ಸ್ವರೂಪ 10A u/s 12A ಬಳಕೆದಾರ ಕೈಪಿಡಿ ಕುರಿತ ಕ್ಷಮಾಭರಣ ವಿನಂತಿ
1. ಅವಲೋಕನ
ನಿರ್ದಿಷ್ಟ ಗಡುವಿನ ದಿನಾಂಕದೊಳಗೆ ತೆರಿಗೆದಾರರು ಫಾರ್ಮ್ 10A ಅನ್ನು ಸಲ್ಲಿಸದಿದ್ದಲ್ಲಿ, ಫಾರ್ಮ್ 10A ಸಲ್ಲಿಕೆಯಲ್ಲಿ ಉಂಟಾದ ವಿಳಂಬ ಮನ್ನಿಸಲು(Condonation) ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಯಾವುದೇ ಸೌಲಭ್ಯ ಲಭ್ಯವಿರಲಿಲ್ಲ. ಈಗ, ತೆರಿಗೆದಾರರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 12A ಅಡಿಯಲ್ಲಿ ಫಾರ್ಮ್ 10A ಸಲ್ಲಿಕೆಯಲ್ಲಿ ಉಂಟಾದ ವಿಳಂಬವನ್ನು ಮನ್ನಿಸಲು ಮನವಿಯನ್ನು (Condonation Request) ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಲ್ಲಿಸಬಹುದು.
2024ರ ಹಣಕಾಸು (ಸಂಖ್ಯೆ 2) ಕಾಯ್ದೆಯ ಮೂಲಕ ಆದಾಯ ತೆರಿಗೆ ಕಾಯ್ದೆ, 1961ಕ್ಕೆ ತಿದ್ದುಪಡಿ ಮಾಡಲಾಗಿದ್ದು, ಸೆಕ್ಷನ್ 12A(1)ರ ಉಪವಿಧಿ (ac)ಯಲ್ಲಿನ ನಿಬಂಧನೆಯ ಅನುಗುಣವಾಗಿ ಫಾರ್ಮ್ 10A ಸಲ್ಲಿಕೆಯಲ್ಲಿ ಉಂಟಾದ ವಿಳಂಬವನ್ನು ಮನ್ನಿಸುವ ಅಧಿಕಾರವನ್ನು ಪ್ರಧಾನ ಆಯುಕ್ತರು ಅಥವಾ ಆಯುಕ್ತರಿಗೆ ನೀಡಲಾಗಿದೆ.
ಈ ಬಳಕೆದಾರರ ಕೈಪಿಡಿಯಲ್ಲಿ, ವಿಳಂಬ ಮನ್ನಿಸಲು ಮನವಿಯನ್ನು ಹೇಗೆ ಸಲ್ಲಿಸುವುದು ಎಂಬುದನ್ನು ಹಂತ-ಹಂತವಾಗಿ ವಿವರಿಸಲಾಗಿದೆ. ಜೊತೆಗೆ, ಇದಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನೂ ನೀಡಲಾಗಿದೆ.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
•ಮಾನ್ಯವಿರುವ ಬಳಕೆದಾರರ ID ಮತ್ತು ಪಾಸ್‌ವರ್ಡ್
• ಫಾರ್ಮ್ 10A ಸಲ್ಲಿಕೆಗೆ ನಿಗದಿಪಡಿಸಿದ ಗಡುವು ಮುಗಿದಿದೆ.
• ವಿಳಂಬಕ್ಕೆ ಸಮಂಜಸವಾದ ಕಾರಣ
3. ಹಂತ-ಹಂತವಾದ ಮಾರ್ಗದರ್ಶಿ
3.1 ಸೆಕ್ಷನ್ 12A ಅಡಿಯಲ್ಲಿ ಫಾರ್ಮ್ 10A ಗಾಗಿ ವಿಳಂಬವನ್ನು ಮನ್ನಿಸಲು ಮನವಿ
ಸಂಬಂಧಿತ ಮೌಲ್ಯಮಾಪನ ವರ್ಷಗಳಿಗಾಗಿ, ಸಲ್ಲಿಕೆಯಲ್ಲಿ ಉಂಟಾದ ವಿಳಂಬವನ್ನು ಮನ್ನಿಸುವಂತೆ PCIT/CIT(E) ಅವರಿಗೆ ಮನವಿ ಸಲ್ಲಿಸುವುದು.
(ದಯವಿಟ್ಟು ಗಮನಿಸಿ ಫಾರ್ಮ್ 10A ಗಾಗಿ ವಿಳಂಬವನ್ನು ಮನ್ನಿಸಲು ಕೋರುವ ಮನವಿಯನ್ನು ಕೇವಲ ಆನ್‌ಲೈನ್ ಮೂಲಕವೇ ಸಲ್ಲಿಸಬಹುದು ಆಫ್‌ಲೈನ್ ಮೂಲಕ ಸಲ್ಲಿಸುವ ಅವಕಾಶ ಲಭ್ಯವಿಲ್ಲ.)
ಹಂತ 1: ಇ-ಫೈಲಿಂಗ್ ಪೋರ್ಟಲ್‌ನ ಮುಖಪುಟಕ್ಕೆ ಹೋಗಿ ‘ಲಾಗಿನ್’ ಮೇಲೆ ಕ್ಲಿಕ್ ಮಾಡಿ.
ಹಂತ 2: ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ 3: ಸೇವೆಗಳು (Services) > ವಿಳಂಬವನ್ನು ಮನ್ನಿಸಲು ಕೋರುವ ಮನವಿ > ಕಾನೂನಾತ್ಮಕ ಫಾರ್ಮ್‌ಗಳಿಗೆ ಅರ್ಜಿ ಗೆ ಹೋಗಿ.
ಹಂತ 4: “+ ವಿಳಂಬ ಮನ್ನಿಸಲು ಮನವಿ” ಮೇಲೆ ಕ್ಲಿಕ್ ಮಾಡಿ. ಈ ಹಿಂದೆ ಸಲ್ಲಿಸಿದ ಮನವಿಗಳನ್ನು ನೋಡಲು “ವಿವರಗಳನ್ನು ನೋಡಿ” ಮೇಲೆ ಕ್ಲಿಕ್ ಮಾಡಿ.
ಹಂತ 5: “ಹೊಸ ಸಲ್ಲಿಕೆಯನ್ನು ಪ್ರಾರಂಭಿಸಿ” ಮೇಲೆ ಕ್ಲಿಕ್ ಮಾಡಿ.
ಹಂತ 6: ವಿಳಂಬ ಮನ್ನಿಸಲು ಕೋರುವ ಮನವಿ ಫಾರ್ಮ್ ಅನ್ನು ಭರ್ತಿ ಮಾಡಿ:
1. ತೆರಿಗೆದಾರರ ವಿವರಗಳು
2. ಫ಼ಾರ್ಮ್‌ನಲ್ಲಿನ ವಿವರಗಳು
• ಯಾವ ಸೆಕ್ಷನ್ ಅಡಿಯಲ್ಲಿ ವಿಳಂಬವನ್ನು ಮನ್ನಿಸಲು ಮನವಿ ಸಲ್ಲಿಸಲಾಗುತ್ತಿದೆ ಎಂಬುದನ್ನು ಆಯ್ಕೆ ಮಾಡಿ, ಫಾರ್ಮ್ ಹೆಸರು, ಸೆಕ್ಷನ್ ಕೋಡ್, ಮೌಲ್ಯಮಾಪನ ವರ್ಷ, ಹಾಗೂ ಸಂಬಂಧಿತ ಅನುಸರಣೆ ಫಾರ್ಮ್‌ಗೆ ಅನ್ವಯವಾಗುವಂತೆ ಸಲ್ಲಿಸಬೇಕಾಗಿದ್ದ ಕೊನೆಯ ದಿನಾಂಕವನ್ನು ಆಯ್ಕೆ ಮಾಡಿ.
• ಫಾರ್ಮ್ 10A ಈಗಾಗಲೇ ಸಲ್ಲಿಸಲ್ಪಟ್ಟಿದ್ದರೆ, ಅದರ ಸ್ವೀಕೃತಿ ಸಂಖ್ಯೆ ಹಾಗೂ ಫಾರ್ಮ್ 10A ಸಲ್ಲಿಸಿದ ದಿನಾಂಕವನ್ನು ನಮೂದಿಸಿ.
• ಫಾರ್ಮ್ 10A ಸಲ್ಲಿಕೆಯಲ್ಲಿ ಉಂಟಾದ ವಿಳಂಬದ ಕಾರಣವನ್ನು ನಮೂದಿಸಿ.
3. ಅಡಕ: "ಫಾರ್ಮ್ ಈಗಾಗಲೇ ಸಲ್ಲಿಸಲ್ಪಟ್ಟಿದೆಯೇ?" ಎಂಬ ಕ್ಷೇತ್ರಕ್ಕೆ ನೀವು "ಹೌದು" ಎಂದು ಆಯ್ಕೆ ಮಾಡಿದರೆ, ಸಲ್ಲಿಸಲಾದ ಫಾರ್ಮ್ 10A ಯ PDF ಅನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಹೆಚ್ಚುವರಿಯಾಗಿ, ನೀವು ಯಾವುದೇ ಇತರ ದಾಖಲೆಗಳನ್ನು ಲಗತ್ತಿಸಲು ಬಯಸಿದರೆ, ಅವುಗಳನ್ನು ಸಂಬಂಧಿತ "ಇತರ ಅಡಕ" ಕ್ಷೇತ್ರದಲ್ಲಿ ವಿವರಣೆಯನ್ನು ನೀಡಿ ಲಗತ್ತಿಸಬಹುದು.
4. ಇ-ಪರಿಶೀಲನೆಗೆ ಮುಂದುವರಿಯಲು "ಮುಂದುವರೆಯಿರಿ" ಕ್ಲಿಕ್ ಮಾಡಿ.


ಹಂತ 7: ಇ-ಪರಿಶೀಲನೆ ಮಾಡುವ ವಿಧಾನವನ್ನು ಆಯ್ಕೆ ಮಾಡಿ ಮತ್ತು “ಮುಂದುವರಿಸಿ” ಮೇಲೆ ಕ್ಲಿಕ್ ಮಾಡಿ.
ಹಂತ 8: ಇ-ಪರಿಶೀಲನೆ ನಂತರ ನಿಮ್ಮ ಫಾರ್ಮ್ ಸಲ್ಲಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಟ್ರಾನ್ಸಾಕ್ಷನ್ ಐಡಿ ಅನ್ನು ಬರೆದಿಟ್ಟುಕೊಳ್ಳಿ.