ಫಾರ್ಮ್ 10BD-BE ಕುರಿತು ಬಳಕೆದಾರರ ಕೈಪಿಡಿ

1. ಪಕ್ಷಿನೋಟ

ಆದಾಯ ತೆರಿಗೆ ಕಾಯಿದೆ, 1961ರ ವಿಭಾಗ 80G ಅಡಿಯಲ್ಲಿ ಅನುಮೋದನೆ ಪಡೆದಿರುವ ಟ್ರಸ್ಟ್, ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆ (NGO)ಯು ಆದಾಯ ತೆರಿಗೆ ಪ್ರಾಧಿಕಾರಕ್ಕೆ ಫಾರ್ಮ್ 10BD ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ.ಆದಾಯ ತೆರಿಗೆ ನಿಯಮಗಳು, 1962ರ ನಿಯಮ 18ABರ ಪ್ರಕಾರ, ಕಾಯಿದೆಯ ವಿಭಾಗ 80G ಅಡಿಯಲ್ಲಿ ದಾನಿಗೆ ತೆರಿಗೆ ಕಡಿತದ ಪ್ರಯೋಜನ ಲಭ್ಯವಾಗುವಂತಹ ದೇಣಿಗೆಗಳನ್ನು ಸ್ವೀಕರಿಸುವ ವ್ಯಕ್ತಿ/ಸಂಸ್ಥೆಯು, ದೇಣಿಗೆಯ ವಿವರಗಳ ಹೇಳಿಕೆಯನ್ನು ಫಾರ್ಮ್ ಸಂಖ್ಯೆ 10BDಯಲ್ಲಿ ಸಲ್ಲಿಸಬೇಕು.‌

ಬಳಕೆದಾರರು (ವರದಿ ಮಾಡುವ ಘಟಕ) ನೇರವಾಗಿ ಫಾರ್ಮ್‌ 10BD ಅನ್ನು ಸಲ್ಲಿಸಿ ದಾನಿಗಳಿಗಾಗಿ (ಫಾರ್ಮ್‌ 10BD ಸಲ್ಲಿಸಿದ 24 ಗಂಟೆಗಳ ನಂತರ) ಸಿಸ್ಟಮ್‌ನಿಂದ ರಚಿಸಲಾದ ಫಾರ್ಮ್‌ 10BE ಪ್ರಮಾಣಪತ್ರಗಳನ್ನು ರಚಿಸುವ ಅಥವಾ ದಾನಿಗಳಿಗೆ ಫಾರ್ಮ್‌ 10BE ಪ್ರಮಾಣಪತ್ರಗಳನ್ನು ಕೈಯಾರೆ ನೀಡುವುದಕ್ಕಾಗಿ ಪೂರ್ವ ಸ್ವೀಕೃತಿ ಸಂಖ್ಯೆಗಳು (Pre-ARN’s) ಅನ್ನು ರಚಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ವರದಿ ಮಾಡುವ ಘಟಕವು (ಟ್ರಸ್ಟ್, ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆ (NGO)) ಫಾರ್ಮ್ 10BD ಅನ್ನು ಸಲ್ಲಿಸದೆ ಫಾರ್ಮ್ 10BEಗಾಗಿ ಗರಿಷ್ಠ 1000 ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ರಚಿಸಬಹುದು. ಪೂರ್ವ-ಸ್ವೀಕೃತಿ ಸಂಖ್ಯೆ (Pre-ARN)ಯು, ದೇಣಿಗೆ ಸ್ವೀಕರಿಸುವ ಸಮಯದಲ್ಲಿ ದಾನಿಗಳಿಗೆ ಭೌತಿಕ ವಿತರಣೆಯಾಗಿ ನೀಡಲಾಗುವ ದೇಣಿಗೆ ಪ್ರಮಾಣಪತ್ರಗಳಲ್ಲಿ ಉಲ್ಲೇಖಿಸಬೇಕಾದ ವಿಶಿಷ್ಟ ಸಂಖ್ಯೆಯಾಗಿರುತ್ತದೆ. ಈ ರೀತಿಯಾಗಿ ಪೂರ್ವ-ಸ್ವೀಕೃತಿ ಸಂಖ್ಯೆಗಳೊಂದಿಗೆ ಭೌತಿಕ ವಿತರಣೆಯಾಗಿ ನೀಡಲಾದ ಎಲ್ಲಾ ದೇಣಿಗೆ ಪ್ರಮಾಣಪತ್ರಗಳ ವಿವರಗಳನ್ನು ಫಾರ್ಮ್ 10BD ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ನಮೂದಿಸಬೇಕು.

ಫಾರ್ಮ್ 10BD ಅನ್ನು ಸಲ್ಲಿಸುವ ಮೂಲಕ ಈ ಹಿಂದೆ ರಚಿಸಲಾದ ಎಲ್ಲಾ ಪೂರ್ವ-ARN ಗಳನ್ನು ಬಳಸಿದ ನಂತರ ದೇಣಿಗೆ ಪ್ರಮಾಣಪತ್ರಗಳ ಭೌತಿಕ ವಿತರಣೆಗಾಗಿ ವರದಿ ಮಾಡುವ ಘಟಕವು ಮುಂದಿನ 1000 ಪೂರ್ವ-ARN ಗಳನ್ನು ರಚಿಸಬಹುದು.

ಫಾರ್ಮ್ 10BD ಯಲ್ಲಿ ದೇಣಿಗೆಗಳ ಹೇಳಿಕೆಯನ್ನು ಸಲ್ಲಿಸಿದ ನಂತರ, ವರದಿ ಮಾಡುವ ಸಂಸ್ಥೆಯು ಫಾರ್ಮ್ 10BE ಯಲ್ಲಿ ದೇಣಿಗೆಗಳ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿ ನೀಡಬೇಕು, ಇದರಲ್ಲಿ ಪ್ಯಾನ್ ಸಂಖ್ಯೆ ಮತ್ತು ಹೆಸರು, 80G & 35(1) ಅಡಿಯಲ್ಲಿ ಅನುಮೋದನೆ ಸಂಖ್ಯೆಗಳು ಮತ್ತು ದೇಣಿಗೆಗಳು ಮತ್ತು ದಾನಿಗಳ ವಿವರಗಳು ಸೇರಿದಂತೆ ಸಂಸ್ಥೆಯ ವಿವರಗಳಿವೆ.

ಈ ಬಳಕೆದಾರ ಕೈಪಿಡಿಯು ಹಂತ-ಹಂತದ ಪ್ರಕ್ರಿಯೆಯನ್ನು ಒಳಗೊಂಡಿದೆ.


• ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ಹೇಗೆ ರಚಿಸುವುದು?(ವಿಭಾಗ 4.1)

• ಹಿಂದಿನ ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ವೀಕ್ಷಿಸಿ (ವಿಭಾಗ 4.2)

• ಫಾರ್ಮ್ 10BD ಅನ್ನು ಹೇಗೆ ಸಲ್ಲಿಸುವುದು? (ದಾನಿಗಳು ಮತ್ತು ದೇಣಿಗೆಗಳ ವಿವರಗಳ ಹೇಳಿಕೆ) (ವಿಭಾಗ 4.3)‌

• ಫಾರ್ಮ್ 10BD ಸಲ್ಲಿಸಿದ ನಂತರ ಫಾರ್ಮ್‌ 10BE ಅನ್ನು ಹೇಗೆ ರಚಿಸುವುದು? (ವಿಭಾಗ 4.4)

• ಪರಿಷ್ಕೃತ ಫಾರ್ಮ್ 10BD ಅನ್ನು ಹೇಗೆ ಸಲ್ಲಿಸುವುದು? (ವಿಭಾಗ 4.5)

• ಪರಿಷ್ಕೃತ ಫಾರ್ಮ್ 10BD ಅನ್ನು ಹೇಗೆ ವೀಕ್ಷಿಸುವುದು? (ವಿಭಾಗ 4.6)

• ಪರಿಷ್ಕೃತ ಫಾರ್ಮ್ 10BE ಅನ್ನು ಹೇಗೆ ವೀಕ್ಷಿಸುವುದು? (ವಿಭಾಗ 4.7)

2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು

•    ತೆರಿಗೆದಾರರು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕು.

•    ತೆರಿಗೆದಾರರು ಮಾನ್ಯವಾದ ಬಳಕೆದಾರಹೆಸರು (PAN) ಮತ್ತು ಇ-ಸಲ್ಲಿಕೆ 2.0 ಪೋರ್ಟಲ್‌ನ ಪಾಸ್‌ವರ್ಡ್ ಅನ್ನು ಹೊಂದಿರಬೇಕು.

•    PAN ದತ್ತಸಂಗ್ರಹ (ಡೇಟಾಬೇಸ್) ಪ್ರಕಾರ ತೆರಿಗೆದಾರರ PAN ಸ್ಥಿತಿಯು "ಸಕ್ರಿಯವಾಗಿರಬೇಕು."

•   ತೆರಿಗೆದಾರರು DSC (ಡಿಜಿಟಲ್ ಸಹಿ ಪ್ರಮಾಣಪತ್ರ) ಮೂಲಕ ದೃಢೀಕರಿಸಲು ಬಯಸಿದಲ್ಲಿ, ಅವರು ಮಾನ್ಯವಾದ DSC ಹೊಂದಿರಬೇಕು. ಅದು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರಬೇಕು ಹಾಗೂ ಅದರ ಮಾನ್ಯತೆಯ ಅವಧಿ ಮುಕ್ತಾಯಗೊಂಡಿರಬಾರದು.

3. ಫಾರ್ಮ್ ಕುರಿತು

3.1 ಉದ್ದೇಶ

ಸೆಕ್ಷನ್ 80G(5)(viii) ಮತ್ತು ಸೆಕ್ಷನ್ 35(1A)(i) ರ ಪ್ರಕಾರ, ವರದಿ ಮಾಡುವ ವ್ಯಕ್ತಿಯು ಹಣಕಾಸು ವರ್ಷ 2021–22 ರಿಂದ ಪ್ರಾರಂಭಿಸಿ ಪ್ರತಿ ಹಣಕಾಸು ವರ್ಷದ ಸಂಬಂಧಿತ ವಿವರಗಳ ಹೇಳಿಕೆಯನ್ನು ಸಲ್ಲಿಸಬೇಕು. ದೇಣಿಗೆಗಳ ವಿವರಗಳ ಹೇಳಿಕೆಯನ್ನು (ಫಾರ್ಮ್ 10BD) ಸಲ್ಲಿಸುವುದು ಕಡ್ಡಾಯವಾಗಿದೆ.‌

3.2 ಇದನ್ನು ಯಾರು ಬಳಸಬಹುದು?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80G ಅಡಿಯಲ್ಲಿ ಅನುಮೋದಿಸಲಾದ ಟ್ರಸ್ಟ್ ಅಥವಾ ಸಂಸ್ಥೆ ಅಥವಾ NGO ಗಳು ಆದಾಯ ತೆರಿಗೆ ಪ್ರಾಧಿಕಾರಕ್ಕೆ ಫಾರ್ಮ್ 10BD ಅನ್ನು ಒದಗಿಸುವ ಅಗತ್ಯವಿದೆ.

3.3 ಫಾರ್ಮ್‌ನ ಒಂದು ಸಂಕ್ಷಿಪ್ತ ನೋಟ

ಫಾರ್ಮ್ 10BD ಈ ಕೆಳಗಿನ 3 ಭಾಗಗಳನ್ನು ಹೊಂದಿದೆ-

1.    ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ರಚಿಸಿ

2.    ಹಿಂದೆ ರಚಿಸಲಾದ ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ವೀಕ್ಷಿಸಿ

3.ಸೆಕ್ಷನ್ 80G(5)/35(1A)(i) ಅಡಿಯಲ್ಲಿ ವರದಿ ಮಾಡುವ ವ್ಯಕ್ತಿಯಿಂದ ಸಲ್ಲಿಸಬೇಕಾದ ವಿವರಗಳ ಹೇಳಿಕೆ [ಫಾರ್ಮ್ 10BD]

Data responsive

4. ಹಂತ ಹಂತದ ಮಾರ್ಗದರ್ಶಿ  

4.1 ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ರಚಿಸಿ

(ಫಾರ್ಮ್ 10BE ಅನ್ನು ಭೌತಿಕ ವಿತರಣೆಯಾಗಿ ನೀಡಲು ಅಗತ್ಯವಿರುವ ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು(Pre-ARNs) ರಚಿಸುವ ಸೌಲಭ್ಯವು ಹಣಕಾಸು ವರ್ಷ 2022–23 ರಿಂದ ಸಲ್ಲಿಸಲಾದ ವಿವರಗಳಿಗೆ ಮಾತ್ರ ಲಭ್ಯವಿದೆ. ನೀವು ಹಣಕಾಸು ವರ್ಷ 2021–22 ಗಾಗಿ ಫಾರ್ಮ್ 10BD ಅನ್ನು ಸಲ್ಲಿಸುತ್ತಿದ್ದರೆ, 'ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ರಚಿಸಿ' ಅಥವಾ 'ಹಿಂದೆ ರಚಿಸಲಾದ ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ವೀಕ್ಷಿಸಿ' ಎಂಬ ಮೊದಲ ಎರಡು ವಿಭಾಗಗಳು ನಿಮಗೆ ಪ್ರದರ್ಶಿಸಲಾಗುವುದಿಲ್ಲ.)‌

ಹಂತ 1: ನಿಮ್ಮ ಬಳಕೆದಾರರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಿ.

Data responsive

ಹಂತ 2: ಬಳಕೆದಾರ ID (PAN) ಮತ್ತು ಪಾಸ್‌ವರ್ಡ್ ನಮೂದಿಸಿ.

Data responsive

ಹಂತ 3: "ಇ-ಸಲ್ಲಿಕೆ > ಆದಾಯ ತೆರಿಗೆ ಫಾರ್ಮ್‌ಗಳು > ಆದಾಯ ತೆರಿಗೆ ಫಾರ್ಮ್‌ಗಳನ್ನು ಸಲ್ಲಿಸಿ"ಗೆ ಹೋಗಿ

Data responsive

ಹಂತ 4: ಆದಾಯ ತೆರಿಗೆ ಕಾಯಿದೆ, 1961 ಟ್ಯಾಬ್‌ನಲ್ಲಿರುವ ಫಾರ್ಮ್‌ಗಳು ವಿಭಾಗದ ಅಡಿಯಲ್ಲಿ ಫಾರ್ಮ್ 10BD ಅನ್ನು ಆಯ್ಕೆ ಮಾಡಿ ಅಥವಾ ಹುಡುಕಿ.‌

Data responsive

ಹಂತ 5: ಡ್ರಾಪ್-ಡೌನ್ ಮೆನುವಿನಿಂದ ಸಲ್ಲಿಕೆಯ ಪ್ರಕಾರ ಮತ್ತು ಹಣಕಾಸು ವರ್ಷವನ್ನು ಆಯ್ಕೆ ಮಾಡಿ, ನಂತರ ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 6: ಪ್ರಾರಂಭಿಸೋಣ ಮೇಲೆ ಕ್ಲಿಕ್‌ ಮಾಡಿ.

Data responsive

ಹಂತ 7: Pre-ARN ಅನ್ನು ರಚಿಸಲು ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ರಚಿಸಿ ಮೇಲೆ ಕ್ಲಿಕ್ ಮಾಡಿ.
ಸೂಚನೆ: ನೀವು ಫಾರ್ಮ್ 10BD ಅನ್ನು ನೇರವಾಗಿ ಸಲ್ಲಿಸಿ, ವ್ಯವಸ್ಥೆಯಿಂದ (System Generated) ಫಾರ್ಮ್ 10BE ಪ್ರಮಾಣಪತ್ರಗಳನ್ನು ರಚಿಸಲು ಬಯಸಿದರೆ, "ಸೆಕ್ಷನ್ 80G(5)/35(1A)(i) ಅಡಿಯಲ್ಲಿ ವರದಿ ಮಾಡುವ ವ್ಯಕ್ತಿಯಿಂದ ಸಲ್ಲಿಸಬೇಕಾದ ವಿವರಗಳ ಹೇಳಿಕೆ [ಫಾರ್ಮ್ 10BD]" ಫಲಕವನ್ನು ಆಯ್ಕೆ ಮಾಡಿ ಮತ್ತು ಸಲ್ಲಿಕೆ ಪ್ರಕ್ರಿಯೆಯನ್ನು ಮುಂದುವರಿಸಿ.‌

Data responsive


ಹಂತ 8: ಬಳಕೆದಾರರು ರಚಿಸಲು ಬಯಸುವ Pre-ARNಗಳ ಸಂಖ್ಯೆಯನ್ನು ನಮೂದಿಸಿ, ನಂತರ Pre-ARNಗಳನ್ನು ರಚಿಸಿ ಮೇಲೆ ಕ್ಲಿಕ್ ಮಾಡಿ.

ಸೂಚನೆ: ಫಾರ್ಮ್ 10BD ಅನ್ನು ಸಲ್ಲಿಸುವ ಮೊದಲು ಗರಿಷ್ಠ 1000 Pre-ARNಗಳನ್ನು ರಚಿಸಬಹುದು. ಅಲ್ಲದೆ, ಪ್ರಸ್ತುತ ದಿನಾಂಕದವರೆಗೆ ಸಂಬಂಧಿತ ಹಣಕಾಸು ವರ್ಷದ ಬಳಕೆಯಾಗದೆ ಉಳಿದಿರುವ Pre-ARNಗಳ ಸಂಖ್ಯೆಯನ್ನು ಸಹ ವೀಕ್ಷಿಸಬಹುದು.
‌

Data responsive


ಗಮನಿಸಿ: "Pre-ARNಗಳನ್ನು ರಚಿಸುವುದನ್ನು ದಯವಿಟ್ಟು ದೃಢೀಕರಿಸಿ. ಮೊದಲು ಬಳಕೆಯಾಗದೆ ಉಳಿದಿರುವ ARNಗಳನ್ನು ಬಳಸುವುದು ಶಿಫಾರಸು ಮಾಡಲಾಗಿದೆ." ಎಂಬ ದೃಢೀಕರಣ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

Data responsive


ಹಂತ 9: ಈಗ "Pre-ARNಗಳನ್ನು ಯಶಸ್ವಿಯಾಗಿ ರಚಿಸಲಾಗಿದೆ. ARNಗಳ ಪಟ್ಟಿಯನ್ನು ಪಡೆಯಲು ದಯವಿಟ್ಟು 'Excelಗೆ ವರ್ಗಾಯಿಸಿ (Export to Excel)' ಬಟನ್ ಮೇಲೆ ಕ್ಲಿಕ್ ಮಾಡಿ." ಎಂಬ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

ರಚಿಸಲಾದ (ARN) ಪಟ್ಟಿಯನ್ನು ಪಡೆಯಲು 'ಎಕ್ಸೆಲ್ ಗೆ ವರ್ಗಾಯಿಸಿ' ಮೇಲೆ ಕ್ಲಿಕ್ ಮಾಡಿ.

Data responsive


ಸೂಚನೆ:
•    ದೇಣಿಗೆ ಸ್ವೀಕರಿಸುವವರು, ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡುವ ಅಗತ್ಯವಿಲ್ಲದೆ, ದೇಣಿಗೆ ಸ್ವೀಕರಿಸಿದ ತಕ್ಷಣವೇ ದಾನಿಗಳಿಗೆ ಭೌತಿಕ ವಿತರಣೆ ಮೂಲಕ ಫಾರ್ಮ್ 10BE ಅನ್ನು ನೀಡಬಹುದು. ದೇಣಿಗೆ ಸ್ವೀಕೃತಿಗಾಗಿ ನೀಡಲಾಗುವ ಪ್ರತಿಯೊಂದು ಭೌತಿಕ ವಿತರಣೆ ಪ್ರಮಾಣಪತ್ರದಲ್ಲಿಯೂ, ದೇಣಿಗೆ ಸ್ವೀಕರಿಸುವವರು ಸಂಬಂಧಿತ Pre-ARN ಅನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕು.

•    ರಚಿಸಲಾದ Pre-ARNಗಳನ್ನು ಬಳಸಿದ ನಂತರ, ದೇಣಿಗೆ ಸ್ವೀಕರಿಸುವವರು ಮತ್ತೆ ಹೊಸ Pre-ARNಗಳನ್ನು ರಚಿಸಿ, ಭೌತಿಕ ರಸೀದಿಯನ್ನು ನೀಡಬಹುದು. ಈ ಪ್ರಕ್ರಿಯೆಯನ್ನು ಗರಿಷ್ಠ 1000 Pre-ARNಗಳ ಮಿತಿಯೊಳಗೆ ಅಗತ್ಯವಿರುವಷ್ಟು ಬಾರಿ ಮುಂದುವರಿಸಬಹುದು.

•    1000 Pre-ARN ನಮೂದುಗಳನ್ನು (ಬಳಸದ) ಬಳಸಿದ ನಂತರ, ದೇಣಿಗೆ ಸ್ವೀಕರಿಸುವವರು ಆ 1000 Pre-ARN ನಮೂದುಗಳಿಗೆ ಸಂಬಂಧಿಸಿದ ವಿವರಗಳೊಂದಿಗೆ ಫಾರ್ಮ್ 10BD ಅನ್ನು ಸಲ್ಲಿಸಬೇಕು. ಫಾರ್ಮ್ 10BD ಯಶಸ್ವಿಯಾಗಿ ಸಲ್ಲಿಕೆಯಾದ ನಂತರ, ಆ 1000 Pre-ARNಗಳು ಬಳಕೆಯಾದವು ಎಂದು ಪರಿಗಣಿಸಲಾಗುತ್ತದೆ.

•    ಫಾರ್ಮ್ 10BD ಅನ್ನು ಸಲ್ಲಿಸುವ ಮೂಲಕ ಈ ಹಿಂದೆ ರಚಿಸಲಾದ 1000 ಪೂರ್ವ-ARNಗಳನ್ನು ಬಳಸಿದ ನಂತರವೇ ದಾನ ಸ್ವೀಕರಿಸುವವರು ಮುಂದಿನ 1000 ಪೂರ್ವ-ARNಗಳನ್ನು ರಚಿಸಬಹುದು.

4.2 ಹಿಂದೆ ರಚಿಸಲಾದ ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ವೀಕ್ಷಿಸಿ 

ಹಂತ 1: ಹಿಂದಿನ ಪೂರ್ವ-ಸ್ವೀಕೃತಿ ಸಂಖ್ಯೆಗಳನ್ನು ವೀಕ್ಷಿಸಿ ಮೇಲೆ ಕ್ಲಿಕ್‌ ಮಾಡಿ.

Data responsive

ಹಂತ 2: ಇಲ್ಲಿ ನೀವು ರಚಿಸಲಾದ ಎಲ್ಲಾ Pre-ARNಗಳ ಸ್ಥಿತಿಯನ್ನು (ಬಳಕೆಯಾದವು, ಬಳಕೆಯಾಗದೆ ಉಳಿದಿರುವವು, ಅವಧಿ ಮುಕ್ತಾಯಗೊಂಡವು ಹಾಗೂ ಅಳಿಸಲಾದವು) ವೀಕ್ಷಿಸಿ ಪರಿಶೀಲಿಸಬಹುದು.

Data responsive

ಗಮನಿಸಿ: Pre-ARNನ ಸ್ಥಿತಿ(status)ಯನ್ನು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ನವೀಕರಿಸಲಾಗುತ್ತದೆ.

ಹಂತ 2(a): ಫಿಲ್ಟರ್ ಆಯ್ಕೆಯನ್ನು ಬಳಸುವ ಮೂಲಕ ನಿರ್ದಿಷ್ಟ ARNನ ಸ್ಥಿತಿಯನ್ನು ವೀಕ್ಷಿಸಬಹುದು ಅಥವಾ ಪರಿಶೀಲಿಸಬಹುದು.
ಮೇಲಿನ ಬಲ ಮೂಲೆಯಲ್ಲಿರುವ ಫಿಲ್ಟರ್ ಮೇಲೆ ಕ್ಲಿಕ್ ಮಾಡಿ. ನಂತರ ಸ್ಥಿತಿ (Status) ಮತ್ತು ರಚಿಸಿದ ದಿನಾಂಕ (From–To) ಅನ್ನು ಆಯ್ಕೆ ಮಾಡಿ, ಬಳಿಕ ಅನ್ವಯಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ಈಗ ನೀವು ರಚಿಸಲಾದ ನಿರ್ದಿಷ್ಟ Pre-ARNನ ಸ್ಥಿತಿಯನ್ನು ಪರಿಶೀಲಿಸಬಹುದು.

Data responsive

4.3 ವಿಭಾಗ 80G(5)/35(1A)(i) ಅಡಿಯಲ್ಲಿ ವರದಿ ಮಾಡುವ ವ್ಯಕ್ತಿಯಿಂದ ಸಲ್ಲಿಸಬೇಕಾದ ವಿವರಗಳ ಹೇಳಿಕೆ [ಫಾರ್ಮ್‌ 10BD]

ಹಂತ 1: 'ವಿಭಾಗ 80G(5)/35(1A)(i) ಅಡಿಯಲ್ಲಿ ವರದಿ ಮಾಡುವ ವ್ಯಕ್ತಿಯಿಂದ ಸಲ್ಲಿಸಬೇಕಾದ ವಿವರಗಳ ಹೇಳಿಕೆ' ಮೇಲೆ ಕ್ಲಿಕ್ ಮಾಡಿ.

Data responsive

 

Data responsive

 ಹಂತ 2: ಪ್ರಮುಖ ಫಾರ್ಮ್ 10BD ತೆರೆಯುತ್ತದೆ. ಇದರಲ್ಲಿ ಮೂರು ಟ್ಯಾಬ್‌ಗಳು ಇರುತ್ತವೆ.‌

•    ಟ್ಯಾಬ್ 1: ಪ್ರಾಥಮಿಕ ಮಾಹಿತಿ - PAN ಮತ್ತು ವರದಿ ಮಾಡುವ ಅವಧಿಯನ್ನು ಒಳಗೊಂಡಿರುತ್ತದೆ.

•    ಟ್ಯಾಬ್ 2: ದಾನಿಗಳು ಮತ್ತು ದೇಣಿಗೆಗಳ ವಿವರಗಳು - ಹೆಸರು, ದಾನಿಗಳ ವಿಳಾಸ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

•   ಟ್ಯಾಬ್ 3: ಪರಿಶೀಲನೆ

Data responsive

ಹಂತ-3: ಮೂಲ ಮಾಹಿತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 4: PAN, ವರದಿ ಅವಧಿ (01-Apr-202X ರಿಂದ 31-Mar-202X ವರೆಗೆ), ವರದಿ ಮಾಡುವ ವ್ಯಕ್ತಿಯ ಹೆಸರು ಹಾಗೂ ಸಂಪೂರ್ಣ ವಿಳಾಸವು ನನ್ನ ಪ್ರೊಫೈಲ್ನಿಂದ ಸ್ವಯಂಚಾಲಿತವಾಗಿ ಭರ್ತಿಯಾಗಿರುತ್ತದೆ. ವಿವರಗಳನ್ನು ಪರಿಶೀಲಿಸಿ, ನಂತರ ದೃಢೀಕರಿಸಿ ಮೇಲೆ ಕ್ಲಿಕ್ ಮಾಡಿ.

ಗಮನಿಸಿ : ಬಳಕೆದಾರರು ಸಂಪರ್ಕ ವಿವರಗಳನ್ನು ನವೀಕರಿಸಬೇಕಾದಲ್ಲಿ, "ನನ್ನ ಪ್ರೊಫೈಲ್" ಗೆ ಒಂದು ಹೈಪರ್‌ಲಿಂಕ್ ಅನ್ನು ಒದಗಿಸಲಾಗಿದೆ.

Data responsive

ಹಂತ 5: 'ಮೂಲ ಮಾಹಿತಿ' ಟ್ಯಾಬ್‌ನಲ್ಲಿ 'ಪೂರ್ಣಗೊಂಡಿದೆ' ಎಂಬ ಸ್ಥಿತಿ(status)ಯೊಂದಿಗೆ ಹಸಿರು ಟಿಕ್ ಗುರುತು ಪ್ರದರ್ಶಿಸಲಾಗುತ್ತದೆ.

Data responsive

ಹಂತ 6: ಈಗ 'ದಾನಿಗಳು ಮತ್ತು ದೇಣಿಗೆಗಳ ವಿವರಗಳು' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಎಕ್ಸೆಲ್(Excel) ಕಡತವನ್ನು ಡೌನ್‌ಲೋಡ್ ಮಾಡಲು 'ಟೆಂಪ್ಲೇಟ್ ಡೌನ್‌ಲೋಡ್ ಮಾಡಿ (Download Template)' ಮೇಲೆ ಕ್ಲಿಕ್ ಮಾಡಿ.‌

Data responsive

 

Data responsive

ಎಕ್ಸೆಲ್(Excel) ಕಡತದಲ್ಲಿ ಒಟ್ಟು 12 ಕ್ಷೇತ್ರಗಳು / ಕಾಲಮ್‌ಗಳು ಇರುತ್ತವೆ. ಅವುಗಳಲ್ಲಿ ಕೆಳಗಿನ ನಾಲ್ಕು ಕ್ಷೇತ್ರಗಳು / ಕಾಲಮ್‌ಗಳು ಡ್ರಾಪ್-ಡೌನ್ ಆಯ್ಕೆಯನ್ನು ಹೊಂದಿರುತ್ತವೆ:‌ ಕಾಲಮ್ C – ಗುರುತಿನ ಕೋಡ್ (ID Code), ಕಾಲಮ್ E – ವಿಭಾಗದ ಕೋಡ್ (Section Code), ಕಾಲಮ್ J – ದೇಣಿಗೆಯ ವಿಧ (Donation Type), ಹಾಗೂ ಕಾಲಮ್ K – ಸ್ವೀಕೃತಿಯ ವಿಧಾನ (Mode of Receipt) 
ಬಳಕೆದಾರರು ಈ ಮಾಹಿತಿಯನ್ನು ಸಂಬಂಧಿತ ಕ್ಷೇತ್ರಗಳಲ್ಲಿ ಸೂಕ್ತವಾಗಿ ಭರ್ತಿ ಮಾಡಬೇಕು.‌

Data responsive

ಸೂಚನೆ:
•   ಅಪ್‌ಲೋಡ್ ಮಾಡುವ ಮೊದಲು ದಯವಿಟ್ಟು ಫೈಲ್ ಅನ್ನು .csv ಗೆ ಪರಿವರ್ತಿಸಿ.

•   CSV ಫೈಲ್‌ನಲ್ಲಿ ಗರಿಷ್ಠ 25000 ಸಂಖ್ಯೆಯ ಸಾಲುಗಳನ್ನು ಸೇರಿಸಬಹುದಾಗಿದೆ, ಹೆಚ್ಚಿನ ದಾಖಲೆಗಳನ್ನು ಸೇರಿಸಲು ನೀವು ಇನ್ನೊಂದು ಫಾರ್ಮ್ 10BD ಅನ್ನು ಫೈಲ್ ಮಾಡಬೇಕಾಗುತ್ತದೆ.

•   ಫಾರ್ಮ್ 10BD ಅನ್ನು ಒಂದೇ ಹಣಕಾಸು ವರ್ಷಕ್ಕೆ ಅನೇಕ ಬಾರಿ ಸಲ್ಲಿಸುವುದಕ್ಕೂ ಅನುಮತಿಸಲಾಗಿದೆ.

•    ಫಾರ್ಮ್ 10BE ಯ ಭೌತಿಕ ವಿತರಣೆಗಾಗಿ ಪೂರ್ವ ಸ್ವೀಕೃತಿ ಸಂಖ್ಯೆಗಳ ರಚನೆಯು F.Y 2022-23 ರಿಂದ ಲಭ್ಯವಿರುತ್ತದೆ.ನೀವು F.Y 2021-22 ಕ್ಕಾಗಿ ಫಾರ್ಮ್ 10BD ಅನ್ನು ಸಲ್ಲಿಸುತ್ತಿದ್ದರೆ, ಅಪ್‌ಲೋಡ್ ಮಾಡಿದ CSV ಫೈಲ್‌ನಲ್ಲಿ ನೀವು 'ಪೂರ್ವ ಸ್ವೀಕೃತಿ ಸಂಖ್ಯೆ' ಕ್ಷೇತ್ರವನ್ನು ಖಾಲಿ ಬಿಡಬಹುದು.

ಹಂತ-7: ಡೌನ್‌ಲೋಡ್ ಮಾಡಲಾದ ಎಕ್ಸೆಲ್(Excel) ಟೆಂಪ್ಲೇಟ್‌ನಲ್ಲಿ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಆ ಮಾಹಿತಿಯನ್ನು Excel ಟೆಂಪ್ಲೇಟ್‌ನಲ್ಲಿ ಉಳಿಸಿ (Save‌ it).

ನಂತರ File > Save As ಅಥವಾ Alt+F+A ಅನ್ನು ಆಯ್ಕೆ ಮಾಡಿ. Save as type ಡ್ರಾಪ್-ಡೌನ್‌ನಿಂದ CSV ಅನ್ನು ಆಯ್ಕೆ ಮಾಡಿ, ನಂತರ ಉಳಿಸಿ(Save) ಮೇಲೆ ಕ್ಲಿಕ್ ಮಾಡಿ. ಇದರಿಂದ ಭರ್ತಿ ಮಾಡಲಾದ ಎಕ್ಸೆಲ್(Excel) ಕಡತವು CSV ಸ್ವರೂಪದಲ್ಲಿ ಉಳಿಸಲಾಗುತ್ತದೆ.‌ ಈ CSV ಸ್ವರೂಪದ ಕಡತವನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.

Data responsiveData responsive

ಹಂತ 8: 'CSV ಕಡತವನ್ನು ಅಪ್‌ಲೋಡ್ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ, CSV ಕಡತವನ್ನು ಅಪ್‌ಲೋಡ್ ಮಾಡಿ, ನಂತರ ಉಳಿಸಿ (Save) ಮೇಲೆ ಕ್ಲಿಕ್ ಮಾಡಿ.

Data responsive

ಹಂತ 9: 'ದಾನಿಗಳು ಮತ್ತು ದೇಣಿಗೆಗಳ ವಿವರಗಳು' ಟ್ಯಾಬ್‌ನಲ್ಲಿ 'ಪೂರ್ಣಗೊಂಡಿದೆ' ಎಂಬ ಸ್ಥಿತಿಯೊಂದಿಗೆ ಹಸಿರು ಟಿಕ್ ಗುರುತು ಪ್ರದರ್ಶಿಸಲಾಗುತ್ತದೆ.
ಈಗ 'ಪರಿಶೀಲನೆ' ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಫಾರ್ಮ್ 10BD ಅನ್ನು ಪರಿಶೀಲಿಸಿ.‌

Data responsive

ಹಂತ 10: ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಿ: ತಂದೆ/ತಾಯಿಯ ಹೆಸರು ಮತ್ತು ಫಾರ್ಮ್‌ ಅನ್ನು ಪರಿಶೀಲಿಸುವ ವ್ಯಕ್ತಿಯ ಸಾಮರ್ಥ್ಯ, ಉದಾಹರಣೆಗೆ ಟ್ರಸ್ಟಿ, ಸದಸ್ಯ, ನಿರ್ದೇಶಕ ಇತ್ಯಾದಿ. ಹಾಗೆಯೇ, ಫಾರ್ಮ್‌ ಅನ್ನು ಸಲ್ಲಿಸಲಾಗುತ್ತಿರುವ ಸ್ಥಳವನ್ನು 'ಸ್ಥಳ' ಕ್ಷೇತ್ರದಲ್ಲಿ ನಮೂದಿಸಿ.

Data responsive

ಗಮನಿಸಿ: ಯಾವುದೇ ಮಾಹಿತಿ ಅಪೂರ್ಣವಾಗಿದ್ದರೆ, ವ್ಯವಸ್ಥೆಯು ದೋಷ ಸಂದೇಶವನ್ನು ಪ್ರದರ್ಶಿಸುತ್ತದೆ ಮತ್ತು ಫಾರ್ಮ್‌ ಅನ್ನು ಉಳಿಸಲು (Save) ಅನುಮತಿಸುವುದಿಲ್ಲ.

ಹಂತ 11: ಮೂಲ ಮಾಹಿತಿ, ದಾನಿಗಳು ಮತ್ತು ದೇಣಿಗೆಗಳ ವಿವರಗಳು ಹಾಗೂ ಪರಿಶೀಲನೆ ಟ್ಯಾಬ್‌ಗಳಲ್ಲಿ ಪೂರ್ಣಗೊಂಡಿದೆ ಎಂಬ ಸ್ಥಿತಿಯೊಂದಿಗೆ ಹಸಿರು ಟಿಕ್ ಗುರುತು ಪ್ರದರ್ಶಿಸಲಾಗುತ್ತದೆ.

Data responsive

ಈಗ ಪೂರ್ವವೀಕ್ಷಣೆ ಮೇಲೆ ಕ್ಲಿಕ್‌ ಮಾಡಿ.

Data responsive

ಹಂತ 12: ಇ-ಪರಿಶೀಲನೆಗೆ ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ. ನಿಮಗೆ ಲಭ್ಯವಿರುವ ಯಾವುದೇ ಇ-ಪರಿಶೀಲನೆ ವಿಧಾನವನ್ನು ಬಳಸಿಕೊಂಡು ಫಾರ್ಮ್ 10BD ಅನ್ನು ‌ಇ-ಪರಿಶೀಲಿಸಬಹುದು.

Data responsive

 
ಹಂತ 13: 
ಇ-ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಫಾರ್ಮ್‌ ಅನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂಬ ಯಶಸ್ಸಿನ ಸಂದೇಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

Data responsive

ಗಮನಿಸಿ: ಫಾರ್ಮ್ 10BD ಸಲ್ಲಿಸಿದ ಸಮಯದಿಂದ 24 ಗಂಟೆಗಳ ನಂತರ, ನೀವು ಫಾರ್ಮ್‌ 10BE ಅನ್ನು ಡೌನ್‌ಲೋಡ್ ಮಾಡಬಹುದು.

4.4 ಫಾರ್ಮ್ 10BE ನಲ್ಲಿ ದೇಣಿಗೆ ಪ್ರಮಾಣಪತ್ರ (ದಾನಿಗಳಿಗೆ)

ಫಾರ್ಮ್ 10BDಯಲ್ಲಿ ದೇಣಿಗೆಗಳ ವಿವರಗಳ ಹೇಳಿಕೆಯನ್ನು ಸಲ್ಲಿಸಿದ ನಂತರ, ಫಾರ್ಮ್ 10BEಯಲ್ಲಿರುವ ದೇಣಿಗೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿ ದಾನಿಗೆ ನೀಡಬೇಕು. ಫಾರ್ಮ್ 10BEಯಲ್ಲಿ NGOನ PAN, NGOನ ಹೆಸರು, ವಿಭಾಗ 80G ಹಾಗೂ ವಿಭಾಗ 35(1) ಅಡಿಯಲ್ಲಿ ಪಡೆದಿರುವ ಅನುಮೋದನೆ ಸಂಖ್ಯೆಗಳು ಮತ್ತು ದೇಣಿಗೆ ಹಾಗೂ ದಾನಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿರುತ್ತವೆ.

ಹಂತ 1: ನಿಮ್ಮ ಬಳಕೆದಾರರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಿ.

Data responsive

ಹಂತ 2: ಬಳಕೆದಾರ ID (PAN) ಮತ್ತು ಪಾಸ್‌ವರ್ಡ್ ನಮೂದಿಸಿ.

Data responsive

ಹಂತ 3: ಇ-ಸಲ್ಲಿಕೆಗೆ ಹೋಗಿ > ಆದಾಯ ತೆರಿಗೆ ಫಾರ್ಮ್‌ಗಳು > ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ > 1961 ರ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಫಾರ್ಮ್‌ಗಳು

Data responsive

ಹಂತ-4: 10BE PDFಗಳನ್ನು ಡೌನ್‌ಲೋಡ್ ಮಾಡಿ ಮೇಲೆ ಕ್ಲಿಕ್ ಮಾಡಿ.

Data responsive

ಗಮನಿಸಿ: ಫಾರ್ಮ್ 10BD ಸಲ್ಲಿಸಿದ ಸಮಯದಿಂದ 24 ಗಂಟೆಗಳ ನಂತರ ಫಾರ್ಮ್‌ 10BE ಡೌನ್‌ಲೋಡ್ ಮಾಡಲು ಲಭ್ಯವಾಗುತ್ತದೆ.

ಹಂತ-5: ಈಗ PDF (ಫಾರ್ಮ್ 10BE) ಯಶಸ್ವಿಯಾಗಿ ಡೌನ್‌ಲೋಡ್‌ ಆಗಿದ್ದು, ಅದನ್ನು ದಾನಿಗಳಿಗೆ ನೀಡಬಹುದು.

Data responsive

4.5 ಪರಿಷ್ಕೃತ ಫಾರ್ಮ್ 10BD ಯ ಸಲ್ಲಿಕೆ

ಹಂತ 1: ನಿಮ್ಮ ಬಳಕೆದಾರರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಿ.

Data responsive

ಹಂತ 2: ಬಳಕೆದಾರ ID (PAN) ಮತ್ತು ಪಾಸ್‌ವರ್ಡ್ ನಮೂದಿಸಿ.

Data responsive

ಹಂತ 3: ಇ-ಸಲ್ಲಿಕೆ > ಆದಾಯ ತೆರಿಗೆ ಫಾರ್ಮ್‌ಗಳು > ಆದಾಯ ತೆರಿಗೆ ಫಾರ್ಮ್‌ಗಳ ಸಲ್ಲಿಕೆ
ಗೆ ಹೋಗಿ

Data responsive

ಹಂತ 4: ಆದಾಯ ತೆರಿಗೆ ಕಾಯಿದೆ, 1961 ಟ್ಯಾಬ್‌ನಲ್ಲಿರುವ ಫಾರ್ಮ್‌ಗಳು ವಿಭಾಗದ ಅಡಿಯಲ್ಲಿ ಫಾರ್ಮ್‌ 10BD ಅನ್ನು ಆಯ್ಕೆ ಮಾಡಿ ಅಥವಾ ಹುಡುಕಿ.

Data responsive

ಹಂತ 5: ಡ್ರಾಪ್-ಡೌನ್ ಮೆನುವಿನಿಂದ ಹಣಕಾಸು ವರ್ಷವನ್ನು ಆಯ್ಕೆ ಮಾಡಿ, ಸಲ್ಲಿಕೆಯ ಪ್ರಕಾರವನ್ನು ಪರಿಷ್ಕೃತ ಎಂದು ಆಯ್ಕೆ ಮಾಡಿ, ನಂತರ ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 6: ಪ್ರಾರಂಭಿಸೋಣ ಮೇಲೆ ಕ್ಲಿಕ್‌ ಮಾಡಿ.

Data responsive

ಹಂತ 7: ಮುಖ್ಯ ಫಾರ್ಮ್ 10BD ತೆರೆಯುತ್ತದೆ. ಇದರಲ್ಲಿ ಮೂರು ಟ್ಯಾಬ್‌ಗಳು ಇರುತ್ತವೆ.‌

1.    ಟ್ಯಾಬ್ 1: ಮೂಲ ಮಾಹಿತಿ - PAN ಮತ್ತು ವರದಿ ಮಾಡುವ ಅವಧಿಯನ್ನು ಒಳಗೊಂಡಿರುತ್ತದೆ.

2.    ಟ್ಯಾಬ್ 2: ದಾನಿಗಳು ಮತ್ತು ದೇಣಿಗೆಗಳ ವಿವರಗಳು - ಹೆಸರು, ದಾನಿಗಳ ವಿಳಾಸ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

3.   ಟ್ಯಾಬ್ 3: ಪರಿಶೀಲನೆ

Data responsive

ಹಂತ-8: ಮೂಲ ಮಾಹಿತಿ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ.

Data responsive

ಹಂತ 9: PAN, ವರದಿ ಅವಧಿ (01-Apr-202X ರಿಂದ 31-Mar-202X ವರೆಗೆ), ವರದಿ ಮಾಡುವ ವ್ಯಕ್ತಿಯ ಹೆಸರು ಹಾಗೂ ಸಂಪೂರ್ಣ ವಿಳಾಸವು ನನ್ನ ಪ್ರೊಫೈಲ್ ನಿಂದ ಸ್ವಯಂಚಾಲಿತವಾಗಿ ಭರ್ತಿಯಾಗಿರುತ್ತದೆ. ವಿವರಗಳನ್ನು ಪರಿಶೀಲಿಸಿ, ನಂತರ ದೃಢೀಕರಿಸಿ ಮೇಲೆ ಕ್ಲಿಕ್ ಮಾಡಿ.

ಗಮನಿಸಿ : ಬಳಕೆದಾರರು ತಮ್ಮ ಸಂಪರ್ಕ ವಿವರಗಳನ್ನು ನವೀಕರಿಸಬೇಕಾದಲ್ಲಿ, "ನನ್ನ ಪ್ರೊಫೈಲ್" ಗೆ ಹೋಗಲು ಹೈಪರ್‌ಲಿಂಕ್ ಅನ್ನು ಒದಗಿಸಲಾಗಿದೆ.

Data responsive

ಹಂತ 10: ಮೂಲ ಮಾಹಿತಿ ಟ್ಯಾಬ್ ಅನ್ನು ದೃಢೀಕರಿಸಿದ ನಂತರ, ದಾನಿಗಳು ಮತ್ತು ದೇಣಿಗೆಗಳ ವಿವರಗಳು ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 11: ಈಗ, ದಾನಿಗಳು ಮತ್ತು ದೇಣಿಗೆಗಳ ವಿವರಗಳನ್ನು ಕ್ಲಿಕ್ ಮಾಡಿ. ರಚಿಸಲಾದ 10BEಗಳನ್ನು CSVಗೆ ವರ್ಗಾಯಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಎಕ್ಸೆಲ್ ಫೈಲ್‌ನಲ್ಲಿ ರಚಿಸಲಾದ 10BEಗಳ ವಿವರಗಳು.
 

Data responsive

ಹಂತ 12: ಎಕ್ಸೆಲ್ ಟೆಂಪ್ಲೇಟ್ ಅನ್ನು ಡೌನ್‌ಲೋಡ್ ಮಾಡಲು 'ಟೆಂಪ್ಲೇಟ್ ಡೌನ್‌ಲೋಡ್ ಮಾಡಿ' ಮೇಲೆ ಕ್ಲಿಕ್ ಮಾಡಿ.

Data responsive

ನೀವು (ದಾನಿಯ ಹೆಸರಿನಲ್ಲಿ ಬದಲಾವಣೆ, ದಾನಿಯ ವಿಳಾಸವನ್ನು ಬದಲಾಯಿಸುವುದು/ಸೇರಿಸುವುದು, ದೇಣಿಗೆಯ ಮೊತ್ತದಲ್ಲಿ ಬದಲಾವಣೆ ಇತ್ಯಾದಿ) ತಿದ್ದುಪಡಿಗಳನ್ನು ಮಾಡಬಹುದು ಅಥವಾ ನಮೂದುಗಳನ್ನು ಅಳಿಸಬಹುದು. ಎಕ್ಸೆಲ್ ಶೀಟ್‌ನಲ್ಲಿ ಪರಿಷ್ಕೃತ ವಿವರಗಳನ್ನು ನಮೂದಿಸಿ ಮತ್ತು ಕಾಲಮ್ M ನಲ್ಲಿ ಸ್ಥಿತಿಯನ್ನು ಪರಿಷ್ಕೃತ ಅಥವಾ ಅಳಿಸಿ ಎಂದು ಆಯ್ಕೆಮಾಡಿ.

Data responsive


ಮೂಲಪ್ರತಿಯಿಂದ ಪರಿಷ್ಕರಿಸಬೇಕಾದ 10BE ಗಳು:

10 BE

ಅಗತ್ಯ ಕ್ರಮ

ARN ಗಾಗಿ: DEEFB1996A05221000011

ರೋಹನ್ ಹೆಸರನ್ನು ರಾಜೀವ್ ಎಂದು ಬದಲಿಸುವುದು ಹಾಗೂ ವಿಳಾಸವನ್ನು ಸೇರಿಸುವುದು.

ARN ಗಾಗಿ: DEEFB1996A05221000012

ನಮೂದನ್ನು ಅಳಿಸಿ

ಎಕ್ಸೆಲ್ ಫೈಲ್‌ನಲ್ಲಿ ಬದಲಾವಣೆಯನ್ನು ನಮೂದಿಸಿ ಅಥವಾ ವಿವರಗಳನ್ನು ಅಳಿಸಿ.

Data responsive

ಹಂತ 13: ಡೌನ್‌ಲೋಡ್ ಮಾಡಲಾದ ಎಕ್ಸೆಲ್ ಟೆಂಪ್ಲೇಟ್‌ನಲ್ಲಿ ಪರಿಷ್ಕೃತ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಆ ಮಾಹಿತಿಯನ್ನು ಎಕ್ಸೆಲ್ ಟೆಂಪ್ಲೇಟ್‌ನಲ್ಲಿ ಉಳಿಸಿ (Save).‌

ನಂತರ File > Save As ಅಥವಾ Alt+F+A ಅನ್ನು ಆಯ್ಕೆ ಮಾಡಿ. 'Save as type' ಡ್ರಾಪ್-ಡೌನ್ ಪಟ್ಟಿಯಿಂದ CSV ಅನ್ನು ಆಯ್ಕೆ ಮಾಡಿ, ನಂತರ ಉಳಿಸಿ ಮೇಲೆ ಕ್ಲಿಕ್ ಮಾಡಿ. ಇದರಿಂದ ಭರ್ತಿ ಮಾಡಲಾದ ಎಕ್ಸೆಲ್ ಕಡತವನ್ನು CSV ಸ್ವರೂಪದಲ್ಲಿ ಉಳಿಸಲಾಗುತ್ತದೆ. ಈ CSV ಸ್ವರೂಪದ ಕಡತವನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.

Data responsive

ಹಂತ 14: CSV ಕಡತವನ್ನು ಅಪ್‌ಲೋಡ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ, CSV ಕಡತವನ್ನು ಅಪ್‌ಲೋಡ್ ಮಾಡಿ, ನಂತರ ಉಳಿಸಿ ಮೇಲೆ ಕ್ಲಿಕ್ ಮಾಡಿ.

Data responsiveData responsiveData responsive

ಹಂತ 15: ‘ದಾನಿಗಳು ಮತ್ತು ದೇಣಿಗೆಗಳ ವಿವರಗಳುʼ ಟ್ಯಾಬ್‌ನಲ್ಲಿ 'ಪೂರ್ಣಗೊಂಡಿದೆ' ಎಂಬ ಸ್ಥಿತಿಯೊಂದಿಗೆ ಹಸಿರು ಟಿಕ್ ಗುರುತು ಪ್ರದರ್ಶಿಸಲಾಗುತ್ತದೆ.
ಈಗ, ಫಾರ್ಮ್ 10BD ಅನ್ನು ಪರಿಶೀಲಿಸಲು ಪರಿಶೀಲನೆ ಟ್ಯಾಬ್ ಅನ್ನು ಕ್ಲಿಕ್ ಮಾಡಿ.

Data responsive

ಹಂತ 16: ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಿ: ತಂದೆ/ತಾಯಿಯ ಹೆಸರು ಹಾಗೂ ಫಾರ್ಮ್‌ ಅನ್ನು ಪರಿಶೀಲಿಸುವ ವ್ಯಕ್ತಿಯ ಸಾಮರ್ಥ್ಯ, ಉದಾಹರಣೆಗೆ ಟ್ರಸ್ಟಿ, ಸದಸ್ಯ, ನಿರ್ದೇಶಕ ಇತ್ಯಾದಿ. ಹಾಗೆಯೇ, ಫಾರ್ಮ್‌ ಅನ್ನು ಸಲ್ಲಿಸಲಾಗುತ್ತಿರುವ ಸ್ಥಳವನ್ನು 'ಸ್ಥಳ' ಕ್ಷೇತ್ರದಲ್ಲಿ ಭರ್ತಿ ಮಾಡಿ.

Data responsive

ಹಂತ 17: ಮೂಲ ಮಾಹಿತಿ, ದಾನಿಗಳು ಮತ್ತು ದೇಣಿಗೆಗಳ ವಿವರಗಳು ಹಾಗೂ 'ಪರಿಶೀಲನೆ' ಟ್ಯಾಬ್‌ಗಳಲ್ಲಿ 'ಪೂರ್ಣಗೊಂಡಿದೆ' ಎಂಬ ಸ್ಥಿತಿಯೊಂದಿಗೆ ಹಸಿರು ಟಿಕ್ ಗುರುತು ಪ್ರದರ್ಶಿಸಲಾಗುತ್ತದೆ. ಈಗ 'ಪೂರ್ವವೀಕ್ಷಣೆ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 18: ಇದು ಪರಿಷ್ಕೃತ ನಮೂನೆ 10BDಯ ಪೂರ್ವವೀಕ್ಷಣೆ ಆಗಿದೆ. ಪರಿಶೀಲನೆಗಾಗಿ 'ಪರಿಶೀಲನೆಗೆ ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 19: ಪರಿಶೀಲನೆಯನ್ನು ಮುಂದುವರಿಸಲು 'ಹೌದು' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 20: ಇ-ಪರಿಶೀಲನೆ ವಿಧಾನವನ್ನು ಆಯ್ಕೆ ಮಾಡಿ.

Data responsive

ಹಂತ 21: ಇ-ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ನಮೂನೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂಬ ಯಶಸ್ಸಿನ ಸಂದೇಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

Data responsive

4.6 ಪರಿಷ್ಕೃತ ಫಾರ್ಮ್ 10BD ಯನ್ನು ವೀಕ್ಷಿಸಿ

ಹಂತ 1:ಇ-ಸಲ್ಲಿಕೆ > ಆದಾಯ ತೆರಿಗೆ ಫಾರ್ಮ್ ಗಳನ್ನು ಸಲ್ಲಿಸಿ > ಸಲ್ಲಿಸಿದ ಫಾರ್ಮ್ ಗಳನ್ನು ವೀಕ್ಷಿಸಿ > ಆದಾಯ ತೆರಿಗೆ ಕಾಯಿದೆ, 1961 ಅಡಿಯಲ್ಲಿ ಇರುವ ಫಾರ್ಮ್ ಗಳು > ಫಾರ್ಮ್ 10BD ಅನ್ನು ಹುಡುಕಿ/ಆಯ್ಕೆ ಮಾಡಿ > ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.

Data responsive

ಹಂತ 2: ಪರಿಷ್ಕೃತ ಫಾರ್ಮ್‌ ನ PDF.

Data responsive

4.7 ಪರಿಷ್ಕೃತ ಫಾರ್ಮ್ 10BE ನೋಡಿ

ಹಂತ 1: ಇ-ಸಲ್ಲಿಕೆ > ಆದಾಯ ತೆರಿಗೆ ಫಾರ್ಮ್ ಗಳನ್ನು ಸಲ್ಲಿಸಿ > ಸಲ್ಲಿಸಿದ ಫಾರ್ಮ್ ಗಳನ್ನು ವೀಕ್ಷಿಸಿ > ಆದಾಯ ತೆರಿಗೆ ಕಾಯಿದೆ, 1961 ಅಡಿಯಲ್ಲಿ ಇರುವ ಫಾರ್ಮ್ ಗಳು > ಫಾರ್ಮ್ 10BD ಅನ್ನು ಹುಡುಕಿ/ಆಯ್ಕೆ ಮಾಡಿ > 10BE PDFಗಳನ್ನು ಡೌನ್‌ಲೋಡ್ ಮಾಡಿ ಮೇಲೆ ಕ್ಲಿಕ್ ಮಾಡಿ.

Data responsive

ಗಮನಿಸಿ: ಪರಿಷ್ಕೃತ ಫಾರ್ಮ್ 10BD ಸಲ್ಲಿಸಿದ 24 ಗಂಟೆಗಳ ನಂತರ, ಪರಿಷ್ಕೃತ ಫಾರ್ಮ್ 10BE ಪೋರ್ಟಲ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಾಗುತ್ತದೆ.

ಹಂತ 2: ಪರಿಷ್ಕೃತ PDF ಕಡತಗಳು ನಿಮ್ಮ ಸಿಸ್ಟಮ್‌ಗೆ ಡೌನ್‌ಲೋಡ್ ಆಗಿರುತ್ತವೆ. ಅವುಗಳನ್ನು ವೀಕ್ಷಿಸಲು PDF ಕಡತದ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ಪರಿಷ್ಕೃತ PDF ಕಡತವನ್ನು ತೆರೆಯಿರಿ. ಈಗ ನೀವು ಪರಿಷ್ಕೃತ ಫಾರ್ಮ್‌ 10BE ಅನ್ನು ವೀಕ್ಷಿಸಬಹುದು.

Data responsive