ಫಾರ್ಮ್ 3CB-3CD ಕುರಿತು ಬಳಕೆದಾರರ ಕೈಪಿಡಿ
1. ಪಕ್ಷಿನೋಟ
ತೆರಿಗೆ ತಪ್ಪಿಸುವಿಕೆ ಮತ್ತು ತೆರಿಗೆ ವಂಚನೆಯನ್ನು ತಡೆಗಟ್ಟುವ ಉದ್ದೇಶದಿಂದ, 1984ರ ಹಣಕಾಸು ಕಾಯ್ದೆಯ ಮೂಲಕ ಹೊಸ ಸೆಕ್ಷನ್ 44AB ಅನ್ನು ಸೇರಿಸಿ, ನಿರ್ಧರಣೆ ವರ್ಷ 1985–86ರಿಂದ ಜಾರಿಗೆ ಬರುವಂತೆ ತೆರಿಗೆ ಪರಿಶೋಧನೆಯ ಅವಶ್ಯಕತೆಯನ್ನು ಪರಿಚಯಿಸಲಾಯಿತು.
ತೆರಿಗೆ ಪರಿಶೋಧನೆಯು, ತೆರಿಗೆದಾರರು ಆದಾಯ ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಿರುವ ಕೆಲವು ವಾಸ್ತವಿಕ ವಿವರಗಳ ಸತ್ಯತೆ ಮತ್ತು ನಿಖರತೆಯ ಕುರಿತು ತೆರಿಗೆ ಪರಿಶೋಧಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರಕ್ರಿಯೆಯಾಗಿದೆ. ಇದರಿಂದ ಎಲ್ಲಾ ಅನುಮತಿ, ಕಡಿತ, ನಷ್ಟ, ಹೊಂದಾಣಿಕೆ, ವಿನಾಯಿತಿ ಇತ್ಯಾದಿಗಳನ್ನು ಪರಿಗಣಿಸಿ ಒಟ್ಟು ಆದಾಯವನ್ನು ಸರಿಯಾಗಿ ನಿರ್ಧರಣೆ ಮಾಡಲು ಹಾಗೂ ಅದರ ಮೇಲಿನ ತೆರಿಗೆಯನ್ನು ಅಂತಿಮವಾಗಿ ನಿರ್ಧರಿಸಲು ಸಹಾಯವಾಗುತ್ತದೆ. ತೆರಿಗೆ ಪರಿಶೋಧನೆಯನ್ನು ಈ ಕೆಳಗಿನ ಉದ್ದೇಶಗಳನ್ನು ಸಾಧಿಸಲು ನಡೆಸಲಾಗುತ್ತದೆ:
- ತೆರಿಗೆದಾರರು ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿರುವುದನ್ನು ಹಾಗೂ ಅವುಗಳ ನಿಖರತೆಯನ್ನು ಖಚಿತಪಡಿಸುವುದು ಮತ್ತು ಚಾರ್ಟರ್ಡ್ ಅಕೌಂಟೆಂಟ್ನಿಂದ ಅವುಗಳನ್ನು ಪ್ರಮಾಣೀಕರಿಸುವುದು.
- ಲೆಕ್ಕಪರಿಶೋಧನೆಯ ಸಮಯದಲ್ಲಿ ಗಮನಿಸಿದ ಅವಲೋಕನಗಳು / ವ್ಯತ್ಯಾಸಗಳನ್ನು CA ಯವರು ವರದಿ ಮಾಡುವುದು.
- ಫ಼ಾರ್ಮ್ 3CDನಲ್ಲಿ ಉಲ್ಲೇಖಿಸಲಾದ ಆದಾಯ ತೆರಿಗೆ ಕಾಯ್ದೆಯ ವಿವಿಧ ನಿಬಂಧನೆಗಳ ಅನುಸಾರ, ನಿಗದಿಪಡಿಸಿದ ಮಾಹಿತಿಯನ್ನು ವರದಿ ಮಾಡುವುದು.
ಈ ಫ಼ಾರ್ಮನ್ನು ಚಾರ್ಟರ್ಡ್ ಅಕೌಂಟೆಂಟ್ (CA) ತಮ್ಮ ಡಿಜಿಟಲ್ ಸಹಿ ಪ್ರಮಾಣಪತ್ರ (DSC) ಬಳಸಿ ಅಪ್ಲೋಡ್ ಮಾಡಬೇಕು.
ಲೆಕ್ಕಪತ್ರಗಳ ಪರಿಶೋಧನಾ ವರದಿಯನ್ನು ಸೆಕ್ಷನ್ 44ABರ ಅಡಿಯಲ್ಲಿ ಯಾವ ರೀತಿಯಲ್ಲಿ ವರದಿ ಮಾಡಿ ಸಲ್ಲಿಸಬೇಕು ಎಂಬುದನ್ನು ನಿಯಮ 6G ನಿರ್ದಿಷ್ಟಪಡಿಸುತ್ತದೆ. ಇದಕ್ಕಾಗಿ ಎರಡು ವಿಧದ ಫ಼ಾರ್ಮ್ಸ್ ಇವೆ — 3CA–3CD ಮತ್ತು 3CB–3CD. ಆದ್ದರಿಂದ, ಪ್ರತಿ ತೆರಿಗೆದಾರರಿಗೆ ಈ ಎರಡರಲ್ಲಿ ಯಾವುದಾದರೂ ಒಂದು ಫ಼ಾರ್ಮ್ ಅನ್ವಯವಾಗುತ್ತದೆ.
- ಫ಼ಾರ್ಮ್ 3CA–3CD ಯಾವುದೇ ಕಾನೂನಿನ ಅಡಿಯಲ್ಲಿ ತಮ್ಮ ಲೆಕ್ಕಪತ್ರಗಳನ್ನು ಕಡ್ಡಾಯವಾಗಿ ಪರಿಶೋಧನೆಗೆ ಒಳಪಡಿಸಬೇಕಾದ ವ್ಯಕ್ತಿಗಳಿಗೆ ಅನ್ವಯಿಸುತ್ತದೆ.
- ಫ಼ಾರ್ಮ್ 3CB–3CD ಮೇಲಿನ ವರ್ಗಕ್ಕೆ ಸೇರದ ವ್ಯಕ್ತಿಗಳಿಗೆ, ಅಂದರೆ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಲೆಕ್ಕಪತ್ರಗಳ ಪರಿಶೋಧನೆ ಕಡ್ಡಾಯವಲ್ಲದ ವ್ಯಕ್ತಿಗಳಿಗೆ ಅನ್ವಯಿಸುತ್ತದೆ.
2. ಈ ಸೇವೆಯನ್ನು ಪಡೆಯಲು ಅಗತ್ಯ ಪೂರ್ವಾಪೇಕ್ಷಿತಗಳು
- ತೆರಿಗೆದಾರರು ಮತ್ತು ಚಾರ್ಟರ್ಡ್ ಅಕೌಂಟೆಂಟ್ (CA) ಮಾನ್ಯವಾದ ಬಳಕೆದಾರ ID ಮತ್ತು ಪಾಸ್ವರ್ಡ್ನೊಂದಿಗೆ ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿತರಾಗಿರಬೇಕು.
- ತೆರಿಗೆದಾರರು ಮತ್ತು ಚಾರ್ಟರ್ಡ್ ಅಕೌಂಟೆಂಟ್ (CA) ಅವರ PAN ಸ್ಥಿತಿ ಸಕ್ರಿಯವಾಗಿರಬೇಕು.
- ತೆರಿಗೆದಾರರು ಫ಼ಾರ್ಮ್ 3CB–3CDಗಾಗಿ ಚಾರ್ಟರ್ಡ್ ಅಕೌಂಟೆಂಟ್ (CA) ಅವರನ್ನು ನಿಯೋಜಿಸಿರಬೇಕು.
- ಚಾರ್ಟರ್ಡ್ ಅಕೌಂಟೆಂಟ್ (CA) ಮತ್ತು ತೆರಿಗೆದಾರರು ಮಾನ್ಯ ಹಾಗೂ ಸಕ್ರಿಯ ಡಿಜಿಟಲ್ ಸಹಿ ಪ್ರಮಾಣಪತ್ರ (DSC) ಹೊಂದಿರಬೇಕು.
- ವೈಯಕ್ತಿಕ ತೆರಿಗೆದಾರರ ಸಂದರ್ಭದಲ್ಲಿ, ತೆರಿಗೆದಾರರ PAN ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಿರಬೇಕು (ಶಿಫಾರಸು ಮಾಡಲಾಗಿದೆ).
3. ಫ಼ಾರ್ಮ್ ಕುರಿತು ಮಾಹಿತಿ
3.1. ಉದ್ದೇಶ
ಫ಼ಾರ್ಮ್ 3CB–3CD ಅನ್ನು ಯಾವುದೇ ಇತರ ಕಾನೂನಿನ ಅಡಿಯಲ್ಲಿ ಲೆಕ್ಕಪತ್ರಗಳ ಪರಿಶೋಧನೆ ಕಡ್ಡಾಯವಲ್ಲದ ವ್ಯಕ್ತಿಗಳಿಗೆ ಅನ್ವಯಿಸಲಾಗುತ್ತದೆ. ಇದು ತೆರಿಗೆದಾರರು ನಿರ್ವಹಿಸಿರುವ ಲೆಕ್ಕಪತ್ರಗಳ ನಿಖರತೆಯನ್ನು ಪ್ರಮಾಣೀಕರಿಸಲು, ಚಾರ್ಟರ್ಡ್ ಅಕೌಂಟೆಂಟ್ (CA) ಗಮನಿಸಿದ ಅವಲೋಕನಗಳು/ವ್ಯತ್ಯಾಸಗಳನ್ನು ವರದಿ ಮಾಡಲು ಹಾಗೂ ಫ಼ಾರ್ಮ್ 3CDನಲ್ಲಿ ಉಲ್ಲೇಖಿಸಲಾದ ಆದಾಯ ತೆರಿಗೆ ಕಾಯ್ದೆಯ ವಿವಿಧ ನಿಬಂಧನೆಗಳ ಅನುಸಾರ ನಿಗದಿಪಡಿಸಿದ ಮಾಹಿತಿಯನ್ನು ವರದಿ ಮಾಡಲು ಬಳಸಲಾಗುತ್ತದೆ.
3.2. ಇದನ್ನು ಯಾರು ಬಳಸಬಹುದು?
ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿತವಾಗಿರುವ ಚಾರ್ಟರ್ಡ್ ಅಕೌಂಟೆಂಟ್ (CA) ಮತ್ತು ತೆರಿಗೆದಾರರಿಂದ ಫ಼ಾರ್ಮ್ 3CB–3CD ಪರಿಶೋಧನೆಗೆ ನಿಯೋಜಿಸಲಾದ CA ಈ ಫ಼ಾರ್ಮ್ಗೆ ಪ್ರವೇಶಿಸಲು ಅರ್ಹರಾಗಿರುತ್ತಾರೆ.
4. ಫ಼ಾರ್ಮ್ ಸಂಕ್ಷಿಪ್ತ ನೋಟ
ಫ಼ಾರ್ಮ್ 3CB–3CD ಅನ್ನು ಸಲ್ಲಿಸುವ ಮೊದಲು ಎರಡು ವಿಭಾಗಗಳನ್ನು ಭರ್ತಿ ಮಾಡಬೇಕು. ಅವುಗಳು:
- ಫ಼ಾರ್ಮ್ ಸಂಖ್ಯೆ 3CB
- ಫ಼ಾರ್ಮ್ ಸಂಖ್ಯೆ 3CD
ಫಾರ್ಮ್ 3CB-3CD ಯ ವಿಭಾಗಗಳ ಒಂದು ಕಿರುಪರಿಚಯ ಇಲ್ಲಿದೆ.
- ಮೊದಲ ಪುಟ ನಿಮಗೆ ಫಾರ್ಮ್ 3CB ಮತ್ತು ಫಾರ್ಮ್ 3CD ಗಳಿಗೆ ಮುಂದುವರಿಯಲು ಸಹಾಯ ಮಾಡುತ್ತದೆ.
- ಫ಼ಾರ್ಮ್ ಸಂಖ್ಯೆ 3CB ಪುಟದಲ್ಲಿ, ಚಾರ್ಟರ್ಡ್ ಅಕೌಂಟೆಂಟ್ (CA) ಒಬ್ಬ ವ್ಯಕ್ತಿಯ ವ್ಯವಹಾರ ಅಥವಾ ವೃತ್ತಿಯ ಲೆಕ್ಕಪತ್ರಗಳ ಪರಿಶೋಧನೆಗೆ ಸಂಬಂಧಿಸಿದ ವಿವರಗಳನ್ನು ನಮೂದಿಸುತ್ತಾರೆ.
- ಫಾರ್ಮ್ ಸಂಖ್ಯೆ 3CDಯಲ್ಲಿ ಇನ್ನೂ 5 ವಿಭಾಗಗಳಿದ್ದು, ಅಲ್ಲಿ CA ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 44ABರ ಅಡಿಯಲ್ಲಿ ಒದಗಿಸಬೇಕಾದ ವಿವರಗಳನ್ನು ನಮೂದಿಸುತ್ತಾರೆ.
-
ಫಾರ್ಮ್ 3CDಯ ಭಾಗ A (ಷರತ್ತು 1 ರಿಂದ 8)ನಲ್ಲಿ CA ಮೌಲ್ಯಮಾಪಕರ ಮೂಲ ವಿವರಗಳನ್ನು ಒದಗಿಸಬೇಕಾಗುತ್ತದೆ. ಫಾರ್ಮ್ನ ಭಾಗ A ಅನ್ನು ಭರ್ತಿ ಮಾಡಿ ಉಳಿಸಿದ ನಂತರವೇ ಬಳಕೆದಾರರು ಮುಂದುವರಿಯಬಹುದು.
-
ಫಾರ್ಮ್ 3CDಯ ಭಾಗ Bವು ಆದಾಯ ತೆರಿಗೆ ಕಾಯ್ದೆ, 1961ರ ಷರತ್ತು 9 ರಿಂದ ಷರತ್ತು 44ರವರೆಗಿನ ಮತ್ತಷ್ಟು ವಿಭಾಗಗಳನ್ನು ಹೊಂದಿದೆ. ಈ ವಿಭಾಗದಲ್ಲಿ ಎಲ್ಲಾ ಷರತ್ತುಗಳ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
-
5. ಪ್ರವೇಶಿಸುವುದು ಮತ್ತು ಸಲ್ಲಿಸುವುದು ಹೇಗೆ
ನೀವು ಫ಼ಾರ್ಮನ್ನು ಚಾರ್ಟರ್ಡ್ ಅಕೌಂಟೆಂಟ್ (CA) ಅವರಿಗೆ ನಿಯೋಜಿಸಬಹುದು ಮತ್ತು ಸಲ್ಲಿಸಲಾದ ಫ಼ಾರ್ಮನ್ನು ಆನ್ಲೈನ್ ವಿಧಾನದಲ್ಲಿ ಪರಿಶೀಲಿಸಬಹುದು. CA ಅವರು ಫ಼ಾರ್ಮನ್ನು ಕೇವಲ ಆಫ್ಲೈನ್ ಯುಟಿಲಿಟಿ ಮೂಲಕವೇ ಭರ್ತಿ ಮಾಡಬೇಕು.
ಸೂಚನೆ: ಹೆಚ್ಚಿನ ತಿಳುವಳಿಕೆಗಾಗಿ ಕಾನೂನಾತ್ಮಕ ಫ಼ಾರ್ಮ್ಗಳ ಆಫ್ಲೈನ್ ಯುಟಿಲಿಟಿ” ಬಳಕೆದಾರ ಕೈಪಿಡಿಯನ್ನು ನೋಡಿ.
5.1. ಚಾರ್ಟರ್ಡ್ ಅಕೌಂಟೆಂಟ್ (CA) ಗೆ ಫ಼ಾರ್ಮ್ ನಿಯೋಜಿಸುವುದು
ಹಂತ 1: ನಿಮ್ಮ ಬಳಕೆದಾರ ಗುರುತು ಮತ್ತು ಪಾಸ್ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್ಗೆ ಲಾಗಿನ್ ಆಗಿ.
ವೈಯಕ್ತಿಕ ಬಳಕೆದಾರರ ಸಂದರ್ಭದಲ್ಲಿ, PAN ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ PAN ಆಧಾರ್ಗೆ ಲಿಂಕ್ ಆಗಿಲ್ಲದ ಕಾರಣ ಅದು ನಿಷ್ಕ್ರಿಯವಾಗಿದೆ ಎಂಬ ಪಾಪ್-ಅಪ್ ಸಂದೇಶ ಕಾಣಿಸುತ್ತದೆ.
PAN ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು “ಈಗ ಲಿಂಕ್ ಮಾಡಿ” ಬಟನ್ ಮೇಲೆ ಕ್ಲಿಕ್ ಮಾಡಿ, ಇಲ್ಲವಾದರೆ “ಮುಂದುವರಿಯಿರಿ” ಮೇಲೆ ಕ್ಲಿಕ್ ಮಾಡಿ.
ಹಂತ 2: ನಿಮ್ಮ ಡ್ಯಾಶ್ಬೋರ್ಡ್ನಲ್ಲಿ ಇ-ಸಲ್ಲಿಕೆ > ಆದಾಯ ತೆರಿಗೆ ಫ಼ಾರ್ಮ್ಸ್ > ಆದಾಯ ತೆರಿಗೆ ಫ಼ಾರ್ಮ್ಸ್ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
ಹಂತ 3: ಆದಾಯ ತೆರಿಗೆ ಫ಼ಾರ್ಮ್ಸ್ ಸಲ್ಲಿಸಿ ಪುಟದಲ್ಲಿ, ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರದ ಫ಼ಾರ್ಮ್ಸ್ ಟ್ಯಾಬ್ನ ಅಡಿಯಲ್ಲಿ ಫ಼ಾರ್ಮ್ 3CB–3CD ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ, ಫ಼ಾರ್ಮನ್ನು ಸಲ್ಲಿಸಲು ಹುಡುಕಾಟ ಬಾಕ್ಸ್ನಲ್ಲಿ ಫ಼ಾರ್ಮ್ 3CB–3CD ಅನ್ನು ನಮೂದಿಸಬಹುದು.
ಹಂತ 4: ಫ಼ಾರ್ಮ್ 3CB–3CD ಪುಟದಲ್ಲಿ, ಸಲ್ಲಿಕೆ ಪ್ರಕಾರ ಮತ್ತು ನಿರ್ಧರಣೆ ವರ್ಷ (A.Y.)ವನ್ನು ಆಯ್ಕೆಮಾಡಿ, ಚಾರ್ಟರ್ಡ್ ಅಕೌಂಟೆಂಟ್ ಅವರನ್ನು ನಿಯೋಜಿಸಿ ಮತ್ತು ಅಗತ್ಯವಿದ್ದರೆ ಅಡಕಗಳನ್ನು ಅಡಕಗೊಳಿಸಿ. ಮುಂದುವರಿಯಲು “ಮುಂದುವರಿಯಿರಿ” ಮೇಲೆ ಕ್ಲಿಕ್ ಮಾಡಿ.
ಗಮನಿಸಿ:
- ನೀವು ಈಗಾಗಲೇ CA ಅವರನ್ನು ನಿಯೋಜಿಸಿದ್ದರೆ, ಸಲ್ಲಿಕೆ ಅಥವಾ ಸ್ವೀಕಾರಕ್ಕಾಗಿ CA ಯವರಲ್ಲಿ ಬಾಕಿ ಉಳಿದಿರುವ ಫಾರ್ಮ್ 3CB-3CD ನ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.
- ಯಾವುದೇ CA ನಿಯೋಜಿಸಲಾಗಿಲ್ಲದಿದ್ದರೆ, ನೀವು “ಇರುವ CAಗಳು” ಲಿಂಕ್ನಿಂದ ಹಿಂದಿನದಾಗಿ ನಿಯೋಜಿಸಲಾದ ಚಾರ್ಟರ್ಡ್ ಅಕೌಂಟೆಂಟ್ಗಳ ಪಟ್ಟಿಯಿಂದ ಆಯ್ಕೆಮಾಡಿ CA ಅನ್ನು ನಿಯೋಜಿಸಬಹುದು.
- ಯಾವುದೇ CAಗಳನ್ನು ಸೇರಿಸಲಾಗಿಲ್ಲದಿದ್ದರೆ, ನೀವು ಈ ಮಾರ್ಗವನ್ನು ಅನುಸರಿಸಿ CA ಅನ್ನು ಸೇರಿಸಬಹುದು: ಡ್ಯಾಶ್ಬೋರ್ಡ್ > ಅಧಿಕೃತ ಸಹಭಾಗಿಗಳು > ನನ್ನ CA > ಹೊಸ CA ಸೇರಿಸಿ.
ಫ಼ಾರ್ಮನ್ನು CAಗೆ ನಿಯೋಜಿಸಿದ ನಂತರ, ಟ್ರಾನ್ಸಾಕ್ಷನ್ ID ಜೊತೆಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ದಯವಿಟ್ಟು ಭವಿಷ್ಯ ಉಲ್ಲೇಖಕ್ಕಾಗಿ ಈ ಟ್ರಾನ್ಸಾಕ್ಷನ್ ID ಅನ್ನು ಗಮನದಲ್ಲಿಡಿ.
5.2. CA ಮೂಲಕ ಫ಼ಾರ್ಮ್ ಸಲ್ಲಿಕೆ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್ಗೆ ಲಾಗಿನ್ ಆಗಿ.
ಹಂತ 2: ನಿಮ್ಮ ಡ್ಯಾಶ್ಬೋರ್ಡ್ನಲ್ಲಿ ಬಾಕಿ ಉಳಿದ ಕ್ರಮಗಳು > ಕಾರ್ಯಪಟ್ಟಿ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕಾರ್ಯಗಳ ಪಟ್ಟಿ ಪ್ರದರ್ಶಿಸಲಾಗುತ್ತದೆ.
ಹಂತ 3: ನಿಮ್ಮ ಕ್ರಮಕ್ಕಾಗಿ ಟ್ಯಾಬ್ನ ಅಡಿಯಲ್ಲಿ, ನಿಮಗೆ ನಿಯೋಜಿಸಲಾದ ಫ಼ಾರ್ಮ್ 3CB–CD ಎದುರು ಇರುವ ಸ್ವೀಕರಿಸಿ ಮೇಲೆ ಕ್ಲಿಕ್ ಮಾಡಿ.
ತೆರಿಗೆದಾರರ PAN ಜೊತೆ ಆಧಾರ್ ಲಿಂಕ್ ಮಾಡದಿದ್ದರೆ, ಫಾರ್ಮನ್ನು ಸ್ವೀಕರಿಸುವಾಗ ಅಥವಾ ತಿರಸ್ಕರಿಸುವಾಗ ಸ್ಕ್ರೀನ್ ಮೇಲೆ ಆಧಾರ್ನೊಂದಿಗೆ ಲಿಂಕ್ ಮಾಡದ ಕಾರಣ ತೆರಿಗೆದಾರರ PAN ನಿಷ್ಕ್ರಿಯವಾಗಿದೆ ಎಂಬ ಪಾಪ್-ಅಪ್ ಸಂದೇಶವನ್ನು CA ನೋಡುತ್ತಾರೆ.
ಫ಼ಾರ್ಮನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಮುಂದುವರಿಯಿರಿ ಬಟನ್ ಅನ್ನು ಕ್ಲಿಕ್ ಮಾಡಿ.
ಸೂಚನೆ: ನೀವು ವಿನಂತಿಯನ್ನು ನಿರಾಕರಿಸಲು ಆಯ್ಕೆ ಮಾಡಿದರೆ, ಸೇವಾ ವಿನಂತಿಯನ್ನು ನಿರಾಕರಿಸಿದ ಕಾರಣವನ್ನು ನೀವು ಒದಗಿಸಬೇಕು.
ಹಂತ 4: ವಿನಂತಿಯನ್ನು ಯಶಸ್ವಿಯಾಗಿ ಸ್ವೀಕರಿಸಿದ ನಂತರ, ಟ್ರಾನ್ಸಾಕ್ಷನ್ ID ಜೊತೆಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ದಯವಿಟ್ಟು ಭವಿಷ್ಯ ಉಲ್ಲೇಖಕ್ಕಾಗಿ ಈ ಟ್ರಾನ್ಸಾಕ್ಷನ್ ID ಅನ್ನು ಗಮನದಲ್ಲಿಡಿ. ಫ಼ಾರ್ಮ್ ಸಲ್ಲಿಸಲು ಕಾರ್ಯಪಟ್ಟಿಗೆ ಹಿಂದಿರುಗಿ ಮೇಲೆ ಕ್ಲಿಕ್ ಮಾಡಿ.
ಹಂತ 5: ನಿಮ್ಮ ಕಾರ್ಯಪಟ್ಟಿಯಲ್ಲಿ, ಸಲ್ಲಿಕೆಗೆ ಬಾಕಿಯಿರುವುದು ಟ್ಯಾಬ್ನ ಅಡಿಯಲ್ಲಿ, ನೀವು ಸ್ವೀಕರಿಸಿದ ಫ಼ಾರ್ಮ್ 3CB–3CD ಎದುರು ಇರುವ ಫ಼ಾರ್ಮ್ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
ತೆರಿಗೆದಾರರ PAN ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಿಲ್ಲದಿದ್ದರೆ, ಫ಼ಾರ್ಮ್ ಸಲ್ಲಿಸುವ/ಅಪ್ಲೋಡ್ ಮಾಡುವ ಸಮಯದಲ್ಲಿ ತೆರಿಗೆದಾರರ PAN ಆಧಾರ್ಗೆ ಲಿಂಕ್ ಆಗಿಲ್ಲದ ಕಾರಣ ಅದು ನಿಷ್ಕ್ರಿಯವಾಗಿದೆ ಎಂಬ ಪಾಪ್-ಅಪ್ ಸಂದೇಶವನ್ನು CA ನೋಡುತ್ತಾರೆ. ಫ಼ಾರ್ಮ್ ಸಲ್ಲಿಸಲು/ಅಪ್ಲೋಡ್ ಮಾಡಲು ಮುಂದುವರಿಯಿರಿ ಅನ್ನು ಕ್ಲಿಕ್ ಮಾಡಿ.
ಹಂತ 6: ಫ಼ಾರ್ಮ್ 3CB–3CD ಪುಟದಲ್ಲಿ ಮುಂದುವರಿಯಲು ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ.
ಹಂತ 7: ಆಫ್ಲೈನ್ ಯುಟಿಲಿಟಿಯನ್ನು ಡೌನ್ಲೋಡ್ ಮಾಡಿ (ನಿಮ್ಮ ಹೋಮ್ಪೇಜ್ನ ಡೌನ್ಲೋಡ್ ವಿಭಾಗದಲ್ಲಿಯೂ ಲಭ್ಯವಿದೆ) ಮತ್ತು ಆ ಯುಟಿಲಿಟಿಯನ್ನು ಬಳಸಿ ಫ಼ಾರ್ಮ್ ಅನ್ನು ಭರ್ತಿ ಮಾಡಿ. ಆಫ್ಲೈನ್ ಯುಟಿಲಿಟಿ ಮೂಲಕ ಸೃಷ್ಟಿಸಲಾದ JSON ಫೈಲ್ ಅನ್ನು ಫ಼ಾರ್ಮ್ 3CB–3CD ಪುಟದಲ್ಲಿ ಅಪ್ಲೋಡ್ ಮಾಡಿ. ಅಗತ್ಯವಿರುವ ಅಡಕಗಳನ್ನು ಅಡಕಗೊಳಿಸಿ ಮತ್ತು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
ಹಂತ 8: ವಿಶಿಷ್ಟ ಗುರುತು ಸಂಖ್ಯೆ ಪುಟದಲ್ಲಿ ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ.
ಹಂತ 9: ನೀವು ಮುಂದುವರಿಯಿರಿ ಆಯ್ಕೆ ಮಾಡಿದರೆ, ನಿಮ್ಮನ್ನು ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ಡಿಜಿಟಲ್ ಸಹಿ ಪ್ರಮಾಣಪತ್ರದ ಮೂಲಕ ಪರಿಶೀಲನೆ ಮಾಡಬಹುದು.
ಸೂಚನೆ: ಹೆಚ್ಚಿನ ತಿಳುವಳಿಕೆಗಾಗಿ ಇ-ಪರಿಶೀಲನೆ ಮಾಡುವುದು ಹೇಗೆ ಬಳಕೆದಾರ ಕೈಪಿಡಿಯನ್ನು ನೋಡಿ.
ಇ-ಪರಿಶೀಲನೆ ಯಶಸ್ವಿಯಾದ ನಂತರ, ಟ್ರಾನ್ಸಾಕ್ಷನ್ ID ಜೊತೆಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ದಯವಿಟ್ಟು ಭವಿಷ್ಯ ಉಲ್ಲೇಖಕ್ಕಾಗಿ ಈ ಟ್ರಾನ್ಸಾಕ್ಷನ್ ID ಅನ್ನು ಗಮನದಲ್ಲಿಡಿ. ತೆರಿಗೆದಾರರಿಗೆ ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿತ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಗೆ ದೃಢೀಕರಣ ಸಂದೇಶವೂ ಕಳುಹಿಸಲಾಗುತ್ತದೆ.br>
5.3. ತೆರಿಗೆದಾರರಿಂದ ಪರಿಶೀಲನೆ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್ಗೆ ಲಾಗಿನ್ ಆಗಿ.
ವೈಯಕ್ತಿಕ ಬಳಕೆದಾರರ ಸಂದರ್ಭದಲ್ಲಿ, PAN ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ PAN ಆಧಾರ್ಗೆ ಲಿಂಕ್ ಆಗಿಲ್ಲದ ಕಾರಣ ಅದು ನಿಷ್ಕ್ರಿಯವಾಗಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ಕಾಣುತ್ತೀರಿ.
PAN ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು “ಈಗ ಲಿಂಕ್ ಮಾಡಿ” ಬಟನ್ ಅನ್ನು ಕ್ಲಿಕ್ ಮಾಡಿ, ಇಲ್ಲವಾದರೆ “ಮುಂದುವರಿಯಿರಿ” ಅನ್ನು ಕ್ಲಿಕ್ ಮಾಡಿ.
ಹಂತ 2: ನಿಮ್ಮ ಡ್ಯಾಶ್ಬೋರ್ಡ್ನಲ್ಲಿ ನಿರ್ವಹಣೆಗೆ ಉಳಿದ ಕ್ರಮಗಳು > ಕಾರ್ಯಪಟ್ಟಿ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಕಾರ್ಯಪಟ್ಟಿಯಲ್ಲಿ, ಸ್ವೀಕಾರಕ್ಕಾಗಿ ಬಾಕಿಯಿರುವ ಟ್ಯಾಬ್ನ ಅಡಿಯಲ್ಲಿ, ನಿಮ್ಮ CA ಸಲ್ಲಿಸಿದ ಫ಼ಾರ್ಮ್ 3CB–3CD ಎದುರು ಇರುವ ಸ್ವೀಕರಿಸಿ ಮೇಲೆ ಕ್ಲಿಕ್ ಮಾಡಿ.
ಸೂಚನೆ: ನೀವು ವಿನಂತಿಯನ್ನು ನಿರಾಕರಿಸಲು ಆಯ್ಕೆ ಮಾಡಿದರೆ, ಸೇವಾ ವಿನಂತಿಯನ್ನು ನಿರಾಕರಿಸಿದ ಕಾರಣವನ್ನು ನೀವು ನೀಡಬೇಕು.
ಹಂತ 4: ವಿನಂತಿಯನ್ನು ಸ್ವೀಕರಿಸಿದ ನಂತರ, ನಿಮ್ಮನ್ನು ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ಡಿಜಿಟಲ್ ಸಹಿ ಪ್ರಮಾಣಪತ್ರದ ಮೂಲಕ ಪರಿಶೀಲನೆ ಮಾಡಬಹುದು.
ಸೂಚನೆ: ಹೆಚ್ಚಿನ ತಿಳುವಳಿಕೆಗಾಗಿ ಇ-ಪರಿಶೀಲನೆ ಮಾಡುವುದು ಹೇಗೆ ಬಳಕೆದಾರ ಕೈಪಿಡಿಯನ್ನು ನೋಡಿ.
ಇ-ಪರಿಶೀಲನೆ ಯಶಸ್ವಿಯಾದ ನಂತರ, ಟ್ರಾನ್ಸಾಕ್ಷನ್ ID ಮತ್ತು ಸ್ವೀಕೃತಿ ರಸೀದಿ ಸಂಖ್ಯೆ ಜೊತೆಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ದಯವಿಟ್ಟು ಭವಿಷ್ಯ ಉಲ್ಲೇಖಕ್ಕಾಗಿ ಈ ಟ್ರಾನ್ಸಾಕ್ಷನ್ ID ಮತ್ತು ಸ್ವೀಕೃತಿ ರಸೀದಿ ಸಂಖ್ಯೆಯನ್ನು ಗಮನದಲ್ಲಿಡಿ. ನಿಮ್ಮ ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿತ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಗೆ ಸಹ ದೃಢೀಕರಣ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ.