1. ಫಾರ್ಮ್ 29B ಎಂದರೇನು?
ಫಾರ್ಮ್ 29B ಎನ್ನುವುದು ಕಂಪನಿಯ ಬುಕ್ ಲಾಭಗಳನ್ನು ಲೆಕ್ಕಾಚಾರ ಮಾಡಲೆಂದು ಸೆಕ್ಷನ್ 115JB ಅಡಿಯಲ್ಲಿ ಬರುವ ಒಂದು ವರದಿಯಾಗಿದೆ. ಸೆಕ್ಷನ್ 115JB ಗೆ ಅನ್ವಯಿಸುವ ಒಂದು ಕಂಪನಿಗಾಗಿ CA ರವರು ಒದಗಿಸಲಾದ/ಪ್ರಸ್ತುತಪಡಿಸಿದ ಮಾಹಿತಿಯನ್ನೇ ಪೂರೈಸಬೇಕಾಗಿದೆ. ಆದಾಯ ತೆರಿಗೆ ಕಾಯ್ದೆಗೆ ಅನುಗುಣವಾಗಿ ಲೆಕ್ಕಹಾಕಲಾಗಿದೆ ಎಂದು ತೆರಿಗೆಯಿಂದ ಉಂಟಾಗುವ MAT ಸಾಲ ಪಡೆಯಲು ಬುಕ್ ಲಾಭಗಳ ಸರಿಯಾದ ಗಣನೆ/ಲೆಕ್ಕಾಚಾರಗಳನ್ನು ಖಚಿತಪಡಿಸಿಕೊಳ್ಳಲು ಇದು ತೆರಿಗೆದಾರನಿಗೆ ಸಹಾಯ ಮಾಡುತ್ತದೆ.


2. ಫಾರ್ಮ್ 29B ಫೈಲ್ ಸಲ್ಲಿಸುವುದು ಕಡ್ಡಾಯವೇ?
ಬುಕ್ ಲಾಭದ 15% ಗಿಂತ ಕಡಿಮೆ ಆದಾಯವಿರುವ ಪ್ರತಿಯೊಂದು ಕಂಪನಿಯು (AY 2020-21 ರಿಂದ ಜಾರಿಗೆ ಬರುವಂತೆ) ಫಾರ್ಮ್ 29B ನಲ್ಲಿ ಲೆಕ್ಕ ಪರಿಶೋಧಕರಿಂದ ವರದಿಯೊಂದನ್ನು ಪಡೆಯಬೇಕಾಗುತ್ತದೆ 142(1)(i)/ರ ಸೆಕ್ಷನ್ ಅಡಿಯಲ್ಲಿ ಬರುವ ಒಂದು ಸೂಚನೆಗೆ ಪ್ರತಿಕ್ರಿಯೆಯಾಗಿ ಪೂರೈಸಲಾದ ಆದಾಯದ ರಿಟರ್ನ್‍ನೊಂದಿಗೆ ಅಥವಾ ಸೆಕ್ಷನ್ 139(1) ಅಡಿಯಲ್ಲಿ ರಿಟರ್ನ್‌ ಸಲ್ಲಿಸಲು ನಿಗದಿತ ದಿನಾಂಕಕ್ಕೂ ಒಂದು ತಿಂಗಳು ಮೊದಲು ಈ ವರದಿಯನ್ನು ಪಡೆಯಬೇಕಾಗುತ್ತದೆ ಮತ್ತು ಸಲ್ಲಿಸಬೇಕಾಗುತ್ತದೆ.


3. ಫಾರ್ಮ್ 29B ಭರ್ತಿ ಮಾಡುವ ಪ್ರಕ್ರಿಯೆ ಎಂದರೇನು?
ಫಾರ್ಮ್ಅ‌‍ನ್ನು ತೆರಿಗೆದಾರರು (ಕಂಪನಿಯು) ನಿಗದಿಪಡಿಸಿದ CA ರವರಿಂದ ಭರ್ತಿಮಾಡಿಸಬೇಕಾದ ಅಗತ್ಯವಿದೆ. ನಿಯೋಜಿಸಲಾದ CA ಮೂಲಕ ಫಾರ್ಮ್ ಅನ್ನು ಭರ್ತಿಮಾಡಿ ಅಪ್‌ಲೋಡ್ ಮಾಡಿದ ನಂತರದಲ್ಲಿ, ಫಾರಂ ಅನ್ನು ಯಶಸ್ವಿಯಾಗಿ ಸಲ್ಲಿಸಬೇಕಾದ ಕಾರಣ ತೆರಿಗೆದಾರ (ವರ್ಕ್‌ಲಿಸ್ಟ್)ಗೆ ಹೋಗಿ ಫಾರಂ ಅನ್ನು ಸ್ವೀಕರಿಸಬೇಕು ಮತ್ತು ಇ ಪರಿಶೀಲಿಸುವ ಅಗತ್ಯವಿದೆ.


4. ನನ್ನ CA ಫಾರ್ಮ್ 29B ಅನ್ನು ಸಿದ್ಧಪಡಿಸಿದ್ಧಾರೆ ಮತ್ತು ಸಲ್ಲಿಸಿದ್ಧಾರೆ ಎಂದು ನನಗೆ ಹೇಗೆ ಗೊತ್ತಾಗುತ್ತದೆ?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಗೆ ನೀವು ದೃಢೀಕರಣವನ್ನು ಸ್ವೀಕರಿಸುತ್ತೀರಿ. ಹೆಚ್ಚುವರಿಯಾಗಿ, ನಿಮ್ಮ ವರ್ಕ್‌ಲಿಸ್ಟ್‌ ನಲ್ಲಿ (ನಿಮ್ಮ ಕಾರ್ಯಗಳಿಗಾಗಿ) ನೀವು ಸ್ಥಿತಿಯನ್ನು ವೀಕ್ಷಿಸಬಹುದು. CA ರವರು ಫಾರ್ಮ್ 29B ಅನ್ನು ಅಪ್‌ಲೋಡ್ ಮಾಡಿದ್ದಾರೆ ಎಂದಾದಲ್ಲಿ, ಅಪ್ಲೋಡ್ ಮಾಡಲಾಗಿದೆ - ತೆರಿಗೆದಾರರಿಂದ ಸ್ವೀಕೃತಿ ಬಾಕಿ ಉಳಿದಿದೆ ಎಂದು ನಿಮಗೆ ತೋರಿಸಲಾಗುವುದು.


5. ಫಾರ್ಮ್ 29B ಭರ್ತಿ ಮಾಡಲು ನನ್ನ ವಿನಂತಿಯನ್ನು ನನ್ನ CA ತಿರಸ್ಕರಿಸಿದ್ದಾರೆಂದು ನನಗೆ ಹೇಗೆ ಗೊತ್ತಾಗುತ್ತದೆ?
ನಿಮ್ಮ ನಿಯೋಜಿತ CA ರವರು ಫಾರ್ಮ್ 29B ಭರ್ತಿ ಮಾಡುವ ನಿಮ್ಮ ವಿನಂತಿಯನ್ನು ತಿರಸ್ಕರಿಸಿದ್ದರೆ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ನಂಬರ್‌ನಲ್ಲಿ ನೀವು ಸಂವಹನ ಸಂದೇಶವನ್ನು ಸ್ವೀಕರಿಸುವಿರಿ.


6. ಫಾರ್ಮ್ 29B ಭರ್ತಿ ಮಾಡಲು CA ರವರು ನನ್ನ ವಿನಂತಿಯನ್ನು ಸ್ವೀಕರಿಸಿದ್ದಾರೆಂದು ನನಗೆ ಹೇಗೆ ಗೊತ್ತಾಗುತ್ತದೆ?
ನಿಮ್ಮ ನಿಯೋಜಿತ CA ರವರು ವಿನಂತಿಯನ್ನು ಸ್ವೀಕರಿಸಿದರೆ, ನಿಮ್ಮ ವರ್ಕ್‍ಲಿಸ್ಟ್ ನಲ್ಲಿ ನಿಮಗೆ ಈ ಕೆಳಗಿನ ಸ್ಥಿತಿಯನ್ನು ತೋರಿಸಲಾಗುವುದು (ನಿಮ್ಮ ಕಾರ್ಯಗಳಿಗಾಗಿ):

  • CA ರವರಿಂದ ಅಪ್‌ಲೋಡ್ ಮಾಡಲಾದ - ಬಾಕಿಯಿರುವ ಸ್ವೀಕೃತಿ: ಅಂದರೆ CA ಇನ್ನೂ ನಿಮ್ಮ ವಿನಂತಿಯನ್ನು ಸ್ವೀಕರಿಸಬೇಕಾಗಿದೆ; ಅಥವಾ
  • ಅಪ್ಲೋಡ್ ಮಾಡಲಾಗಿದೆ -ತೆರಿಗೆದಾರರಿಂದ ಸ್ವೀಕೃತಿ ಬಾಕಿ ಉಳಿದಿದೆ: ಅಂದರೆ CA ಈಗಾಗಲೇ ಫಾರ್ಮ್ 29B ಅನ್ನು ಅಪ್‌ಲೋಡ್ ಮಾಡಿ ಸಲ್ಲಿಸಿದ್ದಾರೆ.