ITR-4 (ಸುಗಮ್) ಆನ್ಲೈನ್ ಸಲ್ಲಿಕೆ
ITR-4 (ಸುಗಮ್) ಆನ್ಲೈನ್ ಸಲ್ಲಿಕೆ ಆಗಾಗ ಕೇಳುವ ಪ್ರಶ್ನೆಗಳು (FAQs)
1. ತೆರಿಗೆ ನಿರ್ಧರಣೆ ವರ್ಷ (AY) 2026-27ಕ್ಕೆ ITR-4 ಸಲ್ಲಿಸಲು ಯಾರು ಅರ್ಹರು ?
TR-4 ನ್ನು ಈ ಕೆಳಕಂಡವರನ್ನು ಬಿಟ್ಟು ಉಳಿದೆಲ್ಲ ಸ್ಥಳೀಯನಿವಾಸಿ ನೈಸರ್ಗಿಕ ವ್ಯಕ್ತಿ / HUF (ಹಿಂದೂ ಅವಿಭಕ್ತ ಕುಟುಂಬ) / ಪಾಲುದಾರಿಕೆ (LLP ಬಿಟ್ಟು) ಗಳೂ ಸಲ್ಲಿಸಬಹುದು:
- ಹಣಕಾಸು ವರ್ಷ (FY)ದಲ್ಲಿ ₹50 ಲಕ್ಷ ಮೀರದ ಆದಾಯ
- ಪೂರ್ವಗ್ರಹಿಕೆಯ ಆಧಾರದ ಮೇಲೆ ಸೆಕ್ಷನ್ 44AD, 44ADA ಅಥವಾ 44AE ಅಡಿಯಲ್ಲಿ ಗಣಿಸಲಾದ ವ್ಯವಹಾರ ಮತ್ತು ವೃತ್ತಿಯಿಂದಾದ ಆದಾಯ
- ಸೆಕ್ಷನ್ 112A ಅಡಿಯಲ್ಲಿ ರೂ.1.25 ಲಕ್ಷ ಮೀರದ ದೀರ್ಘಕಾಲೀನ ಬಂಡವಾಳ ಗಳಿಕೆ
- ವೇತನ/ಪಿಂಚಣಿ ಆದಾಯ, ಎರಡು ಮನೆ ಆಸ್ತಿ, ವ್ಯವಸಾಯದ ಆದಾಯ (₹ 5000/-ದ ವರೆಗೂ)
- ಈ ಕೆಳಕಂಡವುಗಳನ್ನು ಒಳಗೊಂಡ ಇತರೇ ಮೂಲಗಳು (ಲಾಟರಿ ಮತ್ತು ಕುದುರೆ ರೇಸಿನಿಂದ ಬಂದ ಗಳಿಕೆಯನ್ನು ಬಿಟ್ಟು)
- ಉಳಿತಾಯ ಖಾತೆಯ ಮೇಲಿನ ಬಡ್ಡಿ
- ಠೇವಣಿಯ ಮೇಲಿನ ಬಡ್ಡಿ (ಬ್ಯಾಂಕ್ / ಅಂಚೆ ಕಛೇರಿ / ಸಹಕಾರೀ ಸಂಸ್ಥೆ)
- ಆದಾಯ ತೆರಿಗೆ ಮರುಪಾವತಿಯ ಮೇಲಿನ ಬಡ್ಡಿ
- ಕುಟುಂಬ ಪಿಂಚಣಿ
- ಇತರ ಯಾವುದೇ ಬಡ್ಡಿಯಿಂದ ಬಂದ ಆದಾಯ (ಉದಾ: ಖಾತ್ರಿಯಿಲ್ಲದ ಸಾಲಗಳ ಮೇಲಿನ ಬಡ್ಡಿ)
2. ತೆರಿಗೆ ನಿರ್ಧರಣೆ ವರ್ಷ (AY) 2026-27ಕ್ಕೆ ITR-4 ಸಲ್ಲಿಸಲು ಯಾರು ಅರ್ಹರಲ್ಲ?
ಈ ಕೆಳಕಂಡ ನೈಸರ್ಗಿಕ ವ್ಯಕ್ತಿ / HUF (ಹಿಂದೂ ಅವಿಭಕ್ತ ಕುಟುಂಬ) / ಪಾಲುದಾರಿಕೆ (LLP ಬಿಟ್ಟು)ಗಳು ITR-4 ಸಲ್ಲಿಸಲಾಗುವುದಿಲ್ಲ:
- ಸ್ಥಳೀಯನಿವಾಸಿ ಆದರೆ ಸಾಮಾನ್ಯವಾಗಿ ಸ್ಥಳೀಯನಿವಾಸಿಯಲ್ಲದ (Resident but Not Ordinarily Resident) (RNOR), ಅಥವಾ ಅನಿವಾಸಿ (Non Resident) ಭಾರತೀಯ
- ₹ 50 ಲಕ್ಷಕ್ಕೂ ಹೆಚ್ಚಿನ ಆದಾಯ ಹೊಂದಿದ್ದರೆ
- ಅಲ್ಪಕಾಲೀನ ಬಂಡವಾಳ ಗಳಿಕೆಗಳು;
- ಸೆಕ್ಷನ್ 112A ಅಡಿಯಲ್ಲಿ ರೂ.1.25 ಲಕ್ಷ ಮೀರಿದ ದೀರ್ಘಕಾಲೀನ ಬಂಡವಾಳ ಗಳಿಕೆ
- ₹5,000/- ಕ್ಕೂ ಹೆಚ್ಚಿನ ಒಟ್ಟು ವ್ಯವಸಾಯದ ಆದಾಯ ಹೊಂದಿದ್ದರೆ
- ಕಂಪನಿಯ ನಿರ್ದೇಶಕರಾಗಿದ್ದರೆ
- ಎರಡಕ್ಕೂ ಹೆಚ್ಚಿನ ಮನೆ ಆಸ್ತಿಯಿಂದ ಆದಾಯ ಹೊಂದಿದ್ದರೆ;
- ಈ ಕೆಳಕಂಡ ರೀತಿಯ ಆದಾಯ ಹೊಂದಿದ್ದರೆ:
- ಲಾಟರಿಯಿಂದ ಗೆದ್ದದ್ದು;
- ರೇಸು ಕುದುರೆಗಳ ಮಾಲೀಕತ್ವ ಮತ್ತು ನಿರ್ವಹಣೆ ಮೊದಲಾದ ಚಟುವಟಿಕೆಗಳು;
- ಸೆಕ್ಷನ್ 115BBDA ಅಥವಾ ಸೆಕ್ಷನ್ 115BBE ಅಡಿಯಲ್ಲಿ ವಿಶೇಷ ದರದಲ್ಲಿ ತೆರಿಗೆ ವಿಧಿಸಬೇಕಾದ ಆದಾಯ;
- ಹಿಂದಿನ ವರ್ಷದ ಯಾವುದೇ ಸಮಯದಲ್ಲಿ ಲಿಸ್ಟ್ ಆಗಿಲ್ಲದ ಈಕ್ವಿಟಿ ಶೇರುಗಳನ್ನು ಹೊಂದಿದ್ದರೆ
- ಅರ್ಹ ನವೋದ್ಯಮ (Startup) ಉದ್ಯೋಗದಾತನಿಂದ ಪಡೆದ ESOP ಮೇಲೆ ಮುಂದೂಡಿದ ಆದಾಯ ತೆರಿಗೆ ಹೊಂದಿದ್ದರೆ
- ITR-4ರ ಅರ್ಹತೆ ಶರತ್ತುಗಳಿಗೆ ಒಳಗಾಗಿಲ್ಲದಿದ್ದರೆ
3. ತೆರಿಗೆ ನಿರ್ಧರಣೆ ವರ್ಷ (AY) 2026-27ದಲ್ಲಿ ITR-4 ಫಾರ್ಮ್ನಲ್ಲಿ ಆಗಿರುವ ಮುಖ್ಯವಾದ ಬದಲಾವಣೆಗಳು ಯಾವುವು?
ತೆರಿಗೆ ನಿರ್ಧರಣೆ ವರ್ಷ (AY) 2026-27ರ ITR-4ಕ್ಕೆ ಮುಖ್ಯವಾದ ಬದಲಾವಣೆಗಳು ಈ ಕೆಳಕಂಡಂತಿವೆ:
- ಎರಡು ಮನೆ ಆಸ್ತಿಗಳು: ತೆರಿಗೆ ಪಾವತಿದಾರರು ಈಗ ITR-1ನಲ್ಲಿ, ಕೇವಲ ಒಂದರ ಬದಲು ಎರಡು ಮನೆ ಆಸ್ತಿಗಳ ಆದಾಯವನ್ನು ವರದಿ ಮಾಡಬಹುದು.
- ವಸೂಲಿಯಾಗದ ಬಾಡಿಗೆ ಫೀಲ್ಡ್: ಬಾಡಿಗೆಗೆ ಬಿಟ್ಟ ಆಸ್ತಿ ಹೊಂದಿರುವ ತೆರಿಗೆ ಪಾವತಿದಾರರ ಅನುಕೂಲಕ್ಕೆಂದು ಈಗ "ವಸೂಲಿಯಾಗದ ಬಾಡಿಗೆಗಾಗಿ" ಒಂದು ಹೊಸ ನಿರ್ದಿಷ್ಟ ಫೀಲ್ಡನ್ನು ಸೇರಿಸಲಾಗಿದೆ.
- ವಿದೇಶೀ ಆಸ್ತಿ ವರದಿ: ವಿದೇಶೀ ನಿವೃತ್ತಿಸೌಲಭ್ಯಗಳನ್ನು ವರದಿ ಮಾಡಬೇಕೆಂಬ ನಿಬಂಧನೆಯನ್ನು ರದ್ದುಗೊಳಿಸಲಾಗಿದೆ
4. ನಾನು ವ್ಯವಹಾರದಿಂದ ಬಂದ ಆದಾಯ ಹೊಂದಿದ ನೈಸರ್ಗಿಕ ವ್ಯಕ್ತಿ. ನಾನು ITR-4 ಸಲ್ಲಿಸುವಾಗ ಹಳೆಯ ತೆರಿಗೆ ವ್ಯವಸ್ಥೆ ಆಯ್ದುಕೊಳ್ಳಬಹುದೇ?
ಹೌದು, ವ್ಯವಹಾರದಿಂದ ಬಂದ ಆದಾಯವಿರುವವರಾದರೆ ನೀವು ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ದುಕೊಳ್ಳಬಹುದು ಆದರೆ ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವುದಕ್ಕಾಗಿ, ಆದಾಯ ತೆರಿಗೆ ಕಾಯ್ದೆ, 1961 ಸೆಕ್ಷನ್ 139(1)ರ ಅಡಿಯಲ್ಲಿ ITR ಸಲ್ಲಿಸಲು ಇರುವ ಕೊನೆಯ ದಿನಾಂಕದೊಳಗಾಗಿ ನೀವು ಫಾರ್ಮ್ 10 IEA ಸಲ್ಲಿಸಿರಬೇಕು.
5. ನಾನು ವ್ಯವಹಾರದಿಂದ ಬಂದ ಆದಾಯ ಹೊಂದಿದ ನೈಸರ್ಗಿಕ ವ್ಯಕ್ತಿ. ನಾನು ಪ್ರತಿ ವರ್ಷ ಹೊಸ ತೆರಿಗೆ ವ್ಯವಸ್ಥೆ ಮತ್ತು ಹಳೆಯ ತೆರಿಗೆ ವ್ಯವಸ್ಥೆಗಳ ನಡುವೆ ಆಯ್ಕೆ ಬದಲಿಸಬಹುದೇ?
ವ್ಯವಹಾರದಿಂದ ಬಂದ ಆದಾಯ ಹೊಂದಿರುವ ನೈಸರ್ಗಿಕ ವ್ಯಕ್ತಿಗಳು ಪ್ರತಿವರ್ಷ ಹೊಸ ಮತ್ತು ಹಳೆಯ ತೆರಿಗೆ ವ್ಯವಸ್ಥೆಗಳನ್ನು ಬದಲಿಸಲು ಅರ್ಹರಲ್ಲ. ಒಮ್ಮೆ ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ದುಕೊಂಡ ಮೇಲೆ, ಅವರ ಜೀವಿತಕಾಲದಲ್ಲಿ ಒಮ್ಮೆಯಷ್ಟೇ ಹೊಸ ತೆರಿಗೆ ವ್ಯವಸ್ಥೆಗೆ ಬದಲಿಸಿಕೊಳ್ಳಲು ಅವಕಾಶವಿರುತ್ತದೆ. ಹಾಗೆ ಬದಲಿಸಿಕೊಂಡ ಮೇಲೆ ಮತ್ತೆ ಹಳೆಯ ತೆರಿಗೆ ವ್ಯವಸ್ಥೆಗೆ ಬದಲಿಸಿಕೊಳ್ಳಲು ಅವಕಾಶವಿರುವುದಿಲ್ಲ.
ವ್ಯವಹಾರದಿಂದ ಬಂದ ಆದಾಯವಿರುವವರು ಎರಡು ಬಾರಿ ಫಾರ್ಮ್ 10-IEA ಸಲ್ಲಿಸಬೇಕಾಗುತ್ತದೆ, ಒಮ್ಮೆ ಹಳೆಯ ತೆರಿಗೆ ವ್ಯವಸ್ಥೆ ಬಳಸಲು ಮತ್ತು ಎರಡನೆಯ ಬಾರಿ ಹೊಸ ವ್ಯವಸ್ಥೆಗೆ ವರ್ಗಾಯಿಸುವುದಕ್ಕಾಗಿ.
6. ಹಳೆಯ ತೆರಿಗೆ ವ್ಯವಸ್ಥೆಯನ್ನು ಅನುಸರಿಸಲು ಅಥವಾ ಅದರಿಂದ ಹಿಂದೆ ಸರಿಯಲು ಫಾರ್ಮ್ 10-IEA ಸಲ್ಲಿಸಲು ಕಡೆಯ ದಿನಾಂಕ ಏನು?
ಆದಾಯ ತೆರಿಗೆ ಕಾನೂನಿನ ಅನ್ವಯ, ವ್ಯವಹಾರದಿಂದ ಬಂದ ಆದಾಯ ಹೊಂದಿರುವ ನೈಸರ್ಗಿಕ ವ್ಯಕ್ತಿಯು ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 139 (1)ರ ಅಡಿಯಲ್ಲಿ ITR ಸಲ್ಲಿಸುವ ಕೊನೆಯ ದಿನಾಂಕಕ್ಕೆ ಮೊದಲು ಫಾರ್ಮ್ 10-IEA ಸಲ್ಲಿಸಬೇಕು.
7. ITR-4 ರಿಟರ್ನ್ ಸಲ್ಲಿಸುವಾಗ ಎಲ್ಲ ಇಳಿಕೆಗಳೂ ಕ್ಲೇಮ್ ಮಾಡಲು ಲಭ್ಯವಿವೆಯೇ?
ಹೌದು, ಕೊನೆಯ ದಿನಾಂಕದೊಳಗೆ ಫಾರ್ಮ್ 10-IEA ಸಲ್ಲಿಸಿ, ಫಾರ್ಮ್ 10IEA ಸಲ್ಲಿಸಿದ ದಿನಾಂಕ ಮತ್ತು ರಿಟರ್ನಿನ ಸಲ್ಲಿಕೆ 'ಭಾಗ A ಸಾಮಾನ್ಯ-ವೈಯಕ್ತಿಕ ಮಾಹಿತಿ' ಯಲ್ಲಿನ ಸ್ವೀಕೃತಿ ಸಂಖ್ಯೆಯನ್ನು ಒದಗಿಸಿದನಂತರ ತೆರಿಗೆ ಪಾವತಿದಾರನು ಕೆಳಗಿನ ಪ್ರಶ್ನೆಗೆ ‘ಹೌದು, ಕೊನೆಯ ದಿನಾಂಕದೊಂದಿಗೆ’ ಎಂಬ ಆಯ್ಕೆಯ ಮೂಲಕ ‘ಮಾಮೂಲಿ ಹೊಸ ತೆರಿಗೆ ವ್ಯವಸ್ಥೆ’ ಯಿಂದ ‘ಹಳೆಯ ತೆರಿಗೆ ವ್ಯವಸ್ಥೆ’ ಎಂದು ಬದಲಾಯಿಸಿದೊಡನೆ, ಎಲ್ಲ ಇಳಿಕೆಗಳೂ ರಿಟರ್ನ್ ನಲ್ಲಿ ಕ್ಲೇಮ್ ಮಾಡಲು ಲಭ್ಯವಿರುತ್ತವೆ.

8. ITR-4 ಸಲ್ಲಿಸಲು ಯಾವ ದಾಖಲೆಗಳ ಅಗತ್ಯವಿದೆ? ITR ಸಲ್ಲಿಸಲು PANನೊಂದಿಗೆ ಆಧಾರ್ ಲಿಂಕ್ ಮಾಡುವುದು ಅಗತ್ಯವೇ?
ITR-4 ಸಲ್ಲಿಸುವಾಗ (ಅನ್ವಯಿಸುವ ಮಟ್ಟಿಗೆ) ಈ ಕೆಳಕಂಡ ದಾಖಲೆಗಳನ್ನು ಪೂರಕವಾಗಿ ಇಟ್ಟುಕೊಂಡಿರಬೇಕು:
- ಫಾರ್ಮ್ 16
- ಫಾರ್ಮ್ 16A
- ಫಾರ್ಮ್ 26AS
- AIS
- ವೇತನ ಪಟ್ಟಿ
- ಬ್ಯಾಂಕ್ ತಃಖ್ತೆ
- ಮನೆ ಸಾಲದ ಬಡ್ಡಿ ಪ್ರಮಾಣಪತ್ರ
- ಮನೆ ಬಾಡಿಗೆ ರಸೀತಿ (ಅನ್ವಯವಾದಲ್ಲಿ),
- ಬಾಡಿಗೆ ಕರಾರು
- ನೀಡಿದ ದೇಣಿಗೆಗಳಿಗೆ ರಸೀತಿ
- ಹೂಡಿಕೆ, ಪ್ರೀಮಿಯಂ ಪಾವತಿ ರಸೀದಿಗಳು - LIC, ULIP ಇತ್ಯಾದಿ, ಮತ್ತು ITR ಫಾರ್ಮ್ನಲ್ಲಿ ಮಾಹಿತಿ ಒದಗಿಸಲಿಕ್ಕಾಗಿ ಅಗತ್ಯವಿರುವ ಇತರ ದಾಖಲೆಗಳು.
ಆಧಾರ್ ಲಿಂಕ್ ಮಾಡುವುದು ಮತ್ತು PAN is important. ಆದರೆ, ಆಧಾರ್ ಜೊತೆ ನಿಮ್ಮ PAN ಲಿಂಕ್ ಆಗಿಲ್ಲದಿದ್ದರೂ ನೀವು ITR ಸಲ್ಲಿಸಬಹುದು, ಆದರೆ ಜಾಲತಾಣದಲ್ಲಿ ನಿಮ್ಮ ಚಟುವಟಿಕೆಗೆ ಸೀಮಿತ ಅವಕಾಶವಿರುತ್ತದೆ. ಆದ್ದರಿಂದ PAN ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಒಳ್ಳೆಯದು.
9. ITR-4 ಸಲ್ಲಿಸುವ ಬಳಕೆದಾರರಿಗಾಗಿ ಪೂರ್ವಗ್ರಹಿಕೆಯ ತೆರಿಗೆ ಯೋಜನೆ (presumptive taxation scheme) ಏನು ?
ಆದಾಯ ತೆರಿಗೆ ಕಾಯ್ದೆ ,1961ಯ ಸೆಕ್ಷನ್ 44AA ರ ಅನ್ವಯ, ವ್ಯವಹಾರ ಅಥವಾ ವೃತ್ತಿಯಲ್ಲಿ ತೊಡಗಿದ ವ್ಯಕ್ತಿಯು ಕೆಲವು ಸಂದರ್ಭಗಳಲ್ಲಿ, ನಿರ್ದಿಷ್ಟ ಶರತ್ತುಗಳ ಅನ್ವಯ ಸಾಮಾನ್ಯವಾದ ಲೆಕ್ಕಪತ್ರಗಳನ್ನು ಇಡಬೇಕಾಗುತ್ತದೆ. ಸಣ್ಣ ತೆರಿಗೆ ಪಾವತಿದಾರರನ್ನು ಅಂತಹ ಹೊರೆಯಿಂದ ರಕ್ಷಿಸಲಿಕ್ಕಾಗಿ ಆದಾಯತೆರಿಗೆ ಕಾಯ್ದೆಯು ಸೆಕ್ಷನ್ 44AD, 44ADA ಮತ್ತು 44AE ಅಡಿಯಲ್ಲಿ ಪೂರ್ವಗ್ರಹಿಕೆಯ ತೆರಿಗೆ ಯೋಜನೆಯನ್ನು ರೂಪಿಸಿದೆ. ಪೂರ್ವಗ್ರಹಿಕೆಯ ತೆರಿಗೆ ಯೋಜನೆ ಅನುಸರಿಸುವ ವ್ಯಕ್ತಿ ಪೂರ್ವಸೂಚಿತವಾದ ದರದಲ್ಲಿ ಆದಾಯವನ್ನು ಘೋಷಿಸಬಹುದು. ಕಾಯ್ದೆಯು (ITR-4 ಬಳಕೆದಾರರಿಗಾಗಿ) ಪೂರ್ವಗ್ರಹಿಕೆಯ ತೆರಿಗೆ ಯೋಜನೆಯನ್ನು ಈ ಕೆಳಕಂಡಂತೆ ರೂಪಿಸಿದೆ:
- ಸೆಕ್ಷನ್ 44AD: ಕೆಲವು ಷರತ್ತುಗಳಿಗೆ ಒಳಪಟ್ಟು, ಕೆಲವು ವ್ಯವಹಾರಗಳಲ್ಲಿ ತೊಡಗಿದ ತೆರಿಗೆ ಪಾವತಿದಾರರಿಗೆ (ಸ್ಥಳೀಯನಿವಾಸಿ ನೈಸರ್ಗಿಕ ವ್ಯಕ್ತಿ, ಸ್ಥಳೀಯನಿವಾಸಿ HUF (ಹಿಂದೂ ಅವಿಭಕ್ತ ಕುಟುಂಬ), ಅಥವಾ ಸ್ಥಳೀಯನಿವಾಸಿ ಪಾಲುದಾರಿಕೆ ಸಂಸ್ಥೆ (LLP ಬಿಟ್ಟು)) ಸಂಬಂಧಿಸಿದಂತೆ ಅಂದಾಜು ಆಧಾರದ ಮೇಲೆ ಆದಾಯದ ಗಣನೆ.
- ಸೆಕ್ಷನ್ 44ADA: ಅಂದಾಜು ಆಧಾರದ ಮೇಲೆ ವೃತ್ತಿಯಿಂದ ಬಂದ ಆದಾಯದ ಗಣನೆ, ಕೆಲವು ಷರತ್ತುಗಳಿಗೆ ಒಳಪಟ್ಟು - ತೆರಿಗೆದಾರರು ಭಾರತದ ಸ್ಥಳೀಯನಿವಾಸಿಯಾಗಿದ್ದು ಸೆಕ್ಷನ್ 44AA (1) ನಲ್ಲಿ ಉಲ್ಲೇಖಿಸಲಾದ ವೃತ್ತಿಯಲ್ಲಿ ತೊಡಗಿದ್ದರೆ.
- ಸೆಕ್ಷನ್ 44AE: ಅಂದಾಜು ಆಧಾರದ ಮೇಲೆ ಆದಾಯದ ಗಣನೆ - ಸರಕು ಸಾಗಣೆ ವಾಹನದ ಚಾಲನೆ, ಲೀಸ್ ಅಥವಾ ಬಾಡಿಗೆ ವ್ಯವಹಾರದಲ್ಲಿ ತೊಡಗಿರುವ, ಹಿಂದಿನ ವರ್ಷದ ಯಾವುದೇ ಅವಧಿಯಲ್ಲಿ ಹತ್ತಕ್ಕೆ ಹೆಚ್ಚಿಲ್ಲದ ಸರಕು ಸಾಗಣೆ ವಾಹನಗಳ ಮಾಲಿಕರಾಗಿದ್ದ ತೆರಿಗೆ ಪಾವತಿದಾರರಿಗೆ (ನೈಸರ್ಗಿಕ ವ್ಯಕ್ತಿ, HUF (ಹಿಂದೂ ಅವಿಭಕ್ತ ಕುಟುಂಬ), ಪಾಲುದಾರಿಕೆ (LLP ಬಿಟ್ಟು) ಅಥವಾ ಸ್ಥಳೀಯನಿವಾಸಿ ಅಥವಾ ಅನಿವಾಸಿ (Non resident) ಬೇರೆ ಯಾವುದೇ ವ್ಯಕ್ತಿ)
10. ಸೆಕ್ಷನ್ 44AD ಮತ್ತು ಸೆಕ್ಷನ್ 44ADA ಅಡಿಯಲ್ಲಿ ಪೂರ್ವಗ್ರಹಿಕೆಯ ತೆರಿಗೆ ಯೋಜನೆ ಆಯ್ದುಕೊಳ್ಳಲು ಇರುವ ತಾಳಿಕೆ ಮಿತಿ ಏನು?
ಸೆಕ್ಷನ್ 44AD ಅಡಿಯಲ್ಲಿ ವಹಿವಾಟಿನ ತಾಳಿಕೆ ಮಿತಿ ರೂ.3 ಕೋಟಿ (ನಗದು ಮತ್ತು ಇನ್ನಾವುದೇ ರೂಪದಲ್ಲಿ ಪಡೆದ ಒಟ್ಟು ಮೊತ್ತ ಅಥವಾ ಹಿಂದಿನ ವರ್ಷದಲ್ಲಿ ಪಡೆದ ಒಟ್ಟು ಮೊತ್ತಗಳು, ಆ ಹಿಂದಿನ ವರ್ಷಗಳ ಒಟ್ಟು ಸಮಗ್ರ ರಸೀದಿ (total gross receipts)ಯ ಶೇ. 5ನ್ನು ಮೀರದಿದ್ದರೆ) ಮತ್ತು ಬೇರೆ ಸಂದರ್ಭಗಳಲ್ಲಿ ರೂ.2 ಕೋಟಿ.
ಸೆಕ್ಷನ್ 44ADA ಅಡಿಯಲ್ಲಿ ವಹಿವಾಟಿನ ತಾಳಿಕೆ ಮಿತಿ ರೂ.75 ಲಕ್ಷ (ನಗದು ಮತ್ತು ಇನ್ನಾವುದೇ ರೂಪದಲ್ಲಿ ಪಡೆದ ಒಟ್ಟು ಮೊತ್ತ ಅಥವಾ ಹಿಂದಿನ ವರ್ಷದಲ್ಲಿ ಪಡೆದ ಒಟ್ಟು ಮೊತ್ತಗಳು, ಆ ಹಿಂದಿನ ವರ್ಷಗಳ ಒಟ್ಟು ಸಮಗ್ರ ರಸೀದಿ (total gross receipts)ಯ ಶೇ. 5ನ್ನು ಮೀರದಿದ್ದರೆ) ಮತ್ತು ಬೇರೆ ಸಂದರ್ಭಗಳಲ್ಲಿ ರೂ.50 ಲಕ್ಷ.
11. ಸೆಕ್ಷನ್ 44ADಯ ಪೂರ್ವಗ್ರಹಿಕೆಯ ತೆರಿಗೆ ಯೋಜನೆಗೆ ಅರ್ಹರಲ್ಲದವರು ಯಾರು?
ಸೆಕ್ಷನ್ 44AD ಯೋಜನೆಯನ್ನು, ಈ ಕೆಳಕಂಡ ವ್ಯವಹಾರಗಳನ್ನು ಬಿಟ್ಟು ಇನ್ನುಳಿದ ವ್ಯವಹಾರಗಳಲ್ಲಿ ತೊಡಗಿರುವ ಸಣ್ಣ ತೆರಿಗೆ ಪಾವತಿದಾರರ ಹೊರೆ ತಗ್ಗಿಸಲೋಸುಗ ವಿನ್ಯಾಸಗೊಳಿಸಲಾಗಿದೆ:
- ಸೆಕ್ಷನ್ 44AEನಲ್ಲಿ ಉಲ್ಲೇಖಿಸಿರುವಂತೆ ಸರಕುಸಾಗಣೆ ವಾಹನಗಳನ್ನು ನಡೆಸುವ, ಬಾಡಿಗೆ ಅಥವಾ ಗುತ್ತಿಗೆಗೆ ಬಿಡುವ ವ್ಯವಹಾರ
- ಏಜೆನ್ಸಿ ವ್ಯವಹಾರ ನಡೆಸುತ್ತಿರುವ ವ್ಯಕ್ತಿ
- ಕಮಿಶನ್ ಅಥವಾ ಬ್ರೋಕರೇಜ್ ರೂಪದಲ್ಲಿ ಆದಾಯ ಗಳಿಸುವ ವ್ಯಕ್ತಿ (ಉದಾ: ವಿಮಾ ಏಜೆಂಟರು)
- ಒಟ್ಟು ವಹಿವಾಟು ಅಥವಾ ಸಮಗ್ರ ರಸೀದಿ (gross receipts) ₹ 2 ಕೋಟಿಯನ್ನು ಮೀರಿದ ಯಾವುದೇ ವ್ಯವಹಾರ
- ಒಟ್ಟು ವಹಿವಾಟು ಅಥವಾ ಸಮಗ್ರ ರಸೀದಿ ₹ 3 ಕೋಟಿ ಮೀರಿರುವ ವ್ಯವಹಾರಗಳು (₹ 3 ಕೋಟಿಯು, ನಗದು ಮತ್ತು ಇನ್ನಾವುದೇ ರೂಪದಲ್ಲಿ ಪಡೆದ ಮೊತ್ತ ಅಥವಾ ಹಿಂದಿನ ವರ್ಷದಲ್ಲಿ ಪಡೆದ ಮೊತ್ತಗಳು, ಆ ಹಿಂದಿನ ವರ್ಷಗಳ ಒಟ್ಟು ಸಮಗ್ರ ರಸೀದಿ (total gross receipts)ಯ ಶೇ. 5ನ್ನು ಮೀರದಿದ್ದರೆ ಅನ್ವಯ)
ಮೇಲ್ಕಂಡದ್ದಲ್ಲದೇ, ಸೆಕ್ಷನ್ 44AA (1) ರಲ್ಲಿ ಉಲ್ಲೇಖಿಸಿದಂತೆ ಲೆಕ್ಕಪತ್ರಗಳನ್ನಿಡಬೇಕಾಗಿರುವ ವ್ಯಕ್ತಿ ಸೆಕ್ಷನ್ 44AD ಅಡಿಯಲ್ಲಿ ಪೂರ್ವಗ್ರಹಿಕೆಯ ತೆರಿಗೆ ಯೋಜನೆಗೆ ಅರ್ಹನಿರುವುದಿಲ್ಲ.
12. ನನ್ನ ವ್ಯವಹಾರದ ವಾರ್ಷಿಕ ಸಮಗ್ರ ರಸೀದಿ (Gross receipts) ₹ 3 ಕೋಟಿ ಮೀರಿದೆ. ನಾನು ಸೆಕ್ಷನ್ 44AD ಪೂರ್ವಗ್ರಹಿಕೆಯ ತೆರಿಗೆ ಯೋಜನೆಯನ್ನು ಆಯ್ದುಕೊಳ್ಳಬಹುದೇ?
ಇಲ್ಲ. ನಿಮ್ಮ ವ್ಯವಹಾರದ ಒಟ್ಟು ವಹಿವಾಟು ಅಥವಾ ಸಮಗ್ರ ರಸೀದಿಯು (Gross receipts) ನಿಗದಿಪಡಿಸಿದ ಮಿತಿ (ಎಂದರೆ, ₹ 3 ಕೋಟಿ) ಮೀರದಿದ್ದಲ್ಲಿ ಮಾತ್ರ ನೀವು ಸೆಕ್ಷನ್ 44ADಯ ಪೂರ್ವಗ್ರಹಿಕೆಯ ತೆರಿಗೆ ಯೋಜನೆಯನ್ನು ಆಯ್ದುಕೊಳ್ಳಬಹುದು.
13. ಸೆಕ್ಷನ್ 44ADAರ ಪೂರ್ವಗ್ರಹಿಕೆಯ ತೆರಿಗೆ ಯೋಜನೆಯನ್ನು ಯಾರು ಬಳಸಿಕೊಳ್ಳಬಹುದು?
ತೆರಿಗೆದಾರರು ನೈಸರ್ಗಿಕ ವ್ಯಕ್ತಿ ಅಥವಾ ಪಾಲುದಾರಿಕೆ ಸಂಸ್ಥೆ (LLP ಬಿಟ್ಟು) ಮತ್ತು ಭಾರತದ ಸ್ಥಳೀಯನಿವಾಸಿಯಾಗಿದ್ದು, ನಿರ್ದಿಷ್ಟಪಡಿಸಿದ ವೃತ್ತಿಯಲ್ಲಿ ತೊಡಗಿದ್ದು, ಅದರ ಸಮಗ್ರ ರಸೀದಿ (Gross receipts) ಹಣಕಾಸು ವರ್ಷ (FY)ದಲ್ಲಿ ₹ 50 ಲಕ್ಷ ಮೀರದಿದ್ದರೆ, ಅವರು ಸೆಕ್ಷನ್ 44ADAಯ ಪೂರ್ವಗ್ರಹಿಕೆಯ ತೆರಿಗೆ ಯೋಜನೆಯನ್ನು ಅಳವಡಿಸಿಕೊಳ್ಳಬಹುದು.
ನಗದಿನಲ್ಲಿ ಪಡೆದ ಮೊತ್ತ ಅಥವಾ ಹಿಂದಿನ ವರ್ಷದಲ್ಲಿ ನಗದಿನಲ್ಲಿ ಪಡೆದ ಮೊತ್ತಗಳು, ಆ ಹಿಂದಿನ ವರ್ಷಗಳ ಒಟ್ಟು ಸಮಗ್ರ ರಸೀದಿ (total gross receipts)ಯ ಶೇಕಡಾ ಐದನ್ನು ಮೀರದಿದ್ದರೆ, ಆಗ ಹಣಕಾಸು ವರ್ಷ (FY)ವೊಂದಕ್ಕೆ 75 ಲಕ್ಷದ ವರೆಗೂ ಮಿತಿ.
ನಿರ್ದಿಷ್ಟಪಡಿಸಿದ ವೃತ್ತಿಗಳೆಂದರೆ ಈ ಕೆಳಕಂಡ ವೃತ್ತಿಗಳು:
- ಕಾನೂನು (Legal)
- ಔಷಧ (Medical)
- ಇಂಜಿನಿಯರಿಂಗ್ ಅಥವಾ ವಿನ್ಯಾಸ
- ಲೆಕ್ಕಪತ್ರ (Accountancy)
- ತಾಂತ್ರಿಕ ಸಲಹೆ
- ಒಳಾಂಗಣವಿನ್ಯಾಸ
- CBDTಯಿಂದ ನಿರ್ದಿಷ್ಟಗೊಳಿಸಲ್ಪಟ್ಟ ಬೇರೆ ಯಾವುದೇ ವೃತ್ತಿ
14. ನಾನು ಸೆಕ್ಷನ್ 44AD ಅಥವಾ 44ADAರ ಪೂರ್ವಗ್ರಹಿಕೆಯ ಆದಾಯ ಯೋಜನೆಯನ್ನು ಆಯ್ಕೆ ಮಾಡಿಕೊಂಡೆ. ಸಂಬಂಧಪಟ್ಟ ಸಮಗ್ರ ರಸೀದಿ (Gross receipts) ವಿಭಾಗಗಳಲ್ಲಿ ಅನ್ವಯಿಸುವ ದರದಲ್ಲಿ ಲಾಭವನ್ನು ಘೋಷಿಸಿದನಂತರ ನಾನು ವೆಚ್ಚಗಳಿಗಾಗಿ ಮತ್ತಷ್ಟು ಇಳಿಕೆಯನ್ನು ಕ್ಲೇಮ್ ಮಾಡಬಹುದೇ?
ಇಲ್ಲ, ಪೂರ್ವಗ್ರಹಿಕೆಯ ತೆರಿಗೆ ಯೋಜನೆ ಆಯ್ದುಕೊಂಡ ವ್ಯಕ್ತಿ ಎಲ್ಲ ವೆಚ್ಚಗಳಿಗೂ ಇಳಿಕೆಯನ್ನು ಕ್ಲೇಮ್ ಮಾಡಿರುತ್ತಾರೆಂದೇ ಪರಿಗಣಿಸಲಾಗುತ್ತದೆ. ನಿರ್ದಿಷ್ಟ ದರದಲ್ಲಿ ಲಾಭವನ್ನು ಘೋಷಿಸಿದನಂತರ ಇನ್ನಾವುದೇ ಇಳಿಕೆಯನ್ನು ಅನುಮತಿಸಲಾಗುವುದಿಲ್ಲ. ಆದರೆ ಅಧ್ಯಾಯ VI-A ಅಡಿಯಲ್ಲಿ ಇಳಿಕೆಗಳನ್ನು ಕ್ಲೇಮ್ ಮಾಡಬಹುದು.
15. ನಾನು ಸೆಕ್ಷನ್ 44ADAಯ ಪೂರ್ವಗ್ರಹಿಕೆಯ ಆದಾಯ ಯೋಜನೆ ಆಯ್ದುಕೊಂಡೆ. ನಾನು ಸೆಕ್ಷನ್ 44ADAದಲ್ಲಿ ನಮೂದಿಸಿದ ವೃತ್ತಿಯಿಂದ ಬಂದ ಆದಾಯಕ್ಕೆ ಮುಂಗಡ ತೆರಿಗೆ ಪಾವತಿ ಮಾಡಬೇಕೇ?
ಹೌದು. ಸೆಕ್ಷನ್ 44ADA ಅನ್ವಯ ಪೂರ್ವಗ್ರಹಿಕೆಯ ತೆರಿಗೆ ಯೋಜನೆಯನ್ನು ಅನುಸರಿಸುವ ಯಾರೇ ಆದರೂ ಹಿಂದಿನ ವರ್ಷದ ಮಾರ್ಚ್ 15ರಂದು ಅಥವಾ ಒಳಗೆ ಶೇ. 100% ಮುಂಗಡ ತೆರಿಗೆ ಪಾವತಿಸಲು ಬಾಧ್ಯರಾಗಿರುತ್ತಾರೆ. ಹಿಂದಿನ ವರ್ಷದ ಮಾರ್ಚ್ 15ರಂದು ಅಥವಾ ಒಳಗೆ ಮುಂಗಡ ತೆರಿಗೆ ಪಾವತಿಸುವಲ್ಲಿ ವಿಫಲರಾದರೆ, ಸೆಕ್ಷನ್ 234B ಮತ್ತು ಸೆಕ್ಷನ್ 234Cರ ಅನ್ವಯ ಬಡ್ಡಿ ಪಾವತಿಸಬೇಕಾಗುತ್ತದೆ. ಹಿಂದಿನ ವರ್ಷದ ಮಾರ್ಚ್ 31ರಂದು ಅಥವಾ ಒಳಗೆ ಮುಂಗಡ ತೆರಿಗೆಯಾಗಿ ಪಾವತಿಸಿದ ಮೊತ್ತವನ್ನೂ ಆ ದಿನಕ್ಕೆ ಕೊನೆಯಾದ ಹಣಕಾಸು ವರ್ಷ (FY)ಕ್ಕೆ ಪಾವತಿ ಮಾಡಿದ ಮುಂಗಡ ತೆರಿಗೆ ಎಂದೇ ಪರಿಗಣಿಸಲಾಗುತ್ತದೆ.
16. ನಾನು ಸೆಕ್ಷನ್ 44ADAದ ಪೂರ್ವಗ್ರಹಿಕೆಯ ತೆರಿಗೆ ಯೋಜನೆಯನ್ನು ಆಯ್ಕೆ ಮಾಡಿಕೊಂಡೆ. ನಾನು ಸೆಕ್ಷನ್ 44AAರ ಅನ್ವಯ ಲೆಕ್ಕಪತ್ರಗಳನ್ನು ಇಡಬೇಕೇ?
ನೀವು ಸೆಕ್ಷನ್ 44AA (1)ರಲ್ಲಿ ಉಲ್ಲೇಖಿಸಿದ ನಿರ್ದಿಷ್ಟ ವೃತ್ತಿಯಲ್ಲಿದ್ದರೆ ಮತ್ತು ಸೆಕ್ಷನ್ 44ADAರ ಪೂರ್ವಗ್ರಹಿಕೆಯ ತೆರಿಗೆ ಯೋಜನೆಯನ್ನು ಆಯ್ದುಕೊಂಡಿದ್ದರೆ (ಸಮಗ್ರ ರಸೀದಿ (Gross receipts)ಯ @50% ಆದಾಯ ಘೋಷಣೆ), ಆ ನಿರ್ದಿಷ್ಟ ವೃತ್ತಿಗಿ ಸಂಬಂಧಿಸಿದಂತೆ ಲೆಕ್ಕಪತ್ರಗಳನ್ನು ಇಡುವ ಅಗತ್ಯವಿಲ್ಲ (ಎಂದರೆ ಸೆಕ್ಷನ್ 44AA ನಿಯಮಗಳು ಅನ್ವಯಿಸುವುದಿಲ್ಲ).
17. ನಾನು ಸೆಕ್ಷನ್ 44AEಯ ಪೂರ್ವಗ್ರಹಿಕೆಯ ಆದಾಯ ಯೋಜನೆ ಆಯ್ದುಕೊಂಡೆ. ನಾನು ಸೆಕ್ಷನ್ 44AEದಲ್ಲಿ ನಮೂದಿಸಿದ ವ್ಯವಹಾರದಿಂದ ಬಂದ ಆದಾಯಕ್ಕೆ ಮುಂಗಡ ತೆರಿಗೆ ಪಾವತಿ ಮಾಡಬೇಕೇ?
ಹೌದು, ನೀವು ಮುಂಗಡ ತೆರಿಗೆ ಪಾವತಿ ಮಾಡಬೇಕು. ಸೆಕ್ಷನ್ 44AEಯ ಪೂರ್ವಗ್ರಹಿಕೆಯ ತೆರಿಗೆ ಯೋಜನೆ ಆಯ್ಕೆ ಮಾಡಿಕೊಂಡದ್ದಕ್ಕೆ ಮುಂಗಡ ತೆರಿಗೆ ಪಾವತಿಯಿಂದ ಯಾವುದೇ ವಿನಾಯಿತಿ ಇಲ್ಲ.
18. ಭಾಗಶಃ ಸ್ವಂತ ವಾಸ ಮತ್ತು ಭಾಗಶಃ ಬಾಡಿಗೆಗೆ ಬಿಟ್ಟಿರುವ ಮನೆ ಆಸ್ತಿ ಆದಾಯ ಗಣನೆ ಮಾಡುವುದು ಹೇಗೆ?
ಮನೆ ಆಸ್ತಿಯು ಎರಡು ಅಥವಾ ಹೆಚ್ಚು ಸ್ವತಂತ್ರ ಘಟಕಗಳನ್ನು ಹೊಂದಿರಬಹುದು, ಒಂದು ಸ್ವಂತ ವಾಸಕ್ಕೆ, ಮತ್ತು ಇನ್ನೊಂದು ಬೇರಾವುದೇ ಬಳಕೆಗೆ (ಎಂದರೆ, ಬಾಡಿಗೆಗೆ ಅಥವಾ ಸ್ವಂತ ವ್ಯವಹಾರಕ್ಕೆ). ಅಂತಹ ಆಸ್ತಿಯಿಂದ ಬಂದ ಆದಾಯವನ್ನು ಈ ಕೆಳಕಂಡಂತೆ ಗಣಿಸಲಾಗುವುದು:
- ವರ್ಷವಿಡೀ ನೀವು ನಿಮ್ಮ ವಾಸಕ್ಕಾಗಿ ಬಳಸಿದ ಭಾಗ / ಘಟಕವನ್ನು ಸ್ವತಂತ್ರ ಆಸ್ತಿಯೆಂದು ಪರಿಗಣಿಸಲಾಗುವುದು ಮತ್ತು ಅಂತಹ ಭಾಗ / ಘಟಕದ ಆದಾಯವನ್ನು ITR-4 ಬಳಕೆದಾರರ ಕೈಪಿಡಿಯ ಸ್ವಂತ ವಾಸದ ಆಸ್ತಿ ವಿಷಯದಲ್ಲಿ ಸೂಚಿಸಿರುವಂತೆ ಗಣಿಸಲಾಗುವುದು.
- ಬಾಡಿಗೆಗೆ ಬಿಟ್ಟ ಭಾಗ / ಘಟಕವನ್ನು ಸ್ವತಂತ್ರ ಆಸ್ತಿಯೆಂದು ಪರಿಗಣಿಸಲಾಗುವುದು ಮತ್ತು ಅಂತಹ ಭಾಗ / ಘಟಕದ ಆದಾಯವನ್ನು ITR-4 ಬಳಕೆದಾರರ ಕೈಪಿಡಿಯಲ್ಲಿ ಬಾಡಿಗೆಗೆ ಬಿಟ್ಟ ಆಸ್ತಿ ವಿಷಯದಲ್ಲಿ ಸೂಚಿಸಿರುವಂತೆ ಗಣಿಸಲಾಗುವುದು.
ದಯವಿಟ್ಟು ಗಮನಿಸಿ: ತೆರಿಗೆ ನಿರ್ಧರಣೆ ವರ್ಷ (AY) 2026-27ದಿಂದ, ITR-4ನಲ್ಲಿ ನೀವು ಎರಡು ಮನೆ ಆಸ್ತಿಗಳವರೆಗೂ ಆದಾಯವನ್ನು ತೋರಿಸಬಹುದು.
19. ಸೆಕ್ಷನ್ 80DD ಮತ್ತು 80U ಅಡಿಯಲ್ಲಿ ಇಳಿಕೆಗಳನ್ನು ಕೋರುವುದಾದರೆ ಯಾವುದಾದರೂ ಫಾರ್ಮ್ ಸಲ್ಲಿಸಬೇಕೇ?
ಸೆಕ್ಷನ್ 80DD ಮತ್ತು 80U ಅಡಿಯಲ್ಲಿ ಇಳಿಕೆಯನ್ನು ಕ್ಲೇಮ್ ಮಾಡುವುದಿದ್ದರೆ ಆದಾಯದ ರಿಟರ್ನ್ ಫೈಲ್ ಮಾಡುವ ಮೊದಲು ಫಾರ್ಮ್ 10 IAಅನ್ನು ಕಡ್ಡಾಯವಾಗಿ ಸಲ್ಲಿಸಿರಬೇಕು ಮತ್ತು ಆದಾಯದ ರಿಟರ್ನ್ ಸಲ್ಲಿಸುವಾಗ 80DD ಮತ್ತು 80U ಪರಿಶಿಷ್ಟದಲ್ಲಿ ಫಾರ್ಮ್ 10 IA ವಿವರಗಳನ್ನು ನಮೂದಿಸಬೇಕು (ಫಾರ್ಮ್ ಸಲ್ಲಿಸಿದ ದಿನಾಂಕ ಮತ್ತು ಸ್ವೀಕೃತಿ ಸಂಖ್ಯೆ).
20. ವಸೂಲಿಯಾಗದ ಬಾಡಿಗೆ ಆಮೇಲೆ ವಸೂಲಿಯಾದಲ್ಲಿ ಅದರ ಮೇಲಿನ ತೆರಿಗೆ ವಿಚಾರ ಹೇಗೆ?
ವಸೂಲಿಯಾಗದ ಬಾಡಿಗೆ ಮುಂದೊಮ್ಮೆ ವಸೂಲಿಯಾದಲ್ಲಿ ಅದನ್ನು ಆ ಬಾಡಿಗೆ ವಸೂಲಿಯಾದ ವರ್ಷದಲ್ಲಿ ಮನೆ ಆಸ್ತಿಯ ಆದಾಯ ಶೀರ್ಷಿಕೆಯಡಿಯಲ್ಲಿ ನಿಮ್ಮ ಆದಾಯವೆಂದು ಪರಿಗಣಿಸಲಾಗುವುದು (ನೀವು ಆ ವರ್ಷದಲ್ಲಿ ಆ ಆಸ್ತಿಯ ಮಾಲಿಕರಾಗಿದ್ದರೂ ಆಗಿರದಿದ್ದರೂ). ವಸೂಲಿಯಾಗದ ಬಾಡಿಗೆಯ ಶೇ 30 ಕಳೆದು ಉಳಿದ ಮೊತ್ತವನ್ನು ತೆರಿಗೆ ವಿಧಿಸಲು ಪರಿಗಣಿಸಲಾಗುವುದು.
21. TAN ಬದಲು ನಮ್ಮ ಉದ್ಯೋಗದಾತರ PAN ನಮೂದಿಸಬಹುದೇ?
ಇಲ್ಲ. PAN ಮತ್ತು TAN ಗಳನ್ನು ಕೊಡಮಾಡುವ ಉದ್ದೇಶಗಳು ಬೇರೆಯಾದುದರಿಂದ, TANಗಾಗಿ ಇರುವ ಚೌಕಳಿಯಲ್ಲಿ PANಅನ್ನು ನಮೂದಿಸಬಾರದು. TAN ಎಂಬುದು ಮೂಲದಲ್ಲೇ ತೆರಿಗೆ ಕಡಿತಗೊಳಿಸುವ ಅಥವಾ ಸಂಗ್ರಹಿಸುವವರಿಗೆ ನೀಡಲಾದ ವಿಶಿಷ್ಟ ಗುರುತಿನ ಸಂಖ್ಯೆ. PAN ಎಂಬುದು ವ್ಯಕ್ತಿಯ ತೆರಿಗೆ ಪಾವತಿ, TDS / TCS credit, ಆದಾಯದ ರಿಟರ್ನ್, ಸಂಪತ್ತಿನ ರಿಟರ್ನ್, ಆದಾಯ ತೆರಿಗೆ ಇಲಾಖೆ ಅಥವಾ ITDಯೊಂದಿಗಿನ ಪತ್ರವ್ಯವಹಾರಗಳು, ವ್ಯಕ್ತಿಯು ಮಾಡಿರುವ ಹೂಡಿಕೆಗಳು (Investments), ವ್ಯಕ್ತಿ ಹೊಂದಿರುವ ಸಾಲ, ಮುಂತಾದ ವಹಿವಾಟುಗಳನ್ನು ಸಂಪರ್ಕದಲ್ಲಿರಿಸಲು ಕೊಡಮಾಡಿರುವ ವಿಶಿಷ್ಟ ಗುರುತಿನ ಸಂಖ್ಯೆ.
22. ತೆರಿಗೆ ನಿರ್ಧರಣೆ ವರ್ಷ (AY) 2026-27 (ಹಣಕಾಸು ವರ್ಷ (FY) 2025-26)ಕ್ಕೆ ITR-4 ಸಲ್ಲಿಸಲು ಕೊನೆಯ ದಿನಾಂಕ ಏನು?
ತೆರಿಗೆ ನಿರ್ಧರಣೆ ವರ್ಷ (AY) 2026-27 (ಹಣಕಾಸು ವರ್ಷ (FY) 2025-26)ಕ್ಕೆ ITR-4 ಸಲ್ಲಿಸಲು ಕೊನೆಯ ದಿನಾಂಕ 31ನೆಯ ಆಗಸ್ಟ್ 2026.
23. ಸೆಕ್ಷನ್ 87A ಅನ್ವಯ ಹೊಸ ತೆರಿಗೆ ವ್ಯವಸ್ಥೆ ಮತ್ತು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ರಿಯಾಯಿತಿ ಏನು?
ಸದ್ಯದಲ್ಲಿ, ಸೆಕ್ಷನ್ 87A ನೈಸರ್ಗಿಕ ವ್ಯಕ್ತಿಗಳಿಗೆ ಹಳೆಯ ತೆರಿಗೆ ವ್ಯವಸ್ಥೆಯಡಿಯಲ್ಲಿ ರೂ 12,500 ಮತ್ತು ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ರೂ 60,000 ರಿಯಾಯಿತಿ ಕ್ಲೇಮ್ ಮಾಡಲು ಅನುಮತಿಸುತ್ತದೆ.
24. ಕಳೆದ ನಾಲ್ಕು ತೆರಿಗೆ ನಿರ್ಧರಣೆ ವರ್ಷಗಳ ITRನ್ನು ಈಗ ಸಲ್ಲಿಸಬಹುದೇ?
ಹೌದು, ನೀವು ಕಳೆದ ನಾಲ್ಕು ವರ್ಷದ ITR ಸಲ್ಲಿಸಿಲ್ಲದಿದ್ದಲ್ಲಿ ನೀವು ITR-U ಸಲ್ಲಿಸಬಹುದು. ಪ್ರಸಕ್ತ ವರ್ಷಕ್ಕೆ (ತೆರಿಗೆ ನಿರ್ಧರಣೆ ವರ್ಷ (AY) 2026-27) ನೀವು ನಿಮ್ಮ ಸಾಮಾನ್ಯ ITR ಸಲ್ಲಿಸಬಹುದು.
25. ಸೆಕ್ಷನ್ 139(1) ಅನ್ವಯ ಕಡೆಯ ದಿನಾಂಕವಾದ ಬಳಿಕ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ ಏನಾಗುತ್ತದೆ?
ಸೆಕ್ಷನ್ 139(1)ರ ಕೊನೆಯ ದಿನಾಂಕದೊಳಗೆ ITR ಸಲ್ಲಿಸಲು ಆಗದಿದ್ದರೂ ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು, ಆದರೆ ರೂ. 5000ದ ವರೆಗೂ ವಿಳಂಬಶುಲ್ಕ ಪಾವತಿಸಬೇಕಾಗಬಹುದು. ಅಲ್ಲದೇ ತೆರಿಗೆ ಬಾಧ್ಯತೆಯ ಮೇಲೆ ಬಡ್ಡಿಯನ್ನೂ (ಇದ್ದರೆ) ತೆರಬೇಕಾಗಬಹುದು.
26. ಸೆಕ್ಷನ್ 80C ಅಡಿಯಲ್ಲಿ ಇಳಿಕೆಗಳನ್ನು ಕೋರುವುದಾದರೆ ಹೆಚ್ಚುವರಿ ಮಾಹಿತಿ ನೀಡಬೇಕೇ?
ಸೆಕ್ಷನ್ 80C ಅಡಿಯಲ್ಲಿ ಇಳಿಕೆಗಾಗಿ ನೀವು ಹೆಚ್ಚುವರಿ ಮಾಹಿತಿ ನೀಡಬೇಕು. ಸೆಕ್ಷನ್ 80C ಅಡಿಯಲ್ಲಿ ಇಳಿಕೆಯನ್ನು ಕ್ಲೇಮ್ ಮಾಡಲು ಇಚ್ಛಿಸಿದಲ್ಲಿ, ಈ ಕೆಳಕಂಡ ವಿವರಗಳನ್ನು ನೀಡಬೇಕು:
- ಇಳಿಕೆಗೆ ಅರ್ಹವಾಗಿರುವ ಮೊತ್ತ
- ಪಾಲಿಸಿ ಸಂಖ್ಯೆ ಅಥವಾ ದಾಖಲೆ ಗುರುತಿನ ಸಂಖ್ಯೆ

27. ಸೆಕ್ಷನ್ 80CCD(1) ಅಥವಾ 80CCD(1B) ಅಡಿಯಲ್ಲಿ ಇಳಿಕೆಗಳನ್ನು ಕೋರುವುದಾದರೆ ಹೆಚ್ಚುವರಿ ಮಾಹಿತಿ ನೀಡಬೇಕೇ?
ಸೆಕ್ಷನ್ 80CCD(1) ಅಥವಾ 80CCD(1B) ಅಡಿಯಲ್ಲಿ ಇಳಿಕೆಗಾಗಿ ನೀವು ಹೆಚ್ಚುವರಿ ಮಾಹಿತಿ ನೀಡಬೇಕು. ಈ ಇಳಿಕೆಗಳನ್ನು ಕ್ಲೇಮ್ ಮಾಡಲು ಇಚ್ಛಿಸಿದಲ್ಲಿ, PRAN ಟ್ಯಾಬನ್ನು ಕ್ಲಿಕ್ ಮಾಡಿ ನೀವು PRAN ನಮೂದಿಸಬೇಕು.

PRAN ಟ್ಯಾಬಿನಲ್ಲಿ ನೀವು PRAN ನಮೂದಿಸಲು ಮರೆತರೆ, ಈ ಕೆಳಕಂಡ ವ್ಯಾಲಿಡೇಶನ್ ಎರರ್ ಬರುತ್ತದೆ

28. ಸೆಕ್ಷನ್ 80DD ಅಥವಾ 80U ಅಡಿಯಲ್ಲಿ ಇಳಿಕೆಗಳನ್ನು ಕ್ಲೇಮ್ ಮಾಡಬೇಕಾದರೆ ITR-4 ಫಾರ್ಮ್ ನಲ್ಲಿ ಒದಗಿಸಬೇಕಾದ ಹೆಚ್ಚುವರಿ ಮಾಹಿತಿಗಳು ಯಾವುವು?
ಸೆಕ್ಷನ್ 80DD ಅಥವಾ ಸೆಕ್ಷನ್ 80U ಅಡಿಯಲ್ಲಿ ಇಳಿಕೆಗಾಗಿ ನೀವು ಹೆಚ್ಚುವರಿ ಮಾಹಿತಿ ನೀಡಬೇಕು. ಸೆಕ್ಷನ್ 80DD ಅಥವಾ 80U ಅಡಿಯಲ್ಲಿ ಇಳಿಕೆಯನ್ನು ಕ್ಲೇಮ್ ಮಾಡಲು ಇಚ್ಛಿಸಿದಲ್ಲಿ, ಈ ಕೆಳಕಂಡ ವಿವರಗಳನ್ನು ನೀಡಬೇಕು:
- ಅಂಗವೈಕಲ್ಯದ ಸ್ವರೂಪ
- ಅಂಗವೈಕಲ್ಯದ ವಿಧ
- ಅವಲಂಬಿತರ ವಿಧ
- ಇಳಿಕೆಯ ಮೊತ್ತ
- ಅವಲಂಬಿತರ PAN
- ಅವಲಂಬಿತರ ಆಧಾರ್
- ಫಾರ್ಮ್ 10 IA ಸಲ್ಲಿಕೆಯ ಸ್ವೀಕೃತಿ ಸಂಖ್ಯೆ
ಸೆಕ್ಷನ್ 80DD ಅಡಿಯಲ್ಲಿ ಇಳಿಕೆಗಳು:

ಸೆಕ್ಷನ್ 80U ಅಡಿಯಲ್ಲಿ ಇಳಿಕೆಗಳು:

29. ಸೆಕ್ಷನ್ 80D ಅಡಿಯಲ್ಲಿ ಇಳಿಕೆಗಳನ್ನು ಕೋರುವುದಾದರೆ ನಾನು ಹೆಚ್ಚುವರಿ ಮಾಹಿತಿ ನೀಡಬೇಕೇ?
ಸೆಕ್ಷನ್ 80D ಅಡಿಯಲ್ಲಿ ಇಳಿಕೆಗಾಗಿ ನೀವು ಹೆಚ್ಚುವರಿ ಮಾಹಿತಿ ನೀಡಬೇಕು. ಸೆಕ್ಷನ್ 80D ಅಡಿಯಲ್ಲಿ ಇಳಿಕೆಯನ್ನು ಕ್ಲೇಮ್ ಮಾಡಲು ಇಚ್ಛಿಸಿದಲ್ಲಿ, ಈ ಕೆಳಕಂಡ ವಿವರಗಳನ್ನು ನೀಡಬೇಕು:
- ವಿಮೆ ಮಾಡುವವರ ಹೆಸರು (ವಿಮಾ ಕಂಪನಿ)
- ಪಾಲಿಸಿ ಸಂಖ್ಯೆ
- ಆರೋಗ್ಯ ವಿಮೆ ಮೊತ್ತ

30. ಸೆಕ್ಷನ್ 80E, 80EE, 80EEA ಮತ್ತು 80EEB ಅಡಿಯಲ್ಲಿ ಇಳಿಕೆಗಳನ್ನು ಕ್ಲೇಮ್ ಮಾಡಬೇಕಾದರೆ ನಾನು ಹೆಚ್ಚುವರಿ ಮಾಹಿತಿ ನೀಡಬೇಕೇ?
ಸೆಕ್ಷನ್ 80E, 80EE ,80EEA ಮತ್ತು 80EEB ಅಡಿಯಲ್ಲಿ ಇಳಿಕೆ ವಿಷಯವಾಗಿ ನೀವು ಹೆಚ್ಚುವರಿ ಮಾಹಿತಿ ನೀಡಬೇಕು. ಈ ಸೆಕ್ಷನ್ನುಗಳ ಅಡಿಯಲ್ಲಿ ಇಳಿಕೆ ಕ್ಲೇಮ್ ಮಾಡಲು ಇಚ್ಛಿಸಿದಲ್ಲಿ ನೀವು ಈ ಕೆಳಕಂಡ ವಿವರಗಳನ್ನು ನಮೂದಿಸಬೇಕು:
- ಲೋನ್ ಯಾರಿಂದ ಪಡೆದಿದೆ
- ಬ್ಯಾಂಕ್ / ಸಂಸ್ಥೆಯ ಹೆಸರು
- ಸಾಲ ಖಾತೆ ಸಂಖ್ಯೆ
- ಸಾಲ ಮಂಜೂರಾದ ದಿನಾಂಕ
- ಒಟ್ಟು ಬಡ್ಡಿ ಮೊತ್ತ
- ನಿರ್ದಿಷ್ಟ ದಿನಾಂಕದಂದು ಬಾಕಿ ಇರುವ ಸಾಲದ ಮೊತ್ತ
- ಬಡ್ಡಿ ಮೊತ್ತ
ಸೆಕ್ಷನ್ 80E ಅಡಿಯಲ್ಲಿ ಇಳಿಕೆಗಳು:

ಸೆಕ್ಷನ್ 80E ಅಡಿಯಲ್ಲಿ ಇಳಿಕೆಗಳು:

ಸೆಕ್ಷನ್ 80E ಅಡಿಯಲ್ಲಿ ಇಳಿಕೆಗಳು:

ಸೆಕ್ಷನ್ 80E ಅಡಿಯಲ್ಲಿ ಇಳಿಕೆಗಳು:

31. ನಾನು 80GG ಅಡಿಯಲ್ಲಿ ಕಡಿತವನ್ನು ಕ್ಲೇಮ್ ಮಾಡುವುದಾದರೆ ಯಾವುದೇ ಫಾರ್ಮ್ ಅನ್ನು ಸಲ್ಲಿಸಬೇಕೇ?
ನೀವು 80GG ಅಡಿಯಲ್ಲಿ ಕಡಿತವನ್ನು ಪಡೆಯಲು ಬಯಸಿದರೆ, ಆದಾಯದ ರಿಟರ್ನ್ ಅನ್ನು ಸಲ್ಲಿಸುವ ಮೊದಲು ಕಡ್ಡಾಯವಾಗಿ ಫಾರ್ಮ್ 10 BA ಅನ್ನು ಸಲ್ಲಿಸಬೇಕು ಮತ್ತು ಆದಾಯದ ರಿಟರ್ನ್ ಅನ್ನು ಸಲ್ಲಿಸುವಾಗ ವೇಳಾಪಟ್ಟಿ 80GG ನಲ್ಲಿ ಫಾರ್ಮ್ 10 BA ನ ವಿವರಗಳನ್ನು (ಸ್ವೀಕೃತಿ ಸಂಖ್ಯೆ) ನಮೂದಿಸಬೇಕು.

32. ನಿರ್ಧರಣೆ ವರ್ಷ 2026-27 ನೇ ಸಾಲಿನ ITR-4 ರ TDS ವೇಳಾಪಟ್ಟಿಯಲ್ಲಿ ಏನಾದರೂ ಬದಲಾವಣೆ ಇದೆಯೇ?
ನೀವು TDS ಕ್ಲೈಮ್ ಮಾಡಲು ಬಯಸಿದರೆ, ಯಾವ ವಿಭಾಗ ಅಡಿಯಲ್ಲಿ TDS ಕಡಿತಗೊಳಿಸಲಾಗುತ್ತದೆ ಎಂಬುದನ್ನು ನೀವು ಕಡ್ಡಾಯವಾಗಿ ಆಯ್ಕೆ ಮಾಡಬೇಕು.
