1. ಚಾರ್ಟರ್ಡ್ ಅಕೌಂಟೆಂಟ್ ಎಂದರೆ ಯಾರು?
ಚಾರ್ಟರ್ಡ್ ಅಕೌಂಟೆಂಟ್ (CA) ಭಾರತದ ಚಾರ್ಟರ್ಡ್ ಅಕೌಂಟೆಂಟ್‍ಗಳ ಸಂಸ್ಥೆಯ ಒಬ್ಬ ನೋಂದಾಯಿತ ಸದಸ್ಯರಾಗಿರುತ್ತಾರೆ CA ಆತನ/ಆಕೆಯ ಗ್ರಾಹಕರ ಪರವಾಗಿ ITR, ಲೆಕ್ಕಪರಿಶೋಧನೆ ವರದಿಗಳು ಮತ್ತು ಇತರ ಶಾಸನಬದ್ಧ ಫಾರಂಗಳ ಫೈಲ್ ಅನ್ನು ಸಲ್ಲಿಸಬಹುದು.

2. CA ಆಗಿ ನೋಂದಾಯಿಸಲು ಪೂರ್ವಾಪೇಕ್ಷಿತಗಳು ಯಾವುವು?
ಒಬ್ಬ CA ಆಗಿ ನೋಂದಾಯಿಸಲು ಅಗತ್ಯವಿರುವ ಪೂರ್ವಾಪೇಕ್ಷಿತಗಳು ಎಂದರೆ ಸದಸ್ಯತ್ವ ಸಂಖ್ಯೆ ಮತ್ತು ದಾಖಲಾತಿ ದಿನಾಂಕ. ನಿಮ್ಮ PAN ಅನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು ಹಾಗೂ ಮಾನ್ಯ ಮತ್ತು ಸಕ್ರಿಯ DSC ಅನ್ನು ನಿಗದಿತ PAN ಜೊತೆ ನೋಂದಾಯಿಸಿರಲೇಬೇಕು.

3. ನನಗೆ CA ಆಗಿ ನೋಂದಣಿ ಮಾಡಲು DSC ಅಗತ್ಯವಿದೆಯೇ?
ಹೌದು, ನೀವು CA ಹಾಗೆ ನೋಂದಣಿ ಮಾಡಲು DSC ಅಗತ್ಯವಿದೆ. ನಿಮ್ಮ DSC ಅನ್ನು ನೋಂದಣಿ ಮಾಡದಿದ್ದರೆ, ನೀವು ಅದನ್ನು ಮೊದಲಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು.

4. CA ಆಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಲು ನನಗೆ ಎಂಸೈನರ್ ಉಪಯುಕ್ತತೆಯ ಅಗತ್ಯವಿದೆಯೇ?
ಹೌದು, ನೀವು ಎಂಸೈನರ್ ಉಪಯುಕ್ತತೆಯನ್ನು ಡೌನ್ ಲೋಡ್ ಮಾಡಬೇಕಾಗುತ್ತದೆ ಮತ್ತು ಸ್ಥಾಪಿಸಬೇಕಾಗುತ್ತದೆ. ನೋಂದಣಿ ಸಮಯದಲ್ಲಿ ಡೌನ್ ಲೋಡ್‍ಗಾಗಿ ಲಿಂಕ್‌ಅನ್ನು ನಿಮಗೆ ಲಭ್ಯವಿರುವಂತೆ ಮಾಡಲಾಗಿದೆ.