PAN ಲಾಗಿನ್ ಮೂಲಕ ಚಲನ್ ರಚಿಸಿ

 

1. ಪಕ್ಷಿನೋಟ

ಈ ದಾಖಲೆಯು ಆದಾಯ ತೆರಿಗೆ ಕಾಯಿದೆ, 2025ರ ಅಡಿಯಲ್ಲಿ ತೆರಿಗೆ ಪಾವತಿಗಾಗಿ ಇ-ಸಲ್ಲಿಕೆ ಪೋರ್ಟಲ್ ಮೂಲಕ ITNS 280N, ITNS 282N ಮತ್ತು ITNS 288N ಚಲನ್ ಫಾರ್ಮ್‌ಗಳನ್ನು ರಚಿಸುವ ಕುರಿತು ತೆರಿಗೆದಾರರಿಗೆ ಹಂತ-ಹಂತದ ಮಾರ್ಗದರ್ಶನವನ್ನು ಒದಗಿಸುತ್ತದೆ. ಆದಾಯ ತೆರಿಗೆ ಕಾಯಿದೆ, 1961ರ ಅಡಿಯಲ್ಲಿ ಅನ್ವಯಿಸುವ ಚಲನ್ ಫಾರ್ಮ್‌ಗಳು ITNS 280, ITNS 282 ಮತ್ತು ITNS 288 ಆಗಿವೆ.

ಆದಾಯ ತೆರಿಗೆ ಕಾಯಿದೆ, 1961ರ ಅಡಿಯಲ್ಲಿ ಚಲನ್‌ಗಳನ್ನು ಮೌಲ್ಯಮಾಪನ ವರ್ಷ(AY)ದ ಆಧಾರದ ಮೇಲೆ ಸಲ್ಲಿಸಲಾಗುತ್ತಿತ್ತು, ಆದರೆ ಆದಾಯ ತೆರಿಗೆ ಕಾಯಿದೆ, 2025ರ ಅಡಿಯಲ್ಲಿ ಚಲನ್‌ಗಳನ್ನು ತೆರಿಗೆ ವರ್ಷ (TY)ದ ಆಧಾರದ ಮೇಲೆ ಸಲ್ಲಿಸಬೇಕು.

ಈ ಬಳಕೆದಾರರ ಕೈಪಿಡಿಯು ತೆರಿಗೆದಾರರು ಸೂಕ್ತವಾದ ಕಾಯಿದೆ, ತೆರಿಗೆ ವಿಧ ಮತ್ತು ತೆರಿಗೆ ಅವಧಿಯನ್ನು ಆಯ್ಕೆ ಮಾಡುವ ಮೂಲಕ ಎರಡೂ ಕಾಯಿದೆಗಳ ಅಡಿಯಲ್ಲಿ ಚಲನ್‌ಗಳನ್ನು ಸರಿಯಾಗಿ ಹೇಗೆ ರಚಿಸಬಹುದು ಎಂಬುದನ್ನು ವಿವರಿಸುತ್ತದೆ.

• ITNS 280/280N ಆದಾಯ ತೆರಿಗೆ ಮತ್ತು ನಿಗಮ ತೆರಿಗೆಗೆ ಸಂಬಂಧಿಸಿದ ಪಾವತಿಗಳನ್ನು ಒಳಗೊಂಡಿದ್ದು, ಮುಂಗಡ ತೆರಿಗೆ, ಸ್ವಯಂ ಮೌಲ್ಯಮಾಪನ ತೆರಿಗೆ ಮತ್ತು ನಿಯಮಿತ ಮೌಲ್ಯಮಾಪನ ತೆರಿಗೆ (400)ಯನ್ನು ಒಳಗೊಂಡಿರುತ್ತದೆ.
• ITNS 282/282N STT, CTT, ಸೆಕ್ಷನ್‌ 379ರ ಅಡಿಯ ಇ-ಡಿಆರ್‌ಎಸ್‌(e-DRS) ಹಾಗೂ ಇತರೆ ಅನ್ವಯವಾಗುವ ತೆರಿಗೆಗಳಿಗೆ ಸಂಬಂಧಿಸಿದ ಪಾವತಿಗಳನ್ನು ಒಳಗೊಂಡಿರುತ್ತದೆ.
• ITNS 288/288N ಬ್ಲಾಕ್ ಮೌಲ್ಯಮಾಪನಕ್ಕೆ ಸಂಬಂಧಿಸಿದ ಪಾವತಿಗಳನ್ನು ಒಳಗೊಂಡಿದ್ದು, ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ ಮೌಲ್ಯಮಾಪನ ತೆರಿಗೆ (311) ಮತ್ತು ಬ್ಲಾಕ್ ಅವಧಿಯ ಶೋಧನೆ ಮೌಲ್ಯಮಾಪನದ ಮೇಲಿನ ತೆರಿಗೆ (411) ರೂಪದಲ್ಲಿನ ಬೇಡಿಕೆ ಪಾವತಿಗಳನ್ನು ಒಳಗೊಂಡಿರುತ್ತದೆ.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

ನೀವು ತೆರಿಗೆ ಪಾವತಿಗಾಗಿ ಚಲನ್ ಅನ್ನು ಲಾಗಿನ್‌ಗಿಂತ ಮೊದಲು (ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್‌ ಆಗುವ ಮೊದಲು) ಅಥವಾ ಲಾಗಿನ್‌ ನಂತರದ(ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್‌ ಆದ ನಂತರ) ವಿಧಾನದಲ್ಲಿ ರಚಿಸಬಹುದು.

ಆಯ್ಕೆ

ಪೂರ್ವಾಪೇಕ್ಷಿತಗಳು

ಲಾಗಿನ್‌ನ ಮೊದಲು

  • ತೆರಿಗೆ ಪಾವತಿಯನ್ನು ಮಾಡಬೇಕಾದ ಮಾನ್ಯವಾದ PAN/TAN
  • ಡೆಬಿಟ್‌ ಕಾರ್ಡ್/‌ ಕ್ರೆಡಿಟ್‌ ಕಾರ್ಡ್/‌ ನೆಟ್‌ ಬ್ಯಾಂಕಿಂಗ್/‌ ಯೂಪಿಐ ಇತರೆ ಮತ್ತು
  • ಒಂದು ಬಾರಿಯ ಪಾಸ್‌ವರ್ಡ್ ಸ್ವೀಕರಿಸಲು ಮಾನ್ಯವಾದ ಮೊಬೈಲ್ ಸಂಖ್ಯೆ.

ಲಾಗಿನ್‌ ನಂತರ

  • ಇ-ಸಲ್ಲಿಕೆ ಪೋರ್ಟಲ್‌ www.incometax.gov.in ನಲ್ಲಿ ನೋಂದಾಯಿತ ಬಳಕೆದಾರರು.
  • ಡೆಬಿಟ್‌ ಕಾರ್ಡ್/‌ ಕ್ರೆಡಿಟ್‌ ಕಾರ್ಡ್/‌ ನೆಟ್‌ ಬ್ಯಾಂಕಿಂಗ್/‌ ಯೂಪಿಐ ಇತರೆ

ಸೂಚನೆ: ಪ್ರಸ್ತುತ, ಇ-ಸಲ್ಲಿಕೆ ಪೋರ್ಟಲ್‌ನಲ್ಲಿನ ಇ-ತೆರಿಗೆ ಪಾವತಿ ಸೇವೆಯು ಪಾವತಿ ಗೇಟ್‌ವೇ ವಿಧಾನದಲ್ಲಿ, ತೆರಿಗೆ ಪಾವತಿ ಸೌಲಭ್ಯವು ಅಧಿಕೃತ ಬ್ಯಾಂಕ್‌ಗಳ ಮೂಲಕ ಮಾತ್ರ ಲಭ್ಯವಿದೆ.

3. ಹಂತ-ಹಂತದ ಮಾರ್ಗದರ್ಶಿ

3.1 ಚಲನ್ ಫಾರ್ಮ್ ರಚಿಸಿ (CRN) (ಲಾಗಿನ್ ನಂತರ)

3.1.1 ನಿಮ್ಮ ಬಳಕೆದಾರರ ID ಮತ್ತು ಪಾಸ್‌ವರ್ಡ್‌ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್‌ ಆಗಿ.

Data responsive

ಸೂಚನೆ :-ವೈಯಕ್ತಿಕ ಬಳಕೆದಾರರಿಗಾಗಿ, PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ಅದು ನಿಷ್ಕ್ರಿಯವಾಗಿದೆ ಎಂಬ ಪಾಪ್-ಅಪ್ ಸಂದೇಶವು ಕಾಣಿಸುತ್ತದೆ.
PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಈಗ ಲಿಂಕ್ ಮಾಡಿ ಬಟನ್ ಅನ್ನು ಕ್ಲಿಕ್ ಮಾಡಿ; ಇಲ್ಲದಿದ್ದರೆ ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.

Data responsive

3.1.2 ಡ್ಯಾಶ್‌ಬೋರ್ಡ್‌ನಲ್ಲಿ ಇ-ಸಲ್ಲಿಕೆ > ಇ-ತೆರಿಗೆ ಪಾವತಿ ಅನ್ನು ಕ್ಲಿಕ್ ಮಾಡಿ. ಇ-ತೆರಿಗೆ ಪಾವತಿ ಅನ್ನು ಕ್ಲಿಕ್ ಮಾಡಿದ ನಂತರ, ಬಳಕೆದಾರರನ್ನು ಅನ್ವಯವಾಗುವ ಕಾಯಿದೆ ಆಯ್ಕೆ ಪರದೆಗೆ ಕರೆದೊಯ್ಯಲಾಗುತ್ತದೆ. ಸೂಕ್ತವಾದ ಆಯ್ಕೆಯನ್ನು ಮಾಡಿದ ನಂತರ ಮುಂದುವರಿಸಿ ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ಬಳಕೆದಾರರನ್ನು ಇ-ತೆರಿಗೆ ಪಾವತಿ ಪುಟಕ್ಕೆ ಕರೆದೊಯ್ಯಲಾಗುತ್ತದೆ.

Data responsive

3.1.3 ಇ-ತೆರಿಗೆ ಪಾವತಿ ಪುಟದಲ್ಲಿ, ಆಯ್ಕೆ ಮಾಡಲಾದ ಅಧಿಕೃತ ಬ್ಯಾಂಕ್‌ಗಳ ಮೂಲಕ ಮಾತ್ರ ಹೊಸ ಚಲನ್ ಫಾರ್ಮ್‌ (CRN) ಅನ್ನು ರಚಿಸಲು ಹೊಸ ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಬ್ಯಾಂಕ್‌ಗಳನ್ನು ಹೊರತುಪಡಿಸಿ ಇತರೆ ಬ್ಯಾಂಕ್‌ಗಳ ಮೂಲಕ ತೆರಿಗೆ ಪಾವತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಒದಗಿಸುವ NEFT/RTGS ಸೌಲಭ್ಯದ ಮೂಲಕ ಮಾಡಬಹುದು.

Data responsive

3.1.4 ಹೊಸ ಪಾವತಿ ಪುಟದಲ್ಲಿ, ನಿಮಗೆ ಅನ್ವಯವಾಗುವ ತೆರಿಗೆ ಪಾವತಿ ಟೈಲ್‌ನಲ್ಲಿರುವ "ಮುನ್ನಡೆಯಿರಿ" ಅನ್ನು ಕ್ಲಿಕ್ ಮಾಡಿ. ಹಿಂದಿನ ಪರದೆಯಲ್ಲಿ ಆಯ್ಕೆ ಮಾಡಿದ ಕಾಯಿದೆಯ ಆಧಾರದ ಮೇಲೆ ಟೈಲ್‌ಗಳು ಸಕ್ರಿಯಗೊಳ್ಳುತ್ತವೆ.

 ಮೌಲ್ಯಮಾಪನ ವರ್ಷ(AY) 2026-27 ಮತ್ತು ಅದಕ್ಕೂ ಹಿಂದಿನ ವರ್ಷಗಳಿಗೆ, ಮೌಲ್ಯಮಾಪನ ವರ್ಷ(AY) 2026-27ರ ಸ್ವಯಂ ಮೌಲ್ಯಮಾಪನ ತೆರಿಗೆ ಸೇರಿದಂತೆ, ಪಾವತಿಗಳನ್ನು ಮಾಡಲು ಆಯ್ಕೆ ಬಟನ್‌ನಲ್ಲಿ “ಆದಾಯ ತೆರಿಗೆ ಕಾಯ್ದೆ,1961” ಅನ್ನು ಆಯ್ಕೆ ಮಾಡಿ.
 ತೆರಿಗೆ ವರ್ಷ(TY) 2026–27 ರಿಂದ ಮುಂದಿನ ವರ್ಷಗಳಿಗೆ ಪಾವತಿಗಳನ್ನು ಮಾಡಲು "ಆದಾಯ ತೆರಿಗೆ ಕಾಯ್ದೆ, 2025” ಅನ್ನು ಆಯ್ಕೆ ಮಾಡಿ.

ದಯವಿಟ್ಟು ಗಮನಿಸಿ: ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಹಾಗೂ ತೆರಿಗೆ ಹೇರಿಕೆ ಕಾಯಿದೆ, 2015 ಕ್ಕೆ ಸಂಬಂಧಿಸಿದ ತೆರಿಗೆ ಪಾವತಿಗಳಿಗಾಗಿ “ಆದಾಯ ತೆರಿಗೆ ಕಾಯಿದೆ, 1961” ಅನ್ನು ಆಯ್ಕೆ ಮಾಡಿ.

ಆದಾಯ ತೆರಿಗೆ ಕಾಯಿದೆ, 1961ಅನ್ನು ಆಯ್ಕೆ ಬಟನ್‌ನಲ್ಲಿ ಆಯ್ಕೆ ಮಾಡಿದರೆ, ಈ ಕೆಳಗಿನ ಟೈಲ್‌ಗಳು ಲಭ್ಯವಿರುತ್ತವೆ:

Data responsive

ಟೈಲ್‌ಗಳ ಅವಲೋಕನ:

ಟೈಲ್‌ ಹೆಸರು

ಪ್ರಧಾನ ಶೀರ್ಷಿಕೆ

ಟೈಲ್‌ಗಳಿಗೆ ಅನ್ವಯವಾಗುವ ಸೂಚನೆಗಳು ಮತ್ತು (ಉಪ ಶೀರ್ಷಿಕೆ)

ಆದಾಯ ತೆರಿಗೆ (ಕಂಪನಿಯೇತರರಿಗೆ) / ನಿಗಮ ತೆರಿಗೆ (ಕಂಪನಿಯ ಲಾಗಿನ್‌ಗಾಗಿ)

ಆದಾಯ ತೆರಿಗೆ (ಕಂಪನಿಯೇತರರಿಗೆ) (0021) /

ನಿಗಮ ತೆರಿಗೆ (ಕಂಪನಿಯ ಲಾಗಿನ್‌ಗಾಗಿ) (0020)

ಮೌಲ್ಯಮಾಪನ ವರ್ಷ (AY) 26-27 ಅಥವಾ ಹಿಂದಿನ ವರ್ಷಗಳ ತೆರಿಗೆ ಪಾವತಿಸಲು ದಯವಿಟ್ಟು ಈ ಆಯ್ಕೆಯನ್ನು ಆರಿಸಿ.

• ಸ್ವಯಂ ಮೌಲ್ಯಮಾಪನ ತೆರಿಗೆ (300)
• ಘಟಕದಾರರಿಗೆ ವಿತರಿಸಲಾದ ಆದಾಯದ ಮೇಲಿನ ತೆರಿಗೆ (107)
• ಸೆಕ್ಷನ್‌ 92CEರ ಅಡಿಯ ನಂತರದ ಹೊಂದಾಣಿಕೆ ತೆರಿಗೆ (110) • ಸೆಕ್ಷನ್‌ 115TDರ ಅಡಿಯ ಸಂಚಿತ ತೆರಿಗೆ (111)
• 500ರ ಅಡಿಯಲ್ಲಿ ಈ ಕೆಳಗಿನ ಉಪ-ವಿಧದ ಪಾವತಿಗಳನ್ನು ಮಾಡಬಹುದು:

- PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಆಗಿರುವ ವಿಳಂಬಕ್ಕೆ ಶುಲ್ಕ
- ಸೆಕ್ಷನ್‌ 234Gರ ಅಡಿಯ ವಿಳಂಬ ಶುಲ್ಕ (ಫಾರ್ಮ್‌ 10BD ಮತ್ತು 10BE)
- ಮೇಲ್ಮನವಿ ಶುಲ್ಕ
- ಸಂಯೋಜಿತ ಶುಲ್ಕಗಳು

 

  • ಕಪ್ಪು ಹಣ ಕಾಯ್ದೆ (108/109) ಅಡಿಯಲ್ಲಿ ತೆರಿಗೆ/ಬೇಡಿಕೆ/ದಂಡ/ಬಡ್ಡಿ ಪಾವತಿ

    - ಉಪ ಶೀರ್ಷಿಕೆ 109 (ಕಂಪನಿಗಳಿಗೆ ಅನ್ವಯಿಸುತ್ತದೆ)
    - ಉಪ ಶೀರ್ಷಿಕೆ 108 (ಕಂಪನಿ ಹೊರತುಪಡಿಸಿ ಇತರರಿಗೆ ಅನ್ವಯಿಸುತ್ತದೆ)

ದಯವಿಟ್ಟು ಗಮನಿಸಿ: ಉಪ ಕೋಡ್‌ಗೆ ಅನ್ವಯವಾಗುವ ITNS

  • 300, 107, 110, 111, 500 -ಗಮನಿಸಿ ITNS 280
  • 108/109 – ಗಮನಿಸಿ ITNS 284

ನಿಯಮಿತ ಮೌಲ್ಯಮಾಪನ ತೆರಿಗೆಯಾಗಿ ಬೇಡಿಕೆ ಪಾವತಿ (400)

ಆದಾಯ ತೆರಿಗೆ (ಕಂಪನಿಯೇತರ) (0021) / ನಿಗಮ ತೆರಿಗೆ (ಕಂಪನಿ ಲಾಗಿನ್‌) (0020)

ಮೌಲ್ಯಮಾಪನ ವರ್ಷ (AY) 2026-27 ಅಥವಾ ಹಿಂದಿನ ವರ್ಷಗಳ ಬೇಡಿಕೆ ಪಾವತಿ(400)ಯನ್ನು ಪಾವತಿಸಲು ಈ ಆಯ್ಕೆಯನ್ನು ಆರಿಸಿ.

ಚಲನ್ ಒಳಗೊಂಡಿದೆ: ITNS 280

ಸೂಚನೆ: ನೀವು ಬೇಡಿಕೆ ಪಾವತಿಯನ್ನು DRN‌ನೊಂದಿಗೆ ಅಥವಾ DRN ಇಲ್ಲದೆ ಮಾಡುವ ಆಯ್ಕೆಯನ್ನು ಹೊಂದಿರುತ್ತೀರಿ.

ಸಮೀಕರಣ ಲೆವಿ / STT / CTT

ಸರಕು ಮತ್ತು ಸೇವೆಗಳ ಮೇಲಿನ ಇತರ ತೆರಿಗೆಗಳು ಮತ್ತು ಸುಂಕಗಳು (0045)

ಭದ್ರತಾ ವಹಿವಾಟು ತೆರಿಗೆ (0034)

  • ದಯವಿಟ್ಟು ಸಮೀಕರಣ ಲೆವಿಯನ್ನು ಮೌಲ್ಯಮಾಪನ ವರ್ಷ (AY) 2025-26 ಅಥವಾ ಅದಕ್ಕಿಂತ ಹಿಂದಿನ ವರ್ಷಗಳಿಗೆ (119) ಪಾವತಿಸಲು ಈ ಆಯ್ಕೆಯನ್ನು ಆರಿಸಿ – ITNS 285 ಅನ್ನು ನೋಡಿ
  • ದಯವಿಟ್ಟು ಮೌಲ್ಯಮಾಪನ ವರ್ಷ (AY) 2026-27 ಅಥವಾ ಅದಕ್ಕಿಂತ ಹಿಂದಿನ ವರ್ಷಗಳಿಗೆ ತೆರಿಗೆ ಪಾವತಿಸಲು ಈ ಆಯ್ಕೆಯನ್ನು ಆರಿಸಿ – ITNS 282 ಅನ್ನು ನೋಡಿ.

- STT ಅಡಿಯಲ್ಲಿ ಸ್ವಯಂ-ಮೌಲ್ಯಮಾಪನ ತೆರಿಗೆ (300),
- STT ಅಡಿಯಲ್ಲಿ ಬಾಕಿ ಉಳಿದಿರುವ ಬೇಡಿಕೆ (400).
- CTT (800)

ಶುಲ್ಕ / ಇತರೆ ಪಾವತಿಗಳು

 

- ಬ್ಯಾಂಕಿಂಗ್ ನಗದು ವಹಿವಾಟು ತೆರಿಗೆ (0036)
- ಫ್ರಿಂಜ್ ಲಾಭ ತೆರಿಗೆ (0026)

AY 2009‑10 ಅಥವಾ ಹಿಂದಿನ ವರ್ಷಗಳಿಗೆ ಸ್ವಯಂ-ಮೌಲ್ಯಮಾಪನ ತೆರಿಗೆ (300) ಮತ್ತು ಬಾಕಿ ಇರುವ ಬೇಡಿಕೆ (400) ಅನ್ನು ಪಾವತಿಸಲು ದಯವಿಟ್ಟು ಈ ಆಯ್ಕೆಯನ್ನು ಆರಿಸಿ- ITNS 283ಅನ್ನು ನೋಡಿ.

- ಹೋಟೆಲ್ ರಸೀದಿಗಳ ತೆರಿಗೆ (0023)
- ಬಡ್ಡಿ ತೆರಿಗೆ (0024)
- ಖರ್ಚು/ಇತರ ತೆರಿಗೆ (0028)
- ಆಸ್ತಿ ತೆರಿಗೆ (0031)
- ಸಂಪತ್ತು ತೆರಿಗೆ (0032)
- ಉಡುಗೊರೆ ತೆರಿಗೆ (0033)

ದಯವಿಟ್ಟು ಸ್ವಯಂ-ಮೌಲ್ಯಮಾಪನ ತೆರಿಗೆ ಮತ್ತು ಬಾಕಿ ಉಳಿದಿರುವ ಬೇಡಿಕೆ ಅನ್ನು ಮೌಲ್ಯಮಾಪನ ವರ್ಷ (AY) 2026‑27 ಅಥವಾ ಹಿಂದಿನ ವರ್ಷಗಳಿಗೆ ಪಾವತಿಸಲು ಈ ಆಯ್ಕೆಯನ್ನು ಆಯ್ಕೆಮಾಡಿ. – ITNS 282 ಅನ್ನು ನೋಡಿ.

ಇತರೆ ರಸೀತಿಗಳು (0075)

ಮೌಲ್ಯಮಾಪನ ವರ್ಷ (AY) 2026‑27 ಅಥವಾ ಹಿಂದಿನ ವರ್ಷಗಳಿಗೆ (800) ಸೆಕ್ಷನ್‌ 245MA (ಫಾರ್ಮ್ ನಂ. 34BC) ಅಡಿಯಲ್ಲಿ ಅರ್ಜಿ ಶುಲ್ಕ ಪಾವತಿಸಲು ಈ ಆಯ್ಕೆಯನ್ನು ಆರಿಸಿ: ITNS282ಅನ್ನು ನೋಡಿ.

ಬ್ಲಾಕ್‌ ಮೌಲ್ಯಮಾಪನಕ್ಕಾಗಿ ಸ್ವಯಂ-ಮೌಲ್ಯಮಾಪನ ತೆರಿಗೆ

ಆದಾಯ ತೆರಿಗೆ (ಕಂಪನಿಯೇತರರಿಗೆ) (0021) /

ನಿಗಮ ತೆರಿಗೆ (ಕಂಪನಿಗಳ ಲಾಗಿನ್) (0020)

ದಯವಿಟ್ಟು ಬ್ಲಾಕ್ ಮೌಲ್ಯಮಾಪನ (311) ಕ್ಕಾಗಿ ಸ್ವಯಂ-ಮೌಲ್ಯಮಾಪನ ತೆರಿಗೆಯನ್ನು ಪಾವತಿಸಲು ಈ ಆಯ್ಕೆಯನ್ನು ಆರಿಸಿ - ITNS 288 ಅನ್ನು ನೋಡಿ.

ಬ್ಲಾಕ್ ಅವಧಿಯ ಶೋಧನೆ ಮೌಲ್ಯಮಾಪನದ ಮೇಲಿನ ತೆರಿಗೆಯಾಗಿ ಬೇಡಿಕೆ ಪಾವತಿ (411)

ಆದಾಯ ತೆರಿಗೆ (ಕಂಪನಿಯೇತರ) (0021) / ನಿಗಮ ತೆರಿಗೆ (ಕಂಪನಿ ಲಾಗಿನ್‌) (0020)

 

ಬ್ಲಾಕ್ ಅವಧಿಗೆ ಸಂಬಂಧಿಸಿದ ಬೇಡಿಕೆ ಪಾವತಿ (411) ಮಾಡಲು ಈ ಆಯ್ಕೆಯನ್ನು ಆರಿಸಿ – ITNS 288 ಅನ್ನು ನೋಡಿ.

ಸೂಚನೆ: ಬ್ಲಾಕ್ ಮೌಲ್ಯಮಾಪನಕ್ಕೆ ಸಂಬಂಧಿಸಿದ ಬೇಡಿಕೆಯನ್ನು DRN‌ನೊಂದಿಗೆ ಮಾತ್ರ ಪಾವತಿಸಬಹುದು ಮತ್ತು ಈ ಆಯ್ಕೆಯು ಲಾಗಿನ್‌ ನಂತರದ ಸೌಲಭ್ಯದಲ್ಲಿ ಮಾತ್ರ ಲಭ್ಯವಿರುತ್ತದೆ.

26QB (ಆಸ್ತಿ ಮಾರಾಟದ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS))

ಆದಾಯ ತೆರಿಗೆ (ಕಂಪನಿಯೇತರ) (0021) / ನಿಗಮ ತೆರಿಗೆ (ಕಂಪನಿ ಲಾಗಿನ್‌) (0020)

ಪಾವತಿ/ಜಮಾ ದಿನಾಂಕವು ಮೌಲ್ಯಮಾಪನ ವರ್ಷ(AY) 2026-27 ಅಥವಾ ಅದಕ್ಕೂ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದರೆ, ಆಸ್ತಿ ಮಾರಾಟದ ಮೇಲಿನ ತೆರಿಗೆಯನ್ನು ಪಾವತಿಸಲು ಈ ಆಯ್ಕೆಯನ್ನು ಆರಿಸಿ.

ಆಸ್ತಿಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS)ಗೆ ಸಂಬಂಧಿಸಿದ ಬೇಡಿಕೆ ಪಾವತಿ

ಆದಾಯ ತೆರಿಗೆ (ಕಂಪನಿಯೇತರ) (0021) / ನಿಗಮ ತೆರಿಗೆ (ಕಂಪನಿ ಲಾಗಿನ್) (0020)

ಪಾವತಿ/ಜಮಾ ದಿನಾಂಕವು ಮೌಲ್ಯಮಾಪನ ವರ್ಷ (AY) 2026-27 ಅಥವಾ ಅದಕ್ಕೂ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದರೆ, ಆಸ್ತಿ ಮಾರಾಟದ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS)ಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಪಾವತಿಸಲು ಈ ಆಯ್ಕೆಯನ್ನು ಆರಿಸಿ.

26QC (ಆಸ್ತಿ ಬಾಡಿಗೆಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS))

ಆದಾಯ ತೆರಿಗೆ (ಕಂಪನಿಯೇತರ) (0021)

ಪಾವತಿ/ಜಮಾ ದಿನಾಂಕವು ಮೌಲ್ಯಮಾಪನ ವರ್ಷ (AY) 2026-27 ಅಥವಾ ಅದಕ್ಕೂ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದರೆ, ಬಾಡಿಗೆಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS) ಪಾವತಿಸಲು ಈ ಆಯ್ಕೆಯನ್ನು ಆರಿಸಿ.

ಆಸ್ತಿಯ ಬಾಡಿಗೆ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS)ಕ್ಕಾಗಿ ಬೇಡಿಕೆ ಪಾವತಿ

ಆದಾಯ ತೆರಿಗೆ (ಕಂಪನಿಯೇತರ) (0021)

ಪಾವತಿ/ಜಮಾ ದಿನಾಂಕವು ಮೌಲ್ಯಮಾಪನ ವರ್ಷ (AY) 2026-27 ಅಥವಾ ಅದಕ್ಕೂ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದರೆ, ಬಾಡಿಗೆಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS)ಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಪಾವತಿಸಲು ಈ ಆಯ್ಕೆಯನ್ನು ಆರಿಸಿ.

26QD (ನಿವಾಸಿ ಗುತ್ತಿಗೆದಾರರು ಮತ್ತು ವೃತ್ತಿಪರರಿಗೆ ಪಾವತಿಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS))

ಆದಾಯ ತೆರಿಗೆ (ಕಂಪನಿಯೇತರ) (0021)

ಪಾವತಿ/ಜಮಾ ದಿನಾಂಕವು ಮೌಲ್ಯಮಾಪನ ವರ್ಷ (AY) 2026-27 ಅಥವಾ ಅದಕ್ಕೂ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದರೆ, ನಿವಾಸಿ ಗುತ್ತಿಗೆದಾರರು ಮತ್ತು ವೃತ್ತಿಪರರಿಗೆ ಪಾವತಿಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS) ಪಾವತಿಸಲು ಈ ಆಯ್ಕೆಯನ್ನು ಆರಿಸಿ.

ನಿವಾಸಿ ಗುತ್ತಿಗೆದಾರರು ಮತ್ತು ವೃತ್ತಿಪರರಿಗೆ ಪಾವತಿಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS)ಕ್ಕೆ ಸಂಬಂಧಿಸಿದ ಬೇಡಿಕೆ ಪಾವತಿ

ಆದಾಯ ತೆರಿಗೆ (ಕಂಪನಿಯೇತರ) (0021)

ಪಾವತಿ/ಜಮಾ ದಿನಾಂಕವು ಮೌಲ್ಯಮಾಪನ ವರ್ಷ(AY) 2026-27 ಅಥವಾ ಅದಕ್ಕೂ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದರೆ, ನಿವಾಸಿ ಗುತ್ತಿಗೆದಾರರು ಮತ್ತು ವೃತ್ತಿಪರರಿಗೆ ಪಾವತಿಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS)ಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಪಾವತಿಸಲು ಈ ಆಯ್ಕೆಯನ್ನು ಆರಿಸಿ.

26QE (ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS))

ಆದಾಯ ತೆರಿಗೆ (ಕಂಪನಿಯೇತರ) (0021)

ಪಾವತಿ/ಜಮಾ ದಿನಾಂಕವು ಮೌಲ್ಯಮಾಪನ ವರ್ಷ (AY) 2026-27 ಅಥವಾ ಅದಕ್ಕೂ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದರೆ, ವರ್ಚುವಲ್ ಡಿಜಿಟಲ್ ಆಸ್ತಿಗಳ ವರ್ಗಾವಣೆಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS) ಪಾವತಿಸಲು ಈ ಆಯ್ಕೆಯನ್ನು ಆರಿಸಿ.

ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ (TDS)ಕ್ಕೆ ಸಂಬಂಧಿಸಿದ ಬೇಡಿಕೆ ಪಾವತಿ

ಆದಾಯ ತೆರಿಗೆ (ಕಂಪನಿಯೇತರ) (0021)

ಪಾವತಿ/ಜಮಾ ದಿನಾಂಕವು ಮೌಲ್ಯಮಾಪನ ವರ್ಷ(AY) 2026-27 ಅಥವಾ ಅದಕ್ಕೂ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದರೆ, ವರ್ಚುವಲ್ ಡಿಜಿಟಲ್ ಆಸ್ತಿಗಳ ವರ್ಗಾವಣೆಯ ಮೇಲಿನ ಮೂಲದಲ್ಲಿಯೇ ತೆರಿಗೆ ಕಡಿತ(TDS)ಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಪಾವತಿಸಲು ಈ ಆಯ್ಕೆಯನ್ನು ಆರಿಸಿ

3.2 ಆದಾಯ ತೆರಿಗೆ ಕಾಯಿದೆ, 2025 ಅನ್ನು ಆಯ್ಕೆ ಬಟನ್‌ನಲ್ಲಿ ಆಯ್ಕೆ ಮಾಡಿದರೆ, ಈ ಕೆಳಗಿನ ಟೈಲ್‌ಗಳು ಲಭ್ಯವಿರುತ್ತವೆ:

Data responsive


3.3 ಟೈಲ್‌ಗಳ ಅವಲೋಕನ:-

3.3.1 ಆದಾಯ ತೆರಿಗೆ/ನಿಗಮ ತೆರಿಗೆ ಟೈಲ್‌ ಮತ್ತು ಬಾಕಿ ಇರುವ ಬೇಡಿಕೆ (ನಿಯಮಿತ ಮೌಲ್ಯಮಾಪನ ತೆರಿಗೆ) (400) ಟೈಲ್‌

ಟೈಲ್ ಹೆಸರು

ಪ್ರಧಾನ ಶೀರ್ಷಿಕೆ

ಟೈಲ್‌ಗಳಿಗೆ ಅನ್ವಯವಾಗುವ ಸೂಚನೆಗಳು ಮತ್ತು (ಉಪ ಶೀರ್ಷಿಕೆ)

ಆದಾಯ ತೆರಿಗೆ (ಕಂಪನಿಯೇತರರಿಗೆ) / ನಿಗಮ ತೆರಿಗೆ (ಕಂಪನಿ ಲಾಗಿನ್‌ಗಾಗಿ)

ಆದಾಯ ತೆರಿಗೆ (ಕಂಪನಿಗಳನ್ನು ಹೊರತುಪಡಿಸಿ) (0021) / ಕಾರ್ಪೊರೇಷನ್ ತೆರಿಗೆ (ಕಂಪನಿ ಲಾಗಿನ್) (0020)

 

 

 

ತೆರಿಗೆ ವರ್ಷ (TY) 2026-27 ಮತ್ತು ನಂತರದ ತೆರಿಗೆ ಪಾವತಿಸಲು ಈ ಆಯ್ಕೆಯನ್ನು ಆರಿಸಿ- ITNS 280N ಅನ್ನು ನೋಡಿ.

  • ಮುಂಗಡ ತೆರಿಗೆ(ಉಪ ಶೀರ್ಷಿಕೆ 100)
  • ಸ್ವಯಂ ಮೌಲ್ಯಮಾಪನ ತೆರಿಗೆ(ಉಪ ಶೀರ್ಷಿಕೆ 300)

ಸೂಚನೆ: ಸಂಬಂಧಿತ ತೆರಿಗೆ ವರ್ಷ(TY) ಮುಕ್ತಾಯಗೊಂಡ ನಂತರವೇ ಈ ಟೈಲ್‌ ಸಕ್ರಿಯಗೊಳ್ಳುತ್ತದೆ. (ಉದಾಹರಣೆ: ತೆರಿಗೆ ವರ್ಷ (TY)2026-27ಕ್ಕೆ, ಸ್ವಯಂ ಮೌಲ್ಯಮಾಪನ ತೆರಿಗೆಯನ್ನು 01 ಏಪ್ರಿಲ್‌ 2027ರಿಂದ ಪಾವತಿಸಬಹುದು.)

  • ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್‌ 170ರ ಅಡಿಯ ದ್ವಿತೀಯ ಹೊಂದಾಣಿಕೆ ತೆರಿಗೆ (110)
  • ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್‌ 352ರ ಅಡಿಯ ಸಂಚಿತ ತೆರಿಗೆ (111)
  • 500ರ ಅಡಿಯಲ್ಲಿ ಈ ಕೆಳಗಿನ ಉಪ-ವಿಧದ ಪಾವತಿಗಳನ್ನು ಮಾಡಬಹುದು:

- PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವಲ್ಲಿ ವಿಳಂಬಕ್ಕೆ ಶುಲ್ಕ 
- 429 (ಫಾರ್ಮ್ 113) ಅಡಿಯಲ್ಲಿ ವಿಳಂಬ ಶುಲ್ಕಗಳು
- ಮೇಲ್ಮನವಿ ಶುಲ್ಕಗಳು
- ಸಂಚಿತ ಶುಲ್ಕಗಳು

ನಿಯಮಿತ ಮೌಲ್ಯಮಾಪನ ತೆರಿಗೆಯಾಗಿ ಬೇಡಿಕೆ ಪಾವತಿ (400)

ತೆರಿಗೆ ವರ್ಷ (TY) 2026-27 ಮತ್ತು ನಂತರದ ವರ್ಷಗಳಿಗೆ ಈ ಕೆಳಗಿನ ಪಾವತಿಗಳನ್ನು ಮಾಡಲು ಈ ಆಯ್ಕೆಯನ್ನು ಆರಿಸಿ: ಬಳಕೆದಾರರು ಬೇಡಿಕೆ ಪಾವತಿಯನ್ನು DRN‌ನೊಂದಿಗೆ ಅಥವಾ DRN ಇಲ್ಲದೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

• DRN‌ನೊಂದಿಗೆ: ಪಾವತಿಯನ್ನು ಲಾಗಿನ್‌ ನಂತರದ ಸೌಲಭ್ಯದ ಮೂಲಕ ಮಾತ್ರ ಮಾಡಬಹುದು.
• DRN ಇಲ್ಲದೆ: ಪಾವತಿಯನ್ನು ಲಾಗಿನ್‌ನ ಮೊದಲು ಹಾಗೂ ಲಾಗಿನ್‌ ನಂತರದ ಸೌಲಭ್ಯದ ಮೂಲಕ ಮಾಡಬಹುದು

ದಯವಿಟ್ಟು ಗಮನಿಸಿ: ಪಾವತಿಯನ್ನು ಸುಲಭವಾಗಿ ಮ್ಯಾಪ್‌ ಮಾಡಲು ಸಾಧ್ಯವಾಗುವಂತೆ ಬೇಡಿಕೆಯನ್ನು DRN ಸಂಖ್ಯೆಯನ್ನು ಬಳಸಿ ಪಾವತಿಸಲು ಶಿಫಾರಸು ಮಾಡಲಾಗಿದೆ – ITNS 280N ಅನ್ನು ನೋಡಿ.

ಆದಾಯ ತೆರಿಗೆ ಟೈಲ್‌/ನಿಗಮ ತೆರಿಗೆ ಟೈಲ್‌ (ಕಂಪನಿ ಲಾಗಿನ್‌ನ ಸಂದರ್ಭದಲ್ಲಿ) ಮೇಲಿನ "ಮುನ್ನಡೆಯಿರಿ" ಬಟನ್ ಅನ್ನು ಕ್ಲಿಕ್ ಮಾಡಿದಾಗ, ಅನ್ವಯವಾಗುವ ತೆರಿಗೆ ವರ್ಷ ಮತ್ತು ಉಪ ಶೀರ್ಷಿಕೆಯನ್ನು ಆಯ್ಕೆ ಮಾಡಲು ಬಳಕೆದಾರರನ್ನು ಅನ್ವಯವಾಗುವ ತೆರಿಗೆ ವಿವರಗಳನ್ನು ಸೇರಿಸಿ ಪುಟಕ್ಕೆ ಕರೆದೊಯ್ಯಲಾಗುತ್ತದೆ. ನಂತರ "ಮುಂದುವರಿಯಿರಿ" ಬಟನ್ ಅನ್ನು ಕ್ಲಿಕ್ ಮಾಡಿ.

Data responsiveData responsive

"ಮುನ್ನಡೆಯಿರಿ" ಬಟನ್ ಅನ್ನು ನಿಯಮಿತ ಮೌಲ್ಯಮಾಪನ ತೆರಿಗೆಯಾಗಿ ಬೇಡಿಕೆ ಪಾವತಿ (400) ಟೈಲ್‌ನಲ್ಲಿ ಕ್ಲಿಕ್ ಮಾಡಿದಾಗ, DRN‌ನೊಂದಿಗೆ ಅಥವಾ (DRN ಲಭ್ಯವಿಲ್ಲದಿದ್ದರೆ ಮಾತ್ರ) DRN ಇಲ್ಲದೆ ಪಾವತಿ ಮಾಡಲು ಬಳಕೆದಾರರನ್ನು ಅನ್ವಯವಾಗುವ ಬೇಡಿಕೆ ವಿವರಗಳನ್ನು ಸೇರಿಸಿ ಪುಟಕ್ಕೆ ಕರೆದೊಯ್ಯಲಾಗುತ್ತದೆ.

Data responsiveData responsive

DRN‌ನೊಂದಿಗೆ ಪಾವತಿ ಮಾಡುವಾಗ, DRN ಆಯ್ಕೆಯನ್ನು ಆರಿಸಿ. ವ್ಯವಸ್ಥೆಯು DRNಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆಯುತ್ತದೆ ಮತ್ತು "ಮುಂದುವರಿಯಿರಿ" ಬಟನ್ ಅನ್ನು ಕ್ಲಿಕ್ ಮಾಡಿದ ನಂತರ ನಿಮ್ಮನ್ನು ನೇರವಾಗಿ ಪಾವತಿ ಪುಟಕ್ಕೆ ಕರೆದೊಯ್ಯಲಾಗುತ್ತದೆ.

Data responsive

DRN ಇಲ್ಲದೆ ಪಾವತಿ ಮಾಡುವಾಗ, ಪರದೆಯಲ್ಲಿ ತೋರಿಸಲಾದ ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡಿ, ತೆರಿಗೆ ವರ್ಷ(TY) ಮತ್ತು ಉಪ ಶೀರ್ಷಿಕೆಯನ್ನು ಆಯ್ಕೆ ಮಾಡಿ ಹಾಗೂ "ಮುಂದುವರೆಯಿರಿ" ಅನ್ನು ಕ್ಲಿಕ್ ಮಾಡಬೇಕು. ಈ ಆಯ್ಕೆಯು ಲಾಗಿನ್‌ನ ಮೊದಲು ಮತ್ತು ಲಾಗಿನ್‌ ನಂತರದ ಎರಡೂ ವಿಧಾನಗಳಲ್ಲಿ ಲಭ್ಯವಿರುತ್ತದೆ.

Data responsive

3.3.2 STT/CTT/ಸೆಕ್ಷನ್ 379‌ ಅಡಿಯಲ್ಲಿ ಇ-DRS / ಇತರ ತೆರಿಗೆ ಟೈಲ್ 

ಟೈಲ್

ಪ್ರಧಾನ ಶೀರ್ಷಿಕೆ

ಟೈಲ್‌ಗಳಿಗೆ ಅನ್ವಯವಾಗುವ ಸೂಚನೆಗಳು ಮತ್ತು (ಉಪ ಶೀರ್ಷಿಕೆ)

STT/

CTT/

ಸೆಕ್ಷನ್ 379‌ ಅನ್ವಯ ಇ-DRS / ಇತರ ತೆರಿಗೆ ಟೈಲ್ 

ಭದ್ರತಾ ವಹಿವಾಟು ತೆರಿಗೆ(0034)

ತೆರಿಗೆ ವರ್ಷ (TY) 2026-27 ಮತ್ತು ನಂತರದ ವರ್ಷಗಳಿಗೆ ತೆರಿಗೆ ಪಾವತಿಸಲು ಈ ಆಯ್ಕೆಯನ್ನು ಆರಿಸಿ - ITNS 282N ಅನ್ನು ನೋಡಿ.

  • ಸ್ವಯಂ ಮೌಲ್ಯಮಾಪನ ತೆರಿಗೆ (300)
  • ಬಾಕಿ ಇರುವ ಬೇಡಿಕೆ (400) ಮತ್ತು
  • ಸರಕು ವಹಿವಾಟು ತೆರಿಗೆ (800)

ಇತರ ಸ್ವೀಕೃತಿಗಳು (0075)

ತೆರಿಗೆ ವರ್ಷ(TY) 2026-27 ಮತ್ತು ನಂತರದ ವರ್ಷಗಳಿಗೆ ಸೆಕ್ಷನ್‌ 379ರ ಅಡಿಯ ಇ-DRS ಯೋಜನೆಯ ಅಡಿಯಲ್ಲಿ ಇತರೆ ಸ್ವೀಕೃತಿಗಳು (800) ಪಾವತಿಸಲು ಈ ಆಯ್ಕೆಯನ್ನು ಆರಿಸಿ – ITNS 282N ಅನ್ನು ನೋಡಿ.

ಇತರ ತೆರಿಗೆ(0028)

ತೆರಿಗೆ ವರ್ಷ(TY) 2026-27 ಮತ್ತು ನಂತರದ ವರ್ಷಗಳಿಗೆ ಈ ಕೆಳಗಿನ ತೆರಿಗೆಗಳನ್ನು ಪಾವತಿಸಲು ಈ ಆಯ್ಕೆಯನ್ನು ಆರಿಸಿ – ITNS 282N ಅನ್ನು ನೋಡಿ.

  • ಮುಂಗಡ ತೆರಿಗೆ (100)
  • ಸ್ವಯಂ ಮೌಲ್ಯಮಾಪನ ತೆರಿಗೆ (300)
  • ಬಾಕಿ ಇರುವ ಬೇಡಿಕೆ (ನಿಯಮಿತ ಮೌಲ್ಯಮಾಪನ ತೆರಿಗೆ) (400)


STT/CTT/ಸೆಕ್ಷನ್‌ 379ರ ಅಡಿಯ ಇ-DRS/ಇತರೆ ತೆರಿಗೆ ಟೈಲ್‌ನಲ್ಲಿರುವ "ಮುನ್ನಡೆಯಿರಿ" ಬಟನ್ ಅನ್ನು ಕ್ಲಿಕ್ ಮಾಡಿದಾಗ, ಅನ್ವಯವಾಗುವ ತೆರಿಗೆ ವರ್ಷ, ಪ್ರಮುಖ ಶೀರ್ಷಿಕೆ ಮತ್ತು ಸಣ್ಣ ಶೀರ್ಷಿಕೆಯನ್ನು ಆಯ್ಕೆ ಮಾಡಲು ಬಳಕೆದಾರರನ್ನು ಅನ್ವಯವಾಗುವ ತೆರಿಗೆ ವಿವರಗಳನ್ನು ಸೇರಿಸಿ ಪುಟಕ್ಕೆ ಕರೆದೊಯ್ಯಲಾಗುತ್ತದೆ. ನಂತರ "ಮುಂದುವರಿಸಿ" ಬಟನ್ ಅನ್ನು ಕ್ಲಿಕ್ ಮಾಡಿ.

Data responsiveData responsive

3.3.3 ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ ಮೌಲ್ಯಮಾಪನ ತೆರಿಗೆ (311) ಮತ್ತು ಬ್ಲಾಕ್ ಅವಧಿಯ ಶೋಧನೆ ಮೌಲ್ಯಮಾಪನದ ಮೇಲಿನ ತೆರಿಗೆಯಾಗಿ ಬೇಡಿಕೆ ಪಾವತಿ (411)

ಟೈಲ್

ಪ್ರಧಾನ ಶೀರ್ಷಿಕೆ

ಟೈಲ್‌ಗಳಿಗೆ ಅನ್ವಯವಾಗುವ ಸೂಚನೆಗಳು ಮತ್ತು (ಉಪ ಶೀರ್ಷಿಕೆ)

ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ ಮೌಲ್ಯಮಾಪನ ತೆರಿಗೆ (311)

ಆದಾಯ ತೆರಿಗೆ (ಕಂಪನಿಯೇತರ) (0020) / ನಿಗಮ ತೆರಿಗೆ (ಕಂಪನಿ ಲಾಗಿನ್‌) (0021)

ತೆರಿಗೆ ವರ್ಷ (TY)2020 ಮತ್ತು ನಂತರದ ವರ್ಷಗಳಿಗೆ ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ ಮೌಲ್ಯಮಾಪನ ತೆರಿಗೆ (311) ಪಾವತಿಸಲು ಈ ಆಯ್ಕೆಯನ್ನು ಆರಿಸಿ - ITNS: 288N ಅನ್ನು ನೋಡಿ.

ಬ್ಲಾಕ್ ಅವಧಿಯ ಶೋಧನೆ ಮೌಲ್ಯಮಾಪನದ ಮೇಲಿನ ತೆರಿಗೆಯಾಗಿ ಬೇಡಿಕೆ ಪಾವತಿ (411)

ಆದಾಯ ತೆರಿಗೆ (ಕಂಪನಿಯೇತರ) (0020) / ನಿಗಮ ತೆರಿಗೆ (ಕಂಪನಿ ಲಾಗಿನ್‌) (0021)

ತೆರಿಗೆ ವರ್ಷ(TY) 2020 ಮತ್ತು ನಂತರದ ವರ್ಷಗಳಿಗೆ ಬ್ಲಾಕ್ ಅವಧಿಗೆ ಸಂಬಂಧಿಸಿದ ಬೇಡಿಕೆ ಪಾವತಿ (411) ಪಾವತಿಸಲು ಈ ಆಯ್ಕೆಯನ್ನು ಆರಿಸಿ – ITNS: 288N ಅನ್ನು ನೋಡಿ.

ಬ್ಲಾಕ್ ಮೌಲ್ಯಮಾಪನಕ್ಕಾಗಿ ಸ್ವಯಂ ಮೌಲ್ಯಮಾಪನ ತೆರಿಗೆ (311) ಟೈಲ್‌ನಲ್ಲಿರುವ "ಮುನ್ನಡೆಯಿರಿ" ಬಟನ್ ಅನ್ನು ಕ್ಲಿಕ್ ಮಾಡಿದಾಗ, ಬ್ಲಾಕ್ ಅವಧಿಯ ಆರಂಭಿಕ ತೆರಿಗೆ ವರ್ಷ(TY) ಮತ್ತು ಉಪ ಶೀರ್ಷಿಕೆಯನ್ನು ಆಯ್ಕೆ ಮಾಡಲು ಬಳಕೆದಾರರನ್ನು ಅನ್ವಯವಾಗುವ ತೆರಿಗೆ ವಿವರಗಳನ್ನು ಸೇರಿಸಿ ಪುಟಕ್ಕೆ ಕರೆದೊಯ್ಯಲಾಗುತ್ತದೆ. ನಂತರ "ಮುಂದುವರಿಸಿ" ಬಟನ್ ಅನ್ನು ಕ್ಲಿಕ್ ಮಾಡಿ.

Data responsiveData responsive

3.3.4 ಫಾರ್ಮ್‌ 141 ಟೈಲ್‌ಗಾಗಿ ದಯವಿಟ್ಟು ಫಾರ್ಮ್‌ 141 [ಸೆಕ್ಷನ್‌ 393(1)ರ ಅಡಿಯಲ್ಲಿ ತೆರಿಗೆ ಕಡಿತದ ಚಲನ್‌-ಕಮ್-ವಿವರಣೆ] ಬಳಕೆದಾರರ ಕೈಪಿಡಿಯನ್ನು ನೋಡಿ.

3.4 ತೆರಿಗೆಗಳ ಪಾವತಿ

3.4.1 ಅನ್ವಯವಾಗುವ ತೆರಿಗೆ ವಿವರಗಳನ್ನು ಸೇರಿಸಿ / ಅನ್ವಯವಾಗುವ ಬೇಡಿಕೆ ವಿವರಗಳನ್ನು ಸೇರಿಸಿ ಪುಟದಲ್ಲಿ "ಮುಂದುವರಿಸಿ" ಬಟನ್ ಅನ್ನು ಕ್ಲಿಕ್ ಮಾಡಿದಾಗ (ನಿಯಮಿತ ಮೌಲ್ಯಮಾಪನ ತೆರಿಗೆಯಾಗಿ ಬೇಡಿಕೆ ಪಾವತಿ (400) ಟೈಲ್‌ನ ಸಂದರ್ಭದಲ್ಲಿ), ಒಟ್ಟು ತೆರಿಗೆ ಪಾವತಿಯ ಮೊತ್ತದ ವಿವರವನ್ನು ನಮೂದಿಸಲು ಬಳಕೆದಾರರನ್ನು ತೆರಿಗೆ ಮೊತ್ತದ ವಿವರಗಳನ್ನು ಸೇರಿಸಿ ಪುಟಕ್ಕೆ ಕರೆದೊಯ್ಯಲಾಗುತ್ತದೆ. ನಂತರ "ಮುಂದುವರಿಸಿ" ಬಟನ್ ಅನ್ನು ಕ್ಲಿಕ್ ಮಾಡಿ.

Data responsive

3.4.2 ತೆರಿಗೆ ಮೊತ್ತದ ವಿವರಗಳನ್ನು ಸೇರಿಸಿ ಪುಟದಲ್ಲಿ "ಮುಂದುವರಿಸಿ" ಬಟನ್ ಅನ್ನು ಕ್ಲಿಕ್ ಮಾಡಿದ ನಂತರ, ಪಾವತಿ ಮಾಡಲು ಉದ್ದೇಶಿಸಿರುವ ಪಾವತಿ ವಿಧಾನವನ್ನು ಆಯ್ಕೆ ಮಾಡಿ. (ವಿಭಿನ್ನ ವಿಧಾನಗಳನ್ನು ಬಳಸಿಕೊಂಡು ಪಾವತಿಯನ್ನು ಹೇಗೆ ಮಾಡುವುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಂಬಂಧಿತ ಬಳಕೆದಾರರ ಕೈಪಿಡಿಯನ್ನು ನೋಡಿ.)

Data responsive

3.4.3 ಮುಂದುವರಿಸಿ ಬಟನ್ ಅನ್ನು ಕ್ಲಿಕ್ ಮಾಡಿದಾಗ, ಬಳಕೆದಾರರನ್ನು ಮುನ್ನೋಟ ಮತ್ತು ಪಾವತಿ ಮಾಡಿ ಪುಟಕ್ಕೆ ಕರೆದೊಯ್ಯಲಾಗುತ್ತದೆ.

ಇಲ್ಲಿ, ಬಳಕೆದಾರರು ಈ ಕೆಳಗಿನವುಗಳನ್ನು ಮಾಡಬಹುದು:

• ಪಾವತಿಯನ್ನು ಮುಂದುವರಿಸುವ ಮೊದಲು ನಮೂದಿಸಿದ ಎಲ್ಲಾ ವಿವರಗಳನ್ನು ಮುನ್ನೋಟದಲ್ಲಿ ವೀಕ್ಷಿಸಿ.

• ಯಾವುದೇ ತಿದ್ದುಪಡಿಗಳು ಅಗತ್ಯವಿದ್ದರೆ, ಬಳಕೆದಾರರು ಹಿಂದಿನ ಪುಟಕ್ಕೆ ಹೋಗಿ ಮಾಹಿತಿಯನ್ನು ನವೀಕರಿಸಲು “ಸಂಪಾದನೆ” ಬಟನ್ ಅನ್ನು ಕ್ಲಿಕ್ ಮಾಡಬಹುದು.

• ಎಲ್ಲಾ ವಿವರಗಳು ಸರಿಯಾಗಿದ್ದರೆ, ಬಳಕೆದಾರರು “ಈಗ ಪಾವತಿಸಿ” ಬಟನ್ ಅನ್ನು ಕ್ಲಿಕ್ ಮಾಡಬಹುದು. ನಂತರ ವಹಿವಾಟನ್ನು ಪೂರ್ಣಗೊಳಿಸಲು ಅವರನ್ನು ಬ್ಯಾಂಕಿನ ಪಾವತಿ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

ಗಮನಿಸಿ: ಯಶಸ್ವಿ ಪಾವತಿಯ ನಂತರ, ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇ-ಮೇಲ್‌ ID ಮತ್ತು ಮೊಬೈಲ್‌ ಸಂಖ್ಯೆಗೆ ದೃಢೀಕರಣದ ಇ-ಮೇಲ್‌ ಹಾಗೂ SMS ಕಳುಹಿಸಲಾಗುತ್ತದೆ. ಪಾವತಿ ಯಶಸ್ವಿಯಾದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಚಲನ್‌ ರಸೀದಿಯನ್ನು ಡೌನ್‌ಲೋಡ್‌ ಮಾಡಬಹುದು. ಪಾವತಿಯ ವಿವರಗಳು ಮತ್ತು ಚಲನ್‌ ರಸೀದಿಯು ಲಾಗಿನ್‌ ನಂತರದ ಇ-ತೆರಿಗೆ ಪಾವತಿ ಪುಟದಲ್ಲಿರುವ ಪಾವತಿ ಇತಿಹಾಸ ಟ್ಯಾಬ್‌ನಲ್ಲಿಯೂ ಲಭ್ಯವಿರುತ್ತವೆ.


3.5 ಚಲನ್‌ ಫಾರ್ಮ್‌ (CRN) ರಚಿಸಿ (ಲಾಗಿನ್‌ ಮೊದಲು)

3.5.1 ಇ-ಸಲ್ಲಿಕೆ ಪೋರ್ಟಲ್‌ www.incometax.gov.in ಗೆ ಹೋಗಿ ಮತ್ತು ಇ-ತೆರಿಗೆ ಪಾವತಿ ಅನ್ನು ಕ್ಲಿಕ್ ಮಾಡಿ.

Data responsive

3.5.2 ಇ-ತೆರಿಗೆ ಪಾವತಿ ಪುಟದಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.

Data responsive

3.5.3 OTP ಪರಿಶೀಲನೆ ಪುಟದಲ್ಲಿ, ಹಂತ 2ರಲ್ಲಿ ನಮೂದಿಸಿದ ಮೊಬೈಲ್‌ ಸಂಖ್ಯೆಗೆ ಬಂದ 6-ಅಂಕಿಯ OTP ಅನ್ನು ನಮೂದಿಸಿ ಮತ್ತು ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.

Data responsive

3.5.4 OTP ಪರಿಶೀಲನೆ ಯಶಸ್ವಿಯಾದ ನಂತರ, ನಿಮ್ಮ PAN ಮತ್ತು ಭಾಗಶಃ ಮರೆಮಾಡಲಾದ ಹೆಸರಿನೊಂದಿಗೆ ಯಶಸ್ಸಿನ ಸಂದೇಶವು ಪ್ರದರ್ಶಿಸಲಾಗುತ್ತದೆ. ಮುನ್ನಡೆಯಲು ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.

Data responsive

3.5.5 ಇ-ತೆರಿಗೆ ಪಾವತಿ ಪುಟದಲ್ಲಿ, ನಿಮಗೆ ಅನ್ವಯವಾಗುವ ತೆರಿಗೆ ಪಾವತಿ ವರ್ಗದಲ್ಲಿರುವ ಮುನ್ನಡೆಯಿರಿ ಅನ್ನು ಕ್ಲಿಕ್ ಮಾಡಿ.

• ಮೌಲ್ಯಮಾಪನ ವರ್ಷ(AY) 2026-27 ಮತ್ತು ಅದಕ್ಕೂ ಹಿಂದಿನ ವರ್ಷಗಳಿಗೆ, ಮೌಲ್ಯಮಾಪನ ವರ್ಷ(AY) 2026-27ರ ಸ್ವಯಂ ಮೌಲ್ಯಮಾಪನ ತೆರಿಗೆ ಸೇರಿದಂತೆ ಪಾವತಿಗಳನ್ನು ಮಾಡಲು “ಆದಾಯ ತೆರಿಗೆ ಕಾಯಿದೆ, 1961” ರೇಡಿಯೊ ಬಟನ್ ಅನ್ನು ಆಯ್ಕೆ ಮಾಡಿ.

• ತೆರಿಗೆ ವರ್ಷ(TY) 2026–27 ಮತ್ತು ನಂತರದ ವರ್ಷಗಳಿಗೆ ಪಾವತಿಗಳನ್ನು ಮಾಡಲು “ಆದಾಯ ತೆರಿಗೆ ಕಾಯಿದೆ, 2025” ಅನ್ನು ಆಯ್ಕೆ ಮಾಡಿ.

ದಯವಿಟ್ಟು ಗಮನಿಸಿ: ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಹಾಗೂ ತೆರಿಗೆ ವಿಧಿಸುವ ಕಾಯಿದೆ, 2015ಕ್ಕೆ ಸಂಬಂಧಿಸಿದ ತೆರಿಗೆ ಪಾವತಿಗಳಿಗಾಗಿ ಆದಾಯ ತೆರಿಗೆ ಕಾಯಿದೆ, 1961 ಅನ್ನು ಆಯ್ಕೆ ಮಾಡಿ.


3.5.6 ಆದಾಯ ತೆರಿಗೆ ಕಾಯಿದೆ, 1961 ರೇಡಿಯೊ ಬಟನ್ ಅನ್ನು ಆಯ್ಕೆ ಮಾಡಿದಾಗ, ಈ ಕೆಳಗಿನ ಟೈಲ್‌ಗಳು ಲಭ್ಯವಿರುತ್ತವೆ:

Data responsive

3.5.7 ಆದಾಯ ತೆರಿಗೆ ಕಾಯಿದೆ, 2025 ರೇಡಿಯೊ ಬಟನ್ ಅನ್ನು ಆಯ್ಕೆ ಮಾಡಿದಾಗ, ಈ ಕೆಳಗಿನ ಟೈಲ್‌ಗಳು ಲಭ್ಯವಿರುತ್ತವೆ:

Data responsive

ಟೈಲ್‌ಗಳನ್ನು ಆಯ್ಕೆ ಮಾಡಿದ ನಂತರದಿಂದ ಪಾವತಿ ಪ್ರಕ್ರಿಯೆಯವರೆಗೆ ಇರುವ ಮುಂದಿನ ಹಂತಗಳು, ಮೇಲಿನ ಲಾಗಿನ್‌ ನಂತರದ ಕಾರ್ಯವಿಧಾನದಲ್ಲಿ ವಿವರಿಸಿರುವಂತೆಯೇ ಇರುತ್ತವೆ. (ಹಂತ 3.3.1 ರಿಂದ 3.4.3 ಅನ್ನು ನೋಡಿ.)