1. ಪ್ರೋಟಿಯನ್ (Protean) ಪೋರ್ಟಲ್‌ (ಹಿಂದಿನ NSDL) ನಲ್ಲಿ ಲಭ್ಯವಿದ್ದ “OLTAS ತೆರಿಗೆಗಳ ಇ-ಪಾವತಿ” ಸೇವೆಗೆ ಹೋಲಿಸಿದರೆ, ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿರುವ ಹೊಸ ತೆರಿಗೆಗಳ ಇ-ಪಾವತಿ ಸೇವೆಯಲ್ಲಿ ಯಾವ ಬದಲಾವಣೆಗಳಿವೆ?

ಹೊಸ ತೆರಿಗೆಗಳ ಇ-ಪಾವತಿ ಸೇವೆಯ ಅಡಿಯಲ್ಲಿ, ಚಲನ್ (CRN) ರಚನೆಯಿಂದ ಹಿಡಿದು ಪಾವತಿ ಮಾಡುವುದು ಹಾಗೂ ಪಾವತಿ ಇತಿಹಾಸವನ್ನು ದಾಖಲಿಸುವವರೆಗೆ ನೇರ ತೆರಿಗೆಗಳ ಪಾವತಿಗೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆಯನ್ನು ಅಧಿಕೃತ ಬ್ಯಾಂಕ್‌ಗಳಿಗಾಗಿ ಇ-ಸಲ್ಲಿಕೆ ಪೋರ್ಟಲ್‌ (ಮುಖಪುಟ | ಆದಾಯ ತೆರಿಗೆ ಇಲಾಖೆ) ಮೂಲಕ ಸಕ್ರಿಯಗೊಳಿಸಲಾಗಿದೆ. ಈ ಸೌಲಭ್ಯದ ಅಡಿಯಲ್ಲಿ ಫಾರ್ಮ್ 141 (ಸೆಕ್ಷನ್ 393(1)ರ ಅಡಿಯಲ್ಲಿ ತೆರಿಗೆ ಕಡಿತಕ್ಕಾಗಿ ಚಲನ್-ಸಹ-ಹೇಳಿಕೆ) (ಹಿಂದೆ ಫಾರ್ಮ್ 26QB/26QC/26QD/26QE ಎಂದು ಕರೆಯಲಾಗುತ್ತಿತ್ತು) ಸಲ್ಲಿಸುವ ವ್ಯವಸ್ಥೆಯೂ ಲಭ್ಯವಿದೆ.

ತೆರಿಗೆದಾರರಿಗೆ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಬ್ಯಾಂಕ್ ಕೌಂಟರ್‌ನಲ್ಲಿ ಪಾವತಿ ಸೇರಿದಂತೆ ವಿವಿಧ ಪಾವತಿ ವಿಧಾನಗಳನ್ನು ಒದಗಿಸಲಾಗಿದೆ.

(ಕೌಂಟರ್ ಮೂಲಕ) ಪಾವತಿ ಸೌಲಭ್ಯವೂ ಹೊಸ ವ್ಯವಸ್ಥೆಯಲ್ಲಿ ಲಭ್ಯವಿದೆ. ತೆರಿಗೆಗಳನ್ನು ನೇರವಾಗಿ ಸಂಗ್ರಹಿಸಲು ಅಧಿಕೃತಗೊಳಿಸದ ಬ್ಯಾಂಕ್‌ಗಳ ಮೂಲಕ ಪಾವತಿ ಮಾಡಲು, ತೆರಿಗೆದಾರರಿಗೆ RTGS/NEFT ಹಾಗೂ ಪಾವತಿ ಗೇಟ್‌ವೇ (ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು UPI) ವಿಧಾನಗಳನ್ನು ಬಳಸುವ ಆಯ್ಕೆಯನ್ನೂ ನೀಡಲಾಗಿದೆ. ಈ ಸೌಲಭ್ಯದ ಮೂಲಕ ಪಾವತಿ ಮಾಡಲು, ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೌಲಭ್ಯದಲ್ಲಿ ಚಲನ್ (CRN) ಅನ್ನು ಕಡ್ಡಾಯವಾಗಿ ರಚಿಸಬೇಕು. ಇದಲ್ಲದೆ, CSI (ಚಲನ್ ಸ್ಥಿತಿ ವಿಚಾರಣೆ) ಸೌಲಭ್ಯವನ್ನು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಸೇರಿಸಲಾಗಿದೆ. TAN ಬಳಕೆದಾರರು ಪ್ರವೇಶಿಸದೆ ಇರುವ ಸ್ಥಿತಿಯಲ್ಲಿ ತ್ವರಿತ ಲಿಂಕುಗಳಮೂಲಕ CSI ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು. ಪರ್ಯಾಯವಾಗಿ, ಪ್ರವೇಶಿಸಿದ ನಂತರ CSI ಫೈಲ್ ಡೌನ್‌ಲೋಡ್ ಟ್ಯಾಬ್‌ಗೆ ತೆರಳಿ, ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೇವೆಯ ಮೂಲಕ ಮಾಡಿದ ತೆರಿಗೆ ಪಾವತಿಗಳಿಗೆ ಸಂಬಂಧಿಸಿದ CSI ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು.

2.ಇ-ಸಲ್ಲಿಕೆ ಪೋರ್ಟಲ್ ಮೂಲಕ ತೆರಿಗೆ ಪಾವತಿಗಳನ್ನು ಮಾಡಬೇಕಾದ ಅಧಿಕೃತ ಬ್ಯಾಂಕ್‌ಗಳು ಯಾವುವು?

ಪ್ರಸ್ತುತ, ಕೆಳಗೆ ಉಲ್ಲೇಖಿಸಿರುವ ಬ್ಯಾಂಕ್‌ಗಳಲ್ಲಿ ಇ-ಸಲ್ಲಿಕೆ ಪೋರ್ಟಲ್ ಮೂಲಕ ತೆರಿಗೆ ಪಾವತಿ ಮಾಡುವ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದೆ. ಅಧಿಕೃತ ಬ್ಯಾಂಕ್‌ಗಳಿಗೆ ತೆರಿಗೆ ಪಾವತಿಗಳನ್ನು ಕೇವಲ ಇ-ಸಲ್ಲಿಕೆ ಪೋರ್ಟಲ್ ಮೂಲಕವೇ ಮಾಡಬೇಕು. ತೆರಿಗೆದಾರರು ಇ-ಸಲ್ಲಿಕೆ ವ್ಯವಸ್ಥೆಯಲ್ಲಿನ ಹೊಸ ಪಾವತಿ ವಿಧಾನಗಳಾದ NEFT/RTGS ಮತ್ತು ಪಾವತಿ ಗೇಟ್‌ವೇ ಮೂಲಕ ಅಧಿಕೃತವಲ್ಲದ ಬ್ಯಾಂಕ್‌ಗಳ ಮೂಲಕವೂ ಪಾವತಿ ಮಾಡಬಹುದು.

ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೇವೆಯಲ್ಲಿ ತೆರಿಗೆ ಪಾವತಿಗಾಗಿ ಲಭ್ಯವಿರುವ ಬ್ಯಾಂಕ್‌ಗಳ ಪಟ್ಟಿ ಈ ಕೆಳಗಿನಂತಿದೆ:

ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿರುವ ಬ್ಯಾಂಕ್‌ಗಳು

ಆಕ್ಸಿಸ್ ಬ್ಯಾಂಕ್

ಬಂಧನ್ ಬ್ಯಾಂಕ್

ಬ್ಯಾಂಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಇಂಡಿಯಾ

ಬ್ಯಾಂಕ್ ಆಫ್ ಮಹಾರಾಷ್ಟ್ರ

ಕೆನರಾ ಬ್ಯಾಂಕ್

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಸಿಟಿ ಯೂನಿಯನ್ ಬ್ಯಾಂಕ್

DCB ಬ್ಯಾಂಕ್

ಫೆಡರಲ್ ಬ್ಯಾಂಕ್

HDFC ಬ್ಯಾಂಕ್

ICICI ಬ್ಯಾಂಕ್

IDBI ಬ್ಯಾಂಕ್

ಇಂಡಿಯನ್ ಬ್ಯಾಂಕ್

ಇಂಡಿಯನ್ ಓವರ್ಸೀಸ್ ಬ್ಯಾಂಕ್

ಇಂಡಸ್‌ಇಂಡ್ ಬ್ಯಾಂಕ್

ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್

ಕರೂರ್ ವೈಶ್ಯ ಬ್ಯಾಂಕ್

ಕೋಟಕ್ ಮಹಿಂದ್ರ ಬ್ಯಾಂಕ್

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್

RBL ಬ್ಯಾಂಕ್

ಸೌತ್ ಇಂಡಿಯನ್ ಬ್ಯಾಂಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಯುಕೋ ಬ್ಯಾಂಕ್

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಧನಲಕ್ಷ್ಮಿ ಬ್ಯಾಂಕ್

IDFC ಫಸ್ಟ್ ಬ್ಯಾಂಕ್

ಕರ್ನಾಟಕ ಬ್ಯಾಂಕ್

ರಿಸರ್ವ ಬ್ಯಾಂಕ್ ಆಫ್ ಇಂಡಿಯಾ

ತಮಿಳುನಾಡು ಮರ್ಕಂಟೈಲ್ ಬ್ಯಾಂಕ್

ಯೆಸ್ ಬ್ಯಾಂಕ್ ಲಿಮಿಟೆಡ್

ಹಕ್ಕು ನಿರಾಕರಣೆ: ಅಧಿಕೃತ ಬ್ಯಾಂಕ್‌ಗಳ ಪಟ್ಟಿಯನ್ನು 25 th ಮಾರ್ಚ್ 2026 ರಂದು ನವೀಕರಿಸಲಾಗಿದ್ದು, ಇದು ಬದಲಾವಣೆಗೆ ಒಳಪಡುವ ಸ್ವರೂಪದಲ್ಲಿದೆ.

 

3. ಅಧಿಕೃತ ಬ್ಯಾಂಕ್‌ಗಳನ್ನು ಹೊರತುಪಡಿಸಿ ಇತರ ಬ್ಯಾಂಕ್‌ಗಳ ಮೂಲಕ ತೆರಿಗೆ ಪಾವತಿ ಮಾಡುವ ಪ್ರಕ್ರಿಯೆ ಏನು?

ಅಧಿಕೃತವಲ್ಲದ ಬ್ಯಾಂಕ್‌ಗಳ ಮೂಲಕ ತೆರಿಗೆ ಪಾವತಿಗಳನ್ನು ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೇವೆಯಲ್ಲಿ NEFT/RTGS ಅಥವಾ ಪಾವತಿ ಗೇಟ್‌ವೇ ವಿಧಾನಗಳ ಮೂಲಕ ಮಾಡಬಹುದು.

4. ತೆರಿಗೆಗಳ ಇ-ಪಾವತಿ ಕಾರ್ಯನಿರ್ವಹಣೆಯನ್ನು ಪ್ರವೇಶಿಸುವುದು ಹೇಗೆ

ತೆರಿಗೆಗಳ ಇ-ಪಾವತಿ ಕಾರ್ಯಕ್ಷಮತೆಯನ್ನು ಪ್ರವೇಶಿಸಲು, ತೆರಿಗೆದಾರರು ಮುಖಪುಟ | ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಈ ಕಾರ್ಯಕ್ಷಮತೆ ಪ್ರವೇಶಿಸದೆ ಇರುವ ಸ್ಥಿತಿಯಲ್ಲಿ (ಮುಖಪುಟದಲ್ಲಿನ ತ್ವರಿತ ಲಿಂಕುಗಳ ಅಡಿಯಲ್ಲಿ) ಹಾಗೂ ಪ್ರವೇಶಿಸಿದ ನಂತರ ಎರಡೂ ವಿಧಾನಗಳಲ್ಲಿ ಲಭ್ಯವಿದೆ.

5. ತೆರಿಗೆ ಪಾವತಿಗಾಗಿ ಚಲನ್ (CRN) ರಚಿಸುವುದು ಅಗತ್ಯವಿದೆಯೇ?

ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೇವೆಯಲ್ಲಿ ನೇರ ತೆರಿಗೆ ಪಾವತಿಗಾಗಿ ಚಲನ್ ರಚಿಸುವುದು ಕಡ್ಡಾಯವಾಗಿದೆ. ರಚಿಸಲಾದ ಪ್ರತಿ ಚಲನ್‌ ಒಂದು ವಿಶಿಷ್ಟ ಚಲನ್ ಉಲ್ಲೇಖ ಸಂಖ್ಯೆ (CRN) ಹೊಂದಿರುತ್ತದೆ.

6. ಚಲನ್ (CRN) ಅನ್ನು ಯಾರು ರಚಿಸಬಹುದು?

ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೇವೆಯನ್ನು ಬಳಸಲು ಇಚ್ಛಿಸುವ ಮತ್ತು ನೇರ ತೆರಿಗೆ ಪಾವತಿ ಮಾಡಬೇಕಾದ ಯಾವುದೇ ತೆರಿಗೆದಾರರು (ತೆರಿಗೆ ಕಡಿತಗಾರರು ಹಾಗೂ ಸಂಗ್ರಹಕಾರರು ಸೇರಿದಂತೆ) ಚಲನ್ (CRN) ಅನ್ನು ರಚಿಸಬಹುದು. ಈ ಸೇವೆಯಲ್ಲಿ ಲಭ್ಯವಿರುವ ಲಾಗಿನ್ ನ೦ತರ/ಪೂರ್ವ-ಲಾಗಿನ್ ಆಯ್ಕೆಯ ಮೂಲಕ ಚಲನ್ (CRN) ಅನ್ನು ರಚಿಸಬಹುದು.

7. ಚಲನ್ (CRN) ರಚಿಸಿದ ನಂತರ ಪಾವತಿ ಮಾಡಲು ಲಭ್ಯವಿರುವ ವಿವಿಧ ವಿಧಾನಗಳು ಯಾವುವು?

ಚಲನ್ (CRN) ರಚನೆಯ ನಂತರ, ತೆರಿಗೆ ಪಾವತಿ ಮಾಡಲು ಕೆಳಗಿನ ವಿಧಾನಗಳು ಲಭ್ಯವಿವೆ:

  • ನೆಟ್ ಬ್ಯಾಂಕಿಂಗ್ (ಅಧಿಕೃತ ಬ್ಯಾಂಕ್‌ಗಳನ್ನು ಆಯ್ಕೆಮಾಡಿ)
  • ಆಯ್ದ ಅಧಿಕೃತ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್
  • ಬ್ಯಾಂಕ್ ಕೌಂಟರ್‌ನಲ್ಲಿ ಪಾವತಿಸಬಹುದು (ಆಯ್ದ ಅಧಿಕೃತ ಬ್ಯಾಂಕ್‌ಗಳ ಶಾಖೆಗಳಲ್ಲಿ ಕೌಂಟರ್ ಮೂಲಕ ಪಾವತಿಸಬಹುದು)
  • RTGS / NEFT (ಇಂತಹ ಸೌಲಭ್ಯ ಹೊಂದಿರುವ ಯಾವುದೇ ಬ್ಯಾಂಕ್ ಮೂಲಕ)
  • ಪಾವತಿ ಗೇಟ್‌ವೇ (ಯಾವುದೇ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು UPI ನ ಉಪ-ಪಾವತಿ ವಿಧಾನಗಳನ್ನು ಬಳಸಿ)

ಗಮನಿಸಿ: ಬ್ಯಾಂಕ್‌ನಲ್ಲಿ ತೆರಿಗೆ ಪಾವತಿ ಮಾಡು ವಿಧಾನವನ್ನು ಕಂಪನಿ ತೆರಿಗೆದಾರರು ಅಥವಾ ಆದಾಯ ತೆರಿಗೆ ಕಾಯಿದೆ 2025ರ ಸೆಕ್ಷನ್ 63ರ ಅನ್ವಯ (ಲೆಕ್ಕಪರಿಶೋಧನೆಗೆ ಒಳಪಡುವ ತೆರಿಗೆದಾರರು) ಅನ್ವಯಿಸುವ ವ್ಯಕ್ತಿಗಳು (ಕಂಪನಿ ಹೊರತುಪಡಿಸಿ) ಬಳಸಲು ಸಾಧ್ಯವಿಲ್ಲ. ಇದು ನಿಯಮ 333 ಪ್ರಕಾರ ಅನ್ವಯಿಸುತ್ತದೆ.

8. ತಪ್ಪಾಗಿ ಪಾವತಿಸಿದ ತೆರಿಗೆ ಮೊತ್ತಕ್ಕೆ ಮರುಪಾವತಿ/ಹಿಂತಿರುಗಿಸುವಿಕೆಗಾಗಿ ತೆರಿಗೆದಾರರು ವಿನಂತಿಸಬಹುದೇ?

ತಪ್ಪಾಗಿ ಪಾವತಿಸಿದ ಚಲನ್ ಮೊತ್ತಕ್ಕೆ ಸಂಬಂಧಿಸಿದ ಮರುಪಾವತಿ ಅಥವಾ ಹಿಂತಿರುಗಿಸುವಿಕೆ ವಿನಂತಿಯನ್ನು ಆದಾಯ ತೆರಿಗೆ ಇ-ಸಲ್ಲಿಕೆ ಪೋರ್ಟಲ್ ಮೂಲಕ ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲ.
ತೆರಿಗೆದಾರರಿಗೆ ಸಲಹೆ ನೀಡಿದಂತೆ:

  1. ಸಂಬಂಧಿತ ಮೌಲ್ಯಮಾಪನ ವರ್ಷ/ತೆರಿಗೆ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ನಲ್ಲಿ ಆ ಮೊತ್ತವನ್ನು ತೆರಿಗೆ ಕ್ರೆಡಿಟ್ ಆಗಿ ಕ್ಲೇಮ್ ಮಾಡಿ, ಅಥವಾ
  2. ತಪ್ಪಾಗಿ ಪಾವತಿಸಿದ ತೆರಿಗೆಗೆ ಮರುಪಾವತಿ/ಸರಿಹೊಂದಿಸುವಿಕೆಗಾಗಿ ಸಂಬಂಧಿತ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ (AO) ಗೆ ವಿನಂತಿಯನ್ನು ಸಲ್ಲಿಸುವುದು.

9. ಚಲನ್ (CRN) ರಚಿಸಿದ ನಂತರ ಯಾವುದೇ ಪಾವತಿಯನ್ನು ಪ್ರಾರಂಭಿಸದಿದ್ದರೆ ಏನಾಗುತ್ತದೆ?

ಚಲನ್ ಉಲ್ಲೇಖ ಸಂಖ್ಯೆ (CRN) ಜೊತೆಗೆ ಅಂತಿಮವಾಗಿ ರಚಿಸದ ಹೊರತು ಭಾಗಶಃ ರಚಿಸಲಾದ ಚಲನ್ "ಸೇವ್ಡ್ ಡ್ರಾಫ್ಟ್‌ಗಳು(Saved Drafts)" ಟ್ಯಾಬ್‌ನಲ್ಲಿ ಉಳಿಯುತ್ತದೆ. CRN ರಚನೆಯಾದ ನಂತರ ಅದು “ರಚಿಸಿದ ಚಲನ್ ಗಳು (Generated Challan)” ಟ್ಯಾಬ್‌ಗೆ ಕಳಿಸಲಾಗುತ್ತದೆ ಮತ್ತು CRN ರಚಿಸಿದ ದಿನಾಂಕದಿಂದ 15 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಮಾನ್ಯ ಅವಧಿಯೊಳಗೆ ತೆರಿಗೆದಾರರು CRN ವಿರುದ್ಧ ಪಾವತಿಯನ್ನು ಆರಂಭಿಸಬಹುದು. ನಿಗದಿತ ಸಮಯದಲ್ಲಿ ಪಾವತಿ ಆರಂಭಿಸದಿದ್ದರೆ CRN ಅವಧಿ ಮುಗಿಯುತ್ತದೆ ಮತ್ತು ಪಾವತಿಗಾಗಿ ತೆರಿಗೆದಾರರು ಹೊಸ CRN ಅನ್ನು ರಚಿಸಬೇಕಾಗುತ್ತದೆ.

ಒಂದು ವೇಳೆ, 'ಮುಂಗಡ ತೆರಿಗೆ' ಪಾವತಿಗಾಗಿ ಮಾರ್ಚ್ 16 ರಂದು ಅಥವಾ ನಂತರ ಚಲನ್ (CRN) ಅನ್ನು ರಚಿಸಿದರೆ, ನಂತರ ಮಾನ್ಯತೆ ಅವಧಿಯನ್ನು ಡೀಫಾಲ್ಟ್ ಆಗಿ ಆ ಹಣಕಾಸು ವರ್ಷದ ಮಾರ್ಚ್ 31 ಎಂದು ಹೊಂದಿಸಲಾಗುತ್ತದೆ.

10. ಚಲನ್ ಫಾರ್ಮ್ (CRN) ನಲ್ಲಿ ಮುದ್ರಿಸಲಾದ “ಮಾನ್ಯ ಅವಧಿ” ದಿನಾಂಕದ ಅರ್ಥವೇನು?

“ಮಾನ್ಯ ಅವಧಿ” ದಿನಾಂಕವು ಚಲನ್ ಫಾರ್ಮ್ (CRN) ಪಾವತಿ ಮಾಡಲು ಮಾನ್ಯವಾಗಿರುವ ಕೊನೆಯ ದಿನಾಂಕವನ್ನು ಸೂಚಿಸುತ್ತದೆ. “ಮಾನ್ಯ ಅವಧಿ” ದಿನಾಂಕದ ಅವಧಿ ಮುಗಿದ ನಂತರ, ಬಳಸದಿರುವ ಚಲನ್ ಫಾರ್ಮ್ (CRN) ನ ಸ್ಥಿತಿಯು ಅವಧಿ ಮೀರಿದೆ ಎಂದು ಬದಲಾಗುತ್ತದೆ. ಉದಾಹರಣೆಗೆ, ಒಂದು CRN ಅನ್ನು ಏಪ್ರಿಲ್ 1ರಂದು ರಚಿಸಿದರೆ, ಅದು ಏಪ್ರಿಲ್ 16ರವರೆಗೆ ಮಾನ್ಯವಾಗಿರುತ್ತದೆ. ಆ CRN ವಿರುದ್ಧ ಪಾವತಿಯನ್ನು ಪ್ರಾರಂಭಿಸದಿದ್ದರೆ, ಏಪ್ರಿಲ್ 17ರಂದು ಅದರ ಸ್ಥಿತಿಯು ಅವಧಿ ಮೀರಿದೆ ಎಂದು ಬದಲಾಗುತ್ತದೆ.

ತೆರಿಗೆದಾರರು ‘ಬ್ಯಾಂಕ್ ಕೌಂಟರ್‌ನಲ್ಲಿ ಪಾವತಿ’ ವಿಧಾನದಲ್ಲಿ ‘ಚೆಕ್’ ಅನ್ನು ಬಳಸುವ ಸಂದರ್ಭದಲ್ಲಿ, “ಮಾನ್ಯ ಅವಧಿ” ದಿನಾಂಕದಂದು ಅಥವಾ ಅದಕ್ಕೂ ಮೊದಲು ಅಧಿಕೃತ ಬ್ಯಾಂಕ್‌ಗೆ ಪಾವತಿ ಸಾಧನವನ್ನು ಸಲ್ಲಿಸಿದರೆ, ಚಲನ್‌ನ “ಮಾನ್ಯ ಅವಧಿ” ದಿನಾಂಕವನ್ನು ಹೆಚ್ಚುವರಿ 90 ದಿನಗಳವರೆಗೆ ವಿಸ್ತರಿಸಲಾಗುತ್ತದೆ.

ಒಂದು ವೇಳೆ, 'ಮುಂಗಡ ತೆರಿಗೆ' ಪಾವತಿಗಾಗಿ ಮಾರ್ಚ್ 16 ರಂದು ಅಥವಾ ನಂತರದ ಚಲನ್ ಫಾರ್ಮ್ (CRN) ಅನ್ನು ರಚಿಸಿದರೆ, ನಂತರ ಮಾನ್ಯ ಅವಧಿಯು ಡೀಫಾಲ್ಟ್ ಆಗಿ ಆ ಆರ್ಥಿಕ ವರ್ಷದ ಮಾರ್ಚ್ 31 ಎಂದು ಹೊಂದಿಸಲಾಗುತ್ತದೆ.

11. ತೆರಿಗೆದಾರರು ರಚಿಸಲಾದ ಚಲನ್ (CRN) ಅನ್ನು ಎಲ್ಲಿ ವೀಕ್ಷಿಸಬಹುದು? ಅವಧಿ ಮುಗಿದ ಚಲನ್‌ಗಳನ್ನು (CRN) ತೆರಿಗೆದಾರರು ವೀಕ್ಷಿಸಲು ಸಾಧ್ಯವೇ?

ತೆರಿಗೆದಾರರು ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆದ ನಂತರ, ತೆರಿಗೆಗಳ ಇ ಪಾವತಿ ಪುಟದಲ್ಲಿರುವ “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ರಚಿಸಲಾದ ಚಲನ್‌ಗಳನ್ನು (CRN) ವೀಕ್ಷಿಸಬಹುದು.

ಅವಧಿ ಮುಗಿದ ಚಲನ್ (CRN) ಸಹ ತೆರಿಗೆಗಳ ಇ ಪಾವತಿ ಪುಟದಲ್ಲಿನ ರಚಿಸಿದ ಚಲನ್ ಗಳು ಟ್ಯಾಬ್‌ನಲ್ಲಿ "ಮಾನ್ಯ ಅವಧಿ" ದಿನಾಂಕದಿಂದ 30 ದಿನಗಳವರೆಗೆ ಲಭ್ಯವಿರುತ್ತದೆ.

12. ತೆರಿಗೆದಾರರು ಈಗಾಗಲೇ ರಚಿಸಲಾದ ಚಲನ್ (CRN) ನಲ್ಲಿ ಬದಲಾವಣೆಗಳನ್ನು ಮಾಡಬಹುದೇ?

ಇಲ್ಲ. ಚಲನ್ (CRN) ಒಮ್ಮೆ ರಚನೆಯಾದ ನಂತರ ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ, ಹಿಂದಿನ ಚಲನ್ (CRN) ನಲ್ಲಿರುವ ಮಾಹಿತಿಯನ್ನು ನಕಲಿ ಮಾಡಿ ಹೊಸ ಚಲನ್ ಅನ್ನು ರಚಿಸಬಹುದು.

13. ಚಲನ್ (CRN) ರಚಿಸುವ ಸಂದರ್ಭದಲ್ಲಿ ತೆರಿಗೆದಾರರು ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕೇ?

ಹೌದು, ಚಲನ್ (CRN) ರಚನೆಯ ಸಮಯದಲ್ಲಿ ತೆರಿಗೆದಾರರು ಕಡ್ಡಾಯವಾಗಿ ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕಾಗುತ್ತದೆ.

14. ಚಲನ್ (CRN) ರಚಿಸಿದ ನಂತರ ತೆರಿಗೆದಾರರು ತೆರಿಗೆ ಪಾವತಿಯ ವಿಧಾನವನ್ನು ಬದಲಾಯಿಸಬಹುದೇ?

ಚಲನ್ (CRN) ಒಮ್ಮೆ ರಚನೆಯಾದ ನಂತರ, ತೆರಿಗೆದಾರರು ಪಾವತಿ ವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ.

ತೆರಿಗೆದಾರರು ಬೇರೆ ಯಾವುದೇ ವಿಧಾನದ ಮೂಲಕ ತೆರಿಗೆ ಪಾವತಿಯನ್ನು ಮಾಡಲು ಬಯಸಿದರೆ, ಹೊಸ ಚಲನ್ (CRN) ಅನ್ನು ರಚಿಸಬೇಕು ಮತ್ತು ಹಳೆಯ ಚಲನ್ 15 ದಿನಗಳ ನಂತರ ಅವಧಿ ಮುಗಿಯುತ್ತದೆ.

15. ತೆರಿಗೆ ಪಾವತಿಯು ಯಶಸ್ವಿಯಾಗಿದೆ ಎಂದು ತೆರಿಗೆದಾರರು ಹೇಗೆ ತಿಳಿದುಕೊಳ್ಳಬಹುದು?

ತೆರಿಗೆ ಪಾವತಿ ಪೂರ್ಣಗೊಂಡ ನಂತರ, ಚಲನ್ ರಸೀದಿಯು ರಚನೆಯಾಗುತ್ತದೆ. ಚಲನ್ ರಸೀದಿಯಲ್ಲಿ ಚಲನ್ ಗುರುತಿನ ಸಂಖ್ಯೆ (CIN), BSR ಕೋಡ್, ಪಾವತಿ ದಿನಾಂಕ ಹಾಗೂ ಇತರ ಮಾಹಿತಿಗಳು ಇರುತ್ತವೆ. ಅದೇ ಸಮಯದಲ್ಲಿ, “ಪಾವತಿಯ ಇತಿಹಾಸ” ಟ್ಯಾಬ್‌ನಲ್ಲಿ CRN ನ ಸ್ಥಿತಿಯು “ಪಾವತಿಸಲಾಗಿದೆ” ಎಂದು ನವೀಕರಿಸಲಾಗುತ್ತದೆ. ತೆರಿಗೆದಾರರು ಚಲನ್ ರಸೀದಿಯನ್ನು ಪಾವತಿಯ ಇತಿಹಾಸ ನಿಂದ ಡೌನ್‌ಲೋಡ್ ಮಾಡಿ ವೀಕ್ಷಿಸಬಹುದು.

16. ಚಲನ್‌ನ ಡ್ರಾಫ್ಟ್ ಸ್ಥಿತಿ ಎಂದರೆ ಏನು?

ಚಲನ್‌ಗಳನ್ನು ತೆರಿಗೆಗಳ ಇ-ಪಾವತಿ ಸೌಲಭ್ಯದ “ಉಳಿಸಿದ ಡ್ರಾಫ್ಟ್ ಗಳು” ಟ್ಯಾಬ್ ಅಡಿಯಲ್ಲಿ ಉಳಿಸಲಾಗುತ್ತದೆ. ಉಳಿಸಿದ ಕೊನೆಯ ಡ್ರಾಫ್ಟ್‌ನಿಂದ 15 ದಿನಗಳಲ್ಲಿ CRN ನ ತಿದ್ದುವಿಕೆ ಮತ್ತು ರಚನೆಗಾಗಿ ಇವುಗಳನ್ನು ಹಿಂಪಡೆಯಬಹುದು.

17. ಚಲನ್ (CRN) ನ “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಸ್ಥಿತಿ “ಪಾವತಿಯನ್ನು ಪ್ರಾರಂಭಿಸಲಾಗಿಲ್ಲ” ಎಂಬುದರ ಅರ್ಥವೇನು?

17. ಚಲನ್ (CRN) ನ “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಸ್ಥಿತಿ “ಪಾವತಿಯನ್ನು ಪ್ರಾರಂಭಿಸಲಾಗಿಲ್ಲ” ಎಂಬುದರ ಅರ್ಥವೇನು?

“ಪಾವತಿಯನ್ನು ಪ್ರಾರಂಭಿಸಲಾಗಿಲ್ಲ” ಎಂಬ ಸ್ಥಿತಿಯು ಮಾನ್ಯವಾದ ಚಲನ್ (CRN) ರಚನೆಯಾಗಿದ್ದರೂ, ಅದರ ಪಾವತಿಯನ್ನು ಇನ್ನೂ ಪ್ರಾರಂಭಿಸಲಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

  • ಇ-ಸಲ್ಲಿಕೆ ಪೋರ್ಟಲ್ ಮೂಲಕ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಪಾವತಿ ಗೇಟ್‌ವೇ ವಿಧಾನಗಳನ್ನು ಆಯ್ಕೆಮಾಡಿದ ಇ-ಪಾವತಿಗಳಿಗೆ, ತೆರಿಗೆದಾರರು ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸುವವರೆಗೆ ಈ ಸ್ಥಿತಿಯು ಪ್ರದರ್ಶಿಸಲಾಗುತ್ತದೆ.
  • ಪಾವತಿ ಸಾಧನವನ್ನು ಬ್ಯಾಂಕ್ ಶಾಖೆಯ ಮುಂದೆ ತೆರಿಗೆದಾರರು ಪ್ರಸ್ತುತಪಡಿಸುವವರೆಗೂ ಈ ಸ್ಥಿತಿಯನ್ನು ಬ್ಯಾಂಕ್ ಕೌಂಟರ್ ವಿಧಾನದಲ್ಲಿ ಪಾವತಿಸಲು ಪ್ರದರ್ಶಿಸಲಾಗುತ್ತದೆ.
  • RTGS/NEFT ವಿಧಾನದಲ್ಲಿ, ತೆರಿಗೆ ಹಣವು ಭಾರತೀಯ ರಿಸರ್ವ್ ಬ್ಯಾಂಕ್ (ಫಲಾನುಭವಿ ಬ್ಯಾಂಕ್) ಗೆ ಸ್ವೀಕೃತಿಯಾಗುವವರೆಗೆ ಈ ಸ್ಥಿತಿಯು ಪ್ರದರ್ಶಿಸಲಾಗುತ್ತದೆ.

18. “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “ಪ್ರಾರಂಭಿಸಿದೆ” ಸ್ಥಿತಿ ಎಂದರೆ ಏನು?

ತೆರಿಗೆದಾರರು ಇ-ಸಲ್ಲಿಕೆ ಪೋರ್ಟಲ್ ಮೂಲಕ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಪಾವತಿ ಗೇಟ್‌ವೇ ವಿಧಾನಗಳ ಮೂಲಕ CRN ಗೆ ಸಂಬಂಧಿಸಿದ ಪಾವತಿಯನ್ನು ಪ್ರಾರಂಭಿಸಿದಾಗ “ಪ್ರಾರಂಭಿಸಿದೆ” ಎಂಬ ಸ್ಥಿತಿಯು ಪ್ರದರ್ಶಿಸಲಾಗುತ್ತದೆ. ಒಮ್ಮೆ ಪಾವತಿಯನ್ನು ಪ್ರಾರಂಭಿಸಿದ ನಂತರ, ತೆರಿಗೆದಾರರು ಅದರ ಸ್ಥಿತಿಯನ್ನು ಲೆಕ್ಕಿಸದೆ ಅದೇ CRN ವಿರುದ್ಧ ಪಾವತಿಯನ್ನು ಮರುಪ್ರಾರಂಭಿಸಲು ಸಾಧ್ಯವಿಲ್ಲ. ಅಗತ್ಯವಿದ್ದಲ್ಲಿ, ತೆರಿಗೆದಾರರು ಹೊಸ CRN ರಚಿಸಲು “ನಕಲು ಮಾಡು” ಸೌಲಭ್ಯವನ್ನು ಬಳಸಬಹುದು.

19. “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “ಬ್ಯಾಂಕ್‌ನಿಂದ ಪ್ರತಿಕ್ರಿಯೆ ಬಂದಿಲ್ಲ” ಸ್ಥಿತಿ ಎಂದರೆ ಏನು?

“ಬ್ಯಾಂಕ್‌ನಿಂದ ಪ್ರತಿಕ್ರಿಯೆ ಬಂದಿಲ್ಲ” ಎಂಬ ಸ್ಥಿತಿಯು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಪಾವತಿ ಗೇಟ್‌ವೇ ವಿಧಾನಗಳ ಮೂಲಕ ಪಾವತಿಯನ್ನು ಪ್ರಾರಂಭಿಸಿದ ನಂತರ, ಪಾವತಿ ಪ್ರಾರಂಭಿಸಿದ ಸಮಯದಿಂದ 30 ನಿಮಿಷಗಳೊಳಗೆ ಪಾವತಿದಾರರ ಬ್ಯಾಂಕ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲದಿದ್ದರೆ ಪ್ರದರ್ಶಿಸಲಾಗುತ್ತದೆ.

ಬ್ಯಾಂಕ್‌ನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೂ ಪಾವತಿದಾರರ ಖಾತೆಯಿಂದ ಮೊತ್ತ ಕಡಿತಗೊಂಡಿದ್ದರೆ, ತೆರಿಗೆದಾರರು ಒಂದು ದಿನ ಕಾಯಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಇ-ಸಲ್ಲಿಕೆ ಪೋರ್ಟಲ್ ಬ್ಯಾಂಕ್‌ನೊಂದಿಗೆ CRN ಅನ್ನು ಹೊಂದಾಣಿಕೆ ಮಾಡಿ, ಅದರ ಸ್ಥಿತಿಯನ್ನು ಅನುಗುಣವಾಗಿ ನವೀಕರಿಸುತ್ತದೆ. ಒಂದು ದಿನದ ನಂತರವೂ CRN ನ ಸ್ಥಿತಿ ನವೀಕರಿಸದಿದ್ದರೆ, ತೆರಿಗೆದಾರರು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಲು ಸಲಹೆ ನೀಡಲಾಗುತ್ತದೆ.

20. “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “ಪಾವತಿ ವಿಫಲವಾಗಿದೆ” ಸ್ಥಿತಿ ಎಂದರೆ ಏನು?

“ಪಾವತಿ ವಿಫಲವಾಗಿದೆ” ಎಂಬ ಸ್ಥಿತಿಯು, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಪಾವತಿ ಗೇಟ್‌ವೇ ವಿಧಾನಗಳ ಮೂಲಕ ಪಾವತಿಯನ್ನು ಪ್ರಾರಂಭಿಸಿದಾಗ, ಪಾವತಿದಾರರ ಬ್ಯಾಂಕ್‌ನಿಂದ ಪಾವತಿ ವಿಫಲವಾಗಿದೆ ಎಂಬ ಮಾಹಿತಿ ಇ-ಸಲ್ಲಿಕೆ ಪೋರ್ಟಲ್‌ಗೆ ಬಂದಾಗ ಪ್ರದರ್ಶಿಸಲಾಗುತ್ತದೆ.

CRN ನ ಪ್ರದರ್ಶಿತ ಸ್ಥಿತಿಯು “ಪಾವತಿ ವಿಫಲವಾಗಿದೆ” ಆಗಿದ್ದು, ತೆರಿಗೆದಾರರ ಖಾತೆಯಿಂದ ಮೊತ್ತ ಕಡಿತಗೊಂಡಿದ್ದರೆ, ತೆರಿಗೆದಾರರು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಲು ಸಲಹೆ ನೀಡಲಾಗುತ್ತದೆ.

21. “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “ಬ್ಯಾಂಕ್ ಅನುಮೋದನೆಗಾಗಿ ನಿರೀಕ್ಷಿಸಲಾಗುತ್ತಿದೆ” ಸ್ಥಿತಿ ಎಂದರೆ ಏನು?

ಬ್ಯಾಂಕ್‌ ಕೌಂಟರ್ ನಲ್ಲಿ ಪಾವತಿಸಿ ವಿಧಾನದ ಮೂಲಕ ಪಾವತಿಯನ್ನು ಪ್ರಾರಂಭಿಸಿ, ತೆರಿಗೆದಾರರು ಪಾವತಿ ಸಾಧನವನ್ನು ಬ್ಯಾಂಕ್ ಕೌಂಟರ್‌ನಲ್ಲಿ ಸಲ್ಲಿಸಿದಾಗ “ಬ್ಯಾಂಕ್ ಅನುಮೋದನೆಗಾಗಿ ನಿರೀಕ್ಷಿಸಲಾಗುತ್ತಿದೆ” ಎಂಬ ಸ್ಥಿತಿಯು ಪ್ರದರ್ಶಿಸಲಾಗುತ್ತದೆ. ಪಾವತಿ ಸಾಧನದ ಹಣ ವಸೂಲಾತಿಯು ಯಶಸ್ವಿಯಾಗಿದೆ ಎಂದು ಬ್ಯಾಂಕ್ ದೃಢೀಕರಿಸಿದ ನಂತರ, ಈ ಸ್ಥಿತಿಯು “ಪಾವತಿಸಲಾಗಿದೆ” ಎಂದು ನವೀಕರಿಸಲಾಗುತ್ತದೆ.

22. “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “DD-MMM-YYYY ರಂದು ಪಾವತಿ ನಿಗದಿಪಡಿಸಲಾಗಿದೆ” ಸ್ಥಿತಿ ಎಂದರೆ ಏನು?

ನೆಟ್ ಬ್ಯಾಂಕಿಂಗ್ ವಿಧಾನದ ಅಡಿಯಲ್ಲಿ ಪೂರ್ವ-ಅನುಮೋದಿತ ಡೆಬಿಟ್ ವ್ಯವಹಾರಗಳಿಗೆ ಈ ಸ್ಥಿತಿಯು ಪ್ರದರ್ಶಿಸಲಾಗುತ್ತದೆ. ಇದು ತೆರಿಗೆದಾರರು ಆಯ್ಕೆಮಾಡಿದ ನಿಗದಿತ ಪಾವತಿ ದಿನಾಂಕವನ್ನು ತೋರಿಸುತ್ತದೆ. ಪಾವತಿ ಪೂರ್ಣಗೊಂಡಿರುವುದರ ಆಧಾರದ ಮೇಲೆ ನಿಗದಿತ ದಿನಾಂಕದಂದು ಈ ಸ್ಥಿತಿಯನ್ನು ನವೀಕರಿಸಲಾಗುತ್ತದೆ.

23. “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “ಬ್ಯಾಂಕ್‌ನಿಂದ ತಪ್ಪಾದ ವಿವರಗಳು” ಸ್ಥಿತಿ ಎಂದರೆ ಏನು?

ಯಾವುದೇ ಪಾವತಿ ವಿಧಾನದಲ್ಲಿ, ಬ್ಯಾಂಕ್ ಇ-ಸಲ್ಲಿಕೆ ಪೋರ್ಟಲ್‌ಗೆ ಒದಗಿಸಿದ CIN ವಿವರಗಳು (ಪಾವತಿ ದೃಢೀಕರಣದ ವಿವರಗಳು) ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿರುವ ವಿವರಗಳೊಂದಿಗೆ ಹೊಂದಿಕೆಯಾಗದಿದ್ದರೆ ಈ ಸ್ಥಿತಿಯು ಪ್ರದರ್ಶಿಸಲಾಗುತ್ತದೆ. ಹೊಂದಾಣಿಕೆ ಪ್ರಕ್ರಿಯೆಯ ನಂತರ ಇ-ಸಲ್ಲಿಕೆ ಪೋರ್ಟಲ್‌ಗೆ ಸರಿಯಾದ ವಿವರಗಳು ಬಂದಾಗ ಈ ಸ್ಥಿತಿಯನ್ನು ನವೀಕರಿಸಲಾಗುತ್ತದೆ.

24. “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “ಚೆಕ್ / ಡಿಡಿ ಅಮಾನ್ಯಗೊಂಡಿದೆ” ಸ್ಥಿತಿ ಎಂದರೆ ಏನು?

ಬ್ಯಾಂಕ್‌ ಕೌಂಟರ್ ನಲ್ಲಿ ಪಾವತಿಸಿ ವಿಧಾನದ ಮೂಲಕ ಪಾವತಿ ಮಾಡಲು ತೆರಿಗೆದಾರರು ಸಲ್ಲಿಸಿದ ಡಿಮ್ಯಾಂಡ್ ಡ್ರಾಫ್ಟ್/ಚೆಕ್ ಅಮಾನ್ಯಗೊಂಡಿದ್ದರೆ ಈ ಸ್ಥಿತಿಯು ಪ್ರದರ್ಶಿಸಲಾಗುತ್ತದೆ.

25. “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “ ಅವಧಿ ಮೀರಿದೆ” ಸ್ಥಿತಿ ಎಂದರೆ ಏನು?

ಚಲನ್ (CRN) ರಚನೆಯಾದ ನಂತರ, ಅದು ರಚನೆಯಾದ ದಿನಾಂಕದಿಂದ 15 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಮಾನ್ಯತೆಯ ಅವಧಿ ಮುಗಿದ ನಂತರ ಬಳಸದ CRN ಗಳ ಸ್ಥಿತಿಯು “ಅವಧಿ ಮೀರಿದೆ” ಎಂದು ಬದಲಾಗುತ್ತದೆ. ತೆರಿಗೆದಾರರು ಈ ಮಾನ್ಯತೆಯ ಅವಧಿಯೊಳಗೆ CRN ಗೆ ಸಂಬಂಧಿಸಿದ ಪಾವತಿಯನ್ನು ಪ್ರಾರಂಭಿಸಬಹುದು.

ಬ್ಯಾಂಕ್‌ ಕೌಂಟರ್ ನಲ್ಲಿ ಪಾವತಿಸಿ ವಿಧಾನವನ್ನು ಬಳಸುವ ಸಂದರ್ಭದಲ್ಲಿ, ತೆರಿಗೆದಾರರು CRN ಅವಧಿ ಮುಗಿಯುವ ಮೊದಲು ಅಧಿಕೃತ ಬ್ಯಾಂಕ್‌ಗೆ ಪಾವತಿ ಸಾಧನವನ್ನು ಸಲ್ಲಿಸಿದರೆ, ಚಲನ್‌ನ ಮಾನ್ಯತೆಯ ಅವಧಿಯನ್ನು ಹೆಚ್ಚುವರಿಯಾಗಿ 90 ದಿನಗಳವರೆಗೆ ವಿಸ್ತರಿಸಲಾಗುತ್ತದೆ.

26. “ರಚಿಸಿದ ಚಲನ್ ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “ವಹಿವಾಟು ಸ್ಥಗಿತಗೊಂಡಿದೆ” ಸ್ಥಿತಿ ಎಂದರೆ ಏನು?

ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಪಾವತಿ ಗೇಟ್‌ವೇ ವಿಧಾನಗಳ ಮೂಲಕ ಪ್ರಾರಂಭಿಸಲಾದ ವ್ಯವಹಾರವನ್ನು ತೆರಿಗೆದಾರರು ರದ್ದುಗೊಳಿಸಿದರೆ ಈ ಸ್ಥಿತಿಯು ಪ್ರದರ್ಶಿತವಾಗುತ್ತದೆ.

27. “ರಚಿಸಲಾದ ಚಲನ್‌ಗಳು” ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುವ ಚಲನ್ (CRN) ನ “ಬ್ಯಾಂಕ್ ದೃಢೀಕರಣಕ್ಕಾಗಿ ನಿರೀಕ್ಷಿಸಲಾಗುತ್ತಿದೆ” ಸ್ಥಿತಿ ಎಂದರೆ ಏನು?

ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಪಾವತಿ ಗೇಟ್‌ವೇ ವಿಧಾನಗಳ ಮೂಲಕ ಮಾಡಿದ ಪಾವತಿಗೆ ಸಂಬಂಧಿಸಿ, ಪಾವತಿದಾರರ ಬ್ಯಾಂಕ್‌ನಿಂದ ಪಾವತಿ ದೃಢೀಕರಣ ಬಾಕಿ ಇದ್ದಾಗ ಈ ಸ್ಥಿತಿಯು ಪ್ರದರ್ಶಿತವಾಗುತ್ತದೆ.

28. ಚಲನ್ (CRN) ನ “ಪಾವತಿಸಲಾಗಿದೆ” ಸ್ಥಿತಿ ಎಂದರೆ ಏನು?

ತೆರಿಗೆದಾರರಿಂದ ಪಾವತಿ ಯಶಸ್ವಿಯಾಗಿ ಪೂರ್ಣಗೊಂಡು, ಬ್ಯಾಂಕ್‌ನಿಂದ ದೃಢೀಕರಣ ಸ್ವೀಕರಿಸಿದಾಗ ಈ ಸ್ಥಿತಿಯು ಪ್ರದರ್ಶಿತವಾಗುತ್ತದೆ.

29. ಇ-ಸಲ್ಲಿಕೆ ಪೋರ್ಟಲ್ ಮೂಲಕ ತೆರಿಗೆ ಪಾವತಿಗಾಗಿ ಬಳಸುವ ನೆಟ್ ಬ್ಯಾಂಕಿಂಗ್ ವಿಧಾನ ಎಂದರೆ ಏನು?

ಈ ವಿಧಾನದಲ್ಲಿ, ಅಧಿಕೃತ ಬ್ಯಾಂಕ್‌ಗಳ ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಪಾವತಿಯನ್ನು ಮಾಡಬಹುದು. ತೆರಿಗೆದಾರರು ಅಧಿಕೃತ ಬ್ಯಾಂಕ್‌ಗಳಲ್ಲಿ ಯಾವುದೇ ಬ್ಯಾಂಕ್ ಖಾತೆ ಹೊಂದಿದ್ದರೆ, ಈ ವಿಧಾನವನ್ನು ತೆರಿಗೆ ಪಾವತಿಗಾಗಿ ಬಳಸಬಹುದು. ಈ ವಿಧಾನದಲ್ಲಿ ತೆರಿಗೆ ಪಾವತಿಗೆ ಯಾವುದೇ ವ್ಯವಹಾರ ಶುಲ್ಕ ಅನ್ವಯಿಸುವುದಿಲ್ಲ.

30. ನೆಟ್ ಬ್ಯಾಂಕಿಂಗ್ ವಿಧಾನದಲ್ಲಿ ತೆರಿಗೆದಾರರು ಮುಂದಿನ ದಿನಾಂಕಕ್ಕೆ ಪಾವತಿಯನ್ನು ನಿಗದಿಪಡಿಸಬಹುದೇ?

ಬ್ಯಾಂಕ್ ಈ ಸೌಲಭ್ಯವನ್ನು ಒದಗಿಸಿದರೆ, ತೆರಿಗೆದಾರರು ನೆಟ್ ಬ್ಯಾಂಕಿಂಗ್ ಮೂಲಕ ತಮ್ಮ ಬ್ಯಾಂಕ್ ಖಾತೆಯಿಂದ ತೆರಿಗೆ ಪಾವತಿಯನ್ನು ಡೆಬಿಟ್ ಆಗುವಂತೆ ನಿಗದಿಪಡಿಸಬಹುದು. ಆದರೆ, ನಿಗದಿಪಡಿಸಿದ ಪಾವತಿ ದಿನಾಂಕವು ಚಲನ್ (CRN) ನಲ್ಲಿ ಉಲ್ಲೇಖಿಸಿರುವ “ಮಾನ್ಯ ಅವಧಿ” ದಿನಾಂಕದೊಳಗೆ ಅಥವಾ ಅದಕ್ಕಿಂತ ಮುಂಚೆಯೇ ಇರಬೇಕು. ಒಂದು ವೇಳೆ ನೆಟ್ ಬ್ಯಾಂಕಿಂಗ್ ವಿಧಾನವನ್ನು ಬಳಸಿಕೊಂಡು ನಂತರದ ದಿನಾಂಕಕ್ಕೆ ಪಾವತಿಯನ್ನು ನಿಗದಿಪಡಿಸಲು ತೆರಿಗೆದಾರರು ಆಯ್ಕೆಮಾಡಿದರೆ, ತೆರಿಗೆ ಪಾವತಿಯ ದಿನಾಂಕದಂದು ಆಯ್ಕೆಮಾಡಿದ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರುವುದನ್ನು ಅವನು/ಅವಳು ಖಚಿತಪಡಿಸಿಕೊಳ್ಳಬೇಕು.

31. ತೆರಿಗೆದಾರರು ಈ ವಿಧಾನದಲ್ಲಿ ಅವನ/ಅವಳ ಬ್ಯಾಂಕ್ ಅನ್ನು ನೋಡಲು ಸಾಧ್ಯವಾಗದಿದ್ದರೆ ಏನು ಮಾಡಬೇಕು?

ಈ ವಿಧಾನದಲ್ಲಿ, ಪಾವತಿಯನ್ನು ಕೇವಲ ಅಧಿಕೃತ ಬ್ಯಾಂಕ್‌ಗಳ ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಮಾತ್ರ ಮಾಡಬಹುದು. ತೆರಿಗೆದಾರರು ಇತರ ಯಾವುದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ, ಅವರು NEFT/RTGS ವಿಧಾನ ಅಥವಾ ಪಾವತಿ ಗೇಟ್‌ವೇ ವಿಧಾನದಲ್ಲಿ ನೆಟ್ ಬ್ಯಾಂಕಿಂಗ್ ಆಯ್ಕೆಯನ್ನು ಬಳಸಬಹುದು. NEFT/RTGS ಅಥವಾ ಪಾವತಿ ಗೇಟ್‌ವೇ ವಿಧಾನದಲ್ಲಿ ಬ್ಯಾಂಕ್ ಶುಲ್ಕಗಳು ಅನ್ವಯಿಸಬಹುದು.

32. ಪಾವತಿ ಪ್ರಕ್ರಿಯೆಯ ಸಮಯದಲ್ಲಿ ತೆರಿಗೆದಾರರ ಖಾತೆಯಿಂದ ಹಣ ಕಡಿತಗೊಂಡಿದ್ದರೂ CRN ನ ಸ್ಥಿತಿ “ಪಾವತಿಸಲಾಗಿದೆ” ಆಗಿ ಬದಲಾಗಿಲ್ಲ ಆಗ ತೆರಿಗೆದಾರರು ಏನು ಮಾಡಬೇಕು?

ತೆರಿಗೆದಾರರು 30 ನಿಮಿಷಗಳ ನಂತರ CRN ಸ್ಥಿತಿಯನ್ನು ಮರು ಪರಿಶೀಲಿಸಬಹುದು, ಏಕೆಂದರೆ ಬ್ಯಾಂಕ್‌ನಿಂದ ಇ-ಸಲ್ಲಿಕೆ ಪೋರ್ಟಲ್‌ಗೆ ಪ್ರತಿಕ್ರಿಯೆ ಬಂದ ನಂತರ ಸ್ಥಿತಿ ನವೀಕರಿಸಲಾಗುತ್ತದೆ.
ಒಂದು ವೇಳೆ ನಿಗದಿತ ಸಮಯದಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದಲ್ಲಿ, ತೆರಿಗೆದಾರರು ಒಂದು ದಿನ ಕಾಯಲು ಸಲಹೆ ನೀಡಲಾಗುತ್ತದೆ. ಅದರ ನಂತರವೂ CRN ಸ್ಥಿತಿ ನವೀಕರಿಸದಿದ್ದರೆ, ತೆರಿಗೆದಾರರು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬೇಕು.

33. ಡೆಬಿಟ್ ಕಾರ್ಡ್ ವಿಧಾನ ಎಂದರೆ ಏನು?

ಈ ವಿಧಾನದಲ್ಲಿ, ಆಯ್ದ ಅಧಿಕೃತ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬಹುದು, ಅವು ತಮ್ಮ ಸ್ವಂತ ಡೆಬಿಟ್ ಕಾರ್ಡ್‌ಗಳ ಮೂಲಕ ಸಂಗ್ರಹಣಾ ಸೌಲಭ್ಯ ಒದಗಿಸುತ್ತವೆ. ಈ ವಿಧಾನದಲ್ಲಿ ತೆರಿಗೆ ಪಾವತಿಗೆ ಯಾವುದೇ ವ್ಯವಹಾರ ಶುಲ್ಕ ವಿಧಿಸಲಾಗುವುದಿಲ್ಲ. ಇತರ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್ ಬಳಸಲು ದಯವಿಟ್ಟು “ಪಾವತಿ ಗೇಟ್‌ವೇ” ವಿಧಾನವನ್ನು ಬಳಸಿ. ಆದರೆ, ಪಾವತಿ ಗೇಟ್‌ವೇ ವಿಧಾನದಲ್ಲಿ ಹೆಚ್ಚುವರಿ ಗೇಟ್‌ವೇ ಶುಲ್ಕಗಳು ಅನ್ವಯಿಸಬಹುದು.

34. ಈ ವಿಧಾನದಲ್ಲಿ ಪಾವತಿ ಮಾಡಲು ಆಯ್ದ ಎಲ್ಲಾ ಅಧಿಕೃತ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸಬಹುದೇ?

ಈ ವಿಧಾನದಲ್ಲಿ, ತಮ್ಮ ಸ್ವಂತ ಡೆಬಿಟ್ ಕಾರ್ಡ್‌ಗಳ ಮೂಲಕ ಸಂಗ್ರಹಣಾ ಸೌಲಭ್ಯ ಒದಗಿಸುವ ಆಯ್ದ ಅಧಿಕೃತ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಪಾವತಿ ಮಾಡಬಹುದು. ಇತರ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್ ಬಳಸಲು ದಯವಿಟ್ಟು “ಪಾವತಿ ಗೇಟ್‌ವೇ” ವಿಧಾನವನ್ನು ಬಳಸಿ.

35. ತೆರಿಗೆ ಪಾವತಿಯನ್ನು ಆಫ್‌ಲೈನ್ ವಿಧಾನದಲ್ಲಿ ಮಾಡಬಹುದೇ?

ಹೌದು, ತೆರಿಗೆ ಪಾವತಿಯನ್ನು ಬ್ಯಾಂಕ್‌ನಲ್ಲಿ ಪಾವತಿಸಿ (ಕೌಂಟರ್ ಮೂಲಕ) ಹಾಗೂ RTGS/NEFT ವಿಧಾನದಲ್ಲಿ ಬ್ಯಾಂಕ್ ಕೌಂಟರ್‌ನಲ್ಲಿ ಮಾಡಬಹುದು. ಆದರೆ, ಚಲನ್ (CRN) ಅನ್ನು ಕಡ್ಡಾಯವಾಗಿ ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೌಲಭ್ಯದ ಮೂಲಕ ಮಾತ್ರ ರಚಿಸಬೇಕು. ಆಫ್‌ಲೈನ್ ವಿಧಾನದಲ್ಲಿ ತೆರಿಗೆ ಪಾವತಿಗಾಗಿ ಕೈಯಾರೆ ಭರ್ತಿ ಮಾಡಿದ ಚಲನ್ ಫಾರ್ಮ್‌ಗಳು (CRN) ಮಾನ್ಯವಾಗುವುದಿಲ್ಲ.

ಸೂಚನೆ: ತೆರಿಗೆ ಪಾವತಿಯ “ಬ್ಯಾಂಕ್‌ನಲ್ಲಿ ಪಾವತಿಸಿ” ವಿಧಾನವನ್ನು ಕಂಪನಿಯಾದ ತೆರಿಗೆದಾರರು ಅಥವಾ ಆದಾಯ ತೆರಿಗೆ ಕಾಯಿದೆ 2025ರ ಸೆಕ್ಷನ್ 63 (ಖಾತೆಗಳ ಲೆಕ್ಕಪರಿಶೋಧನೆ ಮಾಡಿಸಬೇಕಾದ ತೆರಿಗೆದಾರರು) ಅನ್ವಯವಾಗುವ ವ್ಯಕ್ತಿಗಳು (ಕಂಪನಿ ಹೊರತುಪಡಿಸಿ) ಬಳಸಲು ಸಾಧ್ಯವಿಲ್ಲ. ಇದು ನಿಯಮ 333ರ ಪ್ರಕಾರ ಅನ್ವಯಿಸುತ್ತದೆ.

36. ತೆರಿಗೆದಾರರು ಯಾವುದೇ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ಓವರ್ ದಿ ಕೌಂಟರ್ (OTC) ಮೂಲಕ ಪಾವತಿ ಮಾಡಬಹುದೇ?

ಓವರ್ ದಿ ಕೌಂಟರ್ (OTC) ವಿಧಾನದಲ್ಲಿ, ತೆರಿಗೆದಾರರು ಚಲನ್ (CRN) ರಚನೆಯ ಸಮಯದಲ್ಲಿ ಆಯ್ಕೆಮಾಡಿದ ಅಧಿಕೃತ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ಆಫ್‌ಲೈನ್ ವಿಧಾನದಲ್ಲಿ (ಚೆಕ್ / ಡಿಮ್ಯಾಂಡ್ ಡ್ರಾಫ್ಟ್ / ನಗದು) ತೆರಿಗೆ ಪಾವತಿ ಮಾಡಬಹುದು. ಈ ವಿಧಾನದಲ್ಲಿ ತೆರಿಗೆ ಪಾವತಿಗೆ ಯಾವುದೇ ವ್ಯವಹಾರ ಶುಲ್ಕ/ಫೀ ವಿಧಿಸಲಾಗುವುದಿಲ್ಲ.

ಅಧಿಕೃತ ಬ್ಯಾಂಕ್‌ಗಳ ಹೊರತು ಇತರ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ, ತೆರಿಗೆದಾರರು RTGS/NEFT ವಿಧಾನದಲ್ಲಿ ಪಾವತಿ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

37. ತೆರಿಗೆದಾರರು ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ನೇರ ತೆರಿಗೆಗಳನ್ನು ಪಾವತಿಸಬಹುದೇ? ಈ ಸಾಧನಗಳ ಮೂಲಕ ಪಾವತಿಗೆ ಅನುಮತಿಸಲಾದ ಮೊತ್ತಕ್ಕೆ ಯಾವುದೇ ಮಿತಿಯಿದೆಯೇ?

ಹೌದು, ತೆರಿಗೆದಾರರು “ಬ್ಯಾಂಕ್‌ನಲ್ಲಿ ಪಾವತಿಸಿ” ವಿಧಾನವನ್ನು ಬಳಸಿ ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿ ಮಾಡಬಹುದು. ಆದಾಯ ತೆರಿಗೆ ಇಲಾಖೆ ಡಿಮ್ಯಾಂಡ್ ಡ್ರಾಫ್ಟ್/ಚೆಕ್ ಮೂಲಕ ಮಾಡುವ ತೆರಿಗೆ ಪಾವತಿಗೆ ಯಾವುದೇ ಮೊತ್ತದ ಮಿತಿಯನ್ನು ವಿಧಿಸುವುದಿಲ್ಲ. ಆದರೆ, ಸಂಬಂಧಿತ ಅಧಿಕೃತ ಬ್ಯಾಂಕ್‌ನ ಆಂತರಿಕ ನೀತಿಯ ಪ್ರಕಾರ ಈ ಉಪವಿಧಾನಗಳ ಮೂಲಕ ಪಾವತಿಗೆ ಮಿತಿ ಇರಬಹುದು.

38. ತೆರಿಗೆದಾರರು ನಗದು ಮೂಲಕ ಪಾವತಿ ಮಾಡಬಹುದೇ? ನಗದು ವ್ಯವಹಾರಕ್ಕೆ ಯಾವುದೇ ಮಿತಿ ಇದೆಯೇ?

ಹೌದು, ತೆರಿಗೆದಾರರು ಓವರ್ ದಿ ಕೌಂಟರ್ (OTC) ವಿಧಾನವನ್ನು ಬಳಸಿ ನಗದು ಮೂಲಕ ಪಾವತಿ ಮಾಡಬಹುದು. ಆದರೆ, ನಗದು ಮೂಲಕ ತೆರಿಗೆ ಪಾವತಿಯನ್ನು ಪ್ರತಿ ಚಾಲನ್ ಫಾರ್ಮ್ (CRN) ಗೆ ಗರಿಷ್ಠ ರೂ. 10,000 ವರೆಗೆ ಮಾತ್ರ ಮಿತಿಗೊಳಿಸಲಾಗಿದೆ.

39. ಓವರ್ ದಿ ಕೌಂಟರ್ (OTC) ಮೂಲಕ ತೆರಿಗೆ ಪಾವತಿ ಮಾಡುವ ವಿಧಾನ ಯಾವುದು?

ಓವರ್ ದಿ ಕೌಂಟರ್ (OTC) ವಿಧಾನದಲ್ಲಿ ತೆರಿಗೆ ಪಾವತಿ ಮಾಡಲು, ಚಲನ್ ಫಾರ್ಮ್ (CRN) ರಚಿಸುವ ಸಂದರ್ಭದಲ್ಲಿ ತೆರಿಗೆದಾರರು ಪಾವತಿ ಮಾಡಲು ಉದ್ದೇಶಿಸಿರುವ ಅಧಿಕೃತ ಬ್ಯಾಂಕ್‌ಗಳ ಪಟ್ಟಿಯಿಂದ ಒಂದು ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು. ಚಲನ್ ಫಾರ್ಮ್ (CRN) ರಚನೆಯಾದ ನಂತರ, ತೆರಿಗೆದಾರರು ಆಯ್ಕೆ ಮಾಡಿದ ಅಧಿಕೃತ ಬ್ಯಾಂಕ್‌ನ ಶಾಖೆಗೆ ಚಲನ್ ಫಾರ್ಮ್ (CRN) ನ ಒಂದು ಮುದ್ರಿತ ಮತ್ತು ಸಹಿ ಮಾಡಿದ ಪ್ರತಿಯನ್ನು ಹಾಗೂ ಪಾವತಿ ಸಾಧನವನ್ನು (ಚೆಕ್/ಡಿಮ್ಯಾಂಡ್ ಡ್ರಾಫ್ಟ್/ನಗದು) ಒಟ್ಟಿಗೆ ಕೊಂಡೊಯ್ಯಬೇಕು.

40. ಓವರ್ ದಿ ಕೌಂಟರ್ (OTC) - ಬ್ಯಾಂಕ್‌ನಲ್ಲಿ ಪಾವತಿಸಿ ವಿಧಾನದಲ್ಲಿ ರಚಿಸಲಾದ ಚಲನ್ ಫಾರ್ಮ್ (CRN) ನ ಮಾನ್ಯತಾ ಅವಧಿ ಎಷ್ಟು?

ಚಲನ್ ಫಾರ್ಮ್ (CRN) ಅನ್ನು ರಚಿಸಿದ ದಿನಾಂಕದಿಂದ 15 ದಿನಗಳವರೆಗೆ ಮಾನ್ಯವಾಗಿರುತ್ತದೆ. ಅಂದರೆ, CRN ಅನ್ನು 1ನೇ ಏಪ್ರಿಲ್ ರಂದು ರಚಿಸಿದರೆ ಅದು 16ನೇ ಏಪ್ರಿಲ್ ವರೆಗೆ ಮಾನ್ಯವಾಗಿರುತ್ತದೆ. ಈ ಅವಧಿಯೊಳಗೆ ತೆರಿಗೆದಾರರು ಆಯ್ಕೆ ಮಾಡಿದ ಅಧಿಕೃತ ಬ್ಯಾಂಕ್ ಶಾಖೆಯಲ್ಲಿ ಪಾವತಿ ಸಾಧನವನ್ನು ಸಲ್ಲಿಸಬೇಕು. ತೆರಿಗೆದಾರರು ಚಲನ್ ಫಾರ್ಮ್ (CRN) ನಲ್ಲಿ ಸೂಚಿಸಿರುವ ಮಾನ್ಯತಾ ಅವಧಿಯೊಳಗೆ ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಅನ್ನು ಅಧಿಕೃತ ಬ್ಯಾಂಕ್‌ಗೆ ಸಲ್ಲಿಸಿದರೆ, ಆ ಚಾಲನ್‌ನ ಮಾನ್ಯತಾ ಅವಧಿ ಹೆಚ್ಚುವರಿ 90 ದಿನಗಳವರೆಗೆ ವಿಸ್ತರಿಸಲಾಗುತ್ತದೆ.

41. ಓವರ್ ದಿ ಕೌಂಟರ್ (OTC) ವಿಧಾನದಲ್ಲಿ ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿ ಮಾಡಿದರೆ, ತೆರಿಗೆ ಪಾವತಿಯ ದಿನಾಂಕವಾಗಿ ಯಾವ ದಿನಾಂಕವನ್ನು ಪರಿಗಣಿಸಲಾಗುತ್ತದೆ?

ತೆರಿಗೆ ಪಾವತಿಯನ್ನು “ಬ್ಯಾಂಕ್‌ನಲ್ಲಿ ಪಾವತಿಸಿ” ವಿಧಾನದಲ್ಲಿ ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಮಾಡಿದ ಸಂದರ್ಭದಲ್ಲಿ, ಬ್ಯಾಂಕ್ ಶಾಖೆಯಲ್ಲಿ ಪಾವತಿ ಸಾಧನವನ್ನು ಸಲ್ಲಿಸಿದ ದಿನಾಂಕವನ್ನೇ ತೆರಿಗೆ ಪಾವತಿಯ ದಿನಾಂಕವಾಗಿ ಪರಿಗಣಿಸಲಾಗುತ್ತದೆ.

42. RTGS/NEFT ವಿಧಾನದಲ್ಲಿ ತೆರಿಗೆ ಪಾವತಿಗೆ ಯಾವ ಬ್ಯಾಂಕ್‌ಗಳನ್ನು ಬಳಸಬಹುದು?

ಈ ವಿಧಾನದಲ್ಲಿ, ತೆರಿಗೆ ಪಾವತಿಗಾಗಿ RTGS/NEFT ಸೇವೆಗಳನ್ನು ಒದಗಿಸುವ ಯಾವುದೇ ಬ್ಯಾಂಕ್ ಮೂಲಕ ತೆರಿಗೆ ಪಾವತಿಯನ್ನು ಮಾಡಬಹುದು.

43. RTGS/NEFT ಮೂಲಕ ತೆರಿಗೆ ಪಾವತಿಗೆ ಯಾವುದೇ ಹೆಚ್ಚುವರಿ ಶುಲ್ಕ/ಫೀ ಇದೆಯೇ?

ಬ್ಯಾಂಕ್ ಶುಲ್ಕಗಳು ಅನ್ವಯಿಸಿದರೆ, ಅವು ಸಂಬಂಧಿತ ಮೂಲ ಬ್ಯಾಂಕ್‌ನ (ಲಾಭಪಡೆಯುವ ಖಾತೆಗೆ ತೆರಿಗೆ ಹಣ ವರ್ಗಾವಣೆ ಮಾಡುವ ಬ್ಯಾಂಕ್) ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ. ಈ ಬ್ಯಾಂಕ್ ಶುಲ್ಕಗಳು ಮ್ಯಾಂಡೇಟ್ ಫಾರ್ಮ್ ಸೂಚಿಸಿರುವ ತೆರಿಗೆ ಮೊತ್ತಕ್ಕಿಂತ ಹೆಚ್ಚುವರಿಯಾಗಿರುತ್ತವೆ ಮತ್ತು ಈ ಶುಲ್ಕಗಳಿಂದ ಆದಾಯ ತೆರಿಗೆ ಇಲಾಖೆಗೆ ಯಾವುದೇ ರೀತಿಯ ಲಾಭವಾಗುವುದಿಲ್ಲ.

44. RTGS/NEFT ವಿಧಾನದಲ್ಲಿ ನಗದು ಮೂಲಕ ಪಾವತಿ ಮಾಡಬಹುದೇ?

ಇಲ್ಲ, ಈ ವಿಧಾನದ ಅಡಿಯಲ್ಲಿ ಪಾವತಿ ಮಾಡಲು ತೆರಿಗೆದಾರರು ನಗದು ಬಳಸುವಂತಿಲ್ಲ.

45. RTGS/NEFT ವಿಧಾನದಲ್ಲಿ ತೆರಿಗೆ ಪಾವತಿ ಮಾಡುವ ಪ್ರಕ್ರಿಯೆ ಏನು?

ಈ ವಿಧಾನದಲ್ಲಿ, ತೆರಿಗೆ ರವಾನೆ ಮಾಡಬೇಕಾದ ಫಲಾನುಭವಿ ಖಾತೆಯ ಮಾಹಿತಿಯನ್ನು ಒಳಗೊಂಡಿರುವ ಮ್ಯಾಂಡೇಟ್ ಫಾರ್ಮ್ ಅನ್ನುರಚಿಸಲಾಗುತ್ತದೆ.ತೆರಿಗೆದಾರರು ಮುದ್ರಿತ ಮತ್ತು ಸಹಿ ಮಾಡಿದ ಮ್ಯಾಂಡೇಟ್ ಫಾರ್ಮ್ ಅನ್ನು ತೆಗೆದುಕೊಂಡು, ಪಾವತಿ ಸಾಧನ (ಚೆಕ್/ಡಿಮ್ಯಾಂಡ್ ಡ್ರಾಫ್ಟ್) ಸಹಿತ ಬ್ಯಾಂಕ್‌ಗೆ ಸಲ್ಲಿಸಬೇಕು.

ತೆರಿಗೆದಾರರು ಈ ವಿಧಾನದಲ್ಲಿ ತಮ್ಮ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ತೆರಿಗೆ ಪಾವತಿಯನ್ನು ಮಾಡಬಹುದು. ಮ್ಯಾಂಡೇಟ್ ಫಾರ್ಮ್‌ನಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಫಲಾನುಭವಿಯನ್ನು ಸೇರಿಸುವ ಮೂಲಕ ಮತ್ತು ಸೇರಿಸಿದ ಖಾತೆಗೆ ಮೊತ್ತವನ್ನು ವರ್ಗಾಯಿಸುವ ಮೂಲಕ ತೆರಿಗೆ ಪಾವತಿಯನ್ನು ಮಾಡಬಹುದು.

46. ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ RTGS/NEFT ಮೂಲಕ ತೆರಿಗೆ ಪಾವತಿ ಮಾಡಬಹುದೇ?

ತೆರಿಗೆದಾರರು ತಮ್ಮ ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು (ಬ್ಯಾಂಕ್ ಈ ಸೌಲಭ್ಯ ಒದಗಿಸಿದರೆ) ಈ ವಿಧಾನದಲ್ಲಿ ಪಾವತಿ ಮಾಡಲು ಬಳಸಬಹುದು. ಮ್ಯಾಂಡೇಟ್ ಫಾರ್ಮ್‌ನಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಫಲಾನುಭವಿಯನ್ನು ಸೇರಿಸುವ ಮೂಲಕ ಮತ್ತು ಸೇರಿಸಿದ ಖಾತೆಗೆ ಮೊತ್ತವನ್ನು ವರ್ಗಾಯಿಸುವ ಮೂಲಕ ತೆರಿಗೆ ಪಾವತಿಯನ್ನು ಮಾಡಬಹುದು.

47. ಮ್ಯಾಂಡೇಟ್ ಫಾರ್ಮ್ ಎಂದರೇನು? ಅದು ಯಾವಾಗ ಬೇಕಾಗುತ್ತದೆ?

ತೆರಿಗೆದಾರರು ತೆರಿಗೆ ಪಾವತಿಯ ವಿಧಾನವಾಗಿ RTGS/NEFT ಅನ್ನು ಆಯ್ಕೆ ಮಾಡಿದಾಗ ಮ್ಯಾಂಡೇಟ್ ಫಾರ್ಮ್ ಅನ್ನು ರಚಿಸಲಾಗುತ್ತದೆ. ತೆರಿಗೆ ರವಾನೆಯನ್ನು ಮಾಡಬೇಕಾದ ಫಲಾನುಭವಿಯ ಖಾತೆಯ ವಿವರಗಳನ್ನು ಇದು ಹೊಂದಿರುತ್ತದೆ.

48. RTGS/NEFT ವಿಧಾನದಲ್ಲಿ ಪಾವತಿ ಮಾಡಲು ತೆರಿಗೆದಾರರಿಂದ ರಚಿಸಲಾದ ಮ್ಯಾಂಡೇಟ್ ಫಾರ್ಮ್‌ನ ಮಾನ್ಯತಾ ಅವಧಿ ಎಷ್ಟು?

ಮ್ಯಾಂಡೇಟ್ ಫಾರ್ಮ್‌ ಅನ್ನು ರಚಿಸಿದ ದಿನಾಂಕದಿಂದ 15 ದಿನಗಳವರೆಗೆ ಮಾನ್ಯವಾಗಿರುತ್ತದೆ. RTGS/ NEFT ರವಾನೆಯು ಮ್ಯಾಂಡೇಟ್ ಫಾರ್ಮ್‌ನಲ್ಲಿ ಉಲ್ಲೇಖಿಸಲಾದ “ಮಾನ್ಯ ಅವಧಿ”ಯ ದಿನಾಂಕದಂದು ಅಥವಾ ಅದಕ್ಕೂ ಮೊದಲು ಗಮ್ಯಸ್ಥಾನವಿರುವ ಬ್ಯಾಂಕ್ (ಭಾರತೀಯ ರಿಸರ್ವ್ ಬ್ಯಾಂಕ್) ಅನ್ನು ತಲುಪಬೇಕು. ಯಾವುದೇ ವಿಳಂಬವಾದರೆ RTGS/NEFT ವ್ಯವಹಾರವನ್ನು ಮೂಲ ಖಾತೆಗೆ ಹಿಂದಿರುಗಿಸಲಾಗುತ್ತದೆ. “ಮಾನ್ಯ ಅವಧಿ”ಯ ದಿನಾಂಕಕ್ಕಿಂತ ಮುಂಚಿತವಾಗಿಯೇ ಹಣ ವರ್ಗಾವಣೆ ಫಲಾನುಭವಿ ಖಾತೆಗೆ ತಲುಪುವಂತೆ ನೋಡಿಕೊಳ್ಳುವುದು ಮೂಲ ಬ್ಯಾಂಕ್‌ನ ಜವಾಬ್ದಾರಿಯಾಗಿರುತ್ತದೆ. ವಿಳಂಬಕ್ಕೆ ಆದಾಯ ತೆರಿಗೆ ಇಲಾಖೆ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ರೀತಿಯ ಹೊಣೆಗಾರರಾಗಿರುವುದಿಲ್ಲ.

49. ತೆರಿಗೆ ಪಾವತಿ ಮಾಡಲು ಮೂಲ ಬ್ಯಾಂಕ್/ತೆರಿಗೆದಾರರು ಮ್ಯಾಂಡೇಟ್ ಫಾರ್ಮ್‌ನಲ್ಲಿ ಉಲ್ಲೇಖಿಸಿದ ವಿವರಗಳನ್ನು ಹಸ್ತಚಾಲಿತವಾಗಿ ನಮೂದಿಸುವ ಅಗತ್ಯವಿದೆಯೇ?

ಹೌದು, RTGS/NEFT ವಹಿವಾಟು ಮಾಡುವಾಗ ಮ್ಯಾಂಡೇಟ್ ಫಾರ್ಮ್‌ನಲ್ಲಿ ನಮೂದಿಸಿದಂತೆ ಸರಿಯಾದ ವಿವರಗಳನ್ನು ನಮೂದಿಸುವುದು ಮೂಲ ಬ್ಯಾಂಕ್/ತೆರಿಗೆದಾರರ (ಆನ್‌ಲೈನ್ ವರ್ಗಾವಣೆಯ ಸಂದರ್ಭದಲ್ಲಿ) ಜವಾಬ್ದಾರಿಯಾಗಿರುತ್ತದೆ. ಯಾವುದೇ ವ್ಯತ್ಯಾಸ ಇದ್ದಲ್ಲಿ RTGS/NEFT ವ್ಯವಹಾರವನ್ನು ತಿರಸ್ಕರಿಸುವ ಸಾಧ್ಯತೆ ಇರುತ್ತದೆ ಮತ್ತು ಅಂತಹ ವ್ಯತ್ಯಾಸದಿಂದ ಉಂಟಾಗುವ ಯಾವುದೇ ಪರಿಣಾಮಗಳಿಗೆ ಆದಾಯ ತೆರಿಗೆ ಇಲಾಖೆ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ರೀತಿಯಲ್ಲಿ ಹೊಣೆಗಾರರಾಗಿರುವುದಿಲ್ಲ.

50. ಪಾವತಿ ಗೇಟ್‌ವೇ ಮೂಲಕ ತೆರಿಗೆ ಪಾವತಿ ಮಾಡಲು ತೆರಿಗೆದಾರರು ಯಾವ ಯಾವ ಸಾಧನಗಳನ್ನು ಬಳಸಬಹುದು?

ಪಾವತಿ ಗೇಟ್‌ವೇ ಮತ್ತೊಂದು ಪಾವತಿ ವಿಧಾನವಾಗಿದ್ದು, ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೇವೆಯೊಂದಿಗೆ ಸಂಯೋಜಿತವಾದ ಪಾವತಿ ಗೇಟ್‌ವೇಗೆ ಸಂಪರ್ಕ ಹೊಂದಿರುವ ಆಯ್ದ ಬ್ಯಾಂಕ್‌ಗಳ ಕೆಳಗಿನ ಸಾಧನಗಳನ್ನು ಬಳಸಿ ತೆರಿಗೆ ಪಾವತಿಯನ್ನು ಮಾಡಲು ತೆರಿಗೆದಾರರಿಗೆ ಅವಕಾಶ ನೀಡುತ್ತದೆ:

  1. ನೆಟ್ ಬ್ಯಾಂಕಿಂಗ್
  2. ಡೆಬಿಟ್ ಕಾರ್ಡ್
  3. ಕ್ರೆಡಿಟ್ ಕಾರ್ಡ್
  4. UPI

ಸೂಚನೆ: ಅಧಿಕೃತ ಬ್ಯಾಂಕ್ ಮೂಲಕ ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ವಿಧಾನಗಳನ್ನು ಬಳಸಿ ನೇರವಾಗಿ ತೆರಿಗೆ ಪಾವತಿಸುವುದೂ ಸಾಧ್ಯ.

51. ಪಾವತಿ ಗೇಟ್‌ವೇ ಮೂಲಕ ತೆರಿಗೆ ಪಾವತಿ ಮಾಡಲು ಶುಲ್ಕ ಎಷ್ಟು? ತೆರಿಗೆಯ ಮೊತ್ತವು ಪೇಮೆಂಟ್ ಗೇಟ್‌ವೇ ಶುಲ್ಕವನ್ನು ಒಳಗೊಂಡಿರುತ್ತದೆಯೇ?

ಪಾವತಿ ಗೇಟ್‌ವೇ ವಿಧಾನದಲ್ಲಿ ತೆರಿಗೆ ಪಾವತಿಗೆ ವಿಧಿಸಲಾಗುವ ಶುಲ್ಕಗಳು/ಸೇವಾ ಶುಲ್ಕಗಳು ಸಂಬಂಧಿತ ಬ್ಯಾಂಕ್‌ನ ನಿಯಮಗಳು ಮತ್ತು ಷರತ್ತುಗಳಿಗೆ ಹಾಗೂ ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತವೆ. ಇ-ಸಲ್ಲಿಕೆ ಪೋರ್ಟಲ್/ಆದಾಯ ತೆರಿಗೆ ಇಲಾಖೆ ಇಂತಹ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಈ ಶುಲ್ಕಗಳು ಬ್ಯಾಂಕ್/ಪಾವತಿ ಗೇಟ್‌ವೇಗೆ ಸಲ್ಲುತ್ತವೆ ಮತ್ತು ತೆರಿಗೆ ಮೊತ್ತಕ್ಕಿಂತ ಹೆಚ್ಚುವರಿಯಾಗಿರುತ್ತವೆ. ಆದರೆ, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ RuPay ಡೆಬಿಟ್ ಕಾರ್ಡ್, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) (BHIM-UPI), ಮತ್ತು UPI ಕ್ವಿಕ್ ರೆಸ್ಪಾನ್ಸ್ ಕೋಡ್ (UPI QR ಕೋಡ್) (BHIM-UPI QR ಕೋಡ್) ಮೂಲಕ ಮಾಡಿದ ಪಾವತಿಗಳಿಗೆ ಯಾವುದೇ ಶುಲ್ಕ/ವ್ಯಾಪಾರಿ ರಿಯಾಯಿತಿ ದರ(MDR) ವಿಧಿಸಲಾಗುವುದಿಲ್ಲ.

ಇದರ ಜೊತೆಗೆ, ಪೋರ್ಟಲ್‌ನ ‘ಪಾವತಿ ಗೇಟ್‌ವೇ’ ಪಾವತಿ ವಿಧಾನದಲ್ಲಿ ಪಾವತಿ ಗೇಟ್‌ವೇ ಸೇವೆಗಳನ್ನು ಒದಗಿಸುವ ಎಲ್ಲಾ ಬ್ಯಾಂಕ್‌ಗಳ ವ್ಯವಹಾರ ಶುಲ್ಕಗಳನ್ನು ಪಟ್ಟಿ ಮಾಡಲಾಗಿದೆ.

52. ಪಾವತಿ ಗೇಟ್‌ವೇ ಮೂಲಕ ಮಾಡಿದ ತೆರಿಗೆ ಪಾವತಿಗೆ ದೃಢೀಕರಣ ಸಿಗದಿದ್ದರೆ, ಅದಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಹೇಗೆ ಹಾಕಬೇಕು? ಯಾವ ಪ್ರಾಧಿಕಾರವನ್ನು ಸಂಪರ್ಕಿಸಬೇಕು?

ಒಂದುವೇಳೆ ಕಡಿತಗೊಳಿಸಿದರೆ ಅಥವಾ ಕ್ರೆಡಿಟ್ ಕಾರ್ಡ್‌ಗೆ ಶುಲ್ಕ ವಿಧಿಸಲಾಗಿದ್ದು, ಆದರೆ CRN ನ ಸ್ಥಿತಿಯನ್ನು "ಪಾವತಿಸಲಾಗಿದೆ" ಎಂದು ನವೀಕರಿಸದಿದ್ದರೆ ತೆರಿಗೆದಾರರು 30 ನಿಮಿಷಗಳ ನಂತರ CRN ನ ಸ್ಥಿತಿಯನ್ನು ಮರುಪರಿಶೀಲಿಸಬಹುದು ಏಕೆಂದರೆ ಪೇಮೆಂಟ್ ಗೇಟ್‌ವೇಯಿಂದ ಇ-ಸಲ್ಲಿಕೆ ಪೋರ್ಟಲ್‌ಗೆ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಅದನ್ನು ನವೀಕರಿಸಬಹುದು.ಒಂದು ವೇಳೆ, ಹೇಳಿದ ಸಮಯದಲ್ಲಿ ಅಂತಹ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸದಿದ್ದರೆ, ತೆರಿಗೆದಾರರಿಗೆ ಒಂದು ದಿನ ಕಾಯಲು ಸಲಹೆ ನೀಡಲಾಗುತ್ತದೆ.CRN ಸ್ಥಿತಿ ಇನ್ನೂ ನವೀಕರಿಸದಿದ್ದರೆ, ತೆರಿಗೆದಾರರು ಸಂಬಂಧಿತ ಪಾವತಿ ಬ್ಯಾಂಕ್ ಅನ್ನು ಸಂಪರ್ಕಿಸಲು ಸಲಹೆ ನೀಡಲಾಗುತ್ತದೆ.

53. ಇ-ಸಲ್ಲಿಕೆ ಪೋರ್ಟಲ್‌ನಲ್ಲಿನ, ತೆರಿಗೆಗಳ ಇ-ಪಾವತಿ ಸೇವೆಯು ಆನ್‌ಲೈನ್ ತೆರಿಗೆ ಪಾವತಿಗಳನ್ನು ಸ್ವೀಕರಿಸಲು ನಿರ್ದಿಷ್ಟ ಸಮಯವನ್ನು ಹೊಂದಿದೆಯೇ?

ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೇವೆಯ ಮೂಲಕ ಆನ್‌ಲೈನ್ ಪಾವತಿ 24/7 ಲಭ್ಯವಿರುತ್ತದೆ. ಆದಾಗ್ಯೂ, ಹೆಚ್ಚಿನ ಮಾಹಿತಿಗಾಗಿ ನೀವು ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

54. ಹಿಂದಿನ ಯಾವುದೇ ವರ್ಷಕ್ಕೆ ಸಂಬಂಧಿಸಿದ ಬಾಕಿ ತೆರಿಗೆ ಬೇಡಿಕೆಯನ್ನು ನಾನು ಹೇಗೆ ಪಾವತಿಸಬಹುದು?

PAN ಮತ್ತು ಮೌಲ್ಯಮಾಪನ ವರ್ಷ (AY) ಸಂಯೋಜನೆಗೆ ಸಂಬಂಧಿಸಿದ ಎಲ್ಲಾ ಬಾಕಿ ತೆರಿಗೆ ಬೇಡಿಕೆಗಳು, ಆದಾಯ ತೆರಿಗೆ ಪೋರ್ಟಲ್‌ಗೆ ಲಾಗಿನ್ ಆದ ನಂತರ ತೆರಿಗೆಗಳ ಇ-ಪಾವತಿ ಸೇವೆಯಲ್ಲಿ ಲಭ್ಯವಿರುವ ‘ನಿಯಮಿತ ಮೌಲ್ಯಮಾಪನ ತೆರಿಗೆ (Regular Assessment Tax) ರೂಪದಲ್ಲಿ ಬೇಡಿಕೆ ಪಾವತಿ’ ಪಾವತಿ ಟೈಲ್‌ನಲ್ಲಿ ಸ್ವಯಂಚಾಲಿತವಾಗಿ ಪ್ರದರ್ಶಿಸಲಾಗುತ್ತವೆ. ಲಭ್ಯವಿರುವ ವಿವಿಧ ವಿಧಾನಗಳ ಮೂಲಕ ತೆರಿಗೆ ಪಾವತಿಗಾಗಿ ಸಂಬಂಧಿತ ಬೇಡಿಕೆಯನ್ನು ಆಯ್ಕೆ ಮಾಡಬಹುದು.
ಅದೇ ರೀತಿ, ತೆರಿಗೆದಾರರು ಡಿಮ್ಯಾಂಡ್ ಉಲ್ಲೇಖ ಸಂಖ್ಯೆಯಿಲ್ಲದೇ ಸಹ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡುವ ಮೊದಲು ಅಥವಾ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಸೌಲಭ್ಯದ ಮೂಲಕ ‘ನಿಯಮಿತ ಮೌಲ್ಯಮಾಪನ ತೆರಿಗೆ (400)’ ಪಾವತಿಯನ್ನು ಮಾಡಬಹುದು.

55. ತೆರಿಗೆಗಳ ಇ-ಪಾವತಿ ಪ್ರಕ್ರಿಯೆ ಮೂಲಕ ಪಾವತಿ ಮಾಡುವ ಬದಲು, ಆನ್‌ಲೈನ್ ITR ಸಲ್ಲಿಸುವಾಗಲೇ ಬಾಕಿ ತೆರಿಗೆಗಳನ್ನು ನೇರವಾಗಿ ಪಾವತಿಸಬಹುದೇ?

ಹೌದು, ನೀವು ITR ಸಲ್ಲಿಸುವಾಗಲೇ ಬಾಕಿ ತೆರಿಗೆಗಳನ್ನು ನೇರವಾಗಿ ಪಾವತಿಸಬಹುದು. ಆನ್‌ಲೈನ್ ITR ಪ್ರಕ್ರಿಯೆಯಿಂದ ಮರುನಿರ್ದೇಶಿತವಾದಾಗ ವಿವರಗಳು ತೆರಿಗೆಗಳ ಇ-ಪಾವತಿ ಸೇವೆಯಲ್ಲಿ ಸ್ವಯಂಚಾಲಿತವಾಗಿ ಭರ್ತಿಯಾಗುತ್ತವೆ. ಚಲನ್ ಪಾವತಿಯ ನಂತರ, ITR ಸಲ್ಲಿಸುವ ಮೊದಲು ಆ ಚಲನ್ ಅನ್ನು ಕ್ಲೇಮ್ ಮಾಡಲು ಸಂಬಂಧಿತ ವೇಳಾಪಟ್ಟಿಯಲ್ಲಿ ಪಾವತಿ ವಿವರಗಳನ್ನು ತಪ್ಪದೇ ನಮೂದಿಸಬೇಕು.

56. ಯಶಸ್ವಿಯಾಗಿ ಪಾವತಿಸಲಾದ ಚಾಲನ್‌ಗಳು ಪಾವತಿ ಇತಿಹಾಸದ ಟ್ಯಾಬ್‌ನಲ್ಲಿ ಎಷ್ಟು ಸಮಯದವರೆಗೆ ಪ್ರದರ್ಶಿಸಲಾಗುತ್ತವೆ?

ಯಾವುದೇ ಸಮಯ ಮಿತಿ ಇರುವುದಿಲ್ಲ. ಆದರೆ, ನಿಮ್ಮ ದಾಖಲೆಗಳಿಗಾಗಿ ಚಲನ್‌ಗಳನ್ನು ತಕ್ಷಣವೇ ಡೌನ್‌ಲೋಡ್ ಮಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ.

57. ಡೆಬಿಟ್ ಕಾರ್ಡ್ ಪಾವತಿ ವಿಧಾನದಲ್ಲಿ ಬ್ಯಾಂಕ್ ಹೆಸರು ಕಾಣಿಸದಿದ್ದರೆ ಏನು ಮಾಡಬೇಕು?

ಈ ಸಂದರ್ಭದಲ್ಲಿ, ತೆರಿಗೆದಾರರು ಲಭ್ಯತೆಯ ಪ್ರಕಾರ ಇತರ ಮಾನ್ಯತೆ ಪಡೆದ ಬ್ಯಾಂಕ್‌ನ ಡೆಬಿಟ್ ಕಾರ್ಡ್ ವಿಧಾನವನ್ನು ಬಳಸಿಕೊಂಡು ಪಾವತಿಸಲು ಲಭ್ಯವಿರುವ ಪೇಮೆಂಟ್ ಗೇಟ್‌ವೇ ವಿಧಾನವನ್ನು ಆಯ್ಕೆ ಮಾಡಬಹುದು.

58. ಯಾವ ಸಂದರ್ಭಗಳಲ್ಲಿ ತೆರಿಗೆವನ್ನು ಆನ್‌ಲೈನ್ ಮೂಲಕ ಪಾವತಿಸುವುದು ಕಡ್ಡಾಯವಾಗಿರುತ್ತದೆ?

ಆದಾಯ ತೆರಿಗೆ ನಿಯಮಗಳು 2026ರ ನಿಯಮ 333ರ ಪ್ರಕಾರ, ಕೆಳಗಿನ ವರ್ಗದ ತೆರಿಗೆದಾರರು ತೆರಿಗೆವನ್ನು ಆನ್‌ಲೈನ್ ಮೂಲಕ ಪಾವತಿಸುವುದು ಕಡ್ಡಾಯವಾಗಿದೆ:-
1. ಪ್ರತಿಯೊಂದು ಕಂಪನಿ
2. ಆದಾಯ ತೆರಿಗೆ ಕಾಯಿದೆ 2025ರ ಸೆಕ್ಷನ್ 63ಕ್ಕೆ ಒಳಪಡುವ ವ್ಯಕ್ತಿ (ಕಂಪನಿಯನ್ನು ಹೊರತುಪಡಿಸಿ)

59. ಆಫ್‌ಲೈನ್ ಪಾವತಿಗೆ ಸಂಬಂಧಿಸಿದ ಕೌಂಟರ್‌ಫಾಯಿಲ್ ಅನ್ನು ಕಳೆದುಕೊಂಡಿದ್ದರೆ, ನಾನು ಯಾರನ್ನು ಸಂಪರ್ಕಿಸಬೇಕು?

ಪಾವತಿ ಯಶಸ್ವಿಯಾದರೆ, ಆದಾಯ ತೆರಿಗೆ ಪೋರ್ಟಲ್‌ಗೆ ಲಾಗಿನ್ ಆದ ನಂತರ ತೆರಿಗೆಗಳ ಇ-ಪಾವತಿ ಸೇವೆಯ ಪೇಮೆಂಟ್ ಹಿಸ್ಟರಿ ಟ್ಯಾಬ್‌ನಲ್ಲಿ ಚಾಲನ್ ರಸೀದಿ ಯಾವಾಗಲೂ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ.

60. ಮೈನರ್ ಹೆಡ್ 500 ಅಡಿಯಲ್ಲಿ ಪಾವತಿ ಮಾಡಿದರೆ ತೆರಿಗೆದಾರರು ಮರುಪಾವತಿ ಪಡೆಯಬಹುದೇ?

ಪ್ರಸ್ತುತ ಕಾನೂನು ಚೌಕಟ್ಟಿನ ಪ್ರಕಾರ, ಮೈನರ್ ಹೆಡ್ 500 ಅಡಿಯಲ್ಲಿ ಮಾಡಿದ ಪಾವತಿಗಳಿಗೆ ಮರುಪಾವತಿ ನೀಡುವ ಯಾವುದೇ ವ್ಯವಸ್ಥೆ ಇಲ್ಲ.

61. ನಾನು TDS/TCS ಪಾವತಿ ಮಾಡಿದ ನಂತರ ಚಲನ್ ಡೌನ್‌ಲೋಡ್ ಮಾಡುವುದು ಮರೆತಿದ್ದರೆ, ನಾನು ಆ ಚಲನ್ ಅನ್ನು ಹೇಗೆ ಪಡೆಯಬಹುದು?

ನೀವು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ನಿಮ್ಮ TAN ಖಾತೆಗೆ ಲಾಗಿನ್ ಮಾಡಿ TDS/TCS ಪಾವತಿಗೆ ಸಂಬಂಧಿಸಿದ ಚಲನ್ ರಸೀದಿಯನ್ನು ಪಡೆಯಬಹುದು.

62. ತೆರಿಗೆ ಪಾವತಿಗೆ ತೆರಿಗೆಗಳ ಇ-ಪಾವತಿ ಸೇವೆಯನ್ನು ಬಳಸುವಾಗ ಸಮಸ್ಯೆ ಎದುರಾದರೆ ನಾನು ಏನು ಮಾಡಬೇಕು?

ಇ-ಸಲ್ಲಿಕೆ ಪೋರ್ಟಲ್‌ನ ತೆರಿಗೆಗಳ ಇ-ಪಾವತಿ ಸೇವೆಯಲ್ಲಿ ಯಾವುದೇ ಸಮಸ್ಯೆ ಎದುರಾದರೆ, ನೀವು epay.helpdesk@incometax.gov.in ಅಥವಾ efilingwebmanager@incometax.gov.in ಗೆ ಇಮೇಲ್ ಕಳುಹಿಸಬಹುದು, ಅಥವಾ ಕೆಳಗಿನ ಸಂಖ್ಯೆಗಳಲ್ಲಿನ ಯಾವುದಾದರೂ ಮೂಲಕ ಇ-ಸಲ್ಲಿಕೆ ಕೇಂದ್ರವನ್ನು ಸಂಪರ್ಕಿಸಬಹುದು:
1. 1800 103 0025
2. 1800 419 0025
3. +91-80-46122000
4. +91-80-61464700

ನಿರಾಕರಣೆ: ಈ ಆಗಾಗ ಕೇಳಲಾದ ಪ್ರಶ್ನೆಗಳು (FAQ)ಕೇವಲ ಮಾಹಿತಿಯ ಉದ್ದೇಶಕ್ಕಾಗಿ ಮಾತ್ರ. ಈ ದಸ್ತಾವೇಜಿನಲ್ಲಿ ಇರುವ ಯಾವುದೂ ಕಾನೂನು ಸಲಹೆ ಆಗುವುದಿಲ್ಲ.