ಕಾನೂನು ನಮೂನೆಗಳು ಸಲ್ಲಿಸುವುದಕ್ಕೆ ಕ್ಷಮಾರ್ಹತೆ ವಿನಂತಿ ಬಳಕೆದಾರ ಕೈಪಿಡಿ
1. ಪಕ್ಷಿನೋಟ
ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಿಂದಾಗಿ, ನಿಗದಿತ ಅವಧಿಯೊಳಗೆ ಆದಾಯ ತೆರಿಗೆಯ ಶಾಸನಬದ್ಧ ಫ಼ಾರ್ಮುಗಳನ್ನು ಸಲ್ಲಿಸಲು ಸಾಧ್ಯವಾಗದಿರಬಹುದು. ಅಂತಹ ಸಂದರ್ಭಗಳಲ್ಲಿ, ಆ ಅವಧಿಗೆ ಸಂಬಂಧಿಸಿದ ಶಾಸನಬದ್ಧ ಫ಼ಾರ್ಮುಗಳನ್ನು ಸಲ್ಲಿಸಲು ವ್ಯವಸ್ಥೆಯು ಅನುಮತಿಸುವುದಿಲ್ಲ.
ತನ್ನ ನಿಯಂತ್ರಣಕ್ಕೆ ಮೀರಿದ ಪರಿಸ್ಥಿತಿಗಳಿಂದಾಗಿ ಆದಾಯ ತೆರಿಗೆಯ ಶಾಸನಬದ್ಧ ಫ಼ಾರ್ಮುಗಳನ್ನು ಸಲ್ಲಿಸಲು ಸಾಧ್ಯವಾಗದ ಯಾವುದೇ ವ್ಯಕ್ತಿಯು, ಆದಾಯ ತೆರಿಗೆಯ ಸೂಕ್ತ ಸಕ್ಷಮ ಪ್ರಾಧಿಕಾರದ ಅನುಮತಿಗೆ ಒಳಪಟ್ಟು, ಅವುಗಳನ್ನು ಸಲ್ಲಿಸಬಹುದು.
ಆದಾಯ ತೆರಿಗೆ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿರುವ ಈ ವಿಳಂಬ ಮನ್ನಿಸುವ ಮನವಿ ಸೌಲಭ್ಯವನ್ನು, ನಿಗದಿತ ದಿನಾಂಕದೊಳಗೆ ಫ಼ಾರ್ಮುಗಳನ್ನು ಸಲ್ಲಿಸದ ತೆರಿಗೆದಾರರು ಬಳಸಬಹುದು.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
- ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಮಾನ್ಯವಾದ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿತ ಬಳಕೆದಾರರಾಗಿರಬೇಕು.
- ತೆರಿಗೆದಾರರು ನಿಗದಿತ ಅವಧಿಯೊಳಗೆ ಕಾನೂನುಬದ್ಧ ಫ಼ಾರ್ಮ್‌ಗಳನ್ನು ಸಲ್ಲಿಸಿಲ್ಲದಿರುವುದು.
3. ಸೌಲಭ್ಯದ ಬಗ್ಗೆ
3.1 ಉದ್ದೇಶ
3.2 ಇದನ್ನು ಯಾರು ಬಳಸಬಹುದು?
ಈ ವಿಳಂಬ ಮನ್ನಿಸುವ ಮನವಿ ಸೌಲಭ್ಯವನ್ನು, ನಿಗದಿತ ದಿನಾಂಕದೊಳಗೆ ಫ಼ಾರ್ಮ್‌ಗಳನ್ನು ಸಲ್ಲಿಸದ ತೆರಿಗೆದಾರರು ಬಳಸಬಹುದು.
4. ಫ಼ಾರ್ಮ್‌ಗಳನ್ನು ಸಲ್ಲಿಸಲು ಆದ ವಿಳಂಬವನ್ನು ಮನ್ನಿಸಲು ಮನವಿಯನ್ನು ಹೇಗೆ ಸಲ್ಲಿಸುವುದು
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ.
ಹಂತ 2: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ 'ಸೇವೆಗಳು' > 'ವಿಳಂಬ ಮನ್ನಿಸುವ ಮನವಿ' ಮೇಲೆ ಕ್ಲಿಕ್ ಮಾಡಿ.
ಹಂತ 3: 'ವಿಳಂಬ ಮನ್ನಿಸುವ ಮನವಿ' ಪುಟದಲ್ಲಿ 'ಶಾಸನಬದ್ಧ ಫ಼ಾರ್ಮ್‌ಗಳಿಗಾಗಿ ಅರ್ಜಿ' ಅನ್ನು ಆಯ್ಕೆ ಮಾಡಿ ಮತ್ತು 'ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.
ಹಂತ 4: ಮನವಿಯನ್ನು ಸಲ್ಲಿಸಲು +'ವಿಳಂಬ ಮನ್ನಿಸುವ ಮನವಿಯನ್ನು ರಚಿಸಿ' ಮೇಲೆ ಕ್ಲಿಕ್ ಮಾಡಿ.
ಹಂತ 5: 'ಹೊಸ ಸಲ್ಲಿಕೆಯನ್ನು ಪ್ರಾರಂಭಿಸಿ' ಮೇಲೆ ಕ್ಲಿಕ್ ಮಾಡಿ.
ಹಂತ 6: ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ (ನಿವಾಸಿ ಸ್ಥಿತಿ, ಸಲ್ಲಿಸದ ಫ಼ಾರ್ಮ್‌ಗೆ ಸಂಬಂಧಿಸಿದ ವಿವರಗಳು, ಫ಼ಾರ್ಮ್ ಸಲ್ಲಿಕೆಯಲ್ಲಿ ಉಂಟಾದ ವಿಳಂಬದ ಕಾರಣವನ್ನು ಬರೆಯಿರಿ ಮತ್ತು ಅಗತ್ಯವಿರುವ ಅಡಕಗಳನ್ನು ಸೇರಿಸಿ). ನಂತರ 'ಇ-ಪರಿಶೀಲನೆಗೆ ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.
ಹಂತ 7: ಪರಿಶೀಲನೆಗಾಗಿ ಸೂಕ್ತ ವಿಧಾನವನ್ನು ಆಯ್ಕೆ ಮಾಡಿ ಮತ್ತು 'ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.
ಹಂತ 8: ಪರಿಶೀಲನೆಯ ನಂತರ ನಿಮ್ಮ ಮನವಿಯನ್ನು ಸಲ್ಲಿಸಲಾಗುತ್ತದೆ ಮತ್ತು ವಹಿವಾಟು ID ಅನ್ನು ರಚಿಸಲಾಗುತ್ತದೆ. ನೋಂದಾಯಿತ ಇ-ಮೇಲ್ ID ಮತ್ತು ಮೊಬೈಲ್ ಸಂಖ್ಯೆಗೆ ನೀವು ದೃಢೀಕರಣವನ್ನು ಸಹ ಪಡೆಯುತ್ತೀರಿ.
ನೀವು 'ವಿಳಂಬ ಮನ್ನಿಸುವ ಮನವಿಯನ್ನು ನೋಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ಸಲ್ಲಿಸಲಾದ ಮನವಿಯನ್ನು ನೋಡಬಹುದು.
ಹಂತ 9: ನೀವು ಸಲ್ಲಿಸಿದ 'ವಿಳಂಬ ಮನ್ನಿಸುವ ಮನವಿ'ಗಳು ಇಲ್ಲಿ ಕಾಣುತ್ತವೆ. ವಿಳಂಬ ಮನ್ನಿಸಲು ಮನವಿಯ ವಿವರಗಳನ್ನು ನೋಡಲು 'ವಿವರಗಳನ್ನು ನೋಡಿ' ಮೇಲೆ ಕ್ಲಿಕ್ ಮಾಡಿ.
ದಯವಿಟ್ಟು ಚೆಕ್‌ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು 'ಉಳಿಸಿ' ಮೇಲೆ ಕ್ಲಿಕ್ ಮಾಡಿ.
ಹಂತ 10: ವಿಳಂಬ ಮನ್ನಿಸುವ ಮನವಿಯ ವಿವರಗಳು ಇಲ್ಲಿವೆ. 'ಅನುಮೋದನಾ ಪತ್ರವನ್ನು ಡೌನ್‌ಲೋಡ್ ಮಾಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಅನುಮೋದನಾ ಪತ್ರವನ್ನು ಡೌನ್‌ಲೋಡ್ ಮಾಡಬಹುದು.
4. ಸಂಬಂಧಿತ ವಿಷಯಗಳು