ಸೆಕ್ಷನ್ 12A ಅಡಿಯಲ್ಲಿ ಫಾರಂ 10A ಗಾಗಿ ಮನ್ನಾ ಕೋರಿಕೆ

12A ಅಡಿಯಲ್ಲಿ ಫಾರ್ಮ್ 10A ಗಾಗಿ ಕ್ಷಮಾದಾನ ವಿನಂತಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ಫಾರಂ 10A ಗಾಗಿ ಮನ್ನಾ ಕೋರಿಕೆಯನ್ನು ಆಫ್‌ಲೈನ್ ಮೋಡ್‌ನಲ್ಲಿ ಸಲ್ಲಿಸಬಹುದೇ?

ಇಲ್ಲ, ಫಾರಂ 10A ಗಾಗಿ ಮನ್ನಾ ಕೋರಿಕೆಯನ್ನು ಆಫ್‌ಲೈನ್ ಮೋಡ್‌ನಲ್ಲಿ ಸಲ್ಲಿಸಲು ಬರುವುದಿಲ್ಲ, ಆನ್‌ಲೈನ್ ಮೋಡ್ ಆಯ್ಕೆ ಮಾತ್ರ ಲಭ್ಯವಿರುತ್ತದೆ.

2. ಮನ್ನಾ ಕೋರಿಕೆಯೊಡನೆ ಯಾವುದಾದರೂ ಕಡ್ಡಾಯ ದಾಖಲೆ ಲಗತ್ತಿಸುವ ಅಗತ್ಯವಿದೆಯೇ?

ತೆರಿಗೆ ಪಾವತಿದಾರರು ಕ್ರಮ ಸಂಖ್ಯೆ 2(f) ರಲ್ಲಿನ "ನಮೂನೆಯನ್ನು ಈಗಾಗಲೇ ಸಲ್ಲಿಸಲಾಗಿದೆಯೇ?" ಎಂಬ ಪ್ರಶ್ನೆಗೆ ‘ಹೌದು’ ಎಂದು ಆರಿಸಿಕೊಂಡರೆ, ಸಲ್ಲಿಸಲಾದ ನಮೂನೆಯ PDF ಅನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.

3. ತೆರಿಗೆ ಪಾವತಿದಾರರು ಸಲ್ಲಿಸಿದ ಮನ್ನಾ ಕೋರಿಕೆ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಮನ್ನಾ ಕೋರಿಕೆಯನ್ನು ಸಲ್ಲಿಸಿರುವ ತೆರಿಗೆ ಪಾವತಿದಾರರು ಈ ಕೆಳಕಂಡ ದಾರಿಯಲ್ಲಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು: ಡ್ಯಾಶ್‌ಬೋರ್ಡ್ --> ಸೇವೆಗಳು --> ಮನ್ನಾ ಕೋರಿಕೆ --> ಶಾಸನಬದ್ಧ ನಮೂನೆಗಳಿಗಾಗಿ ಅರ್ಜಿ --> ಸಲ್ಲಿಸಲಾದ ಮನ್ನಾ ಕೋರಿಕೆಯ ಎದುರಿಗಿರುವ 'ವಿವರಗಳನ್ನು ವೀಕ್ಷಿಸಿ' ಬಟನ್ --> 'ನಮೂನೆಯನ್ನು ಡೌನ್‌ಲೋಡ್ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.

4. ಮನ್ನಾ ಅರ್ಜಿಯ ಅನುಮೋದನೆ ಅಥವಾ ತಿರಸ್ಕಾರದ ಆದೇಶವನ್ನು ತೆರಿಗೆ ಪಾವತಿದಾರರು ನೋಡುವುದು ಹೇಗೆ?

ತೆರಿಗೆ ಪಾವತಿದಾರರು ಈ ಕೆಳಗಿನ ದಾರಿಯಲ್ಲಿ ಅನುಮೋದನೆ/ತಿರಸ್ಕಾರದ ಆದೇಶವನ್ನು ಪಡೆಯಬಹುದು:
ಡ್ಯಾಶ್‌ಬೋರ್ಡ್ --> ಸೇವೆಗಳು --> ರದ್ದತಿ ಕೋರಿಕೆ --> ಶಾಸನಬದ್ಧ ನಮೂನೆಗಳಿಗಾಗಿ ಅರ್ಜಿ --> ಅನುಮೋದಿಸಲಾದ/ತಿರಸ್ಕರಿಸಲಾದ ಮನ್ನಾ ಅರ್ಜಿಯ ಎದುರಿಗಿನ ಟಿಪ್ಪಣಿಯಲ್ಲಿ ಉಲ್ಲೇಖಿಸಲಾದ 'ಇಲ್ಲಿ ಕ್ಲಿಕ್ ಮಾಡಿ' ಬಟನ್ --> ನಿಮ್ಮ ಮಾಹಿತಿಗಾಗಿ --> 'ಮುಕ್ತಾಯ ಆದೇಶವನ್ನು ಡೌನ್‌ಲೋಡ್ ಮಾಡಿ' ಬಟನ್.

5. ತೆರಿಗೆ ಪಾವತಿದಾರರು ಒಂದಕ್ಕಿಂತ ಹೆಚ್ಚು ಮನ್ನಾ ಅರ್ಜಿಗಳನ್ನು ಸಲ್ಲಿಸಬಹುದೇ?

ಹೌದು, ತೆರಿಗೆ ಪಾವತಿದಾರರು ವಿವಿಧ ತೆರಿಗೆ ನಿರ್ಧರಣೆ ವರ್ಷ (AY) ಮತ್ತು ಸೆಕ್ಷನ್ ಕೋಡ್‌ಗಳ ಸಂಯೋಜನೆಗಳಿಗಾಗಿ ಒಂದಕ್ಕಿಂತ ಹೆಚ್ಚು ಮನ್ನಾ ಅರ್ಜಿಗಳನ್ನು ಸಲ್ಲಿಸಬಹುದು

6. ಮನ್ನಾ ಕೋರಿಕೆಗೆ ಅನುಮೋದನೆ ದೊರೆತ ನಂತರ ಫಾರಂ 10A ಅನ್ನು ಸಲ್ಲಿಸುವುದು ಹೇಗೆ?

ಮನ್ನಾ ಅರ್ಜಿಗೆ ಅನುಮೋದನೆ ಪಡೆದ ನಂತರ, ಫಾರಂ 10A ಅನ್ನು ಸಲ್ಲಿಸಲು ತೆರಿಗೆ ಪಾವತಿದಾರರು ಈ ಕೆಳಗೆ ತಿಳಿಸಲಾದ ಕ್ರಮಗಳನ್ನು ಅನುಸರಿಸಬೇಕು:

ಇಲ್ಲಿಗೆ ಹೋಗಿ: ಡ್ಯಾಶ್‌ಬೋರ್ಡ್ --> ಆದಾಯ ತೆರಿಗೆ ನಮೂನೆಗಳು --> ಆದಾಯ ತೆರಿಗೆ ನಮೂನೆಗಳನ್ನು ಸಲ್ಲಿಸಿ -->
ಆದಾಯ ತೆರಿಗೆ ಕಾಯ್ದೆ 1961 ರ ಪ್ರಕಾರ ನಮೂನೆಗಳು --> ಫಾರ್ಮ್ 10A --> ಈಗಲೇ ಸಲ್ಲಿಸಿ

ನೀವು ಫಾರಂ 10A ನ ಲ್ಯಾಂಡಿಂಗ್ ಸ್ಕ್ರೀನ್‌ಗೆ ತಲುಪುತ್ತೀರಿ:

A) ಸಲ್ಲಿಕೆ ವಿಧವನ್ನು ' ಮನ್ನಾ' (Condonation) ಎಂದು ಮತ್ತು ಮನ್ನಾ ವಿಧವನ್ನು “ಈಗಾಗಲೇ ಅನುಮೋದಿಸಲಾದ ಮನ್ನಾ” ಎಂದು ಆಯ್ಕೆಮಾಡಿ
B) “DIN ಸಂಖ್ಯೆಗಳನ್ನು ಪಡೆದುಕೊಳ್ಳಿ” ಬಟನ್ ಮೇಲೆ ಕ್ಲಿಕ್ ಮಾಡಿ
C) ಅನುಮೋದಿತ ಮನ್ನಾ ಅರ್ಜಿಯ DIN ಗಳು 'DIN ಸಂಖ್ಯೆಗಳ' ಡ್ರಾಪ್-ಡೌನ್‌ನಲ್ಲಿ ಕಾಣುತ್ತವೆ.
D) DIN ಸಂಖ್ಯೆಯನ್ನು ಆಯ್ಕೆ ಮಾಡಿದ ನಂತರ, ಅನುಮೋದಿತ ಮನ್ನಾ DIN ಸಂಖ್ಯೆಯ ಎದುರು ಮನ್ನಾ ವರ್ಷವು ತಾನೇ ಭರ್ತಿಯಾಗುತ್ತದೆ. ನೀವು ಫಾರಂ 10A ಸಲ್ಲಿಕೆಗೆ ಮುಂದುವರಿಯಬಹುದು.

ಗಮನಿಸಿ: ಅನುಮೋದಿತ ಮನ್ನಾ ಕೋರಿಕೆಗೆ ಲಿಂಕ್ ಮಾಡಲಾದ DIN ಅನ್ನು ಬಳಸಿ ಒಮ್ಮೆ ಫಾರಂ 10A ಅನ್ನು ಸಲ್ಲಿಸಿದ ನಂತರ, ಫಾರಂ 10A ಅನ್ನು ಹಿಂಪಡೆಯುವ ಸಂದರ್ಭವನ್ನು ಹೊರತುಪಡಿಸಿ, ಅದೇ DIN ಅನ್ನು ಬಳಸಿ ಅದನ್ನು ಮತ್ತೊಮ್ಮೆ ಸಲ್ಲಿಸಲು ಸಾಧ್ಯವಿಲ್ಲ.

ದಯವಿಟ್ಟು ಕೆಳಗಿನ ಸ್ಕ್ರೀನ್‌ಶಾಟ್ ಅನ್ನು ನೋಡಿ:

Data responsive

ಪದಕೋಶ (Glossary)

 

ಸಂಕ್ಷಿಪ್ತಪದ/ ಸಂಕ್ಷಿಪ್ತರೂಪವಿವರಣೆ/ಪೂರ್ಣರೂಪ
AOತೆರಿಗೆ ನಿರ್ಧರಣೆ ಅಧಿಕಾರಿ (AO)
ತೆರಿಗೆ ನಿರ್ಧರಣೆ ವರ್ಷ (AY)ತೆರಿಗೆ ನಿರ್ಧರಣೆ ವರ್ಷ
CAಸನ್ನದು ಲೆಕ್ಕಿಗರು
CPCಕೇಂದ್ರೀಕೃತ ಸಂಸ್ಕರಣ ಕೇಂದ್ರ (CPC)
EVCಎಲೆಕ್ಟ್ರಾನಿಕ್ ಪರಿಶೀಲನಾ ಸಂಖ್ಯೆ (EVC)