Do not have an account?
Already have an account?

1. ಫಾರ್ಮ್‌ 10-IEA ಯಾವ ಮೌಲ್ಯಮಾಪನ ವರ್ಷದಿಂದ ಅನ್ವಯಿಸುತ್ತದೆ?

21ನೇ ಜೂನ್‌ 2023ರ ಅಧಿಸೂಚನೆ ಸಂಖ್ಯೆ 43/2023ರ ಮೂಲಕ ಅಧಿಸೂಚಿಸಲಾದ ಫಾರ್ಮ್‌ 10-IEA, ಮೌಲ್ಯಮಾಪನ ವರ್ಷ 2024-25ರಿಂದ ಅನ್ವಯಿಸುತ್ತದೆ ಅಂದರೆ ನಿರ್ಧರಣೆ ವರ್ಷ 2024-25 ಮತ್ತು ಮುಂದಿನ ವರ್ಷಗಳಿಗೆ ಅನ್ವಯಿಸುತ್ತದೆ.

2. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಫಾರ್ಮ್‌ 10-IEA ಅನ್ನು ಯಾರು ಸಲ್ಲಿಸಬಹುದು?

ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ (HUF), ವ್ಯಕ್ತಿಗಳ ಸಂಘ (ಸಹಕಾರ ಸಂಘವನ್ನು ಹೊರತುಪಡಿಸಿ), ವ್ಯಕ್ತಿಗಳ ಸಮೂಹ (BOI), ಹಾಗೂ ಆದಾಯ ತೆರಿಗೆ ಕಾಯಿದೆ 2025ರ ಸೆಕ್ಷನ್ 2(31)(vii)ರಲ್ಲಿ ಉಲ್ಲೇಖಿಸಲಾದ ಕೃತಕ ನ್ಯಾಯಿಕ ವ್ಯಕ್ತಿ (AJP), ವ್ಯಾಪಾರ ಅಥವಾ ವೃತ್ತಿಯಿಂದ ಆದಾಯ ಹೊಂದಿದ್ದಲ್ಲಿ ಈ ಫಾರ್ಮ್ ಅನ್ನು ಸಲ್ಲಿಸಬಹುದು.

3. ನಾನು ಫಾರ್ಮ್‌ 10-IEA ಅನ್ನು ಏಕೆ ಸಲ್ಲಿಸಬೇಕು?

ನೀವು ಹೊಸ ತೆರಿಗೆ ಪದ್ಧತಿಯಿಂದ ಹೊರಬರಲು / ಪುನಃ ಪ್ರವೇಶಿಸಲು ಬಯಸಿದರೆ ಮತ್ತು "ವ್ಯವಹಾರ ಅಥವಾ ವೃತ್ತಿಯಿಂದ ಲಾಭಗಳು ಮತ್ತು ಗಳಿಕೆಗಳು" ಶೀರ್ಷಿಕೆಯ ಅಡಿಯಲ್ಲಿ ಆದಾಯವನ್ನು ಹೊಂದಿದ್ದರೆ, ನೀವು ಫಾರ್ಮ್‌ 10-IEA ಅನ್ನು ಸಲ್ಲಿಸಬೇಕಾಗುತ್ತದೆ.

4. ಫಾರ್ಮ್‌ 10-IEA ಅನ್ನು ಯಾವ ವಿಧಾನಗಳಲ್ಲಿ ಸಲ್ಲಿಸಬಹುದು?

ಫಾರ್ಮ್‌ 10-IEA ಅನ್ನು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕವೇ ಮಾತ್ರ ಸಲ್ಲಿಸಬಹುದು.

5. ಫಾರ್ಮ್‌ 10-IEA ಅನ್ನು ಇ-ಪರಿಶೀಲನೆ ಮಾಡುವುದು ಹೇಗೆ?

ತೆರಿಗೆದಾರರು ಆಧಾರ್ OTP, EVC ಅಥವಾ DSC ಬಳಸಿಕೊಂಡು ಫಾರ್ಮ್‌ ಅನ್ನು ಇ-ಪರಿಶೀಲನೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಇ-ಪರಿಶೀಲನೆ ಮಾಡುವುದು ಹೇಗೆ ಬಳಕೆದಾರರ ಕೈಪಿಡಿಯನ್ನು ನೋಡಿ. (link for user manual should be provided here).

6. ನನ್ನ ಪರವಾಗಿ ಫಾರ್ಮ್‌ 10-IEA ಅನ್ನು ಸಲ್ಲಿಸಲು ನಾನು ಅಧಿಕೃತ ಪ್ರತಿನಿಧಿಯನ್ನು ಸೇರಿಸಬಹುದೇ?

ಉತ್ತರ: ಹೌದು, ನಿಮ್ಮ ಪರವಾಗಿ ಫಾರ್ಮ್‌ 10-IEA ಅನ್ನು ಸಲ್ಲಿಸಲು ನೀವು ಅಧಿಕೃತ ಪ್ರತಿನಿಧಿಯನ್ನು ಸೇರಿಸಬಹುದು. ಹೆಚ್ಚಿನ ಮಾಹಿತಿಗಾಗಿ 'ಅಧಿಕಾರ ನೀಡಿ / ಪ್ರತಿನಿಧಿ ಬಳಕೆದಾರರಾಗಿ ನೋಂದಾಯಿಸಿ ಕೈಪಿಡಿ' ಅನ್ನು ನೋಡಿ. (ಬಳಕೆದಾರರ ಕೈಪಿಡಿಯ ಲಿಂಕನ್ನು ಇಲ್ಲಿ ಒದಗಿಸಬೇಕು.)

7. ಫಾರ್ಮ್‌ 10-IEA ಅನ್ನು ಸಲ್ಲಿಸಲು ನಿಗದಿಪಡಿಸಿರುವ ಕಾಲಮಿತಿಯು ಎಷ್ಟು?

ಫಾರ್ಮ್‌ 10-IEA ಅನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್‌ 139(1) ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕದಂದು ಅಥವಾ ಅದಕ್ಕೂ ಮೊದಲು ಸಲ್ಲಿಸಬೇಕು. ತೆರಿಗೆದಾರರು ಅಂತಿಮ ದಿನಾಂಕದ ನಂತರ ಫಾರ್ಮ್‌ ಅನ್ನು ಸಲ್ಲಿಸಿದರೆ, ಆ ಫಾರ್ಮ್‌ ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ.

8. ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರ ನಾನು ಫಾರ್ಮ್‌ 10-IEA ಅನ್ನು ಸಲ್ಲಿಸಬಹುದೇ?

ಫಾರ್ಮ್‌ 10-IEA ಸಲ್ಲಿಕೆಯ ಪ್ರಯೋಜನವನ್ನು ಪಡೆಯಲು, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಫಾರ್ಮ್‌ ಅನ್ನು ಸಲ್ಲಿಸುವುದು ಸೂಕ್ತವಾಗಿದೆ. ಸಲ್ಲಿಸಲಾದ ಫಾರ್ಮ್‌ 10-IEA ರ ಸ್ವೀಕೃತಿ ಸಂಖ್ಯೆ ಮತ್ತು ಸಲ್ಲಿಸಿದ ದಿನಾಂಕವನ್ನು ಆದಾಯ ತೆರಿಗೆ ರಿಟರ್ನ್‌ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.

9. ಫಾರ್ಮ್‌ 10-IEA ಅನ್ನು ಸಲ್ಲಿಸುವಾಗ, ಪರಿಶೀಲನೆ ಟ್ಯಾಬ್‌ನ ಅಡಿಯಲ್ಲಿ ಹುದ್ದೆಯು ಪೂರ್ವ-ಭರ್ತಿಯಾಗುತ್ತಿಲ್ಲ. ನಾನು ಏನು ಮಾಡಬೇಕು?

"ನನ್ನ ಪ್ರೊಫೈಲ್‌" ವಿಭಾಗದ ಅಡಿಯಲ್ಲಿ "ಪ್ರಮುಖ ವ್ಯಕ್ತಿಯ ವಿವರಗಳು" ಅನ್ನು ನವೀಕರಿಸಲು ನಿಮ್ಮನ್ನು ವಿನಂತಿಸಲಾಗುತ್ತದೆ. ಇ-ಸಲ್ಲಿಕೆ ಪೋರ್ಟಲ್‌ಗೆ ಮರು-ಲಾಗಿನ್ ಮಾಡಿ ಮತ್ತು ಮತ್ತೆ ಪ್ರಯತ್ನಿಸಿ.

10. ನನಗೆ ಯಾವುದೇ ವ್ಯವಹಾರ ಆದಾಯವಿಲ್ಲ. ಫಾರ್ಮ್‌ 10-IEA ಅನ್ನು ಸಲ್ಲಿಸುವಾಗ, "ನಿರ್ಧರಣೆ ವರ್ಷದ ಅವಧಿಯಲ್ಲಿ 'ವ್ಯವಹಾರ ಅಥವಾ ವೃತ್ತಿಯಿಂದ ಲಾಭ ಮತ್ತು ಗಳಿಕೆಗಳು" ಎಂಬ ಶೀರ್ಷಿಕೆಯ ಅಡಿಯಲ್ಲಿ ನಿಮಗೆ ಆದಾಯವಿದೆಯೇ?" ಎಂಬ ಪ್ರಶ್ನೆಗೆ "ಇಲ್ಲ" ಎಂದು ಆಯ್ಕೆ ಮಾಡಿದರೆ, ನನಗೆ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ನಾನು ಏನು ಮಾಡಬೇಕು?

ನೀವು ಯಾವುದೇ ವ್ಯವಹಾರ ಆದಾಯವನ್ನು ಹೊಂದಿರದಿದ್ದರೆ ಮತ್ತು ITR 1 / ITR 2 ಅನ್ನು ಸಲ್ಲಿಸಬೇಕಾಗಿದ್ದರೆ, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್‌ 115BAC(1A) ರ ಅಡಿಯಲ್ಲಿ ಹೊಸ ತೆರಿಗೆ ವ್ಯವಸ್ಥೆಯಿಂದ ಹೊರಬರಲು/ಮರುಪ್ರವೇಶಿಸಲು ಫಾರ್ಮ್‌ 10-IEA ಅನ್ನು ಸಲ್ಲಿಸುವ ಅಗತ್ಯವಿಲ್ಲ. ಅಂತಹ ಸಂದರ್ಭದಲ್ಲಿ, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್‌ 139(1) ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಅಂತಿಮ ದಿನಾಂಕದಂದು ಅಥವಾ ಅದಕ್ಕೂ ಮೊದಲು ಸಂಬಂಧಿತ ITR ಫಾರ್ಮ್‌ (ITR 1 / ITR 2) ಅನ್ನು ಸಲ್ಲಿಸುವಾಗಲೇ ಈ ಆಯ್ಕೆಯನ್ನು ಬಳಸಬಹುದು.

11. "ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅನ್ವಯವಾಗುವ ಅಂತಿಮ ದಿನಾಂಕ" ಎಂಬುದಕ್ಕೆ ನಾನು ಏನನ್ನು ಆಯ್ಕೆ ಮಾಡಬೇಕು?

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್‌ 139(1) ರ ಅಡಿಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅನ್ವಯವಾಗುವ ಅಂತಿಮ ದಿನಾಂಕವನ್ನು ನೀವು ಆಯ್ಕೆ ಮಾಡಬೇಕು. ಪರದೆಯಲ್ಲಿ ಲಭ್ಯವಿರುವ 'ಸಹಾಯ ದಾಖಲೆ' ಅನ್ನು ಉಲ್ಲೇಖಿಸಿ, ಫಾರ್ಮ್‌ 10-IEA ಅನ್ನು ಸಲ್ಲಿಸಲು ಅನ್ವಯವಾಗುವ ಆಯ್ಕೆಯನ್ನು ಆಯ್ಕೆ ಮಾಡಿ.

12. ಹೊಸ ತೆರಿಗೆ ವ್ಯವಸ್ಥೆಯಿಂದ 'ಹೊರಬರಲು' ನಾನು ಪ್ರತಿವರ್ಷ ಫಾರ್ಮ್‌ 10-IEA ಅನ್ನು ಸಲ್ಲಿಸಬೇಕೇ?

ಒಂದು ವೇಳೆ ನೀವು(ವ್ಯವಹಾರ/ವೃತ್ತಿ ಆದಾಯ ಹೊಂದಿರುವ ವ್ಯಕ್ತಿ) ಹಿಂದಿನ ಮೌಲ್ಯಮಾಪನ ವರ್ಷದಲ್ಲಿ ಹೊಸ ತೆರಿಗೆ ವ್ಯವಸ್ಥೆಯಿಂದ 'ಹೊರಬಂದಿದ್ದರೆ' ಮತ್ತು ITRನಲ್ಲಿ ಹಳೆಯ ತೆರಿಗೆ ವ್ಯವಸ್ಥೆಯನ್ನು ಮುಂದುವರಿಸಲು ಬಯಸಿದರೆ, ಪ್ರತಿವರ್ಷ ಫಾರ್ಮ್‌ 10-IEA ಅನ್ನು ಸಲ್ಲಿಸುವ ಅಗತ್ಯವಿಲ್ಲ. ಆದರೆ, ವ್ಯವಹಾರ/ವೃತ್ತಿ ಆದಾಯವಿಲ್ಲದ ವ್ಯಕ್ತಿಗಳು ಪ್ರತಿ ವರ್ಷ ITR ನಲ್ಲಿಯೇ ನೇರವಾಗಿ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಬಹುದು.

13. ಫಾರ್ಮ್‌ 10-IEA ನನಗೆ ಅನ್ವಯವಾಗುತ್ತದೆ ಮತ್ತು ಈಗ ನಾನು ನನ್ನ ITR ನಲ್ಲಿ ಹಳೆಯ ತೆರಿಗೆ ವ್ಯವಸ್ಥೆಯ ಆಯ್ಕೆಯನ್ನು ಹಿಂಪಡೆಯಲು ಬಯಸುತ್ತೇನೆ. ಇದಕ್ಕಾಗಿ ಅನುಸರಿಸಬೇಕಾದ ವಿಧಾನವೇನು?

ನೀವು ಹಿಂದಿನ ಮೌಲ್ಯಮಾಪನ ವರ್ಷದಲ್ಲಿ ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಈಗ ಹೊಸ ತೆರಿಗೆ ವ್ಯವಸ್ಥೆಗೆ 'ಮರುಪ್ರವೇಶಿಸಲು' ಬಯಸಿದರೆ, ಪ್ರಸ್ತುತ ಮೌಲ್ಯಮಾಪನ ವರ್ಷದಿಂದ ಆ ಆಯ್ಕೆಯನ್ನು ಹಿಂಪಡೆಯಲು ಫಾರ್ಮ್‌ 10-IEA ಅನ್ನು ಸಲ್ಲಿಸಬೇಕು.

14. ನಾನು ಹಿಂದಿನ ಮೌಲ್ಯಮಾಪನ ವರ್ಷದಲ್ಲಿ ಮರುಪ್ರವೇಶದ ಆಯ್ಕೆಯೊಂದಿಗೆ ಫಾರ್ಮ್‌ 10-IEA ಅನ್ನು ಸಲ್ಲಿಸುವ ಮೂಲಕ ಹಳೆಯ ತೆರಿಗೆ ವ್ಯವಸ್ಥೆಯಿಂದ ಹೊರಬಂದಿದ್ದೇನೆ. ಈಗ ನಾನು ಫಾರ್ಮ್‌ 10-IEA ನಲ್ಲಿ ಮತ್ತೆ ಹಳೆಯ ತೆರಿಗೆ ವ್ಯವಸ್ಥೆಯ ಆಯ್ಕೆಯನ್ನು ಬಳಸಬಹುದೇ?

ನೀವು ಒಮ್ಮೆ ಹಳೆಯ ತೆರಿಗೆ ವ್ಯವಸ್ಥೆಗೆ ಪ್ರವೇಶಿಸಿದ ನಂತರ ಅದರಿಂದ ಹೊರಬಂದಿದ್ದರೆ, ವ್ಯವಹಾರ ಅಥವಾ ವೃತ್ತಿಯಿಂದ ಆದಾಯ ಇಲ್ಲವಾದ ಸಂದರ್ಭವನ್ನು ಹೊರತುಪಡಿಸಿ, ಮತ್ತೆ ಹಳೆಯ ತೆರಿಗೆ ವ್ಯವಸ್ಥೆಯ ಆಯ್ಕೆಯನ್ನು ಬಳಸಲು ನೀವು ಅರ್ಹರಾಗಿರುವುದಿಲ್ಲ.

15. ನಾನು ಫಾರ್ಮ್‌ 10-IEA ಮೂಲಕ ಹೊಸ ತೆರಿಗೆ ವ್ಯವಸ್ಥೆಯಿಂದ ಹೊರಬರಲು ಬಯಸಿದ್ದೆ, ಆದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕದ ನಂತರ ಫಾರ್ಮ್‌ 10-IEA ಅನ್ನು ಸಲ್ಲಿಸಿದ್ದೇನೆ. ನನಗೆ ಹಳೆಯ ತೆರಿಗೆ ವ್ಯವಸ್ಥೆಯ ಪ್ರಯೋಜನ ದೊರೆಯುತ್ತದೆಯೇ?

ನೀವು ಹೊಸ ತೆರಿಗೆ ವ್ಯವಸ್ಥೆಯಿಂದ ಹೊರಬರಲು ಬಯಸಿ, ಅಂತಿಮ ದಿನಾಂಕದೊಳಗೆ ಫಾರ್ಮ್‌ ಅನ್ನು ಸಲ್ಲಿಸಲು ವಿಫಲವಾದರೆ, ನಿಮ್ಮ ITR ನಲ್ಲಿ ಹಳೆಯ ತೆರಿಗೆ ವ್ಯವಸ್ಥೆಯ ಪ್ರಯೋಜನವನ್ನು ಪಡೆಯಲು ನೀವು ಅರ್ಹರಾಗಿರುವುದಿಲ್ಲ.

16. ನಾನು ಫಾರ್ಮ್‌ 10-IEA ಅನ್ನು ಸಲ್ಲಿಸಿದ್ದೇನೆ, ಆದರೆ ಫಾರ್ಮ್‌ನ ಸ್ಥಿತಿಯು "ಅಮಾನ್ಯ ಫಾರ್ಮ್‌" ಎಂದು ತೋರಿಸುತ್ತಿದೆ. ನಾನು ಏನು ಮಾಡಬೇಕು?

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕದ ನಂತರ ನೀವು ಫಾರ್ಮ್‌ 10-IEA ಅನ್ನು ಸಲ್ಲಿಸಿದ್ದರೆ, ಫಾರ್ಮ್‌ನ ಸ್ಥಿತಿಯನ್ನು ಅಮಾನ್ಯ ಫಾರ್ಮ್‌ ಎಂದು ತೋರಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ, ನಂತರದ ನಿರ್ಧರಣೆ ವರ್ಷದಲ್ಲಿ ಹೊಸದಾಗಿ ಫಾರ್ಮ್‌ ಅನ್ನು ಸಲ್ಲಿಸಬಹುದು.

17. ಸಲ್ಲಿಸಲಾದ ಫಾರ್ಮ್‌ 10-IEA ನ ಸ್ಥಿತಿಯು 'ಮಾನ್ಯ ಫಾರ್ಮ್‌' ನಿಂದ 'ಅಮಾನ್ಯ ಫಾರ್ಮ್‌' ಗೆ ಬದಲಾಗಿದೆ. ನಾನು ಏನು ಮಾಡಬೇಕು?

ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅನ್ವಯವಾಗುವ ಸರಿಯಾದ ಅಂತಿಮ ದಿನಾಂಕವನ್ನು ಫಾರ್ಮ್‌ 10-IEA ಅನ್ನು ಸಲ್ಲಿಸುವಾಗ ಆಯ್ಕೆ ಮಾಡದಿದ್ದರೆ ಮತ್ತು ITR ನ ಅಂತಿಮ ದಿನಾಂಕದ ನಂತರ ಫಾರ್ಮ್‌ 10-IEA ಅನ್ನು ಸಲ್ಲಿಸಿರುವ ಕಾರಣ ನಿಮ್ಮ ಸಲ್ಲಿಸಿದ ಫಾರ್ಮ್‌ 10-IEA ಅನ್ನು ITR ಪ್ರಕ್ರಿಯೆಗಾಗಿ ಸ್ವೀಕರಿಸದಿದ್ದರೆ, ಅಂತಹ ಸಂದರ್ಭದಲ್ಲಿ ಫಾರ್ಮ್‌ನ ಸ್ಥಿತಿಯು "ಅಮಾನ್ಯ ಫಾರ್ಮ್‌" ಎಂದು ಬದಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಂತರದ ನಿರ್ಧರಣೆ ವರ್ಷದಲ್ಲಿ ಫಾರ್ಮ್‌ 10-IEA ಅನ್ನು ಹೊಸದಾಗಿ ಸಲ್ಲಿಸಬಹುದು.

18. ಫಾರ್ಮ್‌ 10-IEA ಅನ್ನು ಸಲ್ಲಿಸಿದ ನಂತರ ಅದನ್ನು ಪರಿಷ್ಕರಿಸಬಹುದೇ ಅಥವಾ ಮಾರ್ಪಡಿಸಬಹುದೇ?

ಇಲ್ಲ, ಫಾರ್ಮ್‌ 10-IEA ಅನ್ನು ಪರಿಷ್ಕರಿಸಲು ಅನುಮತಿಯಿಲ್ಲ. ಹಾಗೆಯೇ, ಒಮ್ಮೆ ಸಲ್ಲಿಸಿದ ಫಾರ್ಮ್‌ 10-IEA ಅನ್ನು ಅದೇ ವರ್ಷದಲ್ಲಿ ಹಿಂಪಡೆಯಲು ಸಾಧ್ಯವಿಲ್ಲ.

19. ಫಾರ್ಮ್‌ 10-IEA ಅನ್ನು ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ನಾನು ಹೇಗೆ ಪರಿಶೀಲಿಸಬಹುದು?

ಆದಾಯ ತೆರಿಗೆ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡುವ ಮೂಲಕ ನೀವು ಫಾರ್ಮ್‌ 10-IEA ಸಲ್ಲಿಕೆಯ ಸ್ಥಿತಿಯನ್ನು ಪರಿಶೀಲಿಸಬಹುದು. ಸಲ್ಲಿಸಿದ ಫಾರ್ಮ್‌ನ ವಿವರಗಳನ್ನು ಇ-ಸಲ್ಲಿಕೆ ಟ್ಯಾಬ್ ----> ಆದಾಯ ತೆರಿಗೆ ಫಾರ್ಮ್‌ಗಳು ----> ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ ----> ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರದ ಫಾರ್ಮ್‌ಗಳು ----> ಫಾರ್ಮ್‌ 10-IEA ಅನ್ನು ಹುಡುಕಿ ಮತ್ತು ಅದರ ಸ್ಥಿತಿಯು ಮಾನ್ಯ ಅಥವಾ ಅಮಾನ್ಯ ಎಂಬುದನ್ನು ಪರಿಶೀಲಿಸಿ.

20. ನಂತರ ನನ್ನ ಆದಾಯದ ಮೂಲವು ವ್ಯವಹಾರ/ವೃತ್ತಿ ಆದಾಯವಾಗಿ ಬದಲಾದರೆ ಏನಾಗುತ್ತದೆ? ನಾನು ಮತ್ತೆ ಫಾರ್ಮ್‌ 10-IEA ಅನ್ನು ಭರ್ತಿ ಮಾಡಬೇಕೇ?

ಹೌದು, ನಂತರ ಆದಾಯದ ಮೂಲವು ವ್ಯವಹಾರ ಅಥವಾ ವೃತ್ತಿ ಆದಾಯವಾಗಿ ಬದಲಾದರೆ ಮತ್ತು ತೆರಿಗೆದಾರರು ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಬೇಕೆಂದಿದ್ದರೆ, ಕಾಯ್ದೆಯ ಸೆಕ್ಷನ್‌ 139(1) ರ ಅಡಿಯಲ್ಲಿ ಅನ್ವಯವಾಗುವ ಅಂತಿಮ ದಿನಾಂಕದೊಳಗೆ ಫಾರ್ಮ್‌ 10-IEA ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

21. ನಾನು ಪ್ರತಿವರ್ಷ ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಗಳ ನಡುವೆ ಬದಲಾಯಿಸಬಹುದೇ?

ವ್ಯವಹಾರ ಅಥವಾ ವೃತ್ತಿಯಿಂದ ಹೊರತಾದ ಆದಾಯ ಹೊಂದಿರುವ ತೆರಿಗೆದಾರರು, ಕಾಯ್ದೆಯ ಸೆಕ್ಷನ್‌ 139(1) ರ ಅಡಿಯಲ್ಲಿ ನಿಗದಿಪಡಿಸಿರುವ ಅಂತಿಮ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಪ್ರತಿವರ್ಷ ಹಳೆಯ ಅಥವಾ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಬಹುದು. ವ್ಯವಹಾರ ಅಥವಾ ವೃತ್ತಿ ಆದಾಯ ಹೊಂದಿರುವ ತೆರಿಗೆದಾರರು, ಸೆಕ್ಷನ್‌ 139(1) ರ ಅಡಿಯಲ್ಲಿ ನಿಗದಿಪಡಿಸಿರುವ ಅಂತಿಮ ದಿನಾಂಕದೊಳಗೆ ಫಾರ್ಮ್‌ 10-IEA ಅನ್ನು ಸಲ್ಲಿಸುವ ಮೂಲಕ ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಬಹುದು. ನಂತರ, ಫಾರ್ಮ್‌ 10-IEA ಅನ್ನು ಮರುಪ್ರವೇಶ ಆಯ್ಕೆಯೊಂದಿಗೆ ಮತ್ತೆ ಸಲ್ಲಿಸುವ ಮೂಲಕ ಕೇವಲ ಒಮ್ಮೆ ಮಾತ್ರ ಹೊಸ ತೆರಿಗೆ ವ್ಯವಸ್ಥೆಗೆ ಮರಳಬಹುದು.