Do not have an account?
Already have an account?

ವೆಬ್‌ಸೈಟ್ ನೀತಿಗಳು

ನಿಯಮಗಳು ಮತ್ತು ಷರತ್ತುಗಳು

ಈ ಇ-ಫೈಲಿಂಗ್ ವೆಬ್‌ಸೈಟ್ ಅನ್ನು (ಇನ್ನು ಮುಂದೆ "ಪೋರ್ಟಲ್" ಎಂದು ಕರೆಯಲಾಗುತ್ತದೆ) ಆದಾಯ ತೆರಿಗೆ ಇಲಾಖೆಯು (ಇನ್ನು ಮುಂದೆ ಇದನ್ನು "ಇಲಾಖೆ" ಎಂದು ಕರೆಯಲಾಗುತ್ತದೆ) ವಿನ್ಯಾಸಗೊಳಿಸುತ್ತದೆ ಮತ್ತು ನಿರ್ವಹಿಸುತ್ತದೆ. ಈ ಪೋರ್ಟಲ್ ಅಥವಾ ಅದರ ಯಾವುದೇ ಘಟಕಗಳ ದುರುಪಯೋಗವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಇದನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಪೋರ್ಟಲ್‌ನಲ್ಲಿನ ವಿಷಯದ ನಿಖರತೆ ಮತ್ತು ಖಚಿತತೆಯನ್ನು ಖಾತ್ರಿಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ, ಅದನ್ನು ಕಾನೂನುಬದ್ಧವಾಗಿರುವ ವಿವರಣೆ ಎಂದು ವ್ಯಾಖ್ಯಾನಿಸಬಾರದು ಮತ್ತು/ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.

ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತದ ಅನ್ವಯವಾಗುವ ಶಾಸನಗಳಿಗೆ ಅನುಗುಣವಾಗಿ ನಿಯಂತ್ರಿಸಲಾಗಿದೆ ಮತ್ತು ವ್ಯಾಖ್ಯಾನಿಸಲಾಗಿದೆ. ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ವಿವಾದವು ಭಾರತದ ನ್ಯಾಯಾಲಯಗಳ ವಿಶೇಷ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಗೌಪ್ಯತಾ ನೀತಿ

ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸಿದ್ದಕ್ಕಾಗಿ ಧನ್ಯವಾದಗಳು. ಆದಾಯ ತೆರಿಗೆ ಇಲಾಖೆಯು (ಇನ್ನು ಮುಂದೆ "ಇಲಾಖೆ" ಎಂದು ಉಲ್ಲೇಖಿಸಲಾಗಿದೆ] ಹೇಗೆ ಈ ಇ-ಫೈಲಿಂಗ್ ಪೋರ್ಟಲ್ ಮೂಲಕ ನೀವು ಮತ್ತು ಮೂರನೇ ವ್ಯಕ್ತಿಗಳು ಒದಗಿಸಿದ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ (ಇನ್ನು ಮುಂದೆ "ಪೋರ್ಟಲ್" ಎಂದು ಉಲ್ಲೇಖಿಸಲಾಗುತ್ತದೆ] ಎಂಬುದನ್ನು ಅರ್ಥಮಾಡಿಕೊಳ್ಳಲು ದಯವಿಟ್ಟು ಅದನ್ನು ಎಚ್ಚರಿಕೆಯಿಂದ ಓದಿ, ಅವುಗಳಲ್ಲಿ ಕೆಲವು ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಹುದು.

  1. ಇಲಾಖೆಯ ಕಾನೂನುಬದ್ಧ ಕಾರ್ಯಗಳು, ಆಡಳಿತಾತ್ಮಕ ಉದ್ದೇಶಗಳು, ಸಂಶೋಧನೆ ಮತ್ತು ವಿಶ್ಲೇಷಣೆ, ಆಂತರಿಕ ಪ್ರಕ್ರಿಯೆಗೊಳಿಸುವುದು ಅಥವಾ ಇತರ ಕಾನೂನುಬದ್ಧವಾಗಿ ಅಗತ್ಯವಿರುವ ಉದ್ದೇಶಗಳಿಗೆ ಸಮಂಜಸವಾಗಿ ಕಾರ್ಯನಿರ್ವಹಿಸುವ ಮಾಹಿತಿಯ ಸಂಗ್ರಹ, ಅದರ ಬಳಕೆ, ಬಹಿರಂಗಪಡಿಸುವಿಕೆ ಅಥವಾ ಸಂಗ್ರಹಣೆಯನ್ನು ಇಲಾಖೆ ಮಿತಿಗೊಳಿಸುತ್ತದೆ.ವಿನಂತಿಸಿದ ಮಾಹಿತಿಯನ್ನು ಒದಗಿಸುವ ಮೂಲಕ, ಇಲಾಖೆಯಿಂದ ಅಂತಹ ಮಾಹಿತಿಯನ್ನು ಬಳಸಲು ನೀವು ನಿಮ್ಮ ಒಪ್ಪಿಗೆಯನ್ನು ವ್ಯಕ್ತಪಡಿಸುತ್ತೀರಿ.
  2. ಇಂಟರ್ನೆಟ್ ಪ್ರೋಟೋಕಾಲ್ [IP) ವಿಳಾಸಗಳು, ಡೊಮೇನ್ ಹೆಸರುಗಳು, ಬ್ರೌಸರ್ ಪ್ರಕಾರ, ಆಪರೇಟಿಂಗ್ ಸಿಸ್ಟಮ್, ಭೇಟಿಯ ದಿನಾಂಕ ಮತ್ತು/ಅಥವಾ ಸಮಯ, ಭೇಟಿ ಮಾಡಿದ ಪುಟಗಳು ಇತ್ಯಾದಿ ಸೇರಿದಂತೆ ಆದರೆ ಅದಕ್ಕೆ ಮಾತ್ರ ಸೀಮಿತವಾಗಿಲ್ಲದೆ ಬಳಕೆದಾರರ ಬಗ್ಗೆ ಇಲಾಖೆ ಕೆಲವು ಮಾಹಿತಿಗಳನ್ನು ಸಂಗ್ರಹಿಸಬಹುದು. ಕಾನೂನಿನ ಪ್ರಕಾರ ಅಗತ್ಯವಿಲ್ಲದ ಹೊರತು ಅಥವಾ ಕಾನೂನುಬಾಹಿರ, ಅಕ್ರಮ, ಮೋಸ ಅಥವಾ ಇತರ ಅನೈತಿಕ ನಡವಳಿಕೆಗೆ ಅಥವಾ ಯಾವುದೇ ಕಾನೂನು ಜಾರಿ ಉದ್ದೇಶಗಳಿಗಾಗಿ ತನಿಖೆ, ತಡೆಗಟ್ಟುವಿಕೆ, ನಿರ್ವಹಣೆ, ದಾಖಲಿಸುವುದು ಅಥವಾ ಪ್ರತಿಕ್ರಿಯಿಸುವ ಉದ್ದೇಶಗಳಿಗಾಗಿ ಈ ಪೋರ್ಟಲ್‌ಗೆ ಭೇಟಿ ನೀಡುವ ವ್ಯಕ್ತಿಗಳ ಗುರುತಿನೊಂದಿಗೆ ಅಂತಹ ಮಾಹಿತಿಯನ್ನು ಸಂಪರ್ಕಿಸಲು ಇಲಾಖೆಯು ಯಾವುದೇ ಸಕ್ರಿಯ ಪ್ರಯತ್ನಗಳನ್ನು ಮಾಡುವುದಿಲ್ಲ.
  3. ಈ ಪೋರ್ಟಲ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಇಲಾಖೆಯು ಮಾರಾಟ ಮಾಡುವುದಿಲ್ಲ ಅಥವಾ ವ್ಯಾಪಾರ ಮಾಡುವುದಿಲ್ಲ. ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಇಲಾಖೆಯು ನಿಮ್ಮ ಮಾಹಿತಿಯನ್ನು ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ.
  4. ಈ ಪೋರ್ಟಲ್ ಮೂಲಕ ಸಂಗ್ರಹಿಸಲಾದ ಮಾಹಿತಿಯನ್ನು ಇಲಾಖೆ ಇತರ ವಿಷಯಗಳ ನಡುವೆ, ಅದರ ಕಾರ್ಯಗಳನ್ನು ನಿರ್ವಹಿಸುವುದು; ನ್ಯಾಯಾಲಯದ ಆದೇಶಗಳು, ಕಾನೂನು ಕ್ರಮಗಳು ಅಥವಾ ಕಾನೂನು ಜಾರಿಗೊಳಿಸುವಿಕೆಯ ಅವಶ್ಯಕತೆಗಳಿಗೆ ಪ್ರತಿಕ್ರಿಯೆಯಾಗಿ, ಸಾರ್ವಜನಿಕ ಹಿತಾಸಕ್ತಿಗಾಗಿ ಅಥವಾ ಕಾನೂನಿನಿಂದ ಅಗತ್ಯವಿರುವಂತೆ ಬಹಿರಂಗಪಡಿಸಬಹುದು.
  5. ನಷ್ಟ, ದುರುಪಯೋಗ, ಅನಧಿಕೃತ ಪ್ರವೇಶ ಅಥವಾ ಬಹಿರಂಗಪಡಿಸುವಿಕೆ, ಬದಲಾವಣೆ ಅಥವಾ ನಾಶದ ವಿರುದ್ಧ ಈ ಪೋರ್ಟಲ್‌ಗೆ ಒದಗಿಸಲಾದ ಮಾಹಿತಿಯನ್ನು ರಕ್ಷಿಸಲು ಇಲಾಖೆಯು ಸಮಂಜಸವಾದ ಭದ್ರತಾ ಅಭ್ಯಾಸಗಳು ಮತ್ತು ಕ್ರಮಗಳನ್ನು ಜಾರಿಗೊಳಿಸುತ್ತದೆ.
  6. ಲಾಗಿನ್ ಮಾಡಲು ಮತ್ತು ಪ್ರವೇಶಿಸಲು ತಮ್ಮ ರುಜುವಾತುಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಬಳಕೆದಾರರು ಮಾತ್ರ ಜವಾಬ್ದಾರರಾಗಿರುತ್ತಾರೆ. ಒಂದುವೇಳೆ ಬಳಕೆದಾರರು ತಮ್ಮ ರುಜುವಾತುಗಳನ್ನು ಅಥವಾ ಇತರ ವಿವರಗಳನ್ನು ಮೂರನೇ ವ್ಯಕ್ತಿಗಳಿಗೆ ಬಹಿರಂಗಪಡಿಸಿದರೆ, ಆಗ ಉಂಟಾಗುವ ಯಾವುದೇ ನಷ್ಟ, ಹಾನಿಗಳಿಗೆ (ವ್ಯಾಪಾರ ಯೋಜನೆಗಳ ನಷ್ಟ, ಲಾಭದ ನಷ್ಟ ಅಥವಾ ಒಪ್ಪಂದದಲ್ಲಿನ ಯಾವುದೇ ಹಾನಿ, ಅಪಚಾರ ಅಥವಾ ಇನ್ಯಾವುದೇ ಕೃತ್ಯಗಳನ್ನು ಒಳಗೊಂಡಂತೆ ಆದರೆ ಅಷ್ಟಕ್ಕೇ ಮಾತ್ರ ಸೀಮಿತವಾಗಿಲ್ಲದಂತೆ ಇಲಾಖೆಯು ನೇರ, ಪರೋಕ್ಷ ಅಥವಾ ಪರಿಣಾಮವಾಗಿ ಜವಾಬ್ದಾರಿಯಾಗಿರುವುದಿಲ್ಲ) ಅಥವಾ ಪೋರ್ಟಲ್ ಅಥವಾ ಅದರ ಯಾವುದೇ ವಿಷಯಗಳ ಬಳಕೆ ಅಥವಾ ಅಸಮರ್ಥತೆಯಿಂದ ಉಂಟಾಗುವ ಇತರ ಪರಿಣಾಮಗಳು ಅಥವಾ ಯಾವುದೇ ಕ್ರಮ ತೆಗೆದುಕೊಳ್ಳುವುದರಿಂದ ದೂರವಿರುವುದು.
  7. ಈ ಪೋರ್ಟಲ್ ಇತರ ವೆಬ್ಸೈಟ್‌ಗಳಿಗೆ ಲಿಂಕ್‌ಗಳನ್ನು ಒಳಗೊಂಡಿದೆ. ನೀವು ಈ ಪೋರ್ಟಲ್ ಅನ್ನು ತೊರೆದಾಗ, ಇಲಾಖೆಯ ನಿಯಂತ್ರಣದಲ್ಲಿರದ ಹೊರಗಿನ/ಮೂರನೇ ವ್ಯಕ್ತಿಯ ಸೈಟ್‌ಗಳಿಗೆ ನೀವು ಭೇಟಿ ನೀಡುತ್ತೀರಿ. ಅಂತಹ ಇತರ ಸೈಟ್‌ಗಳು ಬಳಕೆದಾರರಿಗೆ ತಮ್ಮದೇ ಆದ ಟೂಲ್‌ಗಳನ್ನು ನಿಯೋಜಿಸಬಹುದು, ಡೇಟಾ ಸಂಗ್ರಹಿಸಬಹುದು ಅಥವಾ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು. ಈ ಪೋರ್ಟಲ್‌ನಲ್ಲಿ ವಿವರಿಸಿದಂತಹ ಗೌಪ್ಯತೆ ನೀತಿಗಳು ಮತ್ತು ಇತರ ನಿಯಮಗಳು ಹಾಗೂ ಷರತ್ತುಗಳು ಯಾವುದೇ ಬಾಹ್ಯ ಲಿಂಕ್‌ಗಳಿಗೆ ವಿಸ್ತರಿಸುವುದಿಲ್ಲ.
  8. ಈ ಗೌಪ್ಯತೆ ನೀತಿಯಡಿಯಲ್ಲಿ ಹೇಳಲಾದ ನಿಯಮಗಳು ಮತ್ತು ಷರತ್ತುಗಳನ್ನು ನಿಯತಕಾಲಿಕವಾಗಿ ಪರಿಷ್ಕರಿಸಬಹುದು ಅಥವಾ ತಿದ್ದುಪಡಿ ಮಾಡಬಹುದು ಜೊತೆಗೆ ಇತ್ತೀಚಿನ ಪರಿಷ್ಕರಣೆಯ ದಿನಾಂಕವನ್ನು ಈ ಪುಟದಲ್ಲಿ ಉಲ್ಲೇಖಿಸಲಾಗುತ್ತದೆ. ಯಾವುದೇ ಬದಲಾವಣೆಗಳ ಅಥವಾ ಪರಿಷ್ಕರಣೆಗಳ ಸಂದರ್ಭದಲ್ಲಿ, ಇದನ್ನು ಈ ಪೋರ್ಟಲ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ, ಇದರಿಂದಾಗಿ ಈ ಗೌಪ್ಯತೆ ನೀತಿಯಲ್ಲಿನ ಇತ್ತೀಚಿನ ತಿದ್ದುಪಡಿಗಳ ಬಗ್ಗೆ ಬಳಕೆದಾರರಿಗೆ ತಿಳಿಸಬಹುದು.

ಕೃತಿಸ್ವಾಮ್ಯ ಪಾಲಿಸಿ

  1. ಈ ಪೋರ್ಟಲ್ ಬಳಕೆಯು ಯಾವುದೇ ಬಳಕೆದಾರರಿಗೆ ಮಾಲೀಕತ್ವ, ಬಡ್ಡಿ ಅಥವಾ ಹಕ್ಕು ಅಥವಾ ಅದರಲ್ಲಿ ಒಳಗೊಂಡಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಅಥವಾ ಅದರ ವಿಷಯವನ್ನು ನೀಡುವುದಿಲ್ಲ.
  2. ಈ ಪೋರ್ಟಲ್‌ನಲ್ಲಿ ವೈಶಿಷ್ಟ್ಯವಾಗಿರುವ ಯಾವುದೇ ವಿಷಯಗಳನ್ನು ಉಚಿತವಾಗಿ ಪುನರುತ್ಪಾದಿಸಬಹುದು, ಅಂತಹ ವಿಷಯಗಳನ್ನು ಅದರ ನೈಜ ಸಂದರ್ಭದಲ್ಲಿ ಮತ್ತು ಅರ್ಥದಲ್ಲಿ ನಿಖರವಾಗಿ ಪುನರುತ್ಪಾದಿಸಬೇಕು, ಹಾಗೂ ಯಾವುದೇ ಅವಹೇಳನಕಾರಿ ಅಥವಾ ದಾರಿತಪ್ಪಿಸುವ ರೀತಿಯಲ್ಲಿ ಬಳಸಬಾರದು. ಅಂತಹ ವಿಷಯಗಳನ್ನು ಇತರರಿಗೆ ಪ್ರಕಟಿಸಲಾಗಿದ್ದರೆ ಅಥವಾ ಹೊರಡಿಸಲಾಗಿದ್ದರೆ, ಮೂಲವನ್ನು ಪ್ರಮುಖವಾಗಿ ಮತ್ತು ಸರಿಯಾಗಿ ಒಪ್ಪಿಕೊಳ್ಳಬೇಕು. ಆದರೂ, ಈ ವಿಷಯಗಳನ್ನು ಪುನರುತ್ಪಾದಿಸುವ ಅನುಮತಿಯು ಮೂರನೇ ವ್ಯಕ್ತಿಯ ಬೌದ್ಧಿಕ ಆಸ್ತಿಯೆಂದು ಗುರುತಿಸಲ್ಪಟ್ಟ ಯಾವುದೇ ವಿಷಯಕ್ಕೆ ವಿಸ್ತರಿಸಲಾಗುವುದಿಲ್ಲ.
  3. ಈ ಪೋರ್ಟಲ್‌ನಲ್ಲಿನ ಕೆಲವು ವೈಶಿಷ್ಟ್ಯಗಳು ಬಳಕೆದಾರರು ಮಾಹಿತಿಯನ್ನು ಅಪ್‌ಲೋಡ್ ಮಾಡುವ, ಸಲ್ಲಿಸುವ, ಸಂಗ್ರಹಿಸುವ, ಕಳುಹಿಸುವ ಅಥವಾ ಸ್ವೀಕರಿಸುವ ಅಗತ್ಯತೆಯನ್ನು ಹೊಂದಿರಬಹುದು. ಅಂತಹ ಬಳಕೆದಾರರಿಂದ ಉತ್ಪತ್ತಿಯಾದ ಮಾಹಿತಿಯ ಯಾವುದೇ ಭಾದ್ಯತೆ ಅಥವಾ ಜವಾಬ್ದಾರಿಯನ್ನು ಇಲಾಖೆಯು ನಿರಾಕರಿಸುತ್ತದೆ.

ಹೈಪರ್‌ಲಿಂಕಿಂಗ್ ಪಾಲಿಸಿ

ಬಾಹ್ಯ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು

ಈ ಪೋರ್ಟಲ್ ಅಂತರ್ಜಾಲದಲ್ಲಿ ಇತರೆ ಸ್ಥಳಗಳು ಅಥವಾ ವೆಬ್‌ಸೈಟ್‌ಗಳಿಗೆ ಹೈಪರ್‌ಲಿಂಕ್‌ಗಳನ್ನು ಒದಗಿಸುತ್ತದೆ. ಆದರೂ, ಬಾಹ್ಯ ವೆಬ್‌ಪೇಜ್‌ಗಳಿಗೆ ಅಂತಹ ಹೈಪರ್‌ಲಿಂಕ್‌ಗಳನ್ನು ಒದಗಿಸುವ ಮೂಲಕ, ಯಾವುದೇ ಮೂರನೇ ವ್ಯಕ್ತಿಗಳು ಅಥವಾ ಅವರು ತಮ್ಮ ವೆಬ್‌ಸೈಟ್‌ಗಳಲ್ಲಿ ಒದಗಿಸುವ ಸೇವೆಗಳು/ ಉತ್ಪನ್ನಗಳನ್ನು ಸಮರ್ಥಿಸಲು, ಶಿಫಾರಸು ಮಾಡಲು, ಅನುಮೋದಿಸಲು, ಖಾತರಿಪಡಿಸಲು ಅಥವಾ ಪರಿಚಯಿಸಲು ಇಲಾಖೆಯು ಪರಿಗಣಿಸುವುದಿಲ್ಲ, ಅಥವಾ ಇಲಾಖೆಯ ಸ್ಪಷ್ಟನೆ ಇಲ್ಲದೆ ಅಂತಹ ಯಾವುದೇ ಮೂರನೇ ವ್ಯಕ್ತಿಗಳು ಮತ್ತು ವೆಬ್‌ಸೈಟ್‌ಗಳೊಂದಿಗೆ ಯಾವುದೇ ರೀತಿಯ ಸಹಕಾರವನ್ನು ಹೊಂದುವುದಿಲ್ಲ. ನೀವು ಬಾಹ್ಯ ವೆಬ್‌ಸೈಟ್‌ಗೆ ಲಿಂಕ್ ಆಯ್ಕೆ ಮಾಡಿದಾಗ, ನೀವು ಈ ಪೋರ್ಟಲ್ ಅನ್ನು ತೊರೆಯುತ್ತೀರಿ ಮತ್ತು ಅಂತಹ ಬಾಹ್ಯ ವೆಬ್‌ಸೈಟ್‌ನ ಗೌಪ್ಯತೆ ಮತ್ತು ಭದ್ರತಾ ನೀತಿಗಳಿಗೆ ಒಳಪಟ್ಟಿರುತ್ತೀರಿ.
ಅಂತಹ ಲಿಂಕ್ ಮಾಡಲಾದ ಪೇಜ್‌ಗಳ ಲಭ್ಯತೆಯನ್ನು ಇಲಾಖೆ ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಲಿಂಕ್ ಮಾಡಿದ ವೆಬ್‌ಸೈಟ್‌ಗಳು ಭಾರತೀಯ ಸರ್ಕಾರಿ ವೆಬ್ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ ಎಂದು ಇಲಾಖೆಯು ಖಾತರಿಪಡಿಸುವುದಿಲ್ಲ.

ಇತರೆ ವೆಬ್‌ಸೈಟ್‌ಗಳಿಂದ ಈ ಪೋರ್ಟಲ್‌ಗೆ ಲಿಂಕ್‌ಗಳು

ಪೂರ್ವಾನುಮತಿ ಇಲ್ಲದೆ ಈ ಪೋರ್ಟಲ್ ಅಥವಾ ಈ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಲಿಂಕ್ ಮಾಡುವುದನ್ನು ಇಲಾಖೆಯು ನಿರ್ಬಂಧಿಸುತ್ತದೆ. ಇದಲ್ಲದೆ, ಈ ಪೋರ್ಟಲ್‌ನ ವೆಬ್‌ಸೈಟ್‌ಗಳು ಇತರೆ ವೆಬ್‌ಸೈಟ್‌ಗಳಲ್ಲಿ ಫ್ರೇಮ್‌ಗಳಲ್ಲಿ ಲೋಡ್ ಮಾಡಲು ಇಲಾಖೆಯು ಅನುಮತಿಸುವುದಿಲ್ಲ. ಇಲಾಖೆಯ ಅನುಮೋದನೆಯ ನಂತರ, ಈ ಪೋರ್ಟಲ್‌ಗೆ ಸೇರಿದ ವೆಬ್‌ಪೇಜ್‌ಗಳನ್ನು ಹೊಸದಾಗಿ ತೆರೆಯಲಾದ ಬ್ರೌಸರ್ ವಿಂಡೋನಲ್ಲಿ ಮಾತ್ರ ಲೋಡ್ ಮಾಡಬಹುದು.

ಮೊಟಕಾದ ಲಿಂಕ್‌ಗಳು

ಪ್ರತಿ ಬಿಡುಗಡೆಗೆ ಮೊದಲು ಅಥವಾ ಹದಿನೈದು ದಿನಗಳಿಗೊಮ್ಮೆ, ಯಾವುದು ಮೊದಲಿನದ್ದೋ ಅದನ್ನು ಯಾವುದೇ ದೋಷಗಳನ್ನು ಗುರುತಿಸಲು ಆನ್‌ಲೈನ್ ಮೊಟಕಾದ ಲಿಂಕ್ ಪರೀಕ್ಷಾ ಉಪಕರಣದ ಮೂಲಕ ಪೋರ್ಟಲ್ ಅನ್ನು ಚಲಾಯಿಸಲು ಇಲಾಖೆಯು ಪ್ರಯತ್ನಿಸುತ್ತದೆ.

ವಿಷಯ ಮಧ್ಯಮತೆ ಮತ್ತು ಅನುಮೋದನಾ ಪಾಲಿಸಿ (CMAP)

ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕಾದ ವಿಷಯದ ಏಕರೂಪತೆಯನ್ನು ಕಾಪಾಡಿಕೊಳ್ಳಲು ಮತ್ತು ಪ್ರಮಾಣೀಕರಣವನ್ನು ತರಲು ವಿಷಯ ವ್ಯವಸ್ಥಾಪಕರು ಸ್ಥಿರವಾದ ಶೈಲಿಯಲ್ಲಿ ಕೊಡುಗೆ ನೀಡುತ್ತಾರೆ. ವೀಕ್ಷಕರ ಅವಶ್ಯಕತೆಗೆ ಅನುಗುಣವಾಗಿ ವಿಷಯವನ್ನು ಪ್ರಸ್ತುತಪಡಿಸಲು, ವಿಷಯವನ್ನು ವರ್ಗೀಕರಣ ಮಾಡಲಾಗಿದೆ ಮತ್ತು ಸಂಬಂಧಿತ ವಿಷಯವನ್ನು ಸಮರ್ಥವಾಗಿ ಹಿಂಪಡೆಯಲು ಈ ವಿಷಯವನ್ನು ವರ್ಗೀಕರಿಸಲಾಗಿದೆ, ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ ಹೊಂದಿರುವ ವೆಬ್ ಆಧಾರಿತ ವಿಷಯ ನಿರ್ವಹಣಾ ವ್ಯವಸ್ಥೆಯ ಮೂಲಕ ವೆಬ್‌ಸೈಟ್‌ಗೆ ವಿಷಯವನ್ನು ಕೊಡುಗೆ ನೀಡಲಾಗಿದೆ.

ವಿಷಯವನ್ನು ನೀಡಿದ ನಂತರ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮುನ್ನ ಅದನ್ನು ಅನುಮೋದಿಸಲಾಗುತ್ತದೆ ಮತ್ತು ಉತ್ತಮಗೊಳಿಸಲಾಗುತ್ತದೆ. ಉತ್ತಮಗೊಳಿಸುವಿಕೆಯು ಬಹುಮೂಲವಾಗಿರಬಹುದು ಮತ್ತು ಇದು ಪಾತ್ರ ಆಧಾರಿತವಾಗಿದೆ. ವಿಷಯವನ್ನು ಯಾವುದೇ ಸ್ತರದಲ್ಲಿ ತಿರಸ್ಕರಿಸಿದರೆ ಅದನ್ನು ಮಾರ್ಪಾಡಿಸುವಿಕೆಗಾಗಿ ವಿಷಯದ ಮೂಲಕತೃವಿಗೆ ಹಿಂತಿರುಗಿಸಲಾಗುತ್ತದೆ.

 

S.No ವಿಷಯದ ಅಂಶ ಮಿತಿಕಾರಕ ಅನುಮೋದಕ ಕೊಡುಗೆದಾರ
1 ಸುದ್ದಿ ಮತ್ತು ಅಪ್ಡೇಟ್‌ಗಳು ವೆಬ್ ಮಾಹಿತಿ ವ್ಯವಸ್ಥಾಪಕ ITD ವಿಷಯ ವ್ಯವಸ್ಥಾಪಕ
2 ರಿಪೋರ್ಟ್‌ಗಳು ವೆಬ್ ಮಾಹಿತಿ ವ್ಯವಸ್ಥಾಪಕ ITD ವಿಷಯ ವ್ಯವಸ್ಥಾಪಕ
3 ಸಂಪರ್ಕ ವಿವರಗಳು ವೆಬ್ ಮಾಹಿತಿ ವ್ಯವಸ್ಥಾಪಕ ITD ವಿಷಯ ವ್ಯವಸ್ಥಾಪಕ
4 ಬಳಕೆದಾರರ ಕೈಪಿಡಿಗಳು ವೆಬ್ ಮಾಹಿತಿ ವ್ಯವಸ್ಥಾಪಕ ITD ವಿಷಯ ವ್ಯವಸ್ಥಾಪಕ
5 ನಮ್ಮ ಬಗ್ಗೆ ವೆಬ್ ಮಾಹಿತಿ ವ್ಯವಸ್ಥಾಪಕ ITD ವಿಷಯ ವ್ಯವಸ್ಥಾಪಕ

ವಿಷಯ ಪರಾಮರ್ಶೆ ಪಾಲಿಸಿ (CRP)

ಈ ಪೋರ್ಟಲ್‌ನಲ್ಲಿ ವಿಷಯವನ್ನು ನವೀಕೃತವಾಗಿಡಲು ಇಲಾಖೆಯು ಪ್ರಯತ್ನಿಸುತ್ತದೆ. ಈ ವಿಷಯ ವಿಮರ್ಶೆ ನೀತಿಯು ವೆಬ್‌ಸೈಟ್ ವಿಷಯ ವಿಮರ್ಶೆಯ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಹಾಗೂ ಅದನ್ನು ನಿರ್ವಹಿಸಬೇಕಾದ ವಿಧಾನವನ್ನು ವ್ಯಾಖ್ಯಾನಿಸುತ್ತದೆ. ಈ ಕೆಳಗಿನ ಮ್ಯಾಟ್ರಿಕ್ಸ್ ವಿಷಯವು, ಅಂಶ ಪ್ರಕಾರವನ್ನು ಆಧರಿಸಿ ವಿಷಯ ವಿಮರ್ಶೆಯನ್ನು ನೀಡುತ್ತದೆ.

 

S.No ವಿಷಯದ ಅಂಶ ವಿಮರ್ಶೆಯ ಆವರ್ತನ ಅನುಮೋದಕ
1 ಸುದ್ದಿ ಮತ್ತು ಅಪ್ಡೇಟ್‌ಗಳು ಒಂದು ಘಟನೆಯ ಸಂದರ್ಭದಲ್ಲಿ ತಕ್ಷಣ ವಿಷಯ ವ್ಯವಸ್ಥಾಪಕ
2 ರಿಪೋರ್ಟ್‌ಗಳು ಮಾಸಿಕ ವಿಷಯ ವ್ಯವಸ್ಥಾಪಕ
3 ಸಂಪರ್ಕ ವಿವರಗಳು ಒಂದು ಘಟನೆಯ ಸಂದರ್ಭದಲ್ಲಿ ತಕ್ಷಣ ವಿಷಯ ವ್ಯವಸ್ಥಾಪಕ
4 ಬಳಕೆದಾರರ ಕೈಪಿಡಿಗಳು ಒಂದು ಘಟನೆಯ ಸಂದರ್ಭದಲ್ಲಿ ತಕ್ಷಣ ವಿಷಯ ವ್ಯವಸ್ಥಾಪಕ
5 ನಮ್ಮ ಬಗ್ಗೆ ಒಂದು ಘಟನೆಯ ಸಂದರ್ಭದಲ್ಲಿ ತಕ್ಷಣ ವಿಷಯ ವ್ಯವಸ್ಥಾಪಕ

ವಿಷಯ ಆರ್ಕೈವಲ್ ಪಾಲಿಸಿ (CAP)

ವಿಷಯ ಘಟಕಗಳನ್ನು ಮೆಟಾಡೇಟಾ, ಮೂಲ ಮತ್ತು ಸಿಂಧುತ್ವ ದಿನಾಂಕದೊಂದಿಗೆ ರಚಿಸಲಾಗಿದೆ. ರಚನೆಯ ಸಮಯದಲ್ಲಿ ಕೆಲವು ಘಟಕಗಳ ಸಿಂಧುತ್ವವು ತಿಳಿದಿರುವುದಿಲ್ಲ. ಅಂತಹ ವಿಷಯವನ್ನು ಶಾಶ್ವತವೆಂದು ಪರಿಗಣಿಸಲಾಗುತ್ತದೆ ಮತ್ತು ಸಿಂಧುತ್ವ ದಿನಾಂಕವು ರಚನೆಯ ದಿನಾಂಕದಿಂದ ಹತ್ತು ವರ್ಷಗಳಾಗಿರುತ್ತದೆ. ಆದಾಯ ತೆರಿಗೆ ಇಲಾಖೆಯಿಂದ ವಿನಂತಿಯನ್ನು ಸಲ್ಲಿಸದ ಹೊರತು ಸಿಂಧುತ್ವ ದಿನಾಂಕದ ನಂತರ ಈ ಪೋರ್ಟಲ್‌ನಲ್ಲಿ ವಿಷಯವನ್ನು ಪ್ರದರ್ಶಿಸಲಾಗುವುದಿಲ್ಲ.

 

S.No ವಿಷಯದ ಅಂಶ ಪ್ರವೇಶ ನೀತಿ ಆರ್ಕೈವಲ್ ನೀತಿ ನಿರ್ಗಮನ ನೀತಿ
1 ಸುದ್ದಿ ಮತ್ತು ಅಪ್ಡೇಟ್‌ಗಳು ಒಂದು ಘಟನೆಯ ಸಂದರ್ಭದಲ್ಲಿ ತಕ್ಷಣ ಇತ್ತೀಚಿನ 2 ಅಥವಾ 3 ಸುದ್ದಿ ಮತ್ತು ಅಪ್‌ಡೇಟ್‌ಗಳನ್ನು ಮಾತ್ರ ಮುಖ್ಯ ವೆಬ್‌ಪೇಜ್‌ನಲ್ಲಿ ಪ್ರದರ್ಶಿಸಲಾಗುತ್ತದೆ.
ಉಳಿದವುಗಳನ್ನು ಪ್ರಕಟಣೆಯ ವರ್ಷದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ ಮತ್ತು ಸಾರ್ವಜನಿಕ ವೀಕ್ಷಣೆಗಾಗಿ ಆರ್ಕೈವ್ ಮಾಡಲಾಗುತ್ತದೆ.
ಪ್ರಕಟಣೆಯ ತಿಂಗಳಿನಿಂದ 10 ವರ್ಷಗಳವರೆಗೆ ಪ್ರದರ್ಶಿಸಲಾಗುತ್ತದೆ.
2 ರಿಪೋರ್ಟ್‌ಗಳು ಮಾಸಿಕ ಆರ್ಕೈವ್ ಮಾಡಿದ ವರದಿಗಳು, ಇತ್ತೀಚಿನ ಮಾಸಿಕ ವರದಿಯನ್ನು ಪ್ರದರ್ಶಿಸಲಾಗಿದೆ ಪ್ರಕಟಣೆಯ ತಿಂಗಳಿನಿಂದ 10 ವರ್ಷಗಳವರೆಗೆ ಪ್ರದರ್ಶಿಸಲಾಗುತ್ತದೆ.
3 ಸಂಪರ್ಕ ವಿವರಗಳು ಒಂದು ಘಟನೆಯ ಸಂದರ್ಭದಲ್ಲಿ ತಕ್ಷಣ ಅಗತ್ಯವಿಲ್ಲ ಅಗತ್ಯವಿಲ್ಲ
4 ಬಳಕೆದಾರರ ಕೈಪಿಡಿಗಳು ಒಂದು ಘಟನೆಯ ಸಂದರ್ಭದಲ್ಲಿ ತಕ್ಷಣ ಅಗತ್ಯವಿಲ್ಲ ಪ್ರಕ್ರಿಯೆಯಲ್ಲಿನ ಬದಲಾವಣೆಯಿಂದ ಹಳೆಯ ಕೈಪಿಡಿಯಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ.
5 ನಮ್ಮ ಬಗ್ಗೆ ಒಂದು ಘಟನೆಯ ಸಂದರ್ಭದಲ್ಲಿ ತಕ್ಷಣ ಅಗತ್ಯವಿಲ್ಲ ಪ್ರಕ್ರಿಯೆಯಲ್ಲಿನ ಬದಲಾವಣೆಯಿಂದ ಹಳೆಯ ವಿಷಯದಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ.

ಹಕ್ಕು ನಿರಾಕರಣೆಗಳು

ಈ ಪೋರ್ಟಲ್‌ನಲ್ಲಿರುವ ಸಾಮಗ್ರಿಯು ಸಾಮಾನ್ಯ ಮಾಹಿತಿಗಾಗಿ ಇದೆ. ಇದರಲ್ಲಿ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಕಾನೂನು ಸಲಹೆ ನೀಡುವ ಉದ್ದೇಶವಿಲ್ಲ. ಈ ಪೋರ್ಟಲ್‌ನ ವಿಷಯಗಳು ಕ್ರಿಯಾತ್ಮಕ ಸ್ವರೂಪದಲ್ಲಿರುವುದರಿಂದ, ಬಳಕೆದಾರರಿಗೆ ತಮ್ಮ ಸ್ವಂತ ಆಸಕ್ತಿಯಿಂದ, ಯಾವುದೇ ಅಂತಿಮ ತೀರ್ಮಾನಕ್ಕೆ ಬರುವ ಮೊದಲು ಆದಾಯ ತೆರಿಗೆ ಕಾಯ್ದೆ, 1961, ಮತ್ತು ಆದಾಯ ತೆರಿಗೆ ನಿಯಮಗಳು, 1962 ಅನ್ನು ಒಳಗೊಂಡಂತೆ ಆದರೆ ಅವುಗಳಿಗೆ ಸೀಮಿತವಾಗಿರದ ಸಂಬಂಧಿತ ಸರ್ಕಾರಿ ಪ್ರಕಟಣೆಗಳನ್ನು ಉಲ್ಲೇಖಿಸುವಂತೆ ಸೂಚಿಸಲಾಗುತ್ತದೆ.