1. ಅವಲೋಕನ

ಮಾನ್ಯ ಪ್ಯಾನ್ ಮತ್ತು ಮಾನ್ಯ ಬ್ಯಾಂಕ್ ಖಾತೆಯನ್ನು ಹೊಂದಿರುವ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗಿನ್ ಮಾಡಿದ ಎಲ್ಲಾ ನೋಂದಾಯಿತ ತೆರಿಗೆದಾರರಿಗೆ ನನ್ನ ಬ್ಯಾಂಕ್ ಖಾತೆ ಸೇವೆ ಲಭ್ಯವಿದೆ. ಈ ಸೇವೆಯು ಇವುಗಳನ್ನು ನಿಮಗೆ ಅನುಮತಿಸುತ್ತದೆ:

  • ಬ್ಯಾಂಕ್ ಖಾತೆಯನ್ನು ಸೇರಿಸಿ ಮತ್ತು ಅದನ್ನು ಪೂರ್ವ - ಮೌಲ್ಯೀಕರಿಸಿ
  • ಮುಚ್ಚಿದ ಅಥವಾ ನಿಷ್ಕ್ರಿಯಗೊಳಿಸಿದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ
  • ಆದಾಯ ತೆರಿಗೆ ಮರುಪಾವತಿ ಪಡೆಯಲು ಮತ್ತು ನೆಟ್ ಬ್ಯಾಂಕಿಂಗ್‌ಗಾಗಿ ಮಾನ್ಯ ಬ್ಯಾಂಕ್ ಖಾತೆಯನ್ನು ಸೂಚಿಸಿ ಲಾಗಿನ್ ಮಾಡಿ
  • ನಾಮನಿರ್ದೇಶನ ಮಾಡಿದ ಖಾತೆಯಲ್ಲಿ ತೆರಿಗೆ ರೀಫಂಡ್ ಅಥವಾ ಮರುಪಾವತಿ ಸ್ವೀಕರಿಸದ ಹಾಗೆ ನಾಮನಿರ್ದೇಶನದಿಂದ ಆ ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ
  • ಮೌಲ್ಯೀಕರಿಸಿದ ಬ್ಯಾಂಕ್ ಖಾತೆಗೆ EVC ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ (ವೈಯಕ್ತಿಕ ತೆರಿಗೆದಾರರಿಗೆ ಮಾತ್ರ, ಇ-ಫೈಲಿಂಗ್ ಸಂಯೋಜಿತ ಬ್ಯಾಂಕುಗಳಿಗೆ ಮಾತ್ರ)
  • ಪೂರ್ವ-ಮೌಲೀಕರಣ ವಿಫಲವಾದುದಕ್ಕಾಗಿ ಬ್ಯಾಂಕ್ ಖಾತೆಗಳನ್ನು ಮರುಮೌಲ್ಯೀಕರಿಸಿ ದೃಢೀಕರಣ

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮಾನ್ಯತೆ ಹೊಂದಿದ ಬಳಕೆದಾರರ ID ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿತ ಬಳಕೆದಾರರು
  • PAN ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕು, ಅದನ್ನು ಪೂರ್ವ ಮೌಲ್ಯೀಕರಿಸಬೇಕು

 

ಸೇವೆ ಪೂರ್ವಾಪೇಕ್ಷಿತಗಳು
ಬ್ಯಾಂಕ್ ಖಾತೆಯನ್ನು ಸೇರಿಸಿ ಮತ್ತು ಮೌಲ್ಯೀಕರಿಸಿ

1. ಖಾತೆಯನ್ನು PAN ನೊಂದಿಗೆ ಲಿಂಕ್ ಮಾಡಿರಬೇಕು.
2. ಬಳಕೆದಾರರು ಮಾನ್ಯವಾದ IFSC ಮತ್ತು ಖಾತೆ ಸಂಖ್ಯೆಯನ್ನು ಹೊಂದಿರಬೇಕು.
3. ಯಾವುದೇ ಒಂದು ಪರಿಶೀಲನಾ ವಿಧಾನಕ್ಕೆ ಪ್ರವೇಶ*:

  • OTP ಗಾಗಿ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ / ಡಿಮ್ಯಾಟ್ ಖಾತೆ ಮೂಲಕ EVC
  • ನೆಟ್ ಬ್ಯಾಂಕಿಂಗ್ ಮೂಲಕ
  • ಮಾನ್ಯವಾದ DSC

ಗಮನಿಸಿ*: ಬಳಕೆದಾರರ ಲಾಗಿನ್ ಪ್ರಕಾರವನ್ನು ಆಧರಿಸಿ ಪರಿಶೀಲನಾ ಆಯ್ಕೆಗಳು ಲಭ್ಯವಿದೆ.

ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ

1. ಯಾವುದೇ ಒಂದು ಪರಿಶೀಲನಾ ವಿಧಾನಕ್ಕೆ ಪ್ರವೇಶ*:

  • OTP ಗಾಗಿ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ / ಡಿಮ್ಯಾಟ್ ಖಾತೆ ಮೂಲಕ EVC
  • ನೆಟ್ ಬ್ಯಾಂಕಿಂಗ್ ಮೂಲಕ
  • ಮಾನ್ಯವಾದ DSC

ಗಮನಿಸಿ*: ಬಳಕೆದಾರರ ಲಾಗಿನ್ ಪ್ರಕಾರವನ್ನು ಆಧರಿಸಿ ಪರಿಶೀಲನಾ ಆಯ್ಕೆಗಳು ಲಭ್ಯವಿದೆ.

ಬ್ಯಾಂಕ್ ಖಾತೆಯನ್ನು ನಾಮಿನಿ ಮಾಡಿ ಅಥವಾ ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ನಾಮಿನಿಯನ್ನು ತೆಗೆದುಹಾಕಿ.

1. ಮೌಲ್ಯೀಕರಿಸಿದ ಬ್ಯಾಂಕ್ ಖಾತೆ
2. ಖಾತೆಯ ಪ್ರಕಾರವು ಉಳಿತಾಯ/ಚಾಲ್ತಿ/ನಗದು ಕ್ರೆಡಿಟ್/ಓವರ್ ಡ್ರಾಫ್ಟ್/ಅನಿವಾಸಿ ಸಾಮಾನ್ಯ ಎಂದಾಗಿರಬೇಕು

EVCಅನ್ನು ಸಕ್ರಿಯಗೊಳಿಸಿ

1. ಇ-ಫೈಲಿಂಗ್ ಇಂಟಿಗ್ರೇಟೆಡ್ ಬ್ಯಾಂಕ್‌ಗಳಲ್ಲಿ ಖಾತೆ
2. ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಂತೆಯೇ ಪ್ರಾಥಮಿಕ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಇರಬೇಕು

3. ಪ್ರತಿ ಹಂತದ ಮಾರ್ಗದರ್ಶನ

 

ಹಂತ 1: ನಿಮ್ಮ ಬಳಕೆದಾರರ ID ಹಾಗೂ ಪಾಸ್ವರ್ಡ್ ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.

Data responsive

 

 

ಹಂತ 2: ಡ್ಯಾಶ್‌ಬೋರ್ಡ್ ನಿಂದ ನನ್ನ ಪ್ರೊಫೈಲ್ ಪೇಜ್‌ಗೆ ಹೋಗಿ.

Data responsive

 

 

ಹಂತ 3: ನನ್ನ ಬ್ಯಾಂಕ್ ಖಾತೆ ಅನ್ನು ಕ್ಲಿಕ್ ಮಾಡಿ.

Data responsive

 

 

ನನ್ನ ಬ್ಯಾಂಕ್ ಖಾತೆಗಳು ಪೇಜ್‌ನಲ್ಲಿ, ಸೇರಿಸಲಾದ, ವಿಫಲವಾದ ಮತ್ತು ತೆಗೆದುಹಾಕಲಾದ ಬ್ಯಾಂಕ್ ಖಾತೆಗಳು ಟ್ಯಾಬ್‌ಗಳನ್ನು ಪ್ರದರ್ಶಿಸಲಾಗುತ್ತದೆ.

Data responsive

 

 

ನನ್ನ ಬ್ಯಾಂಕ್ ಖಾತೆ ಸೇವೆಯ ಅಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಲು, ಈ ಕೆಳಗಿನ ವಿಭಾಗಗಳನ್ನು ನೋಡಿ:

ಬ್ಯಾಂಕ್ ಖಾತೆಯನ್ನು ಸೇರಿಸಿ ಮತ್ತು ಪೂರ್ವ - ದೃಢೀಕರಿಸಿ ವಿಭಾಗ 3.1 ಕ್ಕೆ ಹೋಗಿ
ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ ವಿಭಾಗ 3.2 ಕ್ಕೆ ಹೋಗಿ
ಬ್ಯಾಂಕ್ ಖಾತೆಯನ್ನು ನಾಮಿನಿ ಮಾಡಿ ಅಥವಾ ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ನಾಮಿನಿಯನ್ನು ತೆಗೆದುಹಾಕಿ. ವಿಭಾಗ 3.3 ಕ್ಕೆ ಹೋಗಿ
EVC ಅನ್ನು ಸಕ್ರಿಯಗೊಳಿಸಲು ಮತ್ತು ನಿಷ್ಕ್ರಿಯಗೊಳಿಸಲು ವಿಭಾಗ 3.4 ಕ್ಕೆ ಹೋಗಿ
ಬ್ಯಾಂಕ್ ಖಾತೆಯನ್ನು ಮರು - ದೃಢೀಕರಿಸಿ ವಿಭಾಗ 3.5 ಕ್ಕೆ ಹೋಗಿ
ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಆಗಲು ಬ್ಯಾಂಕ್ ಖಾತೆಯನ್ನು ನಾಮಿನಿ ಮಾಡಿ. ವಿಭಾಗ 3.6 ಕ್ಕೆ ಹೋಗಿ

3.1 ಬ್ಯಾಂಕ್ ಖಾತೆಯನ್ನು ಸೇರಿಸಿ ಮತ್ತು ಪೂರ್ವ-ಮೌಲ್ಯೀಕರಿಸಿ

PAN / ಆಧಾರ್ ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ

ಹಂತ 1: ನನ್ನ ಬ್ಯಾಂಕ್ ಖಾತೆಗಳು ಪೇಜ್‌ನಲ್ಲಿ, ಬ್ಯಾಂಕ್ ಖಾತೆಯನ್ನು ಸೇರಿಸಿ ಅನ್ನು ಕ್ಲಿಕ್ ಮಾಡಿ.

Data responsive

 

ಹಂತ 2: ಬ್ಯಾಂಕ್ ಖಾತೆ ಸೇರಿಸಿ ಪುಟದಲ್ಲಿ, ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ, ಖಾತೆ ಪ್ರಕಾರ ಮತ್ತು ಖಾತೆದಾರರ ಪ್ರಕಾರವನ್ನು ಆಯ್ಕೆಮಾಡಿ, ಮತ್ತು IFSC ನಮೂದಿಸಿ. IFSC ಅನ್ನು ಆಧರಿಸಿ ಬ್ಯಾಂಕ್ ಹೆಸರು ಮತ್ತು ಶಾಖೆ ಸ್ವಯಂ-ಭರ್ತಿಯಾಗುತ್ತದೆ. ನಿಮ್ಮ ಬ್ಯಾಂಕ್ ಇ-ಫೈಲಿಂಗ್‌ನೊಂದಿಗೆ ಸಂಯೋಜಿಸಲ್ಪಟ್ಟಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಿಮ್ಮ ಇ-ಫೈಲಿಂಗ್ ಪ್ರೊಫೈಲ್‌ನಿಂದ ಮೊದಲೇ ಭರ್ತಿ ಮಾಡಲಾಗುತ್ತದೆ ಮತ್ತು ಅದನ್ನು ತಿದ್ದಲು ಸಾಧ್ಯವಿಲ್ಲ.

Data responsive

 

ಹಂತ 3: ಇ-ಪರಿಶೀಲಿಸಲು ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ

Data responsive

 

 

ಇ-ವೆರಿಫೈ ಮಾಡಲು ಆರಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.

Data responsive

 

 

OTP ನಮೂದಿಸಿ ಮತ್ತು ದೃಢೀಕರಿಸಿ.

Data responsive

 

 

ದೃಢೀಕರಣ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಿದಾಗ, ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಅಲ್ಲದೆ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ನೀವು ಸಂದೇಶವನ್ನು ಸ್ವೀಕರಿಸುತ್ತೀರಿ.

Data responsive

 

Data responsive

 

3.2 ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ

 

ಹಂತ 1: ನೀವು ಬಯಸಿದ ಬ್ಯಾಂಕ್ ಖಾತೆಗೆ ಆಕ್ಷನ್ ಕಾಲಂ ಅಡಿಯಲ್ಲಿ ಬ್ಯಾಂಕ್ ಖಾತೆ ತೆಗೆಯಿರಿ ಕ್ಲಿಕ್ ಮಾಡಿ.

Data responsive

 

 

ಹಂತ 2: ಬ್ಯಾಂಕ್ ಖಾತೆಯನ್ನು ತೆಗೆದುಹಾಕಲು ಡ್ರಾಪ್‌ಡೌನ್‌ನಿಂದ ಕಾರಣವನ್ನು ಆಯ್ಕೆಮಾಡಿ. ನೀವು ಇತರೆ ಅನ್ನು ಆಯ್ಕೆ ಮಾಡಿದರೆ, ಟೆಕ್ಸ್ಟ್ ಬಾಕ್ಸ್‌ನಲ್ಲಿ ಕಾರಣವನ್ನು ನಮೂದಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.

Data responsive

 

ಹಂತ 3: ಇ-ಪರಿಶೀಲಿಸಿ ಆಯ್ಕೆಯನ್ನು ಆರಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ

Data responsive

 

ಹಂತ 4: OTP ನಮೂದಿಸಿ ಮತ್ತು ಮೌಲ್ಯೀಕರಿಸಿ.

Data responsive

 

ಬ್ಯಾಂಕ್ ಖಾತೆಯನ್ನು ಯಶಸ್ವಿಯಾಗಿ ತೆಗೆದುಹಾಕಿದ ನಂತರ, ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

Data responsive

 

 

'ಮೌಲ್ಯಮಾಪನ ಪ್ರಗತಿಯಲ್ಲಿದೆ' ಎಂಬ ಸ್ಥಿತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ನೀವು ತೆಗೆದುಹಾಕಬಹುದು ಮತ್ತು ತೆಗೆದುಹಾಕಿದ ನಂತರ ನೀವು ಸರಿಯಾದ ವಿವರಗಳೊಂದಿಗೆ ಅದೇ ಬ್ಯಾಂಕ್ ಖಾತೆಯನ್ನು ಸೇರಿಸಲು ಪ್ರಯತ್ನಿಸಬಹುದು.

3.3 ಬ್ಯಾಂಕ್ ಖಾತೆಯನ್ನು ನಾಮಿನಿ ಮಾಡಿ ಅಥವಾ ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ನಾಮಿನಿಯಿಂದ ತೆಗೆದುಹಾಕಿ

A.ಮರುಪಾವತಿಗಾಗಿ ನಾಮನಿರ್ದೇಶನ ಮಾಡಿ

ಹಂತ 1: ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಲು, ಮರುಪಾವತಿಗಾಗಿ ನೀವು ನಾಮನಿರ್ದೇಶನ ಮಾಡಲು ಬಯಸುವ ಬ್ಯಾಂಕ್ ಖಾತೆಗಾಗಿ ಮರುಪಾವತಿಗಾಗಿ ನಾಮನಿರ್ದೇಶಿಸಿ ಅನ್ನು ಟಾಗಲ್ / ಸ್ವಿಚ್ (ಸ್ವಿಚ್ ಎಡಭಾಗದಲ್ಲಿದೆ) ಮೇಲೆ ಕ್ಲಿಕ್ ಮಾಡಿ.

Data responsive

 


ಹಂತ 2: ನೀವು ಆಯ್ಕೆಮಾಡಿದ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಲು ಬಯಸುತ್ತೀರಿ ಎಂಬುದನ್ನು ಖಚಿತಪಡಿಸಲು ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.

Data responsive

 


ಯಶಸ್ಸಿನ ನಂತರ, ಸ್ವಿಚ್ ಬಲಕ್ಕೆ ಚಲಿಸುತ್ತದೆ.

Data responsive

 


B. ಮರುಪಾವತಿಗೆ ನಾಮನಿರ್ದೇಶನದಿಂದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ

ಹಂತ 1: ಮರುಪಾವತಿಗಾಗಿ ನಾಮನಿರ್ದೇಶನಗೊಂಡಿರುವ ಬ್ಯಾಂಕ್ ಖಾತೆಯನ್ನು ತೆಗೆದುಹಾಕಲು, ನೀವು ನಾಮನಿರ್ದೇಶನದಿಂದ ತೆಗೆದುಹಾಕಲು ಬಯಸುವ ಬ್ಯಾಂಕ್ ಖಾತೆಗೆ ಮರುಪಾವತಿಗಾಗಿ ನಾಮನಿರ್ದೇಶಿಸಿ ಟಾಗಲ್ / ಸ್ವಿಚ್ (ಇದು ಬಲಭಾಗದಲ್ಲಿದೆ) ಅನ್ನು ಕ್ಲಿಕ್ ಮಾಡಿ.

Data responsive


ಹಂತ 2: ನೀವು ಆಯ್ಕೆಮಾಡಿದ ಬ್ಯಾಂಕ್ ಖಾತೆಯ ನಾಮನಿರ್ದೇಶನವನ್ನು ನೀವು ತೆಗೆದುಹಾಕಲು ಬಯಸುತ್ತೀರಿ ಎಂಬುದನ್ನು ಖಚಿತಪಡಿಸಲು ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.

Data responsive

 


ಯಶಸ್ಸಿನ ನಂತರ, ಸ್ವಿಚ್ ಎಡಕ್ಕೆ ಚಲಿಸುತ್ತದೆ.

Data responsive

 

3.4 EVC ಅನ್ನು ಸಕ್ರಿಯಗೊಳಿಸಲು ಮತ್ತು ನಿಷ್ಕ್ರಿಯಗೊಳಿಸಲು

A. EVC ಸಕ್ರಿಯಗೊಳಿಸಿ

ಹಂತ 1: ನೀವು EVC ಅನ್ನು ಸಕ್ರಿಯಗೊಳಿಸಲು ಬಯಸುವ ಬ್ಯಾಂಕ್ ಖಾತೆ ಕ್ರಿಯೆಗಳು ಕಾಲಮ್ ಅಡಿಯಲ್ಲಿ EVC ಅನ್ನು ಸಕ್ರಿಯಗೊಳಿಸಿ ಕ್ಲಿಕ್ ಮಾಡಿ.

Data responsive

 


ಹಂತ 2: ದೃಢೀಕರಣ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.

Data responsive

 

 

ಸೂಚನೆ:

  • ಈ ಕೆಳಗಿನ ಷರತ್ತುಗಳನ್ನು ಪೂರೈಸಿದರೆ ಮಾತ್ರ ದೃಢೀಕರಿಸಿದ ಬ್ಯಾಂಕ್ ಖಾತೆಗೆ EVC ಸಕ್ರಿಯಗೊಳಿಸಬಹುದು:
  • ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ಬ್ಯಾಂಕ್ ಪರಿಶೀಲಿಸಬೇಕು.
  • ಇ-ಫೈಲಿಂಗ್‌ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕ್ ಪರಿಶೀಲಿಸಿದಂತೆಯೇ ಇರಬೇಕು. ಅವು ಹೊಂದಿಕೆಯಾಗುತ್ತಿವೆ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಇ-ಫೈಲಿಂಗ್ ಪ್ರೊಫೈಲ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನೊಂದಿಗೆ ಲಿಂಕ್ ಮಾಡಲಾದಂತೆಯೇ ಅಪ್ಡೇಟ್ ಮಾಡಿ ಅಥವಾ ನಿಮ್ಮ ಇ-ಫೈಲಿಂಗ್ ಪ್ರೊಫೈಲ್‌ನಲ್ಲಿರುವಂತೆಯೇ ನಿಮ್ಮ ಬ್ಯಾಂಕಿನೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿ.
  • EVC ಅನ್ನು ಬೇರೆ ಯಾವುದೇ ಬ್ಯಾಂಕ್ ಖಾತೆಗೆ ಸಕ್ರಿಯಗೊಳಿಸಬಾರದು.
  • ನಿಮ್ಮ ಬ್ಯಾಂಕ್ ಅನ್ನು ಇ-ಫೈಲಿಂಗ್‌ನೊಂದಿಗೆ ಸಂಯೋಜಿಸಬೇಕು. ಇ-ಫೈಲಿಂಗ್‌ನೊಂದಿಗೆ ಸಂಯೋಜಿಸಲಾದ ಬ್ಯಾಂಕ್‌ಗಳ ಪಟ್ಟಿಯನ್ನು ಇಲ್ಲಿ ಕಾಣಬಹುದು: ಲಾಗಿನ್ > ನನ್ನ ಪ್ರೊಫೈಲ್ > ನನ್ನ ಬ್ಯಾಂಕ್ ಖಾತೆ > ಟಿಪ್ಪಣಿಗಳಲ್ಲಿ ವಿಭಾಗ > “ಬ್ಯಾಂಕುಗಳ ಪಟ್ಟಿ” ಮೇಲೆ ಕ್ಲಿಕ್ ಮಾಡಿ
  • ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಮಾತ್ರ ಪೂರ್ವ-ಮೌಲ್ಯಮಾಪನ ಮಾಡಲು ಬಯಸಿದರೆ, ಮತ್ತು EVC ಅನ್ನು ಸಕ್ರಿಯಗೊಳಿಸದಿರಲು ಬಯಸಿದರೆ, ನಿಮ್ಮ ಬ್ಯಾಂಕ್ ಪರಿಶೀಲಿಸಿದ ಸಂಪರ್ಕ ವಿವರಗಳಿಗೆ, ನಿಮ್ಮ ಇ-ಫೈಲಿಂಗ್ ಮೊಬೈಲ್ ಅಥವಾ ಇಮೇಲ್ ಹೊಂದಿಕೆಯಾಗುವ ಅಗತ್ಯವಿಲ್ಲ.

ಮೇಲಿನ ಷರತ್ತುಗಳನ್ನು ಪೂರೈಸಿದರೆ, ಆಯ್ಕೆಮಾಡಿದ ಬ್ಯಾಂಕ್ ಖಾತೆಗೆ EVC ಅನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗುತ್ತದೆ ಮತ್ತು ಸ್ಥಿತಿಯನ್ನು ನವೀಕರಿಸಲಾಗಿದೆ ಮತ್ತು EVC ಅನ್ನು ಸಕ್ರಿಯಗೊಳಿಸಲಾಗಿದೆ: ಎಂದು ಅಪ್ಡೇಟ್ ಮಾಡಲಾಗುತ್ತದೆ

Data responsive

 

 


ಹಂತ 3: ಒಂದು ಬ್ಯಾಂಕ್ ಖಾತೆಗೆ EVC ಅನ್ನು ಈಗಾಗಲೇ ಸಕ್ರಿಯಗೊಳಿಸಿದ್ದರೆ, ಮತ್ತು ನೀವು ಇನ್ನೊಂದು ಬ್ಯಾಂಕ್ ಖಾತೆಗೆ EVC ಅನ್ನು ಸಕ್ರಿಯಗೊಳಿಸಲು ಪ್ರಯತ್ನಿಸಿದರೆ, ಅದರ ಬಗ್ಗೆ ನಿಮಗೆ ತಿಳಿಸುವ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಸಂದೇಶದಲ್ಲಿಮುಂದುವರಿಯಿರಿ ಕ್ಲಿಕ್ ಮಾಡಿ, ಮತ್ತು ಹಂತ 2 ರಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಪೂರೈಸಿದರೆ ಬ್ಯಾಂಕ್ ಖಾತೆಗೆ EVC ಸಕ್ರಿಯಗೊಳಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ, ಇದಕ್ಕೂ ಮುಂಚೆ ಸಕ್ರಿಯಗೊಳಿಸಲಾದ ಬ್ಯಾಂಕ್ ಖಾತೆಯ EVCಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

Data responsive

 

ಗಮನಿಸಿ: ನೀವು ರದ್ದುಮಾಡಿ ಕ್ಲಿಕ್ ಮಾಡಿದರೆ ಅಥವಾ ಸಂದೇಶವನ್ನು ಮುಚ್ಚಿದರೆ, ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಗೆ EVC ಸಕ್ರಿಯವಾಗಿರುತ್ತದೆ.

 

B. EVC ಅನ್ನು ನಿಷ್ಕ್ರಿಯಗೊಳಿಸಿ

ಹಂತ 1: EVC ಸಕ್ರಿಯಗೊಳಿಸಲಾದ ಬ್ಯಾಂಕ್ ಖಾತೆಗೆ ಆಕ್ಷನ್ ಕಾಲಂ ಅಡಿಯಲ್ಲಿ EVC ನಿಷ್ಕ್ರಿಯಗೊಳಿಸಿ ಕ್ಲಿಕ್ ಮಾಡಿ.

Data responsive

 

ಹಂತ 2: ದೃಢೀಕರಣ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.

Data responsive

 


ಯಶಸ್ವಿಯಾದಾಗ, ಆಯ್ದ ಖಾತೆಗೆ EVC ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ಸ್ಥಿತಿಯನ್ನು ಮೌಲ್ಯೀಕರಿಸಲಾಗಿದೆ ಎಂದು ಮಾತ್ರ ನವೀಕರಿಸಲಾಗುತ್ತದೆ.

Data responsive

 

 

3.5 ಬ್ಯಾಂಕ್ ಖಾತೆಯನ್ನು ಮರು ಮೌಲ್ಯೀಕರಿಸಿ


ಹಂತ 1: ಬ್ಯಾಂಕ್ ಖಾತೆಯ ಮೌಲ್ಯೀಕರಣವು ಈ ಹಿಂದೆ ವಿಫಲವಾಗಿದ್ದ ಸಂದರ್ಭದಲ್ಲಿ, ನೀವು ಅದರ ವಿವರಗಳನ್ನು ವಿಫಲವಾದ ಬ್ಯಾಂಕ್ ಖಾತೆಗಳು ಟ್ಯಾಬ್ ಅಡಿಯಲ್ಲಿ ನೋಡುತ್ತೀರಿ. ನೀವು ಮರುಮೌಲ್ಯಮಾಪನ ಮಾಡಬೇಕಾದ ಬ್ಯಾಂಕ್ ಖಾತೆಗಾಗಿ ಕ್ರಿಯೆಗಳು ಕಾಲಮ್ ಅಡಿಯಲ್ಲಿ ಮರು-ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್/ಬ್ಯಾಂಕಿಗೆ ಲಿಂಕ್ ಮಾಡಲಾದ ಇಮೇಲ್‌ನಲ್ಲಿ ಅಥವಾ ಇ-ಫೈಲಿಂಗ್ ಪ್ರೊಫೈಲ್‌ನಲ್ಲಿ ಯಾವುದೇ ನವೀಕರಣವಿದ್ದರೆ ಅಥವಾ ನಿಮ್ಮ ಖಾತೆ ಪ್ರಕಾರ/ಖಾತೆ ಸ್ಥಿತಿಯನ್ನು ನವೀಕರಿಸಿದ್ದರೆ ನೀವು ಸೇರಿಸಿದ ಬ್ಯಾಂಕ್ ಖಾತೆಯನ್ನು ಮರುಮೌಲ್ಯಮಾಪನ ಮಾಡಬಹುದು.

Data responsive

 


ಹಂತ 2: ಬ್ಯಾಂಕ್ ಖಾತೆ ಸೇರಿಸಿ ಪುಟದಲ್ಲಿ, ಬ್ಯಾಂಕ್ ಮತ್ತು ಸಂಪರ್ಕ ವಿವರಗಳನ್ನು ಮೊದಲೇ ಭರ್ತಿ ಮಾಡಲಾಗುತ್ತದೆ. ಬ್ಯಾಂಕ್ ವಿವರಗಳನ್ನುಎಡಿಟ್ ಮಾಡಬಹುದು ಮತ್ತು ಸಂಪರ್ಕ ವಿವರಗಳನ್ನು ಎಡಿಟ್ ಮಾಡಲಾಗುವುದಿಲ್ಲ. ಅಗತ್ಯವಿದ್ದರೆ ಎಡಿಟ್ ಮಾಡಬಹುದಾದ ವಿವರಗಳನ್ನು ಅಪ್‌ಡೇಟ್ ಮಾಡಿ. ಇ-ಪರಿಶೀಲನೆಗೆ ಮುಂದುವರಿಯಿರಿ ಕ್ಲಿಕ್ ಮಾಡಿ.

Data responsive

 

ಹಂತ 3: ಇ-ಪರಿಶೀಲನೆಗಾಗಿ ವಿಧಾನ ಆಯ್ಕೆಮಾಡಿ.

Data responsive

 

ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.

Data responsive

 

Data responsive


ಯಶಸ್ವಿಯಾದ ನಂತರ, ಬ್ಯಾಂಕ್ ಖಾತೆಯನ್ನು ಸೇರಿಸಲಾದ ಬ್ಯಾಂಕ್ ಖಾತೆಗಳು ಟ್ಯಾಬ್ ಅಡಿಯಲ್ಲಿ ಸೇರಿಸಲಾಗುತ್ತದೆ ಮತ್ತು ಸ್ಥಿತಿಯನ್ನು ದೃಢೀಕರಣ ಪ್ರಗತಿಯಲ್ಲಿದೆ ಗೆ ನವೀಕರಿಸಲಾಗಿದೆ.

Data responsive


ನಂತರ, ನಿಮ್ಮ ಸಂಪರ್ಕ ವಿವರಗಳನ್ನು ಬ್ಯಾಂಕ್ ವಿವರಗಳೊಂದಿಗೆ ಪರಿಶೀಲಿಸಲಾಗುತ್ತದೆ. ಖಾತೆಯ ವಿವರಗಳನ್ನು ಬ್ಯಾಂಕ್ ಪರಿಶೀಲಿಸಿದರೆ, ನಿಮ್ಮ ಬ್ಯಾಂಕ್ ಖಾತೆಯನ್ನು ಮೌಲ್ಯೀಕರಿಸಲಾಗುತ್ತದೆ. ಸೇರಿಸಲಾದ ಬ್ಯಾಂಕ್ ಖಾತೆಗಳು ಟ್ಯಾಬ್‌ನ ಸ್ಥಿತಿ ಕಾಲಮ್‌ನಲ್ಲಿ ನೀವು ದೃಢೀಕರಣ ಸ್ಥಿತಿಯನ್ನು ಪರಿಶೀಲಿಸಬಹುದು.

Data responsive

 


ಮೌಲೀಕರಣ ಇನ್ನೂ ವಿಫಲವಾದರೆ, ವೈಫಲ್ಯದ ಕಾರಣವನ್ನು ಆಧರಿಸಿ (ಸಮಗ್ರ ಬ್ಯಾಂಕುಗಳಿಗೆ) ಈ ಕೆಳಗಿನ ಕ್ರಮ ತೆಗೆದುಕೊಳ್ಳಿ:

ವೈಫಲ್ಯಕ್ಕೆ ಕಾರಣ ತೆಗೆದುಕೊಳ್ಳಬೇಕಾದ ಕ್ರಮ
PAN-ಬ್ಯಾಂಕ್ ಖಾತೆ-IFSC ಲಿಂಕ್ ವಿಫಲವಾಗಿದೆ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ PAN ಅನ್ನು ಲಿಂಕ್ ಮಾಡಲು ಶಾಖೆಯನ್ನು ಸಂಪರ್ಕಿಸಿ, ನಂತರ ವಿನಂತಿಯನ್ನು ಸಲ್ಲಿಸಲು ಮರು-ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ.
ಹೆಸರು ಹೊಂದಾಣಿಕೆಯಾಗುತ್ತಿಲ್ಲ PAN ಪ್ರಕಾರ ಹೆಸರನ್ನು ನವೀಕರಿಸಲು ಶಾಖೆಯನ್ನು ಸಂಪರ್ಕಿಸಿ. ನಂತರ, ವಿವರಗಳನ್ನು ಮರು-ಮೌಲ್ಯೀಕರಿಸಿ ಮತ್ತು ಮರು-ಮೌಲೀಕರಣಕ್ಕೆ ವಿನಂತಿಯನ್ನು ಸಲ್ಲಿಸಿ.
ಬ್ಯಾಂಕ್ ಖಾತೆ ಸಂಖ್ಯೆ ಹೊಂದಾಣಿಕೆಯಾಗುತ್ತಿಲ್ಲ ಮರು-ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ, ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ಮರು-ಮೌಲ್ಯೀಕರಣಕ್ಕಾಗಿ ವಿನಂತಿಯನ್ನು ಸಲ್ಲಿಸಿ.
ಖಾತೆ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ಮರು-ಮೌಲ್ಯಮಾಪನಕ್ಕಾಗಿ ವಿನಂತಿಯನ್ನು ಸಲ್ಲಿಸಿ.
ಬ್ಯಾಂಕ್ ಖಾತೆ ಮುಕ್ತಾಯವಾಗಿದೆ / ನಿಷ್ಕ್ರಿಯವಾಗಿದೆ ಬೇರೆ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಪ್ರಯತ್ನಿಸಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ.

ಒಂದು ವೇಳೆ ಖಾತೆಯನ್ನು ಇಂಟಿಗ್ರೇಟೆಡ್ ಅಗಿಲ್ಲದ ಬ್ಯಾಂಕುಗಳಲ್ಲಿ ಇರಿಸಿದರೆ, ಈ ಕೆಳಗಿನ ಕ್ರಮವನ್ನು ತೆಗೆದುಕೊಳ್ಳಬೇಕು:

ವೈಫಲ್ಯಕ್ಕೆ ಕಾರಣ ತೆಗೆದುಕೊಳ್ಳಬೇಕಾದ ಕ್ರಮ
PAN ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿಲ್ಲ ಬ್ಯಾಂಕ್ ಖಾತೆಯೊಂದಿಗೆ PAN ಅನ್ನು ಲಿಂಕ್ ಮಾಡಿ ಮತ್ತು ವಿನಂತಿಯನ್ನು ಸಲ್ಲಿಸಲು ಮರು-ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ.
PAN ಹೊಂದಾಣಿಕೆಯಾಗುತ್ತಿಲ್ಲ ಸರಿಯಾದ PAN ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ ಮತ್ತು ವಿನಂತಿಯನ್ನು ಸಲ್ಲಿಸಲು ಮರು-ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ.
ಅಮಾನ್ಯವಾದ ಖಾತೆ ಪ್ರಕಾರ ಮರು-ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ , ಸರಿಯಾದ ಬ್ಯಾಂಕ್ ಖಾತೆ ಪ್ರಕಾರವನ್ನು ಆಯ್ಕೆಮಾಡಿ, ಮತ್ತು ಮೌಲ್ಯೀಕರಿಸಲು ವಿನಂತಿಯನ್ನು ಸಲ್ಲಿಸಿ.
ಖಾತೆ ಮುಚ್ಚಲಾಗಿದೆ/ನಿಷ್ಕ್ರಿಯ ಖಾತೆ/ವ್ಯಾಜ್ಯ ಖಾತೆ/ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ ಬೇರೆ ಮಾನ್ಯವಾದ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಪ್ರಯತ್ನಿಸಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ.
ಖಾತೆದಾರರ ಹೆಸರು ಅಮಾನ್ಯವಾಗಿದೆ ಮರು-ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ ಮತ್ತು ವಿವರಗಳನ್ನು ನವೀಕರಿಸಿ. PAN ಪ್ರಕಾರ ಹೆಸರನ್ನು ನವೀಕರಿಸಲು ನಿಮ್ಮ ಶಾಖೆಯನ್ನು ಸಂಪರ್ಕಿಸಿ.

 

ಬ್ಯಾಂಕ್ ದೃಢೀಕರಣ ಸ್ಥಿತಿಯು 'ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ' ಎಂದಿದ್ದರೆ, ಇಲಾಖೆಯಿಂದ ಬ್ಯಾಂಕ್ ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದರ್ಥ. ನೀವು ಇ-ಫೈಲಿಂಗ್‌ನೊಂದಿಗೆ ಸಂಯೋಜಿಸಲ್ಪಟ್ಟ ಮತ್ತು ಇಲಾಖೆಯಿಂದ ಪರಿಶೀಲಿಸಬಹುದಾದ ಇನ್ನೊಂದು ಖಾತೆಯನ್ನು ಸೇರಿಸಬಹುದು ಅಥವಾ ಮರುಪಾವತಿ ಅನ್ವಯವಾಗಿದ್ದರೆ, ಮರುಪಾವತಿ ಮರುವಿತರಣೆ ವಿನಂತಿಯನ್ನು ಸಲ್ಲಿಸುವಾಗ ನೀವು ECS ಆದೇಶ ನಮೂನೆಯನ್ನು ಸಲ್ಲಿಸಬಹುದು.

 

3.6 ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ದೃಢೀಕೃತ ಬ್ಯಾಂಕ್ ಖಾತೆಯನ್ನು ಸೂಚಿಸಿ.

 

ಹಂತ 1: ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್‌ಗಾಗಿ ನಾಮನಿರ್ದೇಶನ ಬಟನ್ ಸಕ್ರಿಯಗೊಳಿಸಿ:

Data responsive

 

 

ಹಂತ 2: ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ.

Data responsive

 

ಹಂತ 3: ಈಗ, ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಲಾಗಿದೆ.

Data responsive

 

 

4. ಸಂಬಂಧಿತ ವಿಷಯಗಳು