಭರ್ತಿ ಮಾಡಲು ಅಗತ್ಯವಿರುವ ವಿವರಗಳು |
|
ಬಾಡಿಗೆಗೆ ಕೊಟ್ಟಿರುವ ಗೃಹ ಆಸ್ತಿ |
ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ |
ಯಾವುದೇ ಮಿತಿಯಿಲ್ಲದ ವಾಸ್ತವಿಕ ಮೌಲ್ಯ (ಆದರೆ "ಮನೆ ಆಸ್ತಿಯಿಂದ ಬರುವ ಆದಾಯ" ಎಂಬ ಶೀರ್ಷಿಕೆಯಡಿಯಲ್ಲಿ ನಷ್ಟವಿದ್ದರೆ ಅದನ್ನು CYLA ವೇಳಾಪಟ್ಟಿಯಲ್ಲಿರುವ ಯಾವುದೇ ಇತರ ಶೀರ್ಷಿಕೆಗಳ ವಿರುದ್ಧ ಹೊಂದಿಸಲಾಗುವುದಿಲ್ಲ ಮತ್ತು ಮುಂದಿನ ವರ್ಷಗಳಿಗೆ ಸಾಗಿಸಲಾಗುವುದಿಲ್ಲ) |
|
|
ಸೆಕ್ಷನ್ 80CCD(2) |
||
|
ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಉದ್ಯೋಗದಾತರು ನೀಡಿದ ಕೊಡುಗೆಗೆ ತೆರಿಗೆ ಕಡಿತ
|
B.ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೆ ಕೆಳಗಿನ ತೆರಿಗೆ ಕಡಿತಗಳು ಲಭ್ಯವಿರುತ್ತವೆ:
- ಸೆಕ್ಷನ್ 24(b) – ಗೃಹ ಸಾಲದ ಮೇಲಿನ ಬಡ್ಡಿ ಹಾಗೂ ಗೃಹ ಸುಧಾರಣೆ ಸಾಲದ ಮೇಲಿನ ಬಡ್ಡಿಗೆ ಸಂಬಂಧಿಸಿದಂತೆ “ಮನೆ ಆಸ್ತಿಯಿಂದ ಆದಾಯ”ದಿಂದ ಕಡಿತ. ಸ್ವಯಂ ವಾಸಿಸುವ ಗೃಹಆಸ್ತಿಯ ಸಂದರ್ಭದಲ್ಲಿ, ಗೃಹ ಸಾಲದ ಮೇಲಿನ ಬಡ್ಡಿಗೆ ಅನುಮತಿಸಲಾದ ಗರಿಷ್ಠ ಕಡಿತ ಮಿತಿ ₹2 ಲಕ್ಷವಾಗಿದೆ. ಸೆಕ್ಷನ್ 24(b) ಅಡಿಯಲ್ಲಿ ಅನುಮತಿಸಲಾದ ಸಾಲದ ಮೇಲಿನ ಬಡ್ಡಿಯ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ:
|
ಆಸ್ತಿಯ ಸ್ವರೂಪ |
ಸಾಲ ಪಡೆದ ಸಮಯ |
ಸಾಲದ ಉದ್ದೇಶ |
ಅನುಮತಿಸಬಹುದಾದ (ಗರಿಷ್ಠ ಮಿತಿ) |
ಅಗತ್ಯವಿರುವ ವಿವರಗಳು |
|
ಸ್ವಯಂ ವಾಸ |
1/04/1999 ರಂದು ಅಥವಾ ನಂತರ |
ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ |
₹ 2,00,000 |
|
|
1/04/1999 ರಂದು ಅಥವಾ ನಂತರ |
ಗೃಹ ಆಸ್ತಿಯ ದುರಸ್ತಿಗಳಿಗಾಗಿ |
₹ 30,000 |
||
|
1/04/1999 ರಂದು ಅಥವಾ ನಂತರ |
ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ |
₹ 30,000 |
||
|
1/04/1999 ರಂದು ಅಥವಾ ನಂತರ |
ಗೃಹ ಆಸ್ತಿಯ ದುರಸ್ತಿಗಳಿಗಾಗಿ |
₹ 30,000 |
||
|
ಬಾಡಿಗೆಗೆ ಕೊಟ್ಟಿರುವ ಗೃಹ ಆಸ್ತಿ |
ಯಾವುದೇ ಸಮಯದಲ್ಲಿಯೂ |
ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ |
ಯಾವುದೇ ಮಿತಿಯಿಲ್ಲದ ವಾಸ್ತವಿಕ ಮೌಲ್ಯ |
|
ಸೆಕ್ಷನ್ 80C, 80CCC, 80CCD (1) |
|||||||
|
ಮಾಡಿದ ಪಾವತಿಗಳಿಗೆ ತೆರಿಗೆ ಕಡಿತ
|
|||||||
ಸೆಕ್ಷನ್ 80CCD(1B)
|
80CCD (1) ಅಡಿಯಲ್ಲಿ ಕ್ಲೈಮ್ ಮಾಡಲಾದ ತೆರಿಗೆ ಕಡಿತವನ್ನು ಹೊರತುಪಡಿಸಿ, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಮಾಡಿದ ಪಾವತಿಗಳ ಮೇಲಿನ ತೆರಿಗೆ ಕಡಿತ. |
| ತೆರಿಗೆ ಕಡಿತದ ಮಿತಿ ₹ 50,000 |
ಗಮನಿಸಿ:
ಸೆಕ್ಷನ್ 80CCD(1) ಮತ್ತು 80CCD(1B) ಅಡಿಯಲ್ಲಿ ಕಡಿತವನ್ನು ಕೋರುವ ತೆರಿಗೆದಾರರು ಕೆಳಗಿನ ವಿವರಗಳನ್ನು ಒದಗಿಸಬೇಕು: • ಕೊಡುಗೆಯ ಮೊತ್ತ • ತೆರಿಗೆದಾರರ PRAN (ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ)
ಸೆಕ್ಷನ್ 80CCD(2)
ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಉದ್ಯೋಗದಾತರು ನೀಡಿದ ಕೊಡುಗೆಗೆ ತೆರಿಗೆ ಕಡಿತ
|
ಉದ್ಯೋಗದಾತರು ಸಾರ್ವಜನಿಕ ವಲಯದ ಸಂಸ್ಥೆ (PSU) ಅಥವಾ ಇತರ ಸಂಸ್ಥೆಯಾಗಿದ್ದರೆ. |
ವೇತನದ 10% ತೆರಿಗೆ ಕಡಿತ ಮಿತಿ |
|
ಉದ್ಯೋಗದಾತರು ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಿದ್ದರೆ |
ವೇತನದ 14% ತೆರಿಗೆ ಕಡಿತ ಮಿತಿ |
ಸೆಕ್ಷನ್ 80D
|
ಆರೋಗ್ಯ ವಿಮಾ ಪ್ರೀಮಿಯಂ ಹಾಗೂ ಮುನ್ನೆಚ್ಚರಿಕೆಯ ಆರೋಗ್ಯ ತಪಾಸಣೆಗಾಗಿ ಮಾಡಿದ ಪಾವತಿಗಳ ಮೇಲಿನ ಕಡಿತ.
ಆರೋಗ್ಯ ವಿಮೆಗೆ ಯಾವುದೇ ಪ್ರೀಮಿಯಂ ಪಾವತಿಸದಿದ್ದಲ್ಲಿ, ಹಿರಿಯ ನಾಗರಿಕರ ವೈದ್ಯಕೀಯ ವೆಚ್ಚಗಳಿಗೆ ನೀಡಲಾಗುವ ಕಡಿತ.
|
ದಯವಿಟ್ಟು ಗಮನಿಸಿ:
ನೀವು ಸೆಕ್ಷನ್ 80 D ಅಡಿಯಲ್ಲಿ ತೆರಿಗೆ ಕಡಿತವನ್ನು ಕ್ಲೈಮ್ ಮಾಡಲು ಬಯಸಿದರೆ, ನೀವು ಕೆಳಗಿನ ವಿವರಗಳನ್ನು ನಮೂದಿಸಬೇಕು:
• ವಿಮೆದಾತರ ಹೆಸರು (ವಿಮಾ ಕಂಪನಿ)
• ಪಾಲಿಸಿ ಸಂಖ್ಯೆ
• ಆರೋಗ್ಯ ವಿಮೆಯ ಮೊತ್ತ
ಸೆಕ್ಷನ್ 80DD
|
ಅಂಗವಿಕಲ ಅವಲಂಬಿತರ ನಿರ್ವಹಣೆ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಮಾಡಿದ ಪಾವತಿಗಳು ಅಥವಾ ಸಂಬಂಧಿತ ಅನುಮೋದಿತ ಯೋಜನೆಯಡಿಯಲ್ಲಿ ಮಾಡಿದ ಯಾವುದೇ ಮೊತ್ತದ ಪಾವತಿ / ಠೇವಣಿ ಮೇಲಿನ ತೆರಿಗೆ ಕಡಿತ |
ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ, ಮಾಡಿದ ವೆಚ್ಚವನ್ನು ಪರಿಗಣಿಸದೆ, ನಿಗದಿತ ತೀವ್ರ (80% ಅಥವಾ ಹೆಚ್ಚಿನ) ಅಂಗವೈಕಲ್ಯ ಹೊಂದಿದ್ದರೆ ನಿಗದಿತ ಕಡಿತವು |
|
ಸೂಚನೆ:
ಸೆಕ್ಷನ್ 80DD ಅಡಿಯಲ್ಲಿ ಕಡಿತವನ್ನು ಕೋರುವುದಕ್ಕಾಗಿ ಆದಾಯ ತೆರಿಗೆ ರಿಟರ್ನ್‌ನಲ್ಲಿ ಕೆಳಗಿನ ವಿವರಗಳನ್ನು ಒದಗಿಸಬೇಕು:
• ಅಂಗವೈಕಲ್ಯದ ಸ್ವರೂಪ
• ಅಂಗವೈಕಲ್ಯದ ಪ್ರಕಾರ
• ಕಡಿತ ಮೊತ್ತ
• ಅವಲಂಬಿತ ವ್ಯಕ್ತಿಯ ಪ್ರಕಾರ
• ಅವಲಂಬಿತ ವ್ಯಕ್ತಿಯ PAN ಸಂಖ್ಯೆ
• ಅವಲಂಬಿತ ವ್ಯಕ್ತಿಯ ಆಧಾರ್ ಸಂಖ್ಯೆ
• ಸ್ವಲೀನತೆ (Autism), ಮೆದುಳಿನ ಅಂಗವೈಕಲ್ಯ (Cerebral Palsy), ಅಥವಾ ಬಹು ಅಂಗವೈಕಲ್ಯಗಳ ಪ್ರಕರಣದಲ್ಲಿ ಸಲ್ಲಿಸಿದ ಫಾರ್ಮ್ 10 IA ಯ ಸ್ವೀಕೃತಿ ಸಂಖ್ಯೆ
• UDID ಸಂಖ್ಯೆ (ಲಭ್ಯವಿದ್ದರೆ)
ಸೆಕ್ಷನ್ 80DDB
|
ತನಗೆ ಅಥವಾ ಅವಲಂಬಿತರ ವೈದ್ಯಕೀಯ ಚಿಕಿತ್ಸೆಗಾಗಿ ಅಥವಾ ನಿರ್ದಿಷ್ಟ ರೋಗಗಳಿಗೆ ಮಾಡಿದ ಪಾವತಿಗಳ ಮೇಲಿನ ತೆರಿಗೆ ಕಡಿತ |
₹ 40,000 ತೆರಿಗೆ ಕಡಿತ ಮಿತಿ (ಹಿರಿಯ ನಾಗರೀಕರಾಗಿದ್ದರೆ ₹1,00,000) |
ಸೆಕ್ಷನ್ 80E
|
ತನ್ನ ಅಥವಾ ಸಂಬಂಧಿಕರ ಉನ್ನತ ಶಿಕ್ಷಣಕ್ಕಾಗಿ ಸಾಲದ ಮೇಲಿನ ಬಡ್ಡಿ ಪಾವತಿಗಳಿಗಾಗಿ ಕಡಿತ |
ತೆಗೆದುಕೊಂಡ ಸಾಲಕ್ಕೆ ಪಾವತಿಸಿದ ಒಟ್ಟು ಬಡ್ಡಿ ಮೊತ್ತ |
ಸೂಚನೆ:
ಸೆಕ್ಷನ್ 80E ಅಡಿಯಲ್ಲಿ ಕಡಿತವನ್ನು ಕೋರುವುದಕ್ಕಾಗಿ, ಆದಾಯ ತೆರಿಗೆ ರಿಟರ್ನ್‌ನಲ್ಲಿ ಕೆಳಗಿನ ವಿವರಗಳನ್ನು ಒದಗಿಸಬೇಕು:
• ಬ್ಯಾಂಕ್ / ಸಂಸ್ಥೆಯಿಂದ ಪಡೆದ ಸಾಲ
• ಸಾಲ ಪಡೆದ ಬ್ಯಾಂಕ್ / ಸಂಸ್ಥೆಯ ಹೆಸರು
• ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ
• ಸಾಲ ಮಂಜೂರಾದ ದಿನಾಂಕ
• ಸಾಲದ ಒಟ್ಟು ಮೊತ್ತ
• ಹಣಕಾಸು ವರ್ಷದ ಕೊನೆಯ ದಿನಾಂಕದಲ್ಲಿ ಬಾಕಿ ಇರುವ ಸಾಲದ ಮೊತ್ತ
• ಸೆಕ್ಷನ್ 80E ಅಡಿಯಲ್ಲಿ ಬಡ್ಡಿ ಮೊತ್ತ
ಸೆಕ್ಷನ್ 80EE
|
ಗೃಹ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು 1ನೇ ಏಪ್ರಿಲ್ 2016 ರಿಂದ 31 ನೇ ಮಾರ್ಚ್ 2017 ರ ನಡುವೆ ಮಂಜೂರಾದ ಸಾಲಕ್ಕೆ ಪಾವತಿಸಿದ ಬಡ್ಡಿಯ ಮೇಲಿನ ತೆರಿಗೆ ಕಡಿತ |
ಪಡೆದ ಸಾಲದ ಮೇಲಿನ ಪಾವತಿಸಿದ ಬಡ್ಡಿಗೆ |
ಗಮನಿಸಿ:
ಸೆಕ್ಷನ್ 80EE ಅಡಿಯಲ್ಲಿ ಕಡಿತವನ್ನು ಕೋರುವುದಕ್ಕಾಗಿ, ಆದಾಯ ತೆರಿಗೆ ರಿಟರ್ನ್‌ನಲ್ಲಿ ಕೆಳಗಿನ ವಿವರಗಳನ್ನು ಒದಗಿಸಬೇಕು:
• ಸಾಲ ಪಡೆದ ಬ್ಯಾಂಕ್ / ಸಂಸ್ಥೆಯ ಹೆಸರು
• ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ
• ಸಾಲ ಮಂಜೂರಾದ ದಿನಾಂಕ
• ಸಾಲ ಒಟ್ಟು ಮೊತ್ತ
• ಹಣಕಾಸು ವರ್ಷದ ಕೊನೆಯ ದಿನಾಂಕದಂತೆ ಬಾಕಿ ಇರುವ ಸಾಲದ ಮೊತ್ತ
• ಸೆಕ್ಷನ್ 80EE ಅಡಿಯಲ್ಲಿ ಬಡ್ಡಿ ಮೊತ್ತ
ಸೆಕ್ಷನ್ 80EEA
|
01 ಏಪ್ರಿಲ್ 2019 ರಿಂದ 31 ಮಾರ್ಚ್ 2022 ರ ನಡುವೆ ಮಂಜೂರು ಮಾಡಿದ ಮತ್ತು ಸೆಕ್ಷನ್ 80EE ಅಡಿಯಲ್ಲಿ ಈಗಾಗಲೇ ಕಡಿತವನ್ನು ಕೋರದ, ವ್ಯಕ್ತಿಗಳಿಗೆ , ಮೊದಲ ಬಾರಿಗೆ ವಸತಿ ಗೃಹ ಆಸ್ತಿ ಖರೀದಿಸಲು ಪಡೆದ ಸಾಲದ ಮೇಲಿನ ಬಡ್ಡಿ ಪಾವತಿಗಳಿಗೆ ಲಭ್ಯವಿರುವ ಕಡಿತ |
ಪಡೆಯಲಾದ ಸಾಲದ ಮೇಲೆ ಪಾವತಿಸಿದ ಬಡ್ಡಿಗೆ ₹1,50,000ವರೆಗೆ ತೆರಿಗೆ ಕಡಿತದ ಮಿತಿ. |
ಗಮನಿಸಿ:
ಸೆಕ್ಷನ್ 80EEA ಅಡಿಯಲ್ಲಿ ತೆರಿಗೆ ಕಡಿತ ಪಡೆಯಲು, ಆದಾಯ ತೆರಿಗೆ ರಿಟರ್ನ್ (ITR) ನಲ್ಲಿ ಕೆಳಗಿನ ವಿವರಗಳನ್ನು ಒದಗಿಸಬೇಕು:
• ಗೃಹ ಆಸ್ತಿಯ ಮುದ್ರಾಂಕ ಮೌಲ್ಯ
• ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ಸಾಲದ ವಿವರಗಳು
• ಸಾಲವನ್ನು ಪಡೆದಿರುವ ಬ್ಯಾಂಕ್ / ಹಣಕಾಸು ಸಂಸ್ಥೆಯ ಹೆಸರು
• ಬ್ಯಾಂಕ್ / ಹಣಕಾಸು ಸಂಸ್ಥೆಯ ಸಾಲ ಖಾತೆ ಸಂಖ್ಯೆ
• ಸಾಲ ಮಂಜೂರಾದ ದಿನಾಂಕ
• ಸಾಲದ ಒಟ್ಟು ಮೊತ್ತ
• ಹಣಕಾಸು ವರ್ಷದ ಕೊನೆಯ ದಿನಾಂಕದಂದು ಬಾಕಿ ಉಳಿದಿರುವ ಸಾಲದ ಮೊತ್ತ
• ಸೆಕ್ಷನ್ 80EEA ಅಡಿಯಲ್ಲಿ ಬಡ್ಡಿ ಮೊತ್ತ
ದಯವಿಟ್ಟು ಗಮನಿಸಿ, ಸೆಕ್ಷನ್ 80EEA ಅಡಿಯಲ್ಲಿ ಕಡಿತವನ್ನು ಸೆಕ್ಷನ್ 24(b) ಅಡಿಯಲ್ಲಿ ಲಭ್ಯವಿರುವ ಮಿತಿ ಸಂಪೂರ್ಣವಾಗಿ ಬಳಸಿಕೊಂಡ ನಂತರ ಮಾತ್ರ ಪಡೆಯಬಹುದು. ಜೊತೆಗೆ, ಸಾಲ ಮಂಜೂರಾದ ದಿನಾಂಕ ಮತ್ತು ಇತರೆ ಅರ್ಹತಾ ಷರತ್ತುಗಳ ಆಧಾರದ ಮೇಲೆ ತೆರಿಗೆದಾರರು ಸೆಕ್ಷನ್ 80EE ಅಥವಾ ಸೆಕ್ಷನ್ 80EEA ಇವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಂಡು ಕಡಿತವನ್ನು ಪಡೆಯಬಹುದು.
ಸೆಕ್ಷನ್ 80EEB
|
1ನೇ ಏಪ್ರಿಲ್ 2019 ರಿಂದ 31ನೇ ಮಾರ್ಚ್ 2023 ರ ನಡುವೆ ಸಾಲವನ್ನು ಮಂಜೂರು ಮಾಡಲಾದ, ಎಲೆಕ್ಟ್ರಿಕ್ ವಾಹನದ ಖರೀದಿಗಾಗಿ ಮಾಡಿದ ಸಾಲದ ಮೇಲಿನ ಬಡ್ಡಿ ಪಾವತಿಗಳ ಮೇಲಿನ ಕಡಿತ |
|
ಸೂಚನೆ:
ಸೆಕ್ಷನ್ 80EEB ಅಡಿಯಲ್ಲಿ ಕಡಿತ ಪಡೆಯಲು, ಆದಾಯ ತೆರಿಗೆ ರಿಟರ್ನ್ (ITR) ನಲ್ಲಿ ಕೆಳಗಿನ ವಿವರಗಳನ್ನು ಒದಗಿಸಬೇಕು:
• ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ಸಾಲದ ವಿವರಗಳು
• ಸಾಲವನ್ನು ಪಡೆದಿರುವ ಬ್ಯಾಂಕ್ / ಹಣಕಾಸು ಸಂಸ್ಥೆಯ ಹೆಸರು
• ಬ್ಯಾಂಕ್ / ಹಣಕಾಸು ಸಂಸ್ಥೆಯ ಸಾಲ ಖಾತೆ ಸಂಖ್ಯೆ
• ಸಾಲ ಮಂಜೂರಾದ ದಿನಾಂಕ
• ಸಾಲದ ಒಟ್ಟು ಮೊತ್ತ
• ಹಣಕಾಸು ವರ್ಷದ ಕೊನೆಯ ದಿನಾಂಕದಂದು ಬಾಕಿ ಉಳಿದಿರುವ ಸಾಲದ ಮೊತ್ತ
• ಸೆಕ್ಷನ್ 80EEB ಅಡಿಯಲ್ಲಿ ಪಾವತಿಸಿದ ಬಡ್ಡಿ ಮೊತ್ತ
• ವಾಹನದ ನೋಂದಣಿ ಸಂಖ್ಯೆ
ಸೆಕ್ಷನ್ 80G
ನಿರ್ದಿಷ್ಟ ನಿಧಿಗಳು, ದಾನಧರ್ಮ ಸಂಸ್ಥೆಗಳು ಇತ್ಯಾದಿಗಳಿಗೆ ನೀಡಿದ ದೇಣಿಗೆಗಳ ಮೇಲಿನ ಕಡಿತ.
ಕೆಳಗಿನ ವರ್ಗಗಳ ಅಡಿಯಲ್ಲಿ ನೀಡಿದ ದೇಣಿಗೆಯು ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ
|
ಮಿತಿರಹಿತ |
|
||||
|
ಅರ್ಹತಾ ಮಿತಿಗೆ ಒಳಪಟ್ಟಂತೆ |
|
ಗಮನಿಸಿ: ಈ ಸೆಕ್ಷನ್ ಅಡಿಯಲ್ಲಿ, ₹2,000 ಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ನೀಡಿದ ದೇಣಿಗೆಗೆ ಯಾವುದೇ ತೆರಿಗೆ ಕಡಿತವನ್ನು ಅನುಮತಿಸಲಾಗುವುದಿಲ್ಲ.
ಸೆಕ್ಷನ್ 80GG
ಮನೆ ಬಾಡಿಗೆಗೆ ಪಾವತಿಸಿದ ಮೊತ್ತದ ಮೇಲೆ ಕಡಿತ ಲಭ್ಯವಿದ್ದು, ಇದು ಕೇವಲ ಸ್ವಯಂ ಉದ್ಯೋಗದಲ್ಲಿರುವವರು ಅಥವಾ ತಮ್ಮ ವೇತನದಲ್ಲಿ ಮನೆ ಬಾಡಿಗೆ ಭತ್ಯೆ (HRA) ಭಾಗವಾಗಿರದವರಿಗೆ ಮಾತ್ರ ಅನ್ವಯಿಸುತ್ತದೆ.
ಈ ಕೆಳಗಿನವುಗಳಲ್ಲಿ ಕನಿಷ್ಠವನ್ನು ತೆರಿಗೆ ಕಡಿತಗಳೆಂದು ಅನುಮತಿಸಲಾಗುತ್ತದೆ
|
ಪಾವತಿಸಿದ ಬಾಡಿಗೆಯ ಮೊತ್ತದಲ್ಲಿ ಈ ತೆರಿಗೆ ಕಡಿತದ ಮೊದಲಿನ ನಿವ್ವಳ ಆದಾಯದ ಶೇ 10% ನ್ನು ಕಳೆದು ಉಳಿದ ಮೊತ್ತ. |
ಪ್ರತಿ ತಿಂಗಳಿಗೆ ₹5,000 |
ಒಟ್ಟು ಆದಾಯದ 25% (ಸೆಕ್ಷನ್ 111A ಅಡಿಯಲ್ಲಿ ಅಲ್ಪಾವಧಿಯ ಬಂಡವಾಳ ಲಾಭಗಳು ಅಥವಾ ಸೆಕ್ಷನ್ 115A ಅಥವಾ 115D ಅಡಿಯಲ್ಲಿನ ಆದಾಯ ಹೊರತುಪಡಿಸಿ) |
ಗಮನಿಸಿ: ಸೆಕ್ಷನ್ 80GG ಅಡಿಯಲ್ಲಿ ಕಡಿತ ಪಡೆಯಲು, ಫ಼ಾರ್ಮ್ 10BA ಅನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆ ಶೆಡ್ಯೂಲ್ 80GG ಯಲ್ಲಿ ಫ಼ಾರ್ಮ್ 10BA ಯ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಬೇಕು.
ಸೆಕ್ಷನ್ 80GGA
ವೈಜ್ಞಾನಿಕ ಸಂಶೋಧನೆ ಅಥವಾ ಗ್ರಾಮೀಣ ಅಭಿವೃದ್ಧಿಗಾಗಿ ನೀಡಿದ ದೇಣಿಗೆಗಳ ಮೇಲಿನ ತೆರಿಗೆ ಕಡಿತ
ಕೆಳಗಿನ ವರ್ಗಗಳಿಗೆ ನೀಡಿದ ದೇಣಿಗೆಯು ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ:
|
ಕೆಳಗಿನ ಉದ್ದೇಶಗಳಿಗಾಗಿ ಇರುವ ಸಂಶೋಧನಾ ಸಂಘ ಅಥವಾ ವಿಶ್ವವಿದ್ಯಾಲಯ, ಕಾಲೇಜು ಅಥವಾ ಇತರ ಸಂಸ್ಥೆ
|
|
ಕೆಳಗಿನ ಉದ್ದೇಶಕ್ಕಾಗಿ ಇರುವ ಸಂಘ ಅಥವಾ ಸಂಸ್ಥೆ
|
|
ಅರ್ಹ ಯೋಜನೆಯನ್ನು ಕೈಗೊಳ್ಳಲು ರಾಷ್ಟ್ರೀಯ ಸಮಿತಿಯಿಂದ ಅನುಮೋದಿಸಲಾದ PSU ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ಯಾವುದೇ ಒಂದು ಸಂಘ ಅಥವಾ ಸಂಸ್ಥೆ |
|
ಈ ಕೆಳಗಿನ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ ಸೂಚಿತ ನಿಧಿ
|
|
ಕೇಂದ್ರ ಸರ್ಕಾರವು ಸ್ಥಾಪಿಸಿ ಮತ್ತು ಅಧಿಸೂಚಿಸಿದಂತೆ ರಾಷ್ಟ್ರೀಯ ನಗರ ಬಡತನ ನಿರ್ಮೂಲನಾ ನಿಧಿ |
|
|
ಗಮನಿಸಿ: ಈ ಸೆಕ್ಷನ್ ಅಡಿಯಲ್ಲಿ, ₹2,000 ಕ್ಕಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ನೀಡಿದ ದೇಣಿಗೆಗೆ ಯಾವುದೇ ತೆರಿಗೆ ಕಡಿತವನ್ನು ಅನುಮತಿಸಲಾಗುವುದಿಲ್ಲ. ಅಥವಾ ಒಟ್ಟು ಗಳಿಕೆಯ ಆದಾಯದಲ್ಲಿ ವ್ಯಾಪಾರ/ವೃತ್ತಿಯಿಂದ ಲಾಭ ಅಥವಾ ಆದಾಯ ಒಳಗೊಂಡಿದ್ದರೆ ಸಹ ಈ ಸೆಕ್ಷನ್ ಅಡಿಯಲ್ಲಿ ಕಡಿತ ಲಭ್ಯವಿರುವುದಿಲ್ಲ. |
ಸೆಕ್ಷನ್ 80GGC
|
ರಾಜಕೀಯ ಪಕ್ಷ ಅಥವಾ ಚುನಾವಣಾ ಟ್ರಸ್ಟ್‌ಗೆ ನೀಡಿದ ದೇಣಿಗೆಗಳ ಮೇಲಿನ ತೆರಿಗೆ ಕಡಿತ |
ರಾಜಕೀಯ ಪಕ್ಷ ಅಥವಾ ಚುನಾವಣಾ ಟ್ರಸ್ಟ್‌ಗೆ ನೀಡಿದ ದೇಣಿಗೆಗಳ ಮೇಲಿನ ತೆರಿಗೆ ಕಡಿತ ನಗದು ರೂಪದಲ್ಲಿ ಯಾವುದೇ ಕೊಡುಗೆ ನೀಡಿದರೆ ಯಾವುದೇ ತೆರಿಗೆ ಕಡಿತವನ್ನು ಅನುಮತಿಸಲಾಗುವುದಿಲ್ಲ |
ಸೆಕ್ಷನ್ 80TTB
|
ನಿವಾಸಿ ಹಿರಿಯ ನಾಗರಿಕರು ಠೇವಣಿಗಳ ಮೇಲೆ ಪಡೆದ ಬಡ್ಡಿಯ ಮೇಲಿನ ತೆರಿಗೆ ಕಡಿತ |
ತೆರಿಗೆ ಕಡಿತದ ಮಿತಿ ₹50,000/- |
ಸೆಕ್ಷನ್ 80U
|
ಅಂಗವೈಕಲ್ಯ ಹೊಂದಿರುವ ನಿವಾಸಿ ತೆರಿಗೆದಾರರಿಗಾಗಿ ತೆರಿಗೆ ಕಡಿತಗಳು (ವಿನಾಯಿತಿಗಳು) |
ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ, ಮಾಡಿದ ವೆಚ್ಚವನ್ನು ಪರಿಗಣಿಸದೆ, ನಿಗದಿತ ₹75,000 ಕಡಿತ. ತೀವ್ರ (80% ಅಥವಾ ಹೆಚ್ಚು)ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ, ಮಾಡಿದ ವೆಚ್ಚವನ್ನು ಪರಿಗಣಿಸದೆ, ನಿಗದಿತ ₹1,25,000 ಕಡಿತ |
ದಯವಿಟ್ಟು ಗಮನಿಸಿ:ಸೆಕ್ಷನ್ 80GG ಅಡಿಯಲ್ಲಿ ಕಡಿತ (Deduction) ಪಡೆಯಲು, Form 10BA ಅನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆ Schedule 80GG ನಲ್ಲಿ Form 10BA ಯ ಅಕ್ನಾಲೆಡ್ಜ್‌ಮೆಂಟ್ ಸಂಖ್ಯೆ (acknowledgement number) ಅನ್ನು ನಮೂದಿಸಬೇಕು.
ಸೆಕ್ಷನ್ 80U ಅಡಿಯಲ್ಲಿ ತೆರಿಗೆ ಕಡಿತವನ್ನು ಕ್ಲೈಮ್ ಮಾಡಲು, ಕೆಳಗೆ ವಿವರಗಳನ್ನು ಒದಗಿಸಬೇಕು.
• ಅಂಗವೈಕಲ್ಯದ ಸ್ವರೂಪ
• ಅಂಗವೈಕಲ್ಯದ ಪ್ರಕಾರ
• ಕಡಿತ ಮೊತ್ತ
• ಸ್ವಲೀನತೆ (Autism), ಮೆದುಳಿನ ಅಂಗವೈಕಲ್ಯ (Cerebral Palsy), ಅಥವಾ ಬಹು ಅಂಗವೈಕಲ್ಯಗಳ ಪ್ರಕರಣದಲ್ಲಿ ಸಲ್ಲಿಸಿದ ಫಾರ್ಮ್ 10 IA ಯ ಸ್ವೀಕೃತಿ ಸಂಖ್ಯೆ
• UDID ಸಂಖ್ಯೆ (ಲಭ್ಯವಿದ್ದರೆ)
ತೆರಿಗೆದಾರರ ವಯಸ್ಸನ್ನು ಪರಿಗಣಿಸದೆ ಹಿರಿಯ / ಅತ್ಯಂತ ಹಿರಿಯ ನಾಗರಿಕರಿಗೆ ತೆರಿಗೆ ಪ್ರಯೋಜನಗಳ ಜೊತೆಗೆ ಕೆಲವು ವರ್ಧಿತ / ಹೆಚ್ಚುವರಿ ಪ್ರಯೋಜನಗಳು ಲಭ್ಯವಿದೆ.
ಆದಾಯ ತೆರಿಗೆ ರಿಟರ್ನ್ ಅನ್ನು ಕಾಗದದ ಮೂಲಕ ಸಲ್ಲಿಸುವುದು
ಅತ್ಯಂತ ಹಿರಿಯ ನಾಗರಿಕರು (80ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ತಮ್ಮ ITR ಅನ್ನು ಫಾರ್ಮ್ 1 ಅಥವಾ 4 ಬಳಸಿ ಆಫ್‌ಲೈನ್ / ಕಾಗದದ ಮೂಲಕ ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ.
ಮುಂಗಡ ತೆರಿಗೆ ಪಾವತಿಸುವುದರಿಂದ ವಿನಾಯಿತಿ
ಆದಾಯ ತೆರಿಗೆ ಕಾಯ್ದೆ, 1961 ರ ಕಲಂ 208 ರ ಪ್ರಕಾರ, ಯಾವುದೇ ವ್ಯಕ್ತಿಯ ಅಂದಾಜು ವಾರ್ಷಿಕ ತೆರಿಗೆ ಬಾಧ್ಯತೆ ₹10,000 ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಅವರು ತಮ್ಮ ತೆರಿಗೆಯನ್ನು ಮುಂಗಡ ತೆರಿಗೆ (Advance Tax) ರೂಪದಲ್ಲಿ ಪಾವತಿಸಬೇಕು. ಆದರೆ, ಆದಾಯ ತೆರಿಗೆ ಕಾಯ್ದೆ, 1961 ರ ಕಲಂ 207 ರ ಅಡಿಯಲ್ಲಿ, ನಿವಾಸಿ ಹಿರಿಯ ನಾಗರಿಕರಿಗೆ ಮುಂಗಡ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ ವ್ಯಾಪಾರ ಅಥವಾ ವೃತ್ತಿಯಿಂದ ಯಾವುದೇ ಆದಾಯವನ್ನು ಹೊಂದಿರದ, ನಿವಾಸಿ ಹಿರಿಯ ನಾಗರಿಕರು, ಮುಂಗಡ ತೆರಿಗೆ ಪಾವತಿಸಲು ಹೊಣೆಗಾರರಾಗಿರುವುದಿಲ್ಲ.
ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿಯ ಮೇಲಿನ ಆದಾಯ ತೆರಿಗೆ ಕಡಿತ
ಆದಾಯ ತೆರಿಗೆ ಕಾಯ್ದೆ, 1961 ರ ಕಲಂ 80TTB ಅನ್ವಯ, ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಅಥವಾ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿಗಳ ಮೇಲೆ ಗಳಿಸಿದ ಬಡ್ಡಿ ಆದಾಯಕ್ಕೆ ತೆರಿಗೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರು ಗಳಿಸುವ ಬಡ್ಡಿ ಆದಾಯದಲ್ಲಿ ಗರಿಷ್ಠ ₹50,000 ವರೆಗೆ ಕಡಿತ (Deduction) ಪಡೆಯಲು ಅವಕಾಶವಿದೆ. ಈ ವಿಧಾನದ ಅಡಿಯಲ್ಲಿ ಉಳಿತಾಯ ಠೇವಣಿಗಳು (Savings Deposits) ಹಾಗೂ ಸ್ಥಿರ ಠೇವಣಿಗಳು (Fixed Deposits) ಎರಡರ ಮೇಲೂ ಗಳಿಸಿದ ಬಡ್ಡಿ ಆದಾಯವು ಕಡಿತಕ್ಕೆ ಅರ್ಹವಾಗಿರುತ್ತದೆ.
ಇದಲ್ಲದೆ, ಆದಾಯ ತೆರಿಗೆ ಕಾಯ್ದೆ, 1961 ರ ಕಲಂ 194A ಅನ್ವಯ, ಬ್ಯಾಂಕ್, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಪಾವತಿಸುವ ಬಡ್ಡಿ ಮೊತ್ತವು ₹50,000 ವರೆಗೆ ಇದ್ದಲ್ಲಿ, ಆ ಮೂಲದಲ್ಲೇ ತೆರಿಗೆ ಕಡಿತ (TDS) ಮಾಡಲಾಗುವುದಿಲ್ಲ. ಈ ₹50,000 ಮಿತಿಯನ್ನು ಪ್ರತಿ ಬ್ಯಾಂಕ್‌ಗೆ ಪ್ರತ್ಯೇಕವಾಗಿ ಲೆಕ್ಕ ಹಾಕಲಾಗುತ್ತದೆ.
ವೈದ್ಯಕೀಯ ವಿಮೆ ಮತ್ತು ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದಂತೆ ತೆರಿಗೆ ಅನುಕೂಲಗಳು
ಆದಾಯ ತೆರಿಗೆ ಕಾಯ್ದೆ, 1961 ರ ಕಲಂ 80D ಪ್ರಕಾರ, ಹಿರಿಯ ನಾಗರಿಕರು ವೈದ್ಯಕೀಯ ವಿಮಾ ಪಾಲಿಸಿಯ (Medical Insurance Policy) ಪ್ರೀಮಿಯಂ ಪಾವತಿಗೆ ಗರಿಷ್ಠ ₹50,000 ವರೆಗೆ ತೆರಿಗೆ ಕಡಿತ (Deduction) ಪಡೆಯಬಹುದು. ಹಿರಿಯರಲ್ಲದ ನಾಗರಿಕರಿಗೆ ಮಿತಿಯು ₹ 25,000 ಆಗಿರುತ್ತದೆ.
ಇದಲ್ಲದೆ, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80DDB ಅನ್ವಯ, ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಲಾದ ಕೆಲವು ವಿಶೇಷ ರೋಗಗಳ ಚಿಕಿತ್ಸೆಗೆ ವ್ಯಕ್ತಿಯು ತನ್ನ ಸ್ವಂತ ಚಿಕಿತ್ಸೆಗೆ ಅಥವಾ ತನ್ನ ಅವಲಂಬಿತರ ಚಿಕಿತ್ಸೆಗೆ ಮಾಡಿದ ವೆಚ್ಚಗಳ ಮೇಲೆ ತೆರಿಗೆ ಕಡಿತ (Deduction) ಪಡೆಯಲು ಅವಕಾಶವಿದೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆ ಗರಿಷ್ಠ ತೆರಿಗೆ ಕಡಿತ ಮೊತ್ತವು ₹ 1 ಲಕ್ಷ ಆಗಿರುತ್ತದೆ (ಹಿರಿಯ ನಾಗರಿಕರಲ್ಲದ ತೆರಿಗೆದಾರರಿಗೆ ₹40,000 ಆಗಿರುತ್ತದೆ).