1. ಅವಲೋಕನ
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಎಲ್ಲಾ ತೆರಿಗೆದಾರರಿಗೆ "ಬ್ಯಾಂಕ್ ಕೌಂಟರ್‌ನಲ್ಲಿ ಪಾವತಿಸಿ" ಬಳಸಿಕೊಂಡು ತೆರಿಗೆ ಪಾವತಿ ಮಾಡುವ ಸೌಲಭ್ಯ ಲಭ್ಯವಿದೆ www.incometax.gov.in (ಲಾಗಿನ್-ಪೂರ್ವ ಅಥವಾ ಲಾಗಿನ್- ನಂತರದ ವಿಧಾನದಲ್ಲಿ).ಈ ಸೇವೆಯೊಂದಿಗೆ, ಚಲನ್ ಫಾರ್ಮ್ (CRN) (ನಗದು / ಚೆಕ್ / ಡಿಮ್ಯಾಂಡ್ ಡ್ರಾಫ್ಟ್ ಮೂಲಕ) ರಚಿಸುವಾಗ ನೀವು ಆಯ್ಕೆ ಮಾಡಿದ ಬ್ಯಾಂಕ್‌ನ ಕೌಂಟರ್‌ನಲ್ಲಿ ಪಾವತಿಸುವ ಮೂಲಕ ನೀವು ತೆರಿಗೆ ಪಾವತಿಯನ್ನು ಮಾಡಬಹುದು.
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
ನೀವು ಲಾಗಿನ್-ಪೂರ್ವ (ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗ್ ಮಾಡುವ ಮೊದಲು) ಅಥವಾ ಲಾಗಿನ್-ನ೦ತರ (ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗ್ ಮಾಡಿದ ನಂತರ) ವಿಧಾನದಲ್ಲಿ "ಬ್ಯಾಂಕ್ ಕೌಂಟರ್‌ನಲ್ಲಿ ಪಾವತಿಸಿ" ಅನ್ನು ಬಳಸಿಕೊಂಡು ತೆರಿಗೆ ಪಾವತಿಯನ್ನು ಮಾಡಬಹುದು.
CBDT ಯ ಅಧಿಸೂಚನೆ 34/2008 ರ ಪ್ರಕಾರ 44AB ನ ನಿಬಂಧನೆಗಳು ಅನ್ವಯವಾಗುವ ತೆರಿಗೆದಾರ ಕಂಪನಿ ಅಥವಾ ವ್ಯಕ್ತಿ (ಕಂಪನಿ ಹೊರತುಪಡಿಸಿ) ಈ ಆಯ್ಕೆಯನ್ನು ಬಳಸಲಾಗುವುದಿಲ್ಲ.
ಅಧಿಕೃತ ಬ್ಯಾಂಕ್‌ಗಳ ಕೌಂಟರ್‌ನಲ್ಲಿ ತೆರಿಗೆ ಪಾವತಿಸಲು ತೆರಿಗೆದಾರರು ಈ ವಿಧಾನವನ್ನು ಪಡೆಯಬಹುದು.
- ಪಾವತಿಯನ್ನು ಮಾಡಲು ಆಯ್ಕೆಮಾಡಿದ ಅಧಿಕೃತ ಬ್ಯಾಂಕ್‌ನ ಶಾಖೆಯ ಮುಂದೆ ಪಾವತಿ ಸಾಧನದ (ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್) ಜೊತೆಗೆ ಚಲನ್ ಫಾರ್ಮ್‌ನ ಸಹಿ ಮಾಡಿದ ಪ್ರತಿಯನ್ನು ಪ್ರಸ್ತುತಪಡಿಸಬೇಕಾಗುತ್ತದೆ.
- ಈ ವಿಧಾನದ ಅಡಿಯಲ್ಲಿ ರೂ. 10,000/- (ಹತ್ತು ಸಾವಿರ ರೂಪಾಯಿಗಳು ಮಾತ್ರ). ಕ್ಕಿಂತ ಹೆಚ್ಚು ತೆರಿಗೆ ಪಾವತಿಯನ್ನು ಅನುಮತಿಸಲಾಗುವುದಿಲ್ಲ.
- ಈ ವಿಧಾನದ ಮೂಲಕ ತೆರಿಗೆ ಪಾವತಿ ಮಾಡಲು ಯಾವುದೇ ವಹಿವಾಟು ಚಾರ್ಜ್/ಶುಲ್ಕ ಅನ್ವಯಿಸುವುದಿಲ್ಲ.
|
ಆಯ್ಕೆ |
ಪೂರ್ವಾಪೇಕ್ಷಿತಗಳು |
|
ಲಾಗಿನ್-ಪೂರ್ವ |
|
|
ಲಾಗಿನ್-ನಂತರ |
|
ಪ್ರಮುಖ ಟಿಪ್ಪಣಿ:
- ಪ್ರಸ್ತುತ, ಇ-ಫೈಲಿಂಗ್ ಪೋರ್ಟಲ್ (ತೆರಿಗೆ ಇ-ಪಾವತಿ ಸೇವೆ) ನಲ್ಲಿ ಓವರ್ ದಿ ಕೌಂಟರ್ (OTC) ವಿಧಾನದ ಮೂಲಕ ತೆರಿಗೆ ಪಾವತಿಯು ಅಧಿಕೃತ ಬ್ಯಾಂಕ್‌ಗಳಾದ ಆಕ್ಸಿಸ್ ಬ್ಯಾಂಕ್, ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್, DCB ಬ್ಯಾಂಕ್, ಫೆಡರಲ್ ಬ್ಯಾಂಕ್, HDFC ಬ್ಯಾಂಕ್, ICICI ಬ್ಯಾಂಕ್, IDBI ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಲಿಮಿಟೆಡ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, RBI, RBL ಬ್ಯಾಂಕ್ ಲಿಮಿಟೆಡ್, ಸೌತ್ ಇಂಡಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, UCO ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಲಭ್ಯವಿದೆ.
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತೆರಿಗೆಗಳ ಇ-ಪಾವತಿ ಸೇವೆಯನ್ನು ಬಳಸಿಕೊಂಡು CRN ಅನ್ನು ರಚಿಸಿದ ನಂತರವೇ ಈ ಸೌಲಭ್ಯವನ್ನು ಪಡೆಯಬೇಕಾಗುತ್ತದೆ.
- ಈ ಎರಡು ಬ್ಯಾಂಕ್‌ಗಳ OTC ವಿಧಾನವನ್ನು ಬಳಸಿಕೊಂಡು ಪಾವತಿ ಮಾಡಲು ತೆರಿಗೆದಾರರು ಚಲನ್ ಫಾರ್ಮ್ ಅನ್ನು ಬ್ಯಾಂಕ್ ಕೌಂಟರ್‌ಗೆ ತೆಗೆದುಕೊಂಡು ಹೋಗಬೇಕಾಗುತ್ತದೆ.
- ದಯವಿಟ್ಟು ಗಮನಿಸಿ: ಮೇಲಿನ ಬ್ಯಾಂಕ್ ಪಟ್ಟಿಯು ಸಹಜವಾಗಿ ಕ್ರಿಯಾತ್ಮಕವಾಗಿದೆ, ಮುಂದಿನ ದಿನಾಂಕಗಳಲ್ಲಿ ಬ್ಯಾಂಕ್‌ಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು. ಈ ಮಾಹಿತಿಯು ಜುಲೈ 25, ,2023 ರಂತೆ ಇರುತ್ತದೆ.
3. ಹಂತ ಹಂತದ ಮಾರ್ಗದರ್ಶಿ
3.1. ಹೊಸ ಚಲನ್ ಫಾರ್ಮ್ (CRN) ರಚಿಸಿದ ನಂತರ ಪಾವತಿಸಿ - ಲಾಗಿನ್-ನಂತರದ ಸೇವೆ. TDS ಪಾವತಿಸಲು, ಈ ಪ್ಯಾರಾದಲ್ಲಿ 1 ರಿಂದ 4 ಹಂತಗಳನ್ನು ಅನುಸರಿಸಿ ಮತ್ತು ನಂತರ ಪ್ಯಾರಾ 3.3 ರ 5-10 ಹಂತಗಳನ್ನು ನೋಡಿ.
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ.
ಹಂತ 2: ಡ್ಯಾಶ್‌ಬೋರ್ಡ್‌ನಲ್ಲಿ, ಇ-ಫೈಲ್>ತೆರಿಗೆಗಳ ಇ-ಪಾವತಿ ಕ್ಲಿಕ್ ಮಾಡಿ. ನಿಮ್ಮನ್ನು ತೆರಿಗೆಗಳ ಇ-ಪಾವತಿಗೆ ನ್ಯಾವಿಗೇಟ್ ಮಾಡಲಾಗುತ್ತದೆ.
ಹಂತ 3: ತೆರಿಗೆಗಳ ಇ-ಪಾವತಿಪುಟದಲ್ಲಿ, ಆನ್‌ಲೈನ್ ತೆರಿಗೆ ಪಾವತಿಯನ್ನು ಪ್ರಾರಂಭಿಸಲು ಹೊಸ ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಟಿಪ್ಪಣಿ: ಈ ವಿಧಾನದ ಮೂಲಕ ತೆರಿಗೆ ಪಾವತಿ ಮಾಡುವುದು ಪ್ರಸ್ತುತ ಅಧಿಕೃತ ಬ್ಯಾಂಕ್‌ಗಳಾದ ಆಕ್ಸಿಸ್ ಬ್ಯಾಂಕ್, ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್, DCB ಬ್ಯಾಂಕ್, ಫೆಡರಲ್ ಬ್ಯಾಂಕ್, HDFC ಬ್ಯಾಂಕ್, ICICI ಬ್ಯಾಂಕ್, IDBI ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಲಿಮಿಟೆಡ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, RBI, RBL ಬ್ಯಾಂಕ್ ಲಿಮಿಟೆಡ್, ಸೌತ್ ಇಂಡಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, UCO ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಲಭ್ಯವಿದೆ.
ಮೇಲಿನ ಬ್ಯಾಂಕ್ ಪಟ್ಟಿಯು ಕ್ರಿಯಾತ್ಮಕ ಸ್ವರೂಪದಲ್ಲಿದೆ ಎಂಬುದನ್ನು ದಯವಿಟ್ಟು ಗಮನಿಸಿ, ಮುಂದಿನ ದಿನಾಂಕಗಳಲ್ಲಿ ಬ್ಯಾಂಕ್‌ಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು. ಈ ಮಾಹಿತಿಯು ಜುಲೈ 25, ,2023 ರಂತೆ ಇರುತ್ತದೆ.
ಹಂತ 4: ಹೊಸ ಪಾವತಿ ಪುಟದಲ್ಲಿ, ನಿಮಗೆ ಅನ್ವಯವಾಗುವ ತೆರಿಗೆ ಪಾವತಿ ಪ್ರಕಾರದಲ್ಲಿ ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 5: ಅನ್ವಯವಾಗುವ ತೆರಿಗೆ ಪಾವತಿ ಪ್ರಕಾರ ವನ್ನು ಆಯ್ಕೆ ಮಾಡಿದ ನಂತರ, ತೆರಿಗೆ ಮೌಲ್ಯಮಾಪನ ವರ್ಷ, ಮೈನರ್ ಹೆಡ್, ಇತರ ವಿವರಗಳನ್ನು (ಅನ್ವಯವಾಗುವಂತೆ) ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 6: ತೆರಿಗೆ ವಿಘತನೆಗಳ ವಿವರಗಳನ್ನು ಸೇರಿಸಿ ಪುಟದಲ್ಲಿ, ತೆರಿಗೆ ಪಾವತಿಯ ಒಟ್ಟು ಮೊತ್ತದ ವಿಘಟನೆಯನ್ನು ಸೇರಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 7: ಪಾವತಿ ವಿಧಾನವನ್ನು ಆಯ್ಕೆಮಾಡಿ ಪುಟದಲ್ಲಿ ಬ್ಯಾಂಕ್ ಕೌಂಟರ್ ವಿಧಾನದಲ್ಲಿ ಪಾವತಿಸಿ ಅನ್ನು ಆಯ್ಕೆ ಮಾಡಿ ಮತ್ತು ಚೆಕ್, ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಯನ್ನು ಆಯ್ಕೆ ಮಾಡಿ ಮತ್ತು ನಂತರ, ಆಯ್ಕೆಗಳಿಂದ ಬ್ಯಾಂಕ್ ಹೆಸರನ್ನು ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 8: ಚಲನ್ ಫಾರ್ಮ್ ಪೂರ್ವವೀಕ್ಷಣೆ ಮಾಡಿ ಮತ್ತು ಡೌನ್ಲೋಡ್ ಮಾಡಿ ಪುಟದಲ್ಲಿ, ವಿವರಗಳು ಮತ್ತು ತೆರಿಗೆ ವಿಘಟನೆಯ ವಿವರಗಳನ್ನು ಪರಿಶೀಲಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 9: ಚಲನ್ ಫಾರ್ಮ್ ಅನ್ನು ಯಶಸ್ವಿಯಾಗಿ ರಚಿಸಲಾಗಿದೆ. ಚಲನ್ ಫಾರ್ಮ್ (CRN) ಪ್ರಿಂಟ್ ಮಾಡಿ ಮತ್ತು ಪಾವತಿ ಮಾಡಲು ಆಯ್ಕೆಮಾಡಿದ ಬ್ಯಾಂಕ್‌ನ ಯಾವುದೇ ಶಾಖೆಗೆ ಭೇಟಿ ನೀಡಿ.
ಟಿಪ್ಪಣಿ: ಯಶಸ್ವಿ ಪಾವತಿಯ ನಂತರ, ನೀವು ಇ-ಮೇಲ್ ID ಮತ್ತು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿ ದೃಢೀಕರಣ ಇ-ಮೇಲ್ ಮತ್ತು SMS ಅನ್ನು ಸ್ವೀಕರಿಸುತ್ತೀರಿ. ಒಮ್ಮೆ ಪಾವತಿ ಯಶಸ್ವಿಯಾದರೆ, ಪಾವತಿಯ ವಿವರಗಳು ಮತ್ತು ಚಲನ್ ರಸೀದಿಗಳು ತೆರಿಗೆಗಾಗಿ ಇ-ಪಾವತಿ ಪುಟದಲ್ಲಿ ಪಾವತಿ ಇತಿಹಾಸ ಟ್ಯಾಬ್ ಅಡಿಯಲ್ಲಿ ಲಭ್ಯವಿರುತ್ತವೆ.
3.2. ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗದೆಯೇ ತೆರಿಗೆ ಪಾವತಿಸಿ – ಲಾಗಿನ್-ಪೂರ್ವ ಸೇವೆ TDS ಪಾವತಿಸಲು, ಈ ಪ್ಯಾರಾದಲ್ಲಿ 1 ರಿಂದ 4 ಹಂತಗಳನ್ನು ಅನುಸರಿಸಿ ಮತ್ತು ನಂತರ ಪ್ಯಾರಾ 3.3 ರ 5-10 ಹಂತಗಳನ್ನು ನೋಡಿ.
ಹಂತ 1: ಇ-ಫೈಲಿಂಗ್ ಪೋರ್ಟಲ್ www.incometax.gov.in ಗೆ ಹೋಗಿ ಮತ್ತು ತೆರಿಗೆಗಾಗಿ ಇ-ಪಾವತಿ ಕ್ಲಿಕ್ ಮಾಡಿ.
ಹಂತ 2: ತೆರಿಗೆಗಾಗಿ ಇ-ಪಾವತಿ ಪುಟದಲ್ಲಿ, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 3: OTP ಪರಿಶೀಲನೆ ಪುಟದಲ್ಲಿ, ಹಂತ 2 ರಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ 6-ಅಂಕಿಯ OTP ಅನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 4: OTP ಪರಿಶೀಲನೆಯ ನಂತರ, ನಿಮ್ಮ PAN/TAN ಮತ್ತು ಮರೆಮಾಚಿದ ಹೆಸರಿನೊಂದಿಗೆ ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಮುಂದುವರೆಯಲು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 5: ತೆರಿಗೆಗಾಗಿ ಇ-ಪಾವತಿ ಪುಟದಲ್ಲಿ, ನಿಮಗೆ ಅನ್ವಯಿಸುವ ತೆರಿಗೆ ಪಾವತಿ ವರ್ಗದಲ್ಲಿ ಮುಂದುವರಿಯಿರಿ ಕ್ಲಿಕ್ ಮಾಡಿ. TDS ಪಾವತಿಸಲು, ಪ್ಯಾರಾ 3.2 ರ 5-10 ಹಂತಗಳನ್ನು ನೋಡಿ.
ಹಂತ 6: ಅನ್ವಯವಾಗುವ ತೆರಿಗೆ ಪಾವತಿಯ ಪ್ರಕಾರವನ್ನು ಆಯ್ಕೆ ಮಾಡಿದ ನಂತರ, ತೆರಿಗೆ ಮೌಲ್ಯಮಾಪನ ವರ್ಷ, ಮೈನರ್ ಹೆಡ್, ಇತರ ವಿವರಗಳನ್ನು (ಅನ್ವಯಿಸುವಂತೆ) ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 7: ತೆರಿಗೆ ವಿಘಟನೆಯ ವಿವರಗಳನ್ನು ಸೇರಿಸಿ ಪುಟದಲ್ಲಿ, ತೆರಿಗೆ ಪಾವತಿಯ ಒಟ್ಟು ಮೊತ್ತದ ವಿಘಟನೆಯನ್ನು ಸೇರಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 8: ಪಾವತಿ ವಿಧಾನವನ್ನು ಆಯ್ಕೆಮಾಡಿ ಪುಟದಲ್ಲಿ ಬ್ಯಾಂಕ್ ಕೌಂಟರ್ ಪಾವತಿ ಅನ್ನು ಆಯ್ಕೆ ಮಾಡಿ ಮತ್ತು ಚೆಕ್, ನಗದು, ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಯನ್ನು ಆಯ್ಕೆಮಾಡಿ ಮತ್ತು ನಂತರ, ಆಯ್ಕೆಗಳಿಂದ ಬ್ಯಾಂಕ್ ಹೆಸರನ್ನು ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 9: ಚಲನ್ ಫಾರ್ಮ್ ಪೂರ್ವವೀಕ್ಷಣೆ ಮಾಡಿ ಮತ್ತು ಡೌನ್ಲೋಡ್ ಮಾಡಿ ಪುಟದಲ್ಲಿ, ವಿವರಗಳು ಮತ್ತು ತೆರಿಗೆ ವಿಘಟನೆಯ ವಿವರಗಳನ್ನು ಪರಿಶೀಲಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.

ಹಂತ 10: ಚಲನ್ ಫಾರ್ಮ್ ಅನ್ನು ಯಶಸ್ವಿಯಾಗಿ ರಚಿಸಲಾಗಿದೆ. ಚಲನ್ ಫಾರ್ಮ್ (CRN) ಪ್ರಿಂಟ್ ಮಾಡಿ ಮತ್ತು ಪಾವತಿ ಮಾಡಲು ಆಯ್ಕೆಮಾಡಿದ ಬ್ಯಾಂಕ್‌ನ ಯಾವುದೇ ಶಾಖೆಗೆ ಭೇಟಿ ನೀಡಿ.
ಟಿಪ್ಪಣಿ: ಯಶಸ್ವಿ ಪಾವತಿಯ ನಂತರ, ನೀವು ಇ-ಮೇಲ್ ID ಮತ್ತು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿ ದೃಢೀಕರಣ ಇ-ಮೇಲ್ ಮತ್ತು SMS ಅನ್ನು ಸ್ವೀಕರಿಸುತ್ತೀರಿ. ಒಮ್ಮೆ ಪಾವತಿ ಯಶಸ್ವಿಯಾದರೆ, ಭವಿಷ್ಯದ ಉಲ್ಲೇಖಗಳಿಗಾಗಿ ಚಲನ್ ರಶೀದಿಯನ್ನು ಡೌನ್‌ಲೋಡ್ ಮಾಡಬಹುದು. ಪಾವತಿಯ ವಿವರಗಳು ಮತ್ತು ಚಲನ್ ರಶೀದಿಯು ತೆರಿಗೆಗಾಗಿ ಇ-ಪಾವತಿ ಲಾಗಿನ್-ನಂತರ ಪುಟದಲ್ಲಿ ಪಾವತಿ ಇತಿಹಾಸದ ಟ್ಯಾಬ್‌ನ ಅಡಿಯಲ್ಲಿ ಲಭ್ಯವಿರುತ್ತದೆ.
3.3 ಬ್ಯಾಂಕ್ ಕೌಂಟರ್‌ನಲ್ಲಿ ಪಾವತಿಸುವ ಮೂಲಕ TDS ಪಾವತಿಸಿ
ಹಂತ 5: ತೆರಿಗೆಗಾಗಿ ಇ-ಪಾವತಿ ಪುಟದಲ್ಲಿ, ನಿಮಗೆ ಅನ್ವಯಿಸುವ ತೆರಿಗೆ ಪಾವತಿ ವರ್ಗದಲ್ಲಿ ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 6: ತೆರಿಗೆ ಮೌಲ್ಯಮಾಪನ ವರ್ಷ ಮತ್ತು TDS ಪಾವತಿಸಿ ಪ್ರಕಾರವನ್ನು ಆಯ್ಕೆ ಮಾಡಿದ ನಂತರ ಮೈನರ್ ಹೆಡ್ (ಅನ್ವಯವಾಗುವಂತೆ) ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 7: ತೆರಿಗೆ ವಿಘಟನೆಯ ವಿವರಗಳನ್ನು ಸೇರಿಸಿ ಪುಟದಲ್ಲಿ, ತೆರಿಗೆ ಪಾವತಿಯ ಒಟ್ಟು ಮೊತ್ತದ ವಿಘಟನೆಯನ್ನು ಸೇರಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 8:ಪಾವತಿ ವಿಧಾನವನ್ನು ಆಯ್ಕೆಮಾಡಿಪುಟದಲ್ಲಿ ಬ್ಯಾಂಕ್ ಕೌಂಟರ್ ವಿಧಾನದಲ್ಲಿ ಪಾವತಿಸಿ ಅನ್ನು ಆಯ್ಕೆ ಮಾಡಿ ಮತ್ತು ಚೆಕ್, ನಗದು, ಡಿಮ್ಯಾಂಡ್ ಡ್ರಾಫ್ಟ್ ಅಥವಾ ಆಂತರಿಕ ವರ್ಗಾವಣೆಯ ಮೂಲಕ ಪಾವತಿಯನ್ನು ಆಯ್ಕೆಮಾಡಿ (RBIಗೆ ಮಾತ್ರ ಅನ್ವಯಿಸುತ್ತದೆ) ಮತ್ತು ನಂತರ, ಆಯ್ಕೆಗಳಿಂದ ಬ್ಯಾಂಕ್ ಹೆಸರನ್ನು ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 9: ಚಲನ್ ಫಾರ್ಮ್ ಪೂರ್ವವೀಕ್ಷಣೆ ಮಾಡಿ ಮತ್ತು ಡೌನ್ಲೋಡ್ ಮಾಡಿ ಪುಟದಲ್ಲಿ, ವಿವರಗಳು ಮತ್ತು ತೆರಿಗೆ ವಿಘಟನೆಯ ವಿವರಗಳನ್ನು ಪರಿಶೀಲಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 10: ಚಲನ್ ಫಾರ್ಮ್ ಅನ್ನು ಯಶಸ್ವಿಯಾಗಿ ರಚಿಸಲಾಗಿದೆ. ಚಲನ್ ಫಾರ್ಮ್ (CRN) ಪ್ರಿಂಟ್ ಮಾಡಿ ಮತ್ತು ಪಾವತಿ ಮಾಡಲು ಆಯ್ಕೆಮಾಡಿದ ಬ್ಯಾಂಕ್‌ನ ಯಾವುದೇ ಶಾಖೆಗೆ ಭೇಟಿ ನೀಡಿ.
ಟಿಪ್ಪಣಿ: ಯಶಸ್ವಿ ಪಾವತಿಯ ನಂತರ, ನೀವು ಇ-ಮೇಲ್ ID ಮತ್ತು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿ ದೃಢೀಕರಣ ಇ-ಮೇಲ್ ಮತ್ತು SMS ಅನ್ನು ಸ್ವೀಕರಿಸುತ್ತೀರಿ. ಒಮ್ಮೆ ಪಾವತಿ ಯಶಸ್ವಿಯಾದರೆ, ಭವಿಷ್ಯದ ಉಲ್ಲೇಖಗಳಿಗಾಗಿ ಚಲನ್ ರಶೀದಿಯನ್ನು ಡೌನ್‌ಲೋಡ್ ಮಾಡಬಹುದು. ಪಾವತಿಯ ವಿವರಗಳು ಮತ್ತು ಚಲನ್ ರಶೀದಿಯು ತೆರಿಗೆಗಾಗಿ ಇ-ಪಾವತಿ ಲಾಗಿನ್-ನಂತರ ಪುಟದಲ್ಲಿ ಪಾವತಿ ಇತಿಹಾಸದ ಟ್ಯಾಬ್‌ನ ಅಡಿಯಲ್ಲಿ ಲಭ್ಯವಿರುತ್ತದೆ.