1. ನ್ಯಾಯವ್ಯಾಪ್ತಿ ಮೌಲ್ಯಮಾಪನ ಅಧಿಕಾರಿ (JAO) ಯಾರು?
ನ್ಯಾಯವ್ಯಾಪ್ತಿ ಮೌಲ್ಯಮಾಪನ ಅಧಿಕಾರಿ (JAO) ಅವರು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಆಗಿದ್ದು, ತಮ್ಮ ನ್ಯಾಯವ್ಯಾಪ್ತಿಯಲ್ಲಿರುವ ತೆರಿಗೆದಾರರು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಗಳು ಸರಿಯಾಗಿರುವುದನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
2. ನಾನು ಯಾವಾಗ ನನ್ನ ನ್ಯಾಯವ್ಯಾಪ್ತಿ ಮೌಲ್ಯಮಾಪನ ಅಧಿಕಾರಿಯವರನ್ನು (JAO) ಸಂಪರ್ಕಿಸಬೇಕು?
ನಿಮ್ಮ ರಿಟರ್ನ್ ಸಲ್ಲಿಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಲ್ಲದಿದ್ದರೆ, ನಿಮ್ಮನ್ಯಾಯವ್ಯಾಪ್ತಿ ಮೌಲ್ಯಮಾಪನ ಅಧಿಕಾರಿಯವರನ್ನು(JAO) ಸಂಪರ್ಕಿಸುವ ಅಗತ್ಯವಿಲ್ಲ. ಸಾಮಾನ್ಯವಾಗಿ, ಆದಾಯ ತೆರಿಗೆ ಇಲಾಖೆ (ITD) ಎಲ್ಲಾ ತೆರಿಗೆದಾರರ ಸೇವೆಗಳನ್ನು ಆನ್ಲೈನ್ ಮೂಲಕವಾಗಿ, ಮುಖಾಮುಖಿಯಾಗದೆ (faceless) ಒದಗಿಸಲು ಪ್ರಯತ್ನಿಸುತ್ತದೆ. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ, ITD ನಿಮ್ಮ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ (AO) ಅವರನ್ನು ಸಂಪರ್ಕಿಸಲು ನಿಮ್ಮನ್ನು ಕೋರಬಹು
3. "ನಿಮ್ಮ ನ್ಯಾಯವ್ಯಾಪ್ತಿ ಮೌಲ್ಯಮಾಪನ ಅಧಿಕಾರಿಯನ್ನು ತಿಳಿಯಿರಿ" ಸೇವೆಯನ್ನು ಪಡೆಯಲು ನಾನು ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿಸಿರುವ ನನ್ನ ಮೊಬೈಲ್ ಸಂಖ್ಯೆಯನ್ನೇ ಬಳಸಬೇಕೇ?
ಈ ಸೇವೆಯನ್ನು ಪಡೆಯಲು ನೀವು ಯಾವುದೇ ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಬಳಸಬಹುದು.
4. ನಾನು ಬೇರೆ ನಗರ/ರಾಜ್ಯಕ್ಕೆ ಸ್ಥಳಾಂತರಗೊಂಡಿದ್ದರೆ, ನನ್ನ ನ್ಯಾಯವ್ಯಾಪ್ತಿ ಮೌಲ್ಯಮಾಪನ ಅಧಿಕಾರಿಯನ್ನು (JAO) ಬದಲಾಯಿಸಬೇಕೇ?
ಹೌದು. ನೀವು ನಿಮ್ಮ ಶಾಶ್ವತ ವಿಳಾಸ ಅಥವಾ ವಾಸಸ್ಥಳವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಿಸಿದಾಗ, ನಿಮ್ಮ PAN ಅನ್ನು ಹೊಸ JAO ಅವರಿಗೆ ಸ್ಥಳಾಂತರಿಸುವುದು ಅಗತ್ಯವಾಗಿದೆ. ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸಲು ಪ್ರಯತ್ನಿಸುತ್ತಿದ್ದರೂ, ಅಪರೂಪದ ಸಂದರ್ಭಗಳಲ್ಲಿ ನೀವು ನಿಮ್ಮ JAO ಅವರನ್ನು ಸಂಪರ್ಕಿಸುವ ಅಗತ್ಯ ಉಂಟಾಗಬಹುದು. ಆದ್ದರಿಂದ, ಅಗತ್ಯ ಬಂದಾಗ ಸುಲಭವಾಗಿ ಸಂಪರ್ಕಕ್ಕೆ ಅನುಕೂಲವಾಗಲು ನಿಮ್ಮ PAN ಅನ್ನು ಸರಿಯಾದ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ (AO) ಗೆ ಸ್ಥಳಾಂತರಿಸುವುದು ನಿಮ್ಮ ಹಿತದೃಷ್ಟಿಯಿಂದ ಉತ್ತಮವಾಗಿದೆ.
5. ಆದಾಯ ತೆರಿಗೆ ವಾರ್ಡ್/ವಲಯ ಎಂದರೇನು?
ಆದಾಯ ತೆರಿಗೆ ಸಂಬಂಧಿತ ಸೇವೆಗಳು/ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ನಿರ್ದಿಷ್ಟ ನ್ಯಾಯವ್ಯಾಪ್ತಿಯ ಆಧಾರದ ಮೇಲೆ ದೇಶದಾದ್ಯಂತ ಹಲವಾರು ವಾರ್ಡ್ಗಳು/ಸರ್ಕಲ್ಗಳನ್ನು ವಿಭಜಿಸಲಾಗಿದೆ. ಪ್ರತಿಯೊಂದು ವಾರ್ಡ್/ಸರ್ಕಲ್ಗೆ ಒಂದು ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ (AO) ಇದ್ದು, ಅವರು 'ಆದಾಯ ತೆರಿಗೆ ಉಪ ಆಯುಕ್ತ (DCIT)' / 'ಆದಾಯ ತೆರಿಗೆ ಸಹಾಯಕ ಆಯುಕ್ತ (ACIT)' ಅಥವಾ 'ಆದಾಯ ತೆರಿಗೆ ಅಧಿಕಾರಿ (ITO)' ಆಗಿರುತ್ತಾರೆ.
6. ನನ್ನ PAN ಅನ್ನು ಹೊಸ JAO ಅವರಿಗೆ ಸ್ಥಳಾಂತರಿಸಲು ನಾನು ಏನು ಮಾಡಬೇಕು?
ನೀವು ನಿಮ್ಮ PAN ಅನ್ನು ಪ್ರಸ್ತುತ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಗೆ (AO) ಸ್ಥಳಾಂತರಿಸಲು ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆ ಒಳಗೊಂಡಿರುವ ಹಂತಗಳು:
- ನಿಮ್ಮ ಪ್ರಸ್ತುತ JAO ಅವರಿಗೆ ನಿಮ್ಮ ವಿಳಾಸ ಬದಲಾವಣೆಯನ್ನು ಕಾರಣವಾಗಿ ಉಲ್ಲೇಖಿಸಿ ಅರ್ಜಿ ಬರೆಯಿರಿ.
- ನಿಮ್ಮ PAN ಸ್ಥಳಾಂತರಕ್ಕಾಗಿ ನಿಮ್ಮ ಪ್ರಸ್ತುತ JAO ಅವರನ್ನು ಕೋರುವಂತೆ ನಿಮ್ಮ ಹೊಸ JAO ಅವರಿಗೆ ಅರ್ಜಿಯನ್ನು ಬರೆಯಿರಿ.
- ಪ್ರಸ್ತುತ JAO ಈ ಅರ್ಜಿಯನ್ನು ಸ್ವೀಕರಿಸಬೇಕು.
- ಅನುಮೋದನೆಗೊಂಡ ನಂತರ, ಈ ಅರ್ಜಿಯನ್ನು ಆದಾಯ ತೆರಿಗೆ ಆಯುಕ್ತರಿಗೆ ಕಳುಹಿಸಲಾಗುತ್ತದೆ.
- ಆಯುಕ್ತರಿಂದ ಅನುಮೋದನೆ ಪಡೆದ ನಂತರ, JAO ಅವರನ್ನು ಬದಲಾಯಿಸಲಾಗುತ್ತದೆ.
ನಿಮ್ಮ ಹೊಸ ವಿಳಾಸದ ಆಧಾರದ ಮೇಲೆ ನಿಮ್ಮ PAN ಅನ್ನು ಹೊಸ JAO ಗೆ ಸ್ಥಳಾಂತರಿಸಲು, ನೀವು ನಿಮ್ಮ ಪ್ರಸ್ತುತ JAO ಗೆ ಲಿಖಿತವಾಗಿಯೇ ಕೋರಬೇಕು.
7. ನನ್ನ PAN ಅನ್ನು ಹೊಸ JAO ಗೆ ಸ್ಥಳಾಂತರಿಸಲಾಗಿದೆ ಎಂಬುದನ್ನು ನಾನು ಹೇಗೆ ತಿಳಿದುಕೊಳ್ಳಬಹುದು?
ನಿಮ್ಮ PAN ಗೆ ಸಂಬಂಧಿಸಿದ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ (JAO) ಯ ಪ್ರಸ್ತುತ ಸ್ಥಿತಿಯನ್ನು ಪೋರ್ಟಲ್ಲಿನ ಇ-ಸಲ್ಲಿಕೆ > ನಿಮ್ಮ ನ್ಯಾಯವ್ಯಾಪ್ತಿ ಮೌಲ್ಯಮಾಪನ ಅಧಿಕಾರಿಯನ್ನು ತಿಳಿಯಿರಿ, ಮೂಲಕ ಪರಿಶೀಲಿಸಬಹುದು. ಈ ಸೇವೆಯನ್ನು ಬಳಸಲು ನೀವು ನೋಂದಣಿ ಮಾಡಿಕೊಳ್ಳುವ ಅಥವಾ ಲಾಗಿನ್ ಮಾಡುವ ಅಗತ್ಯವಿಲ್ಲ.