Do not have an account?
Already have an account?

1. ಫಾರ್ಮ್ 15CC ಎಂದರೇನು?

ಕಂಪನಿಯಾಗಿಲ್ಲದ ಅಥವಾ ವಿದೇಶಿ ಕಂಪನಿಯಾಗಿರದ ಅನಿವಾಸಿಗೆ ಹಣ ರವಾನೆ ಮಾಡುವ ಪ್ರತಿಯೊಬ್ಬ ಅಧಿಕೃತ ಡೀಲರ್, ಅಂತಹ ಹಣ ರವಾನೆಯ ತ್ರೈಮಾಸಿಕ ಬಹಿರಂಗಪಡಿಸುವಿಕೆಯನ್ನು ಫಾರ್ಮ್ 15CCರಲ್ಲಿ ಮಾಡಬೇಕಾಗುತ್ತದೆ.

2. ಫಾರ್ಮ್ 15CC ಸಲ್ಲಿಸುವ ವಿಧಾನಗಳು ಯಾವುವು?

ಫಾರ್ಮ್ 15CC ಅನ್ನು ಆನ್‌ಲೈನ್‌ ವಿಧಾನದ ಮೂಲಕ ಮಾತ್ರ ಸಲ್ಲಿಸಬಹುದು. ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು, ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆದ ನಂತರ, ಫಾರ್ಮ್ ಅನ್ನು ಆಯ್ಕೆ ಮಾಡಿ, ಅದನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.

3. ಫಾರ್ಮ್ 15CC ಸಲ್ಲಿಸುವ ಮೊದಲು ITDREIN ಅನ್ನು ಕಡ್ಡಾಯವಾಗಿ ರಚಿಸಬೇಕೇ?

ಹೌದು. ವರದಿ ಮಾಡುವ ಘಟಕದಿಂದ ಅಧಿಕೃತಗೊಳಿಸಲ್ಪಟ್ಟ ವ್ಯಕ್ತಿಯು ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಲು ಮತ್ತು ಫಾರ್ಮ್ 15CC ಅನ್ನು ಸಲ್ಲಿಸಲು ITDREIN ಅನ್ನು ಬಳಸಬೇಕಾಗುತ್ತದೆ.

4. ಫಾರ್ಮ್ 15CC ಅನ್ನು ಯಾವಾಗ ಸಲ್ಲಿಸಬೇಕು?

ಅಂತಹ ಪಾವತಿಗೆ ಸಂಬಂಧಿಸಿದ ಆರ್ಥಿಕ ವರ್ಷದ ತ್ರೈಮಾಸಿಕದ ಅಂತ್ಯದಿಂದ ಹದಿನೈದು ದಿನಗಳ ಒಳಗಾಗಿ, ಇದನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಆದಾಯ ತೆರಿಗೆ ಇಲಾಖೆಯ ಸಮರ್ಥ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ.

5. ಫಾರ್ಮ್ ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂದು ನನಗೆ ಹೇಗೆ ತಿಳಿಯುತ್ತದೆ?

ನಿಮ್ಮ ಇಮೇಲ್ ID ಮತ್ತು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು ದೃಢೀಕರಣವನ್ನು ಸ್ವೀಕರಿಸುತ್ತೀರಿ. ಹೆಚ್ಚುವರಿಯಾಗಿ, ನೀವು ನಿಮ್ಮ ಕಾರ್ಯಪಟ್ಟಿಯಲ್ಲಿನ “ನಿಮ್ಮ ಕಾರ್ಯಗಳು” ಟ್ಯಾಬ್‌ನ ಅಡಿಯಲ್ಲಿ ಸ್ಥಿತಿಯನ್ನು ವೀಕ್ಷಿಸಬಹುದು.

6. ಫಾರ್ಮ್ 15CC ಸಲ್ಲಿಸಲು ಇ-ಪರಿಶೀಲನೆ ಅಗತ್ಯವಿದೆಯೇ? ಹೌದು ಎಂದಾದರೆ, ನಾನು ಫಾರ್ಮ್ 15CC ಅನ್ನು ಹೇಗೆ ಇ-ಪರಿಶೀಲಿಸಬಹುದು?

ಹೌದು, ಫಾರ್ಮ್ 15CC ಅನ್ನು ಇ-ಪರಿಶೀಲಿಸುವುದು ಅವಶ್ಯಕ. ನೀವು ಡಿಜಿಟಲ್ ಸಹಿ ಪ್ರಮಾಣಪತ್ರವನ್ನು ಬಳಸಿಕೊಂಡು ಅದನ್ನು ಇ-ಪರಿಶೀಲಿಸಬೇಕಾಗುತ್ತದೆ.