API ವಿಶೇಷಣಗಳು
ತೆರಿಗೆ ರಿಟರ್ನ್ ತಯಾರಿ ಮತ್ತು ಸಲ್ಲಿಕೆಗಾಗಿ ERI ಗಳಿಗೆ ಅಗತ್ಯವಿರುವ API ಗಳ ಕುರಿತು ಸಂಕ್ಷಿಪ್ತ ಮಾಹಿತಿ. ಎಲ್ಲಾ ಲಾಗಿನ್ ನಂತರದ ಸೇವೆಗಳಿಗೆ ಲಾಗಿನ್ API ಅನ್ನು ಬಳಸಿಕೊಂಡು ಬಳಕೆದಾರರು ಸಂವಹನವನ್ನು ಸ್ಥಾಪಿಸಬೇಕು.
API ಲಾಗಿನ್ ಗಳನ್ನು ಬಳಸಿಕೊಂಡು ಇ-ಫೈಲಿಂಗ್ ಸಿಸ್ಟಮ್‌ನೊಂದಿಗೆ ERIಗಳು ಸಂವಹನವನ್ನು ಸ್ಥಾಪಿಸಬಹುದು ಮತ್ತು ಹಾಗೆ ಸ್ಥಾಪಿಸಿದ ಸಂವಹನವನ್ನು ಪ್ರಾಂಭಿಸಬಹುದು. ಟೈಪ್-2 ERI ಗಳು ತಮ್ಮದೇ ಆದ ರುಜುವಾತುಗಳಾದ ERI ಯೂಸರ್ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಸೆಷನ್ ಅನ್ನು ರಚಿಸಬೇಕು.
ನೋಂದಾಯಿತ ಇ-ಫೈಲಿಂಗ್ ಬಳಕೆದಾರರನ್ನು ಗ್ರಾಹಕರಾಗಿ ಸೇರಿಸಲು ಮತ್ತು ಟೈಪ್-2 ERI ಗಾಗಿ ನೋಂದಾಯಿಸದ ಬಳಕೆದಾರರನ್ನು ಗ್ರಾಹಕರಾಗಿ ನೋಂದಾಯಿಸಲು ಮತ್ತು ಸೇರಿಸಲು. ಗ್ರಾಹಕರನ್ನು ಸೇರಿಸಲು ತೆರಿಗೆದಾರರ ಒಪ್ಪಿಗೆಯ ಅಗತ್ಯವಿದೆ.
ರಿಟರ್ನ್ ಫೈಲಿಂಗ್‌ಗಾಗಿ ಸೇರಿಸಲಾದ ಗ್ರಾಹಕರಲ್ಲಿ ಪೂರ್ವಭರ್ತಿ ವಿವರಗಳನ್ನು ಪಡೆಯುವುದಕ್ಕಾಗಿ. ಪೂರ್ವಭರ್ತಿ ವಿವರಗಳಿಗಾಗಿ ತೆರಿಗೆದಾರರ ಒಪ್ಪಿಗೆಯ ಅಗತ್ಯವಿದೆ.
ಸಲ್ಲಿಸಿದ ರಿಟರ್ನ್ ಅನ್ನು ಮೌಲ್ಯೀಕರಿಸಲು ಮತ್ತು ಮೌಲ್ಯೀಕರಣ ಯಶಸ್ವಿಯಾದರೆ ಇ-ಫೈಲಿಂಗ್ ಸಿಸ್ಟಂಗೆ ಸಲ್ಲಿಸಲು.
ನೋಂದಾಯಿತ ಗ್ರಾಹಕರು ಈಗಾಗಲೇ ತಾವು ಟೈಪ್-2 ERI ಮೂಲಕ ಫೈಲ್ ಮಾಡಿದ ರಿಟರ್ನ್ ಅನ್ನು ಇ-ವೆರಿಫೈ ರಿಟರ್ನ್ ಮೂಲಕ ವಿದ್ಯುನ್ಮಾನವಾಗಿ ಪರಿಶೀಲಿಸಬಹುದು.
ಟೈಪ್-2 ERI ಮೂಲಕ ರಿಟರ್ನ್ ಸಲ್ಲಿಸಿದ ಮತ್ತು ರಿಟರ್ನ್ ಅನ್ನು -ಇ-ಪರಿಶೀಲಿಸಿದ ನೋಂದಾಯಿತ ಗ್ರಾಹಕರ ಹೆಸರನ್ನು ಸೇರಿಸಲಾಗಿದ್ದು, ಅಂತಹ ಗ್ರಾಹಕರು ಸ್ವೀಕೃತಿ ದೃಢೀಕರಣ ನಮೂನೆಗಾಗಿ ವಿನಂತಿಸಬಹುದು.