EVC ರಚಿಸುವ ಕುರಿತು ಬಳಕೆದಾರರ ಕೈಪಿಡಿ
1. ಅವಲೋಕನ
ಇ-ಸಲ್ಲಿಕೆ ಪೋರ್ಟಲ್‌ನ ನೋಂದಾಯಿತ ಬಳಕೆದಾರ ವ್ಯಕ್ತಿಗಳಿಗೆ ಮಾತ್ರ ಲಭ್ಯವಿರುವ ಎಲೆಕ್ಟ್ರಾನಿಕ್ ಪರಿಶೀಲನಾ ಕೋಡ್ (EVC) ರಚಿಸುವ (Generate EVC) ಸೇವೆ. ಈ ಸೇವೆಯು ನಿಮಗೆ ಕೆಳಗಿನವುಗಳನ್ನು ಮಾಡಲು ಅನುಮತಿಸುತ್ತದೆ:
- ಒಂದು ಅಂಶವನ್ನು ಇ-ಪರಿಶೀಲನೆ ಮಾಡುವುದು (ಕಾನೂನುಬದ್ಧ ಫಾರ್ಮ್‌ಗಳು, ಆದಾಯ ತೆರಿಗೆ ರಿಟರ್ನ್‌ಗಳು)
- ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ
- ಪಾಸ್‌ವರ್ಡ್ ಮರುಹೊಂದಿಸಿ
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ವೈಯಕ್ತಿಕ ತೆರಿಗೆದಾರರಾಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತರಾಗಿದ್ದು ಮಾನ್ಯವಾದ ಬಳಕೆದಾರ ID ಮತ್ತು ಪಾಸ್‌ವರ್ಡ್ ಹೊಂದಿರಬೇಕು.
- ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಮೌಲ್ಯೀಕರಿಸಿದ ಮತ್ತು EVC ಸಕ್ರಿಯಗೊಳಿಸಲಾದ ಬ್ಯಾಂಕ್ ಖಾತೆ (ಬ್ಯಾಂಕ್ ಖಾತೆ ಆಯ್ಕೆಗಾಗಿ)
- ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಮೌಲ್ಯೀಕರಿಸಿದ ಮತ್ತು EVC ಸಕ್ರಿಯಗೊಳಿಸಲಾದ ಡೀಮ್ಯಾಟ್ ಖಾತೆ (ಡೀಮ್ಯಾಟ್ ಖಾತೆಯ ಆಯ್ಕೆಗಾಗಿ)
- ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದ PAN (ನೆಟ್ ಬ್ಯಾಂಕಿಂಗ್ ಆಯ್ಕೆಗಾಗಿ )
- ಮಾನ್ಯವಾದ ಡೆಬಿಟ್ ಕಾರ್ಡ್ (ಬ್ಯಾಂಕ್ ATM ಆಯ್ಕೆಗಾಗಿ)
3. ಹಂತ-ಹಂತದ ಮಾರ್ಗದರ್ಶಿ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಿ.
ಹಂತ 2: ನಿಮ್ಮಡ್ಯಾಶ್‌ಬೋರ್ಡ್ನಲ್ಲಿ ಸೇವೆಗಳು > EVC ರಚಿಸಿಮೇಲೆ ಕ್ಲಿಕ್ ಮಾಡಿ.
ಹಂತ 3:EVC ರಚಿಸಿಪುಟದಲ್ಲಿ,"ನೀವು ಎಲೆಕ್ಟ್ರಾನಿಕ್ ಪರಿಶೀಲನಾ ಕೋಡ್ (EVC) ಅನ್ನು ಹೇಗೆ ರಚಿಸಲು ಬಯಸುತ್ತೀರಿ?"(EVC)?ಎಂಬ ಆಯ್ಕೆಯನ್ನು ಆರಿಸಿ.
ನೀವು ಕೆಳಗಿನ ವಿಧಾನಗಳನ್ನು ಬಳಸಿ EVC ಅನ್ನು ರಚಿಸಬಹುದು:
| ನೆಟ್ ಬ್ಯಾಂಕಿಂಗ್ | ವಿಭಾಗ 3.1 ಅನ್ನು ನೋಡಿ |
| ಬ್ಯಾಂಕ್ ಖಾತೆ | ವಿಭಾಗ 3.2 ಅನ್ನು ನೋಡಿ |
| ಡಿಮ್ಯಾಟ್ ಖಾತೆ | ವಿಭಾಗ 3.3 ಅನ್ನು ನೋಡಿ |
ನೆಟ್ ಬ್ಯಾಂಕಿಂಗ್ ಮೂಲಕ EVC ರಚಿಸುವುದು (3.1)
ಹಂತ 1:EVC ರಚಿಸಿಪುಟದಲ್ಲಿ,ನೆಟ್ ಬ್ಯಾಂಕಿಂಗ್ ಮೂಲಕಅನ್ನು ಆಯ್ಕೆ ಮಾಡಿ ಮತ್ತುಮುಂದುವರೆಯಿರಿಮೇಲೆ ಕ್ಲಿಕ್ ಮಾಡಿ.
ಹಂತ 2: ನೆಟ್ ಬ್ಯಾಂಕಿಂಗ್ ಮೂಲಕ ಇ-ಸಲ್ಲಿಕೆಗೆ ಲಾಗಿನ್ ಪುಟದಲ್ಲಿ, ಬ್ಯಾಂಕಿನ ಹೆಸರನ್ನು ಆಯ್ಕೆ ಮಾಡಿ.
ಗಮನಿಸಿ:ನಿಮ್ಮ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಲಾಗಿನ್ ಪುಟ ತೆರೆದಾಗ, ನೀವು ಇ-ಸಲ್ಲಿಕೆ ಪೋರ್ಟಲ್‌ನಿಂದ ಲಾಗ್ ಔಟ್ ಆಗುತ್ತೀರಿ.
ಹಂತ 3:ನಿಮ್ಮ ಬ್ಯಾಂಕಿನನೆಟ್ ಬ್ಯಾಂಕಿಂಗ್ ಲಾಗಿನ್ಪುಟದಲ್ಲಿ, ಬ್ಯಾಂಕ್ ನೀಡಿರುವಬಳಕೆದಾರ ಹೆಸರು(Username) ಮತ್ತುಪಾಸ್‌ವರ್ಡ್(Password) ಅನ್ನು ನಮೂದಿಸಿ.
ಹಂತ 4: ನಿಮ್ಮ ನೆಟ್ ಬ್ಯಾಂಕಿಂಗ್ ವೆಬ್‌ಸೈಟ್‌ನಲ್ಲಿ, ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಗಮನಿಸಿ:ನೀವು ನಿಮ್ಮ ನೆಟ್ ಬ್ಯಾಂಕಿಂಗ್ ವೆಬ್‌ಸೈಟ್‌ನಿಂದ ಲಾಗ್ ಔಟ್ ಆಗಿ, ನಿಮ್ಮ ಇ-ಸಲ್ಲಿಕೆ ಖಾತೆಗೆ ಲಾಗಿನ್ ಆಗುತ್ತೀರಿ.
ಹಂತ 5:ನಿಮ್ಮಡ್ಯಾಶ್‌ಬೋರ್ಡ್(Dashboard) ನಲ್ಲಿ, ಸೇವೆಗಳು > EVC ರಚಿಸಿ ಮೇಲೆ ಕ್ಲಿಕ್ ಮಾಡಿ.
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ID ಯಲ್ಲಿ ನೀವು ರಚಿಸಿದ EVC ಅನ್ನು ಸ್ವೀಕರಿಸುತ್ತೀರಿ ಮತ್ತು ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.
3.2. ಬ್ಯಾಂಕ್ ಖಾತೆಯ ಮೂಲಕ EVC ರಚಿಸುವುದು
ಹಂತ 1:EVC ರಚಿಸಿ ಪುಟದಲ್ಲಿ,ಬ್ಯಾಂಕ್ ಖಾತೆಯ ಮೂಲಕ ಆಯ್ಕೆಯನ್ನು ಆರಿಸಿ ಮತ್ತುಮುಂದುವರೆಯಿರಿಮೇಲೆ ಕ್ಲಿಕ್ ಮಾಡಿ.
ನಂತರ ಒಂದು ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ ಮತ್ತು ಬ್ಯಾಂಕ್‌ನಲ್ಲಿ ಪರಿಶೀಲಿಸಲಾದ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿಗೆ EVC (ಎಲೆಕ್ಟ್ರಾನಿಕ್ ಪರಿಶೀಲನಾ ಕೋಡ್) ಕಳುಹಿಸಲಾಗುತ್ತದೆ.
ಸೂಚನೆ:
- ಸೇರಿಸಿದ ಬ್ಯಾಂಕ್ ಖಾತೆಯನ್ನು ದೃಢೀಕರಿಸಿದ್ದರೆ ಮತ್ತು EVC ಸಕ್ರಿಯಗೊಳಿಸಿದರೆ ಮಾತ್ರ EVC ಮೂಲಕ ಬ್ಯಾಂಕ್ ಖಾತೆ ಆಯ್ಕೆಯನ್ನು ರಚಿಸಬಹುದು.
- ಬ್ಯಾಂಕ್‌ನಿಂದ ಪರಿಶೀಲಿಸಲ್ಪಟ್ಟಿದ್ದರೆ ಮಾತ್ರ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಇಮೇಲ್ ID ಯಲ್ಲಿ EVC ಅನ್ನು ನೀವು ಸ್ವೀಕರಿಸುತ್ತೀರಿ
3.3. ಡಿಮ್ಯಾಟ್ ಖಾತೆಯ ಮೂಲಕ EVC ರಚಿಸುವುದು
ಹಂತ 1:EVC ರಚಿಸಿ ಪುಟದಲ್ಲಿ,ಬ್ಯಾಂಕ್ ಖಾತೆಯ ಮೂಲಕ ಆಯ್ಕೆಯನ್ನು ಆರಿಸಿ ಮತ್ತುಮುಂದುವರೆಯಿರಿಮೇಲೆ ಕ್ಲಿಕ್ ಮಾಡಿ.
ನಂತರ ಒಂದು ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ ಮತ್ತು NSDL / CDSL ನಲ್ಲಿ ಪರಿಶೀಲಿಸಲಾದ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿಗೆ EVC (ಎಲೆಕ್ಟ್ರಾನಿಕ್ ಪರಿಶೀಲನಾ ಕೋಡ್) ಕಳುಹಿಸಲಾಗುತ್ತದೆ.
ಗಮನಿಸಿ:
- ಡಿಮ್ಯಾಟ್ ಖಾತೆಯ ಮೂಲಕ EVC ಆಯ್ಕೆಯನ್ನು ಬಳಸಲು, ಸೇರಿಸಲಾದ ಡಿಮ್ಯಾಟ್ ಖಾತೆಯು ದೃಢೀಕೃತ (Validated) ಆಗಿರಬೇಕು ಮತ್ತು ಅದರಲ್ಲಿ EVC ಸಕ್ರಿಯಗೊಳಿಸಲ್ಪಟ್ಟಿರಬೇಕು (EVC Enabled).
- ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು NSDL/CDSL ಪರಿಶೀಲಿಸಿದ್ದರೆ ಮಾತ್ರ, ನಿಮಗೆ EVC (ಎಲೆಕ್ಟ್ರಾನಿಕ್ ಪರಿಶೀಲನಾ ಕೋಡ್) ದೊರೆಯುತ್ತದೆ.
4. ಸಂಬಂಧಿತ ವಿಷಯಗಳು