ನಿಮ್ಮ ಪಾಸ್‌ವರ್ಡ್‌ಅನ್ನು ಮರುಹೊಂದಿಸಿ

(ಕ್ಷಣಗಳಲ್ಲಿ ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಿ)

(ಕ್ಷಣಗಳಲ್ಲಿ ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಿ)

Frequently Asked Questions

ನಿಮ್ಮ ಪಾಸ್‌ವರ್ಡ್‌ ಮರುಹೊಂದಿಸುವ(ರೀಸೆಟ್) ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1.ನಾನು ನನ್ನ ಪಾಸ್‌ವರ್ಡ್ ಅನ್ನು ಏಕೆ ಮರುಹೊಂದಿಸಬೇಕು?

ಒಂದು ವೇಳೆ ನೀವು ನಿಮ್ಮಇ-ಸಲ್ಲಿಕೆ ಪೋರ್ಟಲ್‌ನ ಪಾಸ್‌ವರ್ಡ್ ಅನ್ನು ಮರೆತಿದ್ದರೆ ಅಥವಾ ಯಾವುದೇ ಕಾರಣದಿಂದ ಅದರ ಬಗ್ಗೆ ತಿಳಿದಿರದಿದ್ದರೆ, ಈ ಸೇವೆಯನ್ನು ಬಳಸಿಕೊಂಡು ಅದನ್ನು ಮರುಹೊಂದಿಸಬಹುದು (Reset ಮಾಡಬಹುದು).

2. ನನ್ನ ಪಾಸ್‌ವರ್ಡ್‌ ಅನ್ನು ಯಶಸ್ವಿಯಾಗಿ ಮರುಹೊಂದಿಸಲಾಗಿದೆ (ರೀಸೆಟ್ ಮಾಡಲಾಗಿದೆ) ಎಂದು ನನಗೆ ಹೇಗೆ ತಿಳಿಯುತ್ತದೆ?

ನಿಮ್ಮ ಪಾಸ್‌ವರ್ಡ್ ಯಶಸ್ವಿಯಾಗಿ ಮರುಹೊಂದಿಸಲ್ಪಟ್ಟ ನಂತರ (Reset ಆದ ನಂತರ), ಒಂದು ವಹಿವಾಟು ಗುರುತು ಸಂಖ್ಯೆ (Transaction ID) ರಚಿಸಲಾಗುತ್ತದೆ. ಜೊತೆಗೆ, ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರುವ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಗೆ ದೃಢೀಕರಣ ಸಂದೇಶವನ್ನು ಕಳುಹಿಸಲಾಗುತ್ತದೆ.

3. ನಾನು DSC ಬಳಸಿ ನನ್ನ ಪಾಸ್‌ವರ್ಡ್ ಅನ್ನು ಮರುಹೊಂದಿಸುವಾಗ (ರಿಸೆಟ್ ಮಾಡುವಾಗ) ಡಿಜಿಟಲ್ ಸಹಿ ಪ್ರಮಾಣಪತ್ರ ಅಮಾನ್ಯವೆಂಬ ಸಂದೇಶವನ್ನು ಪಡೆಯುತ್ತಿದ್ದೇನೆ.ನಾನೇನು ಮಾಡಬಹುದು?

ನೀವು ನಿಮ್ಮ ಪಾಸ್ವರ್ಡ್ ಅನ್ನು DSC ಬಳಸಿ ಮರುಹೊಂದಿಸುತ್ತಿದ್ದರೆ (ರಿಸೆಟ್ ಮಾಡುತ್ತಿದ್ದರೆ), ಸಕ್ರಿಯ ಲೆವೆಲ್ 2 ಅಥವಾ ಅದಕ್ಕಿಂತ ಮೇಲಿನ ಪ್ರಮಾಣೀಕರಣ ಪ್ರಾಧಿಕಾರದಿಂದ ಖಾತರಿಪಡಿಸಿರುವ DSC ಅನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

4. ನಾನು ನನ್ನ ಪಾಸ್‌ವರ್ಡ್‌ ಅನ್ನು ಮರುಹೊಂದಿಸಲು (ರಿಸೆಟ್‌ ಮಾಡಲು) ಇರುವ ವಿಧಾನಗಳು ಯಾವುವು?

ನೀವು ನಿಮ್ಮ ಪಾಸ್‌ವರ್ಡ್‌ನ್ನು ಹೀಗೆ ಮರುಹೊಂದಿಸಿ (ರಿಸೆಟ್‌ ಮಾಡಿ):
• ಇ-ಸಲ್ಲಿಕೆ OTP (ನಿಮ್ಮ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕೃತವಾಗಿರುವುದು)
• ಆಧಾರ್‌ OTP (ಆಧಾರ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕೃತವಾಗಿರುವುದು)
•    DSC

5. ನಾನು EVC ಯನ್ನು ಎಲ್ಲಿ ಪಡೆಯುತ್ತೇನೆ?

ನಿಮ್ಮ ಚಾಲ್ತಿಯಲ್ಲಿರುವ ಬ್ಯಾಂಕ್ /ಡಿಮ್ಯಾಟ್ ಖಾತೆಯೊಂದಿಗೆ ನೋಂದಾಯಿತ ಮೊಬೈಲ್ ನಂಬರ್‌ನಲ್ಲಿ ನೀವು ಆರಿಸಿರುವ ಆಯ್ಕೆಯನ್ನು ಆಧರಿಸಿ EVCಯನ್ನು ಸ್ವೀಕರಿಸುತ್ತೀರಿ.

6. ನಾನು ನನ್ನ ಬ್ಯಾಂಕ್ ಖಾತೆ EVC ಅನ್ನು ಬಳಸಿ ಪಾಸ್‌ವರ್ಡ್‌ ಮರುಹೊಂದಿಸಲು (ರಿಸೆಟ್ ಮಾಡಲು)ಬಯಸುವೆ, ಆದರೆ ಅಂತಹ ಆಯ್ಕೆಯನ್ನು ಪಟ್ಟಿಯಲ್ಲಿ ನೀಡಲಾಗಿಲ್ಲ. ನಾನೇನು ಮಾಡಬಹುದು?

ನಿಮ್ಮ ಇ-ಸಲ್ಲಿಕೆ ಖಾತೆಯನ್ನು ಸುರಕ್ಷಿತಗೊಳಿಸಲು ನೀವು ಇ-ಸಲ್ಲಿಕೆ ವಾಲ್ಟ್‌ನ (ಸುರಕ್ಷಿತ ಸಂಗ್ರಹಣಾ ವ್ಯವಸ್ಥೆ) ಉನ್ನತ ಭದ್ರತಾ ಸೇವೆಯ ಮೂಲಕ ಆಯ್ದ ಆಯ್ಕೆಗಳನ್ನು ಮಾತ್ರ ಪ್ರದರ್ಶಿಸಲಾಗುತ್ತವೆ. ಒಂದು ವೇಳೆ ನೀವು ನಿಮ್ಮ ಪಾಸ್‌ವರ್ಡ್‌ನ್ನು ಬ್ಯಾಂಕ್ ಖಾತೆ EVC ಅಥವಾ ಬೇರೆ ಯಾವುದಾದರೂ ವಿಧಾನವನ್ನು ಬಳಸಿ ರಿಸೆಟ್‌ ಮಾಡಬಯಸುತ್ತಿದ್ದು ಅದನ್ನು ಆಯ್ಕೆಯಾಗಿ ಪ್ರದರ್ಶಿಸಲಿಲ್ಲವಾದರೆ, ನೀವು ಆ ಆಯ್ಕೆಯನ್ನು ಇ-ಸಲ್ಲಿಕೆ ವಾಲ್ಟ್(ಸುರಕ್ಷಿತ ಸಂಗ್ರಹಣಾ ವ್ಯವಸ್ಥೆ) ಉನ್ನತ ಭದ್ರತಾ ಸೇವೆ ಮುಖಾಂತರ ಸೇರಿಸಬಹುದು.

7. ಯಾವುದೇ ವಿಧಾನಗಳಿಂದ ಪಾಸ್‌ವರ್ಡ್‌ ಮರುಹೊಂದಿಸಲು(ರಿಸೆಟ್‌ ಮಾಡಲು) ನನಗೆ ಸಾಧ್ಯವಾಗುತ್ತಿಲ್ಲ?

ಇಂತಹ ಸಂದರ್ಭದಲ್ಲಿ ಸಹಾಯಕ್ಕಾಗಿ ನೀವು ಸಹಾಯವಾಣಿ (1800 103 0025) ಯನ್ನು ಸಂಪರ್ಕಿಸಬಹುದು.

Detailed guides and documentation