ತನ್ನ ಪರವಾಗಿ ಕಾರ್ಯನಿರ್ವಹಿಸಲು ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ನೀಡುವಿಕೆ (ಅಧಿಕೃತ ಸಹಿದಾರರನ್ನು ಸೇರಿಸಿ)
1. ಅವಲೋಕನ
ಇ-ಫೈಲಿಂಗ್ ಪೋರ್ಟಲ್‌ನ ಎಲ್ಲಾ ನೋಂದಾಯಿತ ಬಳಕೆದಾರರಿಗೆ ಈ ಸೇವೆ ಲಭ್ಯವಿದೆ. ಈ ಸೇವೆಯು ಇ-ಫೈಲಿಂಗ್ ಪೋರ್ಟಲ್‌ನ ನೋಂದಾಯಿತ ಬಳಕೆದಾರರಿಗೆ ತಮ್ಮ ITRಗಳು / ಫಾರ್ಮ್‌ಗಳು / ಸೇವಾ ವಿನಂತಿಗಳನ್ನು ತಾವು ದೇಶದಲ್ಲಿಲ್ಲದ ಅಥವಾ ಅನಿವಾಸಿಗಳಾಗಿರುವುದರಿಂದ, ಅಥವಾ ಇತರ ಯಾವುದೇ ಕಾರಣಕ್ಕಾಗಿ ಪರಿಶೀಲಿಸಲು ಸಾಧ್ಯವಾಗದವರಿಗೆ ITRಗಳು / ಫಾರ್ಮ್‌ಗಳು / ಸೇವಾ ವಿನಂತಿಗಳನ್ನು ಪರಿಶೀಲಿಸಲು ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ನೀಡಲು ಸಕ್ರಿಯಗೊಳಿಸುತ್ತದೆ. ಈ ಸೇವೆಯು ಬಳಕೆದಾರರಿಗೆ ತೆರಿಗೆದಾರರ ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಮತ್ತು ಇನ್ನೊಬ್ಬ ವ್ಯಕ್ತಿಯ ಪರವಾಗಿ ಕಾರ್ಯನಿರ್ವಹಿಸಲು ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
-
ಮಾನ್ಯವಿರುವ ಬಳಕೆದಾರರ ID ಮತ್ತು ಪಾಸ್‌ವರ್ಡ್
-
PAN ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿದೆ
3. ಪ್ರಕ್ರಿಯೆ /ಹಂತ ಹಂತದ ಮಾರ್ಗದರ್ಶಿ
3.1 ಮತ್ತೊಬ್ಬ ವ್ಯಕ್ತಿಯ ಪರವಾಗಿ ಕಾರ್ಯನಿರ್ವಹಿಸಲು ನೋಂದಣಿ ಮಾಡಿ
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್ ಪೇಜ್‌ಗೆ ಹೋಗಿ.
ಹಂತ 2: ಬಳಕೆದಾರ ID ಮತ್ತು ಪಾಸ್‌ವರ್ಡ್ ನಮೂದಿಸಿ.
ಹಂತ 3: ಅಧಿಕೃತ ಪಾಲುದಾರರುಅಲ್ಲಿಗೆ ಹೋಗಿ ತನ್ನ ಪರವಾಗಿ ಕಾರ್ಯನಿರ್ವಹಿಸಲು ಮತ್ತೊಬ್ಬ ವ್ಯಕ್ತಿಗೆ ಅಧಿಕಾರ ನೀಡಿ ಕ್ಲಿಕ್ ಮಾಡಿ
ಹಂತ 4: ಪ್ರಾರಂಭಿಸೋಣ ಮೇಲೆ ಕ್ಲಿಕ್ ಮಾಡಿ
ಹಂತ 5: + ಮೇಲೆ ಕ್ಲಿಕ್ ಮಾಡಿ ಅಧಿಕೃತ ಸಹಿದಾರರನ್ನು ಸೇರಿಸಿ
ಹಂತ 6: ಅಧಿಕೃತ ಸಹಿದಾರರನ್ನು ಸೇರಿಸಲು ಕಾರಣ ಆಯ್ಕೆ ಮಾಡಿ, ಅಧಿಕೃತ ಸಹಿದಾರರ PAN ಅನ್ನು ನಮೂದಿಸಿ ಮತ್ತು ಅವಧಿ (ಪ್ರಾರಂಭದಿಂದ ಕೊನೆಯ ದಿನಾಂಕ) ಅಥವಾ ಕಾರ್ಯ ಯಾವುದನ್ನು ಅಧಿಕೃತಗೊಳಿಸುತ್ತಿದ್ದೀರೋ ಅದನ್ನು ಆಯ್ಕೆ ಮಾಡಿ.
ಸೂಚನೆ:
ಕೆಳಗಿನ ಕಾರ್ಯಗಳಿಗಾಗಿ ಅಧಿಕೃತ ಸಹಿದಾರರನ್ನು ಸೇರಿಸಬಹುದು:
- ಆದಾಯದ ರಿಟರ್ನ್ ಸಲ್ಲಿಕೆ ಮತ್ತು ಪರಿಶೀಲನೆ
- ಆದಾಯದ ರಿಟರ್ನ್ ಪರಿಶೀಲನೆ
- ಫಾರ್ಮ್ ಸಲ್ಲಿಕೆ
- ಸೇವಾ ಮನವಿ ಸಲ್ಲಿಕೆ
ಹಂತ 7: ಈಗ ವಿನಂತಿಯನ್ನು ಪರಿಶೀಲಿಸಲು ಇ-ಫೈಲಿಂಗ್ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ID ಯಲ್ಲಿ ಸ್ವೀಕರಿಸಿದ 6-ಅಂಕಿಯ OTP ಯನ್ನು ನಮೂದಿಸಿ.
ಹಂತ 8: ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ, ಈಗ ಅಧಿಕೃತ ಸಹಿದಾರರು 7 ದಿನಗಳ ಒಳಗಾಗಿ ವಿನಂತಿಯನ್ನು ಸ್ವೀಕರಿಸುತ್ತಾರೆ. 7 ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಪ್ರಕ್ರಿಯೆಗೊಳಿಸಲಾಗುತ್ತದೆ.
ವಿನಂತಿಯನ್ನು ವೀಕ್ಷಿಸಲು ವಿನಂತಿಯನ್ನು ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ.
3.2 ಅಧಿಕೃತ ಸಹಿದಾರರಿಂದ ವಿನಂತಿಯ ಸ್ವೀಕಾರ:
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್ ಪೇಜ್‌ಗೆ ಹೋಗಿ.
ಹಂತ 2: ಬಳಕೆದಾರ ID ಮತ್ತು ಪಾಸ್‌ವರ್ಡ್ ನಮೂದಿಸಿ.
ಹಂತ 3: ಬಾಕಿ ಇರುವ ಕಾರ್ಯಗಳು ಇಲ್ಲಿಗೆ ಹೋಗಿ ಕಾರ್ಯಪಟ್ಟಿಯ ಮೇಲೆ ಕ್ಲಿಕ್ ಮಾಡಿ
ಹಂತ 4: ಕಾರ್ಯಪಟ್ಟಿ ತೆರೆಯುತ್ತದೆ, ಅಲ್ಲಿ ತೆರಿಗೆದಾರರಿಂದ ಅಧಿಕೃತ ಸಹಿದಾರರನ್ನು ಸೇರಿಸಲು ನೀಡಿರುವ ವಿನಂತಿಯನ್ನು ನೀವು ನೋಡಬಹುದು. ವಿನಂತಿಯನ್ನು ಸ್ವೀಕರಿಸಲು ಅಂಗೀಕರಿಸಿ ಮೇಲೆ ಕ್ಲಿಕ್ ಮಾಡಿ.
ಹಂತ 5:ಈಗ ಫೈಲ್ ಅಟಾಚ್ ಮಾಡಿ ಕ್ಲಿಕ್ ಮಾಡಿ, ಅದರ ಮೂಲಕ ಪವರ್ ಆಫ್ ಅಟಾರ್ನಿ ಅಟಾಚ್ ಮಾಡಿ ಮತ್ತು ಪರಿಶೀಲನೆಗೆ ಮುಂದುವರಿಸಿ ಕ್ಲಿಕ್ ಮಾಡಿ
ಸೂಚನೆ:
1) ಗರಿಷ್ಟ ಫೈಲ್ ಗಾತ್ರವು 5 MB ವರೆಗೆ ಇರಬಹುದು.
2) ಫೈಲ್‌ಗಳನ್ನು PDF ಫಾರ್ಮ್ಯಾಟ್‌ನಲ್ಲಿ ಮಾತ್ರ ಅಪ್ಲೋಡ್ ಮಾಡಬಹುದು.
ಹಂತ 6: ಈಗ ಕೆಳಕಂಡ ಪರಿಶೀಲನಾ ವಿಧಾನಗಳ ಮೂಲಕ ವಿನಂತಿಯನ್ನು ಪರಿಶೀಲಿಸಿ:
ಪರಿಶೀಲನೆಯ ನಂತರ ಆದಾಯ ತೆರಿಗೆ ಇಲಾಖೆಯು ವಿನಂತಿಯನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ದೃಢೀಕರಣವು ಪರಿಣಾಮಕಾರಿಯಾಗಲು 24 ರಿಂದ 72 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಸಂಬಂಧಿತ ವಿಷಯಗಳು
- ಲಾಗಿನ್
- PAN ಆಧಾರ್ ಲಿಂಕ್
- ಡ್ಯಾಶ್‌ಬೋರ್ಡ್
- ಆದಾಯ ತೆರಿಗೆ ರಿಟರ್ನ್
- ITR ಸಲ್ಲಿಸಿ
- ಹೋಮ್ ಪೇಜ್
- ಇ-ಪರಿಶೀಲಿಸುವುದು ಹೇಗೆ
ಪದಕೋಶ
|
ಸಂಕ್ಷಿಪ್ತ / ಸಂಕ್ಷೇಪಣ |
ವಿವರಣೆ/ಪೂರ್ಣ ಸ್ವರೂಪ |
|
AO |
ಮೌಲ್ಯಮಾಪನ ಅಧಿಕಾರಿ |
|
AY |
ತೆರಿಗೆ ಮೌಲ್ಯಮಾಪನ ವರ್ಷ |
|
AOP |
ವ್ಯಕ್ತಿಗಳ ಸಂಘ |
|
BOI |
ವ್ಯಕ್ತಿಗಳ ಸಮೂಹ ಸಂಸ್ಥೆ |
|
CA |
ಚಾರ್ಟರ್ಡ್ ಅಕೌಂಟೆಂಟ್ |
|
CPC |
ಕೇಂದ್ರೀಕೃತ ಸಂಸ್ಕರಣಾ ಕೇಂದ್ರ |
|
ERI |
ಇ-ರಿಟರ್ನ್ ಮಧ್ಯವರ್ತಿ |
|
LA |
ಸ್ಥಳೀಯ ಪ್ರಾಧಿಕಾರ |
|
TDS |
ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ |
|
EXTA |
ಬಾಹ್ಯ ಏಜೆನ್ಸಿ |
|
ITDREIN |
ಆದಾಯ ತೆರಿಗೆ ಇಲಾಖೆ ವರದಿ ಮಾಡುವ ಘಟಕದ ಗುರುತಿನ ಸಂಖ್ಯೆ |
|
HUF |
ಹಿಂದೂ ಅವಿಭಾಜಿತ ಕುಟುಂಬ |
|
EVC |
ಎಲೆಕ್ಟ್ರಾನಿಕ್ ಪರಿಶೀಲನೆ ಕೋಡ್ |
|
DSC |
ಡಿಜಿಟಲ್ ಸಹಿ ಪ್ರಮಾಣಪತ್ರ |
|
ITD |
ಆದಾಯ ತೆರಿಗೆ ಇಲಾಖೆ |
|
ITR |
ಆದಾಯ ತೆರಿಗೆ ರಿಟರ್ನ್ |