(ಗಮನಿಸಿ: ಸರಿಯಾದ ಉತ್ತರವು ದಪ್ಪಕ್ಷರದಲ್ಲಿದೆ.)


Q1. ನಾನು ಒಂದಕ್ಕಿಂತ ಹೆಚ್ಚು ಬಾರಿ ತಿದ್ದುಪಡಿ ವಿನಂತಿಯನ್ನು ಸಲ್ಲಿಸಬಹುದೇ ಅಥವಾ ಸರಿಪಡಿಸಿದ ಚಲನ್ ಅನ್ನು ನಾನು ಮತ್ತೆ ಸರಿಪಡಿಸಬಹುದೇ?


ಸಲ್ಲಿಸಿದ ಯಾವುದೇ ಚಲನ್‌ಗಾಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಚಲನ್ ತಿದ್ದುಪಡಿ ವಿನಂತಿಯನ್ನು ಒಮ್ಮೆ ಮಾತ್ರ ಅನುಮತಿಸಲಾಗುತ್ತದೆ. ಬಳಕೆದಾರರು ಚಲನ್‌ನಲ್ಲಿ ಹೆಚ್ಚಿನ ತಿದ್ದುಪಡಿಗಳನ್ನು ಮಾಡಲು ಬಯಸಿದರೆ, ಅವನ/ಅವಳ ನ್ಯಾಯವ್ಯಾಪ್ತಿಯ ತೆರಿಗೆ ಮೌಲ್ಯಮಾಪನ ಅಧಿಕಾರಿಯನ್ನು ಸಂಪರ್ಕಿಸಬಹುದು.

Q2. ಚಲನ್‌ನ ಯಾವ ಮಾಹಿತಿಗಳನ್ನು ಸರಿಪಡಿಸಬಹುದು?


a) ತೆರಿಗೆ ಮೌಲ್ಯಮಾಪನ ವರ್ಷ

b) ಮುಖ್ಯ ಶೀರ್ಷಿಕೆ - ಅನ್ವಯವಾಗುವ ತೆರಿಗೆ

c) ಉಪ ಶೀರ್ಷಿಕೆ -ಪಾವತಿಯ ವಿಧ

d) ಮೇಲಿನ ಎಲ್ಲವೂ

ಉತ್ತರ - d) ಮೇಲಿನ ಎಲ್ಲವೂ

Q3. ಚಲನ್ ಠೇವಣಿ ದಿನಾಂಕದ ಎಷ್ಟು ದಿನಗಳ ಒಳಗೆ, ನಾನು ತೆರಿಗೆ ಮೌಲ್ಯಮಾಪನ ವರ್ಷವನ್ನು (A.Y) ಸರಿಪಡಿಸಬಹುದು?


a) ಚಲನ್ ಠೇವಣಿಯಾದ ದಿನಾಂಕದ 7 ದಿನಗಳಲ್ಲಿ
b) ಚಲನ್ ಠೇವಣಿ ದಿನಾಂಕದ 10 ದಿನಗಳಲ್ಲಿ
c) ಚಲನ್ ಠೇವಣಿ ದಿನಾಂಕದ 15 ದಿನಗಳಲ್ಲಿ
d) ಚಲನ್ ಠೇವಣಿ ದಿನಾಂಕದ 30 ದಿನಗಳಲ್ಲಿ

ಉತ್ತರ - a) ಚಲನ್ ಠೇವಣಿ ದಿನಾಂಕದ ನಂತರ 7 ದಿನಗಳು.

Q4. ಚಲನ್ ಠೇವಣಿ ದಿನಾಂಕದ ಎಷ್ಟು ದಿನಗಳ ಒಳಗೆ, ನಾನು ಮುಖ್ಯ/ಉಪ ಶೀರ್ಷಿಕೆಯನ್ನು ಸರಿಪಡಿಸಬಹುದು?


a) ಚಲನ್ ಠೇವಣಿಯಾದ ದಿನಾಂಕದ 30 ದಿನಗಳಲ್ಲಿ
b) ಚಲನ್ ಠೇವಣಿ ದಿನಾಂಕದ 60 ದಿನಗಳಲ್ಲಿ
c) ಚಲನ್ ಠೇವಣಿ ದಿನಾಂಕದ 90 ದಿನಗಳಲ್ಲಿ
d) ಚಲನ್ ಠೇವಣಿ ದಿನಾಂಕದ 120 ದಿನಗಳಲ್ಲಿ

ಉತ್ತರ - a) ಚಲನ್ ಠೇವಣಿ ದಿನಾಂಕದ 30 ದಿನಗಳಲ್ಲಿ.

Q5. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಯಾವ ಚಲನ್‌ಗಳನ್ನು ಸರಿಪಡಿಸಬಹುದು?


a) ತೆರಿಗೆ ಮೌಲ್ಯಮಾಪನ ವರ್ಷ 2020 - 21 ಕ್ಕೆ ಸಂಬಂಧಿಸಿದ ಎಲ್ಲಾ ಪಾವತಿಸಿದ ಮತ್ತು ಮುಕ್ತ/ಬಳಕೆಯಾಗದ ಚಲನ್‌ಗಳು

b) ಉಪ ಶೀರ್ಷಿಕೆ 100 (ಮುಂಗಡ ತೆರಿಗೆ), 300 (ಸ್ವಯಂ-ಮೌಲ್ಯಮಾಪನ ತೆರಿಗೆ) ಮತ್ತು 400 (ನಿಯಮಿತ ಮೌಲ್ಯಮಾಪನ ತೆರಿಗೆಯಾಗಿ ಬೇಡಿಕೆ ಪಾವತಿ) ಹೊಂದಿರುವ ಚಲನ್‌ಗಳು

c) ಮೇಲಿನ ಎರಡೂ

d) ಮೇಲಿನ ಯಾವುದೂ ಅಲ್ಲ

ಉತ್ತರ - c) ಮೇಲಿನ ಎರಡೂ