ವ್ಯಕ್ತಿಗಳ ಸಂಘ (AOP) / ವ್ಯಕ್ತಿಗಳ ಸಮೂಹ (BOI) / ಟ್ರಸ್ಟ್ / ಕೃತಕ ನ್ಯಾಯಾಂಗ ವ್ಯಕ್ತಿ (AJP) ಗಳಿಗೆ ಅನ್ವಯಿಸುವ ಆದಾಯ ತೆರಿಗೆ ರಿಟರ್ನ್‌ಗಳು ಮತ್ತು ಫಾರ್ಮ್‌ಗಳು – ಮೌಲ್ಯಮಾಪನ ವರ್ಷ 2026-27
ಘೋಷಣೆ: ಈ ಪುಟದಲ್ಲಿರುವ ವಿಷಯವು ಕೇವಲ ಸಾಮಾನ್ಯ ತಿಳುವಳಿಕೆ / ಮಾರ್ಗದರ್ಶನ ನೀಡುವ ಉದ್ದೇಶದಿಂದ ಮಾತ್ರವಾಗಿದ್ದು, ಸಂಪೂರ್ಣ ವಿವರಗಳನ್ನು ಒಳಗೊಂಡಿಲ್ಲ. ಸಂಪೂರ್ಣ ಮಾಹಿತಿಗಾಗಿ ಮತ್ತು ಮಾರ್ಗಸೂಚಿಗಳಿಗಾಗಿ ದಯವಿಟ್ಟು ಆದಾಯ ತೆರಿಗೆ ಕಾಯ್ದೆ, 1961 ರ ನಿಯಮಗಳು ಹಾಗೂ ಅಧಿಸೂಚನೆಗಳನ್ನು ನೋಡಿ.
ವ್ಯಕ್ತಿಗಳ ಸಂಘ (AOP) ಅಥವಾ ವ್ಯಕ್ತಿಗಳ ಸಮೂಹ (BOI), ಅದು ಸಂಯೋಜಿತವಾಗಿರಲಿ ಅಥವಾ ಇಲ್ಲದಿರಲಿ, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 2(31) ಅಡಿಯಲ್ಲಿ “ವ್ಯಕ್ತಿ (Person)” ಎಂದು ಪರಿಗಣಿಸಲಾಗುತ್ತದೆ. AOP ಅಥವಾ BOI ಅನ್ನು ಆದಾಯ, ಲಾಭ ಅಥವಾ ಲಾಭಾಂಶಗಳನ್ನು ಗಳಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿದೆಯೇ ಇಲ್ಲವೇ ಎಂಬುದನ್ನು ಪರಿಗಣಿಸದೆ, ಅದನ್ನು “ವ್ಯಕ್ತಿ” ಎಂದು ಗಣನೆ ಮಾಡಲಾಗುತ್ತದೆ ಎಂಬುದು ಗಮನಾರ್ಹವಾಗಿದೆ.
ಪೂರ್ಣವಾಗಿ ಧಾರ್ಮಿಕ ಅಥವಾ ದಾನಧರ್ಮ ಉದ್ದೇಶಗಳಿಗಾಗಿ ಸ್ಥಾಪಿಸಲಾದ ಟ್ರಸ್ಟ್‌ಗಳಿಗೆ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ವಿವಿಧ ಸೌಲಭ್ಯಗಳು ಲಭ್ಯವಿದ್ದು, ಅವುಗಳಲ್ಲಿ ಸೆಕ್ಷನ್ 11 ಅಡಿಯಲ್ಲಿ ತೆರಿಗೆ ವಿನಾಯಿತಿಯೂ ಸೇರಿದೆ.
ಕೃತಕ ನ್ಯಾಯಾಂಗ ವ್ಯಕ್ತಿ - ಒಬ್ಬ ತೆರಿಗೆದಾರ “ವ್ಯಕ್ತಿ” ಎಂಬ ವ್ಯಾಖ್ಯಾನದಲ್ಲಿ ಒಳಗೊಂಡಿರುವ ಇತರ ಯಾವುದೇ ವರ್ಗಗಳಿಗೆ ಸೇರದಿದ್ದರೆ, ಅದನ್ನು ಕೃತಕ ನ್ಯಾಯಾಂಗ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಈ ಅಸ್ತಿತ್ವಗಳು ಸಹಜ ವ್ಯಕ್ತಿಗಳಲ್ಲ ಆದರೆ ಕಾನೂನಿನ ಪ್ರಕಾರ ಪ್ರತ್ಯೇಕ ಅಸ್ತಿತ್ವಗಳಾಗಿವೆ.
|
ಈ ಫಾರ್ಮ್ ಅನ್ನು ಬಳಸಬಹುದಾದ ವ್ಯಕ್ತಿಯೆಂದರೆ:
|
ಗಮನಿಸಿ: ಆದಾಯ ತೆರಿಗೆ ಕಾಯ್ದೆ 1961ರ, ಸೆಕ್ಷನ್ 139(4A) or 139(4B) or 139(4D) ಅಡಿಯಲ್ಲಿ ರಿಟರ್ನ್ ಸಲ್ಲಿಸಬೇಕಾದ ವ್ಯಕ್ತಿಯು ಈ ಫ಼ಾರ್ಮ್ ಬಳಸುವಂತಿಲ್ಲ
|
ಆದಾಯ ತೆರಿಗೆ ಕಾಯ್ದೆ 1961ರ, ಸೆಕ್ಷನ್ 139(4A) or 139(4B) or 139(4D) ಅಡಿಯಲ್ಲಿ ರಿಟರ್ನ್ ಸಲ್ಲಿಸಬೇಕಾದ ವ್ಯಕ್ತಿ, ಹಾಗೂ ಕಂಪನಿಗಳಿಗೆ ಈ ಫ಼ಾರ್ಮ್ ಅನ್ವಯಿಸುತ್ತದೆ.
|
ಗಮನಿಸಿ: ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 10 ರ ವಿವಿಧ ಉಪವಿಧಿಗಳ ಅಡಿಯಲ್ಲಿ ಷರತ್ತಿಲ್ಲದೆ ತೆರಿಗೆ ವಿನಾಯಿತಿ ಹೊಂದಿರುವ ಹಾಗೂ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139 ರ ನಿಯಮಗಳ ಪ್ರಕಾರ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯವಲ್ಲದ ವರ್ಗದ ವ್ಯಕ್ತಿಗಳು ಈ ಫಾರ್ಮ್ ಅನ್ನು ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಬಳಸಬಹುದು (ಉದಾಹರಣೆಗೆ – ಸ್ಥಳೀಯ ಪ್ರಾಧಿಕಾರ).
ಆದಾಯ ತೆರಿಗೆ ಕಾಯ್ದೆ, 1961ರ ಪ್ರಕಾರ ಅನ್ವಯಿಸುವ ಫಾರ್ಮ್‌ಗಳು
|
ಗಮನಿಸಿ: ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 194IA, 194IB ಮತ್ತು 194M ಅಡಿಯಲ್ಲಿ ಮುಂಗಡ ತೆರಿಗೆ/ಸ್ವಯಂ ಮೌಲ್ಯಮಾಪನ ತೆರಿಗೆ (Advance Tax/SAT), ಮರುಪಾವತಿ ವಿವರಗಳು, SFT ವಹಿವಾಟುಗಳು ಹಾಗೂ TDS ಪೂರ್ವನಿಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಳು, ಈ ಹಿಂದೆ 26AS ನಲ್ಲಿ ಲಭ್ಯವಿದ್ದವು. ಈಗ ಈ ಮಾಹಿತಿಗಳು AIS (ವಾರ್ಷಿಕ ಮಾಹಿತಿ ಹೇಳಿಕೆ) ನಲ್ಲಿ ಲಭ್ಯವಿವೆ.
|
|
ಸಲ್ಲಿಸಿದವರು |
ಫಾರ್ಮ್‌ನಲ್ಲಿ ಕೊಟ್ಟಿರುವ ವಿವರಗಳು |
|
ಆದಾಯ ತೆರಿಗೆ ಕಾಯಿದೆ, 1961 ರ 44AB ಸೆಕ್ಷನ್ ಅಡಿಯಲ್ಲಿ ಅಕೌಂಟೆಂಟ್ ಮೂಲಕ ತನ್ನ ಖಾತೆಗಳನ್ನು ಆಡಿಟ್ ಮಾಡಿಸಬೇಕಾದ ತೆರಿಗೆದಾರರು. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139 ರ ಸಬ್ ಸೆಕ್ಷನ್ (1) ಅಡಿಯಲ್ಲಿ ಆದಾಯ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿ ಸಲ್ಲಿಸಬೇಕು. |
ಆದಾಯ ತೆರಿಗೆ ಕಾಯಿದೆ, 1961 ರ 44AB ಸೆಕ್ಷನ್ ಅಡಿಯಲ್ಲಿ ಒದಗಿಸಬೇಕಾದ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯ ವರದಿ ಮತ್ತು ವಿವರಗಳ ಹೇಳಿಕೆ. |
|
|
ಘೋಷಿಸುವವರು |
ಫ಼ಾರ್ಮ್ 10-IEA |
|
ತೆರಿಗೆದಾರರಿಂದ ಇಲಾಖೆಗೆ |
ಹೊಸ ತೆರಿಗೆ ಪದ್ದತಿಯನ್ನು FY 2023-24ರಿಂದ ಪೂರ್ವನಿಯೋಜಿತ ಪದ್ದತಿಯನ್ನಾಗಿ ಮಾಡಿರುವುದರಿಂದ, ಹಳೆಯ ಪದ್ಧತಿ ಅಡಿಯಲ್ಲಿ ತೆರಿಗೆಗಳನ್ನು ಪಾವತಿಸಲು ಆಯ್ಕೆ ಮಾಡಲು ಬಯಸುವ ತೆರಿಗೆದಾರರು ಫಾರ್ಮ್ 10-IEA ಅನ್ನು ಸಲ್ಲಿಸಬೇಕಾಗುತ್ತದೆ. ವ್ಯವಹಾರ ಅಥವಾ ವೃತ್ತಿಯಿಂದ ಆದಾಯ ಹೊಂದಿರುವ ತೆರಿಗೆದಾರರು ಈ ಫಾರ್ಮ್ ಅನ್ನು ಸಲ್ಲಿಸಬೇಕು. ಫಾರ್ಮ್ 10-IFA ಹಣಕಾಸು ಕಾಯಿದೆ, 2023 ಸರಕು ಅಥವಾ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವ ನಿವಾಸಿ ಸಹಕಾರಿ ಸಂಘಗಳಿಗೆ ಸೆಕ್ಷನ್ 115BAE ಅಡಿಯಲ್ಲಿ ಹೊಸ ತೆರಿಗೆ ಯೋಜನೆಯನ್ನು ಪರಿಚಯಿಸಿತು. ಸಹಕಾರಿ ಸಂಘವು ಈ ಯೋಜನೆಯನ್ನು ಆರಿಸಿದರೆ, ಆದಾಯವು ರಿಯಾಯಿತಿ ದರದಲ್ಲಿ ತೆರಿಗೆಗೆ ಒಳಪಡುತ್ತದೆ. ನಿವಾಸಿ ಸಹಕಾರ ಸಂಘವು, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 115BAE(5) ಅಡಿಯಲ್ಲಿ ಲಭ್ಯವಿರುವ ಆಯ್ಕೆಯನ್ನು ಫ಼ಾರ್ಮ್ 10-IFA ಅನ್ನು ಸಲ್ಲಿಸುವ ಮೂಲಕ ಬಳಸಿಕೊಳ್ಳಬಹುದು. |
|
ಸಲ್ಲಿಸಿದವರು |
ಫಾರ್ಮ್‌ನಲ್ಲಿ ಕೊಟ್ಟಿರುವ ವಿವರಗಳು |
|
ದತ್ತಿ ಅಥವಾ ಧಾರ್ಮಿಕ ಟ್ರಸ್ಟ್ ಅಥವಾ ಸಂಸ್ಥೆ ಅಥವಾ ಸಂಘ |
ನಿರ್ದಿಷ್ಟ ಉದ್ದೇಶಕ್ಕಾಗಿ ದತ್ತಿ ಅಥವಾ ಧಾರ್ಮಿಕ ಟ್ರಸ್ಟ್ ಅಥವಾ ಸಂಸ್ಥೆ ಅಥವಾ ಸಂಘದಿಂದ ಆದಾಯವನ್ನು ಒಟ್ಟುಗೂಡಿಸಲು ಅಥವಾ ಬೇರ್ಪಡಿಸಲು ಒದಗಿಸಲಾದ ಹೇಳಿಕೆ. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139(1) ಅಡಿಯಲ್ಲಿ ನಿಗದಿಪಡಿಸಲಾದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಅಂತಿಮ ದಿನಾಂಕಕ್ಕಿಂತ ಕನಿಷ್ಠ ಎರಡು ತಿಂಗಳುಗಳ ಮುಂಚಿತವಾಗಿ ಇದನ್ನು ಸಲ್ಲಿಸಬೇಕು. |
|
ಸಲ್ಲಿಸಿದವರು |
ಫಾರ್ಮ್‌ನಲ್ಲಿ ಕೊಟ್ಟಿರುವ ವಿವರಗಳು |
|
ದತ್ತಿ ಅಥವಾ ಧಾರ್ಮಿಕ ಟ್ರಸ್ಟ್ ಅಥವಾ ಸಂಸ್ಥೆ ಅಥವಾ ಸಂಘ ಅಥವಾ ಕಂಪನಿ |
ಧಾರ್ಮಿಕ ಅಥವಾ ದಾನಧರ್ಮ ಟ್ರಸ್ಟ್, ಸಂಸ್ಥೆ ಅಥವಾ ಸಂಘದ ನೋಂದಣಿ ಅಥವಾ ತಾತ್ಕಾಲಿಕ ನೋಂದಣಿ, ಮಾಹಿತಿ ನೀಡಿಕೆ (Intimation), ಅನುಮೋದನೆ ಅಥವಾ ತಾತ್ಕಾಲಿಕ ಅನುಮೋದನೆಗಾಗಿ ಅರ್ಜಿ. |
|
ಸಲ್ಲಿಸಿದವರು |
ಫಾರ್ಮ್ ನಲ್ಲಿ ಕೊಟ್ಟಿರುವ ವಿವರಗಳು |
|
ದತ್ತಿ ಅಥವಾ ಧಾರ್ಮಿಕ ಟ್ರಸ್ಟ್ |
ನಿರ್ದಿಷ್ಟ ಆರ್ಥಿಕ ವರ್ಷಕ್ಕಾಗಿ ಸ್ವೀಕರಿಸಿದ ದೇಣಿಗೆಯ ವಿವರಗಳ ಹೇಳಿಕೆಯನ್ನು ದೇಣಿಗೆಯನ್ನು ಸ್ವೀಕರಿಸಿದ ಆರ್ಥಿಕ ವರ್ಷವನ್ನು ಅನುಸರಿಸಿ ಆರ್ಥಿಕ ವರ್ಷದ ಮೇ 31 ರಂದು ಅಥವಾ ಮೊದಲು ಸಲ್ಲಿಸಬೇಕು |
|
ಸಲ್ಲಿಸಿದವರು |
ಫಾರ್ಮ್‌ನಲ್ಲಿ ಕೊಟ್ಟಿರುವ ವಿವರಗಳು |
|
ದತ್ತಿ ಅಥವಾ ಧಾರ್ಮಿಕ ಟ್ರಸ್ಟ್ |
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 11(1) ರ ವಿವರಣೆಯ ಉಪವಿಧಿ (2) ಅಡಿಯಲ್ಲಿ ಲಭ್ಯವಿರುವ ಆಯ್ಕೆಯನ್ನು ಬಳಸಿಕೊಳ್ಳಲು ಸಲ್ಲಿಸಬೇಕಾದ ಅರ್ಜಿ. ಟ್ರಸ್ಟ್ ಅಥವಾ ಸಂಸ್ಥೆಯ ಆದಾಯದ ಕನಿಷ್ಠ 85% ಅನ್ನು ಬಳಸಲು ಸಾಧ್ಯವಾಗದಿದ್ದಲ್ಲಿ, ಅಂದರೆ ಆದಾಯವು ಬಾರದ ಕಾರಣದಿಂದ ಅಥವಾ ಇತರ ಕಾರಣಗಳಿಂದ 85% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗಿದ್ದಲ್ಲಿ, ಈ ಅರ್ಜಿಯನ್ನು ಸಲ್ಲಿಸಬಹುದು. ಆದಾಯವು ಬಾರದ ಕಾರಣವಾದರೆ, ಅದು ಯಾವ ವರ್ಷದಲ್ಲಿ ಬರುತ್ತದೆಯೋ ಅದರ ಹಿಂದಿನ ವರ್ಷಕ್ಕೆ ಬಳಕೆಯನ್ನು ಅನ್ವಯಿಸಬಹುದು. ಇತರ ಕಾರಣವಾದರೆ, ಹಿಂದಿನ ವರ್ಷದ ಮರುವರ್ಷಕ್ಕೆ ಅದನ್ನು ಬಳಸಬಹುದು. ಸಂಬಂಧಿತ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139(1) ಅಡಿಯಲ್ಲಿ ನಿಗದಿಪಡಿಸಲಾದ ಅವಧಿ ಮುಕ್ತಾಯಗೊಳ್ಳುವ ಮೊದಲು ಈ ಫಾರ್ಮ್ ಅನ್ನು ಸಲ್ಲಿಸಬೇಕು. |
|
ಒದಗಿಸಿದವರು |
ಫಾರ್ಮ್ ನಲ್ಲಿ ಕೊಟ್ಟಿರುವ ವಿವರಗಳು |
|
ತೆರಿಗೆ ಕಡಿತ ಮಾಡುವವರಿಂದ ತೆರಿಗೆ ಕಡಿತಕ್ಕೆ ಒಳಪಡುವವರಿಗೆ |
ಫಾರ್ಮ್ 16A ತ್ರೈಮಾಸಿಕದಲ್ಲಿ ನೀಡಲಾದ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (TDS) ಪ್ರಮಾಣಪತ್ರವಾಗಿದ್ದು, ಇದು TDS, ಪಾವತಿಗಳ ಸ್ವರೂಪ ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿ ಠೇವಣಿ ಮಾಡಿದ TDS ಪಾವತಿಗಳ ಮಾಹಿತಿಯನ್ನು ಹೊಂದಿದೆ. |
ಮೌಲ್ಯಮಾಪನ ವರ್ಷ 2026-27ಕ್ಕೆ ತೆರಿಗೆ ಸ್ಲ್ಯಾಬ್‌ಗಳು
ಹೊಸ ತೆರಿಗೆ ಪದ್ದತಿ ಹೋಲಿಕೆ ಹೊಸ ತೆರಿಗೆ ಪದ್ದತಿ
AOP / BOI / AJP ಗಳ ತೆರಿಗೆ ದರಗಳನ್ನು ಈ ಕೆಳಗೆ ನೀಡಲಾಗಿದೆ, ಆದಾಗ್ಯೂ ಅವುಗಳು ನಂತರ ವಿವರಿಸಿದ ಮುಂದಿನ ಷರತ್ತುಗಳಿಗೆ ಒಳಪಟ್ಟಿರುತ್ತವೆ.
ಗಮನಿಸಿ: ಸಂಬಂಧಿತ ಆದಾಯ ತೆರಿಗೆ ನಿಯಮಗಳ ಪ್ರಕಾರ ತೆರಿಗೆ ವಿನಾಯಿತಿಗೆ ಅರ್ಹವಾಗಿರದ ಹಾಗೂ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಅಗತ್ಯ ಅನುಮೋದನೆಗಳು / ನೋಂದಣಿಗಳನ್ನು ಪಡೆಯಬೇಕಾದ ಟ್ರಸ್ಟ್‌ಗಳನ್ನು, ತೆರಿಗೆ ಮೌಲ್ಯಮಾಪನದ ಉದ್ದೇಶಕ್ಕಾಗಿ AOP (ವ್ಯಕ್ತಿಗಳ ಸಂಘ) ಎಂದು ಪರಿಗಣಿಸಲಾಗುತ್ತದೆ.
ಹಣಕಾಸು ಕಾಯಿದೆ, 2023 ರ ಮೂಲಕ, ಮೌಲ್ಯಮಾಪನ ವರ್ಷ 2024–25 ರಿಂದ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 115BAC ರ ವಿಧಿಗಳನ್ನು ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ, ವ್ಯಕ್ತಿ (Individual), ಹಿಂದೂ ಅವಿಭಜಿತ ಕುಟುಂಬ (HUF), ವ್ಯಕ್ತಿಗಳ ಸಂಘ (AOP) (ಸಹಕಾರ ಸಂಘಗಳನ್ನು ಹೊರತುಪಡಿಸಿ), ವ್ಯಕ್ತಿಗಳ ಸಮೂಹ (BOI) ಅಥವಾ ಕೃತಕ ನ್ಯಾಯಿಕ ವ್ಯಕ್ತಿ ಇವರಿಗೆ ಹೊಸ ತೆರಿಗೆ ಪದ್ಧತಿಯನ್ನು ಪೂರ್ವ ನಿಯೋಜಿತ (Default) ತೆರಿಗೆ ಪದ್ಧತಿಯಾಗಿ ಮಾಡಲಾಗಿದೆ. ಆದಾಗ್ಯೂ, ಅರ್ಹ ತೆರಿಗೆದಾರರಿಗೆ ಹೊಸ ತೆರಿಗೆ ಪದ್ಧತಿಯಿಂದ ಹೊರಬಂದು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆಮಾಡುವ ಅವಕಾಶ ಇದೆ. ಹಳೆಯ ತೆರಿಗೆ ಪದ್ಧತಿ ಎಂದರೆ, ಹೊಸ ತೆರಿಗೆ ಪದ್ಧತಿ ಜಾರಿಗೆ ಬರುವ ಮೊದಲು ಇದ್ದ ಆದಾಯ ತೆರಿಗೆ ಲೆಕ್ಕಾಚಾರ ಮತ್ತು ತೆರಿಗೆ ಶ್ರೇಣಿಗಳ ವ್ಯವಸ್ಥೆ. ಈ ಪದ್ಧತಿಯಲ್ಲಿ ತೆರಿಗೆದಾರರು ವಿವಿಧ ತೆರಿಗೆ ಕಡಿತಗಳು ಮತ್ತು ವಿನಾಯಿತಿಗಳನ್ನು ಪಡೆಯುವ ಆಯ್ಕೆ ಇದೆ.
ವ್ಯವಹಾರವಲ್ಲದ ಪ್ರಕರಣಗಳು:
"ವ್ಯವಹಾರೇತರ ಪ್ರಕರಣಗಳಲ್ಲಿಗಳಲ್ಲಿ", ತೆರಿಗೆ ಪದ್ಧತಿಯನ್ನು ಆಯ್ಕೆಮಾಡುವ ಅವಕಾಶವನ್ನು ಪ್ರತಿ ವರ್ಷ ನೇರವಾಗಿ ಆದಾಯ ತೆರಿಗೆ ರಿಟರ್ನ್ (ITR) ನಲ್ಲಿ ಬಳಸಬಹುದಾಗಿದ್ದು, ಸೆಕ್ಷನ್ 139(1) ಅಡಿಯಲ್ಲಿ ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಅಥವಾ ಅದಕ್ಕೂ ಮೊದಲು ಸಲ್ಲಿಸಬೇಕು.
ವ್ಯವಹಾರ ಪ್ರಕರಣಗಳು:
ಅರ್ಹ ತೆರಿಗೆದಾರರು ವ್ಯವಹಾರ ಮತ್ತು ವೃತ್ತಿಯಿಂದ ಆದಾಯವನ್ನು ಹೊಂದಿದ್ದರೆ ಮತ್ತು ಹೊಸ ತೆರಿಗೆ ಪದ್ದತಿಯಿಂದ ಹೊರಗುಳಿಯಲು ಬಯಸಿದರೆ, ಆದಾಯದ ರಿಟರ್ನ್ ಅನ್ನು ಸಲ್ಲಿಸಲು ಸೆಕ್ಷನ್ 139(1) ಅಡಿಯಲ್ಲಿ ನಿಗದಿತ ದಿನಾಂಕದಂದು ಅಥವಾ ಮೊದಲು ಫಾರ್ಮ್-10 IEA ಅನ್ನು ಸಲ್ಲಿಸಬೇಕಾಗುತ್ತದೆ. ಹಾಗೆಯೇ, ಅಂತಹ ಆಯ್ಕೆಯನ್ನು ಹಿಂತೆಗೆದುಕೊಳ್ಳುವ ಉದ್ದೇಶಕ್ಕಾಗಿ ಅಂದರೆ ಹಳೆಯ ತೆರಿಗೆ ಪದ್ಧತಿಯಿಂದ ಹೊರಗುಳಿಯುವುದನ್ನು ಸಹ ಫಾರ್ಮ್ ಸಂ.10-IEA ಅನ್ನು ಸಲ್ಲಿಸುವ ಮೂಲಕವೇ ಮಾಡಲಾಗುತ್ತದೆ.
ಮೌಲ್ಯಮಾಪನ ವರ್ಷ 2024-25 ರಿಂದ ಸಹಕಾರಿ ಸಂಘಗಳು ಹೊಸ ತೆರಿಗೆ ಪದ್ದತಿಯನ್ನು ಆಯ್ಕೆ ಮಾಡಿಕೊಳ್ಳಲು ಫಾರ್ಮ್ 10-IFA ಅನ್ವಯಿಸುತ್ತದೆ. (ಸೆಪ್ಟೆಂಬರ್ 29, 2023ರ ಅಧಿಸೂಚನೆ ಸಂಖ್ಯೆ 83/2023 ರ ಮೂಲಕ ಸೂಚಿಸಲಾಗಿದೆ).
ಹೊಸ ಉತ್ಪಾದನಾ ಸಹಕಾರಿ ಸಂಘಕ್ಕೆ ರಿಯಾಯಿತಿ ತೆರಿಗೆ
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 115BAE ಅಡಿಯಲ್ಲಿ, 01.04.2023 ಅಥವಾ ಅದರ ನಂತರ ನೋಂದಾಯಿಸಲ್ಪಟ್ಟ ಹೊಸ ಉತ್ಪಾದನಾ ಸಹಕಾರ ಸಂಘಗಳಿಗೆ, 15% ರ ರಿಯಾಯಿತಿ ತೆರಿಗೆ ದರದ ಆಯ್ಕೆಯನ್ನು ಒದಗಿಸಲಾಗಿದೆ. ಆದರೆ, ಈ ಸೌಲಭ್ಯ ಪಡೆಯಲು ಸಂಬಂಧಿತ ಸಂಘವು 31 ಮಾರ್ಚ್ 2024 ರೊಳಗೆ ಯಾವುದೇ ವಸ್ತು ಅಥವಾ ಉತ್ಪನ್ನದ ಉತ್ಪಾದನೆ ಅಥವಾ ತಯಾರಿಕೆಯನ್ನು ಆರಂಭಿಸಿರಬೇಕು. ಆದಾಗ್ಯೂ, ಯಾವುದೇ ಹಿಂದಿನ ವರ್ಷಕ್ಕೆ ಆಯ್ಕೆಯನ್ನು ಚಲಾಯಿಸಿದ ನಂತರ, ಅದನ್ನು ಅದೇ ಅಥವಾ ಯಾವುದೇ ಹಿಂದಿನ ವರ್ಷಕ್ಕೆ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ.
AOP (ಸಹಕಾರಿ ಸಂಘಗಳಲ್ಲದ), BOI ಮತ್ತು ಕೃತಕ ನ್ಯಾಯಾಂಗ ವ್ಯಕ್ತಿಗೆ ಎರಡು ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆ ದರಗಳನ್ನು ಕೆಳಗೆ ನೀಡಲಾಗಿದೆ:
|
ಹಳೆಯ ತೆರಿಗೆ ಪದ್ಧತಿ |
ಆದಾಯ ತೆರಿಗೆ ಕಾಯ್ದೆ, 1961 ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ಧತಿ |
||||
|
ಆದಾಯ ತೆರಿಗೆ ಸ್ಲ್ಯಾಬ್ |
ಆದಾಯ ತೆರಿಗೆ ದರ |
|
ಆದಾಯ ತೆರಿಗೆ ಸ್ಲ್ಯಾಬ್ |
ಆದಾಯ ತೆರಿಗೆ ದರ |
|
|
₹ 2,50,000ದ ವರೆಗೂ |
ಶೂನ್ಯ |
|
₹ 4,00,000 ಗಳವರೆಗೆ |
ಶೂನ್ಯ |
|
|
₹ 2,50,001 - ₹ 5,00,000 |
₹ 2,50,000 ಮೇಲ್ಪಟ್ಟ ಆದಾಯಕ್ಕೆ 5% |
|
₹ 4,00,001 - ₹ 8,00,000 |
₹ 4,00,000 ಮೇಲ್ಪಟ್ಟ ಆದಾಯಕ್ಕೆ 5% |
|
|
₹ 5,00,001 - ₹ 10,00,000 |
₹5,00,000 ಮೇಲ್ಪಟ್ಟ ಆದಾಯದ 20% + ₹ 12,500 |
|
₹ 8,00,001 - ₹ 12,00,000 |
₹8,00,000 ಮೇಲ್ಪಟ್ಟ ಆದಾಯದ 10% + ₹ 20,000 |
|
|
₹ 10,00,000 ಮೇಲ್ಪಟ್ಟು |
₹10,00,000 ಮೇಲ್ಪಟ್ಟ ಆದಾಯದ 30% + ₹ 1,12,000 |
|
|
₹12,00,000 ಮೇಲ್ಪಟ್ಟ ಆದಾಯದ 15% + ₹ 60,000 |
|
|
|
|
|
₹ 12,00,001 - ₹ 16,00,000 |
|
|
|
|
|
|
₹ 16,00,001 - ₹ 20,00,000 |
₹1,20,000 ಮೇಲ್ಪಟ್ಟ ಆದಾಯದ 20% + ₹ 1,20,000 |
|
|
|
|
|
₹ 20,00,001 - ₹ 24,00,000 |
₹20,00,000 ಮೇಲ್ಪಟ್ಟ ಆದಾಯದ 25% + ₹ 2,00,000 |
|
|
|
|
|
₹ 24,00,000 ಮೇಲ್ಪಟ್ಟು
|
₹24,00,000 ಮೇಲ್ಪಟ್ಟ ಆದಾಯದ 30% + ₹ 3,00,000 |
|
|
|
|
|
|
|
|
|
ಆದಾಯ ಮಿತಿ |
ಆದಾಯ ತೆರಿಗೆ ಮೊತ್ತದ ಮೇಲೆ ವಿಧಿಸಲಾಗುವ ಸರ್‌ಚಾರ್ಜ್ ದರ
(ಹೊಸ ತೆರಿಗೆ ಪದ್ಧತಿ) |
ಆದಾಯ ತೆರಿಗೆ ಮೊತ್ತದ ಮೇಲೆ ವಿಧಿಸಲಾಗುವ ಸರ್‌ಚಾರ್ಜ್ ದರ
(ಹಳೆಯ ತೆರಿಗೆ ಪದ್ಧತಿ)
|
|
ರೂ.50 ಲಕ್ಷ ಗಳವರೆಗೆ |
ಶೂನ್ಯ |
ಶೂನ್ಯ |
|
₹50 ಲಕ್ಷದಿಂದ ₹1 ಕೋಟಿವರೆಗೆ |
10% |
10% |
|
ರೂ. 1 ಕೋಟಿಯಿಂದ ರೂ. 2 ಕೋಟಿಯವರೆಗೆ |
15% |
15% |
|
ರೂ. 2 ಕೋಟಿಯಿಂದ ರೂ. 5 ಕೋಟಿಯವರೆಗೆ |
25% |
25% |
|
ರೂ. 5 ಕೋಟಿಗಳಿಗಿಂತ ಹೆಚ್ಚು |
25% |
37% |
*ಗಮನಿಸಿ: ಹೆಚ್ಚಿಸಿದ ಸರ್‌ಚಾರ್ಜ್ ದರವಾದ 25% ಮತ್ತು 37% ಅನ್ನು, ಸಂದರ್ಭಾನುಸಾರವಾಗಿ, ಆದಾಯ ತೆರಿಗೆ ಕಾಯ್ದೆ 1961, ಸೆಕ್ಷನ್ 111A, 112, 112A ಅಡಿಯಲ್ಲಿ ತೆರಿಗೆಗೊಳಪಟ್ಟ ಆದಾಯ ಹಾಗೂ ಲಾಭಾಂಶ ಆದಾಯ (Dividend Income) ಮೇಲೆ ವಿಧಿಸಲಾಗುವುದಿಲ್ಲ. ಆದ್ದರಿಂದ, ಇಂತಹ ಆದಾಯಗಳ ಮೇಲೆ ಪಾವತಿಸಬೇಕಾದ ತೆರಿಗೆಯ ಗರಿಷ್ಠ ಹೆಚ್ಚುವರಿ ತೆರಿಗೆ ದರ 15% ಆಗಿರುತ್ತದೆ. ಆದರೆ ಆದಾಯವು ಆದಾಯ ತೆರಿಗೆ ಕಾಯ್ದೆ 1961, ಸೆಕ್ಷನ್ 115A, 115AB, 115AC, 115ACA ಮತ್ತು 115E ಅಡಿಯಲ್ಲಿ ತೆರಿಗೆಗೊಳಪಟ್ಟ ಸಂದರ್ಭಗಳಲ್ಲಿ ಇದು ಅನ್ವಯಿಸುವುದಿಲ್ಲ.ಕೇವಲ ಕಂಪನಿಗಳನ್ನೇ ಸದಸ್ಯರಾಗಿ ಹೊಂದಿರುವ ವ್ಯಕ್ತಿಗಳ ಸಂಘದ (AOP) ಸಂದರ್ಭದಲ್ಲಿ, ಆದಾಯ ತೆರಿಗೆಯ ಮೇಲಿನ ಸರ್‌ಚಾರ್ಜ್ ದರವು ಗರಿಷ್ಠ 15% ಆಗಿರುತ್ತದೆ. ಈ ನಿಯಮವು ಮೌಲ್ಯಮಾಪನ ವರ್ಷ 2023-24 ರಿಂದ ಅನ್ವಯವಾಗುತ್ತದೆ.
**ಸೂಚನೆ: ಎರಡೂ ತೆರಿಗೆ ಪದ್ಧತಿಗಳಲ್ಲಿ, ಆದಾಯ ತೆರಿಗೆ ಮೊತ್ತ ಹಾಗೂ ಸರ್‌ಚಾರ್ಜ್ (ಇದ್ದಲ್ಲಿ) ಒಟ್ಟು ಮೊತ್ತದ ಮೇಲೆ 4% ದರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೆಸ್ ಪಾವತಿಸಬೇಕು.
AOP / BOI ಸದಸ್ಯರ ಪಾಲು ತಿಳಿದಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ AOP / BOI ಗಳ ತೆರಿಗೆ ಹೊಣೆಗಾರಿಕೆ ಅವಲಂಬಿತವಾಗಿರುತ್ತದೆ. ಅದರಂತೆಯೇ, ಮುಂದಿನ ಷರತ್ತುಗಳು ಅನ್ವಯಿಸುತ್ತವೆ:
|
ಗಮನಿಸಿ: AOP / BOI ಯ ಸರಿಹೊಂದಿಸಿದ ಒಟ್ಟು ಆದಾಯವು (Adjusted Total Income) ₹20 ಲಕ್ಷಕ್ಕಿಂತ ಹೆಚ್ಚಿದ್ದರೆ, ಸರಿಹೊಂದಿಸಿದ ಒಟ್ಟು ಆದಾಯದ 18.5% ದರದಲ್ಲಿ ಪರ್ಯಾಯ ಕನಿಷ್ಠ ತೆರಿಗೆ (AMT) ( ಮತ್ತು ಅನ್ವಯಿಸುವಂತೆ ಸರ್‌ಚಾರ್ಜ್ ಮತ್ತು ಆರೋಗ್ಯ ಮತ್ತು ಶಿಕ್ಷಣ ಸೆಸ್ ಸೇರಿ) ಪಾವತಿಸಬೇಕಾಗುತ್ತದೆ. ಆದರೆ ಸಾಮಾನ್ಯ ತೆರಿಗೆ ಬಾಧ್ಯತೆ (Normal Tax Liability) ಸರಿಹೊಂದಿಸಿದ ಒಟ್ಟು ಆದಾಯದ 18.5% ಕ್ಕಿಂತ ಕಡಿಮೆಯಿದ್ದರೆ ಮಾತ್ರ ಈ AMT ಅನ್ವಯಿಸುತ್ತದೆ.
ತೆರಿಗೆ ಸೌಲಭ್ಯ ಲಭ್ಯವಿರುವ ಹೂಡಿಕೆಗಳು / ಪಾವತಿಗಳು / ಆದಾಯಗಳು
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 115BAC ಅಥವಾ ಸೆಕ್ಷನ್ 115BAE ಅಡಿಯಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿರುವ ತೆರಿಗೆದಾರರಿಗೆ ಲಭ್ಯವಿರುವ ಕಡಿತಗಳು:
- 1. ಸೆಕ್ಷನ್ 24(b) – ಗೃಹ ಸಾಲದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ ಮನೆ ಆಸ್ತಿಯಿಂದ ಬರುವ ಆದಾಯದ ಮೇಲಿನ ತೆರಿಗೆ ಕಡಿತ:
|
ಆಸ್ತಿಯ ಸ್ವರೂಪ |
ಸಾಲದ ಉದ್ದೇಶ |
ಅನುಮತಿಸಲ್ಪಟ್ಟ ಗರಿಷ್ಠ ಮಿತಿ |
|
ಬಾಡಿಗೆಗೆ ಕೊಟ್ಟಿರುವ ಗೃಹ ಆಸ್ತಿ |
ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ |
ಯಾವುದೇ ಮಿತಿಯಿಲ್ಲದೆ ವಾಸ್ತವ ಮೌಲ್ಯ |
- 2. ಆದಾಯ ತೆರಿಗೆ ಕಾಯ್ದೆ, 1961 ರ ಅಧ್ಯಾಯ VI A ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ತೆರಿಗೆ ಕಡಿತಗಳು
ಸೆಕ್ಷನ್ 80JJA
|
ಜೈವಿಕ ವಿಘಟನೀಯ ತ್ಯಾಜ್ಯವನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ವ್ಯವಹಾರದಿಂದ ಲಾಭ ಮತ್ತು ಗಳಿಕೆಗಳಿಗೆ ಸಂಬಂಧಿಸಿದಂತೆ ತೆರಿಗೆ ಕಡಿತ (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ) |
|
ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿರುವ ತೆರಿಗೆದಾರರಿಗೆ ಲಭ್ಯವಿರುವ ಕಡಿತಗಳು
- ಸೆಕ್ಷನ್ 24(b) – ಗೃಹ ಸಾಲದ ಮೇಲಿನ ಬಡ್ಡಿ ಹಾಗೂ ಗೃಹ ಸುಧಾರಣೆ ಸಾಲದ ಮೇಲಿನ ಬಡ್ಡಿಗೆ ಸಂಬಂಧಿಸಿದಂತೆ “ಮನೆ ಆಸ್ತಿಯಿಂದ ಆದಾಯ”ದಿಂದ ಕಡಿತ. ಸ್ವಯಂ ವಾಸಿಸುವ ಗೃಹಆಸ್ತಿಯ ಸಂದರ್ಭದಲ್ಲಿ, ಗೃಹ ಸಾಲದ ಮೇಲಿನ ಬಡ್ಡಿಗೆ ಅನುಮತಿಸಲಾದ ಗರಿಷ್ಠ ಕಡಿತ ಮಿತಿ ₹2 ಲಕ್ಷವಾಗಿದೆ. ಸೆಕ್ಷನ್ 24(b) ಅಡಿಯಲ್ಲಿ ಅನುಮತಿಸಲಾದ ಸಾಲದ ಮೇಲಿನ ಬಡ್ಡಿಯ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ:
|
ಆಸ್ತಿಯ ಸ್ವರೂಪ |
ಸಾಲ ಪಡೆದ ಸಮಯ |
ಸಾಲದ ಉದ್ದೇಶ |
ಅನುಮತಿಸಬಹುದಾದ (ಗರಿಷ್ಠ ಮಿತಿ) |
|
ಸ್ವಯಂ ವಾಸ |
1/04/1999 ರಂದು ಅಥವಾ ನಂತರ |
ಮನೆ ಆಸ್ತಿಯ ನಿರ್ಮಾಣ ಅಥವಾ ಖರೀದಿ |
₹ 2,00,000 |
|
1/04/1999 ರಂದು ಅಥವಾ ನಂತರ |
ಗೃಹ ಆಸ್ತಿಯ ದುರಸ್ತಿಗಳಿಗಾಗಿ |
₹ 30,000 |
|
|
1/04/1999 ರ ಮೊದಲು |
ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ |
₹ 30,000 |
|
|
1/04/1999 ರ ಮೊದಲು |
ಗೃಹ ಆಸ್ತಿಯ ದುರಸ್ತಿಗಳಿಗಾಗಿ |
₹ 30,000 |
|
|
ಬಾಡಿಗೆಗೆ ಕೊಟ್ಟಿರುವ ಗೃಹ ಆಸ್ತಿ |
ಯಾವುದೇ ಸಮಯದಲ್ಲಿಯೂ |
ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ |
ಯಾವುದೇ ಮಿತಿಯಿಲ್ಲದೆ ವಾಸ್ತವ ಮೌಲ್ಯ |
ಆದಾಯ ತೆರಿಗೆ ಕಾಯ್ದೆ, 1961 ರ ಅಧ್ಯಾಯ VI-A ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಕಡಿತಗಳು
|
ಕೆಲವು ನಿಧಿಗಳು, ದತ್ತಿ ಸಂಸ್ಥೆಗಳು ಇತ್ಯಾದಿಗಳಿಗೆ ಮಾಡಿದ ದೇಣಿಗೆಗಳ ಮೇಲಿನ ತೆರಿಗೆ ಕಡಿತ. ಕೆಳಗಿನ ವರ್ಗಗಳಿಗೆ ನೀಡಿದ ದೇಣಿಗೆಯು ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ:
|
|
ವೈಜ್ಞಾನಿಕ ಸಂಶೋಧನೆ ಅಥವಾ ಗ್ರಾಮೀಣ ಅಭಿವೃದ್ಧಿಯ ಕುರಿತ ಕೆಲವು ದೇಣಿಗೆಗಳಿಗೆ ಸಂಬಂಧಿಸಿದಂತೆ ತೆರಿಗೆ ಕಡಿತ. ಕೆಳಗಿನ ವರ್ಗಗಳಿಗೆ ನೀಡಿದ ದೇಣಿಗೆಯು ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ:
ಗಮನಿಸಿ: ಈ ಸೆಕ್ಷನ್ ಅಡಿಯಲ್ಲಿ, ₹2,000 ಕ್ಕಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ನೀಡಿದ ದೇಣಿಗೆಗೆ ಯಾವುದೇ ತೆರಿಗೆ ಕಡಿತವನ್ನು ಅನುಮತಿಸಲಾಗುವುದಿಲ್ಲ. ಅಥವಾ ಒಟ್ಟು ಒಟ್ಟು ಆದಾಯದಲ್ಲಿ ವ್ಯಾಪಾರ/ವೃತ್ತಿಯಿಂದ ಲಾಭ ಅಥವಾ ಆದಾಯ ಒಳಗೊಂಡಿದ್ದರೆ ಸಹ ಈ ಸೆಕ್ಷನ್ ಅಡಿಯಲ್ಲಿ ಕಡಿತ ಲಭ್ಯವಿರುವುದಿಲ್ಲ. |
|
ರಾಜಕೀಯ ಪಕ್ಷ ಅಥವಾ ಚುನಾವಣಾ ಟ್ರಸ್ಟ್‌ಗೆ ಕೊಡುಗೆ ನೀಡಿದ ಮೊತ್ತವನ್ನು ತೆರಿಗೆ ಕಡಿತವಾಗಿ ಅನುಮತಿಸಲಾಗಿದೆ (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ) |
|
|
ಯಾವುದೇ ಮೂಲಸೌಕರ್ಯ ಸೌಲಭ್ಯ ಅಭಿವೃದ್ಧಿಪಡಿಸುವುದು, ನಿರ್ವಹಿಸುವುದು ಮತ್ತು ಕಾರ್ಯನಿರ್ವಹಿಸುವುದರಲ್ಲಿ ತೊಡಗಿರುವ ಸಂಸ್ಥೆ (ಕೇವಲ ಭಾರತೀಯ ಕಂಪನಿ), ಕೈಗಾರಿಕಾ ಉದ್ಯಾನಗಳು (Industrial Parks) ನಡೆಸುವ ಯಾವುದೇ ಸಂಸ್ಥೆ, ಯಾವುದೇ ವಿದ್ಯುತ್ ಉತ್ಪಾದನಾ ಸಂಸ್ಥೆ, ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳ ಪುನರ್‌ರಚನೆ ಅಥವಾ ಪುನರುಜ್ಜೀವನ ನಡೆಸುವ ಭಾರತೀಯ ಕಂಪನಿಗಳು, ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ತೆರಿಗೆ ಕಡಿತ ಪಡೆಯಲು ಅರ್ಹರಾಗಿರುತ್ತವೆ. (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ) |
|
|
ವಿಶೇಷ ಆರ್ಥಿಕ ವಲಯದ ಅಭಿವೃದ್ಧಿಯಲ್ಲಿ ತೊಡಗಿರುವ ಉದ್ಯಮ ಅಥವಾ ಉದ್ದಿಮೆಯಿಂದ ಬಂದ ಗಳಿಕೆಗಳು ಮತ್ತು ಲಾಭಗಳಿಗೆ ಸಂಬಂಧಿಸಿದಂತೆ ತೆರಿಗೆ ಕಡಿತ (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ) |
|
|
ಕೆಲವು ನಿರ್ದಿಷ್ಟಪಡಿಸಿದ ವ್ಯವಹಾರದಿಂದ ಪಡೆದ ಲಾಭಗಳು ಮತ್ತು ಗಳಿಕೆಗಳ ಮೇಲಿನ ತೆರಿಗೆ ಕಡಿತ. ಈ ಸೆಕ್ಷನ್ ಅಡಿಯಲ್ಲಿ ಕಡಿತವು, ತೆರಿಗೆದಾರರ ಒಟ್ಟು ಆದಾಯದಲ್ಲಿ ಕೆಳಗಿನ ವ್ಯವಹಾರಗಳಿಂದ ಉಂಟಾಗುವ ಲಾಭ ಮತ್ತು ಆದಾಯ ಒಳಗೊಂಡಿದ್ದರೆ ಲಭ್ಯವಿರುತ್ತದೆ:
100% / 25% ಲಾಭದ ಮೇಲೆ ವಿವಿಧ ವಿಧದ ಸಂಸ್ಥೆಗಳಿಗಾಗಿ ನಿಗದಿಪಡಿಸಲಾದ ಷರತ್ತುಗಳಿಗೆ ಅನುಗುಣವಾಗಿ 5 / 10 / 7 ವರ್ಷಗಳ ಅವಧಿಗೆ ಲಭ್ಯವಿರುತ್ತದೆ. |
|
ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸುವುದರಿಂದ ಮತ್ತು ನಿರ್ಮಿಸುವುದರಿಂದ ಪಡೆದ ಲಾಭ ಮತ್ತು ಗಳಿಕೆಗಳು |
|
|
ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಾಂಚಲ್ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಕೆಲವು ಉದ್ಯಮಗಳಿಗೆ ಸಂಬಂಧಿಸಿದಂತೆ ತೆರಿಗೆ ಕಡಿತ (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ) |
|
|
ಈಶಾನ್ಯ ರಾಜ್ಯಗಳಲ್ಲಿ ಸ್ಥಾಪಿಸಲಾದ ಕೆಲವು ಸಂಸ್ಥೆಗಳಿಗೆ ಲಭ್ಯವಿರುವ ಕಡಿತ. (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ) |
|
|
ಜೈವಿಕ ವಿಘಟನೀಯ ತ್ಯಾಜ್ಯವನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ವ್ಯವಹಾರದಿಂದ ಲಾಭ ಮತ್ತು ಗಳಿಕೆಗಳಿಗೆ ಸಂಬಂಧಿಸಿದಂತೆ ತೆರಿಗೆ ಕಡಿತ (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ) |
|
|
ಸೆಕ್ಷನ್ 44AB ಅನ್ವಯಿಸುವ ತೆರಿಗೆದಾರರಿಗೆ ಅನ್ವಯವಾಗುವ, ಹೊಸ ಕಾರ್ಮಿಕರು / ಉದ್ಯೋಗಿಗಳ ಉದ್ಯೋಗಕ್ಕೆ ಸಂಬಂಧಿಸಿದಂತೆ ತೆರಿಗೆ ಕಡಿತ (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ) |
|
|
ಕಡಲಾಚೆಯ ಬ್ಯಾಂಕಿಂಗ್ ಘಟಕಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದ ಆದಾಯಕ್ಕೆ ಲಭ್ಯವಿರುವ ಕಡಿತ (Deduction). (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ) |
|