1. ITNS 281N ಎಂದರೇನು?
ITNS 281N TDS ಎಂಬುದು ಆದಾಯ ತೆರಿಗೆ ಕಾಯಿದೆ, 2025ರ ಅಡಿಯಲ್ಲಿ ಮೂಲದಲ್ಲೇ ಕಡಿತಗೊಳಿಸಲಾದ ತೆರಿಗೆ (TDS) ಮತ್ತು ಮೂಲದಲ್ಲೇ ಸಂಗ್ರಹಿಸಲಾದ ತೆರಿಗೆ (TCS) ಪಾವತಿಸಲು ಬಳಸುವ ಚಲನ್ ಫಾರ್ಮ್ ಆಗಿದೆ.
2. ITNS 281N ಅಡಿಯಲ್ಲಿ ಯಾವ ಪ್ರಮುಖ ಶೀರ್ಷಿಕೆಗಳು (Major Head) ಮತ್ತು ಗೌಣ ಶೀರ್ಷಿಕೆಗಳು (Minor Heads) ಒಳಗೊಂಡಿವೆ?
ಪ್ರಮುಖ ಶೀರ್ಷಿಕೆಗಳು:
• ನಿಗಮ ತೆರಿಗೆ (0020)
• ಆದಾಯ ತೆರಿಗೆ (ಕಂಪನಿಗಳನ್ನು ಹೊರತುಪಡಿಸಿ) (0021)
ಗೌಣ ಶೀರ್ಷಿಕೆಗಳು:
• ತೆರಿಗೆದಾರರಿಂದ ಪಾವತಿಸಬೇಕಾದ TDS/TCS (200)
• TDS/TCS ನಿಯಮಿತ ಮೌಲ್ಯಮಾಪನ (400)
• ಇತರೆ ಸ್ವೀಕೃತಿಗಳು (500)
• PAN ಆಧಾರಿತ TDS ಬೇಡಿಕೆಗೆ ಮಾಡಲಾದ ಪಾವತಿ (800)
3. ITNS 281N ಬಳಸಿಕೊಂಡು ಪಾವತಿ ಮಾಡುವಾಗ ಯಾವ ಕಾಯಿದೆ ಅನ್ವಯವಾಗುತ್ತದೆ?
ITNS 281N ಫಾರ್ಮ್ ಅನ್ನು ಆದಾಯ ತೆರಿಗೆ ಕಾಯಿದೆ, 2025ರ ಅಡಿಯಲ್ಲಿ ತೆರಿಗೆ ವರ್ಷ 2026-27ರಿಂದ ಅನ್ವಯವಾಗುವ ತೆರಿಗೆ ಪಾವತಿಗಳಿಗಾಗಿ ಬಳಸಬಹುದು. ಆದಾಯ ತೆರಿಗೆ ಕಾಯಿದೆ, 1961ರ ಅಡಿಯಲ್ಲಿ ಪಾವತಿಗಳನ್ನು ಮಾಡಲು ತೆರಿಗೆದಾರರು ITNS 281 ಅನ್ನು ಬಳಸಬೇಕು.
4. ಆದಾಯ ತೆರಿಗೆ ಪಾವತಿಗಳನ್ನು ಮಾಡಲು ITNS 281N ಅನ್ನು ಎಲ್ಲಿ ಪಡೆಯಬಹುದು?
ಲಾಗಿನ್ ನಂತರ (TAN):
ಲಾಗಿನ್ ಮಾಡಿ → ಇ-ಸಲ್ಲಿಕೆ→ ಇ-ತೆರಿಗೆ ಪಾವತಿ → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆಮಾಡಿ → ಹೊಸ ಪಾವತಿ
ಲಾಗಿನ್ ಮಾಡುವ ಮೊದಲು:
ಡ್ಯಾಶ್ಬೋರ್ಡ್ → ಇ-ತೆರಿಗೆ ಪಾವತಿ (ತ್ವರಿತ ಲಿಂಕ್) → ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆಮಾಡಿ → TAN ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ → OTP ಪರಿಶೀಲನೆ → TDS/TCS ಪಾವತಿಸಿ, ಶುಲ್ಕ ಪಾವತಿಸಿ [ಇತರೆ ಸ್ವೀಕೃತಿಗಳು (500)] ಅಥವಾ ವಿವಿಧ ಸ್ವೀಕೃತಿಗಳು ಟೈಲ್ ಅನ್ನು ಆಯ್ಕೆಮಾಡಿ.
5. ಬಹುವಿಭಾಗ ಕೋಡ್ಗಳಿಗೆ ಪಾವತಿಯನ್ನು ITNS 281N ಮೂಲಕ ಮಾಡಬಹುದೇ?
ಹೌದು. ಗೌಣ ಶೀರ್ಷಿಕೆ (Minor Head) 200ರ ಸಂದರ್ಭದಲ್ಲಿ, ಒಂದು ಚಲನ್ ಮೂಲಕ ಬಹುವಿಭಾಗ ಕೋಡ್ಗಳನ್ನು ಬಳಸಿಕೊಂಡು ಪಾವತಿಗಳನ್ನು ಮಾಡಬಹುದು. ಒಂದು ಚಲನ್ಗೆ ಗರಿಷ್ಠ 20 ವಿಭಾಗ ಕೋಡ್ಗಳ ಮಿತಿಯಿರುತ್ತದೆ. 20ಕ್ಕಿಂತ ಹೆಚ್ಚು ವಿಭಾಗ ಕೋಡ್ಗಳ ಅಗತ್ಯವಿದ್ದಲ್ಲಿ, ಹೆಚ್ಚುವರಿ ಚಲನ್ ಅನ್ನು ಬಳಸಬೇಕು. ಕಡಿತಕ್ಕೊಳಪಡುವವರ 'ನಿವಾಸಿ ಸ್ಥಿತಿ'ಯ ಆಧಾರದ ಮೇಲೆ ವಿಭಾಗ ಕೋಡ್ಗಳನ್ನು ಡ್ರಾಪ್ಡೌನ್ನಲ್ಲಿ ಪ್ರದರ್ಶಿಸಲಾಗುತ್ತದೆ.
6. ಗೌಣ ಶೀರ್ಷಿಕೆ (Minor Head) 500ರ ಅಡಿಯಲ್ಲಿ ಪಾವತಿಯನ್ನು ಸಂದಾಯ ಮಾಡಲು, ತೆರಿಗೆ ವಿವರಗಳ ವಿಭಾಗದಲ್ಲಿ ಯಾವ ಕ್ಷೇತ್ರವನ್ನು ಬಳಸಬೇಕು?
ಗೌಣ ಶೀರ್ಷಿಕೆ (Minor Head) 500ರ ಸಂದರ್ಭದಲ್ಲಿ, ಮೇಲ್ಮನವಿ ಶುಲ್ಕ ಮತ್ತು ರಾಜಿ ಶುಲ್ಕಗಳಿಗಾಗಿ ಪ್ರತ್ಯೇಕ ಚಲನ್ಗಳನ್ನು ಸೃಜಿಸಬೇಕು. ಮೊತ್ತವನ್ನು ತೆರಿಗೆ ವಿವರಗಳ ವಿಭಾಗದ “ಇತರೆ” ಕಾಲಮ್ನಲ್ಲಿ ನಮೂದಿಸಬೇಕು.
7. ಕಡಿತಕ್ಕೊಳಪಡುವ ನಿವಾಸಿ ಮತ್ತು ಅನಿವಾಸಿಗಳಿಗೆ ಒಂದೇ ಚಲನ್ ಬಳಸಬಹುದೇ?
ಇಲ್ಲ. ಕಡಿತಕ್ಕೊಳಪಡುವ ನಿವಾಸಿ ಮತ್ತು ಅನಿವಾಸಿಗಳಿಗೆ ಪ್ರತ್ಯೇಕ ಚಲನ್ಗಳನ್ನು ಬಳಸಬೇಕು.
8. TAN ಲಾಗಿನ್ ಮೂಲಕ ನಿಯಮಿತ ಮೌಲ್ಯಮಾಪನ ತೆರಿಗೆ (400) ರೂಪದಲ್ಲಿ ಬೇಡಿಕೆ ಪಾವತಿಗೆ (Demand Payment) ಹೇಗೆ ಪಾವತಿಸಬಹುದು?
ನಿಯಮಿತ ಮೌಲ್ಯಮಾಪನ ತೆರಿಗೆ (400) ಅಡಿಯಲ್ಲಿ ಬಾಕಿ ಇರುವ ಬೇಡಿಕೆ ಪಾವತಿಯನ್ನು TAN ಲಾಗಿನ್ ಮೂಲಕ "ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಅನ್ವಯಿಸುವ ಆದಾಯ ತೆರಿಗೆ ಕಾಯ್ದೆಯನ್ನು ಆಯ್ಕೆಮಾಡಿ → ಹೊಸ ಪಾವತಿ → ಬಾಕಿ ಇರುವ ಬೇಡಿಕೆಯನ್ನು ಪಾವತಿಸಿ" ಗೆ ತೆರಳಿ ಮಾಡಬಹುದು. ಮೂಲದಲ್ಲೇ ಕಡಿತಗೊಳಿಸಲಾದ ತೆರಿಗೆ (TDS) ಬಾಕಿ ಬೇಡಿಕೆ ಪಾವತಿಗಾಗಿ ಬೇಡಿಕೆ ಉಲ್ಲೇಖ ಸಂಖ್ಯೆ (DRN) ನಮೂದಿಸುವುದು ಐಚ್ಛಿಕವಾಗಿದೆ.
9. ಸೆಕ್ಷನ್ 393(1) ಅಡಿಯಲ್ಲಿ ಕಡಿತದ ಚಲನ್ ಹಾಗೂ ಹೇಳಿಕೆ (ಫಾರ್ಮ್ 141)ಗಾಗಿ ಬೇಡಿಕೆ ಪಾವತಿಯನ್ನು ಹೇಗೆ ಪಾವತಿಸಬಹುದು?
ಚಲನ್ ಹಾಗೂ ಹೇಳಿಕೆ (ಫಾರ್ಮ್ 141) ಗಾಗಿ ಬೇಡಿಕೆ ಪಾವತಿಯನ್ನು PAN ಲಾಗಿನ್ ಮೂಲಕ "ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಆದಾಯ ತೆರಿಗೆ ಕಾಯ್ದೆ, 2025 ಅನ್ನು ಆಯ್ಕೆಮಾಡಿ → ಹೊಸ ಪಾವತಿ → ಫಾರ್ಮ್ 141 (ಸೆಕ್ಷನ್ 393(1) ಅಡಿಯಲ್ಲಿ ತೆರಿಗೆ ಕಡಿತದ ಚಲನ್ ಹಾಗೂ ಹೇಳಿಕೆಗಾಗಿ ಬೇಡಿಕೆ ಪಾವತಿ)" ಗೆ ತೆರಳಿ ಮಾಡಬಹುದು.
ಫಾರ್ಮ್ 141 ಟೈಲ್ನಲ್ಲಿ ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿದ ನಂತರ, ಬಳಕೆದಾರರು ಕೆಳಗಿನ ವಿವರಗಳನ್ನು ನಮೂದಿಸಬೇಕು:
• ಬೇಡಿಕೆ ಉಂಟಾದ ವ್ಯವಹಾರದ ಸ್ವರೂಪ
• ತೆರಿಗೆ ವರ್ಷ
• ಸ್ವೀಕೃತಿ ಸಂಖ್ಯೆ
• ಬೇಡಿಕೆ ಉಲ್ಲೇಖ ಸಂಖ್ಯೆ (ಲಭ್ಯವಿದ್ದಲ್ಲಿ)
ಸ್ವೀಕೃತಿ ಸಂಖ್ಯೆ ಲಭ್ಯವಿಲ್ಲದಿದ್ದರೆ (ಉದಾಹರಣೆಗೆ, ಬೇರೆ ವಿಧಾನದಿಂದ ಬೇಡಿಕೆ ಉಂಟಾದ ಸಂದರ್ಭಗಳಲ್ಲಿ), ಬಳಕೆದಾರರು “ACKNOTAVBL” ಅನ್ನು ನಮೂದಿಸಬಹುದು. ಎಲ್ಲಾ ವಿವರಗಳನ್ನು ನಮೂದಿಸಿ "ಮುಂದುವರಿಸಿ" ಮೇಲೆ ಕ್ಲಿಕ್ ಮಾಡಿದ ನಂತರ, ಬಳಕೆದಾರರನ್ನು "ತೆರಿಗೆ ವಿಭಜನೆ ವಿವರಗಳನ್ನು ಸೇರಿಸಿ" ಪರದೆಗೆ ಕರೆದೊಯ್ಯಲಾಗುತ್ತದೆ.
10. ಕಡಿತಕ್ಕೊಳಪಡುವ ‘ಕಂಪನಿ’ ಮತ್ತು ಕಡಿತಕ್ಕೊಳಪಡುವ ‘ಕಂಪನಿ ಹೊರತುಪಡಿಸಿದ ಇತರರು’ ಒಂದೇ ಚಲನ್ ಬಳಸಬಹುದೇ?
ಇಲ್ಲ. ಕಡಿತಕ್ಕೊಳಪಡುವ ‘ಕಂಪನಿ’ ಮತ್ತು ಕಡಿತಕ್ಕೊಳಪಡುವ ‘ಕಂಪನಿಗಳನ್ನು ಹೊರತುಪಡಿಸಿದ ಇತರರು’ ಪ್ರತ್ಯೇಕ ಚಲನ್ಗಳನ್ನು ಬಳಸಬೇಕು.