1. ಅವಲೋಕನ
PAN ಕಾರ್ಡ್‌ನ ಹೊಸ ಅರ್ಜಿದಾರರಿಗೆ, ಅರ್ಜಿ ಸಲ್ಲಿಸುವ ಹಂತದಲ್ಲಿ ಆಧಾರ್ PAN ಲಿಂಕ್ ಅನ್ನು ಸ್ವಯಂಚಾಲಿತವಾಗಿ ಮಾಡಲಾಗುತ್ತದೆ. ಅಸ್ತಿತ್ವದಲ್ಲಿರುವ PAN ಹೊಂದಿರುವವರಿಗೆ, 01-07-2017 ರಂದು ಅಥವಾ ಮೊದಲು PAN ಹಂಚಿಕೆ ಮಾಡಲಾಗಿದ್ದರೆ, PAN ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಲಿಂಕ್ ಸೇವೆಯು ವೈಯಕ್ತಿಕ ತೆರಿಗೆದಾರರಿಗೆ ಲಭ್ಯವಿದೆ (ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ಮತ್ತು ನೋಂದಾಯಿಸದ ಇಬ್ಬರಿಗೂ). ನಿಮ್ಮ PAN ಅನ್ನು 30ನೇ ಜೂನ್ 2023 ರವರೆಗೆ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ PAN ನಿಷ್ಕ್ರಿಯವಾಗುತ್ತದೆ. ಆದಾಗ್ಯೂ, ವಿನಾಯಿತಿ ಪಡೆದ ವರ್ಗದ ಅಡಿಯಲ್ಲಿ ಬರುವ PAN ನಿಷ್ಕ್ರಿಯವಾಗುವ ಪರಿಣಾಮಗಳಿಗೆ ಒಳಪಡುವುದಿಲ್ಲ.
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು:
- ಮಾನ್ಯವಾದ PAN
- ಆಧಾರ್ ಸಂಖ್ಯೆ
- ಮಾನ್ಯ ಮೊಬೈಲ್ ಸಂಖ್ಯೆ
3. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಆಧಾರ್ PAN ಲಿಂಕ್ ಶುಲ್ಕವನ್ನು ಹೇಗೆ ಪಾವತಿಸುವುದು
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್ ಪುಟಕ್ಕೆ ಭೇಟಿ ನೀಡಿ ಮತ್ತು ತ್ವರಿತ ಲಿಂಕ್‌ಗಳ ವಿಭಾಗದಲ್ಲಿ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ, ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು ಪ್ರೊಫೈಲ್ ವಿಭಾಗದಲ್ಲಿ ಆಧಾರ್ ಲಿಂಕ್ ಮಾಡಿ ಮೇಲೆ ಕ್ಲಿಕ್ ಮಾಡಿ.
ಹಂತ 2: ನಿಮ್ಮ PAN ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
ಹಂತ 3: ಇ-ಪೇ ತೆರಿಗೆ ಮೂಲಕ ಪಾವತಿಸಲು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 4: ನಿಮ್ಮ PAN ಅನ್ನು ನಮೂದಿಸಿ, PAN ಅನ್ನು ದೃಢೀಕರಿಸಿ ಮತ್ತು OTP ಸ್ವೀಕರಿಸಲು ಯಾವುದೇ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 5: OTP ಪರಿಶೀಲಿಸಿದ ನಂತರ,ನಿಮ್ಮನ್ನು ಇ-ಪೇ ತೆರಿಗೆ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
ಹಂತ 6: ಆದಾಯ ತೆರಿಗೆ ಟೈಲ್ ಮೇಲೆ ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 7: ಸಂಬಂಧಿತ ಮೌಲ್ಯಮಾಪನ ವರ್ಷ ಮತ್ತು ಪಾವತಿ ಪ್ರಕಾರವನ್ನುವನ್ನು ಇತರ ರಶೀದಿಗಳು (500)ಎಂದು ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 8:ಅನ್ವಯವಾಗುವ ಮೊತ್ತವನ್ನು ಇತರೇ ಎದುರು ಪೂರ್ವ ಭರ್ತಿ ಮಾಡಲಾಗುತ್ತದೆ. ಮುಂದುವರಿಸಿ ಕ್ಲಿಕ್ ಮಾಡಿ.
ಈಗ, ಚಲನ್ ಅನ್ನು ಸೃಷ್ಟಿಸಲಾಗುತ್ತದೆ. ಮುಂದಿನ ಪರದೆಯಲ್ಲಿ, ನೀವು ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕು. ಪಾವತಿ ವಿಧಾನವನ್ನು ಆಯ್ಕೆ ಮಾಡಿದ ನಂತರ, ನೀವು ಪಾವತಿ ಮಾಡಬಹುದಾದ ಬ್ಯಾಂಕ್ ವೆಬ್ ಸೈಟ್‌ಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.
ಶುಲ್ಕವನ್ನು ಪಾವತಿಸಿದ ನಂತರ, ಇ-ಫೈಲಿಂಗ್ ಪೋರ್ಟಲ್ ನಲ್ಲಿ ನಿಮ್ಮ ಆಧಾರ್ ಅನ್ನು PAN ನೊಂದಿಗೆ ಲಿಂಕ್ ಮಾಡಬಹುದು.
4. ಶುಲ್ಕ ಪಾವತಿಯ ನಂತರ ಆಧಾರ್ PAN ಲಿಂಕ್ ವಿನಂತಿಯನ್ನು ಹೇಗೆ ಸಲ್ಲಿಸುವುದು
ಆಧಾರ್ PAN ಲಿಂಕ್ ವಿನಂತಿಯನ್ನು ಲಾಗಿನ್ ನಂತರದ ಮತ್ತು ಲಾಗಿನ್ ಪೂರ್ವದ ವಿಧಗಳಲ್ಲಿ ಮಾಡಬಹುದು.
ಪ್ರತಿ ವಿಧದ ಹಂತಗಳನ್ನು ಒಂದೊಂದಾಗಿ ಕೆಳಗೆ ವಿವರಿಸಲಾಗಿದೆ:
ಆಧಾರ್ PAN ಲಿಂಕ್ ವಿನಂತಿಯನ್ನು ಸಲ್ಲಿಸಿ (ಲಾಗಿನ್ ನಂತರ):
ಹಂತ 1:ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ > ಡ್ಯಾಶ್ ಬೋರ್ಡ್‌ನಲ್ಲಿ>ಲಾಗಿನ್ ಮಾಡಿ, ಪ್ರೊಫೈಲ್ ವಿಭಾಗದಲ್ಲಿ ಆಧಾರ್ ಅನ್ನು PANಗೆ ಲಿಂಕ್ ಮಾಡಿ ಆಯ್ಕೆ ಅಡಿಯಲ್ಲಿ, ಆಧಾರ್ ಲಿಂಕ್ ಮಾಡಿ ಕ್ಲಿಕ್ ಮಾಡಿ.
ಅಥವಾ ಪರ್ಯಾಯವಾಗಿ, ವೈಯಕ್ತಿಕ ವಿವರಗಳ ವಿಭಾಗದಲ್ಲಿ ಆಧಾರ್ ಲಿಂಕ್ ಕ್ಲಿಕ್ ಮಾಡಿ.
ಹಂತ 2: ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ದೃಢೀಕರಿಸಿ ಕ್ಲಿಕ್ ಮಾಡಿ.
ಆಧಾರ್ PAN ಲಿಂಕ್ ವಿನಂತಿಯನ್ನು ಸಲ್ಲಿಸಿ (ಲಾಗಿನ್-ಪೂರ್ವ):
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್ ಪೇಜ್‌ಗೆ ಹೋಗಿ ಮತ್ತು ತ್ಪರಿತ ಲಿಂಕ್‌ಗಳ ಅಡಿಯಲ್ಲಿ ಆಧಾರ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 2: PAN ಮತ್ತು ಆಧಾರ್ ನಮೂದಿಸಿ ಮತ್ತು ದೃಢೀಕರಿಸಿ ಕ್ಲಿಕ್ ಮಾಡಿ.
ಹಂತ 3: ಕೇಳಿದಂತೆ ಕಡ್ಡಾಯ ವಿವರಗಳನ್ನು ನಮೂದಿಸಿ ಮತ್ತು ಆಧಾರ್ ಲಿಂಕ್ ಮಾಡಿ ಮೇಲೆ ಕ್ಲಿಕ್ ಮಾಡಿ.
ಹಂತ 4: ಹಿಂದಿನ ಹಂತದಲ್ಲಿ ಉಲ್ಲೇಖಿಸಲಾದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ 6-ಅಂಕಿಯ OTP ನಮೂದಿಸಿ ಮತ್ತು ದೃಢೀಕರಿಸಿ ಮೇಲೆ ಕ್ಲಿಕ್ ಮಾಡಿ.
ಹಂತ 5: ಆಧಾರ್ ಲಿಂಕ್‌ಗಾಗಿ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ, ಈಗ ನೀವು ಆಧಾರ್-PAN ಲಿಂಕ್ ಸ್ಥಿತಿಯನ್ನು ಪರಿಶೀಲಿಸಬಹುದು.
ಸನ್ನಿವೇಶ 1: ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪಾವತಿ ವಿವರಗಳು ಪರಿಶೀಲಿಸಲ್ಪಟ್ಟಿಲ್ಲದಿದ್ದರೆ.
ಹಂತ 1: PAN ಮತ್ತು ಆಧಾರ್ ಅನ್ನು ದೃಢೀಕರಿಸಿದ ನಂತರ, ನೀವು ಒಂದು ಪಾಪ್-ಅಪ್ ಸಂದೇಶವನ್ನು ನೋಡುತ್ತೀರಿ, ಅದು
" ಪಾವತಿ ವಿವರಗಳು ಕಂಡುಬಂದಿಲ್ಲ" ಎಂದು ತಿಳಿಸುತ್ತದೆ. ಆಧಾರ್ PAN ಲಿಂಕ್ ವಿನಂತಿಯನ್ನು ಸಲ್ಲಿಸಲು ಶುಲ್ಕ ಪಾವತಿಯು ಪೂರ್ವ ಅಗತ್ಯವಾಗಿರುವುದರಿಂದ ಪಾವತಿಸಲು ಇ-ಪೇ ತೆರಿಗೆ ಮೂಲಕ ಶುಲ್ಕವನ್ನು ಪಾವತಿಸಲು ಮುಂದುವರಿಸಿ ಕ್ಲಿಕ್ ಮಾಡಿ.
ಗಮನಿಸಿ: ನೀವು ಈಗಾಗಲೇ ಶುಲ್ಕವನ್ನು ಪಾವತಿಸಿದ್ದರೆ, 4-5 ಕೆಲಸದ ದಿನಗಳವರೆಗೆ ನಿರೀಕ್ಷಿಸಿ. ಅದರ ನಂತರ, ನೀವು ವಿನಂತಿಯನ್ನು ಸಲ್ಲಿಸಬಹುದು.
ಗಮನಿಸಿ: ನಿಮ್ಮ ಸರಿಯಾದ ಆಧಾರ್ ಅನ್ನು ನಿಮ್ಮ PANನೊಂದಿಗೆ ಲಿಂಕ್ ಮಾಡಿದ್ದೀರಿ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ಆಧಾರ್ ಮತ್ತು PAN ಅನ್ನು ಈಗಾಗಲೇ ಲಿಂಕ್ ಮಾಡಿದ್ದರೆ ಅಥವಾ PAN ಅನ್ನು ಇತರ ಆಧಾರ್‌ಗೆ ಲಿಂಕ್ ಮಾಡಿದ್ದರೆ ಅಥವಾ ತಿರುಗು ಮುರುಗಾಗಿದ್ದರೆ, ನೀವು ಈ ಕೆಳಗಿನ ದೋಷಗಳನ್ನು ಪಡೆಯುತ್ತೀರಿ:
ಸನ್ನಿವೇಶ 2: PAN ಅನ್ನು ಈಗಾಗಲೇ ಆಧಾರ್‌ನೊಂದಿಗೆ ಅಥವಾ ಇತರ ಯಾವುದೋ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ:
ನಿಮ್ಮ ನ್ಯಾಯವ್ಯಾಪ್ತಿಯ AO ಅನ್ನು ನೀವು ಸಂಪರ್ಕಿಸಬೇಕಾಗಬಹುದು ಮತ್ತು ತಪ್ಪಾದ PANನೊಂದಿಗೆ ನಿಮ್ಮ ಆಧಾರ್ ಲಿಂಕ್ ಡಿಲಿಂಕ್ ಮಾಡಲು ವಿನಂತಿಯನ್ನು ಸಲ್ಲಿಸಬೇಕು.
ನಿಮ್ಮ AO ನ ವಿವರಗಳನ್ನು ತಿಳಿಯಲು, https://eportal.incometax.gov.in/iec/foservices/#/pre-login/knowYourAO(ಲಾಗಿನ್ ಪೂರ್ವ) ಗೆ ಭೇಟಿ ನೀಡಿ
ಅಥವಾ https://eportal.incometax.gov.in/iec/foservices/#/dashboard/myProfile/jurisdictionDetail (ಲಾಗಿನ್ ನಂತರ)
ಸನ್ನಿವೇಶ3: ನೀವು ಚಲನ್ ಪಾವತಿ ಮಾಡಿದ್ದರೆ ಮತ್ತು ಪಾವತಿಗಳು ಮತ್ತು ವಿವರಗಳು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪರಿಶೀಲಿಸಲ್ಪಟ್ಟಿದ್ದರೆ.
ಹಂತ 1: PAN ಮತ್ತು ಆಧಾರ್ ಅನ್ನು ದೃಢೀಕರಿಸಿದ ನಂತರ ನೀವು "ನಿಮ್ಮ ಪಾವತಿ ವಿವರಗಳನ್ನು ಪರಿಶೀಲಿಸಲಾಗಿದೆ" ಎಂಬ ಪಾಪ್-ಅಪ್ ಸಂದೇಶವನ್ನು ನೋಡುತ್ತೀರಿ. ಆಧಾರ್ PAN ಲಿಂಕ್ ಮಾಡುವ ವಿನಂತಿಯನ್ನು ಸಲ್ಲಿಸಲು ದಯವಿಟ್ಟು ಪಾಪ್-ಅಪ್ ಸಂದೇಶದ ಮೇಲೆ ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 2: ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಆಧಾರ್ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಆಧಾರ್ PAN ಲಿಂಕ್ ವಿನಂತಿ ಯಶಸ್ವಿಯಾಗಿ ಸಲ್ಲಿಸಲಾಗಿದೆ, ಈಗ ನೀವು ಆಧಾರ್ PAN ಲಿಂಕ್ ಸ್ಥಿತಿಯನ್ನು ಪರಿಶೀಲಿಸಬಹುದು.
5. ಆಧಾರ್ ಲಿಂಕ್ ಸ್ಥಿತಿಯನ್ನು ವೀಕ್ಷಿಸಿ (ಲಾಗಿನ್-ಪೂರ್ವ)
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್ ಪೇಜ್‌ನಲ್ಲಿ, ತ್ವರಿತ ಲಿಂಕ್‌ಗಳ ಅಡಿಯಲ್ಲಿ , ಆಧಾರ್ ಲಿಂಕ್ ಸ್ಥಿತಿ ಅನ್ನು ಕ್ಲಿಕ್ ಮಾಡಿ.
ಹಂತ 2:ನಿಮ್ಮ PAN ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಆಧಾರ್ ಲಿಂಕ್ ಸ್ಥಿತಿಯನ್ನು ವೀಕ್ಷಿಸಿ ಕ್ಲಿಕ್ ಮಾಡಿ.
ಯಶಸ್ವೀ ದೃಢೀಕರಣದ ನಂತರ, ನಿಮ್ಮ ಆಧಾರ್ ಲಿಂಕ್ ಸ್ಠಿತಿಗೆ ಸಂಬಂಧಿಸಿದಂತೆ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.
ಆಧಾರ್-PAN ಲಿಂಕ್ ಪ್ರಗತಿಯಲ್ಲಿದ್ದರೆ:
ಆಧಾರ್-PAN ಲಿಂಕ್ ಯಶಸ್ವಿಯಾಗಿದ್ದರೆ:
6. ಆಧಾರ್ ಲಿಂಕ್ ಸ್ಥಿತಿಯನ್ನು ನೋಡಿ (ಲಾಗಿನ್-ನಂತರ)
ಹಂತ 1: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ಆಧಾರ್ ಲಿಂಕ್ ಸ್ಥಿತಿಯನ್ನುಕ್ಲಿಕ್ ಮಾಡಿ.
ಹಂತ 2: ಪರ್ಯಾಯವಾಗಿ, ನೀವು ನನ್ನ ಪ್ರೊಫೈಲ್ > ಆಧಾರ್ ಲಿಂಕ್ ಸ್ಥಿತಿಗೆ ಹೋಗಬಹುದು.
(ನಿಮ್ಮ ಆಧಾರ್ ಈಗಾಗಲೇ ಲಿಂಕ್ ಆಗಿದ್ದರೆ, ಆಧಾರ್ ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತದೆ. ಆಧಾರ್ ಲಿಂಕ್ ಆಗಿರದಿದ್ದರೆ ಆಧಾರ್ ಲಿಂಕ್ ಸ್ಥಿತಿ ಅನ್ನು ಪ್ರದರ್ಶಿಸಲಾಗುತ್ತದೆ.
ಸೂಚನೆ:
- ದೃಢೀಕರಣ ವಿಫಲವಾದರೆ, ಆಧಾರ್ ಲಿಂಕ್ ಮಾಡಿ ಯನ್ನು ಸ್ಥಿತಿ ಪುಟದಲ್ಲಿ ಕ್ಲಿಕ್ ಮಾಡಿ, ಮತ್ತು ನಿಮ್ಮ PAN ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಹಂತಗಳನ್ನು ಪುನರಾವರ್ತಿಸಬೇಕಾಗುತ್ತದೆ.
- PAN ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಸಲ್ಲಿಸಿರುವ ನಿಮ್ಮ ವಿನಂತಿಯು UIDAI ನೊಂದಿಗೆ ಬಾಕಿ ಇದ್ದರೆ, ನೀವು ಸ್ಥಿತಿಯನ್ನು ನಂತರ ಪರಿಶೀಲಿಸಬೇಕಾಗುತ್ತದೆ.
- ಆಧಾರ್ ಮತ್ತು PAN ಲಿಂಕ್ ರದ್ದು ಮಾಡಲು ನೀವು ನ್ಯಾಯವ್ಯಾಪ್ತಿಯ AO ಅನ್ನು ಸಂಪರ್ಕಿಸಬೇಕಾಗಬಹುದು, ಒಂದು ವೇಳೆ:
- ನಿಮ್ಮ ಆಧಾರ್ ಬೇರೊಂದು PANನೊಂದಿಗೆ ಲಿಂಕ್ ಆಗಿದ್ದಾಗ
- ನಿಮ್ಮ PAN ಅನ್ನು ಬೇರೊಂದು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದಾಗ
ಯಶಸ್ವೀ ದೃಢೀಕರಣದ ನಂತರ, ನಿಮ್ಮ ಆಧಾರ್ ಲಿಂಕ್ ಸ್ಠಿತಿಗೆ ಸಂಬಂಧಿಸಿದಂತೆ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.
ಹಕ್ಕು ನಿರಾಕರಣೆ:
ಈ ಬಳಕೆದಾರರ ಕೈಪಿಡಿಯನ್ನು ಮಾಹಿತಿ ಮತ್ತು ಸಾಮಾನ್ಯ ಮಾರ್ಗದರ್ಶನ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತದೆ. ತಮ್ಮ ಪ್ರಕರಣಗಳಿಗೆ ಅನ್ವಯಿಸುವ ನಿಖರ ಮಾಹಿತಿ, ವ್ಯಾಖ್ಯಾನಗಳು, ಸ್ಪಷ್ಟೀಕರಣಗಳಿಗಾಗಿ ತೆರಿಗೆ ಪಾವತಿದಾರರಿಗೆ IT ಕಾನೂನಿನ ಸಂಬಂಧಿತ ಸುತ್ತೋಲೆಗಳು, ಅಧಿಸೂಚನೆಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ನೋಡಲು ಸೂಚಿಸಲಾಗಿದೆ. ಈ ಬಳಕೆದಾರರ ಕೈಪಿಡಿಯ ಆಧಾರದ ಮೇಲೆ ತೆಗೆದುಕೊಂಡ ಕ್ರಮಗಳು ಮತ್ತು/ಅಥವಾ ನಿರ್ಧಾರಗಳಿಗೆ ಇಲಾಖೆ ಜವಾಬ್ದಾರ ಆಗಿರುವುದಿಲ್ಲ.