1. TAN ಎಂದರೇನು?
TAN ಎಂದರೆ ತೆರಿಗೆ ಕಡಿತ ಮತ್ತು ಸಂಗ್ರಹಣೆ ಖಾತೆ ಸಂಖ್ಯೆ. ಇದು ಆದಾಯ ತೆರಿಗೆ ಇಲಾಖೆಯಿಂದ (ITD) ನೀಡಲಾಗುವ 10 ಅಂಕೆಗಳ ಅಕ್ಷರಾಂಕೀಯ ಸಂಖ್ಯೆಯಾಗಿದೆ.
2. TAN ಅನ್ನು ಯಾರು ಪಡೆಯಬೇಕು?
ಮೂಲದಲ್ಲೇ ತೆರಿಗೆ ಕಡಿತಗೊಳಿಸಲು (TDS) ಜವಾಬ್ದಾರರಾಗಿರುವ ಅಥವಾ ಮೂಲದಲ್ಲೇ ತೆರಿಗೆ ಸಂಗ್ರಹಿಸಲು (TCS) ಕಡ್ಡಾಯವಾಗಿರುವ ಎಲ್ಲ ವ್ಯಕ್ತಿಗಳು TAN ಪಡೆಯಬೇಕು. TDS/TCS ರಿಟರ್ನ್, ಯಾವುದೇ TDS/TCS ಪಾವತಿ ಚಲನ್, TDS/TCS ಪ್ರಮಾಣಪತ್ರಗಳು ಹಾಗೂ ಆದಾಯ ತೆರಿಗೆ ಇಲಾಖೆಯೊಂದಿಗೆ (ITD) ನಡೆಸುವ ಸಂವಹನದಲ್ಲಿ ಸೂಚಿಸಲಾದ ಇತರೆ ದಾಖಲೆಗಳಲ್ಲಿ TAN ಅನ್ನು ಉಲ್ಲೇಖಿಸುವುದು ಕಡ್ಡಾಯವಾಗಿದೆ.
3. "TAN ವಿವರಗಳನ್ನು ತಿಳಿಯಿರಿ" ಸೇವೆಯನ್ನು ಬಳಸಲು ನಾನು ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿತ ಬಳಕೆದಾರನಾಗಿರಬೇಕೇ?
ಇಲ್ಲ. ನೋಂದಾಯಿತ ಹಾಗೂ ನೋಂದಣಿಯಾಗದ ಎರಡೂ ರೀತಿಯ ಬಳಕೆದಾರರು ಈ ಸೇವೆಯನ್ನು ಬಳಸಬಹುದು. ಇ-ಸಲ್ಲಿಕೆ ಪೋರ್ಟಲ್ನ ಮುಖಪುಟದಲ್ಲಿ ಲಾಗಿನ್ ಮಾಡದೆ, ತ್ವರಿತ ಲಿಂಕ್ಗಳು ವಿಭಾಗದಲ್ಲಿರುವ TAN ವಿವರಗಳನ್ನು ತಿಳಿಯಿರಿ ಅನ್ನು ಕ್ಲಿಕ್ ಮಾಡುವ ಮೂಲಕ ಈ ಸೇವೆಯನ್ನು ಪ್ರವೇಶಿಸಬಹುದು.
4. ನನ್ನ ಕಡಿತದ TAN ವಿವರಗಳನ್ನು ನಾನು ಯಾವ ಉದ್ದೇಶಕ್ಕಾಗಿ ಬಳಸಬೇಕು?
ಸ್ವತಃ ನೀವೆ ಮೂಲದಲ್ಲೇ ತೆರಿಗೆ (TDS) ಕಡಿತಗೊಳಿಸುವ ವ್ಯಕ್ತಿಯ TAN ಅನ್ನು ಪರಿಶೀಲಿಸುವುದು ಉತ್ತಮ ಅಭ್ಯಾಸವಾಗಿದೆ. ನಿಮ್ಮ ಫಾರ್ಮ್ 16/16A/26AS ಅನ್ನು ಪರಿಶೀಲಿಸಿದರೆ, ಸಂಬಂಧಿತ ಹಣಕಾಸು ವರ್ಷದ TDS ವಿವರಗಳನ್ನು ನೋಡಬಹುದು. TAN ವಿವರಗಳನ್ನು ತಿಳಿಯಿರಿ ಸೇವೆಯನ್ನು ಬಳಸಿಕೊಂಡು, ತೆರಿಗೆಯನ್ನು ಸರಿಯಾದ ವ್ಯಕ್ತಿಯು ಕಡಿತಗೊಳಿಸಿದ್ದಾರೆಯೇ ಎಂಬುದನ್ನು ನೀವು ಪರಿಶೀಲಿಸಬಹುದು. ಹೆಚ್ಚುವರಿಯಾಗಿ, TDS ಸಂಬಂಧಿತ ವಿವರಗಳಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ TAN ಅನ್ನು ಉಲ್ಲೇಖಿಸುವುದು ಅಗತ್ಯವಾಗಿದೆ.
5. ನನ್ನ ಉದ್ಯೋಗದಾತ TAN ಅನ್ನು ಪಡೆದಿರದಿದ್ದರೆ ಏನು ಮಾಡಬೇಕು?
TAN ಅನ್ನು ಪಡೆಯಲು ಅಥವಾ ಉಲ್ಲೇಖಿಸಲು ವಿಫಲವಾದಲ್ಲಿ, ಆದಾಯ ತೆರಿಗೆ ಕಾಯ್ದೆ, 2025ರ ಸಂಬಂಧಿತ ಸೆಕ್ಷನ್ನ ಅಡಿಯಲ್ಲಿ ಉದ್ಯೋಗದಾತರು ದಂಡಕ್ಕೆ ಒಳಪಡುತ್ತಾರೆ. ಜೊತೆಗೆ, (TDS ಅನ್ನು ಕಡಿತಗೊಳಿಸಿದ್ದರೆ) ಅದನ್ನು ಠೇವಣಿ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ ಹಾಗೂ ಸಂಬಂಧಿತ TDS ಹೇಳಿಕೆಯನ್ನು ಸಲ್ಲಿಸಲೂ ಸಾಧ್ಯವಾಗುವುದಿಲ್ಲ. ನಿಮ್ಮ ವೇತನವು ತೆರಿಗೆಗೆ ಒಳಪಡುವ ಶ್ರೇಣಿಯಲ್ಲಿದ್ದು, ನಿಮ್ಮ ಉದ್ಯೋಗದಾತರು TDS ಅನ್ನು ಕಡಿತಗೊಳಿಸದಿದ್ದರೆ, ಅನ್ವಯವಾಗುವಂತೆ ನೀವು ಸ್ವಯಂ ಮೌಲ್ಯಮಾಪನ ತೆರಿಗೆ ಮತ್ತು/ಅಥವಾ ಮುಂಗಡ ತೆರಿಗೆ ಪಾವತಿಸಬೇಕಾಗಬಹುದು.
6. ಸರ್ಕಾರಿ ಕಡಿತದಾರರು TANಗೆ ಅರ್ಜಿ ಸಲ್ಲಿಸುವುದು ಕಡ್ಡಾಯವೇ?
ಹೌದು.
7. ಮೂಲದಲ್ಲಿ ತೆರಿಗೆ ಸಂಗ್ರಹದ ಉದ್ದೇಶಕ್ಕಾಗಿ ಪ್ರತ್ಯೇಕ TAN ಪಡೆಯುವ ಅವಶ್ಯಕತೆ ಇದೆಯೇ?
ಒಂದು ವೇಳೆ TAN ಈಗಾಗಲೇ ನೀಡಲಾಗಿದ್ದರೆ, TAN ಪಡೆಯಲು ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ. TCS ಗಾಗಿ ಎಲ್ಲಾ ರಿಟರ್ನ್ಗಳು, ಚಲನ್ಗಳು ಮತ್ತು ಪ್ರಮಾಣಪತ್ರಗಳಲ್ಲಿ ಅದೇ ಸಂಖ್ಯೆಯನ್ನು ಉಲ್ಲೇಖಿಸಬಹುದು.