Do not have an account?
Already have an account?

1. ವಾರ್ಷಿಕ ಮಾಹಿತಿ ಹೇಳಿಕೆ (AIS) ಎಂದರೇನು?

ವಾರ್ಷಿಕ ಮಾಹಿತಿ ಹೇಳಿಕೆ (AIS) ಎಂಬುದು ತೆರಿಗೆದಾರರ ಮಾಹಿತಿಯ ಸಮಗ್ರ ವೀಕ್ಷಣೆಯಾಗಿದೆ.

AIS ನ ಉದ್ದೇಶಗಳು:

  • ಆನ್‌ಲೈನ್ ಪ್ರತಿಕ್ರಿಯೆಯನ್ನು ದಾಖಲಿಸುವ ಸೌಲಭ್ಯದೊಂದಿಗೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ತೆರಿಗೆದಾರರಿಗೆ ಸಂಪೂರ್ಣ ಮಾಹಿತಿಯನ್ನು ಪ್ರದರ್ಶಿಸುವುದು.
  • ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುವುದು ಮತ್ತು ರಿಟರ್ನ್‌ನ ಪೂರ್ವ-ಭರ್ತಿಯನ್ನು ಸುಗಮಗೊಳಿಸುವುದು.
  • ಅನುಸರಣೆಯಿಲ್ಲದಿರುವಿಕೆಯನ್ನು ತಡೆಯುತ್ತದೆ

ಹೆಚ್ಚಿನ ಮಾಹಿತಿಗಾಗಿ, ಲಾಗಿನ್ ಮಾಡಿದ ನಂತರ ಇ-ಸಲ್ಲಿಕೆ/AIS ಮೆನು ಅಡಿಯಲ್ಲಿರುವ AIS ಗೆ ಹೋಗಿ.

2. ವಾರ್ಷಿಕ ಮಾಹಿತಿ ಹೇಳಿಕೆ (AIS) ಯ ಘಟಕಗಳು ಯಾವುವು?

AIS ನಲ್ಲಿ ಪ್ರದರ್ಶಿಸಲಾಗುವ ಮಾಹಿತಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ:

ಭಾಗ A - ಸಾಮಾನ್ಯ ಮಾಹಿತಿ: ಭಾಗ A ಯಲ್ಲಿ ನಿಮಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. ಇದರಲ್ಲಿ PAN, ಮರೆಮಾಚಲಾದ ಆಧಾರ್ ಸಂಖ್ಯೆ, ತೆರಿಗೆದಾರರ ಹೆಸರು, ಜನ್ಮ ದಿನಾಂಕ/ಸ್ಥಾಪನೆಯ ದಿನಾಂಕ/ರಚನೆಯ ದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ತೆರಿಗೆದಾರರ ವಿಳಾಸ ಸೇರಿರುತ್ತವೆ.

ಭಾಗ B - TDS/TCS ಮಾಹಿತಿ: ಮೂಲದಲ್ಲೇ ಕಡಿತಗೊಳಿಸಲಾದ/ಸಂಗ್ರಹಿಸಲಾದ ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. TDS/TCS ನ ಮಾಹಿತಿ ಕೋಡ್, ಮಾಹಿತಿಯ ವಿವರಣೆ ಮತ್ತು ಮಾಹಿತಿಯ ಮೌಲ್ಯವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

• SFT ಮಾಹಿತಿ: ಈ ಶೀರ್ಷಿಕೆಯ ಅಡಿಯಲ್ಲಿ, ಹಣಕಾಸು ವಹಿವಾಟಿನ ವಿವರ (SFT) ಅಡಿಯಲ್ಲಿ ವರದಿ ಮಾಡುವ ಘಟಕಗಳಿಂದ ಸ್ವೀಕರಿಸಲಾದ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. SFT ಕೋಡ್, ಮಾಹಿತಿಯ ವಿವರಣೆ ಮತ್ತು ಮಾಹಿತಿಯ ಮೌಲ್ಯವನ್ನು ಇಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

• ತೆರಿಗೆ ಪಾವತಿ: ಹಣಕಾಸು ವರ್ಷದ ಅವಧಿಯಲ್ಲಿ ಮುಂಗಡ ತೆರಿಗೆ ಮತ್ತು ಸ್ವಯಂ-ನಿರ್ಧರಣೆ ತೆರಿಗೆ ಮೊದಲಾದ ವಿವಿಧ ಶೀರ್ಷಿಕೆಗಳ ಅಡಿಯಲ್ಲಿ ಪಾವತಿಸಲಾದ ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ.

• ಬೇಡಿಕೆ ಮತ್ತು ಮರುಪಾವತಿ: ಹಣಕಾಸು ವರ್ಷದ ಅವಧಿಯಲ್ಲಿ ಉಂಟಾದ ಬೇಡಿಕೆ ಮತ್ತು ಪ್ರಾರಂಭಿಸಲಾದ ಮರುಪಾವತಿ (ನಿರ್ಧರಣೆ ವರ್ಷ AY ಮತ್ತು ಮೊತ್ತ) ಗಳ ವಿವರಗಳನ್ನು ನೀವು ವೀಕ್ಷಿಸಬಹುದು. (ಬೇಡಿಕೆಗೆ ಸಂಬಂಧಿಸಿದ ವಿವರಗಳು ಪ್ರಸ್ತುತ ಲಭ್ಯವಿಲ್ಲ).

• ಇತರೆ ಮಾಹಿತಿ: ಅನುಬಂಧ II ವೇತನಕ್ಕೆ ಸಂಬಂಧಿಸಿದ ಮಾಹಿತಿ, ಮರುಪಾವತಿ ಮೇಲಿನ ಬಡ್ಡಿ, ವಿದೇಶಕ್ಕೆ ಹಣ ರವಾನೆ/ವಿದೇಶಿ ಕರೆನ್ಸಿ ಖರೀದಿ ಇತ್ಯಾದಿಗಳಂತಹ ಇತರೆ ಮೂಲಗಳಿಂದ ಸ್ವೀಕರಿಸಲಾದ ಮಾಹಿತಿಯ ವಿವರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

ಹೆಚ್ಚುವರಿಯಾಗಿ, ತೆರಿಗೆದಾರರು AIS ನಲ್ಲಿ ಪ್ರದರ್ಶಿಸಲಾದ ಮಾಹಿತಿಯ ಕುರಿತು ಪ್ರತಿಕ್ರಿಯೆಯನ್ನು ನೀಡಬಹುದು. AIS ನಲ್ಲಿ ಪ್ರತಿ ವಿಭಾಗದ (ಅಂದರೆ TDS, SFT, ಇತರೆ ಮಾಹಿತಿ) ಅಡಿಯಲ್ಲಿ ವರದಿ ಮಾಡಲಾದ ಮೌಲ್ಯ ಮತ್ತು ಮಾರ್ಪಡಿಸಲಾದ ಮೌಲ್ಯವನ್ನು (ಅಂದರೆ ತೆರಿಗೆದಾರರ ಪ್ರತಿಕ್ರಿಯೆ ಅಥವಾ ತೆರಿಗೆದಾರರ ಪ್ರತಿಕ್ರಿಯೆಯ ಕುರಿತು ಮೂಲದಿಂದ ಪಡೆದ ದೃಢೀಕರಣವನ್ನು ಪರಿಗಣಿಸಿದ ನಂತರದ ಮೌಲ್ಯ) ಪ್ರದರ್ಶಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಲಾಗಿನ್ ಮಾಡಿದ ನಂತರ ಇ-ಸಲ್ಲಿಕೆ/AIS ಮೆನು ಅಡಿಯಲ್ಲಿರುವ AIS ಗೆ ಹೋಗಿ.

3. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅಗತ್ಯವಿರುವ ತೆರಿಗೆದಾರರ ಎಲ್ಲಾ ಮಾಹಿತಿಯೂ AIS ನಲ್ಲಿ ಲಭ್ಯವಿದೆಯೇ?

ವಾರ್ಷಿಕ ಮಾಹಿತಿ ಹೇಳಿಕೆ (AIS) ಯಲ್ಲಿ ಪ್ರಸ್ತುತ ಆದಾಯ ತೆರಿಗೆ ಇಲಾಖೆಯ ಬಳಿ ಲಭ್ಯವಿರುವ ಮಾಹಿತಿಯನ್ನು ಒಳಗೊಂಡಿರುತ್ತದೆ. ತೆರಿಗೆದಾರರಿಗೆ ಸಂಬಂಧಿಸಿದ ಕೆಲವು ಇತರೆ ವಹಿವಾಟುಗಳನ್ನು ಪ್ರಸ್ತುತ ವಾರ್ಷಿಕ ಮಾಹಿತಿ ಹೇಳಿಕೆ (AIS) ಯಲ್ಲಿ ಪ್ರದರ್ಶಿಸಲಾಗದೇ ಇರಬಹುದು. ತೆರಿಗೆದಾರರು ಸಂಬಂಧಿತ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ, ಆದಾಯ ತೆರಿಗೆ ರಿಟರ್ನ್‌ನಲ್ಲಿ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ವರದಿಯಲ್ಲಿ ನೀಡುವ ನಿರೀಕ್ಷೆಯಿದೆ.

4. AIS ಅಡಿಯಲ್ಲಿ ತೆರಿಗೆದಾರರ ಮಾಹಿತಿ ಸಾರಾಂಶ (TIS) ನಲ್ಲಿ ಏನು ಒಳಗೊಂಡಿರುತ್ತದೆ?

ತೆರಿಗೆದಾರರ ಮಾಹಿತಿ ಸಾರಾಂಶ (TIS) ಎಂಬುದು ತೆರಿಗೆದಾರರ ಮಾಹಿತಿಯನ್ನು ವರ್ಗವಾರು ಒಟ್ಟುಗೂಡಿಸಿ ಸಿದ್ಧಪಡಿಸಲಾದ ಸಾರಾಂಶವಾಗಿದೆ. ಇದರಲ್ಲಿ ಪ್ರತಿ ಮಾಹಿತಿ ವರ್ಗದ (ಉದಾಹರಣೆಗೆ ವೇತನ, ಬಡ್ಡಿ, ಲಾಭಾಂಶ ಇತ್ಯಾದಿ) ಅಡಿಯಲ್ಲಿ, ವ್ಯವಸ್ಥೆಯಿಂದ ಸಂಸ್ಕರಿಸಲಾದ ಮೌಲ್ಯವನ್ನು (ಅಂದರೆ, ಪೂರ್ವನಿರ್ಧರಿತ ನಿಯಮಗಳ ಆಧಾರದ ಮೇಲೆ ಮಾಹಿತಿಯ ನಕಲುಗಳನ್ನು ತೆಗೆದುಹಾಕಿದ ನಂತರ ರಚಿಸಲಾದ ಮೌಲ್ಯ) ಮತ್ತು ತೆರಿಗೆದಾರರು ಅಂಗೀಕರಿಸಿದ/ಮೂಲದಿಂದ ದೃಢೀಕರಿಸಲಾದ ಮೌಲ್ಯವನ್ನು (ಅಂದರೆ, ತೆರಿಗೆದಾರರ ಪ್ರತಿಕ್ರಿಯೆ ಅಥವಾ ತೆರಿಗೆದಾರರ ಪ್ರತಿಕ್ರಿಯೆಯ ಕುರಿತು ಮೂಲದಿಂದ ಪಡೆದ ದೃಢೀಕರಣ ಹಾಗೂ ವ್ಯವಸ್ಥೆಯಿಂದ ಸಂಸ್ಕರಿಸಲಾದ ಮೌಲ್ಯವನ್ನು ಪರಿಗಣಿಸಿ ನಿರ್ಧರಿಸಲಾದ ಮೌಲ್ಯ) ಪ್ರದರ್ಶಿಸಲಾಗುತ್ತದೆ. ಅನ್ವಯವಾಗುವ ಸಂದರ್ಭಗಳಲ್ಲಿ, TIS ನಲ್ಲಿ ತೆರಿಗೆದಾರರು ಅಂಗೀಕರಿಸಿದ/ಮೂಲದಿಂದ ದೃಢೀಕರಿಸಲಾದ ಮಾಹಿತಿಯನ್ನು ರಿಟರ್ನ್‌ನ ಪೂರ್ವ-ಭರ್ತಿಗಾಗಿ ಬಳಸಲಾಗುತ್ತದೆ.

ತೆರಿಗೆದಾರರ ಮಾಹಿತಿ ಸಾರಾಂಶ (TIS) ನಲ್ಲಿ ಈ ಕೆಳಗೆ ನೀಡಿರುವ ವಿವಿಧ ವಿವರಗಳನ್ನು ನಿಮಗೆ ಪ್ರದರ್ಶಿಸಲಾಗುತ್ತದೆ,

  • ಮಾಹಿತಿ ವರ್ಗ
  • ವ್ಯವಸ್ಥೆಯಿಂದ ಸಂಸ್ಕರಿಸಲಾದ ಮೌಲ್ಯ
  • ತೆರಿಗೆದಾರರು ಅಂಗೀಕರಿಸಿದ/ಮೂಲದಿಂದ ದೃಢೀಕರಿಸಲಾದ ಮೌಲ್ಯ

ಹೆಚ್ಚುವರಿಯಾಗಿ, ಪ್ರತಿ ಮಾಹಿತಿ ವರ್ಗದ ಅಡಿಯಲ್ಲಿ ಈ ಕೆಳಗಿನ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ:

ಮಾಹಿತಿ ಸ್ವೀಕರಿಸಲಾದ ಭಾಗ

  • ಮಾಹಿತಿಯ ವಿವರಣೆ
  • ಮಾಹಿತಿಯ ಮೂಲ
  • ಮೊತ್ತದ ವಿವರಣೆ
  • ಮೊತ್ತ (ಮೂಲದಿಂದ ವರದಿ ಮಾಡಲಾದ, ವ್ಯವಸ್ಥೆಯಿಂದ ಸಂಸ್ಕರಿಸಲಾದ, ತೆರಿಗೆದಾರರು ಅಂಗೀಕರಿಸಿದ/ಮೂಲದಿಂದ ದೃಢೀಕರಿಸಲಾದ)

ಹೆಚ್ಚಿನ ಮಾಹಿತಿಗಾಗಿ, ಲಾಗಿನ್ ಮಾಡಿದ ನಂತರ ಇ-ಸಲ್ಲಿಕೆ/AIS ಮೆನು ಅಡಿಯಲ್ಲಿರುವ AIS ಗೆ ಹೋಗಿ.

5. AIS ಮತ್ತು ಫಾರ್ಮ್‌ 26AS (ವಾರ್ಷಿಕ ತೆರಿಗೆ ಹೇಳಿಕೆ) ನಡುವಿನ ವ್ಯತ್ಯಾಸವೇನು?

ವಾರ್ಷಿಕ ತೆರಿಗೆ ಹೇಳಿಕೆ (ಫಾರ್ಮ್‌ 26AS), TRACES ಪೋರ್ಟಲ್‌ನಲ್ಲಿ ಲಭ್ಯವಿದ್ದು, ತೆರಿಗೆದಾರರ TDS/TCS ಗೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಪ್ರದರ್ಶಿಸುತ್ತದೆ. ತೆರಿಗೆದಾರರಿಗೆ ಸಂಬಂಧಿಸಿದ ಇತರೆ ವಿವರಗಳು AIS (ವಾರ್ಷಿಕ ಮಾಹಿತಿ ಹೇಳಿಕೆ) ನಲ್ಲಿ ಲಭ್ಯವಿರುತ್ತವೆ.
AIS ನಲ್ಲಿ ವರದಿ ಮಾಡಲಾದ ವಹಿವಾಟುಗಳ ಕುರಿತು ತೆರಿಗೆದಾರರು ತಮ್ಮ ಪ್ರತಿಕ್ರಿಯೆಯನ್ನು ನೀಡುವ ಆಯ್ಕೆಯೂ ಲಭ್ಯವಿದೆ. ಜೊತೆಗೆ, AIS ಅಡಿಯಲ್ಲಿ ಒಳಗೊಂಡಿರುವ TIS ನಲ್ಲಿ ಮಾಹಿತಿ ಮೂಲದ ಮಟ್ಟದಲ್ಲಿ ಒಟ್ಟುಗೂಡಿಸಲಾದ ವಹಿವಾಟುಗಳ ಮಾಹಿತಿಯನ್ನೂ ಪ್ರದರ್ಶಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಲಾಗಿನ್ ಮಾಡಿದ ನಂತರ ಇ-ಸಲ್ಲಿಕೆ/AIS ಮೆನು ಅಡಿಯಲ್ಲಿರುವ AIS ಗೆ ಹೋಗಿ.

6. ನಾನು ವಾರ್ಷಿಕ ಮಾಹಿತಿ ಹೇಳಿಕೆ (AIS) ಅನ್ನು ಹೇಗೆ ವೀಕ್ಷಿಸಬಹುದು?

ನೀವು ಕೆಳಗೆ ನಮೂದಿಸಿರುವ ಹಂತಗಳನ್ನು ಅನುಸರಿಸುವ ಮೂಲಕ ವಾರ್ಷಿಕ ಮಾಹಿತಿ ಹೇಳಿಕೆ (AIS) ಸೌಲಭ್ಯವನ್ನು ಪ್ರವೇಶಿಸಬಹುದು:

  • ಹಂತ 1: https://www.incometax.gov.in/ URL ಗೆ ಲಾಗಿನ್ ಮಾಡಿ.
  • ಹಂತ 2: ಲಾಗಿನ್ ಆದ ನಂತರ, ಡ್ಯಾಶ್‌ಬೋರ್ಡ್‌ನಲ್ಲಿ ವಾರ್ಷಿಕ ಮಾಹಿತಿ ಹೇಳಿಕೆ (AIS) ಮೆನು ಕ್ಲಿಕ್ ಮಾಡಿ.
  • ಹಂತ 3: AIS ಪೋರ್ಟಲ್‌ಗೆ ಮರುನಿರ್ದೇಶಿಸಲು ಮುಂದುವರಿಸಿ ಬಟನ್‌ ಮೇಲೆ ಕ್ಲಿಕ್ ಮಾಡಿ ಮತ್ತು ವಾರ್ಷಿಕ ಮಾಹಿತಿ ಹೇಳಿಕೆಯನ್ನು ವೀಕ್ಷಿಸಲು AIS ಟೈಲ್‌ ಮೇಲೆ ಕ್ಲಿಕ್ ಮಾಡಿ.

ಪರ್ಯಾಯವಾಗಿ,

  • ಹಂತ 1: https://www.incometax.gov.in/ URL ಗೆ ಲಾಗಿನ್ ಮಾಡಿ.
  • ಹಂತ 2: ಲಾಗಿನ್ ಆದ ನಂತರ, ಇ-ಫೈಲ್ ಮೆನು ಕ್ಲಿಕ್ ಮಾಡಿ.
  • ಹಂತ 3: ಆದಾಯ ತೆರಿಗೆ ರಿಟರ್ನ್ ಮೇಲೆ ಕ್ಲಿಕ್ ಮಾಡಿ ಹಾಗೂAIS ವೀಕ್ಷಿಸಿ.
  • ಹಂತ 4: AIS ಪೋರ್ಟಲ್‌ಗೆ ಮರುನಿರ್ದೇಶಿಸಲು ಮುಂದುವರಿಸಿ ಬಟನ್‌ ಮೇಲೆ ಕ್ಲಿಕ್ ಮಾಡಿ ಮತ್ತು ವಾರ್ಷಿಕ ಮಾಹಿತಿ ಹೇಳಿಕೆಯನ್ನು ವೀಕ್ಷಿಸಲು AIS ಟೈಲ್‌ ಮೇಲೆ ಕ್ಲಿಕ್ ಮಾಡಿ.

7. ನಾನು AIS ನಲ್ಲಿ ಚಟುವಟಿಕೆಗಳ ಇತಿಹಾಸವನ್ನು ಪರಿಶೀಲಿಸಬಹುದೇ?

ಹೌದು, AIS ಮುಖಪುಟದಲ್ಲಿರುವ ಚಟುವಟಿಕೆ ಇತಿಹಾಸ ಬಟನ್‌ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು AIS ನಲ್ಲಿನ ಚಟುವಟಿಕೆಗಳ ಇತಿಹಾಸವನ್ನು ಪರಿಶೀಲಿಸಬಹುದು. ಅನುಸರಣೆ ಪೋರ್ಟಲ್‌ನಲ್ಲಿ ನಿರ್ವಹಿಸಲಾದ ಚಟುವಟಿಕೆಗಳ ಸಾರಾಂಶದ ನೋಟವನ್ನು ನಿಮಗೆ ಒದಗಿಸಲಾಗುತ್ತದೆ. ನಿರ್ವಹಿಸಲಾದ ಪ್ರತಿಯೊಂದು ಚಟುವಟಿಕೆಗೆ ವ್ಯವಸ್ಥೆಯಿಂದ ರಚಿಸಲಾದ ID (ಚಟುವಟಿಕೆ ID) ಅನ್ನು ಸೃಷ್ಟಿಸಲಾಗುತ್ತದೆ ಮತ್ತು ಈ ಟ್ಯಾಬ್‌ನ ಅಡಿಯಲ್ಲಿ ಚಟುವಟಿಕೆಯ ದಿನಾಂಕ, ಚಟುವಟಿಕೆಯ ವಿವರಣೆ ಮತ್ತು ವಿವರಗಳನ್ನು ಪ್ರದರ್ಶಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಲಾಗಿನ್ ಮಾಡಿದ ನಂತರ ಇ-ಸಲ್ಲಿಕೆ/AIS ಮೆನು ಅಡಿಯಲ್ಲಿರುವ AIS ಗೆ ಹೋಗಿ.

8. ನಾನು ನನ್ನ AIS ಅನ್ನು ಯಾವೆಲ್ಲಾ ಸ್ವರೂಪಗಳಲ್ಲಿ ಡೌನ್‌ಲೋಡ್ ಮಾಡಬಹುದು?

ನೀವು ವಾರ್ಷಿಕ ಮಾಹಿತಿ ಹೇಳಿಕೆ (AIS) ಅನ್ನು PDF, JSON, CSV ಕಡತ ಸ್ವರೂಪಗಳಲ್ಲಿ ಡೌನ್‌ಲೋಡ್ ಮಾಡಬಹುದು.

9. ಮಾಹಿತಿಯ ಕುರಿತು ನಾನು ಹೇಗೆ ಪ್ರತಿಕ್ರಿಯೆಯನ್ನು ಸಲ್ಲಿಸಬಹುದು?

ನೀವು ಕೆಳಗೆ ನಮೂದಿಸಿರುವ ಹಂತಗಳನ್ನು ಅನುಸರಿಸುವ ಮೂಲಕ TDS/TCS ಮಾಹಿತಿ, SFT ಮಾಹಿತಿ ಅಥವಾ ಇತರೆ ಮಾಹಿತಿ ಅಡಿಯಲ್ಲಿ ಪ್ರದರ್ಶಿಸಲಾದ ಸಕ್ರಿಯ ಮಾಹಿತಿಯ ಕುರಿತು ಪ್ರತಿಕ್ರಿಯೆಯನ್ನು ಸಲ್ಲಿಸಬಹುದು:

• ಹಂತ 1: ಮಾಹಿತಿಯ ಮೇಲೆ ಕ್ಲಿಕ್ ಮಾಡಿ ಮತ್ತು ಸಂಬಂಧಿತ ಮಾಹಿತಿಗಾಗಿ ಪ್ರತಿಕ್ರಿಯೆ ಕಾಲಮ್‌ನಲ್ಲಿ ನಮೂದಿಸಿರುವ ಐಚ್ಛಿಕ ಬಟನ್‌ ಮೇಲೆ ಕ್ಲಿಕ್ ಮಾಡಿ. ನಿಮ್ಮನ್ನು ಪ್ರತಿಕ್ರಿಯೆ ಸೇರಿಸಿ ಪರದೆಗೆ ನಿರ್ದೇಶಿಸಲಾಗುತ್ತದೆ.
• ಹಂತ 2: ಸಂಬಂಧಿತ ಪ್ರತಿಕ್ರಿಯೆ ಆಯ್ಕೆಯನ್ನು ಆರಿಸಿ ಮತ್ತು ಪ್ರತಿಕ್ರಿಯೆಯ ವಿವರಗಳನ್ನು ನಮೂದಿಸಿ (ಪ್ರತಿಕ್ರಿಯೆ ಆಯ್ಕೆಯನ್ನು ಅವಲಂಬಿಸಿ).
• ಹಂತ 3: ಪ್ರತಿಕ್ರಿಯೆಯನ್ನು ಸಲ್ಲಿಸಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಮಾಹಿತಿಗಾಗಿ, ಲಾಗಿನ್ ಮಾಡಿದ ನಂತರ ಇ-ಸಲ್ಲಿಕೆ/AIS ಮೆನು ಅಡಿಯಲ್ಲಿರುವ AIS ಗೆ ಹೋಗಿ.

10. ನಾನು ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ ಏನಾಗುತ್ತದೆ?

AIS ಮಾಹಿತಿಯ ಕುರಿತು ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಮಾಹಿತಿಯೊಂದಿಗೆ ಪ್ರತಿಕ್ರಿಯೆಯನ್ನು ಪ್ರದರ್ಶಿಸಲಾಗುತ್ತದೆ ಮತ್ತು ಮಾಹಿತಿಯ ಮಾರ್ಪಡಿಸಿದ ಮೌಲ್ಯವು ವರದಿ ಮಾಡಲಾದ ಮೌಲ್ಯದೊಂದಿಗೆ ಗೋಚರಿಸುತ್ತದೆ. ಚಟುವಟಿಕೆ ಇತಿಹಾಸ ಟ್ಯಾಬ್ ಅನ್ನು ಸಹ ನವೀಕರಿಸಲಾಗುತ್ತದೆ ಮತ್ತು ನೀವು

ಸ್ವೀಕೃತಿ ರಸೀದಿಯನ್ನು ಡೌನ್‌ಲೋಡ್ ಮಾಡಬಹುದು. ಪ್ರತಿಕ್ರಿಯೆ ಸಲ್ಲಿಕೆಯ ಕುರಿತು ಇ-ಮೇಲ್ ಮತ್ತು SMS ದೃಢೀಕರಣ ಸಂದೇಶಗಳನ್ನು ಸಹ ಕಳುಹಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಲಾಗಿನ್ ಮಾಡಿದ ನಂತರ ಇ-ಸಲ್ಲಿಕೆ/AIS ಮೆನು ಅಡಿಯಲ್ಲಿರುವ AIS ಗೆ ಹೋಗಿ.

11. AIS ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ ನನಗೆ ಯಾವುದಾದರೂ ದೃಢೀಕರಣ ಸಿಗುತ್ತದೆಯೇ?

ಉತ್ತರ: ಹೌದು, AIS ಮಾಹಿತಿಯ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಚಟುವಟಿಕೆ ಇತಿಹಾಸ ಟ್ಯಾಬ್‌ ಅನ್ನು ನವೀಕರಿಸಲಾಗುತ್ತದೆ ಮತ್ತು ಅದರ ಸ್ವೀಕೃತಿ ರಸೀದಿಯನ್ನು ನೀವು ಡೌನ್‌ಲೋಡ್ ಮಾಡಬಹುದು. ಪ್ರತಿಕ್ರಿಯೆ ಸಲ್ಲಿಕೆಯ ಕುರಿತು ಇ-ಮೇಲ್ ಮತ್ತು SMS ದೃಢೀಕರಣ ಸಂದೇಶಗಳನ್ನು ಸಹ ಕಳುಹಿಸಲಾಗುತ್ತದೆ.

12. AIS ಕ್ರೋಢೀಕೃತ ಪ್ರತಿಕ್ರಿಯೆ ಕಡತ ಎಂದರೇನು?

AIS ಕ್ರೋಢೀಕೃತ ಪ್ರತಿಕ್ರಿಯೆ ಕಡತ(ACF) ತೆರಿಗೆದಾರರಿಗೆ ಅವರ ಎಲ್ಲಾ AIS ಪ್ರತಿಕ್ರಿಯೆಗಳನ್ನು (ಪ್ರತಿಕ್ರಿಯೆಯನ್ನು ಹೊರತುಪಡಿಸಿ, 'ಮಾಹಿತಿ ಸರಿಯಾಗಿದೆ') ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಒಂದೇ ಪಿಡಿಎಫ್‌ನಲ್ಲಿ ವೀಕ್ಷಿಸುವ ಸೌಲಭ್ಯವನ್ನು ನೀಡುತ್ತದೆ. AIS ನ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ, ನೀವು AIS ಕ್ರೋಢೀಕೃತ ಪ್ರತಿಕ್ರಿಯೆ ಕಡತ (PDF) ಅನ್ನು ಡೌನ್‌ಲೋಡ್ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ, ಲಾಗಿನ್ ಆದ ನಂತರ ಇ-ಫೈಲ್/AIS ಮೆನುವಿನ ಅಡಿಯಲ್ಲಿ AIS ಗೆ ನ್ಯಾವಿಗೇಟ್ ಮಾಡಿ.

13. ನಾನು ನೀಡಿದ ಪ್ರತಿಕ್ರಿಯೆಯನ್ನು ಎಷ್ಟು ಬಾರಿ ಮಾರ್ಪಡಿಸಬಹುದು ಎಂಬುದಕ್ಕೆ ಯಾವುದೇ ಮಿತಿ ಇದೆಯೇ?

ಪ್ರಸ್ತುತ, ಈ ಹಿಂದೆ ನೀಡಿದ ಪ್ರತಿಕ್ರಿಯೆಗಳನ್ನು ನೀವು ಎಷ್ಟು ಬಾರಿ ಮಾರ್ಪಡಿಸಬಹುದು ಎಂಬುದಕ್ಕೆ ಯಾವುದೇ ಮಿತಿ ಇಲ್ಲ.

14. ನಾನು AIS ನಲ್ಲಿ GST ವಹಿವಾಟನ್ನು ಪರಿಶೀಲಿಸಬಹುದೇ?

ಹೌದು, AIS ನಲ್ಲಿ ಮಾಹಿತಿ ಕೋಡ್‌ (EXC-GSTR3B) ಅಡಿಯಲ್ಲಿ GST ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. ಅದೇ ಮಾಹಿತಿಯು AIS ನಲ್ಲಿರುವ ಇತರೆ ಮಾಹಿತಿ ಟ್ಯಾಬ್‌ನಲ್ಲಿ ಕಾಣಿಸುತ್ತದೆ.

15. AIS ಗಾಗಿ ಯಾವುದೇ ವೀಡಿಯೊ ಮಾರ್ಗದರ್ಶಿ ಲಭ್ಯವಿದೆಯೇ?

ಹೌದು, AIS ಕುರಿತು ಮಾಹಿತಿಯ ವೀಡಿಯೊವು YouTube ನಲ್ಲಿ ಲಭ್ಯವಿದೆ. ವೀಡಿಯೊವನ್ನು ಈ ಲಿಂಕ್‌ ಮೂಲಕ ಪ್ರವೇಶಿಸಬಹುದು.

https://www.youtube.com/watch?v=zbGa6uvisBE