AY 2026-27ರಲ್ಲಿ ವ್ಯವಹಾರ / ವೃತ್ತಿಯಿಂದ ಆದಾಯ ಹೊಂದಿದ ನೈಸರ್ಗಿಕವ್ಯಕ್ತಿಗೆ ಅನ್ವಯಿಸುವ ರಿಟರ್ನ್
ಗಮನಿಸಿ: ಈ ಪುಟದಲ್ಲಿರುವ ಮಾಹಿತಿ ಕೇವಲ ಸಾಮಾನ್ಯ ತಿಳುವಳಿಕೆ ಮತ್ತು ಮಾರ್ಗದರ್ಶನಕ್ಕಾಗಿ ಕೊಟ್ಟಿರುವುದೇ ಹೊರತು, ಪರಿಪೂರ್ಣವಲ್ಲ. ಸಂಪೂರ್ಣ ವಿವರ ಹಾಗೂ ಮಾರ್ಗದರ್ಶನಕ್ಕಾಗಿ ಆದಾಯ ತೆರಿಗೆ ಕಾಯ್ದೆ 1961, ನಿಯಮಗಳು ಮತ್ತು ಅಧಿಸೂಚನೆಗಳನ್ನು ನೋಡಿ.
| 1. ITR-3 - ವ್ಯಕ್ತಿ ಮತ್ತು HUF ಗೆ ಅನ್ವಯಿಸುತ್ತದೆ | |
| ಈ ರಿಟರ್ನ್, ನೈಸರ್ಗಿಕವ್ಯಕ್ತಿ ಮತ್ತು ಹಿಂದೂ ಅವಿಭಕ್ತ ಕುಟುಂಬ (HUF)ಗಳಿಗೆ ಅನ್ವಯಿಸುತ್ತದೆ: | |
| ವೇತನ/ಪಿಂಚಣಿ, ಮನೆ ಆಸ್ತಿ, ವ್ಯವಹಾರ/ವೃತ್ತಿಯ ಲಾಭ/ಸಂಪಾದನೆ, ಬಂಡವಾಳ ಗಳಿಕೆ ಅಥವಾ ಇತರ ಮೂಲಗಳಿಂದ ಆದಾಯ ಹೊಂದಿರುವವರು | ITR-1, ITR-2 or ITR-4 ಸಲ್ಲಿಸುವುದಕ್ಕೆ ಯಾರು ಅನರ್ಹರೋ ಅವರು |
| 2. ITR-4 (SUGAM) – ಜನ, ಹಿಂದೂ ಅವಿಭಕ್ತ ಕುಟುಂಬ (HUF), ಪಾಲುದಾರಿಕೆ ಸಂಸ್ಥೆ (LLP ಹೊರತುಪಡಿಸಿ) | ||||||
|
"ಸಾಮಾನ್ಯವಾಗಿ ಸ್ಥಳೀಯರಲ್ಲದ ವರ್ಗಕ್ಕೆ ಸೇರದ ಸ್ಥಳೀಯ ನೈಸರ್ಗಿಕವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬಕ್ಕೆ (HUF), ಅಥವಾ ರೂ. 50 ಲಕ್ಷದ ವರೆಗಿನ ಒಟ್ಟು ಆದಾಯ ಹೊಂದಿದ ಮತ್ತು ಪೂರ್ವಗ್ರಹಿಕೆಯ ಆಧಾರದ ಮೇಲೆ (ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 44AD / 44ADA / 44AEರ ಅಡಿಯಲ್ಲಿ) ವ್ಯವಹಾರ ಅಥವಾ ವೃತ್ತಿಯ ಆದಾಯವನ್ನು ಗಣಿಸಿದ ಮತ್ತು ಈ ಕೆಳಕಂಡ ಯಾವುದೇ ಮೂಲಗಳಿಂದ ಆದಾಯ ಹೊಂದಿದ ಸ್ಥಳೀಯ ಪಾಲುದಾರಿಕೆಗೆ (LLP ಹೊರತುಪಡಿಸಿ) ಈ ರಿಟರ್ನ್ ಅನ್ವಯಿಸುತ್ತದೆ.
|
ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ಅನ್ವಯವಾಗುವ ಫಾರ್ಮುಗಳು
| 1. ಫಾರ್ಮ್ 16A ಸರ್ಟಿಫಿಕೇಟ್ - ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 203 ಅಡಿಯಲ್ಲಿ, ವೇತನ ಹೊರತು ಪಡಿಸಿ ಇನ್ನುಳಿದ ಆದಾಯಗಳ ಮೇಲಿನ ತೆರಿಗೆ ಕಡಿತಕ್ಕಾಗಿ | |
| ಒದಗಿಸಿದವರು | ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು |
| ತೆರಿಗೆ ಕಡಿತಗೊಳಿಸುವವರಿಂದ ತೆರಿಗೆ ಕಡಿತಕ್ಕೊಳಗಾದವರಿಗೆ | ಫಾರ್ಮ್ 16A ಮೂರು ತಿಂಗಳಿಗೊಮ್ಮೆ ನೀಡಲಾಗುವ, ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (TDS) ಸರ್ಟಿಫಿಕೇಟ್ ಆಗಿದ್ದು, ಜಮಾ ಮಾಡಿದ ಮೊತ್ತ, TDS ಮೊತ್ತ, ಪಾವತಿಯ ಸ್ವರೂಪ ಮತ್ತು ಆದಾಯ ತೆರಿಗೆ ಇಲಾಖೆಗೆ ಜಮಾ ಮಾಡಿದ TDS ಪಾವತಿಯ ವಿವರಗಳನ್ನೊಳಗೊಂಡಿರುತ್ತದೆ. |
| 2. ಫಾರ್ಮ್ 26 AS | AIS (ವಾರ್ಷಿಕ ಮಾಹಿತಿ ಪಟ್ಟಿ) |
|
ಒದಗಿಸಿದವರು:
ಆದಾಯ ತೆರಿಗೆ ಇಲಾಖೆ (ಇದು e-Filing ಪೋರ್ಟಲ್‌ನಲ್ಲಿ ಲಭ್ಯವಿದೆ ಲಾಗಿನ್ > ಇ-ಫೈಲ್ > ಆದಾಯ ತೆರಿಗೆ ರಿಟರ್ನ್ > 26AS ಫಾರ್ಮ ನೋಡಿ |
ಒದಗಿಸಿದವರು:
ಆದಾಯ ತೆರಿಗೆ ಇಲಾಖೆ (ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಇದನ್ನು ಪ್ರವೇಶಿಸಬಹುದು) ಇ-ಫೈಲಿಂಗ್ ಪೋರ್ಟಲಿಗೆ ಹೋಗಿ > ಲಾಗಿನ್ > AIS |
|
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು:
ಮೂಲದಲ್ಲೇ ಕಡಿತಗೊಂಡ/ಸಂಗ್ರಹಿಸಿದ ತೆರಿಗೆ
|
ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು:
ಇತರ ಮಾಹಿತಿ (ಬಾಕಿಯಿರುವ/ಮುಕ್ತಾಯಗೊಂಡ ಕಾರ್ಯವಾಹಿಗಳು (proceedings), GST ಮಾಹಿತಿ, ವಿದೇಶೀ ಸರ್ಕಾರದಿಂದ ಪಡೆದ ಮಾಹಿತಿ ಇತ್ಯಾದಿ) |
| 3. ಫಾರ್ಮ್ 3CB-CD | |
|
ಸಲ್ಲಿಸಿದವರು |
ಫಾರ್ಮ್ ನಲ್ಲಿ ಕೊಟ್ಟಿರುವ ವಿವರಗಳು |
|
ಸೆಕ್ಷನ್ 44AB ಅಡಿಯಲ್ಲಿ ತನ್ನ ಲೆಕ್ಕವನ್ನು ಲೆಕ್ಕಿಗರಿಂದ ಆಡಿಟ್ ಮಾಡಿಸಬೇಕಾದ ತೆರಿಗೆ ಪಾವತಿದಾರ. ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 139 (1) ರಲ್ಲಿ ಆದಾಯದ ರಿಟರ್ನ್ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಕನಿಷ್ಟ ಒಂದು ತಿಂಗಳೊಳಗಾಗಿ ಹಾಜರುಪಡಿಸಬೇಕು. |
ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 44AB ಅಡಿಯಲ್ಲಿ ಲೆಕ್ಕ ಪರಿಶೀಲನೆಯ ವರದಿ (ಫಾರ್ಮ್ 3CB) ಮತ್ತು ವಿವರದ ಪಟ್ಟಿ (ಫಾರ್ಮ್ 3CD) ಗಳನ್ನು ಸಲ್ಲಿಸಬೇಕು |
| 4. ತೆರಿಗೆ ಕಡಿತವಿಲ್ಲದೇ ಹಣ ಪಡೆಯುವುದಕ್ಕಾಗಿ ಸ್ಥಳೀಯ ತೆರಿಗೆ ಪಾವತಿದಾರರಿಂದ (ಕಂಪನಿ ಅಥವಾ ಪಾಲುದಾರಿಕೆ ಅಲ್ಲದ) ಫಾರ್ಮ್ 15G - ಘೋಷಣೆ | |
|
ಸಲ್ಲಿಸಿದವರು |
ಫಾರ್ಮ್ ನಲ್ಲಿ ಕೊಟ್ಟಿರುವ ವಿವರಗಳು |
|
ಆದಾಯವು ಮೂಲ ವಿನಾಯಿತಿ ಮಿತಿಯೊಳಗಿದ್ದಲ್ಲಿ, 60 ವರ್ಷ ಮೀರದ ಸ್ಥಳೀಯ ನೈಸರ್ಗಿಕವ್ಯಕ್ತಿ ಅಥವಾ HUF ಅಥವಾ ಬೇರಾವುದೇ ವ್ಯಕ್ತಿ (ಕಂಪನಿ / ಪಾಲುದಾರಿಕೆ ಹೊರತಾಗಿ) ಬಡ್ಡಿ ಆದಾಯದ ಮೇಲೆ TDS ಕಡಿತಗೊಳಿಸದಂತೆ ಬ್ಯಾಂಕಿಗೆ (ಕೋರಿಕೆ ಸಲ್ಲಿಸಬಹುದು?) |
ಹಣಕಾಸು ವರ್ಷಕ್ಕೆ ಅಂದಾಜು ಆದಾಯ |
| 5. ತೆರಿಗೆ ಕಡಿತವಿಲ್ಲದೇ ಹಣ ಪಡೆಯುವುದಕ್ಕಾಗಿ 60 ಅಥವಾ ಹೆಚ್ಚು ವಯಸ್ಸಾದ ಸ್ಥಳೀಯ ನೈಸರ್ಗಿಕವ್ಯಕ್ತಿ ನೀಡಬೇಕಾದ ಫಾರ್ಮ್ 15H - ಘೋಷಣೆ | |
|
ಸಲ್ಲಿಸಿದವರು |
ಫಾರ್ಮ್‌ನಲ್ಲಿ ಕೊಟ್ಟಿರುವ ವಿವರಗಳು |
|
60 ವರ್ಷ ಅಥವಾ ಹೆಚ್ಚಿನ ವಯಸ್ಸಿನ ನಿವಾಸಿ ವ್ಯಕ್ತಿ,ಬಡ್ಡಿ ಆದಾಯದ ಮೇಲೆ TDS ಕಡಿತಗೊಳಿಸದಿರುವುದಕ್ಕಾಗಿ, ಬ್ಯಾಂಕಿಗೆ. |
ಹಣಕಾಸು ವರ್ಷಕ್ಕೆ (FY) ಅಂದಾಜು ಆದಾಯ |
| 6. ಫಾರ್ಮ್ 3CEB | |
|
ಸಲ್ಲಿಸಿದವರು |
ಫಾರ್ಮ್ ನಲ್ಲಿ ಕೊಟ್ಟಿರುವ ವಿವರಗಳು |
|
ಅಂತಾರಾಷ್ಟ್ರೀಯ ಅಥವಾ ನಿರ್ದಿಷ್ಟ ದೇಶೀಯ ವ್ಯವಹಾರಗಳನ್ನು ನಡೆಸುವ ತೆರಿಗೆ ಪಾವತಿದಾರರು ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 92E ಅಡಿಯಲ್ಲಿ ಸನ್ನದು ಲೆಕ್ಕಿಗರಿಂದ ವರದಿಯನ್ನು ಪಡೆಯತಕ್ಕದ್ದು. ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 139 (1) ರಲ್ಲಿ ಆದಾಯದ ರಿಟರ್ನ್ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಕನಿಷ್ಟ ಒಂದು ತಿಂಗಳೊಳಗಾಗಿ ಹಾಜರುಪಡಿಸಬೇಕು. |
ಎಲ್ಲ ಅಂತಾರಾಷ್ಟ್ರೀಯ ಅಥವಾ ನಿರ್ದಿಷ್ಟ ದೇಶೀಯ ವ್ಯವಹಾರ/ಗಳ ವಿವರಗಳನ್ನೊಳಗೊಂಡ ಸನ್ನದು ಲೆಕ್ಕಿಗರ ವರದಿ |
ತೆರಿಗೆ ನಿರ್ಧರಣೆ ವರ್ಷ (AY) 2026-27 ತೆರಿಗೆ ಹಂತಗಳು***
ಹೊಸ ತೆರಿಗೆ ವ್ಯವಸ್ಥೆ Vs ಹಳೆಯ ತೆರಿಗೆ ವ್ಯವಸ್ಥೆ
- ಹಣಕಾಸು ಕಾಯ್ದೆ 2023ಯು ತೆರಿಗೆ ನಿರ್ಧರಣೆ ವರ್ಷ (AY) 2024-25ರಿಂದ ಅನ್ವಯಿಸುವಂತೆ, ನೈಸರ್ಗಿಕವ್ಯಕ್ತಿ, HUF, AOP (ಸಹಕಾರಸಂಘಗಳಲ್ಲದ), BOI ಅಥವಾ ಕೃತಕ ಕಾನೂನುಬದ್ಧ ವ್ಯಕ್ತಿ - ಈ ತೆರಿಗೆದಾರರಿಗೆ ಹೊಸ ತೆರಿಗೆ ವ್ಯವಸ್ಥೆಯು ಪ್ರಾಥಮಿಕ ತೆರಿಗೆ ವ್ಯವಸ್ಥೆಯಾಗುವಂತೆ ಸೆಕ್ಷನ್ 115BACರ ವಿಧಿಗಳನ್ನು ತಿದ್ದುಪಡಿ ಮಾಡಿದೆ . ಆದರೆ, ಅರ್ಹ ತೆರಿಗೆ ಪಾವತಿದಾರರು ಬೇಕಿದ್ದಲ್ಲಿ ಈ ಪ್ರಾಥಮಿಕ ತೆರಿಗೆ ವ್ಯವಸ್ಥೆಯಿಂದ ಹೊರನಡೆಯಲು ಮತ್ತು ಹಳೆಯ ತೆರಿಗೆ ವ್ಯವಸ್ಥೆಯ ಅನುಸಾರವೇ ತೆರಿಗೆಗೊಳಪಡಲು ಸ್ವತಂತ್ರರಾಗಿದ್ದಾರೆ. ಹಳೆಯ ತೆರಿಗೆ ವ್ಯವಸ್ಥೆಯೆಂದರೆ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರುವ ಮುಂಚೆ ಇದ್ದ ತೆರಿಗೆ ಲೆಕ್ಕಾಚಾರ ಮತ್ತು ತೆರಿಗೆ ಹಂತಗಳ ವ್ಯವಸ್ಥೆ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ, ತೆರಿಗೆ ಪಾವತಿದಾರರು ವಿವಿಧ ತೆರಿಗೆ ಕಡಿತಗಳು ಮತ್ತು ವಿನಾಯಿತಿಗಳನ್ನು ಪಡೆಯಬಹುದು.
ವ್ಯವಹಾರಕ್ಕೆ ಸಂಬಂಧಿಸದ ಕೇಸುಗಳು:
- In "non-business cases", option to change the default tax regime can be exercised every year directly in the ITR and such ITR is required to be filed on or before the due date specified under section 139(1) of Income Tax Act,1961.
ವ್ಯವಹಾರಕ್ಕೆ ಸಂಬಂಧಿಸಿದ ಕೇಸುಗಳು
- ವ್ಯವಹಾರ ಮತ್ತು ವೃತ್ತಿಯಿಂದ ಆದಾಯವಿರುವ ಅರ್ಹ ತೆರಿಗೆ ಪಾವತಿದಾರರಿಗೆ ಸಂಬಂಧಿಸಿದಂತೆ, ತೆರಿಗೆ ಪಾವತಿದಾರರು ಪ್ರಾಥಮಿಕ ತೆರಿಗೆ ವ್ಯವಸ್ಥೆಯಿಂದ ಹೊರನಡೆಯಲು ಇಚ್ಛಿಸಿದಲ್ಲಿ ಅವರು ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 139(1)ರಲ್ಲಿ ಆದಾಯದ ರಿಟರ್ನ್ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಥವಾ ಅದಕ್ಕೆ ಮೊದಲು ಫಾರ್ಮ್-10-IEA ಸಲ್ಲಿಸಬಹುದು. ಹಾಗೇ ಆ ಆಯ್ಕೆಯನ್ನು ರದ್ದು ಪಡಿಸಲು, ಎಂದರೆ ಹೊಸ ತೆರಿಗೆ ವ್ಯವಸ್ಥೆಗೆ ಮತ್ತೆ ಬರಲು ಸಹ ಅದೇ ರೀತಿ ಸೆಕ್ಷನ್ 139(1)ರಲ್ಲಿ ಆದಾಯದ ರಿಟರ್ನ್ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಥವಾ ಅದಕ್ಕೆ ಮೊದಲು ಫಾರ್ಮ್-10-IEA ಸಲ್ಲಿಸಬಹುದು. ಆದರೆ, ಹಳೆಯ ತೆರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿ ಪ್ರಾಥಮಿಕ ತೆರಿಗೆ ವ್ಯವಸ್ಥೆಗೆ ಮರಳಿ ಬರುವ ಆಯ್ಕೆ ಮಾತ್ರ ಮುಂದಿನ ತೆರಿಗೆ ನಿರ್ಧಾರಣ ವರ್ಷದಲ್ಲಿ ಲಭ್ಯವಿರುತ್ತದೆ, ಮತ್ತು ಈ ಆಯ್ಕೆ ವ್ಯವಹಾರ ಮತ್ತು ವೃತ್ತಿಯಿಂದ ಆದಾಯವಿರುವ ಅರ್ಹ ತೆರಿಗೆ ಪಾವತಿದಾರರ ಜೀವನದಲ್ಲಿ ಒಮ್ಮೆ ಮಾತ್ರ ಲಭ್ಯವಿರುತ್ತದೆ.
ತೆರಿಗೆ ಹಂತಗಳು:
|
ಹಳೆಯ ತೆರಿಗೆ ವ್ಯವಸ್ಥೆ |
ಪ್ರಾಥಮಿಕ ತೆರಿಗೆ ವ್ಯವಸ್ಥೆ ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 115BAC |
||
|
ಆದಾಯ ತೆರಿಗೆ ಹಂತಗಳು(Slab) |
ಆದಾಯ ತೆರಿಗೆ ದರ |
ಆದಾಯ ತೆರಿಗೆ ಹಂತಗಳು(Slab) |
ಆದಾಯ ತೆರಿಗೆ ದರ |
|
₹ 2,50,000ದ ವರೆಗೂ |
ಶೂನ್ಯ |
₹ 4,00,000 ಗಳವರೆಗೆ |
ಶೂನ್ಯ |
|
₹ 2,50,001 - ₹ 5,00,000** |
5% ಮೇಲೆ ₹ 2,50,000 |
₹ 4,00,001 - ₹ 8,00,000 |
5% ಮೇಲೆ ₹ 4,00,000 |
|
₹ 5,00,001 - ₹ 10,00,000 |
₹5,00,000 ಮೇಲ್ಪಟ್ಟ ಆದಾಯದ 20% + ₹ 12,500 |
₹ 8,00,001 - ₹ 12,00,000 |
₹ 8,00,000 ಮೇಲ್ಪಟ್ಟ ಆದಾಯಕ್ಕೆ 10% + ₹ 20,000 |
|
₹ 10,00,000 ಮೇಲ್ಪಟ್ಟು |
₹ 1,12,500 + ಮೇಲೆ 30% ₹ 10,00,000 |
₹ 12,00,001 - ₹ 16,00,000 |
₹ 60,000 + ಮೇಲೆ 15% ₹ 12,00,000 |
|
|
|
₹ 16,00,001 - ₹ 20,00,000 |
₹ 1,20,000 + ಮೇಲೆ 20% ₹ 16,00,000 |
|
|
|
₹ 20,00,001 - ₹ 24,00,000 |
₹ 2,00,000 + ಮೇಲೆ 25% ₹ 20,00,000 |
|
|
₹ 24,00,000ದ ಮೇಲೆ |
3,00,000 + ಮೇಲೆ 30% ₹ 24,00,000 |
|
|
ಹಳೆಯ ತೆರಿಗೆ ಪದ್ಧತಿ |
ಹೊಸ ತೆರಿಗೆ ವ್ಯವಸ್ಥೆ ಆದಾಯ ತೆರಿಗೆ ಕಾಯ್ದೆ, 1961 ಸೆಕ್ಷನ್ 115BAC |
||
|
ಆದಾಯ ತೆರಿಗೆ ಹಂತ |
ಆದಾಯ ತೆರಿಗೆ ದರ |
ಆದಾಯ ತೆರಿಗೆ ಹಂತ |
ಆದಾಯ ತೆರಿಗೆ ದರ |
|
₹ 3,00,000 ವರೆಗೆ |
ಶೂನ್ಯ |
₹ 4,00,000 ಗಳವರೆಗೆ |
ಶೂನ್ಯ |
|
₹ 3,00,001 - ₹ 5,00,000** |
"₹ 3,00,000ದ ಮೇಲೆ 5% |
₹ 4,00,001 - ₹ 8,00,000 |
₹ 4,00,000 ಮೇಲೆ 5% |
|
₹ 5,00,001 – ₹ 10,00,000 |
10,000 + ₹ 5,00,000ದ ಮೇಲೆ 20% |
₹ 8,00,001 - ₹ 12,00,000 |
₹ 20,000 + ₹ 8,00,000 ಮೇಲೆ 10% |
|
₹ 10,00,000 ಮೇಲ್ಪಟ್ಟು |
₹ 1,10,000 + ₹ 10,00,000ದ ಮೇಲೆ 30% |
₹ 12,00,001 - ₹ 16,00,000 |
₹12,00,000 ಮೇಲ್ಪಟ್ಟ ಆದಾಯದ 15% + ₹ 60,000 |
|
|
|
₹ 16,00,001 - ₹ 20,00,000 |
₹ 16,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 20% + ₹ 1,20,000 |
|
|
|
₹ 20,00,001 – ₹ 24,00,000 |
₹ 20,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 25%₹ + 2,00,000 |
|
|
|
₹ 24,00,000 ಮೇಲ್ಪಟ್ಟು |
₹ 24,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 30% + ₹ 3,00,000 |
|
ಹಳೆಯ ತೆರಿಗೆ ಪದ್ಧತಿ |
ಹೊಸ ತೆರಿಗೆ ವ್ಯವಸ್ಥೆ ಆದಾಯ ತೆರಿಗೆ ಕಾಯ್ದೆ ,1961 ಸೆಕ್ಷನ್ 115BAC |
||
|
ಆದಾಯ ತೆರಿಗೆ ಶ್ರೇಣಿ(Slab) |
ಆದಾಯ ತೆರಿಗೆ ದರ |
ಆದಾಯ ತೆರಿಗೆ ಶ್ರೇಣಿ(Slab) |
ಆದಾಯ ತೆರಿಗೆ ದರ |
|
₹ 5,00,000 ಗಳವರೆಗೆ |
ಶೂನ್ಯ |
₹ 4,00,000 ಗಳವರೆಗೆ |
ಶೂನ್ಯ |
|
₹ 5,00,001 - ₹ 10,00,000 |
₹5,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 20% |
₹ 4,00,001 - ₹ 8,00,000** |
₹ 4,00,000 ಮೇಲ್ಪಟ್ಟ ಆದಾಯಕ್ಕೆ 5% |
|
Above ₹ 10,00,000 |
₹ 1,00,000, + ಮೇಲೆ 30% ₹ 10,00,000 |
₹ 8,00,001 - ₹ 12,00,000 |
₹ 8,00,000 ಮೇಲ್ಪಟ್ಟ ಆದಾಯಕ್ಕೆ 10% + ₹ 20,000 |
|
|
|
₹ 12,00,001 - ₹ 16,00,000 |
₹ 60,000 + ಮೇಲೆ 15% ₹ 12,00,000 |
|
|
|
₹ 16,00,001 - ₹ 20,00,000 |
₹ 1,20,000 + ಮೇಲೆ 20% ₹ 16,00,000 |
|
|
|
₹ 20,00,001 - ₹ 24,00,000 |
₹ 2,00,000 + ₹ 20,00,000 ಮೇಲೆ 25% |
| ₹ 24,00,000 ಕ್ಕೂ ಮೇಲ್ಪಟ್ಟು | ₹ 3,00,000 + ₹ 24,00,000ದ ಮೇಲೆ 30% | ||
ಅನ್ವಯವಾಗುವ ಸರ್‌ಚಾರ್ಜ್ ದರ:
|
ಆದಾಯ ಮಿತಿ |
ಆದಾಯ ತೆರಿಗೆ ಮೊತ್ತದ ಮೇಲೆ ವಿಧಿಸಲಾಗುವ ಸರ್‌ಚಾರ್ಜ್ ದರ
(ಹೊಸ ತೆರಿಗೆ ಪದ್ಧತಿ) |
ಆದಾಯ ತೆರಿಗೆ ಮೊತ್ತದ ಮೇಲೆ ವಿಧಿಸಲಾಗುವ ಸರ್‌ಚಾರ್ಜ್ ದರ
(ಹಳೆಯ ತೆರಿಗೆ ಪದ್ಧತಿ)
|
|
ರೂ.50 ಲಕ್ಷ ಗಳವರೆಗೆ |
ಶೂನ್ಯ |
ಶೂನ್ಯ |
|
₹50 ಲಕ್ಷದಿಂದ ₹1 ಕೋಟಿವರೆಗೆ |
10% |
10% |
|
ರೂ. 1 ಕೋಟಿಯಿಂದ ರೂ. 2 ಕೋಟಿಯವರೆಗೆ |
15% |
15% |
|
ರೂ. 2 ಕೋಟಿಯಿಂದ ರೂ. 5 ಕೋಟಿಯವರೆಗೆ |
25% |
25% |
|
ರೂ. 5 ಕೋಟಿಗೂ ಮೇಲ್ಪಟ್ಟು |
25% |
37% |
ಸೂಚನೆ: ಸೆಕ್ಷನ್ 111A, 112, 112A ಅಡಿಯಲ್ಲಿ ತೆರಿಗೆ ವಿಧಿಸಲಾಗುವ ಆದಾಯ ಮತ್ತು ಲಾಭಾಂಶದ ಆದಾಯದ ಮೇಲೆ ಹೆಚ್ಚುವರಿ 25% ಅಥವಾ 37% ಸರ್ಚಾರ್ಜ್ ವಿಧಿಸಲಾಗುವುದಿಲ್ಲ. ಆದುದರಿಂದ ಅಂತಹ ಆದಾಯದ ಮೇಲಿನ ತೆರಿಗೆಯ ಮೇಲೆ ವಿಧಿಸಲಾಗುವ ಸರ್ಚಾರ್ಜ್ 15%ಗೆ ಮಿತಿಗೊಳ್ಳುತ್ತದೆ (ಆದಾಯವು ಸೆಕ್ಷನ್ 115A, 115AB, 115AC, 115ACA and 115Eರ ಅನ್ವಯ ತೆರಿಗೆಗೆ ಒಳಪಟ್ಟಿಲ್ಲದಿದ್ದರೆ ಮಾತ್ರ)
ಆದಾಯ ತೆರಿಗೆ ಕಾಯ್ದೆ 1961ಸೆಕ್ಷನ್ 87A ಅಡಿಯಲ್ಲಿ ಅನ್ವಯಿಸುವ ರಿಬೇಟ್: ಸ್ಥಳೀಯ ನೈಸರ್ಗಿಕವ್ಯಕ್ತಿಗಳೂ 100% ವರೆಗಿನ ಆದಾಯ ತೆರಿಗೆ ರಿಬೇಟಿಗೆ ಅರ್ಹರು (ಈ ಕೆಳಕಂಡಂತೆ ತೆರಿಗೆ ವ್ಯವಸ್ಥೆಗಳ ಮಿತಿಗೊಳಪಟ್ಟು):
|
ತೆರಿಗೆ ಪದ್ಧತಿ |
ರಿಯಾಯತಿ ಮಿತಿ |
ರಿಯಾಯತಿ ಷರತ್ತು |
|
ಹೊಸ ತೆರಿಗೆ ಪದ್ಧತಿ |
₹ 60,000 |
ತೆರಿಗೆಗೊಳಪಡುವ ಆದಾಯವು 12,00,000 ಮೀರಬಾರದು |
|
ಹಳೆಯ ತೆರಿಗೆ ಪದ್ಧತಿ |
12,500 |
ತೆರಿಗೆಗೊಳಪಡುವ ಆದಾಯ 5,00000 ಮೀರಬಾರದು |
ಸೂಚನೆ ಎರಡೂ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಮೊತ್ತ ಮತ್ತು ಸರ್ಚಾರ್ಜ್ (ಇದ್ದರೆ) ಇವುಗಳ ಮೇಲೆ 4% ಆರೋಗ್ಯ & ಶಿಕ್ಷಣ ಸೆಸ್ ಕೊಡಬೇಕು
ಹಳೆಯ ತೆರಿಗೆ ವ್ಯವಸ್ಥಯಲ್ಲಿ ಆದಾಯದ ಮೊತ್ತ ₹ 50 ಲಕ್ಷ, ₹ 1 ಕೋಟಿ, ₹ 2 ಕೋಟಿ ಅಥವಾ ₹ 5 ಕೋಟಿಯನ್ನು ಮೀರಿದರೆ, ಅಥವಾ ಹೊಸ ತೆರಿಗೆ ವ್ಯವಸ್ಥೆಯಲ್ಲಿ ₹ 50 ಲಕ್ಷ, ₹ 1 ಕೋಟಿ, ₹ 2 ಕೋಟಿ ಮೀರಿದರೆ ಈ ಕೆಳಕಂಡಂತೆ ಸರ್ಚಾರ್ಜಿನಿಂದ ಸೀಮಾಂತ ವಿರಾಮ (Marginal relief) ವನ್ನೂ ಕೋರಬಹುದು:
| ನಿವ್ವಳ ಆದಾಯದ ಶ್ರೇಣಿ | ಸೀಮಾಂತ ಪರಿಹಾರ | |
|
ಮೀರಿದ (₹) |
ಮೀರದ (₹) |
|
|
50 ಲಕ್ಷ |
1 ಕೋಟಿ |
ಆದಾಯ ತೆರಿಗೆ ಮತ್ತು ಸರ್ಚಾರ್ಜ್ ನ ಒಟ್ಟು ಮೊತ್ತವು, ರೂ 50 ಲಕ್ಷದ ಒಟ್ಟು ಆದಾಯದ ಮೇಲೆ ಬರುವ ಒಟ್ಟು ತೆರಿಗೆಯನ್ನು ಮೀರಿದ್ದರೆ, ಆ ಹೆಚ್ಚುವರಿ ತೆರಿಗೆಯು ಎರಡೂ ತೆರಿಗೆ ವ್ಯವಸ್ಥೆಯಲ್ಲಿ ರೂ. 50 ಲಕ್ಷದ ಮೇಲಿರುವ ಹೆಚ್ಚುವರಿ ಆದಾಯವನ್ನು ಮೀರಬಾರದು. |
|
1 ಕೋಟಿ |
2 ಕೋಟಿಗಳು |
ಆದಾಯ ತೆರಿಗೆ ಮತ್ತು ಸರ್ಚಾರ್ಜ್ ನ ಒಟ್ಟು ಮೊತ್ತವು, ರೂ 1 ಕೋಟಿಯ ಒಟ್ಟು ಆದಾಯದ ಮೇಲೆ ಬರುವ ಒಟ್ಟು ತೆರಿಗೆಯನ್ನು ಮೀರಿದ್ದರೆ, ಆ ಹೆಚ್ಚುವರಿ ತೆರಿಗೆಯು ಎರಡೂ ತೆರಿಗೆ ವ್ಯವಸ್ಥೆಯಲ್ಲಿ ರೂ. 1 ಕೋಟಿಯ ಮೇಲಿರುವ ಹೆಚ್ಚುವರಿ ಆದಾಯವನ್ನು ಮೀರಬಾರದು. |
|
2 ಕೋಟಿಗಳು |
5 ಕೋಟಿಗಳು |
ಆದಾಯ ತೆರಿಗೆ ಮತ್ತು ಸರ್ಚಾರ್ಜ್ ನ ಒಟ್ಟು ಮೊತ್ತವು, ರೂ 2 ಕೋಟಿಯ ಒಟ್ಟು ಆದಾಯದ ಮೇಲೆ ಬರುವ ಒಟ್ಟು ತೆರಿಗೆಯನ್ನು ಮೀರಿದ್ದರೆ, ಆ ಹೆಚ್ಚುವರಿ ತೆರಿಗೆಯು ಎರಡೂ ತೆರಿಗೆ ವ್ಯವಸ್ಥೆಯಲ್ಲಿ ರೂ. 2 ಕೋಟಿಯ ಮೇಲಿರುವ ಹೆಚ್ಚುವರಿ ಆದಾಯವನ್ನು ಮೀರಬಾರದು. |
|
5 ಕೋಟಿಗಳು |
- |
ಆದಾಯ ತೆರಿಗೆ ಮತ್ತು ಸರ್ಚಾರ್ಜ್ ನ ಒಟ್ಟು ಮೊತ್ತವು, ರೂ 5 ಕೋಟಿಯ ಒಟ್ಟು ಆದಾಯದ ಮೇಲೆ ಬರುವ ಒಟ್ಟು ತೆರಿಗೆಯನ್ನು ಮೀರಿದ್ದರೆ, ಆ ಹೆಚ್ಚುವರಿ ತೆರಿಗೆಯು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ರೂ. 5 ಕೋಟಿಯ ಮೇಲಿರುವ ಹೆಚ್ಚುವರಿ ಆದಾಯವನ್ನು ಮೀರಬಾರದು. |
ತೆರಿಗೆ ಪ್ರಯೋಜನ ಲಭ್ಯವಿರುವ ಹೂಡಿಕೆಗಳು / ಪಾವತಿಗಳು / ಆದಾಯಗಳು
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ದತಿಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೆ ಕಡಿತಗಳು ಲಭ್ಯವಿರುತ್ತವೆ:
| ಸೆಕ್ಷನ್ 24(b) – ಮನೆ ಆಸ್ತಿಯ ಆದಾಯದಿಂದ ಮನೆಸಾಲದ ಬಡ್ಡಿಯ ಇಳಿಕೆ: | |||
| ಆಸ್ತಿಯ ಸ್ವರೂಪ | ಸಾಲದ ಉದ್ದೇಶ | ಅನುಮತಿಸಲ್ಪಟ್ಟ ಗರಿಷ್ಠ ಮಿತಿ | ITR ಅನ್ನು ಭರ್ತಿ ಮಾಡಲು ಅಗತ್ಯವಿರುವ ವಿವರಗಳು |
| ಬಾಡಿಗೆಗೆ ಕೊಟ್ಟಿರುವ ಗೃಹ ಆಸ್ತಿ | ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ | ವಾಸ್ತವ ಮೊತ್ತ - ಯಾವುದೇ ಮಿತಿಯಿಲ್ಲ (ಆದರೆ “ಮನೆ ಆಸ್ತಿಯ ಆದಾಯ” ಶೀರ್ಷಿಕೆಯಡಿ ನಷ್ಟವಿದ್ದರೆ ಅದನ್ನು CYLA ಪರಿಶಿಷ್ಟದ ಯಾವುದೇ ಶೀರ್ಷಿಕೆಯೆದುರೂ ಕಳೆಯಲು ಬರುವುದಿಲ್ಲ, ಮತ್ತು ಆ ನಷ್ಟವನ್ನು ಮುಂದಿನ ವರ್ಷಗಳಿಗೆ ಕೊಂಡೊಯ್ಯಲೂ ಬರುವುದಿಲ್ಲ) |
|
| 2. ಆದಾಯ ತೆರಿಗೆ ಕಾಯ್ದೆ, 1961ರ ಅಧ್ಯಾಯ VIA ಅಲ್ಲಿ ನಮೂದಿಸಲಾದ ತೆರಿಗೆ ಕಡಿತಗಳು | |
| ಸೆಕ್ಷನ್ 80CCD (2) | |
| ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಉದ್ಯೋಗದಾತರು ನೀಡಿದ ಕೊಡುಗೆಗೆ ತೆರಿಗೆ ಕಡಿತ | |
| "ಕೇಂದ್ರಸರ್ಕಾರ"ಅಥವಾ "ರಾಜ್ಯಸರ್ಕಾರ" ಅಥವಾ "PSU" ಅಥವಾ "ಇತರ" | ವೇತನದ 14% ವರೆಗೆ ತೆರಿಗೆ ಕಡಿತದ ಮಿತಿ |
| ಸೆಕ್ಷನ್ 80CCH | |
| ಅಗ್ನಿಪಥ ಯೋಜನೆಗೆ ನೀಡಿದ ಕೊಡುಗೆಗೆ ಸಂಬಂಧಿಸಿದಂತೆ ಇಳಿಕೆ | |
| ತೆರಿಗೆದಾರ, ನೈಸರ್ಗಿಕವ್ಯಕ್ತಿ ಆಗಿದ್ದು, ಅಗ್ನಿಪಥ ಯೋಜನೆಗೆ ನೊಂದಾಯಿಸಿಕೊಂಡಿದ್ದು 2022ರ ನವಂಬರ್ ಮೊದಲ ದಿನ/ದಿನದಿಂದ ಅಗ್ನಿವೀರ್ ಕಾರ್ಪಸ್ ನಿಧಿಗೆ ವಂತಿಗೆ ನೀಡಿದ್ದರೆ, ಕಳೆದ ವರ್ಷ ಆ ನಿಧಿಯಲ್ಲಿರುವ ತನ್ನ ಖಾತೆಗೆ ಹಣ ಪಾವತಿ ಮಾಡಿದ್ದರೆ ಅಥವಾ ಠೇವಣಿ ಇಟ್ಟಿದ್ದರೆ | ಹೀಗೆ ಪಾವತಿಸಿದ ಅಥವಾ ಠೇವಣಿ ಮಾಡಿದ ಮೊತ್ತದ ಒಟ್ಟು ಆದಾಯದ ಲೆಕ್ಕಾಚಾರದಲ್ಲಿ ತೆರಿಗೆ ಕಡಿತವನ್ನು ಅನುಮತಿಸಲಾಗಿದೆ |
| ಕೇಂದ್ರ ಸರ್ಕಾರವು ಅಗ್ನಿವೀರ ಕಾರ್ಪಸ್ ನಿಧಿಯಲ್ಲಿನ ತೆರಿಗೆದಾರರ ಖಾತೆಗೆ ಯಾವುದೇ ಕೊಡುಗೆಯನ್ನು ನೀಡಿದ್ದರೆ | ಒಟ್ಟು ಆದಾಯದ ಲೆಕ್ಕಾಚಾರದಲ್ಲಿ ಹೀಗೆ ಕೊಡುಗೆ ನೀಡಿದ ಮೊತ್ತದ ತೆರಿಗೆ ಕಡಿತವನ್ನು ಅನುಮತಿಸಲಾಗಿದೆ |
ಸೆಕ್ಷನ್ 24(b) – ಮನೆ ಸಾಲ ಮತ್ತು ಮನೆ ನವೀಕರಣದ ಸಾಲದ ಬಡ್ಡಿಗಾಗಿ ಮನೆ ಆಸ್ತಿಯ ಆದಾಯದಿಂದ ಇಳಿಕೆ . ಸ್ವಂತ ವಾಸವಿರುವ ಆಸ್ತಿಯಾದರೆ, ಮನೆ ಸಾಲದ ಬಡ್ಡಿಯ ಮೇಲಿನ ಇಳಿಕೆಯ ಗರಿಷ್ಠ ಮಿತಿ ₹ 2 ಲಕ್ಷ. ಸೆಕ್ಷನ್ 24(b) ಅಡಿಯಲ್ಲಿ ಅನುಮತಿಸಲ್ಪಟ್ಟ ಸಾಲದ ಮೇಲಿನ ಬಡ್ಡಿ ಈ ಕೆಳಕಂಡಂತಿದೆ:
|
ಆಸ್ತಿಯ ಸ್ವರೂಪ |
ಸಾಲ ಪಡೆದ ಸಮಯ |
ಸಾಲದ ಉದ್ದೇಶ |
ಅನುಮತಿಸಬಹುದಾದ (ಗರಿಷ್ಠ ಮಿತಿ) |
ಅಗತ್ಯವಿರುವ ವಿವರಗಳು |
|
ಸ್ವಯಂ - ವಾಸ |
1/04/1999 ರಂದು ಅಥವಾ ನಂತರ |
ಮನೆ ಆಸ್ತಿಯ ನಿರ್ಮಾಣ ಅಥವಾ ಖರೀದಿ |
₹ 2,00,000 |
|
|
1/04/1999 ರಂದು ಅಥವಾ ನಂತರ |
ಗೃಹ ಆಸ್ತಿಯ ದುರಸ್ತಿಗಳಿಗಾಗಿ |
₹ 30,000 |
||
|
1/04/1999 ರ ಮೊದಲು |
ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ |
₹ 30,000 |
||
|
1/04/1999 ರ ಮೊದಲು |
ಗೃಹ ಆಸ್ತಿಯ ದುರಸ್ತಿಗಳಿಗಾಗಿ |
₹ 30,000 |
||
|
ಬಾಡಿಗೆಗೆ ಕೊಟ್ಟಿರುವ ಗೃಹ ಆಸ್ತಿ |
ಯಾವುದೇ ಸಮಯದಲ್ಲಿಯೂ |
ಮನೆ ಆಸ್ತಿಯ ನಿರ್ಮಾಣ ಅಥವಾ ಖರೀದಿ |
"ನೈಜ ಮೊತ್ತ ಯಾವುದೇ ಮಿತಿಯಿಲ್ಲದೆ |
ಆದಾಯ ತೆರಿಗೆ ಕಾಯ್ದೆ 1961 ಅಧ್ಯಾಯ VIA ಅಡಿಯಲ್ಲಿ ನಮೂದಿಸಲಾದ ಇಳಿಕೆಗಳು
| ಸೆಕ್ಷನ್ 80C, 80CCC, 80CCD(1) | ||
| ಮಾಡಿದ ಪಾವತಿಗಳಿಗೆ ತೆರಿಗೆ ಕಡಿತ | ||
| 80C |
|
ಒಟ್ಟಾರೆ ಇಳಿಕೆಯ ಮಿತಿ ₹ 1,50,000 ಪ್ರತಿ ಅರ್ಹ ಪಾವತಿಗಾಗಿ ITR ನಲ್ಲಿ ಭರ್ತಿ ಮಾಡಬೇಕಾದ ವಿವರಗಳು:
|
| 80CCC | ಪಿಂಚಣಿ ಯೋಜನೆಯತ್ತ LIC ಅಥವಾ ಇತರ ವಿಮಾ ಸಂಸ್ಥೆಯ ಅನ್ಯುಯಿಟಿ ಯೋಜನೆ (Annuity plan) | |
| 80CCD(1) | ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ | |
| ಸೆಕ್ಷನ್ 80CCD(1B) | |
|
(1)ಕೇಂದ್ರಸರ್ಕಾರದ ಪಿಂಚಣಿ ಯೋಜನೆಗೆ ಮಾಡಿದ ಪಾವತಿಗಳಿಗೆ ಸಂಬಂಧಿಸಿದ ಇಳಿಕೆ, ಸೆಕ್ಷನ್ 80CCD (1) ರ ಅಡಿಯಲ್ಲಿ ಕೋರಲಾದ ಇಳಿಕೆಯನ್ನು ಹೊರತುಪಡಿಸಿ
2) ಸದರಿ ಸಬ್ ಸೆಕ್ಷನ್‌ನಲ್ಲಿ ಉಲ್ಲೇಖಿಸಲಾದ ಪಿಂಚಣಿ ಯೋಜನೆಯಡಿ ಅಪ್ರಾಪ್ತರ ಖಾತೆಗೆ ಯಾವುದೇ ಪಾವತಿ ಅಥವಾ ಠೇವಣಿ ಮಾಡಿದ್ದಲ್ಲಿ, ಅಂತಹ ಅಪ್ರಾಪ್ತರ ಪೋಷಕರು ಅಥವಾ ಸಂರಕ್ಷಕರಾಗಿರುವ ತೆರಿಗೆದಾರರಿಗೆ ಈ ಸಬ್ ಸೆಕ್ಷನ್ ಅಡಿಯಲ್ಲಿನ ಇಳಿಕೆಯನ್ನು ಸಹ ಅನುಮತಿಸಲಾಗುವುದು. |
ತೆರಿಗೆ ಕಡಿತದ ಮಿತಿ ₹ 50,000 |
ಗಮನಿಸಿ:
a. ತೆರಿಗೆ ಪಾವತಿದಾರರು ಸೆಕ್ಷನ್ 80 C ಅಡಿಯಲ್ಲಿ ಇಳಿಕೆಯನ್ನು ಕೋರುವಾಗ ಕೆಳಗಿನಂತೆ ವಿವರಗಳನ್ನು ಒದಗಿಸಬೇಕು:
- ಕಡಿತಕ್ಕೆ ಅರ್ಹವಾದ ಮೊತ್ತ
- ಪಾಲಿಸಿ ಸಂಖ್ಯೆ ಅಥವಾ ದಾಖಲೆ ಗುರುತಿನ ಸಂಖ್ಯೆ
b. ತೆರಿಗೆ ಪಾವತಿದಾರರು ಸೆಕ್ಷನ್ 80CCC, 80 CCD (1),80 CCD (1B) ಅಡಿಯಲ್ಲಿ ಇಳಿಕೆಯನ್ನು ಕೋರುವಾಗ ಕೆಳಗಿನಂತೆ ವಿವರಗಳನ್ನು ಒದಗಿಸಬೇಕು:
- ಗುರುತಿನ ವಿಧ
- ಗುರುತಿನ ಹೆಸರು
- ಮೊತ್ತ
| ಸೆಕ್ಷನ್ 80CCD(2) | |
| ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಉದ್ಯೋಗದಾತರು ನೀಡಿದ ಕೊಡುಗೆಗೆ ತೆರಿಗೆ ಕಡಿತ | |
| ಉದ್ಯೋಗದಾತರು PSU ಅಥವಾ ಇತರರಾಗಿದ್ದರೆ | ವೇತನದ 10% ವರೆಗೆ ತೆರಿಗೆ ಕಡಿತದ ಮಿತಿ |
| ಉದ್ಯೋಗದಾತರು ಕೇಂದ್ರ ಅಥವಾ ರಾಜ್ಯ ಸರ್ಕಾರದವರಾಗಿದ್ದರೆ | ವೇತನದ 14% ವರೆಗೆ ತೆರಿಗೆ ಕಡಿತದ ಮಿತಿ |
| ಸೆಕ್ಷನ್ 80CCH | |
| ಅಗ್ನಿಪಥ ಯೋಜನೆಗೆ ನೀಡಿದ ವಂತಿಗೆಗಾಗಿ ಇಳಿಕೆ | |
| ತೆರಿಗೆದಾರ, ನೈಸರ್ಗಿಕವ್ಯಕ್ತಿ ಆಗಿದ್ದು, ಅಗ್ನಿಪಥ ಯೋಜನೆಗೆ ನೊಂದಾಯಿಸಿಕೊಂಡಿದ್ದು 2022ರ ನವಂಬರ್ ಮೊದಲ ದಿನ/ದಿನದಿಂದ ಅಗ್ನಿವೀರ್ ಕಾರ್ಪಸ್ ನಿಧಿಗೆ ವಂತಿಗೆ ನೀಡಿದ್ದರೆ, ಕಳೆದ ವರ್ಷ ಆ ನಿಧಿಯಲ್ಲಿರುವ ತನ್ನ ಖಾತೆಗೆ ಹಣ ಪಾವತಿ ಮಾಡಿದ್ದರೆ ಅಥವಾ ಠೇವಣಿ ಇಟ್ಟಿದ್ದರೆ | ಈ ರೀತಿಯಾಗಿ ಪಾವತಿಸಿದ ಅಥವಾ ಠೇವಣಿ ಮಾಡಿದ ಮೊತ್ತದ ಒಟ್ಟು ಆದಾಯದ ಲೆಕ್ಕಾಚಾರದಲ್ಲಿ ತೆರಿಗೆ ಕಡಿತವನ್ನು ಅನುಮತಿಸಲಾಗಿದೆ |
| ಅಗ್ನಿವೀರ್ ಕಾರ್ಪಸ್ ನಿಧಿಯ ತೆರಿಗೆಗಾರನ ಖಾತೆಗೆ ಕೇಂದ್ರಸರ್ಕಾರ ಯಾವುದೇ ದೇಣಿಗೆ ನೀಡಿದ್ದರೆ | ಒಟ್ಟು ಆದಾಯದ ಗಣನೆಯಲ್ಲಿ, ಹಾಗೆ ಪಾವತಿಸಿದ ಅಥವಾ ಠೇವಣಿ ಮಾಡಿದ ಸಂಪೂರ್ಣ ಮೊತ್ತದ ಇಳಿಕೆಯನ್ನು ಅನುಮತಿಸಲಾಗುವುದು |
| ಸೆಕ್ಷನ್ 80D | |
| ಆರೋಗ್ಯ ವಿಮೆ ಪ್ರೀಮಿಯಂ ಮತ್ತು ಪ್ರತಿಬಂಧಕ ಆರೋಗ್ಯ ತಪಾಸಣೆಗೆ ಮಾಡಿದ ಪಾವತಿಗಳಿಗೆ ಸಂಬಂಧಿಸಿದ ಇಳಿಕೆ | |
| ತನಗೆ / ಸಂಗಾತಿಗೆ ಅಥವಾ ಅವಲಂಬಿತ ಮಕ್ಕಳಿಗೆ | ₹ 25,000 (ಯಾವುದೇ ವ್ಯಕ್ತಿ ಹಿರಿಯ ನಾಗರಿಕರಾಗಿದ್ದರೆ ₹50,000) |
| ತಡೆಗಟ್ಟುವ ಆರೋಗ್ಯ ತಪಾಸಣೆಗೆ ₹5,000, ಮೇಲಿನ ಮಿತಿಯೊಳಗೆ ಸೇರಿಸಲಾಗಿದೆ. | |
| ಪಾಲಕರಿಗೆ | ₹ 25,000 (ಯಾವುದೇ ವ್ಯಕ್ತಿ ಹಿರಿಯ ನಾಗರಿಕರಾಗಿದ್ದರೆ ₹50,000) |
| ತಡೆಗಟ್ಟುವ ಆರೋಗ್ಯ ತಪಾಸಣೆಗೆ ₹5,000, ಮೇಲಿನ ಮಿತಿಯೊಳಗೆ ಸೇರಿಸಲಾಗಿದೆ. | |
| ಆರೋಗ್ಯ ವಿಮೆ ರಕ್ಷಣೆಗೆ ಯಾವುದೇ ಪ್ರೀಮಿಯಂ ಪಾವತಿಸದಿದ್ದಲ್ಲಿ ಹಿರಿಯ ನಾಗರಿಕರ ಮೇಲೆ ಖರ್ಚು ಮಾಡಲಾದ ವೈದ್ಯಕೀಯ ವೆಚ್ಚದ ಇಳಿಕೆ | |
| ಸ್ವಂತಕ್ಕಾಗಿ / ಸಂಗಾತಿ ಅಥವಾ ಅವಲಂಬಿತ ಮಕ್ಕಳಿಗಾಗಿ | ತೆರಿಗೆ ಕಡಿತದ ಮಿತಿ ₹ 50,000 |
| ಪಾಲಕರಿಗೆ | ತೆರಿಗೆ ಕಡಿತದ ಮಿತಿ ₹ 50,000 |
ಗಮನಿಸಿ:
ತೆರಿಗೆ ಪಾವತಿದಾರರು ಸೆಕ್ಷನ್ 80 D ಅಡಿಯಲ್ಲಿ ಇಳಿಕೆಯನ್ನು ಕೋರುವಾಗ ಕೆಳಗಿನಂತೆ ವಿವರಗಳನ್ನು ಒದಗಿಸಬೇಕು:
- ವಿಮಾದಾರರ ಹೆಸರು (ವಿಮಾ ಕಂಪನಿ)
- ಪಾಲಿಸಿ ಸಂಖ್ಯೆ
- ಆರೋಗ್ಯ ವಿಮೆ ಮೊತ್ತ
| ಸೆಕ್ಷನ್ 80DD | |
| ಅಂಗವಿಕಲ ಅವಲಂಬಿತರ ನಿರ್ವಹಣೆ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಅಥವಾ ಸಂಬಂಧಿತ ಅನುಮೋದಿತ ಯೋಜನೆಯಡಿ ಯಾವುದೇ ಮೊತ್ತವನ್ನು ಪಾವತಿಸಿದ್ದರೆ / ಠೇವಣಿ ಮಾಡಿದ್ದಕ್ಕೆ ಸಂಬಂಧಿಸಿದ ಇಳಿಕೆ | ಫ್ಲಾಟ್ ಕಡಿತ ₹75,000 ಖರ್ಚಾದ ವೆಚ್ಚವನ್ನು ಪರಿಗಣಿಸದೆ, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ ಲಭ್ಯವಿರುತ್ತದೆ. |
| ವ್ಯಕ್ತಿಗೆ ಗಂಭೀರ ಅಂಗವೈಕಲ್ಯ (80% ಅಥವಾ ಹೆಚ್ಚು) ಇದ್ದಲ್ಲಿ ಕಡಿತವು ₹1,25,000 ಆಗಿರುತ್ತದೆ. |
|
ಗಮನಿಸಿ:
ಸೆಕ್ಷನ್ 80 DD ಅಡಿಯಲ್ಲಿ ಇಳಿಕೆಯನ್ನು ಕೋರಲು ಕೆಳಗಿನ ವಿವರಗಳನ್ನು ITR ನಲ್ಲಿ ನೀಡಬೇಕು :
- ಅಂಗವೈಕಲ್ಯದ ಸ್ವರೂಪ
- ಅಂಗವೈಕಲ್ಯದ ವಿಧ
- ಕಡಿತದ ಮೊತ್ತ
- ಅವಲಂಬಿತರ ವಿಧ
- ಅವಲಂಬಿತರ PAN
- ಅವಲಂಬಿತರ ಆಧಾರ್
- ಆಟಿಸಂ, ಸೆರೆಬ್ರಲ್ ಪಾಲ್ಸಿ ಅಥವಾ ಬಹು ವೈಕಲ್ಯಗಳ ಸಂದರ್ಭದಲ್ಲಿ ಸಲ್ಲಿಸಲಾದ ಫಾರ್ಮ್ 10 IA ರ ಸ್ವೀಕೃತಿ ಸಂಖ್ಯೆ
- UDID ಸಂಖ್ಯೆ (ಲಭ್ಯವಿದ್ದರೆ)
| ಸೆಕ್ಷನ್ 80DDB | |
| ಸ್ವತಃ ಅಥವಾ ಅವಲಂಬಿತರ ನಿರ್ದಿಷ್ಟಪಡಿಸಿದ ರೋಗಗಳ ವೈದ್ಯಕೀಯ ಚಿಕಿತ್ಸೆಗೆ ಮಾಡಿದ ಪಾವತಿಗಳಿಗೆ ಸಂಬಂಧಿಸಿದ ಇಳಿಕೆ | ತೆರಿಗೆ ಕಡಿತದ ಮಿತಿ ₹40,000 (ಹಿರಿಯ ನಾಗರಿಕರಾಗಿದ್ದರೆ ₹1,00,000) |
ದಯವಿಟ್ಟು ಗಮನಿಸಿ: ಸೆಕ್ಷನ್ 80DDB ಅಡಿಯಲ್ಲಿ ಇಳಿಕೆಯನ್ನು ಕೋರಲು, ಕೆಳಗಿನ ವಿವರಗಳನ್ನು ITR ನಲ್ಲಿ ನೀಡಬೇಕು:
- ಬಳಕೆದಾರರ ವಿಧ
- ನಿರ್ದಿಷ್ಟಪಡಿಸಿದ ರೋಗದ ಹೆಸರು
- ಮೊತ್ತ
| ಸೆಕ್ಷನ್ 80E | |
| ಸ್ವಂತ ಅಥವಾ ಸಂಬಂಧಿಕರ ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲದ ಮೇಲಿನ ಬಡ್ಡಿ ಪಾವತಿಗಳಿಗೆ ಸಂಬಂಧಿಸಿದ ಇಳಿಕೆ | ತೆಗೆದುಕೊಂಡ ಸಾಲಕ್ಕೆ ಪಾವತಿಸಿದ ಒಟ್ಟು ಬಡ್ಡಿ ಮೊತ್ತ |
Note:
ಸೆಕ್ಷನ್ 80EEA ಅಡಿಯಲ್ಲಿ ಇಳಿಕೆಯನ್ನು ಕೋರಲು , ಕೆಳಗಿನ ವಿವರಗಳನ್ನು ITR ನಲ್ಲಿ ನೀಡಬೇಕು:
- ಬ್ಯಾಂಕ್ / ಸಂಸ್ಥೆಯಿಂದ ಪಡೆದ ಸಾಲ
- ಸಾಲ ಪಡೆದ ಬ್ಯಾಂಕ್ / ಸಂಸ್ಥೆಯ ಹೆಸರು
- ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ.
- ಸಾಲ ಮಂಜೂರಾದ ದಿನಾಂಕ
- ಒಟ್ಟು ಸಾಲಗಳ ಮೊತ್ತ
- ಹಣಕಾಸು ವರ್ಷದ ಕೊನೆಯ ದಿನಾಂಕದಂದು ಬಾಕಿ ಇರುವ ಸಾಲ
- ಸೆಕ್ಷನ್ 80EE ಅಡಿಯಲ್ಲಿ ಬಡ್ಡಿ
| ಸೆಕ್ಷನ್ 80EE | |
| ವಸತಿ ಉದ್ದೇಶದ ಮನೆ ಆಸ್ತಿ ಸಾಲ 1ನೇ ಏಪ್ರಿಲ್ 2016 ರಿಂದ 31ನೇ ಮಾರ್ಚ್ 2017 ರ ನಡುವೆ ಮಂಜೂರಾಗಿದ್ದಲ್ಲಿ, ಅದರ ಮೇಲಿನ ಬಡ್ಡಿ ಪಾವತಿಗಳಿಗೆ ಸಂಬಂಧಿಸಿದ ಇಳಿಕೆ | ಪಡೆಯಲಾದ ಸಾಲದ ಮೇಲೆ ಪಾವತಿಸಿದ ಬಡ್ಡಿಗೆ ₹50,000 ವರೆಗೆ ಕಡಿತ ಮಿತಿ. |
Nಗಮನಿಸಿ:
ಸೆಕ್ಷನ್ 80EEB ಅಡಿಯಲ್ಲಿ ಇಳಿಕೆಯನ್ನು ಕೋರಲು, ಕೆಳಗಿನ ವಿವರಗಳನ್ನು ITR ನಲ್ಲಿ ನೀಡಬೇಕು
- ಬ್ಯಾಂಕ್ / ಸಂಸ್ಥೆಯಿಂದ ಪಡೆದ ಸಾಲ
- ಸಾಲ ಪಡೆದ ಬ್ಯಾಂಕ್ / ಸಂಸ್ಥೆಯ ಹೆಸರು
- ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ
- ಸಾಲ ಮಂಜೂರಾದ ದಿನಾಂಕ
- ಒಟ್ಟು ಸಾಲಗಳ ಮೊತ್ತ
- ಹಣಕಾಸು ವರ್ಷದ ಕೊನೆಯ ದಿನಾಂಕದಂದು ಬಾಕಿ ಇರುವ ಸಾಲ
- ಸೆಕ್ಷನ್ 80EEB ಅಡಿಯಲ್ಲಿ ಬಡ್ಡಿ
| ಸೆಕ್ಷನ್80EEA | |
| ವಸತಿ ಉದ್ದೇಶದ ಮನೆ ಆಸ್ತಿಗಾಗಿ ಮೊದಲ ಬಾರಿಗೆ ಸಾಲ ತೆಗೆದುಕೊಂಡಿದ್ದು, 1ನೇ ಏಪ್ರಿಲ್ 2019 ರಿಂದ 31ನೇ ಮಾರ್ಚ್ 2022 ರ ನಡುವೆ ಸಾಲ ಮಂಜೂರಾಗಿದ್ದಲ್ಲಿ ಅದರ ಮೇಲಿನ ಬಡ್ಡಿ ಪಾವತಿಗಳಿಗೆ ನೈಸರ್ಗಿಕವ್ಯಕ್ತಿಗಳಿಗೆ ಮಾತ್ರ ಲಭ್ಯವಿರುವ ಇಳಿಕೆ ಮತ್ತು ಸೆಕ್ಷನ್ 80EE ಅಡಿಯಲ್ಲಿ ಇಳಿಕೆಯನ್ನು ಕೋರಿರಬಾರದು | ಪಡೆಯಲಾದ ಸಾಲದ ಮೇಲಿನ ಪಾವತಿಸಿದ ಬಡ್ಡಿಗೆ ₹1,50,000 ವರೆಗೆ ತೆರಿಗೆ ಕಡಿತದ ಮಿತಿ. |
ಗಮನಿಸಿ:
ಸೆಕ್ಷನ್ 80EE ಅಡಿಯಲ್ಲಿ ಇಳಿಕೆಯನ್ನು ಕೋರಲು , ಕೆಳಗಿನ ವಿವರಗಳನ್ನು ITR ನಲ್ಲಿ ನೀಡಬೇಕು:
- ಬ್ಯಾಂಕ್ / ಸಂಸ್ಥೆಯಿಂದ ಪಡೆದ ಸಾಲ
- ಸಾಲ ಪಡೆದ ಬ್ಯಾಂಕ್ / ಸಂಸ್ಥೆಯ ಹೆಸರು
- ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ
- ಸಾಲ ಮಂಜೂರಾದ ದಿನಾಂಕ
- ಒಟ್ಟು ಸಾಲದ ಮೊತ್ತ
- ಹಣಕಾಸು ವರ್ಷದ ಕೊನೆಯ ದಿನಾಂಕದಂದು ಬಾಕಿ ಇರುವ ಸಾಲ
- ಸೆಕ್ಷನ್ 80EEB ಅಡಿಯಲ್ಲಿ ಬಡ್ಡಿ
ಗಮನಿಸಿ, ಸೆಕ್ಷನ್ 24(b) ಯಲ್ಲಿನ ಮಿತಿ ಮುಗಿದಿದ್ದರೆ ಮಾತ್ರ ಸೆಕ್ಷನ್ 80EEA ಅಡಿಯಲ್ಲಿ ಇಳಿಕೆಯನ್ನು ಕೋರಬಹುದು. ಅಲ್ಲದೆ, ಸಾಲ ಮಂಜೂರಾತಿ ದಿನಾಂಕ ಮತ್ತು ಇತರ ಅರ್ಹ ಷರತ್ತುಗಳ ಆಧಾರದ ಮೇಲೆ ತೆರಿಗೆ ಪಾವತಿದಾರರು 80EE ಅಥವಾ 80EEA ಎರಡರಲ್ಲಿ ಒಂದನ್ನು ಕೋರಬಹುದು.
| ಸೆಕ್ಷನ್ 80EEB | |
| 1ನೇ ಏಪ್ರಿಲ್ 2019 ರಿಂದ 31ನೇ ಮಾರ್ಚ್ 2023 ರ ನಡುವೆ ಸಾಲವನ್ನು ಮಂಜೂರು ಮಾಡಲಾದ, ಎಲೆಕ್ಟ್ರಿಕ್ ವಾಹನದ ಖರೀದಿಗಾಗಿ ಮಾಡಿದ ಸಾಲದ ಮೇಲಿನ ಬಡ್ಡಿ ಪಾವತಿಗಳ ಮೇಲಿನ ಕಡಿತ | ಪಡೆದ ಸಾಲದ ಮೇಲೆ ಪಾವತಿಸಿದ ಬಡ್ಡಿಯ ಮೇಲಿನ ಇಳಿಕೆ ಮಿತಿ ₹ 1,50,000 |
ಗಮನಿಸಿ:
ಸೆಕ್ಷನ್ 80EE ಅಡಿಯಲ್ಲಿ ಇಳಿಕೆಯನ್ನು ಕೋರಲು, ಕೆಳಗಿನ ವಿವರಗಳನ್ನು ITR ನಲ್ಲಿ ನೀಡಬೇಕು:
- ಸಾಲ ಪಡೆದ ಬ್ಯಾಂಕ್ / ಸಂಸ್ಥೆಯ ಹೆಸರು
- ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ
- ಸಾಲ ಮಂಜೂರಾದ ದಿನಾಂಕ
- ಒಟ್ಟು ಸಾಲದ ಮೊತ್ತ
- ಹಣಕಾಸು ವರ್ಷದ ಕೊನೆಯ ದಿನಾಂಕದಂದು ಬಾಕಿ ಇರುವ ಸಾಲ
- ವಾಹನ ನೋಂದಣಿ ಸಂಖ್ಯೆ
- ಸೆಕ್ಷನ್ 80EEB ಅಡಿಯಲ್ಲಿ ಬಡ್ಡಿ
| ಸೆಕ್ಷನ್ 80G | |
|
ನಿಗದಿತ ನಿಧಿಗಳು, ಧಾರ್ಮಿಕ / ದತ್ತಿ ಸಂಸ್ಥೆಗಳು ಇತ್ಯಾದಿಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಇಳಿಕೆ. ದೇಣಿಗೆಗಳು ಕೆಳಗಿನ ವರ್ಗಗಳ ಅಡಿಯಲ್ಲಿ ಇಳಿಕೆಗೆ ಅರ್ಹವಾಗಿವೆ: |
|
| ಯಾವುದೇ ಮಿತಿಯಿಲ್ಲದೆ | 100% ತೆರಿಗೆಯ ಕಡಿತ |
| 50%ಇಳಿಕೆ | |
| ಅರ್ಹತಾ ಮಿತಿಗೆ ಒಳಪಟ್ಟು | 100% ತೆರಿಗೆಯ ಕಡಿತ |
| 50% ಇಳಿಕೆ | |
| ಸೂಚನೆ: ₹ 2000/- ಕ್ಕಿಂತ ಹೆಚ್ಚಿನ ನಗದು ರೂಪದಲ್ಲಿ ನೀಡಿದ ದೇಣಿಗೆಗಳಿಗೆ ಈ ಸೆಕ್ಷನ್ ಅಡಿಯಲ್ಲಿ ಯಾವುದೇ ಇಳಿಕೆಯನ್ನು ಅನುಮತಿಸಲಾಗುವುದಿಲ್ಲ | |
| ಸೆಕ್ಷನ್ 80GG | ||
|
ಮನೆ ಬಾಡಿಗೆಗಾಗಿ ಇಳಿಕೆ; ಸ್ವಯಂ ಉದ್ಯೋಗಿಗಳಿಗೆ ಅಥವಾ ವೇತನದಲ್ಲಿ HRA ಇಲ್ಲದವರಿಗೆ ಮಾತ್ರ ಅನ್ವಯಿಸುತ್ತದೆ ಈ ಕೆಳಗಿನವುಗಳಲ್ಲಿ ಕನಿಷ್ಠವನ್ನು ತೆರಿಗೆ ಕಡಿತಗಳೆಂದು ಅನುಮತಿಸಲಾಗುತ್ತದೆ |
||
| ಈ ಇಳಿಕೆಗೆ ಮುಂಚಿನ ಒಟ್ಟು ಆದಾಯದ 10% ನಷ್ಟು ಕಳೆದ ಮೇಲಿನ ಬಾಡಿಗೆ | ₹ 5,000 ಪ್ರತಿ ತಿಂಗಳು | ಒಟ್ಟು ಆದಾಯದ 25% (ದೀರ್ಘಾವಧಿ ಬಂಡವಾಳ ಗಳಿಕೆಗಳು, ಸೆಕ್ಷನ್ 111A ಅಡಿಯಲ್ಲಿನ ಅಲ್ಪಾವಧಿ ಬಂಡವಾಳ ಗಳಿಕೆಗಳು ಅಥವಾ ಸೆಕ್ಷನ್ 115A ಅಥವಾ 115D ಅಡಿಯಲ್ಲಿನ ಆದಾಯವನ್ನು ಹೊರತುಪಡಿಸಿ) |
| ಗಮನಿಸಿ: ಸೆಕ್ಷನ್ 80GG ಅಡಿಯಲ್ಲಿ ಇಳಿಕೆಯನ್ನು ಕೋರಲು, ಫಾರ್ಮ್ 10 BA ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಮತ್ತು ಆದಾಯದ ರಿಟರ್ನ್ ಸಲ್ಲಿಸುವಾಗ ಶೆಡ್ಯೂಲ್ 80 GG ಯಲ್ಲಿ ಫಾರ್ಮ್ 10 BA ರ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಬೇಕು | ||
| ಸೆಕ್ಷನ್80GGA |
|
ವೈಜ್ಞಾನಿಕ ಸಂಶೋಧನೆ ಅಥವಾ ಗ್ರಾಮೀಣ ಅಭಿವೃದ್ಧಿಗಾಗಿ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಇಳಿಕೆ ದೇಣಿಗೆಗಳು ಕೆಳಗಿನ ವರ್ಗಗಳ ಅಡಿಯಲ್ಲಿ ಇಳಿಕೆಗೆ ಅರ್ಹವಾಗಿವೆ: |
|
(ಈ ಕೆಳಕಂಡ ಸಂಶೋಧನೆಯಲ್ಲಿ ತೊಡಗಿರುವ) ಸಂಶೋಧನಾ ಸಂಸ್ಥೆ ಅಥವಾ ವಿಶ್ವವಿದ್ಯಾಲಯ, ಕಾಲೇಜು ಅಥವಾ ಇತರ ಸಂಸ್ಥೆ
|
|
(ಈ ಕೆಳಕಂಡ ಉದ್ದೇಶ ಹೊಂದಿದ)ಸಂಘ ಅಥವಾ ಸಂಸ್ಥೆ
|
| ಯಾವುದೇ ಅರ್ಹ ಯೋಜನೆಯನ್ನು ಕೈಗೊಳ್ಳಲು ರಾಷ್ಟ್ರೀಯ ಸಮಿತಿಯಿಂದ ಅನುಮೋದಿಸಲ್ಪಟ್ಟ PSU ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ಸಂಸ್ಥೆ |
|
ಕೇಂದ್ರ ಸರ್ಕಾರವು (ಈ ಕೆಳಕಂಡ ಉದ್ದೇಶಕ್ಕಾಗಿ) ಅಧಿಸೂಚಿಸಿದ ನಿಧಿಗಳು
|
| ಕೇಂದ್ರ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಮತ್ತು ಅಧಿಸೂಚಿಸಲ್ಪಟ್ಟ ರಾಷ್ಟ್ರೀಯ ನಗರ ಬಡತನ ನಿರ್ಮೂಲನೆ ನಿಧಿ |
| ಸೂಚನೆ: ₹ 2000/- ಕ್ಕಿಂತ ಹೆಚ್ಚಿನ ನಗದು ರೂಪದಲ್ಲಿ ನೀಡಿದ ದೇಣಿಗೆಗಳಿಗೆ ಅಥವಾ ಒಟ್ಟು ಸಮಗ್ರ ಆದಾಯವು ವ್ಯವಹಾರ/ವೃತ್ತಿಯ ಲಾಭ/ಗಳಿಕೆಯಿಂದ ಬಂದ ಆದಾಯವನ್ನು ಒಳಗೊಂಡಿದ್ದರೆ ಅಥವಾ ಪಾಲುದಾರನು ಪಾಲುದಾರಿಕೆ ಸಂಸ್ಥೆಯಿಂದ ಸಂಭಾವನೆ ಅಥವಾ ಬಂಡವಾಳದ ಮೇಲಿನ ಬಡ್ಡಿಯನ್ನು ಪಡೆಯುತ್ತಿದ್ದರೆ ಈ ಸೆಕ್ಷನ್ ಅಡಿಯಲ್ಲಿ ಯಾವುದೇ ಇಳಿಕೆಯನ್ನು ಅನುಮತಿಸಲಾಗುವುದಿಲ್ಲ |
| ಸೆಕ್ಷನ್ 80GGC | |
| ರಾಜಕೀಯ ಪಕ್ಷ ಅಥವಾ ಚುನಾವಣಾ ಟ್ರಸ್ಟ್‌ಗೆ ನೀಡಿದ ದೇಣಿಗೆಗಳ ಮೇಲಿನ ತೆರಿಗೆ ಕಡಿತ |
ರಾಜಕೀಯ ಪಕ್ಷ ಅಥವಾ ಚುನಾವಣಾ ಟ್ರಸ್ಟ್‌ಗೆ ನೀಡಿದ ದೇಣಿಗೆಗಳ ಮೇಲಿನ ತೆರಿಗೆ ಕಡಿತ
ನಗದು ರೂಪದಲ್ಲಿ ಯಾವುದೇ ಕೊಡುಗೆ ನೀಡಿದರೆ ಯಾವುದೇ ತೆರಿಗೆ ಕಡಿತವನ್ನು ಅನುಮತಿಸಲಾಗುವುದಿಲ್ಲ |
| ಸೆಕ್ಷನ್ 80IA | |
| ಸೆಕ್ಷನ್ 80-IA(4)(iv) ರಲ್ಲಿ ಉಲ್ಲೇಖಿಸಲಾದ ಉದ್ಯಮದ ಲಾಭಗಳಿಗೆ ಸಂಬಂಧಿಸಿದಂತೆ ಇಳಿಕೆ | ತೆರಿಗೆದಾರರುಮೂಲಸೌಕರ್ಯ ಸೌಲಭ್ಯವನ್ನು ಅಭಿವೃದ್ಧಿಪಡಿಸಿದ/ನಡೆಸಿದ ಮತ್ತು ನಿರ್ವಹಿಸಲು ಪ್ರಾರಂಭಿಸಿದ ತೆರಿಗೆ ನಿರ್ಧರಣೆ ವರ್ಷದಿಂದ (AY) ಪ್ರಾರಂಭವಾಗುವ 15 ತೆರಿಗೆ ನಿರ್ಧರಣೆ ವರ್ಷ (AY) ಒಳಗೆ ಬರುವ ಸತತ 10 ತೆರಿಗೆ ನಿರ್ಧರಣೆ ವರ್ಷಗಳ ಲಾಭದ 100%. |
| 1ನೇ ಏಪ್ರಿಲ್ 2017ರಂದು ಅಥವಾ ಅದರ ನಂತರ ಮೂಲಸೌಕರ್ಯ ಸೌಲಭ್ಯದ ಅಭಿವೃದ್ಧಿ ಅಥವಾ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಪ್ರಾರಂಭಿಸುವ ಯಾವುದೇ ಉದ್ಯಮಕ್ಕೆ ಇಳಿಕೆಯನ್ನು ಅನುಮತಿಸಲಾಗುವುದಿಲ್ಲ. (ನಿರ್ದಿಷ್ಟಪಡಿಸಿದ ವ್ಯವಹಾರಕ್ಕಾಗಿ ನಿರ್ದಿಷ್ಟಪಡಿಸಿದ ದಿನಾಂಕಗಳ ನಂತರ ಅಭಿವೃದ್ಧಿ, ಕಾರ್ಯಾಚರಣೆ ಇತ್ಯಾದಿ ಪ್ರಾರಂಭವಾಗಿದ್ದರೆ ಯಾವುದೇ ಇಳಿಕೆಯನ್ನು ಅನುಮತಿಸಲಾಗುವುದಿಲ್ಲ) | |
| 80IB |
|
ಮೂಲಸೌಕರ್ಯ ಅಭಿವೃದ್ಧಿ ಉದ್ಯಮಗಳನ್ನು ಹೊರತುಪಡಿಸಿ, ನಿಗದಿಪಡಿಸಿದ ಕೈಗಾರಿಕಾ ಸಂಸ್ಥೆಗಳ ವ್ಯವಹಾರದಿಂದಾದ ಲಾಭ ಮತ್ತು ಗಳಿಕೆಗಳಿಗೆ ಸಂಬಂಧಿಸಿದಂತೆ ಇಳಿಕೆ: ಒಟ್ಟು ಸಮಗ್ರ ಆದಾಯವು ಇವರಿಂದ ಪಡೆದ ಯಾವುದೇ ಲಾಭ ಮತ್ತು ಗಳಿಕೆಗಳನ್ನು ಒಳಗೊಂಡಿರುವ ತೆರಿಗೆದಾರರಿಗೆ ಈ ಸೆಕ್ಷನ್ ಅಡಿಯಲ್ಲಿನ ಇಳಿಕೆ ಲಭ್ಯವಿದೆ: |
|
|
|
|
| (ಕೆಲವು ಷರತ್ತುಗಳಿಗೆ ಒಳಪಟ್ಟು) |
| 80IE | |
|
ಈಶಾನ್ಯ ರಾಜ್ಯಗಳಲ್ಲಿ ಸ್ಥಾಪಿಸಲಾದ ಕೆಲವು ಉದ್ಯಮಗಳಿಗೆ ಇಳಿಕೆ (ಕೆಲವು ಷರತ್ತುಗಳಿಗೆ ಒಳಪಟ್ಟು) |
|
| 80JJA | |
| ಜೈವಿಕ ವಿಘಟನೀಯ ತ್ಯಾಜ್ಯದ ಸಂಗ್ರಹಣೆ ಮತ್ತು ಸಂಸ್ಕರಣೆಯ ವ್ಯವಹಾರದಿಂದಾದ ಲಾಭ ಮತ್ತು ಗಳಿಕೆಗಳಿಗೆ ಸಂಬಂಧಿಸಿದಂತೆ ಇಳಿಕೆ (ಕೆಲವು ಷರತ್ತುಗಳಿಗೆ ಒಳಪಟ್ಟು) |
ಜೈವ ವಿಘಟನೀಯ ತ್ಯಾಜ್ಯವನ್ನು ಸಂಗ್ರಹಿಸುವುದು, ಸಂಸ್ಕರಿಸುವುದು ಮತ್ತು ಶೋಧಿಸುವ ಚಟುವಟಿಕೆಗಳಿಂದ ಉಂಟಾಗುವ ಲಾಭದ 100% ಕಡಿತ, 5 ನಿರಂತರ ಮೌಲ್ಯಮಾಪನ ವರ್ಷಗಳವರೆಗೆ ಲಭ್ಯವಿರುತ್ತದೆ. |
| 80JJAA | |
|
ಹೊಸ ಕಾರ್ಮಿಕರು / ಉದ್ಯೋಗಿಗಳ ಉದ್ಯೋಗಕ್ಕೆ ಸಂಬಂಧಿಸಿದಂತೆ ಕಡಿತ, ಸೆಕ್ಷನ್ 44AB ಅನ್ವಯಿಸುವ ಮೌಲ್ಯಮಾಪಕನಕ್ಕೆ ಅನ್ವಯಿಸುತ್ತದೆ. ಕೆಲವು ಷರತ್ತುಗಳಿಗೆ ಒಳಪಟ್ಟು |
3 ಮೌಲ್ಯಮಾಪನ ವರ್ಷಗಳವರೆಗೆ ಹೆಚ್ಚುವರಿ ಉದ್ಯೋಗಿ ವೆಚ್ಚದ 30% ಕಡಿತ, ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟಿರುತ್ತದೆ. |
| 80QQB | |
| ದೇಶೀಯ ಲೇಖಕರಿಗೆ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಕೆಲವು ಪುಸ್ತಕಗಳಿಗೆ ಸಂಬಂಧಿಸಿದಂತೆ ತೆರಿಗೆ ಕಡಿತ | ಗರಿಷ್ಠ ₹ 3 ಲಕ್ಷದವರೆಗೆ ಲೇಖಕ/ಜಂಟಿ ಲೇಖಕರು ರಾಯಧನದ ಮೂಲಕ ಪಡೆದ ಆದಾಯ, ಇದು ಇತರ ಷರತ್ತುಗಳಿಗೆ ಒಳಪಟ್ಟಿರುತ್ತದೆ |
ಗಮನಿಸಿ: ಇಲ್ಲಿ ಕೋರಲಾದ ಇಳಿಕೆಯನ್ನು ಆದಾಯ ತೆರಿಗೆ ಕಾಯ್ದೆಯ ಬೇರೆಲ್ಲೂ ಕೋರಲು ಸಾಧ್ಯವಿಲ್ಲ.
| 80RRB | |
| ಪೇಟೆಂಟ್‌ಗಳ ಮೇಲಿನ ರಾಯಲ್ಟಿಗೆ ಸಂಬಂಧಿಸಿದಂತೆ ದೇಶೀಯ ವ್ಯಕ್ತಿಗಳಿಗೆ ತೆರಿಗೆ ಕಡಿತ | ಪೇಟೆಂಟ್ ಕಾಯ್ದೆ, 1970 ರ ಅಡಿಯಲ್ಲಿ ಮೊದಲು ಉಪಕ್ರಮಿಸಿದವರು / ಸಹ-ಮಾಲೀಕರು ರಾಯಲ್ಟಿ ರೂಪದಲ್ಲಿ ಗಳಿಸುವ ಆದಾಯ, ರಾಯಲ್ಟಿಯ ಮೊತ್ತ ಅಥವಾ ₹ 3 ಲಕ್ಷದವರೆಗೆ (ಯಾವುದು ಕಡಿಮೆಯೋ ಅದು) |
ಗಮನಿಸಿ: ಇಲ್ಲಿ ಕೋರಲಾದ ಇಳಿಕೆಯನ್ನು ಆದಾಯ ತೆರಿಗೆ ಕಾಯ್ದೆಯ ಬೇರೆಲ್ಲೂ ಕೋರಲು ಸಾಧ್ಯವಿಲ್ಲ.
| ಸೆಕ್ಷನ್80TTA | |
| ಹಿರಿಯ ನಾಗರಿಕರಲ್ಲದವರು ಬ್ಯಾ೦ಕ್ ಗಳಲ್ಲಿ ಉಳಿತಾಯ ಖಾತೆಗಳ ಮೂಲಕ ಪಡೆದ ಬಡ್ಡಿಯ ಮೇಲಿನ ತೆರಿಗೆ ಕಡಿತ | ತೆರಿಗೆ ಕಡಿತದ ಮಿತಿ ₹ 10,000/- |
| ಸೆಕ್ಷನ್ 80TTB | |
| ನಿವಸಿತ ಹಿರಿಯ ನಾಗರಿಕರು ಠೇವಣಿಗಳ ಮೇಲೆ ಪಡೆದ ಬಡ್ಡಿಯ ಮೇಲಿನ ತೆರಿಗೆ ಕಡಿತ | ತೆರಿಗೆ ಕಡಿತದ ಮಿತಿ ₹ 50,000/- |
| ಸೆಕ್ಷನ್ 80U | |
| ಅಂಗವೈಕಲ್ಯ ಹೊಂದಿರುವ ನಿವಾಸಿ ತೆರಿಗೆದಾರರಿಗಾಗಿ ತೆರಿಗೆ ಕಡಿತಗಳು (ವಿನಾಯಿತಿಗಳು) |
ಖರ್ಚಾದ ವೆಚ್ಚವನ್ನು ಪರಿಗಣಿಸದೆ, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ Flat ₹75,000 ಕಡಿತ. ಗಂಭೀರ ಅಂಗವೈಕಲ್ಯ (80% ಅಥವಾ ಹೆಚ್ಚು) ಹೊಂದಿರುವ ವ್ಯಕ್ತಿಗೆ, ಖರ್ಚಾದ ವೆಚ್ಚವನ್ನು ಪರಿಗಣಿಸದೆ ನಿಗದಿತ ₹1,25,000 ಕಡಿತ. |
ಸೂಚನೆ:
ತೆರಿಗೆ ಪಾವತಿದಾರರು ಸೆಕ್ಷನ್ 80 DD ಅಥವಾ 80U ಅಡಿಯಲ್ಲಿ ಇಳಿಕೆಯನ್ನು ಕೋರುವಾಗ ಕೆಳಗಿನ ವಿವರಗಳನ್ನು ITR ನಲ್ಲಿ ಒದಗಿಸಬೇಕು:
- ಅಂಗವೈಕಲ್ಯದ ಸ್ವರೂಪ
- ಅಂಗವೈಕಲ್ಯದ ವಿಧ
- ಇಳಿಕೆಯ ಮೊತ್ತ
- ಅವಲಂಬಿತರ PAN
- ಅವಲಂಬಿತರ ಆಧಾರ್
- ಫಾರ್ಮ್ 10 IA ಸಲ್ಲಿಸಿದ ಸ್ವೀಕೃತಿ ಸಂಖ್ಯೆ