1. ಅವಲೋಕನ
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಹೊಸ ಕಾರ್ಯನಿರ್ವಹಣೆಯನ್ನು ಸಕ್ರಿಯಗೊಳಿಸಲಾಗಿದೆ. ಇಲ್ಲಿ ತೆರಿಗೆದಾರರು ಆದಾಯ ತೆರಿಗೆ ಡಿಮ್ಯಾಂಡ್ ಉಲ್ಲೇಖ ಸಂಖ್ಯೆಯನ್ನು ಒದಗಿಸದೆಯೇ, ಲಾಗಿನ್-ನಂತರದ ಮತ್ತು ಲಾಗಿನ್-ಪೂರ್ವದ ಮೂಲಕ ನಿಯಮಿತ ತೆರಿಗೆ ಮೌಲ್ಯಮಾಪನಕ್ಕಾಗಿ, ಮೈನರ್ ಹೆಡ್ 400 ಅಡಿಯಲ್ಲಿ ಆದಾಯ ತೆರಿಗೆ ಡಿಮ್ಯಾಂಡ್ ಪಾವತಿಯನ್ನು ಮಾಡಬಹುದು.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
ಲಾಗಿನ್-ಪೂರ್ವ
- ಮಾನ್ಯ ಮತ್ತು ಸಕ್ರಿಯ PAN; ಮತ್ತು
- ಒಂದು ಬಾರಿಯ ಪಾಸ್‌ವರ್ಡ್ ಸ್ವೀಕರಿಸಲು ಮಾನ್ಯವಾದ ಮೊಬೈಲ್ ಸಂಖ್ಯೆ.
ಲಾಗಿನ್-ನಂತರ
• ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರು
3. ಫಾರ್ಮ್ ಬಗ್ಗೆ
3.1. ಉದ್ದೇಶ
ಲಾಗಿನ್-ಪೂರ್ವ (ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡುವ ಮೊದಲು) ಅಥವಾ ಲಾಗಿನ್- ನಂತರ (ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ) ಸೌಲಭ್ಯದ ಮೂಲಕ ತೆರಿಗೆದಾರರು ಬೇಡಿಕೆಯ ಉಲ್ಲೇಖ ಸಂಖ್ಯೆ ಇಲ್ಲದೆ ನಿಯಮಿತ ಮೌಲ್ಯಮಾಪನ ತೆರಿಗೆ (400) ಆಗಿ ಬೇಡಿಕೆ ಪಾವತಿಯನ್ನು ಮಾಡಬಹುದು.
3.2. ಅದನ್ನು ಯಾರು ಬಳಸಬಹುದು?
ಬೇಡಿಕೆ ಉಲ್ಲೇಖ ಸಂಖ್ಯೆ ಇಲ್ಲದೆ ಬೇಡಿಕೆ ಪಾವತಿ ಮಾಡಲು ಬಯಸುವ ತೆರಿಗೆದಾರರು.
4. ಹಂತ ಹಂತದ ಮಾರ್ಗದರ್ಶಿ:
ಬೇಡಿಕೆಯ ಪಾವತಿಯನ್ನು ನಿಯಮಿತ ಮೌಲ್ಯಮಾಪನ ತೆರಿಗೆ (400) ಆಗಿ ಮಾಡಲು ಕ್ರಮಗಳು (ಲಾಗಿನ್-ನಂತರ)
ಹಂತ 1: ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ.
ಹಂತ 2: ಡ್ಯಾಶ್‌ಬೋರ್ಡ್‌ನಲ್ಲಿ, ಇ-ಫೈಲ್ > ತೆರಿಗೆಗಳ ಇ-ಪಾವತಿ ಕ್ಲಿಕ್ ಮಾಡಿ.
ಹಂತ 3: ತೆರಿಗೆಗಳ ಇ-ಪಾವತಿ ಪುಟದಲ್ಲಿ, ಹೊಸ ಚಲನ್ ಫಾರ್ಮ್ ಅನ್ನು ರಚಿಸಲು ಹೊಸ ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ಹೊಸ ಪಾವತಿ ಪುಟದಲ್ಲಿ, ನಿಯಮಿತ ಮೌಲ್ಯಮಾಪನ ತೆರಿಗೆ (400) ಪ್ರಕಾರದಲ್ಲಿ ಬೇಡಿಕೆ ಪಾವತಿಗಾಗಿ ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 5: ಅನ್ವಯವಾಗುವ ಬೇಡಿಕೆ ವಿವರಗಳ ಪುಟದಲ್ಲಿ, DRN ಹೈಪರ್‌ಲಿಂಕ್ ಇಲ್ಲದೆ ಮೈನರ್ ಹೆಡ್-400ಅಡಿಯಲ್ಲಿ ಬೇಡಿಕೆ ಪಾವತಿಯನ್ನು ಕ್ಲಿಕ್ ಮಾಡಿ.
ಹಂತ 6: ಮುಂದಿನ ಪುಟದಲ್ಲಿ, ಸಂಬಂಧಿತ ತೆರಿಗೆ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಬಟನ್ ಕ್ಲಿಕ್ ಮಾಡಿ.
ಹಂತ 7: ತೆರಿಗೆ ವಿಘಟನೆಯ ವಿವರಗಳನ್ನು ಸೇರಿಸಿ ಪುಟದಲ್ಲಿ, ತೆರಿಗೆ ಪಾವತಿಯ ಒಟ್ಟು ಮೊತ್ತದ ವಿಘಟನೆಯನ್ನು ಸೇರಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 8: ತೆರಿಗೆದಾರರು ಅಗತ್ಯವಿರುವ ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ಪಾವತಿಯನ್ನು ಮಾಡಲು ಮುಂದುವರಿಯಬೇಕಾಗುತ್ತದೆ.
ಬೇಡಿಕೆಯ ಪಾವತಿಯನ್ನು ನಿಯಮಿತ ಮೌಲ್ಯಮಾಪನ ತೆರಿಗೆ (400) ಯಾಗಿ ಮಾಡಲು ಕ್ರಮಗಳು (ಪೂರ್ವ-ಲಾಗಿನ್)
ಹಂತ 1: ಇ-ಫೈಲಿಂಗ್ ಪೋರ್ಟಲ್ ಮುಖಪುಟಕ್ಕೆ ಹೋಗಿ ಮತ್ತು ತೆರಿಗೆಗಳ ಇ-ಪಾವತಿ ಕ್ಲಿಕ್ ಮಾಡಿ.
ಹಂತ 02: ತೆರಿಗೆಗಳ ಇ-ಪಾವತಿ ಪುಟದಲ್ಲಿ, PAN ಅನ್ನು ನಮೂದಿಸಿ ಮತ್ತು ಅದನ್ನು PAN / TAN ದೃಢೀಕರಿಸಿ ಬಾಕ್ಸ್‌ನಲ್ಲಿ ಮತ್ತೊಮ್ಮೆ ನಮೂದಿಸಿ ಮತ್ತು ಮೊಬೈಲ್ ಸಂಖ್ಯೆಯನ್ನು (ಯಾವುದೇ ಮೊಬೈಲ್ ಸಂಖ್ಯೆ) ನಮೂದಿಸಿ. ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.
ಹಂತ 3: OTP ಪರಿಶೀಲನೆ ಪುಟದಲ್ಲಿ, ಹಂತ 2 ರಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ 6-ಅಂಕಿಯ OTP ಅನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 4: OTP ಪರಿಶೀಲನೆಯ ನಂತರ, ನಮೂದಿಸಿದ PAN/TAN ಮತ್ತು ಹೆಸರು(ಮರೆಮಾಚಿದ) ಇರುವ ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಮುಂದುವರೆಯಲು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 5: ತೆರಿಗೆಯ ಇ-ಪಾವತಿ ಪುಟದಲ್ಲಿ, ನಿಯಮಿತ ಮೌಲ್ಯಮಾಪನ ತೆರಿಗೆ (400) ಯಾಗಿ ಬೇಡಿಕೆ ಪಾವತಿ ಮೇಲೆ ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 6: ಮುಂದಿನ ಪುಟದಲ್ಲಿ, ತೆರಿಗೆದಾರರು ಸಂಬಂಧಿತ ತೆರಿಗೆ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಬೇಕಾಗುತ್ತದೆ, ಮತ್ತು ಮುಂದುವರಿಸಿ ಬಟನ್ ಕ್ಲಿಕ್ ಮಾಡಿ.
ಹಂತ 7:ತೆರಿಗೆ ವಿಘಟನೆ ವಿವರಗಳನ್ನು ಸೇರಿಸಿ ಪುಟದಲ್ಲಿ, ತೆರಿಗೆ ಪಾವತಿಯ ಒಟ್ಟು ಮೊತ್ತದ ವಿಘಟನೆಯನ್ನು ಸೇರಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 8: ತೆರಿಗೆದಾರರು ಅಗತ್ಯವಿರುವ ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ಪಾವತಿಯನ್ನು ಮಾಡಲು ಮುಂದುವರಿಯಬೇಕು.