1. ಅವಲೋಕನ
ಈ ಪೂರ್ವ-ಲಾಗಿನ್ ಸೇವೆಯು ಇ-ಫೈಲಿಂಗ್ ಪೋರ್ಟಲ್‌ಗೆ ನೋಂದಣಿ ಮಾಡಲು ಮತ್ತು ಪ್ರವೇಶಿಸಲು ಬಯಸುವ ಚಾರ್ಟರ್ಡ್ ಅಕೌಂಟೆಂಟ್(CA)ಗಳಿಗೆ ಲಭ್ಯವಿದೆ. ಈ ನೋಂದಣಿ ಸೇವೆಯು ಎಲ್ಲಾ ತೆರಿಗೆ ಸಂಬಂಧಿತ ಚಟುವಟಿಕೆಗಳನ್ನು ಪ್ರವೇಶಿಸಲು ಮತ್ತು ಟ್ರ್ಯಾಕ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
- CA ಸದಸ್ಯತ್ವ ಸಂಖ್ಯೆ
- CA ಆಗಿ ನೋಂದಾಯಿಸಲು ದಾಖಲಾತಿ ದಿನಾಂಕ
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ PAN
- ನಿಗದಿತ PAN ಜೊತೆಗೆ ಮಾನ್ಯತೆ ಪಡೆದ ಮತ್ತು ಸಕ್ರಿಯಗೊಂಡ DSC ಅನ್ನು ನೋಂದಾಯಿಸಲಾಗಿದೆ
3. ಹಂತ-ಹಂತವಾದ ಮಾರ್ಗದರ್ಶಿ
ಹಂತ 1: ಇ-ಫೈಲಿಂಗ್ ಮುಖಪುಟಕ್ಕೆ ಹೋಗಿ, ನೋಂದಾಯಿಸಿ ಕ್ಲಿಕ್ ಮಾಡಿ.
ಹಂತ2:ಇತರೆ ಕ್ಲಿಕ್ ಮಾಡಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿ ಪ್ರವರ್ಗವನ್ನು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 3: ಮೂಲ ವಿವರಗಳ ಪೇಜ್‍ನಲ್ಲಿ PAN, ಹೆಸರು, DOB, ಸದಸ್ಯತ್ವ ಸಂಖ್ಯೆ ಮತ್ತು ದಾಖಲಾತಿ ದಿನಾಂಕದಂತಹ ಎಲ್ಲಾ ಕಡ್ಡಾಯ ವಿವರಗಳು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಸೂಚನೆ:
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮ್ಮ PAN ನೋಂದಾಯಿಸದಿದ್ದರೆ, ದೋಷ ಸಂದೇಶವು ಪ್ರದರ್ಶಿತವಾಗುವುದು ನಿಮ್ಮ PAN ನೋಂದಾಯಿತವಾಗಿದ್ದರೆ ಮಾತ್ರ ನೀವು CA ಆಗಿ ನೋಂದಣಿ ಮಾಡಬಹುದು.
- ಈ ಹಂತದಲ್ಲಿ, DSC ಅನ್ನು ನಿರ್ದಿಷ್ಟ PANಗೆ ಲಿಂಕ್ ಮಾಡಿದೆಯೇ ಎಂದು ಸಿಸ್ಟಮ್ ಪರಿಶೀಲಿಸುತ್ತದೆ. DSC ನೋಂದಣಿ ಮಾಡದಿದ್ದರೆ ಅಥವಾ PANಗೆ ಲಿಂಕ್ ಮಾಡಲಾದ DSCಯ ಅವಧಿ ಮುಕ್ತಾಯವಾಗಿದ್ದರೆ, ದೋಷ ಸಂದೇಶವು ಪ್ರದರ್ಶಿತವಾಗುವುದು. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮುಂದುವರಿಯಲು, PAN ಗೆ ನಿಮ್ಮ DSC ಅನ್ನು ನೋಂದಾಯಿಸಿ / ನವೀಕರಿಸಿ.
ಹಂತ 4: ICAI ಡೇಟಾಬೇಸ್‌ನೊಂದಿಗೆ ಯಶಸ್ವಿಯಾಗಿ ಊರ್ಜಿತಗೊಂಡ ಮೇಲೆ, ಸಂಪರ್ಕ ವಿವರಗಳು ಪೇಜ್ ಗೋಚರಿಸುತ್ತದೆ. ಪ್ರಾಥಮಿಕ ಮೊಬೈಲ್ ನಂಬರ್ ಅಥವಾ ಸಂಖ್ಯೆ, ಇಮೇಲ್ ID ಮತ್ತು ವಿಳಾಸದಂತಹ ಎಲ್ಲಾ ಕಡ್ಡಾಯ ವಿವರಗಳನ್ನು ನಮೂದಿಸಿದ ನಂತರ, ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 5: ಎರಡು ಪ್ರತ್ಯೇಕ OTPಗಳನ್ನು ಹಂತ 4 ರಲ್ಲಿ ನಮೂದಿಸಿದ ನಿಮ್ಮ ಮೊಬೈಲ್ ಸಂಖ್ಯೆ ಮತ್ತುಇಮೇಲ್ IDಗೆ ಕಳುಹಿಸಲಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ IDಯಲ್ಲಿ ಸ್ವೀಕೃತವಾದ ಪ್ರತ್ಯೇಕ 6- ಅಂಕಿಯ OTP ಗಳನ್ನು ನಮೂದಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.
ಸೂಚನೆ:
- OTP 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
- ಸರಿಯಾದ OTP ನಮೂದಿಸಲು ನೀವು 3 ಪ್ರಯತ್ನಗಳನ್ನು ಹೊಂದಿರುತ್ತೀರಿ.
- ಸ್ಕ್ರೀನ್ ಮೇಲೆ OTP ಮುಕ್ತಾಯ ಕೌಂಟ್‌ಡೌನ್ ಟೈಮರ್ OTP ಯಾವಾಗ ಮುಕ್ತಾಯಗೊಳ್ಳುತ್ತದೆ ಎಂದು ನಿಮಗೆ ತಿಳಿಸುತ್ತದೆ.
- OTP ಅನ್ನು ಮರುಕಳುಹಿಸಿ ಕ್ಲಿಕ್ ಮಾಡಿದಾಗ, ಹೊಸ OTP ಅನ್ನು ಸಂರಚಿಸಿ, ಕಳುಹಿಸಲಾಗುತ್ತದೆ.
ಹಂತ 6: ನಮೂದಿಸಿದ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಅಗತ್ಯವಿದ್ದರೆ ಸ್ಕ್ರೀನ್ ನಲ್ಲಿ ವಿವರಗಳನ್ನು ತಿದ್ದಿ, ನಂತರ ದೃಢೀಕರಿಸಿ ಕ್ಲಿಕ್ ಮಾಡಿ.
ಹಂತ 7: ಪಾಸ್‌ವರ್ಡ್ ಹೊಂದಿಸಿ ಪುಟದಲ್ಲಿ, ನಿಮ್ಮ ಅಪೇಕ್ಷಿತ ಪಾಸ್‌ವರ್ಡ್ ಅನ್ನು ಪಾಸ್‌ವರ್ಡ್ ಹೊಂದಿಸಿ ಮತ್ತು ಪಾಸ್‌ವರ್ಡ್ ದೃಢೀಕರಿಸಿ ಎರಡೂ ಪಠ್ಯ ಬಾಕ್ಸ್‌ಗಳಲ್ಲಿ ನಮೂದಿಸಿ, ನಿಮ್ಮ ವೈಯಕ್ತಿಕ ಸಂದೇಶವನ್ನು ಹೊಂದಿಸಿ ಹಾಗೂ ನೋಂದಾಯಿಸಿ ಕ್ಲಿಕ್ ಮಾಡಿ.
ಸೂಚನೆ:
- ರಿಫ್ರೆಶ್ ಅಥವಾ ಹಿಂದಿರುಗಿ ಆಯ್ಕೆಯನ್ನು ಕ್ಲಿಕ್ ಮಾಡಬೇಡಿ.
- ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸುವಾಗ, ಪಾಸ್‌ವರ್ಡ್ ನಿಯಮಗಳ ಕುರಿತು ಜಾಗರೂಕರಾಗಿರಿ:
- ಇದು ಕನಿಷ್ಠ 8 ಅಕ್ಷರಗಳ ಅಥವಾ ಹೆಚ್ಚೆಂದರೆ 14 ಅಕ್ಷರಗಳದ್ದಾಗಿರಬೇಕು.
- ಇದರಲ್ಲಿ ದೊಡ್ಡ ಅಕ್ಷರ ಮತ್ತು ಸಣ್ಣ ಅಕ್ಷರಗಳು ಇರಬೇಕು.
- ಇದರಲ್ಲಿ ಒಂದಾದರೂ ಸಂಖ್ಯೆಯನ್ನು ಹೊಂದಿರಬೇಕು.
- ಇದರಲ್ಲಿ ಒಂದು ವಿಶೇಷ ಅಕ್ಷರವನ್ನು ಹೊಂದಿರಬೇಕು (ಉದಾ. @#$%).
ಹಂತ 8: ಲಾಗಿನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಲಾಗಿನ್ ಮಾಡಲು ಮುಂದುವರಿಯಿರಿ ಕ್ಲಿಕ್ ಮಾಡಿ. ನಿಮ್ಮ ಲಾಗಿನ್ ವಿವರಗಳನ್ನು ನಿಮ್ಮ ಪ್ರಾಥಮಿಕ ಇಮೇಲ್ IDಗೆ ಇಮೇಲ್ ಮೂಲಕ ಕಳುಹಿಸಲಾಗುತ್ತದೆ.
ಸೂಚನೆ: ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮಗೆ ಲಭ್ಯವಿರುವ ಎಲ್ಲಾ ಫೀಚರ್ ಅನ್ನು ಪ್ರವೇಶಿಸಲು ನಿಮ್ಮ ಪ್ರೊಫೈಲ್‌ಗೆ ಲಾಗ್ ಇನ್ ಮಾಡಿ ಮತ್ತು ನವೀಕರಿಸಿ.