ಆದಾಯ ಮತ್ತು ತೆರಿಗೆ ಎಸ್ಟಿಮೇಟರ್ ಕುರಿತು ಬಳಕೆದಾರರ ಕೈಪಿಡಿ

 

1. ಅವಲೋಕನ

ಆದಾಯ ಮತ್ತು ತೆರಿಗೆ ಅಂದಾಜು ಸೇವೆ ನೋಂದಾಯಿತ ಇ-ಸಲ್ಲಿಕೆ ಬಳಕೆದಾರರಿಗೆ ಆದಾಯ ತೆರಿಗೆ ಕಾಯಿದೆ, ಆದಾಯ ತೆರಿಗೆ ನಿಯಮಗಳು ಹಾಗೂ ಅಧಿಸೂಚನೆಗಳ ಪ್ರಕಾರ, ಗಳಿಸಿದ ಆದಾಯ(ಗಳು) ಮತ್ತು ಕಾಯಿದೆಯನ್ವಯ ಪಡೆದಿರುವ ಕಡಿತಗಳ ವಿವರಗಳನ್ನು ನಮೂದಿಸುವ ಮೂಲಕ ತಮ್ಮ ತೆರಿಗೆಯನ್ನು ಅಂದಾಜಿಸಲು ಸಹಾಯ ಮಾಡುತ್ತದೆ. ಈ ಸೇವೆ ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆಯ ಅಂದಾಜನ್ನು ನೀಡುವುದರ ಜೊತೆಗೆ, ಹಳೆಯ ಮತ್ತು ಹೊಸ ಪದ್ಧತಿಯ ಪ್ರಕಾರ ತೆರಿಗೆಯ ಹೋಲಿಕೆಯನ್ನು ಸಹ ಒದಗಿಸುತ್ತದೆ.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಮಾನ್ಯ ಬಳಕೆದಾರರ ID ಮತ್ತು ಪಾಸ್‌ವರ್ಡ್‌ ಹೊಂದಿರುವ ನೋಂದಾಯಿತ ಬಳಕೆದಾರರು

ದಯವಿಟ್ಟು ಗಮನಿಸಿ: ಈ ಬಳಕೆದಾರರ ಕೈಪಿಡಿಯನ್ನು ತೆರಿಗೆ ವರ್ಷ (TY) 2026–27 ಕ್ಕೆ ತೆರಿಗೆಯನ್ನು ಅಂದಾಜಿಸಲು / ಲೆಕ್ಕಹಾಕಲು ಆದಾಯ ತೆರಿಗೆ ಕಾಯಿದೆ, 2025 ರ ಪ್ರಕಾರ ಸಿದ್ಧಪಡಿಸಲಾಗಿದೆ. ನೀವು ನಿರ್ಧರಣೆ ವರ್ಷ (AY) 2026–27ಕ್ಕೆ ತೆರಿಗೆಯನ್ನು ಅಂದಾಜಿಸಲು / ಲೆಕ್ಕಹಾಕಲು ಬಯಸಿದರೆ, ಹಂತ 3(a)ರಲ್ಲಿ ಅನ್ವಯವಾಗುವ ಕಾಯಿದೆಯಾಗಿ ಆದಾಯ ತೆರಿಗೆ ಕಾಯಿದೆ, 1961 ಅನ್ನು ಆಯ್ಕೆ ಮಾಡಬೇಕು.

3. ಹಂತ-ಹಂತವಾದ ಮಾರ್ಗದರ್ಶಿ

ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ.

Data responsive

ಹಂತ 2: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ‘ಆದಾಯ ಮತ್ತು ತೆರಿಗೆ ಅಂದಾಜು ಗಣಕ’ ಮೇಲೆ ಕ್ಲಿಕ್ ಮಾಡಿ.

Data responsive

‘ಆದಾಯ ಮತ್ತು ತೆರಿಗೆ ಅಂದಾಜು ಗಣಕ’ದಲ್ಲಿ ನಾಲ್ಕು ಟ್ಯಾಬ್‌ಗಳಿವೆ. ಈ ಟ್ಯಾಬ್‌ಗಳಲ್ಲಿ ನೀವು ನಿಮ್ಮ ವಿವರಗಳನ್ನು ನಮೂದಿಸಬೇಕು:

Data responsive

ಹಂತ 3a: ‘ಪ್ರಾಥಮಿಕ ಮಾಹಿತಿ’ ಟ್ಯಾಬ್‌ನಲ್ಲಿ PAN, ತೆರಿಗೆದಾರರ ಹೆಸರು, ಅನ್ವಯವಾಗುವ ಕಾಯಿದೆ ಆಯ್ಕೆ ಮಾಡಿ (ಆದಾಯ ತೆರಿಗೆ ಕಾಯಿದೆ, 2025 ಅಥವಾ ಆದಾಯ ತೆರಿಗೆ ಕಾಯಿದೆ, 1961), ಆಯ್ಕೆ ಮಾಡಿದ ಕಾಯಿದೆಯ ಪ್ರಕಾರ AY ಅಥವಾ TY, ತೆರಿಗೆದಾರರ ವರ್ಗ, ವಸತಿ ಸ್ಥಿತಿ, ವಯಸ್ಸು, ರಿಟರ್ನ್ ಸಲ್ಲಿಸಲು ನಿಗದಿತ ಅಂತಿಮ ದಿನಾಂಕ ಮತ್ತು ರಿಟರ್ನ್‌ನ ನೈಜ ಸಲ್ಲಿಕೆ ದಿನಾಂಕ ಇತ್ಯಾದಿ ಅಗತ್ಯ ವಿವರಗಳನ್ನು ನಮೂದಿಸಿ.

Data responsive

ದಯವಿಟ್ಟು ಗಮನಿಸಿ: ಈ ಬಳಕೆದಾರರ ಕೈಪಿಡಿಯನ್ನು ಆದಾಯ ತೆರಿಗೆ ಕಾಯಿದೆ, 2025 ರ ಪ್ರಕಾರ ತೆರಿಗೆ ವರ್ಷ (TY) 2026–27ಕ್ಕೆ ತೆರಿಗೆಯನ್ನು ಅಂದಾಜಿಸಲು / ಲೆಕ್ಕಹಾಕಲು ಸಿದ್ಧಪಡಿಸಲಾಗಿದೆ. ನೀವು ನಿರ್ಧರಣೆ ವರ್ಷ (AY) 2026–27ಕ್ಕೆ ತೆರಿಗೆಯನ್ನು ಅಂದಾಜಿಸಲು / ಲೆಕ್ಕಹಾಕಲು ಬಯಸಿದರೆ, ಹಂತ 3(a)ರಲ್ಲಿ ಅನ್ವಯವಾಗುವ ಕಾಯಿದೆಯಾಗಿ ಆದಾಯ ತೆರಿಗೆ ಕಾಯಿದೆ, 1961 ಅನ್ನು ಆಯ್ಕೆ ಮಾಡಬೇಕು.

ಹಂತ 3b: ‘ಆದಾಯ ವಿವರಗಳು’ ಟ್ಯಾಬ್‌ನಲ್ಲಿ ಕೆಳಗಿನ ಅಗತ್ಯ ವಿವರಗಳನ್ನು ನಮೂದಿಸಿ:

• ವೇತನಗಳು ಶೀರ್ಷಿಕೆಯ ಅಡಿಯಲ್ಲಿ ಆದಾಯ,
• ಗೃಹ ಆಸ್ತಿ ಶೀರ್ಷಿಕೆಯ ಅಡಿಯಲ್ಲಿ ಆದಾಯ,
• ಬಂಡವಳ ಲಾಭಗಳು ಶೀರ್ಷಿಕೆಯ ಅಡಿಯಲ್ಲಿ ಆದಾಯ,
• ವ್ಯವಹಾರ ಅಥವಾ ವೃತ್ತಿ ಶೀರ್ಷಿಕೆಯ ಅಡಿಯಲ್ಲಿ ಆದಾಯ, ಮತ್ತು
• ಇತರೆ ಮೂಲಗಳು ಶೀರ್ಷಿಕೆಯ ಅಡಿಯಲ್ಲಿ ಆದಾಯ

Data responsive

ವೇತನ ಆದಾಯ ವಿವರಗಳು: 

Data responsive

ಗೃಹ ಆಸ್ತಿ ಆದಾಯ ವಿವರಗಳು:

Data responsive

ಬಂಡವಾಳ ಲಾಭಗಳ ವಿವರಗಳು:

Data responsive

ವ್ಯವಹಾರ ಅಥವಾ ವೃತ್ತಿಯಿಂದ ಆದಾಯ:

Data responsive

ಇತರೆ ಮೂಲಗಳಿಂದ ಆದಾಯ:

Data responsiveData responsiveData responsiveData responsive

ಹಂತ 3c: ‘ಕಡಿತ ವಿವರಗಳು’ ಟ್ಯಾಬ್‌ನಲ್ಲಿ, ನಿಮಗೆ ಅನ್ವಯವಾಗುವ ಸಂಬಂಧಿತ ಕಡಿತಗಳನ್ನು ನಮೂದಿಸಿ, ಇದರಲ್ಲಿ PPF, LIC, ಗೃಹ ಸಾಲ, NPS, ಮೆಡಿಕ್ಲೇಮ್, ಉನ್ನತ ಶಿಕ್ಷಣ ಸಾಲ ಇತ್ಯಾದಿಗಳು ಸೇರಿವ, ಆದರೆ ಇವಕ್ಕೆ ಮಾತ್ರ ಸೀಮಿತವಲ್ಲ.

Data responsive

ಹಂತ 3d: ‘ತೆರಿಗೆ ವಿವರಗಳು’ ಟ್ಯಾಬ್‌ನಲ್ಲಿ TDS/TCS ವಿವರಗಳನ್ನು ವೀಕ್ಷಿಸಿ ಹಾಗೂ ಸ್ವಯಂ-ಮೌಲ್ಯಮಾಪನ ತೆರಿಗೆ / ಮುಂಗಡ ತೆರಿಗೆ ಸಂಬಂಧಿತ ವಿವರಗಳನ್ನು, ನಿಮಗೆ ಸಮರ್ಥನೆಗಾಗಿ ಸಾಕ್ಷ್ಯ ಲಭ್ಯವಿರುವಲ್ಲಿ, ನಮೂದಿಸಿ/ತಿದ್ದುಪಡಿಸಿ.

Data responsive

ಹಂತ 4: ಎಲ್ಲವನ್ನು ಪೂರ್ಣಗೊಳಿಸಿದ ನಂತರ, ‘ತೆರಿಗೆ ಅಂದಾಜು ಮಾಡಿ’ ಮೇಲೆ ಕ್ಲಿಕ್ ಮಾಡಿ.

Data responsiveData responsive

ಹಂತ 5: ನಿಮ್ಮಿಂದ ಪಾವತಿಸಬೇಕಾದ ಅಂದಾಜು ತೆರಿಗೆಯನ್ನು ಗಣನೆ ಮಾಡಿ ಪ್ರದರ್ಶಿಸಲಾಗುತ್ತದೆ.

Data responsive

 

Data responsiveData responsive

ಹಂತ 6: ನೀವು ಅಂದಾಜು/ಲೆಕ್ಕಹಾಕಿದ ತೆರಿಗೆಯ PDF ಅನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ‘ಡೌನ್‌ಲೋಡ್’ ಮೇಲೆ ಕ್ಲಿಕ್ ಮಾಡಿ ಅಂದಾಜು ತೆರಿಗೆ ಲೆಕ್ಕಾಚಾರವನ್ನು PDF ರೂಪದಲ್ಲಿ ನಿಮ್ಮ ಕಂಪ್ಯೂಟರ್‌ನಲ್ಲಿ ಉಳಿಸಿಕೊಳ್ಳಬಹುದು.

Data responsive

ಹಂತ 7: ನೀವು ನೀಡಿದ ಮಾಹಿತಿಯ ಆಧಾರದ ಮೇಲೆ ಅಂದಾಜು/ಲೆಕ್ಕಹಾಕಿದ ತೆರಿಗೆಯ ನಿಮ್ಮ PDF ಇಲ್ಲಿದೆ:

Data responsiveData responsiveData responsiveData responsiveData responsiveData responsiveData responsiveData responsiveData responsiveData responsiveData responsive