Do not have an account?
Already have an account?

AY 2025-26ಕ್ಕೆ ಪಾಲುದಾರಿಕೆ ಸಂಸ್ಥೆ / LLP ಗೆ ಅನ್ವಯವಾಗುವ ರಿಟರ್ನ್ಸ್ ಮತ್ತು ಫಾರ್ಮ್‌ಗಳು

 

ಹಕ್ಕು ನಿರಾಕರಣೆ: ಈ ಪುಟದಲ್ಲಿನ ವಿಷಯಗಳನ್ನು ಅವಲೋಕನ / ಸಾಮಾನ್ಯ ಮಾರ್ಗದರ್ಶನ ನೀಡುವ ಉದ್ದೇಶದಿಂದ ಮಾತ್ರ ನೀಡಲಾಗಿದ್ದು, ಸಮಗ್ರವಾಗಿಲ್ಲ. ಸಂಪೂರ್ಣ ವಿವರಗಳು ಹಾಗು ಮಾರ್ಗಸೂಚಿಗಳಿಗಾಗಿ, ದಯವಿಟ್ಟು ಆದಾಯ ತೆರಿಗೆ ಕಾಯ್ದೆ, ನಿಯಮಗಳು ಮತ್ತು ಅಧಿಸೂಚನೆಗಳನ್ನು ನೋಡಿರಿ.

 

 

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 2(23)(i) ಸಂಸ್ಥೆಯ ಅರ್ಥ ಭಾರತೀಯ ಸಹಭಾಗಿತ್ವ ಕಾಯಿದೆ, 1932 ರಲ್ಲಿ ನೀಡಲಾದಂತೆಯೇ ಇರುತ್ತದೆ ಎಂದು ತಿಳಿಸುತ್ತದೆ. ಭಾರತೀಯ ಪಾಲುದಾರಿಕೆ ಕಾಯ್ದೆ, 1932ರ ಸೆಕ್ಷನ್ 4 ವ್ಯವಹಾರ ಸಂಸ್ಥೆಯನ್ನು ಈ ಕೆಳಗಿನ ಹಾಗೆ ವ್ಯಾಖ್ಯಾನಿಸುತ್ತದೆ:

 

"ಪರಸ್ಪರ ಪಾಲುದಾರಿಕೆ ಮಾಡಿಕೊಂಡ ವ್ಯಕ್ತಿಗಳನ್ನು ಪ್ರತ್ಯೇಕವಾಗಿ "ಪಾಲುದಾರರು" ಎಂದು ಮತ್ತು ಸಾಮೂಹಿಕವಾಗಿ "ಒಂದು ಸಂಸ್ಥೆ" ಎಂದು ಕರೆಯಲಾಗುತ್ತದೆ, ಮತ್ತು ಅವರ ವ್ಯವಹಾರವನ್ನು ಯಾವ ಹೆಸರಿನ ಅಡಿಯಲ್ಲಿ ನಡೆಸಲಾಗುತ್ತದೆಯೋ ಅದನ್ನು "ಸಂಸ್ಥೆಯ ಹೆಸರು" ಎಂದು ಕರೆಯಲಾಗುತ್ತದೆ.

 

ಆದಾಯ ತೆರಿಗೆ ಕಾಯಿದೆ, 1961ರ ಪ್ರಕಾರ, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (LLP) ಎಂದರೆ, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯಿದೆ, 2008ರಲ್ಲಿ ವ್ಯಾಖ್ಯಾನಿಸಿದಂತೆ ಇರುತ್ತದೆ. ಸೀಮಿತ ಬಾಧ್ಯತೆಯ ಪಾಲುದಾರಿಕೆ ಕಾಯ್ದೆ, 2008ರ ಸೆಕ್ಷನ್ 2(1)(n) “ಸೀಮಿತ ಬಾಧ್ಯತೆಯ ಪಾಲುದಾರಿಕೆ”ಯನ್ನು ಆ ಕಾಯ್ದೆಯ ಅಡಿಯಲ್ಲಿ ರೂಪಿಸಿದ ಮತ್ತು ನೋಂದಾಯಿಸಿದ ಪಾಲುದಾರಿಕೆ ಎಂದು ವ್ಯಾಖ್ಯಾನಿಸುತ್ತದೆ. ಅದು ಅದರ ಪಾಲುದಾರರಿಂದ ಪ್ರತ್ಯೇಕವಾಗಿರುವ ಒಂದು ನಿಶ್ಚಿತ ಕಾನೂನುಬದ್ಧ ಅಸ್ತಿತ್ವವಾಗಿದೆ.

 

1. ITR-4 (SUGAM) - ವ್ಯಕ್ತಿ, HUF ಮತ್ತು ಸಂಸ್ಥೆಗೆ ಅನ್ವಯಿಸುತ್ತದೆ (LLP ಹೊರತುಪಡಿಸಿ)

ಈ ಕೆಳಗಿನ ಯಾವುದೇ ಆದಾಯ ಮೂಲಗಳಿಂದ (ಸೆಕ್ಷನ್ 44AD / 44ADA / 44AE ಅಡಿಯಲ್ಲಿ) ₹ 50 ಲಕ್ಷದವರೆಗೆ ಒಟ್ಟು ಆದಾಯ ಹೊಂದಿರುವ ಮತ್ತು ವ್ಯಾಪಾರ ಅಥವಾ ವೃತ್ತಿಯಿಂದ ಆದಾಯ ಹೊಂದಿರುವ ನಿವಾಸಿಯಾಗಿರುವ LLP ಅಥವಾ ಸಂಸ್ಥೆಯನ್ನು ಹೊರತುಪಡಿಸಿ ಈ ರಿಟನ್ ಸಾಮಾನ್ಯವಾಗಿ ನಿವಾಸಿಯಲ್ಲದ ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬಕ್ಕೆ (HUF) ಅನ್ವಯೈಸುತ್ತದೆ.

ಒಂದು ಮನೆಯ ಆಸ್ತಿ

ಇತರ ಮೂಲಗಳು (ಬಡ್ಡಿ, ಕುಟುಂಬ ಪಿಂಚಣಿ, ಲಾಭಾಂಶ ಇತ್ಯಾದಿ.)

₹ 5,000 ರವರೆಗೆ ಕೃಷಿ ಆದಾಯ ಹೊಂದಿರುವವರು

 

 

ಗಮನಿಸಿ: ಕೆಳಕಂಡ ವಿಭಾಗದ ತೆರಿಗೆದಾರರು ITR-4 ಅನ್ನು ಬಳಸಲಾಗುವುದಿಲ್ಲ:
(a) ಒಂದು ಕಂಪನಿಯ ನಿರ್ದೇಶಕರಾಗಿದ್ದರೆ
(b) ಹಿಂದಿನ ವರ್ಷದಲ್ಲಿ ಯಾವುದೇ ಸಮಯದಲ್ಲಿ ಪಟ್ಟಿಮಾಡದ ಇಕ್ವಿಟಿ ಷೇರುಗಳನ್ನು ಹೊಂದಿದ್ಧರೆ
ಭಾರತದ ಹೊರಗೆ ಇರುವ ಯಾವುದೇ ಆಸ್ತಿ (ಯಾವುದೇ ಆಸ್ತಿಯಿಂದ ಆರ್ಥಿಕ ಲಾಭ ಸೇರಿದಂತೆ) ಹೊಂದಿದ್ದರೆ
(d) ಭಾರತದ ಹೊರಗೆ ಇರುವ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿದ್ದರೆ
(e) ಭಾರತದ ಹೊರಗೆ ಯಾವುದೇ ಮೂಲದಿಂದ ಆದಾಯವನ್ನು ಹೊಂದಿದ್ದರೆ
(f) ಅವರ ವಿಷಯದಲ್ಲಿ ತೆರಿಗೆಯ ಪಾವತಿ ಅಥವಾ ಕಡಿತವನ್ನು ESOP ಯ ಮೇಲೆ ಮುಂದೂಡಲ್ಪಟ್ಟಿದ್ದರೆ
(g) ಯಾವದೇ ಆದಾಯ ಶೀರ್ಷಿಕೆಯ ಅಡಿಯಲ್ಲಿ ಬ್ರಾಟ್ ಫಾರ್ವರ್ಡ್ ಲಾಸ್ ಅಥವಾ ಕ್ಯಾರಿ ಫಾರ್ವರ್ಡ್ ಲಾಸ್ ಹೊಂದಿದ್ದರೆ

(h) ರೂ. 50 ಲಕ್ಷ ಒಟ್ಟು ಆದಾಯ ಹೊಂದಿರುವವರು.

 

 

ITR-4 (ಸುಗಮ್) ಕಡ್ಡಾಯವಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಸೆಕ್ಷನ್ 44AD, 44AD ಅಥವಾ 44AE ಅಡಿಯಲ್ಲಿ ಊಹೆಯ ಆಧಾರದ ಮೇಲೆ ವ್ಯವಹಾರ ಅಥವಾ ವೃತ್ತಿಯಿಂದ ಲಾಭ ಮತ್ತು ಗಳಿಕೆಗಳನ್ನು ಘೋಷಿಸಲು ಅರ್ಹರಾಗಿದ್ದರೆ, ತೆರಿಗೆದಾರರು, ತಮ್ಮ ಆಯ್ಕೆಯಲ್ಲಿ ಬಳಸಬೇಕಾದ ಸರಳೀಕೃತ ರಿಟರ್ನ್ ಫಾರ್ಮ್ ಆಗಿದೆ.

 

2. ITR-5

ಈ ರಿಟರ್ನ್ ಕೆಳಕಂಡ ವ್ಯಕ್ತಿಗೆ ಅನ್ವಯಿಸುತ್ತದೆ:

  1. ವ್ಯವಹಾರ ಸಂಸ್ಥೆ
  2. ಸೀಮಿತ ಬಾಧ್ಯತೆ ಪಾಲುದಾರಿಕೆ (LLP)
  3. ವ್ಯಕ್ತಿಗಳ ಸಂಘ (AOP)
  4. ವ್ಯಕ್ತಿಗಳ ಸಂಸ್ಥೆ (BOI)
  5. ಸೆಕ್ಷನ್ 2(31) ರ ಕ್ಲಾಸ್ (vii) ನಲ್ಲಿ ಉಲ್ಲೇಖಿಸಲಾದ ಆರ್ಟಿಫಿಶಿಯಲ್ ಜ್ಯೂರಿಡಿಕಲ್ ಪರ್ಸನ್ (AJP)
  6. ಸೆಕ್ಷನ್ 2(31) ರ ಕ್ಲಾಸ್ (vi) ನಲ್ಲಿ ಉಲ್ಲೇಖಿಸಲಾದ ಸ್ಥಳೀಯ ಪ್ರಾಧಿಕಾರ
  7. ಸೆಕ್ಷನ್ 160(1)(iii) ಅಥವಾ (iv) ರಲ್ಲಿ ಉಲ್ಲೇಖಿಸಲಾದ ತೆರಿಗೆದಾರರ ಪ್ರತಿನಿಧಿ
  8. ಕೋ-ಆಪರೇಟಿವ್ ಸೊಸೈಟಿ
  9. ಸೊಸೈಟಿಗಳ ನೋಂದಣಿ ಕಾಯಿದೆ, 1860 ಅಥವಾ ಯಾವುದೇ ರಾಜ್ಯದ ಯಾವುದೇ ಕಾನೂನಿನ ಅಡಿಯಲ್ಲಿ ನೋಂದಾಯಿಸಲಾದ ಸೊಸೈಟಿ
  10. ಫಾರ್ಮ್ ITR-7 ಅನ್ನು ಸಲ್ಲಿಸಲು ಅರ್ಹವಾದ ಟ್ರಸ್ಟ್‌ಗಳನ್ನು ಹೊರತುಪಡಿಸಿ ಟ್ರಸ್ಟ್
  11. ಮೃತ ವ್ಯಕ್ತಿಯ ಎಸ್ಟೇಟ್
  12. ದಿವಾಳಿಯಾದ ಎಸ್ಟೇಟ್
  13. ಸೆಕ್ಷನ್ 139(4E) ನಲ್ಲಿ ಉಲ್ಲೇಖಿಸಲಾದ ವ್ಯವಹಾರ ಟ್ರಸ್ಟ್ ಮತ್ತು ಸೆಕ್ಷನ್ 139(4F) ನಲ್ಲಿ ಉಲ್ಲೇಖಿಸಲಾದ ಹೂಡಿಕೆ ನಿಧಿ

ಗಮನಿಸಿ: ಆದಾಗ್ಯೂ, ಸೆಕ್ಷನ್ 139(4A) ಅಥವಾ 139(4B) ಅಥವಾ 139(4D) ಅಡಿಯಲ್ಲಿ ರಿಟರ್ನ್ ಸಲ್ಲಿಸಬೇಕಾದ ವ್ಯಕ್ತಿಯು ಈ ಫಾರ್ಮ್ ಬಳಸಬಾರದು.

 

ಅನ್ವಯಿಸುವ ಫಾರ್ಮ್‌ಗಳು

 

1.

ಫಾರ್ಮ್ 26 AS

AIS (ವಾರ್ಷಿಕ ಮಾಹಿತಿ ಹೇಳಿಕೆ)

ಒದಗಿಸಿದವರು:

ಆದಾಯ ತೆರಿಗೆ ಇಲಾಖೆ (ಇದು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ:

ಲಾಗಿನ್ > ಇ-ಫೈಲ್ > ಆದಾಯ ತೆರಿಗೆ ರಿಟರ್ನ್ > ಫಾರ್ಮ್ 26AS ವೀಕ್ಷಿಸಿ)

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು:

ಮೂಲದಲ್ಲಿ ಕಡಿತಗೊಳಿಸಲಾದ / ಸಂಗ್ರಹಿಸಲಾದ ತೆರಿಗೆ

ಒದಗಿಸಿದವರು:

ಆದಾಯ ತೆರಿಗೆ ಇಲಾಖೆ (ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಇದನ್ನು ಪ್ರವೇಶಿಸಬಹುದು)

ಇ-ಫೈಲಿಂಗ್ ಪೋರ್ಟಲ್ > ಲಾಗಿನ್ > AIS ಗೆ ಹೋಗಿ

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು:

  • ಮೂಲದಲ್ಲಿ ಕಡಿತಗೊಳಿಸಲಾದ / ಸಂಗ್ರಹಿಸಲಾದ ತೆರಿಗೆ
  • SFT ಮಾಹಿತಿ
  • ತೆರಿಗೆ ಪಾವತಿ
  • ಬೇಡಿಕೆ / ಮರುಪಾವತಿ

ಇತರ ಮಾಹಿತಿ (ಬಾಕಿ ಉಳಿದಿರುವ/ಮುಗಿದ ಪ್ರಕ್ರಿಯೆಗಳು, GST ಮಾಹಿತಿ, ವಿದೇಶಿ ಸರ್ಕಾರದಿಂದ ಪಡೆದ ಮಾಹಿತಿ ಇತ್ಯಾದಿ)

 

 

ಗಮನಿಸಿ: 26AS ನಲ್ಲಿ ಲಭ್ಯವಿರುವ (ಮುಂಗಡ ತೆರಿಗೆ/SAT, ಮರುಪಾವತಿಯ ವಿವರಗಳು, SFT ವಹಿವಾಟು, ಸೆಕ್ಷನ್ 194 IA,194 IB,194M, ಅಡಿಯಲ್ಲಿ TDS, TDS ಡೀಫಾಲ್ಟ್‌ಗಳು) ಮಾಹಿತಿಗಳು ಈಗ AIS ನಲ್ಲಿ ಲಭ್ಯವಿದೆ

 

2. ಫಾರ್ಮ್ 16A - ಸಂಬಳವನ್ನು ಹೊರತುಪಡಿಸಿ ಆದಾಯದ ಮೇಲಿನ TDS ಗಾಗಿ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 203 ರ ಅಡಿಯಲ್ಲಿ ಪ್ರಮಾಣಪತ್ರ

ಇವರಿಂದ ಒದಗಿಸಲಾಗಿರುವುದು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಕಡಿತದಾರರಿಂದ ಕಡಿತಗಾರರಿಗೆ

ಫಾರ್ಮ್ 16A ಎಂಬುದು ತ್ರೈಮಾಸಿಕದಲ್ಲಿ ನೀಡಲಾದ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (TDS) ಪ್ರಮಾಣಪತ್ರವಾಗಿದ್ದು, ಇದು TDS, ಪಾವತಿಗಳ ಸ್ವರೂಪ ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿ ಠೇವಣಿ ಮಾಡಿದ TDS ಪಾವತಿಗಳ ಮೊತ್ತದ ಮಾಹಿತಿ ಹೊಂದಿರುತ್ತದೆ.

 

3. ಫಾರ್ಮ್ 3CA-3CD

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಯಾವುದೇ ಇತರ ಕಾನೂನಿನ ಅಡಿಯಲ್ಲಿ ಕಡ್ಡಾಯ ಲೆಕ್ಕಪರಿಶೋಧನೆಯ ಅಗತ್ಯವಿರುವ ತೆರಿಗೆದಾರರು ಮತ್ತು ಸೆಕ್ಷನ್ 44AB ಅಡಿಯಲ್ಲಿ ತಮ್ಮ ಖಾತೆಗಳನ್ನು ಅಕೌಂಟೆಂಟ್ ಮುಖಾಂತರ ಲೆಕ್ಕಪರಿಶೋಧನೆ ಮಾಡಬೇಕಾಗುತ್ತದೆ. ಸೆಕ್ಷನ್ 139ರ ಸಬ್-ಸೆಕ್ಷನ್ (1) ರ ಅಡಿಯಲ್ಲಿ ಆದಾಯದ ರಿಟರ್ನ್ ಅನ್ನು ಒದಗಿಸುವ ನಿಗದಿತ ದಿನಾಂಕದ ಒಂದು ತಿಂಗಳ ಮೊದಲು ಸಲ್ಲಿಸಬೇಕು.

ಖಾತೆಗಳ ಲೆಕ್ಕಪರಿಶೋಧನೆಯ ವರದಿ ಮತ್ತು ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 44AB ಅಡಿಯಲ್ಲಿ ಒದಗಿಸಬೇಕಾದ ವಿವರಗಳ ಹೇಳಿಕೆ

 

4. ಫಾರ್ಮ್ 3CB-3CD

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಸೆಕ್ಷನ್ 44AB ಅಡಿಯಲ್ಲಿ ಅಕೌಂಟೆಂಟ್ ತನ್ನ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ತೆರಿಗೆದಾರರು. ಸೆಕ್ಷನ್ 139ರ ಸಬ್-ಸೆಕ್ಷನ್ (1) ರ ಅಡಿಯಲ್ಲಿ ಆದಾಯದ ರಿಟರ್ನ್ ಅನ್ನು ಒದಗಿಸುವ ನಿಗದಿತ ದಿನಾಂಕದ ಒಂದು ತಿಂಗಳ ಮೊದಲು ಸಲ್ಲಿಸಬೇಕು.

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 44AB ಅಡಿಯಲ್ಲಿ ಒದಗಿಸಬೇಕಾದ ಖಾತೆಗಳ ಲೆಕ್ಕಪರಿಶೋಧನೆಯ ವರದಿ (ಫಾರ್ಮ್ 3CB) ಮತ್ತು ವಿವರಗಳ ಹೇಳಿಕೆ (ಫಾರ್ಮ್ 3CD)

 

5. ಫಾರ್ಮ್ 3CEB

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಅಂತರರಾಷ್ಟ್ರೀಯ ವಹಿವಾಟಿಗೆ ಪಾಳ್ಘೋಳ್ಳುವ ಅಥವಾ ನಿರ್ದಿಷ್ಟಪಡಿಸಿದ ದೇಶೀಯ ವಹಿವಾಟಿನಲ್ಲಿ ಪಾಳ್ಘೋಳ್ಳುವ ತೆರಿಗೆದಾರರು ಸೆಕ್ಷನ್ 92E ಅಡಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ರಿಂದ ವರದಿಯನ್ನು ಪಡೆಯಬೇಕಾಗುತ್ತದೆ. ಸೆಕ್ಷನ್ 139ರ ಸಬ್-ಸೆಕ್ಷನ್ (1) ರ ಅಡಿಯಲ್ಲಿ ಆದಾಯದ ರಿಟರ್ನ್ ಅನ್ನು ಒದಗಿಸುವ ನಿಗದಿತ ದಿನಾಂಕದ ಒಂದು ತಿಂಗಳ ಮೊದಲು ಸಲ್ಲಿಸಬೇಕು.

ಎಲ್ಲಾ ಅಂತಾರಾಷ್ಟ್ರೀಯ ವಹಿವಾಟು(ಗಳು) ಮತ್ತು ನಿರ್ದಿಷ್ಟಪಡಿಸಿದ ದೇಶೀಯ ವಹಿವಾಟು(ಗಳ) ವಿವರಗಳನ್ನು ಒಳಗೊಂಡಿರುವ ಚಾರ್ಟರ್ಡ್ ಅಕೌಂಟೆಂಟ್‌ನಿಂದ ವರದಿ

 

6. ಫಾರ್ಮ್ 3CE

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಭಾರತದಲ್ಲಿ ವ್ಯವಹಾರ ನಡೆಸುತ್ತಿರುವ ನಿರ್ದಿಷ್ಟ ವ್ಯಕ್ತಿಗಳಿಂದ ನಿರ್ದಿಷ್ಟ ಆದಾಯವನ್ನು ಸ್ವೀಕರಿಸಲು ಸೆಕ್ಷನ್ 44DA ಅಡಿಯಲ್ಲಿ ಲೆಕ್ಕಪರಿಶೋಧಕರಿಂದ ವರದಿಯನ್ನು ಪಡೆಯಬೇಕಾದ ಅನಿವಾಸಿ ತೆರಿಗೆದಾರರು ಅಥವಾ ವಿದೇಶಿ ಕಂಪನಿ. ಸೆಕ್ಷನ್ 139ರ ಸಬ್-ಸೆಕ್ಷನ್ (1) ರ ಅಡಿಯಲ್ಲಿ ಆದಾಯದ ರಿಟರ್ನ್ ಅನ್ನು ಒದಗಿಸುವ ನಿಗದಿತ ದಿನಾಂಕದ ಒಂದು ತಿಂಗಳ ಮೊದಲು ಸಲ್ಲಿಸಬೇಕು.

ತಾಂತ್ರಿಕ ಸೇವೆಗಳಿಗಾಗಿ ಸರ್ಕಾರ ಅಥವಾ ಒಂದು ಭಾರತೀಯ ವ್ಯಾಪಾರ ಸಂಸ್ಥೆಯಿಂದ ರಾಯಧನ ಅಥವಾ ಶುಲ್ಕಗಳ ರೂಪದಲ್ಲಿ ಸ್ವೀಕರಿಸಿದ ಆದಾಯಕ್ಕೆ ಸಂಬಂಧಿಸಿದಂತೆ ಒಬ್ಬ ಅಕೌಂಟೆಂಟ್ ಇಂದ ಒಂದು ವರದಿ,

 

7. ಫಾರ್ಮ್ 29C

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 115JC ಅಡಿಯಲ್ಲಿ ಅಕೌಂಟೆಂಟ್‌ನಿಂದ ವರದಿಯನ್ನು ಪಡೆಯಬೇಕಾದ ತೆರಿಗೆದಾರರು

ಹೊಂದಾಣಿಕೆಯ ಒಟ್ಟು ಆದಾಯ ಮತ್ತು ಕಂಪನಿಯನ್ನು ಹೊರತುಪಡಿಸಿ ವ್ಯಕ್ತಿಯ ಪರ್ಯಾಯ ಕನಿಷ್ಠ ತೆರಿಗೆಯನ್ನು ಲೆಕ್ಕಾಚಾರ ಮಾಡಲು ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 115ಜೆಸಿ ಅಡಿಯಲ್ಲಿ ಮಾಡಿದ ವರದಿ

 

8. ಫಾರ್ಮ್ 67 - ಭಾರತದ ಹೊರಗಿನ ದೇಶ ಅಥವಾ ನಿರ್ದಿಷ್ಟ ಪ್ರದೇಶದಿಂದ ಆದಾಯದ ಹೇಳಿಕೆ ಮತ್ತು ವಿದೇಶಿ ತೆರಿಗೆ ಕ್ರೆಡಿಟ್

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ತೆರಿಗೆದಾರ, ಸೆಕ್ಷನ್ 139(1) ಅಡಿಯಲ್ಲಿ ITR ಅನ್ನು ಒದಗಿಸಲು ನಿರ್ದಿಷ್ಟಪಡಿಸಿದ ನಿಗದಿತ ದಿನಾಂಕದಂದು ಅಥವಾ ಮೊದಲು ಒದಗಿಸಬೇಕು

ಭಾರತದ ಹೊರಗಿನ ದೇಶ ಅಥವಾ ನಿರ್ದಿಷ್ಟ ಪ್ರದೇಶಗಳಿಂದ ಗಳಿಸಿದ ಆದಾಯ ಮತ್ತು ಭರಿಸಿದ ತೆರಿಗೆಯ ವಿವರವಾದ ಮಾಹಿತಿ ಒದಗಿಸುವ ನಮೂನೆ

 

9. ಫಾರ್ಮ್ 10CCB

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಆದಾಯ ತೆರಿಗೆ ಕಾಯ್ದೆ,1961ರ ಸೆಕ್ಷನ್ 80(7) / 80- IA / 80-IB / 80-IC / 80-IE ಅಡಿಯಲ್ಲಿ ಕಡಿತಗಳನ್ನು ಕ್ಲೈಮ್ ಮಾಡಲು ಅಕೌಂಟೆಂಟ್‌ನಿಂದ ವರದಿಯನ್ನು ಪಡೆಯಬೇಕಾದ ತೆರಿಗೆದಾರರು

ಸೆಕ್ಷನ್ 80-I (7) / 80- IA / 80-IB / 80-IC / 80-IE ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಲು ಫಾರ್ಮ್ 10CCB ಯಲ್ಲಿನ ಆಡಿಟ್ ವರದಿ ಕಡ್ಡಾಯ ಅವಶ್ಯಕತೆಯಾಗಿದೆ. ಸೆಕ್ಷನ್ 139(1) ಅಡಿಯಲ್ಲಿ ITR ಸಲ್ಲಿಸಲು ನಿಗದಿತ ದಿನಾಂಕದ 1 ತಿಂಗಳ ಮೊದಲು ಅದನ್ನು ಸಲ್ಲಿಸಬೇಕು

 

AY 2025-26 ಕ್ಕಾಗಿ ಪಾಲುದಾರಿಕೆ ಸಂಸ್ಥೆ / LLP ಗಾಗಿ ತೆರಿಗೆ ಸ್ಲ್ಯಾಬ್‌ಗಳು


AY 2025-26ಕ್ಕೆ, ಪಾಲುದಾರಿಕೆ ಸಂಸ್ಥೆಗೆ (LLP ಸೇರಿದಂತೆ) 30% ನಲ್ಲಿ ತೆರಿಗೆ ವಿಧಿಸಲಾಗುತ್ತದೆ.

 

ಹೆಚ್ಚುವರಿ ಶುಲ್ಕ, ಕನಿಷ್ಠ ಪರಿಹಾರ ಮತ್ತು ಆರೋಗ್ಯ ಮತ್ತು ಶಿಕ್ಷಣ ಸೆಸ್

 

ಹೆಚ್ಚುವರಿ ಶುಲ್ಕ ಎಂದರೇನು?

ಒಟ್ಟು ಆದಾಯವು ನಿಗದಿತ ಮಿತಿಗಳನ್ನು ಮೀರಿದರೆ ಈ ಕೆಳಗಿನ ದರಗಳಲ್ಲಿ ಆದಾಯ ತೆರಿಗೆಯ ಮೊತ್ತದ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ:

  • ತೆರಿಗೆ ವಿಧಿಸಬಹುದಾದ ಆದಾಯವು ₹ 1 ಕೋಟಿ ಮೀರಿದರೆ 12%

ಕನಿಷ್ಠ ಪರಿಹಾರ ಎಂದರೇನು?

ಸರ್‌ಚಾರ್ಜ್ ಇಂದ ಈ ಕೆಳಗಿನ ವಿಧಾನದಲ್ಲಿ ಕನಿಷ್ಠ ಪರಿಹಾರ ಲಭ್ಯವಿರುತ್ತದೆ:

  • ನಿವ್ವಳ ಆದಾಯವು ₹ 1 ಕೋಟಿ ಮೀರಿದರೆ, ಆದಾಯ ತೆರಿಗೆ ಮತ್ತು ಸರ್ಚಾರ್ಜ್ ಆಗಿ ಪಾವತಿಸಬೇಕಾದ ಮೊತ್ತವು ₹ 1 ಕೋಟಿ ಮೀರಿದ ಆದಾಯದ ಮೊತ್ತಕ್ಕಿಂತ ಹೆಚ್ಚು ಒಟ್ಟು ₹ 1 ಕೋಟಿ ಆದಾಯ ತೆರಿಗೆಯಾಗಿ ಪಾವತಿಸಬೇಕಾದ ಒಟ್ಟು ಮೊತ್ತವನ್ನು ಮೀರಬಾರದು.

ಆರೋಗ್ಯ ಮತ್ತು ಶಿಕ್ಷಣ ಸೆಸ್ ಎಂದರೇನು?

ಆರೋಗ್ಯ ಮತ್ತು ಶಿಕ್ಷಣ ಸೆಸ್ @ 4% ಅನ್ನು ಆದಾಯ ತೆರಿಗೆ ಮತ್ತು ಹೆಚ್ಚುವರಿ ಶುಲ್ಕದ ಮೊತ್ತದ ಮೇಲೆ ಪಾವತಿಸಲಾಗುತ್ತದೆ (ಯಾವುದಾದರೂ ಇದ್ದರೆ)

 

ಗಮನಿಸಿ: ಸಾಮಾನ್ಯ ತೆರಿಗೆ ಹೊಣೆಗಾರಿಕೆಯು ಬುಕ್ ಪ್ರಾಫಿಟ್‌ನ 18.5% ಕ್ಕಿಂತ ಕಡಿಮೆಯಿದ್ದರೆ, ಒಂದು ಸಂಸ್ಥೆ/LLP ಬುಕ್ ಪ್ರಾಫಿಟ್‌ನ 18.5% ರಷ್ಟು (ಅನ್ವಯವಾಗುವ ಸರ್‌ಚಾರ್ಜ್ ಮತ್ತು ಆರೋಗ್ಯ ಮತ್ತು ಶಿಕ್ಷಣ ಸೆಸ್ ಜೊತೆಗೆ) AMT (ಪರ್ಯಾಯ ಕನಿಷ್ಠ ತೆರಿಗೆ) ಪಾವತಿಸಬೇಕಾಗುತ್ತದೆ.

 

 

ನಾನು ತೆರಿಗೆ ಪ್ರಯೋಜನವನ್ನು ಪಡೆಯಬಹುದಾದ ಹೂಡಿಕೆಗಳು / ಪಾವತಿಗಳು / ಆದಾಯಗಳು


ಆದಾಯ ತೆರಿಗೆ ಕಾಯ್ದೆಯ VIA ಅಧ್ಯಾಯದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ತೆರಿಗೆ ಕಡಿತಗಳು

ಸೆಕ್ಷನ್ 80G

ನಿಗದಿತ ನಿಧಿಗಳು, ದತ್ತಿ ಸಂಸ್ಥೆಗಳು ಇತ್ಯಾದಿಗಳಿಗೆ ಮಾಡಿದ ದೇಣಿಗೆಗಳ ಮೇಲಿನ ಕಡಿತ.

ಕೆಳಗಿನ ವರ್ಗಗಳ ಅಡಿಯಲ್ಲಿ ನೀಡಿದ ದೇಣಿಗೆಯು ಕಡಿತಕ್ಕೆ ಅರ್ಹವಾಗಿರುತ್ತದೆ

ಅರ್ಹತಾ ಮಿತಿಗೆ ಒಳಪಟ್ಟಿರುತ್ತದೆ

 

ದೇಣಿಗೆಗಳ 100%

ದೇಣಿಗೆಗಳ 50%

ಯಾವುದೇ ಮಿತಿಯಿಲ್ಲದೆ

 

ದೇಣಿಗೆಗಳ 100%

ದೇಣಿಗೆಗಳ 50%



ಗಮನಿಸಿ: ₹ 2000/- ಮೀರಿದ ನಗದು ರೂಪದಲ್ಲಿ ಮಾಡಿದ ದೇಣಿಗೆಗೆ ಸಂಬಂಧಿಸಿದಂತೆ ಈ ಸೆಕ್ಷನ್ ಅಡಿಯಲ್ಲಿ ಯಾವುದೇ ಕಡಿತವನ್ನು ಅನುಮತಿಸಲಾಗುವುದಿಲ್ಲ

 

ಸೆಕ್ಷನ್ 80GGA

ವೈಜ್ಞಾನಿಕ ಸಂಶೋಧನೆ ಅಥವಾ ಗ್ರಾಮೀಣ ಅಭಿವೃದ್ಧಿಗಾಗಿ ನೀಡಿದ ದೇಣಿಗೆಗಳ ಮೇಲಿನ ಕಡಿತ

ದೇಣಿಗೆಗಳು ಈ ಕೆಳಗಿನ ವರ್ಗಗಳ ಅಡಿಯಲ್ಲಿ ಕಡಿತಕ್ಕೆ ಅರ್ಹವಾಗುತ್ತವೆ

ಕೆಳಗಿನ ಉದ್ದೇಶಗಳಿಗಾಗಿ ಇರುವ ಸಂಶೋಧನಾ ಸಂಘ ಅಥವಾ ವಿಶ್ವವಿದ್ಯಾಲಯ, ಕಾಲೇಜು ಅಥವಾ ಇತರ ಸಂಸ್ಥೆ

  • ವೈಜ್ಞಾನಿಕ ಸಂಶೋಧನೆ
  • ಸಾಮಾಜಿಕ ವಿಜ್ಞಾನ ಅಥವಾ ಸಂಖ್ಯಾಶಾಸ್ತ್ರೀಯ ಸಂಶೋಧನೆ

ಕೆಳಗಿನ ಉದ್ದೇಶಕ್ಕಾಗಿ ಇರುವ ಸಂಘ ಅಥವಾ ಸಂಸ್ಥೆ

  • ಗ್ರಾಮೀಣಾಭಿವೃದ್ಧಿ
  • ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಅಥವಾ ಅರಣ್ಯೀಕರಣಕ್ಕಾಗಿ

ಯಾವುದೇ ಅರ್ಹ ಯೋಜನೆಯನ್ನು ಕೈಗೊಳ್ಳಲು PSU ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ರಾಷ್ಟ್ರೀಯ ಸಮಿತಿಯು ಅನುಮೋದಿಸಿದ ಸಂಘ ಅಥವಾ ಸಂಸ್ಥೆ

ಈ ಕೆಳಗಿನ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ ಸೂಚಿತ ನಿಧಿ

  • ಅರಣ್ಯೀಕರಣ
  • ಗ್ರಾಮೀಣಾಭಿವೃದ್ಧಿ

ಕೇಂದ್ರ ಸರ್ಕಾರದಿಂದ ಸ್ಥಾಪಿಸಿದ ಹಾಗು ಸೂಚಿಸಲಾದ ರಾಷ್ಟ್ರೀಯ ನಗರ ಬಡತನ ನಿರ್ಮೂಲನೆ ನಿಧಿ

 

ಗಮನಿಸಿ: ₹ 2000/- ಕ್ಕಿಂತ ಹೆಚ್ಚಿನ ನಗದು ರೂಪದಲ್ಲಿ ನೀಡಿದ ದೇಣಿಗೆಗೆ ಸಂಬಂಧಿಸಿದಂತೆ ಅಥವಾ ಒಟ್ಟು ಒಟ್ಟು ಆದಾಯವು ಲಾಭ / ವ್ಯವಹಾರ / ವೃತ್ತಿಯ ಗಳಿಕೆಯನ್ನು ಒಳಗೊಂಡಿದ್ದರೆ ಈ ಸೆಕ್ಷನ್ ಅಡಿಯಲ್ಲಿ ಯಾವುದೇ ಕಡಿತವನ್ನು ಅನುಮತಿಸಲಾಗುವುದಿಲ್ಲ.

 

ಸೆಕ್ಷನ್ 80GGC

ರಾಜಕೀಯ ಪಕ್ಷ ಅಥವಾ ಚುನಾವಣಾ ಟ್ರಸ್ಟ್‌ಗೆ ಕೊಡುಗೆ ನೀಡಿದ ಮೊತ್ತವನ್ನು ಕಡಿತವಾಗಿ ಅನುಮತಿಸಲಾಗಿದೆ

(ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ)

 

ನಗದು ಹೊರತುಪಡಿಸಿ ಬೇರೆ ಯಾವುದೇ ವಿಧಾನದ ಮೂಲಕ ಪಾವತಿಸಿದ ಒಟ್ಟು ಮೊತ್ತದ ಕಡಿತ

 

ಸೆಕ್ಷನ್ 80IA

 

ಇಂಡಸ್ಟ್ರಿಯಲ್ ಪಾರ್ಕ್‌ಗಳಲ್ಲಿ ತೊಡಗಿಸಿಕೊಂಡಿರುವ ಅಂಡರ್‌ಟೇಕಿಂಗ್ (ಯಾವುದೇ ಉದ್ಯಮ), ಮತ್ತು ಯಾವುದೇ ಪವರ್ ಅಂಡರ್‌ಟೇಕಿಂಗ್ ಕಡಿತವನ್ನು ಪಡೆಯಲು ಅರ್ಹವಾಗಿರುತ್ತದೆ (ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ)

 

15 AY ಗಳ ಅವಧಿಯಲ್ಲಿ ಬರುವ 10 ಸತತ AY ಗಳಿಗೆ ಲಾಭದ 100% .

(ನಿಗದಿತ ವ್ಯವಹಾರಕ್ಕಾಗಿ ನಿರ್ದಿಷ್ಟಪಡಿಸಿದ ದಿನಾಂಕಗಳ ನಂತರ, ಅಭಿವೃದ್ಧಿ, ಕಾರ್ಯಾಚರಣೆ ಇತ್ಯಾದಿಗಳನ್ನು ಪ್ರಾರಂಭಿಸಿದರೆ ಯಾವುದೇ ಕಡಿತವನ್ನು ಅನುಮತಿಸಲಾಗುವುದಿಲ್ಲ)

 
 

 

ಸೆಕ್ಷನ್ 80IAB

 

ವಿಶೇಷ ಆರ್ಥಿಕ ವಲಯದ ಅಭಿವೃದ್ಧಿಯಲ್ಲಿ ತೊಡಗಿರುವ ಉದ್ಯಮ ಅಥವಾ ಉದ್ದಿಮೆಯಿಂದ ಬಂದ ಗಳಿಕೆಗಳು ಮತ್ತು ಲಾಭಗಳಿಗೆ ಸಂಬಂಧಿಸಿದಂತೆ ಕಡಿತ

(ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ)

 

ಕೇಂದ್ರ ಸರ್ಕಾರವು ವಿಶೇಷ ಆರ್ಥಿಕ ವಲಯವನ್ನು ಅಧಿಸೂಚಿಸಿದ ವರ್ಷದಿಂದ ಪ್ರಾರಂಭಿಸಿ 15 AY ಗಳ ಅವಧಿಯಲ್ಲಿ ಸತತ 10 AY ಗಳ ಲಾಭದ 100%.

ವಿಶೇಷ ಆರ್ಥಿಕ ವಲಯದ ಅಭಿವೃದ್ಧಿಯು ಏಪ್ರಿಲ್ 1, 2017ರಂದು ಅಥವಾ ನಂತರ ಪ್ರಾರಂಭವಾಗಿದ್ದರೆ ತೆರಿಗೆದಾರರಿಗೆ ಯಾವುದೇ ಕಡಿತವಿಲ್ಲ.

 
 

 

ಸೆಕ್ಷನ್ 80IAC

ನಿರ್ದಿಷ್ಟ ವ್ಯವಹಾರದಿಂದ ಬರುವ ಅರ್ಹವಾದ ಸ್ಟಾರ್ಟ್-ಅಪ್‌ನಿಂದ ಪಡೆದ ಲಾಭ ಮತ್ತು ಗಳಿಗೆಗಳು

ಅರ್ಹ ಸ್ಟಾರ್ಟ್-ಅಪ್ ಅನ್ನು ಸಂಯೋಜಿಸಿದ ವರ್ಷದಿಂದ ಪ್ರಾರಂಭಿಸಿ 10 AY ಗಳಲ್ಲಿ 3 ಸತತ AY ಗಳಿಗೆ ಲಾಭದ 100%.

 

ಸೆಕ್ಷನ್ 80IB

ಮೂಲಸೌಕರ್ಯ ಅಭಿವೃದ್ಧಿ ಉದ್ಯಮಗಳನ್ನು ಹೊರತುಪಡಿಸಿ ನಿರ್ದಿಷ್ಟ ಕೈಗಾರಿಕಾ ಉದ್ಯಮಗಳಿಂದ ಲಾಭ ಮತ್ತು ಲಾಭಗಳ ಮೇಲಿನ ಕಡಿತ-ನಿಗದಿತ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ AY ಯಿಂದ 10 ವರ್ಷಗಳವರೆಗೆ ಲಾಭದ 100% (ಮಾರ್ಚ್ 31, 2000 ರ ನಂತರ ಆದರೆ ಏಪ್ರಿಲ್ 1, 2007 ರ ಮೊದಲು ಅನುಮೋದಿಸಲ್ಪಟ್ಟಿದ್ದರೆ).

ಈ ಸೆಕ್ಷನ್ ಅಡಿಯಲ್ಲಿ ಕಡಿತವು ಮೌಲ್ಯಮಾಪಿತರಿಗೆ ಲಭ್ಯವಿದೆ, ಅವರ ಒಟ್ಟು ಆದಾಯವು ವ್ಯವಹಾರದಿಂದ ಪಡೆದ ಯಾವುದೇ ಲಾಭ ಮತ್ತು ಗಳಿಕೆಗಳನ್ನು ಒಳಗೊಂಡಿರುತ್ತದೆ:

ಜಮ್ಮು ಮತ್ತು ಕಾಶ್ಮೀರದಲ್ಲಿ SSI ಸೇರಿದಂತೆ ಕೈಗಾರಿಕಾ ಉದ್ಯಮ

ಖನಿಜ ತೈಲದ ವಾಣಿಜ್ಯ ಉತ್ಪಾದನೆ ಮತ್ತು ಸಂಸ್ಕರಣೆ

ಹಣ್ಣುಗಳು ಅಥವಾ ತರಕಾರಿಗಳ‌, ಮಾಂಸ ಮತ್ತು ಮಾಂಸೋತ್ಪನ್ನಗಳ ಅಥವಾ ಕೋಳಿ ಸಾಕಣೆ ಅಥವಾ ಸಮುದ್ರ ಅಥವ ಹೈನುಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಸಂರಕ್ಷಣೆ ಮತ್ತು ಪ್ಯಾಕೇಜಿಂಗ್

ಆಹಾರ ಧಾನ್ಯಗಳ ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಣಿಕೆಯ ಸಂಯೋಜಿತ ವ್ಯವಹಾರ

(ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ)

 

ವಿವಿಧ ರೀತಿಯ ಉದ್ಯಮಗಳಿಗೆ ನಿರ್ದಿಷ್ಟಪಡಿಸಿದ ಷರತ್ತುಗಳ ಪ್ರಕಾರ 5 / 10/7 ವರ್ಷಗಳವರೆಗೆ ಲಾಭದ 100 / 25%

 

ಸೆಕ್ಷನ್ 80IBA

ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸುವುದರಿಂದ ಮತ್ತು ನಿರ್ಮಿಸುವುದರಿಂದ ಪಡೆದ ಲಾಭ ಮತ್ತು ಗಳಿಕೆಗಳು

ನಿರ್ದಿಷ್ಟಪಡಿಸಿದ ವಿವಿಧ ಷರತ್ತುಗಳಿಗೆ ಒಳಪಟ್ಟು ಲಾಭದ 100

 

ಸೆಕ್ಷನ್ 80IC

ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಾಂಚಲ್ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಕೆಲವು ಉದ್ಯಮಗಳಿಗೆ ಸಂಬಂಧಿಸಿದಂತೆ ಕಡಿತ

(ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ)

ನಿರ್ದಿಷ್ಟ ವಸ್ತು ಅಥವಾ ವಸ್ತುವನ್ನು ತಯಾರಿಸಲು ಅಥವಾ ಉತ್ಪಾದಿಸಲು ಮೊದಲ 5 AY ಗಳ ಲಾಭದ 100% ಮತ್ತು ಮುಂದಿನ 5 AY ಗಳ ಲಾಭದ 25% (ಕಂಪನಿಗೆ 30%)

 

ಸೆಕ್ಷನ್ 80IE

ಈಶಾನ್ಯ ರಾಜ್ಯಗಳಲ್ಲಿ ಸ್ಥಾಪಿಸಲಾದ ಕೆಲವು ಸಂಸ್ಥೆಗಳಿಗೆ ಕಡಿತ

(ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ)

ನಿರ್ದಿಷ್ಟಪಡಿಸಿದ ವಿವಿಧ ಷರತ್ತುಗಳಿಗೆ ಒಳಪಟ್ಟು 10 AY ಗೆ ಲಾಭದ 100%

 

ಸೆಕ್ಷನ್ 80JJA

ಜೈವಿಕ ವಿಘಟನೀಯ ತ್ಯಾಜ್ಯವನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ವ್ಯವಹಾರದಿಂದ ಲಾಭ ಮತ್ತು ಗಳಿಕೆಗಳಿಗೆ ಸಂಬಂಧಿಸಿದಂತೆ ಕಡಿತ

(ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ)

ಸತತ 5 AY ಗಳಿಗೆ ಜೈವಿಕ ವಿಘಟನೀಯ ತ್ಯಾಜ್ಯವನ್ನು ಸಂಗ್ರಹಿಸುವ, ಸಂಸ್ಕರಿಸುವ ಮತ್ತು ಪೋಷಿಸುವ ಚಟುವಟಿಕೆಯಿಂದ ಲಾಭದ 100%.

 

ಸೆಕ್ಷನ್ 80JJAA

ಹೊಸ ಕಾರ್ಮಿಕರು / ಉದ್ಯೋಗಿಗಳ ಉದ್ಯೋಗಕ್ಕೆ ಸಂಬಂಧಿಸಿದಂತೆ ಕಡಿತ, ಸೆಕ್ಷನ್ 44AB ಅನ್ವಯಿಸುವ ತೆರಿಗೆದಾರರಿಗೆ ಅನ್ವಯಿಸುತ್ತದೆ.

(ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ)

ಕೆಲವು ಷರತ್ತುಗಳಿಗೆ ಒಳಪಟ್ಟು 3 AY ಗಳಿಗೆ ಹೆಚ್ಚುವರಿ ಉದ್ಯೋಗಿ ವೆಚ್ಚದ 30%,

 

ಸೆಕ್ಷನ್ 80LA

ಕಡಲಾಚೆಯ ಬ್ಯಾಂಕಿಂಗ್ ಘಟಕಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದ ಆದಾಯಕ್ಕೆ ಕಡಿತ

(ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ)

ನಿರ್ದಿಷ್ಟಪಡಿಸಿದ ಷರತ್ತುಗಳ ಪ್ರಕಾರ 5 / 10 AY ಗಳಿಗೆ ನಿರ್ದಿಷ್ಟಪಡಿಸಿದ ಆದಾಯದ 100% / 50%

ಪುಟವನ್ನು ಕೊನೆಯದಾಗಿ ಪರಿಶೀಲಿಸಲಾಗಿದೆ ಅಥವಾ ನವೀಕರಿಸಲಾಗಿದೆ: