AY 2026-27 ಕ್ಕೆ ಹಿಂದೂ ಅವಿಭಕ್ತ ಕುಟುಂಬ (HUF)ಕ್ಕೆ ಅನ್ವಯಿಸುವ ರಿಟರ್ನ್‌ಗಳು ಮತ್ತು ಫಾರ್ಮ್‌ಗಳು

ಘೋಷಣೆ: ಈ ಪುಟದಲ್ಲಿರುವ ವಿಷಯವು ಕೇವಲ ಅವಲೋಕನ ಮತ್ತು ಸಾಮಾನ್ಯ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿದ್ದು, ಸಮಗ್ರ ಮಾಹಿತಿಯನ್ನು ಒಳಗೊಂಡಿಲ್ಲ. ಸಂಪೂರ್ಣ ವಿವರಗಳು ಮತ್ತು ಮಾರ್ಗಸೂಚಿಗಳಿಗಾಗಿ ಆದಾಯ ತೆರಿಗೆ ಕಾಯಿದೆ, 1961, ಫಾರ್ಮ್‌ಗಳು, ನಿಯಮಗಳು ಮತ್ತು ಅಧಿಸೂಚನೆಗಳನ್ನು ಪರಿಶೀಲಿಸಿ.

 

 

1. ITR-2 -(ITR-1 ಗೆ ಅರ್ಹರಲ್ಲದ ) ವ್ಯಕ್ತಿ ಮತ್ತು HUF ಗೆ ಅನ್ವಯಿಸುತ್ತದೆ

ಈ ರಿಟರ್ನ್ ವ್ಯಕ್ತಿ ಮತ್ತು ಹಿಂದೂ ಅವಿಭಕ್ತ ಕುಟುಂಬ (HUF)ಗಳಿಗೆ ಅನ್ವಯಿಸುತ್ತದ

ವ್ಯವಹಾರ ಅಥವಾ ವೃತ್ತಿಯಿಂದ ಲಾಭ ಮತ್ತು ಆದಾಯವನ್ನು ಹೊರತುಪಡಿಸಿ ಇತರೆ ಯಾವುದೇ ಶೀರ್ಷಿಕೆಯಡಿ ಆದಾಯ ಹೊಂದಿರುವವರು.

ITR-1 ಅನ್ನು ಸಲ್ಲಿಸಲು ಯಾರು ಅರ್ಹರಲ್ಲ (ವ್ಯಕ್ತಿಗೆ ಮಾತ್ರ ಅನ್ವಯಿಸುತ್ತದೆ)

 

 

2. ITR-3 - ವ್ಯಕ್ತಿ ಮತ್ತು HUF ಗೆ ಅನ್ವಯಿಸುತ್ತದೆ

ಈ ರಿಟರ್ನ್ ವ್ಯಕ್ತಿ ಮತ್ತು ಹಿಂದೂ ಅವಿಭಕ್ತ ಕುಟುಂಬ (HUF)ಗಳಿಗೆ ಅನ್ವಯಿಸುತ್ತದೆ.

ವ್ಯಾಪಾರ ಅಥವಾ ವೃತ್ತಿಯ ಲಾಭಗಳು ಮತ್ತು ವರಮಾನಗಳ ಅಡಿಯಲ್ಲಿ ಆದಾಯವನ್ನು ಹೊಂದಿರುವವರು

ITR-1, ITR-2 ಅಥವಾ ITR-4 ಅನ್ನು ಫೈಲಿಂಗ್ ಮಾಡಲು ಅರ್ಹರಲ್ಲದವರು

 

3.ITR-4 (ಸುಗಮ್) - ವ್ಯಕ್ತಿ, HUF ಮತ್ತು ವ್ಯವಹಾರ ಸಂಸ್ಥೆಗೆ ಅನ್ವಯಿಸುತ್ತದೆ (LLP ಹೊರತಪಡಿಸಿ)

ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬ (HUF), ನಿವಾಸಿ (Resident) ಆಗಿದ್ದು ಸಾಮಾನ್ಯ ನಿವಾಸಿಯಲ್ಲದ (Not Ordinarily Resident) ಅಲ್ಲದವರು ಅಥವಾ ₹ 50 ಲಕ್ಷದವರೆಗಿನ ಒಟ್ಟು ಆದಾಯ ಹೊಂದಿರುವ ಮತ್ತು ವ್ಯಾಪಾರ ಅಥವಾ ವೃತ್ತಿಯಿಂದ ಆದಾಯವನ್ನು ಹೊಂದಿರುವ (LLP ಹೊರತುಪಡಿಸಿದ) ನಿವಾಸಿ (Resident) ಸಂಸ್ಥೆಗೆ (ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 44AD / 44ADA / 44AE ಗಳ ಅಡಿಯಲ್ಲಿ) ಈ ರಿಟರ್ನ್ ಅನ್ವಯವಾಗುವುದಾಗಿದ್ದು, ಇದನ್ನು ಸಂಭಾವ್ಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ ಮತ್ತು ಈ ಕೆಳಗಿನ ಯಾವುದೇ ಮೂಲಗಳಿಂದ ಆದಾಯ ಹೊಂದಿದ್ದರೆ ಅನ್ವಯಿಸುತ್ತದೆ:

ಸಂಬಳ / ಪಿಂಚಣಿ

ಒಂದು ಮನೆಯ ಆಸ್ತಿ

ಇತರ ಮೂಲಗಳು (ಬಡ್ಡಿ, ಕುಟುಂಬ ಪಿಂಚಣಿ ಲಾಭಾಂಶ ಇತ್ಯಾದಿ).

ಕೃಷಿ ಆದಾಯ ₹ 5,000 ವರೆಗೆ

ಆದಾಯ ತೆರಿಗೆ ಕಾಯಿದೆ, 1961 ಸೆಕ್ಷನ್ 112A ಅಡಿಯಲ್ಲಿ ಬಂಡವಾಳ ಲಾಭದ ಆದಾಯ ರೂ. 125000 ವರೆಗೆ

 

 

ಸೂಚನೆ: 1

ITR-4 ಕೆಳಗಿನ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ:

  1. ಕಂಪನಿಯ ನಿರ್ದೇಶಕರಾಗಿರುವವರು

     

  2. ಅಲ್ಪಾವಧಿಯ ಬಂಡವಾಳ ಲಾಭವನ್ನು ಹೊಂದಿರುವವರು

     

  3. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 112A ಅಡಿಯಲ್ಲಿ ₹1.25 ಲಕ್ಷಕ್ಕಿಂತ ಹೆಚ್ಚಿನ ದೀರ್ಘಾವಧಿ ಬಂಡವಾಳ ಲಾಭ (Long-Term Capital Gain) ಹೊಂದಿರುವವರು.

     

  4. ಹಿಂದಿನ ಆರ್ಥಿಕ ವರ್ಷದ ಯಾವುದೇ ಸಮಯದಲ್ಲಿ ಪಟ್ಟಿಗೆ ಸೇರಿಸದ ಈಕ್ವಿಟಿ ಷೇರುಗಳನ್ನು (Unlisted Equity Shares) ಹೊಂದಿದ್ದವರು

     

  5. ಭಾರತ ಹೊರಗಿನ ಯಾವುದೇ ಆಸ್ತಿ (ಯಾವುದೇ ಸಂಸ್ಥೆಯಲ್ಲಿನ ಹಣಕಾಸು ಹಿತಾಸಕ್ತಿ ಸೇರಿ) ಹೊಂದಿರುವವರು.

     

  6. ಭಾರತ ಹೊರಗಿನ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರ ಹೊಂದಿರುವವರು

     

  7. ಭಾರತ ಹೊರಗಿನ ಯಾವುದೇ ಮೂಲದಿಂದ ಆದಾಯ ಹೊಂದಿರುವವರು.

     

  8. ESOP ಮೇಲೆ ತೆರಿಗೆ ಪಾವತಿ ಅಥವಾ ತೆರಿಗೆ ಕಡಿತವನ್ನು ಮುಂದೂಡಿರುವ ಪ್ರಕರಣ ಹೊಂದಿರುವವರು.

     

  9. ಯಾವುದೇ ಆದಾಯ ಶೀರ್ಷಿಕೆಯಡಿಯಲ್ಲಿ ಮುಂದೂಡಲಾದ ನಷ್ಟ (Brought Forward Loss) ಅಥವಾ ಮುಂದಕ್ಕೆ ಸಾಗಿಸಬೇಕಾದ ನಷ್ಟ (Carry Forward Loss) ಹೊಂದಿರುವವರು.

     

  10. ಒಟ್ಟು ಆದಾಯ ₹50 ಲಕ್ಷಕ್ಕಿಂತ ಹೆಚ್ಚು ಹೊಂದಿರುವವರು.

     


ಸೂಚನೆ:2

ITR-4 (ಸುಗಮ್) ಕಡ್ಡಾಯವಲ್ಲ. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 44AD, 44ADA ಅಥವಾ 44AE ಅಡಿಯಲ್ಲಿ ಸಂಭಾವ್ಯಾಧಾರಿತ ವಿಧಾನದಲ್ಲಿ ವ್ಯಾಪಾರ ಮತ್ತು ವೃತ್ತಿಯಿಂದ ಲಾಭ ಹಾಗೂ ಆದಾಯವನ್ನು ಘೋಷಿಸಲು ಅರ್ಹರಾಗಿರುವ ತೆರಿಗೆದಾರರು (Assessee), ತಮ್ಮ ಆಯ್ಕೆಯಂತೆ ಈ ಸರಳೀಕೃತ ರಿಟರ್ನ್ ಫಾರ್ಮ್ ಅನ್ನು ಬಳಸಬಹುದು.

 

 

ಅನ್ವಯಿಸುವ ಫಾರ್ಮ್‌ಗಳು (ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ)

 

 

1. ಫಾರ್ಮ್ 16A – ವೇತನ ಅಲ್ಲದೆ ಇತರ ಆದಾಯದ ಮೇಲಿನ TDS ಗಾಗಿ ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್‌ 203 ಅಡಿಯಲ್ಲಿ ನೀಡುವ ಪ್ರಮಾಣಪತ್ರ

ಒದಗಿಸುವವರು:

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು:

ತೆರಿಗೆ ಕಡಿತದಾರರಿಂದ ತೆರಿಗೆ ಕಡಿತದಾರರಿಗೆ

ಫಾರ್ಮ್ 16A ಎಂಬುದು ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (TDS) ಪ್ರಮಾಣಪತ್ರವಾಗಿದ್ದು, ಇದು TDS, ಪಾವತಿಗಳ ಸ್ವರೂಪ ಮತ್ತು TDS ಅನ್ನು ಸಂಬಳ ಹೊರತುಪಡಿಸಿ ಆದಾಯದ ಮೇಲೆ ಆದಾಯ ತೆರಿಗೆ ಇಲಾಖೆಯಲ್ಲಿ ಠೇವಣಿ ಇರುವುದನ್ನು ಸೂಚಿಸುತ್ತದೆ.

 

 

2.

ಫಾರ್ಮ್‌ 26 AS

AIS (ವಾರ್ಷಿಕ ಮಾಹಿತಿ ಸ್ಟೇಟ್‌ಮೆಂಟ್)

ಒದಗಿಸಿದವರು:

ಆದಾಯ ತೆರಿಗೆ ಇಲಾಖೆ (ಇದು e-Filing ಪೋರ್ಟಲ್‌ನಲ್ಲಿ ಲಭ್ಯವಿದೆ:

ಲಾಗಿನ್ > ಇ-ಫೈಲ್ > ಆದಾಯ ತೆರಿಗೆ ರಿಟರ್ನ್ > 26AS ಫಾರ್ಮ ನೋಡಿ

ಫಾರ್ಮ್‌ನಲ್ಲಿ ನೀಡಿರುವ ವಿವರಗಳು:

ಮೂಲದಲ್ಲೇ ಕಡಿತಗೊಂಡ/ಸಂಗ್ರಹಿಸಿದ ತೆರಿಗೆ

ಒದಗಿಸಿದವರು:

ಆದಾಯ ತೆರಿಗೆ ಇಲಾಖೆ (ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಇದನ್ನು ಪ್ರವೇಶಿಸಬಹುದು)

ಇ-ಫೈಲಿಂಗ್ ಪೋರ್ಟಲ್ > ಲಾಗಿನ್ > AIS ಗೆ ಹೋಗಿ

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು:

  • ಮೂಲದಲ್ಲೇ ಕಡಿತಗೊಂಡ/ಸಂಗ್ರಹಿಸಿದ ತೆರಿಗೆ
  • SFT ಮಾಹಿತಿ
  • ತೆರಿಗೆ ಪಾವತಿ
  • ಬೇಡಿಕೆ / ಮರುಪಾವತಿ

ಇತರೆ ಮಾಹಿತಿ (ಉದಾಹರಣೆಗೆ ಬಾಕಿ ಇರುವ/ಪೂರ್ಣಗೊಂಡ ಪ್ರಕರಣಗಳು, GST ಮಾಹಿತಿ, ವಿದೇಶಿ ಸರ್ಕಾರದಿಂದ ಪಡೆದ ಮಾಹಿತಿ ಇತ್ಯಾದಿ)

 

 

3. ಫಾರ್ಮ್ 15G - ತೆರಿಗೆ ಕಡಿತವಿಲ್ಲದೆ ಕೆಲವು ರಶೀದಿಗಳನ್ನು ಕ್ಲೈಮ್ ಮಾಡುವ ನಿವಾಸಿ ತೆರಿಗೆದಾರ ಘೋಷಣೆ (ಕಂಪನಿ ಅಥವಾ ಸಂಸ್ಥೆಯಾಗಿರಬಾರದು).

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವಾಸಿ ಅಥವಾ HUF ಅಥವಾ ಯಾವುದೇ ಇತರ ವ್ಯಕ್ತಿ (ಕಂಪನಿ/ಸಂಸ್ಥೆಯನ್ನು ಹೊರತುಪಡಿಸಿ) ತಮ್ಮ ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೆ, ಬಡ್ಡಿ ಆದಾಯದ ಮೇಲೆ TDS ಕಡಿತಗೊಳಿಸದಂತೆ ಬ್ಯಾಂಕಿಗೆ ಸಲ್ಲಿಸುವ ಮನವಿ

ಹಣಕಾಸು ವರ್ಷಕ್ಕೆ ಅಂದಾಜು ಆದಾಯ

 

 

4.ಫಾರ್ಮ್ 67- ಭಾರತದ ಹೊರಗಿನ ದೇಶ ಅಥವಾ ನಿರ್ದಿಷ್ಟ ಪ್ರದೇಶದಿಂದ ಆದಾಯದ ಸ್ಟೇಟ್‌ಮೆಂಟ್ ಮತ್ತು ವಿದೇಶಿ ತೆರಿಗೆ ಕ್ರೆಡಿಟ್

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ತೆರಿಗೆದಾರರು, ಸೆಕ್ಷನ್ 139(1) ಅಡಿಯಲ್ಲಿ ITR ಗಳನ್ನು ಸಲ್ಲಿಸುವುದಕ್ಕಾಗಿ ನಿರ್ದಿಷ್ಟಪಡಿಸಿದ ನಿಗದಿತ ದಿನಾಂಕದಂದು ಅಥವಾ ಅದಕ್ಕೂ ಮೊದಲು ಒದಗಿಸಬೇಕು.

ಭಾರತದ ಹೊರಗಿನ ದೇಶ ಅಥವಾ ನಿರ್ದಿಷ್ಟ ಪ್ರದೇಶಗಳಿಂದ ಗಳಿಸಿದ ಆದಾಯ ಮತ್ತು ಭರಿಸಿದ ತೆರಿಗೆಯ ವಿವರವಾದ ಮಾಹಿತಿ ಒದಗಿಸುವ ಫ಼ಾರ್ಮ್

 

 

5. ಫಾರ್ಮ್‌ 3CB-3CD

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಸೆಕ್ಷನ್ 44AB ಅಡಿಯಲ್ಲಿ ಲೆಕ್ಕಪರಿಶೋಧಕರಿಂದ ತನ್ನ ಲೆಕ್ಕಪತ್ರಗಳನ್ನು ಆಡಿಟ್ ಮಾಡಿಸಬೇಕಾದ ತೆರಿಗೆದಾರರು.

ಸೆಕ್ಷನ್ 139 ರ ಸಬ್-ಸೆಕ್ಷನ್ (1) ರ ಅಡಿಯಲ್ಲಿ ಆದಾಯದ ರಿಟರ್ನ್ ಅನ್ನು ಸಲ್ಲಿಸುವುದಕ್ಕಾಗಿ ನಿಗದಿತ ದಿನಾಂಕಕ್ಕಿಂತ ಒಂದು ತಿಂಗಳ ಮೊದಲು ಒದಗಿಸಬೇಕು.

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 44AB ಅಡಿಯಲ್ಲಿ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯ ವರದಿ (ಫಾರ್ಮ್ 3CB) ಮತ್ತು ವಿವರಗಳ ಹೇಳಿಕೆ (ಫಾರ್ಮ್ 3CD) ಒದಗಿಸಬೇಕಾದ ಅಗತ್ಯವಿದೆ.

 

6. ಫಾರ್ಮ್ 3CEB

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 92E ಅಡಿಯಲ್ಲಿ, ಅಂತರರಾಷ್ಟ್ರೀಯ ವಹಿವಾಟು ಅಥವಾ ನಿರ್ದಿಷ್ಟ ದೇಶೀಯ ವಹಿವಾಟು ನಡೆಸುವ ತೆರಿಗೆದಾರರು ಚಾರ್ಟರ್ಡ್ ಅಕೌಂಟೆಂಟ್‌ನಿಂದ ವರದಿಯನ್ನು ಪಡೆಯುವುದು ಕಡ್ಡಾಯವಾಗಿದೆ.

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139 ರ ಉಪವಿಭಾಗ (1) ಅಡಿಯಲ್ಲಿ ಆದಾಯ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿ ಸಲ್ಲಿಸಬೇಕು.

ಎಲ್ಲಾ ಅಂತರರಾಷ್ಟ್ರೀಯ ವಹಿವಾಟು(ಗಳು) ಮತ್ತು ನಿರ್ದಿಷ್ಟಪಡಿಸಿದ ದೇಶೀಯ ವಹಿವಾಟು(ಗಳ) ವಿವರಗಳನ್ನು ಒಳಗೊಂಡಿರುವ ಚಾರ್ಟರ್ಡ್ ಅಕೌಂಟೆಂಟ್ ವರದಿ.

 

 

ಹಣಕಾಸು ವರ್ಷ 2026-2027ರ ತೆರಿಗೆ ಹಂತಗಳು

 

 

ಹೊಸ ತೆರಿಗೆ ವ್ಯವಸ್ಥೆ vs ಹಳೆಯ ತೆರಿಗೆ ವ್ಯವಸ್ಥೆ

  • ಆರ್ಥಿಕ ಕಾಯ್ದೆ 2023 ರ ಮೂಲಕ ಸೆಕ್ಷನ್ 115BAC ನ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಅಸೆಸ್ಮೆಂಟ್ ವರ್ಷ 2024-25 ರಿಂದ ಹೊಸ ತೆರಿಗೆ ವ್ಯವಸ್ಥೆಯನ್ನು ವ್ಯಕ್ತಿ, ಹಿಂದೂ ಅವಿಭಕ್ತ ಕುಟುಂಬ (HUF), AOP (ಸಹಕಾರಿ ಸಂಘಗಳನ್ನು ಹೊರತುಪಡಿಸಿ), ವ್ಯಕ್ತಿಗಳ ಗುಂಪು (BOI) ಅಥವಾ ಕೃತಕ ಕಾನೂನು ವ್ಯಕ್ತಿ (Artificial Juridical Person)ಗಳಿಗೆ ಮೂಲ (default) ತೆರಿಗೆ ವ್ಯವಸ್ಥೆಯಾಗಿ ಮಾಡಲಾಗಿದೆ. ಆದರೆ ಅರ್ಹ ತೆರಿಗೆದಾರರಿಗೆ ಈ ಮೂಲ ವ್ಯವಸ್ಥೆಯಿಂದ ಹೊರಬಂದು ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ಅವಕಾಶವಿದೆ. ಹಳೆಯ ತೆರಿಗೆ ವ್ಯವಸ್ಥೆ ಎಂದರೆ ಹೊಸ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸುವ ಮೊದಲು ಇದ್ದ ಆದಾಯ ತೆರಿಗೆ ಲೆಕ್ಕಾಚಾರ ಮತ್ತು ತೆರಿಗೆ ಸ್ಲ್ಯಾಬ್‌ಗಳ ವ್ಯವಸ್ಥೆ. ಹಳೆಯ ವ್ಯವಸ್ಥೆಯಲ್ಲಿ ತೆರಿಗೆದಾರರು ವಿವಿಧ ತೆರಿಗೆ ಕಡಿತಗಳು ಮತ್ತು ವಿನಾಯಿತಿಗಳನ್ನು ಪಡೆಯುವ ಅವಕಾಶ ಹೊಂದಿರುತ್ತಾರೆ. ಆದರೆ ಮೂಲ ತೆರಿಗೆ ವ್ಯವಸ್ಥೆಯಲ್ಲಿ ಹಳೆಯ ವ್ಯವಸ್ಥೆಯಿಗಿಂತ ತೆರಿಗೆ ದರಗಳು ಕಡಿಮೆ ಇರುತ್ತವೆ.

ವ್ಯಾಪಾರವಲ್ಲದ ಪ್ರಕರಣಗಳು:

  • "ವ್ಯಾಪಾರವಲ್ಲದ ಪ್ರಕರಣಗಳಲ್ಲಿ", ಮೂಲ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸುವ ಆಯ್ಕೆಯನ್ನು ಪ್ರತಿ ವರ್ಷ ನೇರವಾಗಿ ITR ನಲ್ಲಿ ಬಳಸಬಹುದು. ಅಂತಹ ITR ಅನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139(1) ಅಡಿಯಲ್ಲಿ ನಿಗದಿಪಡಿಸಿದ ಅಂತಿಮ ದಿನಾಂಕದೊಳಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಸಲ್ಲಿಸಬೇಕು.

ವ್ಯಾಪಾರ ಮತ್ತು ವೃತ್ತಿ ಪ್ರಕರಣಗಳು:

  • ವ್ಯಾಪಾರ ಮತ್ತು ವೃತ್ತಿಯಿಂದ ಆದಾಯ ಹೊಂದಿರುವ ಅರ್ಹ ತೆರಿಗೆದಾರರು, ಮೂಲ ತೆರಿಗೆ ವ್ಯವಸ್ಥೆಯಿಂದ (default tax regime) ಹೊರಬರಲು ಬಯಸಿದರೆ, ಅವರು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139(1) ಅಡಿಯಲ್ಲಿ ಆದಾಯ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕದೊಳಗೆ ಅಥವಾ ಅದಕ್ಕೂ ಮುಂಚಿತವಾಗಿ Form 10-IEA ಅನ್ನು ಸಲ್ಲಿಸಬೇಕು. ಅಂತೆಯೇ, ಈ ಆಯ್ಕೆಯನ್ನು ಹಿಂಪಡೆಯಲು ಅಂದರೆ ಮತ್ತೆ ಹೊಸ ತೆರಿಗೆ ವ್ಯವಸ್ಥೆಗೆ (new tax regime) ಸೇರುವುದಕ್ಕೂ ಸಹ Form 10-IEA ಅನ್ನು ಸಲ್ಲಿಸುವ ಮೂಲಕವೇ ಮಾಡಬೇಕು.
  • ಆದರೆ, ಹಳೆಯ ತೆರಿಗೆ ವ್ಯವಸ್ಥೆಯಿಂದ ಹೊರಬಂದು ಮತ್ತೆ ಮೂಲ (default) ಹೊಸ ತೆರಿಗೆ ವ್ಯವಸ್ಥೆಗೆ ಮರಳುವ ಆಯ್ಕೆಯನ್ನು ಕೇವಲ ಮುಂದಿನ ಅಸೆಸ್ಮೆಂಟ್ ವರ್ಷದಲ್ಲಿ ಮಾತ್ರ ಬಳಸಬಹುದು. ಜೊತೆಗೆ, ವ್ಯಾಪಾರ ಮತ್ತು ವೃತ್ತಿಯಿಂದ ಆದಾಯ ಹೊಂದಿರುವ ಅರ್ಹ ತೆರಿಗೆದಾರರಿಗೆ ಈ ಆಯ್ಕೆಯನ್ನು ಜೀವನದಲ್ಲಿ ಕೇವಲ ಒಮ್ಮೆ ಮಾತ್ರ ಬಳಸಲು ಅವಕಾಶವಿದೆ.

 

ತೆರಿಗೆ ಹಂತಗಳು

HUFಗಳಿಗೆ (ನಿವಾಸಿ ಅಥವಾ ಅನಿವಾಸಿ) ಕಳೆದ ವರ್ಷದ ತೆರಿಗೆ ದರಗಳು ಈ ಕೆಳಗಿನಂತಿವೆ:

ಹಳೆಯ ತೆರಿಗೆ ಪದ್ಧತಿ

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ದತಿ

ಆದಾಯ ತೆರಿಗೆ ಸ್ಲ್ಯಾಬ್

ಆದಾಯ ತೆರಿಗೆ ದರ

 

ಆದಾಯ ತೆರಿಗೆ ಸ್ಲ್ಯಾಬ್

ಆದಾಯ ತೆರಿಗೆ ದರ

₹ 2,50,000 ವರೆಗೆ

ಶೂನ್ಯ

 

₹ 4,00,000 ಗಳವರೆಗೆ

ಶೂನ್ಯ

₹ 2,50,001 - ₹ 5,00,000

₹ 2,50,000 ಕ್ಕಿಂತ ಮೇಲ್ಪಟ್ಟು 5%

 

₹ 4,00,001 - ₹ 8,00,000

₹ 4,00,000 ಮೇಲ್ಪಟ್ಟು 5%

₹ 5,00,001 - ₹ 10,00,000

₹5,00,000 ಮೇಲ್ಪಟ್ಟು ₹12,500 20%

 

₹ 8,00,001 - ₹ 12,00,000

₹ 8,00,000 ಮೇಲ್ಪಟ್ಟು ₹ 20,000 10%

₹ 10,00,000 ಮೇಲ್ಪಟ್ಟು

₹ 10,00,000 ಮೇಲ್ಪಟ್ಟು ₹ 1,12,500 30%

 

₹ 12,00,001 - ₹ 16,00,000

₹ 12,00,000 ಮೇಲ್ಪಟ್ಟು ₹ 60,000 15%

 

₹ 16,00,001 - ₹ 20,00,000

₹ 16,00,000 ₹ 1,20,000 20%

 

₹ 20,00,001 - ₹ 24,00,000

₹ 20,00,000 ₹ 2,00,000 25%

₹ 24,00,000 ಮೇಲ್ಪಟ್ಟು

₹ 24,00,000 ಮೇಲ್ಪಟ್ಟು ₹ 3,00,000 30%

 

 

ಅನ್ವಯಿಸುವ ಸರ್‌ಚಾರ್ಜ್ ದರಗಳು:

 

      

 

          ಅದಾಯ ಮಿತಿ

  ಆದಾಯ ತೆರಿಗೆ ಮೊತ್ತದ ಮೇಲೆ ವಿಧಿಸಲಾಗುವ ಸರ್‌ಚಾರ್ಜ್ ದರ

 

        (ಹೊಸ ತೆರಿಗೆ ಪದ್ದತಿ)

ಆದಾಯ ತೆರಿಗೆ ಮೊತ್ತದ ಮೇಲೆ ವಿಧಿಸಲಾಗುವ ಸರ್‌ಚಾರ್ಜ್ ದರ  

 

       (ಹಳೆಯ ತೆರಿಗೆ ಪದ್ದತಿ)

 

ರೂ.50 ಲಕ್ಷ ಗಳವರೆಗೆ

ಶೂನ್ಯ

ಶೂನ್ಯ

₹50 ಲಕ್ಷದಿಂದ ₹1 ಕೋಟಿವರೆಗೆ

10%

10%

₹1 ಕೋಟಿಯಿಂದ ₹2 ಕೋಟಿವರೆಗೆ

15%

15%

₹2 ಕೋಟಿಯಿಂದ ₹5 ಕೋಟಿವರೆಗೆ

25%

25%

ರೂ. 5 ಕೋಟಿಗಳಿಗಿಂತ ಹೆಚ್ಚು

25%

37%

 

*ಗಮನಿಸಿ: ಹೆಚ್ಚಿಸಿದ ಸರ್‌ಚಾರ್ಜ್ ದರವಾದ 25% ಮತ್ತು 37% ಅನ್ನು, ಸಂದರ್ಭಾನುಸಾರವಾಗಿ, ಸೆಕ್ಷನ್ 111A, 112, 112A ಅಡಿಯಲ್ಲಿ ತೆರಿಗೆಗೊಳಪಟ್ಟ ಆದಾಯ ಹಾಗೂ ಲಾಭಾಂಶ ಆದಾಯ (Dividend Income) ಮೇಲೆ ವಿಧಿಸಲಾಗುವುದಿಲ್ಲ. ಆದ್ದರಿಂದ, ಇಂತಹ ಆದಾಯಗಳ ಮೇಲೆ ಪಾವತಿಸಬೇಕಾದ ತೆರಿಗೆಯ ಗರಿಷ್ಠ ಹೆಚ್ಚುವರಿ ತೆರಿಗೆ ದರ 15% ಆಗಿರುತ್ತದೆ. ಆದರೆ ಆದಾಯವು ಸೆಕ್ಷನ್ 115A, 115AB, 115AC, 115ACA ಮತ್ತು 115E ಅಡಿಯಲ್ಲಿ ತೆರಿಗೆಗೊಳಪಟ್ಟ ಸಂದರ್ಭಗಳಲ್ಲಿ ಇದು ಅನ್ವಯಿಸುವುದಿಲ್ಲ.

 

 

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 87A ಅಡಿಯಲ್ಲಿ ಅನ್ವಯಿಸುವ ರಿಯಾಯಿತಿ: ನಿವಾಸಿ ವ್ಯಕ್ತಿಗಳು (Resident Individuals) ಕೂಡ, ತೆರಿಗೆ ವ್ಯವಸ್ಥೆಯ ಪ್ರಕಾರ ನಿಗದಿಯಾದ ಮಿತಿಯೊಳಗೆ, ಆದಾಯ ತೆರಿಗೆಯ ಮೇಲೆ ಗರಿಷ್ಠ 100% ವರೆಗೆ ರಿಯಾಯಿತಿ (Rebate) ಪಡೆಯಲು ಅರ್ಹರಾಗಿರುತ್ತಾರೆ. ಕೆಳಗಿನಂತೆ ಮಿತಿಗಳು ಅನ್ವಯಿಸುತ್ತವೆ:

ತೆರಿಗೆ ಪದ್ಧತಿ

ರಿಯಾಯತಿ ಮಿತಿ

ರಿಯಾಯತಿ ಷರತ್ತು

ಹೊಸ ತೆರಿಗೆ ಪದ್ದತಿ

₹ 60,000

ತೆರಿಗೆಯನ್ನು ವಿಧಿಸಬಹುದಾದ ಆದಾಯವು 12,00000 ಮೀರುವಂತಿಲ್ಲ.

ಹಳೆಯ ತೆರಿಗೆ ಪದ್ಧತಿ

₹ 12,500

ತೆರಿಗೆಯನ್ನು ವಿಧಿಸಬಹುದಾದ ಆದಾಯ 5,00000 ಮೀರುವಂತಿಲ್ಲ

 

***ಗಮನಿಸಿ: ಆರೋಗ್ಯ ಮತ್ತು ಶಿಕ್ಷಣ ಸೆಸ್ ಅನ್ನು 4% ದರದಲ್ಲಿ, ಎರಡೂ ತೆರಿಗೆ ವ್ಯವಸ್ಥೆಗಳಲ್ಲಿ, ಆದಾಯ ತೆರಿಗೆಯ ಮೊತ್ತ ಹಾಗೂ ಸರ್‌ಚಾರ್ಜ್ ಇದ್ದರೆ ಅದನ್ನೂ ಸೇರಿಸಿ ಒಟ್ಟು ಮೊತ್ತದ ಮೇಲೆ ಪಾವತಿಸಬೇಕು.

 

ಆದಾಯವು ಕ್ರಮವಾಗಿ ₹50 ಲಕ್ಷ, ₹1 ಕೋಟಿ, ₹2 ಕೋಟಿ ಅಥವಾ ₹5 ಕೋಟಿಯನ್ನು ಮೀರಿದಾಗ, ಅನ್ವಯಿಸುವ ಸಂದರ್ಭಗಳಲ್ಲಿ, ಸರ್‌ಚಾರ್ಜ್ ಕಾರಣದಿಂದ ಉಂಟಾಗುವ ಹೆಚ್ಚುವರಿ ತೆರಿಗೆ ಭಾರವನ್ನು ಕಡಿಮೆ ಮಾಡಲು ಕನಿಷ್ಠ ಪರಿಹಾರ (Marginal Relief) ಅನ್ನು ಕ್ಲೈಮ್ ಮಾಡಬಹುದು.

ನಿವ್ವಳ ಆದಾಯದ ಶ್ರೇಣಿ

ಕನಿಷ್ಠ ಪರಿಹಾರ

ಮೀರಿದ್ದರೆ (ರೂ )

ಮೀರದಿದ್ದರೆ(ರೂ )

50 ಲಕ್ಷ

1 ಕೋಟಿ

ಆದಾಯ ತೆರಿಗೆ ಮತ್ತು ಸರ್‌ಚಾರ್ಜ್ ಆಗಿ ಪಾವತಿಸಬೇಕಾದ ಮೊತ್ತವು 50 ಲಕ್ಷದ ಒಟ್ಟು ಆದಾಯದ ಮೇಲೆ ಆದಾಯ ತೆರಿಗೆಯಾಗಿ ಪಾವತಿಸಬೇಕಾದ ಒಟ್ಟು ಮೊತ್ತ 50 ಲಕ್ಷಗಳನ್ನು ಮೀರಿದ ಮೊತ್ತಕ್ಕಿಂತ ಹೆಚ್ಚಿಬಾರದು.

1 ಕೋಟಿ

2 ಕೋಟಿಗಳು

ಆದಾಯ ತೆರಿಗೆ ಮತ್ತು ಸರ್‌ಚಾರ್ಜ್ ಆಗಿ ಪಾವತಿಸಬೇಕಾದ ಮೊತ್ತವು 1 ಕೋಟಿಯ ಒಟ್ಟು ಆದಾಯದ ಮೇಲೆ ಆದಾಯ ತೆರಿಗೆಯಾಗಿ ಪಾವತಿಸಬೇಕಾದ ಒಟ್ಟು ಮೊತ್ತವು 1 ಕೋಟಿಯನ್ನು ಮೀರಿದ ಮೊತ್ತಕ್ಕಿಂತ ಹೆಚ್ಚಿಬಾರದು.

2 ಕೋಟಿಗಳು

5 ಕೋಟಿಗಳು

ಆದಾಯ ತೆರಿಗೆ ಮತ್ತು ಸರ್‌ಚಾರ್ಜ್ ಆಗಿ ಪಾವತಿಸಬೇಕಾದ ಮೊತ್ತವು 2 ಕೋಟಿಯ ಒಟ್ಟು ಆದಾಯದ ಮೇಲೆ ಆದಾಯ ತೆರಿಗೆಯಾಗಿ ಪಾವತಿಸಬೇಕಾದ ಒಟ್ಟು ಮೊತ್ತವು 2 ಕೋಟಿಯನ್ನು ಮೀರಿದ ಮೊತ್ತಕ್ಕಿಂತ ಹೆಚ್ಚಿಬಾರದು.

5 ಕೋಟಿಗಳು

-

ಆದಾಯ ತೆರಿಗೆ ಮತ್ತು ಸರ್‌ಚಾರ್ಜ್ ಆಗಿ ಪಾವತಿಸಬೇಕಾದ ಮೊತ್ತವು 5 ಕೋಟಿಯ ಒಟ್ಟು ಆದಾಯದ ಮೇಲೆ ಆದಾಯ ತೆರಿಗೆಯಾಗಿ ಪಾವತಿಸಬೇಕಾದ ಒಟ್ಟು ಮೊತ್ತವು 5 ಕೋಟಿಯನ್ನು ಮೀರಿದ ಮೊತ್ತಕ್ಕಿಂತ ಹೆಚ್ಚಿಬಾರದು.

 

ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ ಅಡಿಯಲ್ಲಿ ತೆರಿಗೆದಾರರು ತೆರಿಗೆ ಪ್ರಯೋಜನವನ್ನು ಪಡೆಯಬಹುದಾದ ಹೂಡಿಕೆಗಳು / ಪಾವತಿಗಳು / ಆದಾಯಗಳು

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 115BAC (1A) ಅಡಿಯಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೆ ಲಭ್ಯವಿರುವ ಕಡಿತಗಳು (Deductions):

ಸೆಕ್ಷನ್ 24(b) – ಗೃಹ ಸಾಲದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ ಮನೆ ಆಸ್ತಿ ಆದಾಯದಿಂದ ಕಡಿತ.

 

ಆಸ್ತಿಯ ಸ್ವರೂಪ

ಸಾಲದ ಉದ್ದೇಶ

ಅನುಮತಿಸಬಹುದಾದ (ಗರಿಷ್ಠ ಮಿತಿ)

ಅಗತ್ಯವಿರುವ ವಿವರಗಳು

ಬಾಡಿಗೆಗೆ ಕೊಟ್ಟಿರುವ

ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ

ಯಾವುದೇ ಮಿತಿಯಿಲ್ಲದ ವಾಸ್ತವಿಕ ಮೌಲ್ಯ (ಆದರೆ "ಮನೆ ಆಸ್ತಿಯಿಂದ ಬರುವ ಆದಾಯ" ಎಂಬ ಶೀರ್ಷಿಕೆಯಡಿಯಲ್ಲಿ ನಷ್ಟವಿದ್ದರೆ ಅದನ್ನು CYLA ವೇಳಾಪಟ್ಟಿಯಲ್ಲಿರುವ ಯಾವುದೇ ಇತರ ಶೀರ್ಷಿಕೆಗಳ ವಿರುದ್ಧ ಹೊಂದಿಸಲಾಗುವುದಿಲ್ಲ ಮತ್ತು ಮುಂದಿನ ವರ್ಷಗಳಿಗೆ ಸಾಗಿಸಲಾಗುವುದಿಲ್ಲ)

ಬ್ಯಾಂಕ್‌ನಿಂದ / ಬ್ಯಾಂಕ್ ಹೊರತುಪಡಿಸಿ ಇತರರಿಂದ ಪಡೆದ ಸಾಲ

  • ಯಾರಿಂದ ಸಾಲವನ್ನು ಪಡೆಯಲಾಗಿದೆಯೋ ಆ ಬ್ಯಾಂಕ್ / ಸಂಸ್ಥೆ / ವ್ಯಕ್ತಿಯ ಹೆಸರು
  • ಸಾಲ ಖಾತೆ ಸಂಖ್ಯೆ.
  • ಸಾಲ ಮಂಜೂರಾತಿ ದಿನಾಂಕ
  • ಒಟ್ಟು ಸಾಲದ ಮೊತ್ತ
  • ಆರ್ಥಿಕ ವರ್ಷ ಕೊನೆಯ ದಿನಾಂಕಕ್ಕೆ ಬಾಕಿ ಇರುವ ಸಾಲ
  • ಸೆಕ್ಷನ್ %1s(b) ಅಡಿಯಲ್ಲಿ ಎರವಲು ಪಡೆದ ಬಂಡವಾಳದ ಮೇಲಿನ ಬಡ್ಡಿ

 

ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೆ ಕೆಳಗಿನ ಕಡಿತಗಳು ಲಭ್ಯವಿರುತ್ತವೆ:

ಆದಾಯ ತೆರಿಗೆ ಕಾಯ್ದೆ, 1961 ರ ಅಧ್ಯಾಯ VI-A ಅಡಿಯಲ್ಲಿ ನಿಗದಿಪಡಿಸಿರುವ ಕಡಿತಗಳು

 

 

80C

ಮಾಡಿದ ಪಾವತಿಗಳಿಗೆ ತೆರಿಗೆ ಕಡಿತ

  • ಜೀವ ವಿಮಾ ಪ್ರೀಮಿಯಂ

     

  • ಭವಿಷ್ಯ ನಿಧಿ

     

  • ಕೆಲವು ಇಕ್ವಿಟಿ ಷೇರುಗಳ ಚಂದಾದಾರಿಕೆ

     

  • ಬೋಧನಾ ಶುಲ್ಕ

     

  • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ,

     

  • ಗೃಹ ಸಾಲದ ಮೂಲ ಮೊತ್ತ

     

  • ಇತರ ವಿವಿಧ ಅಂಶಗಳು

     

ಸಂಯೋಜಿತ ತೆರಿಗೆ ಕಡಿತದ ಮಿತಿ

₹ 1,50,000

ಪ್ರತಿ ಅರ್ಹ ಪಾವತಿಗಾಗಿ ITR ನಲ್ಲಿ ಭರ್ತಿ ಮಾಡಬೇಕಾದ ವಿವರಗಳು

• ಪಾಲಿಸಿ ಸಂಖ್ಯೆ ಅಥವಾ ಡಾಕ್ಯುಮೆಂಟ್ ಗುರುತಿನ ಸಂಖ್ಯೆ
• ಸೆಕ್ಷನ್ 80C ಅಡಿಯಲ್ಲಿ ಕಡಿತಕ್ಕೆ ಅರ್ಹವಾದ ಮೊತ್ತ

ಗಮನಿಸಿ:

ಸೆಕ್ಷನ್ 80 C ಅಡಿಯಲ್ಲಿ ತೆರಿಗೆ ಕಡಿತವನ್ನು ಕ್ಲೈಮ್ ಮಾಡುವ ತೆರಿಗೆದಾರರು, ಕೆಳಗಿನಂತೆ ವಿವರಗಳನ್ನು ಒದಗಿಸಬೇಕು:

  • ಕಡಿತಕ್ಕೆ ಅರ್ಹವಾದ ಮೊತ್ತ
  • ಪಾಲಿಸಿ ಸಂಖ್ಯೆ ಅಥವಾ ಡಾಕ್ಯುಮೆಂಟ್ ಗುರುತಿನ ಸಂಖ್ಯೆ

 

 

ಬಿ.ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೆ ಲಭ್ಯವಿರುವ ಕಡಿತಗಳು:

1. ಸೆಕ್ಷನ್ 24(b) – ಗೃಹ ಸಾಲ ಹಾಗೂ ಗೃಹ ಸುಧಾರಣಾ ಸಾಲದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ ಮನೆ ಆಸ್ತಿ ಆದಾಯದಿಂದ ಕಡಿತ

ಸೆಕ್ಷನ್ 24(b) – ಗೃಹ ಸಾಲ ಹಾಗೂ ಗೃಹ ಸುಧಾರಣಾ ಸಾಲದ ಮೇಲೆ ಪಾವತಿಸಿದ ಬಡ್ಡಿಗೆ ಮನೆ ಆಸ್ತಿ ಆದಾಯದಿಂದ ಕಡಿತ. ಸ್ವಯಂ ವಾಸದ ಆಸ್ತಿಯ ಸಂದರ್ಭದಲ್ಲಿ, ಗೃಹ ಸಾಲದ ಮೇಲೆ ಪಾವತಿಸಿದ ಬಡ್ಡಿಗೆ ಅನುಮತಿಸಲಾದ ಕಡಿತದ ಗರಿಷ್ಠ ಮಿತಿ ₹2 ಲಕ್ಷವಾಗಿದೆ. ಸೆಕ್ಷನ್ 24(b) ಅಡಿಯಲ್ಲಿ ಅನುಮತಿಸಲಾದ ಬಡ್ಡಿ ಕಡಿತವನ್ನು ಕೆಳಗಿನಂತೆ ಪಟ್ಟಿ ಮಾಡಲಾಗಿದೆ:

ಆಸ್ತಿಯ ಸ್ವರೂಪ

ಸಾಲವನ್ನು ಯಾವಾಗ ತೆಗೆದುಕೊಳ್ಳಲಾಯಿತು

ಸಾಲದ ಉದ್ದೇಶ

ಅನುಮತಿಸಬಹುದಾದ (ಗರಿಷ್ಠ ಮಿತಿ)

ಅಗತ್ಯವಿರುವ ವಿವರಗಳು

ಸ್ವಯಂ - ವಾಸವಿರುವ

1/04/1999 ರಂದು ಅಥವಾ ನಂತರ

ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ

₹ 2,00,000

ಬ್ಯಾಂಕ್‌ನಿಂದ / ಬ್ಯಾಂಕ್ ಹೊರತುಪಡಿಸಿ ಇತರರಿಂದ ಪಡೆದ ಸಾಲ

  • ಸಾಲ ಪಡೆದ ಬ್ಯಾಂಕ್ / ಸಂಸ್ಥೆ / ವ್ಯಕ್ತಿಯ ಹೆಸರು
  • ಸಾಲ ಖಾತೆ ಸಂಖ್ಯೆ.
  • ಸಾಲ ಮಂಜೂರಾತಿ ದಿನಾಂಕ
  • ಒಟ್ಟು ಸಾಲದ ಮೊತ್ತ
  • ಹಣಕಾಸು ವರ್ಷ ಕೊನೆಯ ದಿನಾಂಕಕ್ಕೆ ಬಾಕಿ ಇರುವ ಸಾಲ
  • ಸೆಕ್ಷನ್ 24(b) ಅಡಿಯಲ್ಲಿ ಸಾಲವಾಗಿ ಪಡೆದ ಬಂಡವಾಳ ಮೇಲಿನ ಬಡ್ಡಿ

1/04/1999 ರಂದು ಅಥವಾ ನಂತರ

ಗೃಹ ಆಸ್ತಿಯ ದುರಸ್ತಿಗಳಿಗಾಗಿ

₹ 30,000

1/04/1999 ರಂದು ಅಥವಾ ನಂತರ

ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ

₹ 30,000

1/04/1999 ರ ಮೊದಲು

ಗೃಹ ಆಸ್ತಿಯ ದುರಸ್ತಿಗಳಿಗಾಗಿ

₹ 30,000

ಬಾಡಿಗೆಗೆ ಕೊಟ್ಟಿರುವ

ಯಾವುದೇ ಸಮಯದಲ್ಲಿಯೂ

ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ

ಯಾವುದೇ ಮಿತಿಯಿಲ್ಲದೆ ವಾಸ್ತವ ಮೌಲ್ಯ

 

 

2. ಆದಾಯ ತೆರಿಗೆ ಕಾಯ್ದೆ ಅಧ್ಯಾಯ VI-A ಅಡಿಯಲ್ಲಿ ನಿಗದಿಪಡಿಸಿರುವ ತೆರಿಗೆ ಕಡಿತಗಳು.

80C

ಮಾಡಿದ ಪಾವತಿಗಳಿಗೆ ತೆರಿಗೆ ಕಡಿತ

  • ಜೀವ ವಿಮಾ ಪ್ರೀಮಿಯಂ
  • ಭವಿಷ್ಯ ನಿಧಿ
  • ಕೆಲವು ಇಕ್ವಿಟಿ ಷೇರುಗಳ ಚಂದಾದಾರಿಕೆ
  • ಬೋಧನಾ ಶುಲ್ಕ
  • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
  • ಗೃಹ ಸಾಲದ ಮೂಲ ಮೊತ್ತ
  • ಇತರ ವಿವಿಧ ಅಂಶಗಳು

ಸಂಯೋಜಿತ ತೆರಿಗೆ ಕಡಿತದ ಮಿತಿ

₹ 1,50,000

ಪ್ರತಿ ಅರ್ಹ ಪಾವತಿಗಾಗಿ ITR ನಲ್ಲಿ ಭರ್ತಿ ಮಾಡಬೇಕಾದ ವಿವರಗಳು

• ಪಾಲಿಸಿ ಸಂಖ್ಯೆ ಅಥವಾ ಡಾಕ್ಯುಮೆಂಟ್ ಗುರುತಿನ ಸಂಖ್ಯೆ
• ಸೆಕ್ಷನ್ 80C ಅಡಿಯಲ್ಲಿ ಕಡಿತಕ್ಕೆ ಅರ್ಹವಾದ ಮೊತ್ತ

ಗಮನಿಸಿ:

ಸೆಕ್ಷನ್ 80 C ಅಡಿಯಲ್ಲಿ ತೆರಿಗೆ ಕಡಿತವನ್ನು ಕ್ಲೈಮ್ ಮಾಡುವ ತೆರಿಗೆದಾರರು, ಕೆಳಗಿನಂತೆ ವಿವರಗಳನ್ನು ಒದಗಿಸಬೇಕು:

  • ಕಡಿತಕ್ಕೆ ಅರ್ಹವಾದ ಮೊತ್ತ
  • ಪಾಲಿಸಿ ಸಂಖ್ಯೆ ಅಥವಾ ಡಾಕ್ಯುಮೆಂಟ್ ಗುರುತಿನ ಸಂಖ್ಯೆ

 

 

80D

ಆರೋಗ್ಯ ವಿಮಾ ಪ್ರೀಮಿಯಂ ಹಾಗೂ ಮುನ್ನೆಚ್ಚರಿಕೆಯ ಆರೋಗ್ಯ ತಪಾಸಣೆಗಾಗಿ ಮಾಡಿದ ಪಾವತಿಗಳ ಮೇಲಿನ ಕಡಿತ.

HUF ಸದಸ್ಯರಿಗೆ (60 ವರ್ಷಕ್ಕಿಂತ ಕೆಳಗಿನವರು)

ಕಡಿತದ ಮಿತಿ ₹25,000 ಆಗಿದ್ದು, ಮುನ್ನೆಚ್ಚರಿಕೆಯ ಆರೋಗ್ಯ ತಪಾಸಣೆಗೆ ₹5,000 ವರೆಗೆ ಕಡಿತ ಲಭ್ಯವಿದೆ ಮತ್ತು ಅದು ಮೇಲಿನ ಒಟ್ಟು ಮಿತಿಯಲ್ಲೇ ಒಳಗೊಂಡಿರುತ್ತದೆ.

HUF ಸದಸ್ಯರಿಗೆ (60 ವರ್ಷಕ್ಕಿಂತ ಮೇಲ್ಪಟ್ಟವರು)

ಕಡಿತದ ಮಿತಿ ₹50,000 ಆಗಿದ್ದು, ಮುನ್ನೆಚ್ಚರಿಕೆಯ ಆರೋಗ್ಯ ತಪಾಸಣೆಗೆ ₹5,000 ವರೆಗೆ ಕಡಿತ ಲಭ್ಯವಿದೆ ಮತ್ತು ಅದು ಮೇಲಿನ ಒಟ್ಟು ಮಿತಿಯಲ್ಲೇ ಒಳಗೊಂಡಿರುತ್ತದೆ.

ಆರೋಗ್ಯ ವಿಮಾ ರಕ್ಷಣೆಯ ಮೇಲೆ ಯಾವುದೇ ಪ್ರೀಮಿಯಂ ಪಾವತಿಸದಿದ್ದರೆ, ಹಿರಿಯ ನಾಗರಿಕರು HUF ಸದಸ್ಯರಾಗಿರುವಾಗ ಆಗುವ ವೈದ್ಯಕೀಯ ವೆಚ್ಚದ ಮೇಲಿನ ಕಡಿತ.

ತೆರಿಗೆ ಕಡಿತದ ಮಿತಿ ₹ 50,000

ಸೂಚನೆ:

ಸೆಕ್ಷನ್ 80 D ಅಡಿಯಲ್ಲಿ ತೆರಿಗೆ ಕಡಿತವನ್ನು ಕ್ಲೈಮ್ ಮಾಡುವ ತೆರಿಗೆದಾರರು, ಕೆಳಗಿನಂತೆ ವಿವರಗಳನ್ನು ಒದಗಿಸಬೇಕು:

  • ವಿಮೆಗಾರರ ಹೆಸರು (ವಿಮಾ ಕಂಪನಿ)
  • ಪಾಲಿಸಿ ಸಂಖ್ಯೆ

ಆರೋಗ್ಯ ವಿಮೆಯ ಮೊತ್ತ

 

80DD

ಅವಲಂಬಿತ ಅಂಗವಿಕಲ ವ್ಯಕ್ತಿಯ ನಿರ್ವಹಣೆ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಮಾಡಿದ ಪಾವತಿಗಳಿಗೆ ಅಥವಾ ಸಂಬಂಧಿತ ಅನುಮೋದಿತ ಯೋಜನೆಯಡಿಯಲ್ಲಿ ಪಾವತಿಸಿದ / ಠೇವಣಿ ಮಾಡಿದ ಯಾವುದೇ ಮೊತ್ತಕ್ಕೆ ತೆರಿಗೆ ಕಡಿತಗೊಳಿಸುವಿಕೆ

ಮಾಡಿದ ವೆಚ್ಚವನ್ನು ಲೆಕ್ಕಿಸದೆ, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ ₹ 75,000 ಮೊತ್ತದ ಕಡಿತ ಲಭ್ಯವಿರುತ್ತದೆ.

ಮಾಡಿದ ವೆಚ್ಚವನ್ನು ಲೆಕ್ಕಿಸದೆ, ತೀವ್ರ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ ₹ 1,25,000 ಮೊತ್ತದ ಕಡಿತ ಲಭ್ಯವಿರುತ್ತದೆ.

ಗಮನಿಸಿ: 

ಸೆಕ್ಷನ್ 80 DD ಅಡಿಯಲ್ಲಿ ತೆರಿಗೆ ಕಡಿತವನ್ನು ಕ್ಲೈಮ್ ಮಾಡಲು ಕೆಳಗಿನ ವಿವರಗಳನ್ನು ITR ನಲ್ಲಿ ಒದಗಿಸಬೇಕಾಗಿದೆ:

  • ಅಂಗವೈಕಲ್ಯದ ಸ್ವರೂಪ
  • ಅಂಗವೈಕಲ್ಯದ ವಿಧ
  • ಕಡಿತದ ಮೊತ್ತ
  • ಅವಲಂಬಿತರ ಪ್ರಕಾರ – “HUF ಸದಸ್ಯರಾಗಿ”
  • ಅವಲಂಬಿತರ PAN
  • ಅವಲಂಬಿತರ ಆಧಾರ್
  • ಸ್ವಲೀನತೆ (Autism), ಮೆದುಳಿನ ಅಂಗವೈಕಲ್ಯ (Cerebral Palsy), ಅಥವಾ ಬಹು ಅಂಗವೈಕಲ್ಯಗಳ ಪ್ರಕರಣದಲ್ಲಿ ಸಲ್ಲಿಸಿದ ಫಾರ್ಮ್ 10 IA ಯ ಸ್ವೀಕೃತಿ ಸಂಖ್ಯೆ.
  • UDID ಸಂಖ್ಯೆ (ಲಭ್ಯವಿದ್ದರೆ)

 

 

80DDB

ತಾನು ಪಡೆದ ವೈದ್ಯಕೀಯ ಚಿಕಿತ್ಸೆ ಅಥವಾ ಅವಲಂಬಿತರಿಗೆ ನಿರ್ದಿಷ್ಟ ರೋಗಕ್ಕೆ ಮಾಡಿದ ಪಾವತಿಗಳ ಮೇಲಿನ ತೆರಿಗೆ ಕಡಿತ

ಕಡಿತ ಮಿತಿ ₹ 40,000 (ಹಿರಿಯ ನಾಗರಿಕರಿಗೆ ₹1,00,000).

 

 

80G

ನಿರ್ದಿಷ್ಟ ನಿಧಿಗಳು, ದಾನಧರ್ಮ ಸಂಸ್ಥೆಗಳು ಇತ್ಯಾದಿಗಳಿಗೆ ನೀಡಿದ ದೇಣಿಗೆಗಳ ಮೇಲಿನ ಕಡಿತ.

ಕೆಳಗಿನ ವರ್ಗಗಳ ಅಡಿಯಲ್ಲಿ ನೀಡಿದ ದೇಣಿಗೆಯು ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ

ಯಾವುದೇ ಮಿತಿಯಿಲ್ಲದೆ

100% ಕಡಿತ
50% ಕಡಿತ

ಅರ್ಹತಾ ಮಿತಿಗೆ ಒಳಪಟ್ಟಿರುತ್ತದೆ

100% ಕಡಿತ
50% ಕಡಿತ

 

ಸೂಚನೆ: ಈ ವಿಭಾಗದ ಅಡಿಯಲ್ಲಿ ₹ 2,000/- ಕ್ಕಿಂತ ಹೆಚ್ಚು ನಗದು ರೂಪದಲ್ಲಿ ನೀಡಿದ ದೇಣಿಗೆಗಳಿಗೆ ಯಾವುದೇ ಕಡಿತವನ್ನು ನೀಡಲಾಗುವುದಿಲ್ಲ.

 

 

80GGA

ವೈಜ್ಞಾನಿಕ ಸಂಶೋಧನೆ ಅಥವಾ ಗ್ರಾಮೀಣ ಅಭಿವೃದ್ಧಿಗಾಗಿ ನೀಡಿದ ದೇಣಿಗೆಗಳ ಮೇಲಿನ ತೆರಿಗೆ ಕಡಿತ

ಕೆಳಗಿನ ವರ್ಗಗಳಿಗೆ ನೀಡಿದ ದೇಣಿಗೆಯು ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ:

ಕೆಳಗಿನ ಉದ್ದೇಶಗಳಿಗಾಗಿ ಇರುವ ಸಂಶೋಧನಾ ಸಂಘ ಅಥವಾ ವಿಶ್ವವಿದ್ಯಾಲಯ, ಕಾಲೇಜು ಅಥವಾ ಇತರ ಸಂಸ್ಥೆ

  • ವೈಜ್ಞಾನಿಕ ಸಂಶೋಧನೆ
  • ಸಾಮಾಜಿಕ ವಿಜ್ಞಾನ ಅಥವಾ ಸಂಖ್ಯಾಶಾಸ್ತ್ರೀಯ ಸಂಶೋಧನೆ

ಕೆಳಗಿನ ಉದ್ದೇಶಕ್ಕಾಗಿ ಇರುವ ಸಂಘ ಅಥವಾ ಸಂಸ್ಥೆ

  • ಗ್ರಾಮೀಣಾಭಿವೃದ್ಧಿ
  • ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಅಥವಾ ಅರಣ್ಯೀಕರಣಕ್ಕಾಗಿ

ಯಾವುದೇ ಅರ್ಹ ಯೋಜನೆಯನ್ನು ಕೈಗೊಳ್ಳಲು ರಾಷ್ಟ್ರೀಯ ಸಮಿತಿಯು ಅನುಮೋದಿಸುವ PSU ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ಸಂಘ ಅಥವಾ ಸಂಸ್ಥೆ

ಈ ಕೆಳಗಿನ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ ಸೂಚಿತ ನಿಧಿ

  • ಅರಣ್ಯೀಕರಣ
  • ಗ್ರಾಮೀಣಾಭಿವೃದ್ಧಿ

ಕೇಂದ್ರ ಸರ್ಕಾರವು ಸ್ಥಾಪಿಸಿ ಮತ್ತು ಅಧಿಸೂಚಿಸಿದಂತೆ ರಾಷ್ಟ್ರೀಯ ನಗರ ಬಡತನ ನಿರ್ಮೂಲನಾ ನಿಧಿ

ಸೂಚನೆ: ₹ 2,000/- ಮೀರಿದ ನಗದು ದೇಣಿಗೆಗಳಿಗೆ ಈ ವಿಭಾಗದ ಅಡಿಯಲ್ಲಿ ಯಾವುದೇ ಕಡಿತವನ್ನು ಅನುಮತಿಸಲಾಗುವುದಿಲ್ಲ.

 

 

80GGC

ರಾಜಕೀಯ ಪಕ್ಷ ಅಥವಾ ಚುನಾವಣಾ ಟ್ರಸ್ಟ್‌ಗೆ ನೀಡಿದ ದೇಣಿಗೆಗಳ ಮೇಲಿನ ತೆರಿಗೆ ಕಡಿತ

ನಗದು ಹೊರತುಪಡಿಸಿ ಬೇರೆ ಯಾವುದೇ ವಿಧಾನದ ಮೂಲಕ ಪಾವತಿಸಿದ ಒಟ್ಟು ಮೊತ್ತದ ತೆರಿಗೆ ಕಡಿತ

 

 

80TTA

ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಠೇವಣಿಗಳ ಮೇಲೆ ಪಡೆದ ಬಡ್ಡಿಗೆ ನೀಡಲಾಗುವ ಕಡಿತ.

₹ 10,000 ದ ತೆರಿಗೆ ಕಡಿತದ ಮಿತಿ

ಪುಟವನ್ನು ಕೊನೆಯದಾಗಿ ಪರಿಶೀಲಿಸಲಾಗಿದೆ ಅಥವಾ ನವೀಕರಿಸಲಾಗಿದೆ: