ಫಾರ್ಮ್ 10E ಕುರಿತು ಬಳಕೆದಾರರ ಕೈಪಿಡಿ

1. ಪಕ್ಷಿನೋಟ

ನಿರ್ದಿಷ್ಟ ಹಣಕಾಸು ವರ್ಷದ ಅವಧಿಯಲ್ಲಿ ಗಳಿಸಿದ ಒಟ್ಟು ಆದಾಯದ ಆಧಾರದ ಮೇಲೆ ಒಟ್ಟು ಆದಾಯ ತೆರಿಗೆ ಬಾಧ್ಯತೆಯನ್ನು ಲೆಕ್ಕಹಾಕಲಾಗುತ್ತದೆ. ಆದರೆ, ಆ ಹಣಕಾಸು ವರ್ಷದ ಆದಾಯದಲ್ಲಿ ವೇತನದ ಮುಂಗಡ ಅಥವಾ ವೇತನದ ಹಿಂಬಾಕಿ ಪಾವತಿ ಸೇರಿದ್ದರೆ, ಅದರಿಂದ ಉಂಟಾಗುವ ಹೆಚ್ಚುವರಿ ತೆರಿಗೆ ಭಾರಕ್ಕೆ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 89ರ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.

ಈ ರೀತಿಯ ತೆರಿಗೆ ವಿನಾಯಿತಿಯನ್ನು ಪಡೆಯಲು ಫಾರ್ಮ್ 10Eಅನ್ನು ಸಲ್ಲಿಸಬೇಕು. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಫಾರ್ಮ್ 10E ಅನ್ನು ಸಲ್ಲಿಸುವುದು ಸೂಕ್ತ. ಈ ಫಾರ್ಮ್ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿದೆ. ಫಾರ್ಮ್ 10E ಸಲ್ಲಿಸದೆ, ತೆರಿಗೆದಾರರು ಸೆಕ್ಷನ್ 89ರ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಕೋರಿದರೆ, ಸಲ್ಲಿಸಿದ ITR ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಆದರೆ, ಕೋರಲಾದ ತೆರಿಗೆ ವಿನಾಯಿತಿಯನ್ನು ಅನುಮೋದಿಸಲಾಗುವುದಿಲ್ಲ. ವೇತನದ ಬಾಕಿ ಅಥವಾ ಮುಂಗಡ ವೇತನದ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಫಾರ್ಮ್ 10E ಸಲ್ಲಿಸುವುದು ಕಡ್ಡಾಯವಾಗಿದೆ. ಫಾರ್ಮ್ 10E ಅನ್ನು ಆನ್‌ಲೈನ್ ವಿಧಾನದಲ್ಲಿ ಮಾತ್ರ ಸಲ್ಲಿಸಬಹುದು.

2. ಈ ಸೇವೆಯನ್ನು ಪಡೆಯುವುದಕ್ಕೆ ಬೇಕಾದ ಪೂರ್ವ ಅಗತ್ಯಗಳು

  • ನೀವು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರಾಗಿರಬೇಕು
  • ತೆರಿಗೆದಾರರ PANನ ಸ್ಥಿತಿಯು "ಸಕ್ರಿಯ" ಆಗಿರಬೇಕು.

3. ಫಾರ್ಮ್ ಕುರಿತು

3.1 ಉದ್ದೇಶ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 89ರ ಪ್ರಕಾರ, ತೆರಿಗೆದಾರರು ವೇತನ, ಕುಟುಂಬ ಪಿಂಚಣಿ, ಗ್ರಾಚ್ಯುಯಿಟಿ, ಉದ್ಯೋಗ ಕಡಿತ ಪರಿಹಾರ ಅಥವಾ ಪರಿವರ್ತಿತ ಪಿಂಚಣಿಯನ್ನು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಮುಂಗಡವಾಗಿ ಅಥವಾ ಹಿಂಬಾಕಿಯನ್ನು ಪಡೆದಿದ್ದರೆ, ಅಂತವರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.ಈ ವಿನಾಯಿತಿಯನ್ನು ನೀಡುವ ಉದ್ದೇಶವೆಂದರೆ, ಮುಂಗಡ ಅಥವಾ ಬಾಕಿ ಪಾವತಿಯಿಂದಾಗಿ ತೆರಿಗೆದಾರರ ಒಟ್ಟು ಆದಾಯವು ಸಾಮಾನ್ಯವಾಗಿ ಅನ್ವಯವಾಗಬೇಕಿದ್ದ ತೆರಿಗೆ ದರಕ್ಕಿಂತ ಹೆಚ್ಚಿನ ತೆರಿಗೆ ದರದಲ್ಲಿ ನಿರ್ಧರಣೆಯಾಗುವ ಹೆಚ್ಚುವರಿ ತೆರಿಗೆ ಭಾರವನ್ನು ಕಡಿಮೆ ಮಾಡುವುದು.ಈ ರೀತಿಯ ತೆರಿಗೆ ವಿನಾಯಿತಿಯನ್ನು ಪಡೆಯಲು ನಿಮ್ಮ ಆದಾಯದ ವಿವರಗಳನ್ನು ಫಾರ್ಮ್ 10Eಅಲ್ಲಿ ಸಲ್ಲಿಸಬೇಕು.

3.2 ಇದನ್ನು ಯಾರು ಬಳಸಬಹುದು?

ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತ ಎಲ್ಲ ನೈಸರ್ಗಿಕ ವ್ಯಕ್ತಿಯಾದ ಬಳಕೆದಾರರು, ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 89ರ ಅನ್ವಯ ತೆರಿಗೆ ವಿನಾಯಿತಿ ಪಡೆಯಲು ತಮ್ಮ ಆದಾಯದ ವಿವರಗಳನ್ನು ಫಾರ್ಮ್ 10E ಯಲ್ಲಿ ಸಲ್ಲಿಸಬಹುದು.

3.3 ಫಾರ್ಮ್‌ನ ಒಂದು ಸಂಕ್ಷಿಪ್ತ ನೋಟ

ಫಾರ್ಮ್ 10E ನಲ್ಲಿ ಏಳು ಭಾಗಗಳಿವೆ:

  1. ಅನುಬಂಧ I - ಹಿಂಬಾಕಿ ವೇತನ / ಹಿಂಬಾಕಿಗಳಲ್ಲಿ ಸ್ವೀಕರಿಸಲಾದ ಕುಟುಂಬ ಪಿಂಚಣಿ
  2. ಅನುಬಂಧ I - ಮುಂಚಿತವಾಗಿ ಸ್ವೀಕರಿಸಲಾದ ಸಂಬಳ / ಕುಟುಂಬ ಪಿಂಚಣಿ
  3. ಅನುಬಂಧ II ಮತ್ತು IIA – ಹಿಂದಿನ ಸೇವೆಗೆ ಸಂಬಂಧಿಸಿದ ಗ್ರಾಚ್ಯುಯಿಟಿ ಪಾವತಿಯ ವಿವರಗಳು.
  4. ಅನುಬಂಧ III – ನಿರಂತರ ಸೇವೆಯು 3 ವರ್ಷಗಳನ್ನು ಮೀರದಿದ್ದಾಗ ಅಥವಾ ಉದ್ಯೋಗದ ಉಳಿದ ಅವಧಿಯು ಕನಿಷ್ಠ 3 ವರ್ಷಗಳಿರುವ ಸಂದರ್ಭದಲ್ಲಿ, ಉದ್ಯೋಗದಾತ ಅಥವಾ ಹಿಂದಿನ ಉದ್ಯೋಗದಾತರಿಂದ ಉದ್ಯೋಗದ ಅಂತ್ಯಕ್ಕೆ ಸಂಬಂಧಿಸಿ ನೀಡಲಾದ ಪರಿಹಾರ ಪಾವತಿಯ ವಿವರಗಳು.
  5. ಅನುಬಂಧ IV - ನಿವೃತ್ತಿ ವೇತನ ಪರಿವರ್ತನೆ

ಸ್ವೀಕರಿಸಿದ ಮೊತ್ತದ ಸ್ವರೂಪದ ಆಧಾರದ ಮೇಲೆ, ಫಾರ್ಮ್ 10E ಸಲ್ಲಿಸುವಾಗ ಸೂಕ್ತ ಅನುಬಂಧವನ್ನು ಆಯ್ಕೆ ಮಾಡಬೇಕು.

4. ಹಂತ ಹಂತದ ಮಾರ್ಗದರ್ಶಿ

ಹಂತ 1: ನಿಮ್ಮ ಬಳಕೆದಾರರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಿ.

Data responsive

ಹಂತ 2: ಬಳಕೆದಾರ ID (PAN) ಮತ್ತು ಪಾಸ್‌ವರ್ಡ್ ನಮೂದಿಸಿ.

Data responsive

ಹಂತ 3: ಇ-ಸಲ್ಲಿಕೆಗೆ ಹೋಗಿ > ಆದಾಯ ತೆರಿಗೆ ಫಾರ್ಮ್ ಗಳು > ಆದಾಯ ತೆರಿಗೆ ಫಾರ್ಮ್ ಸಲ್ಲಿಕೆ ಮಾಡಿರಿ.

Data responsive

ಹಂತ 4: ಆದಾಯ ತೆರಿಗೆ ಕಾಯ್ದೆ, 1961ರ ಟ್ಯಾಬ್‌ನಲ್ಲಿ ಇರುವ ಫಾರ್ಮ್‌ಗಳು ಅಡಿಯಲ್ಲಿ ಫಾರ್ಮ್ 10E ಅನ್ನು ಆಯ್ಕೆಮಾಡಿ/ ಹುಡುಕಿ.

Data responsive

ಹಂತ 5:  ನಿರ್ಧರಣೆ ವರ್ಷವನ್ನು ಆಯ್ಕೆ ಮಾಡಿ ಹಾಗೂ "ಮುಂದುವರಿಸಿ" ಕ್ಲಿಕ್‌ ಮಾಡಿ

Data responsive

ಹಂತ 6: "ಪ್ರಾರಂಭಿಸೋಣ"ದ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 7: ನಿಮ್ಮ ಆದಾಯದ ವಿವರಗಳಿಗೆ ಅನ್ವಯವಾಗುವ ಅಂಶಗಳನ್ನು ಆಯ್ಕೆಮಾಡಿ.

Data responsive

ಹಂತ 8: ವೈಯಕ್ತಿಕ ಮಾಹಿತಿ ಮೇಲೆ ಕ್ಲಿಕ್ ಮಾಡಿ, ವಿವರಗಳನ್ನು ಪರಿಶೀಲಿಸಿ ಮತ್ತು ದೃಢೀಕರಿಸಿದ ನಂತರ "ಉಳಿಸಿ" ಮೇಲೆ ಕ್ಲಿಕ್ ಮಾಡಿ.

ಗಮನಿಸಿ:: ನಿವಾಸ ಸ್ಥಿತಿ ಸೇರಿದಂತೆ "ನನ್ನ ಪ್ರೊಫೈಲ್" ವಿಭಾಗದಲ್ಲಿರುವ ಎಲ್ಲಾ ಕಡ್ಡಾಯ ವಿವರಗಳನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಸಂಪರ್ಕ ವಿವರಗಳು ಮತ್ತು ನಿವಾಸ ಸ್ಥಿತಿಯನ್ನು ಬದಲಾಯಿಸಲು "ನನ್ನ ಪ್ರೊಫೈಲ್" ಎಂಬ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿ.

Data responsive

ಹಂತ 9.1.a: ವೈಯಕ್ತಿಕ ಮಾಹಿತಿ ಟ್ಯಾಬ್ ಅನ್ನು ಈಗ ದೃಢೀಕರಿಸಲಾಗಿದೆ. ಹಿಂಬಾಕಿ ವೇತನ/ಕುಟುಂಬ ಪಿಂಚಣಿ (ನಿಮಗೆ ಅನ್ವಯಿಸಿವುದಾದರೆ) ಮೇಲೆ ಕ್ಲಿಕ್ ಮಾಡಿ.

Data responsive

ಹಂತ 9.1.b: ಈ ಭಾಗದಲ್ಲಿ ಹಿಂಬಾಕಿಯಲ್ಲಿ ಪಡೆದ ವೇತನ/ ಕುಟುಂಬ ಪಿಂಚಣಿಯ ಸಾಮಾನ್ಯ ವಿವರಗಳನ್ನು ಒಳಗೊಂಡಿದೆ.

ವಿವರಗಳನ್ನು ನಮೂದಿಸಿ ಮತ್ತು "ಉಳಿಸಿ"ಅನ್ನು ಕ್ಲಿಕ್ ಮಾಡಿ

"ಹಿಂಬಾಕಿಯಾಗಿ ಪಡೆದ ವೇತನ/ಕುಟುಂಬ ಪಿಂಚಣಿ" ಕ್ಷೇತ್ರದಲ್ಲಿನ ವಿವರಗಳು, ಕ್ರಮ ಸಂಖ್ಯೆ 6ರ ನಂತರ ಸೇರಿಸಬೇಕಾದ ಕೋಷ್ಟಕ A – "ವಿವಿಧ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಬಾಕಿಯಾಗಿ ಪಡೆದ ವೇತನ/ಕುಟುಂಬ ಪಿಂಚಣಿ ವಿವರಗಳು" ಯಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಸ್ವಯಂಚಾಲಿತವಾಗಿ ಭರ್ತಿಯಾಗುತ್ತವೆ.

ಗಮನಿಸಿ:ನಿರ್ಧರಣೆ ವರ್ಷ 2024–25 ಮತ್ತು ನಂತರದ ವರ್ಷಗಳಿಗೆ, ವ್ಯವಸ್ಥೆಯು ತೆರಿಗೆಯ ಲೆಕ್ಕಾಚಾರವನ್ನು ಸೆಕ್ಷನ್ 115BAC(1A)ರ ಪ್ರಕಾರದ ಕಡ್ಡಾಯವಾಗಿ ಹೊಸ ತೆರಿಗೆ ಪದ್ಧತಿಯಡಿಯಲ್ಲಿಯೇ ಲೆಕ್ಕ ಹಾಕುತ್ತದೆ. ನಿರ್ಧರಣೆ ವರ್ಷ 2023–24ರವರೆಗಿನ, ತೆರಿಗೆಯನ್ನು ಹಳೆಯ ತೆರಿಗೆ ಪದ್ಧತಿ ಪ್ರಕಾರ ಲೆಕ್ಕ ಹಾಕಲಾಗುತ್ತದೆ.

Data responsive

ಹಂತ 9.2.a: ಬಾಕಿ ವೇತನ ಟ್ಯಾಬ್ ಅನ್ನು ಈಗ ದೃಢೀಕರಿಸಲಾಗಿದೆ. "ಮುಂಗಡ ವೇತನ"(ನಿಮಗೆ ಅನ್ವಯಿಸಿವುದಾದರೆ)ದ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 9.2.b: ಈ ಭಾಗದಲ್ಲಿ ಮುಂಗಡವಾಗಿ ಪಡೆದ ವೇತನ / ಕುಟುಂಬ ಪಿಂಚಣಿಗೆ ಸಂಬಂಧಿಸಿದ ಸಾಮಾನ್ಯ ವಿವರಗಳು ಇರುತ್ತವೆ.

ವಿವರಗಳನ್ನು ನಮೂದಿಸಿ ಮತ್ತೆ "ಉಳಿಸಿ"ಅನ್ನು ಕ್ಲಿಕ್‌ ಮಾಡಿ.

"ಮುಂಗಡವಾಗಿ ಪಡೆದ ವೇತನ" ಕ್ಷೇತ್ರದಲ್ಲಿನ ವಿವರಗಳು, ಕ್ರಮ ಸಂಖ್ಯೆ 6ರ ನಂತರ ಸೇರಿಸಬೇಕಾದ ಕೋಷ್ಟಕ A – "ವಿವಿಧ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಮುಂಗಡವಾಗಿ ಪಡೆದ ವೇತನ/ಕುಟುಂಬ ಪಿಂಚಣಿ ವಿವರಗಳು" ದಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಸ್ವಯಂಚಾಲಿತವಾಗಿ ಭರ್ತಿಯಾಗುತ್ತವೆ.

ಗಮನಿಸಿ: ನಿರ್ಧರಣೆ ವರ್ಷ 2024–25 ಮತ್ತು ನಂತರದ ವರ್ಷಗಳಿಗೆ, ವ್ಯವಸ್ಥೆಯು ತೆರಿಗೆಯನ್ನು ಸೆಕ್ಷನ್ 115BAC(1A)ರ ಪ್ರಕಾರ ಕಡ್ಡಾಯವಾಗಿ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿಯೇ ಲೆಕ್ಕ ಹಾಕುತ್ತದೆ. ನಿರ್ಧರಣೆ ವರ್ಷ 2023–24ರವರೆಗಿನ ತೆರಿಗೆಯನ್ನು ಹಳೆಯ ತೆರಿಗೆ ಪದ್ಧತಿಯ ಪ್ರಕಾರ ಲೆಕ್ಕ ಹಾಕಲಾಗುತ್ತದೆ.

Data responsive

ಹಂತ 9.3.a: ಮುಂಗಡ ವೇತನ ಟ್ಯಾಬ್ ಅನ್ನು ಈಗ ದೃಢೀಕರಿಸಲಾಗಿದೆ. ಗ್ರ್ಯಾಚ್ಯುಟಿ (ನಿಮಗೆ ಅನ್ವಯಿಸಿವುದಾದರೆ) ಮೇಲೆ ಕ್ಲಿಕ್ ಮಾಡಿ.

Data responsive

ಹಂತ 9.3.b: ಈ ಭಾಗವು ಹಿಂದಿನ ಸೇವೆಗಳಿಗೆ ಸಂಬಂಧಿಸಿದಂತೆ ಗ್ರಾಚ್ಯುಯಿಟಿ ಸ್ವರೂಪದಲ್ಲಿ ಪಾವತಿಯ ಸಾಮಾನ್ಯ ವಿವರಗಳನ್ನು ಒಳಗೊಂಡಿದೆ.

ವಿವರಗಳನ್ನು ನಮೂದಿಸಿ ಮತ್ತು "ಉಳಿಸಿ"ಅನ್ನು ಕ್ಲಿಕ್ ಮಾಡಿ

ಗಮನಿಸಿ: ನಿರ್ಧರಣೆ ವರ್ಷ 2024–25 ಮತ್ತು ನಂತರದ ವರ್ಷಗಳಿಗೆ, ವ್ಯವಸ್ಥೆಯು ತೆರಿಗೆಯನ್ನು ಸೆಕ್ಷನ್ 115BAC(1A)ರ ಪ್ರಕಾರ ಕಡ್ಡಾಯವಾಗಿ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿಯೇ ಲೆಕ್ಕ ಹಾಕುತ್ತದೆ. ನಿರ್ಧರಣೆ ವರ್ಷ 2023–24ರವರೆಗಿನ ತೆರಿಗೆಯನ್ನು ಹಳೆಯ ತೆರಿಗೆ ಪದ್ಧತಿಯ ಪ್ರಕಾರ ಲೆಕ್ಕ ಹಾಕಲಾಗುತ್ತದೆ.

Data responsive

ಹಂತ 9.4.a: ಗ್ರ್ಯಾಚ್ಯುಯಿಟಿ ಟ್ಯಾಬ್ ಅನ್ನು ಈಗ ದೃಢೀಕರಿಸಲಾಗಿದೆ. "ಉದ್ಯೋಗ ಮುಕ್ತಾಯದ ಪರಿಹಾರ"ದ ಟ್ಯಾಬ್ ಮೇಲೆ (ನಿಮಗೆ ಅನ್ವಯಿಸಿವುದಾದರೆ) ಕ್ಲಿಕ್ ಮಾಡಿ.

Data responsive

 ಹಂತ 9.4.b: ಈ ಭಾಗದಲ್ಲಿ, ನಿರಂತರ ಸೇವೆಯ ಅವಧಿ 3 ವರ್ಷಗಳನ್ನು ಮೀರದಿದ್ದಾಗ, ಅಥವಾ ಉದ್ಯೋಗದ ಉಳಿದ ಅವಧಿಯೂ 3 ವರ್ಷಗಳಿಗಿಂತ ಕಡಿಮೆಯಿಲ್ಲದಿದ್ದಾಗ, ಉದ್ಯೋಗ ಮುಕ್ತಾಯದ ಸಂದರ್ಭದಲ್ಲಿ ಅಥವಾ ಅದಕ್ಕೆ ಸಂಬಂಧಿಸಿ ಪ್ರಸ್ತುತ ಅಥವಾ ಹಿಂದಿನ ಉದ್ಯೋಗದಾತರಿಂದ ಪರಿಹಾರದ ರೂಪದಲ್ಲಿ ಪಡೆದ ಪಾವತಿಯ ಸಾಮಾನ್ಯ ವಿವರಗಳು ಇರುತ್ತವೆ.

ವಿವರಗಳನ್ನು ನಮೂದಿಸಿ ಮತ್ತು "ಉಳಿಸಿ" ಅನ್ನು ಕ್ಲಿಕ್ ಮಾಡಿ

ಗಮನಿಸಿ: ನಿರ್ಧರಣೆ ವರ್ಷ 2024–25 ಮತ್ತು ನಂತರದ ವರ್ಷಗಳಿಗೆ, ವ್ಯವಸ್ಥೆಯು ತೆರಿಗೆಯನ್ನು ಸೆಕ್ಷನ್ 115BAC(1A)ರ ಪ್ರಕಾರ ಕಡ್ಡಾಯವಾಗಿ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿಯೇ ಲೆಕ್ಕ ಹಾಕುತ್ತದೆ. ನಿರ್ಧರಣೆ ವರ್ಷ 2023–24ರವರೆಗಿನ ತೆರಿಗೆಯನ್ನು ಹಳೆಯ ತೆರಿಗೆ ಪದ್ಧತಿಯ ಪ್ರಕಾರ ಲೆಕ್ಕ ಹಾಕಲಾಗುತ್ತದೆ.

Data responsive

ಹಂತ 9.5.a: "ಉದ್ಯೋಗ ಮುಕ್ತಾಯದ ಪರಿಹಾರ"ದ ಟ್ಯಾಬ್ ಅನ್ನು ಈಗ ದೃಢೀಕರಿಸಲಾಗಿದೆ. "ಪಿಂಚಣಿ ಪರಿವರ್ತನೆ" ಟ್ಯಾಬ್ ಮೇಲೆ (ನಿಮಗೆ ಅನ್ವಯಿಸಿವುದಾದರೆ) ಕ್ಲಿಕ್ ಮಾಡಿ.

Data responsive

ಹಂತ 9.5.b: ಈ ಭಾಗದಲ್ಲಿ ಪಿಂಚಣಿ ಪರಿವರ್ತನೆಯ ರೂಪದಲ್ಲಿ ಪಡೆದ ಪಾವತಿಯ ಸಾಮಾನ್ಯ ವಿವರಗಳು ಇರುತ್ತವೆ.

ವಿವರಗಳನ್ನು ನಮೂದಿಸಿ ಮತ್ತು "ಉಳಿಸಿ"ಅನ್ನು ಕ್ಲಿಕ್ ಮಾಡಿ

ಗಮನಿಸಿ: ನಿರ್ಧರಣೆ ವರ್ಷ 2024–25 ಮತ್ತು ನಂತರದ ವರ್ಷಗಳಿಗೆ, ವ್ಯವಸ್ಥೆಯು ತೆರಿಗೆಯನ್ನು ಸೆಕ್ಷನ್ 115BAC(1A)ರ ಪ್ರಕಾರ ಕಡ್ಡಾಯವಾಗಿ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿಯೇ ಲೆಕ್ಕ ಹಾಕುತ್ತದೆ. ನಿರ್ಧರಣೆ ವರ್ಷ 2023–24ರವರೆಗಿನ ತೆರಿಗೆಯನ್ನು ಹಳೆಯ ತೆರಿಗೆ ಪದ್ಧತಿಯ ಪ್ರಕಾರ ಲೆಕ್ಕ ಹಾಕಲಾಗುತ್ತದೆ.

Data responsive

ಹಂತ 10: ಪಿಂಚಣಿ ಪರಿವರ್ತನೆ ಟ್ಯಾಬ್ ಅನ್ನು ಈಗ ದೃಢೀಕರಿಸಲಾಗಿದೆ. "ಪರಿಶೀಲನೆ" ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 11: ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ, ಸ್ಥಳದ ಹೆಸರನ್ನು ನಮೂದಿಸಿ, ನಂತರ "ಉಳಿಸಿ" ಅನ್ನು ಕ್ಲಿಕ್ ಮಾಡಿ..

Data responsive

ಹಂತ 12: ಎಲ್ಲಾ ಟ್ಯಾಬ್‌ಗಳನ್ನು ಈಗ ದೃಢೀಕರಿಸಲಾಗಿದೆ. "ಪೂರ್ವವೀಕ್ಷಣೆ" ಮೇಲೆ ಕ್ಲಿಕ್ ಮಾಡಿ.

Data responsive

ಹಂತ 13: ಇದು ಫಾರ್ಮ್‌ನ ಪೂರ್ವವೀಕ್ಷಣೆ. ಪೂರ್ವವೀಕ್ಷಣೆಯಲ್ಲಿರುವ ವಿವರಗಳು ಸರಿಯಾಗಿದ್ದರೆ "ಇ-ಪರಿಶೀಲನೆಗೆ ಮುಂದುವರಿಯಿರಿ" ಮೇಲೆ ಕ್ಲಿಕ್ ಮಾಡಿ, ಇಲ್ಲದಿದ್ದರೆ, ನೀವು ವಿವರಗಳನ್ನು ತಿದ್ದುಪಡಿ ಮಾಡಬಹುದು.

Data responsive

ಹಂತ 14: ಲಭ್ಯವಿರುವ ಯಾವುದೇ ಪರಿಶೀಲನೆಯ ವಿಧಾನವನ್ನು ಬಳಸಿಕೊಂಡು ನೀವು ಫಾರ್ಮ್ಅನ್ನು ಇ-ಪರಿಶೀಲನೆ ಮಾಡಬಹುದು.

Data responsive

ಇ-ಪರಿಶೀಲನೆ ಪೂರ್ಣಗೊಂಡ ನಂತರ, ಫಾರ್ಮ್ 10E ಸಲ್ಲಿಕೆಯಾಗುತ್ತದೆ. ಸ್ವೀಕೃತಿ ಸಂಖ್ಯೆ ರಚನೆಯಾಗಿ, ನಿಮ್ಮ ನೋಂದಾಯಿತ ಇ-ಮೇಲ್ ID ಮತ್ತು ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

5. ಸಲ್ಲಿಸಿದ ಫಾರ್ಮ್ ಅನ್ನು ಹೇಗೆ ವೀಕ್ಷಿಸುವುದು?

ಇ-ಸಲ್ಲಿಕೆ > ಆದಾಯ ತೆರಿಗೆ ಕಾಯ್ದೆ, 1961ರ ಪ್ರಕಾರ ಫಾರ್ಮ್‌ಗಳು> ಆದಾಯ ತೆರಿಗೆ ಫಾರ್ಮ್‌ಗಳು > ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ ಗೆ ಹೋಗಿ.

Data responsive

ಸಲ್ಲಿಸಿದ ಫಾರ್ಮ್‌ನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

Data responsive