ಇ-ಫೈಲಿಂಗ್‌ಗಾಗಿ ನೋಂದಾಯಿಸುವ(ತೆರಿಗೆ ಕಡಿತಗೊಳಿಸುವವರು /ಸಂಗ್ರಹಣಕಾರರು) ಕುರಿತು ಬಳಕೆದಾರ ಕೈಪಿಡಿ

 

1. ಅವಲೋಕನ

ಈ ಲಾಗಿನ್ ಪೂರ್ವ ಸೇವೆಯು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಅದನ್ನು ಬಳಸಲು ಬಯಸುವ ಎಲ್ಲಾ ತೆರಿಗೆ ಕಡಿತಗಾರರು/ಸಂಗ್ರಹಕಾರರಿಗೆ ಲಭ್ಯವಿದೆ. ನೋಂದಣಿಸೇವೆಯು ಬಳಕೆದಾರರಿಗೆ ತೆರಿಗೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಪ್ರವೇಶಿಸಲು ಮತ್ತು ಅವುಗಳ ಸ್ಥಿತಿಯನ್ನು ಅನುಸರಿಸಲು ಅನುಕೂಲ ಮಾಡಿಕೊಡುತ್ತದೆ.

2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಅಗತ್ಯ ಪೂರ್ವಾಪೇಕ್ಷಿತಗಳು
 

  • ಮಾನ್ಯ ಮತ್ತು ಸಕ್ರಿಯ TAN
  • ಖಾಯಂ ಸಂಪರ್ಕ ವ್ಯಕ್ತಿಯ PAN ಅನ್ನು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿರಬೇಕು.

3. ಹಂತ-ಹಂತದ ಮಾರ್ಗದರ್ಶಿ
 

ಹಂತ 1:ಇ-ಸಲ್ಲಿಕೆ ಪೋರ್ಟಲ್‌ನ ಮುಖಪುಟಕ್ಕೆ ತೆರಳಿ,ನೋಂದಾಯಿಸಿಮೇಲೆ ಕ್ಲಿಕ್ ಮಾಡಿ.
 

Data responsive


ಹಂತ 2:ಇತರೆಮೇಲೆ ಕ್ಲಿಕ್ ಮಾಡಿ ಮತ್ತುವರ್ಗದಲ್ಲಿತೆರಿಗೆ ಕಡಿತಗಾರ ಮತ್ತು ಸಂಗ್ರಹಗಾರಅನ್ನು ಆಯ್ಕೆಮಾಡಿ.
 

Data responsive


ಹಂತ 3:ಸಂಸ್ಥೆಯ TANಅನ್ನು ನಮೂದಿಸಿ ಮತ್ತುಪರಿಶೀಲಿಸಿಮೇಲೆ ಕ್ಲಿಕ್ ಮಾಡಿ.
 

Data responsive


ಹಂತ 4a:TAN ದತ್ತಸಂಚಯದಲ್ಲಿ ಲಭ್ಯವಿದ್ದು, TRACES ನಲ್ಲಿ ನೋಂದಾಯಿಸಲ್ಪಟ್ಟಿದ್ದರೆ ಮತ್ತು ನೋಂದಣಿ ವಿನಂತಿಯನ್ನು ಈಗಾಗಲೇ ಸಲ್ಲಿಸದೇ ಅನುಮೋದನೆಗಾಗಿ ಬಾಕಿ ಉಳಿದಿರದಿದ್ದರೆ:

  • ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ ಮೂಲ ವಿವರಗಳು ಪುಟವನ್ನು ವೀಕ್ಷಿಸಿ.
  • ಮೂಲ ವಿವರಗಳನ್ನು ಮೊದಲೇ ಭರ್ತಿ ಮಾಡಲಾಗಿದೆ.ಮುಂದುವರಿಸಿಮೇಲೆ ಕ್ಲಿಕ್ ಮಾಡಿ.
     

Data responsive


ಹಂತ 4b:TAN ದತ್ತಸಂಚಯದಲ್ಲಿ ಲಭ್ಯವಿದ್ದು, ಆದರೆ TRACES ನಲ್ಲಿ ನೋಂದಾಯಿಸಲ್ಪಟ್ಟಿರದಿದ್ದರೆ ಮತ್ತು ನೋಂದಣಿ ವಿನಂತಿಯನ್ನು ಈಗಾಗಲೇ ಸಲ್ಲಿಸದೇ ಅನುಮೋದನೆಗಾಗಿ ಬಾಕಿ ಉಳಿದಿರದಿದ್ದರೆ:

  • TRACES ಪುಟವನ್ನು ವೀಕ್ಷಿಸಲು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.
  • ಮೂಲ ವಿವರಗಳು ಪುಟವನ್ನು ವೀಕ್ಷಿಸಲು TRACES ನಲ್ಲಿ ಇ-ಸಲ್ಲಿಕೆಯಲ್ಲಿ ನೋಂದಾಯಿಸಿ ಮೇಲೆ ಕ್ಲಿಕ್ ಮಾಡಿ.
  • ಅಗತ್ಯವಿರುವಂತೆ ಮೂಲ ವಿವರಗಳನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.


ಸೂಚನೆ:ನೀವು ಮೊದಲು TRACES ನಲ್ಲಿ ನೋಂದಾಯಿಸಿರಬೇಕು. ಅಲ್ಲಿಇ-ಸಲ್ಲಿಕೆಯಲ್ಲಿ ನೋಂದಾಯಿಸಿಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮನ್ನುಇ-ಸಲ್ಲಿಕೆ ನೋಂದಣಿಪುಟಕ್ಕೆ ಕರೆದೊಯ್ಯಲಾಗುತ್ತದೆ.

ಹಂತ 4c:TAN ದತ್ತಸಂಚಯದಲ್ಲಿ ಲಭ್ಯವಿದ್ದು, ನೋಂದಣಿ ವಿನಂತಿಯನ್ನು ಈಗಾಗಲೇ ಸಲ್ಲಿಸಿ ಅನುಮೋದನೆಗಾಗಿ ಬಾಕಿ ಉಳಿದಿದ್ದರೆ:

  • ದೋಷ ಸಂದೇಶವು ಪ್ರದರ್ಶಿಸಲಾಗುತ್ತದೆ ಮತ್ತು ನೀವು ನೋಂದಣಿ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲು ಆಯ್ಕೆ ಮಾಡಬಹುದು.


ಹಂತ 5:ಪಾವತಿ ಮಾಡುವ ಅಥವಾ ತೆರಿಗೆ ಸಂಗ್ರಹಿಸುವ ವ್ಯಕ್ತಿಯ ವಿವರಗಳನ್ನು ನಮೂದಿಸಿ ಮತ್ತುಮುಂದುವರಿಸಿಮೇಲೆ ಕ್ಲಿಕ್ ಮಾಡಿ.
 

Data responsive


ಹಂತ 6:ಪ್ರಾಥಮಿಕ ಮೊಬೈಲ್ ಸಂಖ್ಯೆ, ಇಮೇಲ್ ID ಮತ್ತು ಅಂಚೆ ವಿಳಾಸಸೇರಿದಂತೆ ಸಂಪರ್ಕದ ವಿವರಗಳನ್ನು ಒದಗಿಸಿ.ಮುಂದುವರಿಸಿಮೇಲೆ ಕ್ಲಿಕ್ ಮಾಡಿ.
 

Data responsive


ಹಂತ 7:ಹಂತ 6ರಲ್ಲಿ ನಮೂದಿಸಿದ ನಿಮ್ಮ ಪ್ರಾಥಮಿಕ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ID ಗೆ ಪ್ರತ್ಯೇಕ OTPಗಳನ್ನು ಕಳುಹಿಸಲಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ID ಗೆ ಬಂದ ಪ್ರತ್ಯೇಕ 6 ಅಂಕಿಯ OTPಗಳನ್ನು ನಮೂದಿಸಿ ಮತ್ತುಮುಂದುವರಿಸಿಮೇಲೆ ಕ್ಲಿಕ್ ಮಾಡಿ.
 

Data responsive


ಸೂಚನೆ:

  • OTP ಕೇವಲ 15 ನಿಮಿಷಗಳ ಕಾಲ ಮಾತ್ರ ಮಾನ್ಯವಾಗಿರುತ್ತದೆ.
  • ಸರಿಯಾದ OTP ಅನ್ನು ನಮೂದಿಸಲು ನಿಮಗೆ 3 ಅವಕಾಶಗಳಿವೆ.
  • ಪರದೆಯ ಮೇಲೆ ಪ್ರದರ್ಶಿಸಲಾಗುವ OTP ಅವಧಿ ಮುಕ್ತಾಯದ ಹಿಮ್ಮುಖ ಸಮಯ ಸೂಚಕವು OTP ಯಾವಾಗ ಅವಧಿ ಮುಗಿಯುತ್ತದೆ ಎಂಬುದನ್ನು ತೋರಿಸುತ್ತದೆ.
  • OTP ಪುನಃ ಕಳುಹಿಸಿ ಮೇಲೆ ಕ್ಲಿಕ್ ಮಾಡಿದಾಗ, ಹೊಸ OTP ರಚಿಸಿ ಕಳುಹಿಸಲಾಗುತ್ತದೆ.

ಹಂತ 8: ವಿವರಗಳನ್ನು ಪರಿಶೀಲಿಸಿ ಪುಟದಲ್ಲಿ, ಒದಗಿಸಿರುವ ವಿವರಗಳನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಅವುಗಳನ್ನು ಸಂಪಾದಿಸಿ. ದೃಢೀಕರಿಸಿ ಮೇಲೆ ಕ್ಲಿಕ್ ಮಾಡಿ.

Data responsive


ಹಂತ 9:ಪಾಸ್ವರ್ಡ್ ಹೊಂದಿಸಿಪುಟದಲ್ಲಿ, ನೀವು ಬಯಸಿದ ಪಾಸ್ವರ್ಡ್ ಅನ್ನುಪಾಸ್ವರ್ಡ್ ಹೊಂದಿಸಿಮತ್ತುಪಾಸ್ವರ್ಡ್ ದೃಢೀಕರಿಸಿಎರಡೂ ಪಠ್ಯ ಪೆಟ್ಟಿಗೆಗಳಲ್ಲಿ ನಮೂದಿಸಿ, ನಿಮ್ಮವೈಯಕ್ತಿಕ ಸಂದೇಶವನ್ನು ಹೊಂದಿಸಿ ಮತ್ತುನೋಂದಾಯಿಸಿಮೇಲೆ ಕ್ಲಿಕ್ ಮಾಡಿ.
 

Data responsive


ಸೂಚನೆ:

  • ರಿಫ್ರೆಶ್ ಅಥವಾ ಹಿಂದೆ ಮೇಲೆ ಕ್ಲಿಕ್ ಮಾಡಬೇಡಿ.
  • ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸುವಾಗ, ಪಾಸ್‌ವರ್ಡ್ ನೀತಿಗಳ ಕುರಿತು ಜಾಗರೂಕರಾಗಿರಿ:
    • ಇದು ಕನಿಷ್ಠ 8 ಅಕ್ಷರಗಳ ಅಥವಾ ಗರಿಷ್ಢ 14 ಅಕ್ಷರಗಳದ್ದಾಗಿರಬೇಕು.
    • ಇದರೊಳಗೆ ಅಪ್ಪರ್ ಕೇಸ್ ಮತ್ತು ಲೋವರ್ ಕೇಸ್ ಎರಡೂ ಇರಬೇಕು.
    • ಇದು ಒಂದಾದರೂ ಸಂಖ್ಯೆಯನ್ನು ಹೊಂದಿರಬೇಕು.
    • ಇದು ಒಂದಾದರೂ ವಿಶೇಷ ಅಕ್ಷರವನ್ನು ಹೊಂದಿರಬೇಕು (ಉದಾ. @#$%)

ಯಶಸ್ವಿ ಸಂದೇಶವು ವಹಿವಾಟಿನ ID ಯೊಂದಿಗೆ ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ಗುರುತು ಸಂಖ್ಯೆಯನ್ನು ದಾಖಲಿಸಿಟ್ಟುಕೊಳ್ಳಿ. ಸಮರ್ಥ ಪ್ರಾಧಿಕಾರದಿಂದ ಅನುಮೋದನೆ ದೊರೆತ ನಂತರ ನೋಂದಣಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

 

Data responsive


4. ಸಂಬಂಧಿಸಿದ ವಿಷಯಗಳು