ಫೈಲ್ ಮಾಡಿದ ಫಾರ್ಮ್ ವೀಕ್ಷಿಸುವ
(ನೀವು ಸಲ್ಲಿಸಿದ ಫ಼ಾರ್ಮ್ಗಳನ್ನು ತಕ್ಷಣ ಪಡೆಯಿರಿ)
ಸಲ್ಲಿಸಿದ ಫಾರ್ಮ್ಗಳನ್ನು ವೀಕ್ಷಿಸಿ
1. ನಾನು ಸಲ್ಲಿಸಿದ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದೇ?
ಹೌದು. ನೀವು ಇ-ಫೈಲಿಂಗ್ ಪೋರ್ಟಲ್ನಲ್ಲಿ ಸಲ್ಲಿಸಿದ ಫಾರ್ಮ್ನ ಪಿಡಿಎಫ್ (PDF) ಆವೃತ್ತಿಯನ್ನು ಈ ಕೆಳಗಿನಂತೆ ಡೌನ್ಲೋಡ್ ಮಾಡಿಕೊಳ್ಳಬಹುದುಇ-ಫೈಲ್>ಆದಾಯ ತೆರಿಗೆ ಫಾರ್ಮ್ಗಳು > ಸಲ್ಲಿಸಿದ ಫಾರ್ಮ್ಗಳನ್ನು ವೀಕ್ಷಿಸಿ.
2. ಸಲ್ಲಿಸಿದ ಫಾರ್ಮ್ಗಳನ್ನು ಯಾರು ವೀಕ್ಷಿಸಬಹುದು?
ಇ-ಫೈಲಿಂಗ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿರುವ ಯಾರಾದರೂ ತಾವು ಸಲ್ಲಿಸಿದ ಅಥವಾ ತಮ್ಮ ಪರವಾಗಿ ಅಧಿಕೃತ ಪ್ರತಿನಿಧಿಯು ಸಲ್ಲಿಸಿದ ಫಾರ್ಮ್ಗಳನ್ನು ವೀಕ್ಷಿಸಬಹುದು.
3. ಲೆಕ್ಕಪರಿಶೋಧಕ (CA) ಈ ಹಿಂದೆ ಸಲ್ಲಿಸಿದ ಫಾರ್ಮ್ 15CA / 15CB ಅನ್ನು ಹೇಗೆ ವೀಕ್ಷಿಸಬಹುದು
ಸಿಎ ಲಾಗಿನ್ ಅಥವಾ ಟ್ಯಾನ್ ಲಾಗಿನ್ ಹೊಂದಿರುವ ಬಳಕೆದಾರರು ಫಾರ್ಮ್ 15CA / 15CB ಅನ್ನು ಈ ಕೆಳಗಿನಂತೆ ವೀಕ್ಷಿಸಬಹುದು: ಸಲ್ಲಿಸಿದ ಫಾರ್ಮ್ಗಳನ್ನು ವೀಕ್ಷಿಸಿಇ-ಫೈಲಿಂಗ್ ಪೋರ್ಟಲ್ನಲ್ಲಿರುವ ಸೇವೆಗಳು.
4. "ಸಲ್ಲಿಸಿದ ಫಾರ್ಮ್ಗಳನ್ನು ವೀಕ್ಷಿಸಿ" ವಿಭಾಗದಲ್ಲಿ ನಾನು ಯಾವ ಫಾರ್ಮ್ಗಳನ್ನು ವೀಕ್ಷಿಸಬಹುದು?
ನೀವು ಅಥವಾ ನಿಮ್ಮ ಪರವಾಗಿ ಅಧಿಕೃತ ಪ್ರತಿನಿಧಿಯು ಸಲ್ಲಿಸಿದ ಎಲ್ಲಾ ಶಾಸನಬದ್ಧ ಫಾರ್ಮ್ಗಳನ್ನು ನೀವು ವೀಕ್ಷಿಸಬಹುದು. ನಿಮ್ಮ ಪರವಾಗಿ ಲೆಕ್ಕಪರಿಶೋಧಕ (CA) ಸಲ್ಲಿಸಿದ ಫಾರ್ಮ್ಗಳನ್ನು ನೀವು ಹಾಗೂ ಲೆಕ್ಕಪರಿಶೋಧಕ ಇಬ್ಬರೂ ವೀಕ್ಷಿಸಬಹುದು.
5. ಇ-ಫೈಲಿಂಗ್ ಪೋರ್ಟಲ್ನಲ್ಲಿ ನಾನು ಈ ಹಿಂದೆ ವೈಯಕ್ತಿಕವಾಗಿ ಸಲ್ಲಿಸಿದ ಫಾರ್ಮ್ ಅನ್ನು ವೀಕ್ಷಿಸಬಹುದೇ?
ಇಲ್ಲ, ಇ-ಫೈಲಿಂಗ್ ಪೋರ್ಟಲ್ನಲ್ಲಿ ನೀವು ಈ ಹಿಂದೆ ಹಸ್ತಚಾಲಿತವಾಗಿ ಸಲ್ಲಿಸಿದ ಫಾರ್ಮ್ಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗುವುದಿಲ್ಲ.
6. ನಾನು ಸಲ್ಲಿಸಿದ ಫಾರ್ಮ್ ಅನ್ನು ಹೇಗೆ ತಿದ್ದುಪಡಿ ಮಾಡಬಹುದು?
ಒಮ್ಮೆ ಫಾರ್ಮ್ ಅನ್ನು ಸಲ್ಲಿಸಿದ ನಂತರ ಅದನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಆದರೆ, ಆದಾಯ ತೆರಿಗೆ ಕಾಯ್ದೆ / ನಿಯಮಗಳ ಪ್ರಕಾರ ಆ ಫಾರ್ಮ್ ಸಲ್ಲಿಸುವ ಸಮಯದ ಮಿತಿ ಮುಗಿಯದೇ ಇದ್ದಲ್ಲಿ, ನೀವು ಹೊಸದಾಗಿ ಮತ್ತೊಂದು ಫಾರ್ಮ್ ಅನ್ನು ಸಲ್ಲಿಸಬಹುದು. ಹಾಗೆ ಮಾಡಿದಾಗ, ಈ ಹಿಂದೆ ಸಲ್ಲಿಸಲಾದ ಫಾರ್ಮ್ ಅನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ.