ಲಾಗಿನ್ ಕುರಿತು ಬಳಕೆದಾರರ ಕೈಪಿಡಿ

 

1. ಪಕ್ಷಿನೋಟ

ಇ-ಸಲ್ಲಿಕೆ ಪೋರ್ಟಲ್‌ನ ನೋಂದಾಯಿತ ಬಳಕೆದಾರರು ಇ-ಸಲ್ಲಿಕೆ ಪೋರ್ಟಲ್ ಹಾಗೂ ಅದರಲ್ಲಿರುವ ಎಲ್ಲಾ ಸೇವೆಗಳನ್ನು ಪ್ರವೇಶಿಸಲು ಲಾಗಿನ್ ಸೇವೆಯು ಅನುಮತಿಸುತ್ತದೆ. ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಲು ವಿವಿಧ ವಿಧಾನಗಳಿವೆ. ಎಲ್ಲಾ ಲಾಗಿನ್ ವಿಧಾನಗಳು ಹಾಗೂ ನಮೂದಿಸಬೇಕಾದ ರುಜುವಾತುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

ಲಾಗಿನ್ ವಿಧಾನ ನಮೂದಿಸಬೇಕಾದ ರುಜುವಾತುಗಳು
ನೆಟ್ ಬ್ಯಾಂಕಿಂಗ್ (ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತೆಯನ್ನು ಸಕ್ರಿಯಗೊಳಿಸಲಾಗಿದೆ) ಬಳಕೆದಾರ ID ಮತ್ತು ಪಾಸ್ವರ್ಡ್ + ಎರಡನೇ ಹಂತದ ದೃಢೀಕರಣಕ್ಕಾಗಿ ನೆಟ್ ಬ್ಯಾಂಕಿಂಗ್ ಬಳಕೆದಾರ ID ಮತ್ತು ಪಾಸ್ವರ್ಡ್
ನೆಟ್ ಬ್ಯಾಂಕಿಂಗ್ (ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತೆಯನ್ನು ಸಕ್ರಿಯಗೊಳಿಸಿಲ್ಲ) ನೆಟ್ ಬ್ಯಾಂಕಿಂಗ್ ಬಳಕೆದಾರರ ID ಮತ್ತು ಪಾಸ್‌ವರ್ಡ್
ಬ್ಯಾಂಕ್ / ಡಿಮ್ಯಾಟ್ ಖಾತೆ EVC (ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತೆಯನ್ನು ಸಕ್ರಿಯಗೊಳಿಸಲಾಗಿದೆ) ಬಳಕೆದಾರ ID (PAN) ಮತ್ತು ಪಾಸ್ವರ್ಡ್ + 2ನೇ ಹಂತದ ದೃಢೀಕರಣಕ್ಕಾಗಿ ಬ್ಯಾಂಕ್ EVC
DSC ಬಳಕೆದಾರ ID (PAN) ಮತ್ತು ಪಾಸ್ವರ್ಡ್ + 2ನೇ ಹಂತದ ದೃಢೀಕರಣಕ್ಕಾಗಿ DSC
ಯೂಸರ್‌ ID ಬಳಸಿ ಲಾಗಿನ್-‌ CA, TAN ಬಳಕೆದಾರ, ERI, ಬಾಹ್ಯ ಏಜೆನ್ಸಿ, ITDREIN ಬಳಕೆದಾರರಿಗಾಗಿ ಯೂಸರ್‌ ID ಮತ್ತು ಪಾಸ್‌ವರ್ಡ್

ಸೂಚನೆ: ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತಾ ಆಯ್ಕೆಗಳು ಲಾಗಿನ್ ಮತ್ತು ಪಾಸ್ವರ್ಡ್ ಮರುಹೊಂದಿಸುವಿಕೆಗೆ ಬಹು-ಹಂತದ ದೃಢೀಕರಣವನ್ನು ಒದಗಿಸುತ್ತವೆ. ಉನ್ನತ ಭದ್ರತಾ ಆಯ್ಕೆಗಳನ್ನು ಆರಿಸಿದಾಗ ಲಾಗಿನ್ ಮಾಡುವ ಪ್ರಕ್ರಿಯೆಯನ್ನೂ ಈ ಬಳಕೆದಾರರ ಕೈಪಿಡಿಯಲ್ಲಿ ನೀಡಲಾಗಿದೆ.

ಹೊಸ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಎರಡು-ಹಂತದ ದೃಢೀಕರಣ ಕಡ್ಡಾಯವಾಗಿದೆ. ಅಂದರೆ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಜೊತೆಗೆ ಇ-ಸಲ್ಲಿಕೆಯಲ್ಲಿ ನೋಂದಾಯಿತ ಪ್ರಾಥಮಿಕ ಮೊಬೈಲ್ ಸಂಖ್ಯೆ / ಇಮೇಲ್ ID ಅಥವಾ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಬಂದ OTP ಮೂಲಕ ಮತ್ತೊಂದು ದೃಢೀಕರಣವನ್ನು ನಮೂದಿಸಬೇಕಾಗುತ್ತದೆ. ಇಂತಹ ಮೊಬೈಲ್ ಸಂಖ್ಯೆ / ಇಮೇಲ್‌ಗೆ ಪ್ರವೇಶವಿಲ್ಲದ ತೆರಿಗೆದಾರರಿಗೆ ಯಾವುದೇ ತೊಂದರೆಯಾಗದಂತೆ, ಆರಂಭಿಕ ಅವಧಿಯಲ್ಲಿ ಎರಡು-ಹಂತದ ದೃಢೀಕರಣವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಈ ಅವಧಿಯಲ್ಲಿ, ಎರಡು-ಹಂತದ ದೃಢೀಕರಣವನ್ನು ಸಕ್ರಿಯಗೊಳಿಸಿದ ನಂತರ ಸುಗಮವಾಗಿ ಲಾಗಿನ್ ಮಾಡಲು, ತೆರಿಗೆದಾರರು ತಮ್ಮ ಪ್ರೊಫೈಲ್‌ನಲ್ಲಿ ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆ ಮತ್ತು ಇಮೇಲ್ IDಯನ್ನು ಪ್ರಾಥಮಿಕ ಮೊಬೈಲ್ / ಇಮೇಲ್ ಆಗಿ ನವೀಕರಿಸಬೇಕೆಂದು ವಿನಂತಿಸಲಾಗಿದೆ.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

  • ಸಾಮಾನ್ಯ ಪೂರ್ವಾಪೇಕ್ಷಿತಗಳು
    • ಇ-ಸಲ್ಲಿಕೆ ಪೋರ್ಟಲ್‌ನಲ್ಲಿನ ನೋಂದಾಯಿತ ಬಳಕೆದಾರ.
    • ಇ-ಸಲ್ಲಿಕೆ ಪೋರ್ಟಲ್‌ನ ಮಾನ್ಯ ಬಳಕೆದಾರ ID ಮತ್ತು ಪಾಸ್ವರ್ಡ್.
  • ನೆಟ್ ಬ್ಯಾಂಕಿಂಗ್ ಬಳಸಿಕೊಂಡು
    • ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು (ವೈಯಕ್ತಿಕ ಬಳಕೆದಾರರಿಗೆ ಮಾತ್ರ) ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ PAN ಅನ್ನು ಲಿಂಕ್ ಮಾಡಿರಬೇಕು ಹಾಗೂ ನೀವು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತರಾಗಿರಬೇಕು.
  • DSC ಬಳಸಿಕೊಂಡು
    • ಮಾನ್ಯ ಮತ್ತು ಸಕ್ರಿಯ DSC ಹೊಂದಿರಬೇಕು ಹಾಗೂ DSC ಅನ್ನು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿರಬೇಕು.
    • ನೀವು ಎಂಸೈನರ್ ಅನ್ನು ಇನ್ಸ್ಟಾಲ್ ಮಾಡಿರಬೇಕು ಮತ್ತು ಅದು ಸಿಸ್ಟಮ್‌ನಲ್ಲಿ ರನ್ ಆಗಬೇಕು.
    • ಯಂತ್ರದಲ್ಲಿ DSC USB ಟೋಕನ್ ಅನ್ನು ಜೋಡಿಸಲಾಗಿದೆ.
    • ಭಾರತದ ಪ್ರಮಾಣೀಕರಣ ಪ್ರಾಧಿಕಾರ ಪೂರೈಕೆದಾರರಿಂದ DSC ಅನ್ನು ಪಡೆಯಲಾಗುತ್ತದೆ.
    • DSC USB ಟೋಕನ್ ಪ್ರವರ್ಗ 2 ಅಥವಾ ಪ್ರವರ್ಗ 3 ರ ಪ್ರಮಾಣಪತ್ರ ಆಗಿರಬೇಕು.

3. ಹಂತ-ಹಂತದ ಮಾರ್ಗದರ್ಶಿ

ಅಗತ್ಯವಿರುವ ಲಾಗಿನ್‌ನ ವಿಧಾನಕ್ಕಾಗಿ ಈ ಕೆಳಗಿನ ಕೋಷ್ಟಕವನ್ನು ನೋಡಿ:

ಇ-ಸಲ್ಲಿಕೆ ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ ಸೆಕ್ಷನ್ 3.1 ಅನ್ನು ನೋಡಿ
ಆಧಾರ್ OTP ಬಳಸಿ ಲಾಗಿನ್ ಮಾಡಿ (ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತಾ ಆಯ್ಕೆಯನ್ನು ಸಕ್ರಿಯಗೊಳಿಸಿರುವ ಸಂದರ್ಭ ಸೇರಿದಂತೆ) ಸೆಕ್ಷನ್ 3.2 ಅನ್ನು ನೋಡಿ
ನೆಟ್ ಬ್ಯಾಂಕಿಂಗ್ ಬಳಸಿ ಲಾಗಿನ್ ಮಾಡಿ (ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತಾ ಆಯ್ಕೆಯನ್ನು ಸಕ್ರಿಯಗೊಳಿಸಿರುವ ಸಂದರ್ಭ ಸೇರಿದಂತೆ) ಸೆಕ್ಷನ್ 3.3 ಅನ್ನು ನೋಡಿ
ಬ್ಯಾಂಕ್ ಖಾತೆ / ಡಿಮ್ಯಾಟ್ ಖಾತೆ EVC ಬಳಸಿ ಲಾಗಿನ್ ಮಾಡಿ (ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತಾ ಆಯ್ಕೆಯನ್ನು ಸಕ್ರಿಯಗೊಳಿಸಿರುವಾಗ) ಸೆಕ್ಷನ್ 3.4 ಅನ್ನು ನೋಡಿ
DSC ಬಳಸಿ ಲಾಗಿನ್ ಮಾಡಿ (ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತಾ ಆಯ್ಕೆಯನ್ನು ಸಕ್ರಿಯಗೊಳಿಸಿರುವಾಗ) ಸೆಕ್ಷನ್ 3.5 ಅನ್ನು ನೋಡಿ
ತೆರಿಗೆದಾರರಲ್ಲದ ಬಳಕೆದಾರರಿಗೆ ಲಾಗಿನ್ (ಚಾರ್ಟರ್ಡ್ ಅಕೌಂಟೆಂಟ್‌ಗಳು (CA), ERI, ಹೊರಗಿನ ಏಜೆನ್ಸಿ, TAN ಬಳಕೆದಾರರು, ITDREIN ಬಳಕೆದಾರರು) ಸೆಕ್ಷನ್ 3.6 ಅನ್ನು ನೋಡಿ


3.1ಇ-ಸಲ್ಲಿಕೆ ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ

ಹಂತ 1: ಇ-ಸಲ್ಲಿಕೆ ಪೋರ್ಟಲ್‌ನ ಮುಖಪುಟಕ್ಕೆ ಹೋಗಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ನಿಮ್ಮ ಬಳಕೆದಾರ ID ನಮೂದಿಸಿ ಟೆಕ್ಸ್ಟ್ ಬಾಕ್ಸ್ ಅಲ್ಲಿ ನಿಮ್ಮ PAN ಅನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ನಿಮ್ಮ ಸುರಕ್ಷಿತ ಪ್ರವೇಶ ಸಂದೇಶವನ್ನು ದೃಢೀಕರಿಸಿ. ನಿಮ್ಮ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಯಶಸ್ವಿ ಮಾನ್ಯತೆ ನಂತರ, ಇ-ಸಲ್ಲಿಕೆ ಡ್ಯಾಶ್‌ಬೋರ್ಡ್ ಪ್ರದರ್ಶಿಸಲಾಗುತ್ತದೆ.

Data responsive

ವೈಯಕ್ತಿಕ ಬಳಕೆದಾರರಿಗೆ, PAN ಅನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ PAN ಅನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲದ ಕಾರಣ ಅದು ನಿಷ್ಕ್ರಿಯವಾಗಿಸಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ಕಾಣುವಿರಿ.

PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು, ಇದೀಗ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ, ಇಲ್ಲದಿದ್ದರೆ ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

3.2 ಆಧಾರ್ OTP ಬಳಸಿ ಲಾಗಿನ್ ಮಾಡಿ (ಇ-ಸಲ್ಲಿಕೆ ವಾಲ್ಟ್ ಆಯ್ಕೆಯನ್ನು ಸಕ್ರಿಯಗೊಳಿಸಿರುವ ಸಂದರ್ಭ ಸೇರಿದಂತೆ)

ಹಂತ 1: ಇ-ಸಲ್ಲಿಕೆ ಪೋರ್ಟಲ್ ಮುಖಪುಟಕ್ಕೆ ಹೋಗಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ನಿಮ್ಮ ಬಳಕೆದಾರ ID ನಮೂದಿಸಿ ಪಠ್ಯ ಪೆಟ್ಟಿಗೆಯಲ್ಲಿ ನಿಮ್ಮ PAN ಅನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ನಿಮ್ಮ ಸುರಕ್ಷಿತ ಪ್ರವೇಶ ಸಂದೇಶವನ್ನು ದೃಢೀಕರಿಸಿ. ನಿಮ್ಮ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 4: ನೀವು ಈಗಾಗಲೇ OTP ಹೊಂದಿದ್ದರೆ, ಆಧಾರ್‌ಗೆ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಈಗಾಗಲೇ OTP ಇದೆ ಆಯ್ಕೆಯನ್ನು ಆರಿಸಿ ಮತ್ತು ಹಂತ 5ಕ್ಕೆ ಮುಂದುವರಿಯಿರಿ. ಮಾನ್ಯ OTP ಲಭ್ಯವಿಲ್ಲದಿದ್ದರೆ, OTP ರಚಿಸಿ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 5: ಇದು ನೀವೇ, ಎಂಬುದನ್ನು ಪರಿಶೀಲಿಸಿ ಪುಟದಲ್ಲಿ, ನನ್ನ ಆಧಾರ್ ವಿವರಗಳನ್ನು ಮಾನ್ಯಗೊಳಿಸಲು ನಾನು ಒಪ್ಪುತ್ತೇನೆ ಮೇಲೆ ಕ್ಲಿಕ್ ಮಾಡಿ ಹಾಗೂ ಆಧಾರ್ OTP ರಚಿಸಿ.

Data responsive

ಹಂತ 6: ನಿಮ್ಮ ಆಧಾರ್‌ಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ 6 ಅಂಕೆಗಳ OTP ಅನ್ನು ನಮೂದಿಸಿ ಮತ್ತು ಲಾಗಿನ್ ಮೇಲೆ ಕ್ಲಿಕ್ ಮಾಡಿ.

Data responsive

ಯಶಸ್ವಿ ಮಾನ್ಯತೆ ನಂತರ, ನಿಮ್ಮನ್ನು ಇ-ಸಲ್ಲಿಕೆ ಡ್ಯಾಶ್‌ಬೋರ್ಡ್ ಗೆ ಕರೆದೊಯ್ಯಲಾಗುತ್ತದೆ.

ನಿಮ್ಮ PAN ಅನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ PAN ಅನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲದ ಕಾರಣ ಅದು ನಿಷ್ಕ್ರಿಯವಾಗಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ಕಾಣುವಿರಿ.

PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು, ಇದೀಗ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ, ಇಲ್ಲದಿದ್ದರೆ ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

3.3 ನೆಟ್ ಬ್ಯಾಂಕಿಂಗ್ ಬಳಸಿ ಲಾಗಿನ್ ಮಾಡಿ (ಇ-ಸಲ್ಲಿಕೆ ವಾಲ್ಟ್ ಆಯ್ಕೆಯನ್ನು ಸಕ್ರಿಯಗೊಳಿಸಿರುವ ಸಂದರ್ಭ ಸೇರಿದಂತೆ)

ಹಂತ 1: ಇ-ಸಲ್ಲಿಕೆ ಪೋರ್ಟಲ್ ಮುಖಪುಟಕ್ಕೆ ಹೋಗಿ ಲಾಗಿನ್ ಮೇಲೆ ಕ್ಲಿಕ್ ಮಾಡಿ. ನೆಟ್ ಬ್ಯಾಂಕಿಂಗ್ ಅನ್ನು ಉನ್ನತ ಭದ್ರತಾ ಆಯ್ಕೆಯಾಗಿ ಬಳಸುತ್ತಿರುವ ಸಂದರ್ಭದಲ್ಲ, ನಿಮ್ಮ ಬಳಕೆದಾರ ID ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ಉನ್ನತ ಭದ್ರತಾ ಆಯ್ಕೆಗಳು ಪುಟದಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಮೇಲೆ ಕ್ಲಿಕ್ ಮಾಡಿ ಮತ್ತು ಹಂತ 3ಕ್ಕೆ ಮುಂದುವರಿಯಿರಿ.

Data responsive

ಹಂತ 2: ನೀವು ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತಾ ಆಯ್ಕೆಯನ್ನು ಆಯ್ಕೆ ಮಾಡಿಲ್ಲದಿದ್ದರೆ, ಪುಟದ ಕೆಳಭಾಗದಲ್ಲಿ ಇರುವ ನಿಮ್ಮ ಖಾತೆಗೆ ಪ್ರವೇಶಿಸಲು ಇತರ ಮಾರ್ಗಗಳು ವಿಭಾಗದ ಅಡಿಯಲ್ಲಿ ಇರುವ ನೆಟ್ ಬ್ಯಾಂಕಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ನೀವು ಬಯಸಿದ ಬ್ಯಾಂಕ್ ಅನ್ನು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 4: ಹಕ್ಕುತ್ಯಾಗ ಸೂಚನೆಯನ್ನು ಓದಿ ಮತ್ತು ಅರ್ಥಮಾಡಿಕೊಳ್ಳಿ. ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 5: ನಿಮ್ಮ ನೆಟ್ ಬ್ಯಾಂಕಿಂಗ್ ಬಳಕೆದಾರ ID ಮತ್ತು ಪಾಸ್ವರ್ಡ್ ಬಳಸಿ ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಮಾಡಿ.

ಹಂತ 6: ಲಾಗಿನ್ ಆದ ನಂತರ, ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಇರುವ ಇ-ಸಲ್ಲಿಕೆ ಪೋರ್ಟಲ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿ. ನಿಮ್ಮನ್ನು ಇ-ಸಲ್ಲಿಕೆ ಡ್ಯಾಶ್‌ಬೋರ್ಡ್ ಗೆ ಕರೆದೊಯ್ಯಲಾಗುತ್ತದೆ.

Data responsive

ವೈಯಕ್ತಿಕ ಬಳಕೆದಾರರಿಗೆ, PAN ಅನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ PAN ಅನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲದ ಕಾರಣ ಅದು ನಿಷ್ಕ್ರಿಯವಾಗಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ಕಾಣುವಿರಿ.

PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು ಇದೀಗ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ, ಇಲ್ಲದಿದ್ದರೆ ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

3.4 ಬ್ಯಾಂಕ್ ಖಾತೆ / ಡಿಮ್ಯಾಟ್ ಖಾತೆ ಇವಿಸಿ ಬಳಸಿ ಲಾಗಿನ್ ಮಾಡಿ (ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತಾ ಆಯ್ಕೆಯನ್ನು ಸಕ್ರಿಯಗೊಳಿಸಿರುವ ಸಂದರ್ಭ ಸೇರಿದಂತೆ)

ಹಂತ 1: ಇ-ಸಲ್ಲಿಕೆ ಪೋರ್ಟಲ್ ಮುಖಪುಟಕ್ಕೆ ಹೋಗಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ನಿಮ್ಮ ಬಳಕೆದಾರ ID ನಮೂದಿಸಿ ಟೆಕ್ಸ್ಟ್ ಬಾಕ್ಸ್ ಅಲ್ಲಿ ನಿಮ್ಮ PAN ಅನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ನಿಮ್ಮ ಸುರಕ್ಷಿತ ಪ್ರವೇಶ ಸಂದೇಶವನ್ನು ದೃಢೀಕರಿಸಿ. ನಿಮ್ಮ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 4: ಬ್ಯಾಂಕ್ ಖಾತೆ EVC / ಡಿಮ್ಯಾಟ್ ಖಾತೆ EVC ಆಯ್ಕೆ ಮಾಡಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 5: ನೀವು EVC ಹೊಂದಿಲ್ಲದಿದ್ದರೆ, EVC ರಚಿಸಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಬ್ಯಾಂಕ್ / ಡಿಮ್ಯಾಟ್ ಖಾತೆಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ EVC ಅನ್ನು ಪಡೆಯಲಾಗುತ್ತದೆ.

Data responsive

ಸೂಚನೆ: ನೀವು ಈಗಾಗಲೇ EVC ಹೊಂದಿದ್ದರೆ, ನನ್ನ ಬಳಿ ಈಗಾಗಲೇ EVC ಇದೆ ಅನ್ನು ಆಯ್ಕೆ ಮಾಡಿ.

ಹಂತ 6: EVC ಅನ್ನು ನಮೂದಿಸಿ ಮತ್ತು ಲಾಗಿನ್ ಮೇಲೆ ಕ್ಲಿಕ್ ಮಾಡಿ.

Data responsive

ಯಶಸ್ವಿ ಮಾನ್ಯತೆ ನಂತರ, ನಿಮ್ಮನ್ನು ಇ-ಸಲ್ಲಿಕೆ ಡ್ಯಾಶ್‌ಬೋರ್ಡ್ ಗೆ ಕರೆದೊಯ್ಯಲಾಗುತ್ತದೆ.

Data responsive

ವೈಯಕ್ತಿಕ ಬಳಕೆದಾರರಿಗೆ, PAN ಅನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ PAN ಅನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲದ ಕಾರಣ ಅದು ನಿಷ್ಕ್ರಿಯವಾಗಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ಕಾಣುವಿರಿ.

PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು ಇದೀಗ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ, ಇಲ್ಲದಿದ್ದರೆ ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

3.5 DSC ಬಳಸಿ ಲಾಗಿನ್ ಮಾಡುವುದು (ಇ-ಸಲ್ಲಿಕೆ ವಾಲ್ಟ್ ಉನ್ನತ ಭದ್ರತಾ ಆಯ್ಕೆಯನ್ನು ಸಕ್ರಿಯಗೊಳಿಸಿರುವಾಗ)

ಹಂತ 1: ಇ-ಸಲ್ಲಿಕೆ ಪೋರ್ಟಲ್ ಮುಖಪುಟಕ್ಕೆ ಹೋಗಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ನಿಮ್ಮ ಬಳಕೆದಾರ ID ನಮೂದಿಸಿ ಟೆಸ್ಕ್ಟ್ ಬಾಕ್ಸ್ ಅಲ್ಲಿ ನಿಮ್ಮ PAN ಅನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ನಿಮ್ಮ ಸುರಕ್ಷಿತ ಪ್ರವೇಶ ಸಂದೇಶವನ್ನು ದೃಢೀಕರಿಸಿ. ನಿಮ್ಮ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 4: DSC ಆಯ್ಕೆ ಅನ್ನು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 5: ಹೊಸ DSC ಅಥವಾ ನೋಂದಾಯಿತ DSC (ಅವಶ್ಯಕತೆ ಅನುಸಾರ) ಆಯ್ಕೆ ಮಾಡಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ. ಹೆಚ್ಚಿನ ತಿಳುವಳಿಕೆಗಾಗಿ DSC ನೋಂದಾಯಿಸಿ ಬಳಕೆದಾರರ ಕೈಪಿಡಿಯನ್ನು ನೋಡಿ.

Data responsive

ಹಂತ 6: ನಾನು ಎಂಸೈನರ್ ಯುಟಿಲಿಟಿಯನ್ನು ಡೌನ್‌ಲೋಡ್ ಮಾಡಿ ಸ್ಥಾಪಿಸಿದ್ದೇನೆ ಅನ್ನು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಸೂಚನೆ: ನೀವು ಪುಟದ ಕೆಳಭಾಗದಲ್ಲಿರುವ ಹೈಪರ್‌ಲಿಂಕ್ ಬಳಸಿ ಈ ಯುಟಿಲಿಟಿ ಅನ್ನು ಡೌನ್‌ಲೋಡ್ ಮಾಡಿ ಸ್ಥಾಪಿಸಬಹುದು.

ಹಂತ 7: ಡೇಟಾ ಸೈನ್ ಪುಟದಲ್ಲಿ ಪ್ರೊವೈಡರ್ ಮತ್ತು ಪ್ರಮಾಣಪತ್ರ ಅನ್ನು ಆಯ್ಕೆ ಮಾಡಿ. ಪ್ರೊವೈಡರ್ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ಸೈನ್ ಮೇಲೆ ಕ್ಲಿಕ್ ಮಾಡಿ.

Data responsive

ಯಶಸ್ವಿ ಮಾನ್ಯತೆಯ ನಂತರ, ನಿಮ್ಮನ್ನು ಇ-ಸಲ್ಲಿಕೆ ಡ್ಯಾಶ್‌ಬೋರ್ಡ್ ಗೆ ಕರೆದೊಯ್ಯಲಾಗುತ್ತದೆ.

Data responsive

ವೈಯಕ್ತಿಕ ಬಳಕೆದಾರರು, PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ನಿಮ್ಮ PAN ನಿಷ್ಕ್ರಿಯಗೊಂಡಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ.

PAN ಅನ್ನು ಆಧಾರ್‌ಗೆ ಲಿಂಕ್ ಮಾಡಲು ಇದೀಗ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ, ಇಲ್ಲದಿದ್ದರೆ ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

3.6 ತೆರಿಗೆದಾರರಲ್ಲದ ಬಳಕೆದಾರರಿಗೆ ಲಾಗಿನ್ (CA, TAN ಬಳಕೆದಾರರು, ERI, ಹೊರಗಿನ ಏಜೆನ್ಸಿ, ITDREIN ಬಳಕೆದಾರರು)

ಹಂತ 1: ಇ-ಸಲ್ಲಿಕೆ ಪೋರ್ಟಲ್ ಮುಖಪುಟಕ್ಕೆ ಹೋಗಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ನಿಮ್ಮ ಬಳಕೆದಾರ ID ನಮೂದಿಸಿ ಟೆಕ್ಸ್ಟ್ ಬಾಕ್ಸ್ ಅಲ್ಲಿನಿಮ್ಮ ಬಳಕೆದಾರ ID ಯನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಸೂಚನೆ: ವಿವಿಧ ಬಳಕೆದಾರರ ಬಳಕೆದಾರ ID ಗಳನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ:

ಕ್ರಮ ಸಂಖ್ಯೆ

ಬಳಕೆದಾರ

ಬಳಕೆದಾರ ID

1

CA

ARCA ನಂತರ 6 ಅಂಕೆಯ ಸದಸ್ಯತ್ವ ಸಂಖ್ಯೆ

2

ತೆರಿಗೆ ಕಡಿತಗೊಳಿಸುವವರು ಮತ್ತು ಸಂಗ್ರಾಹಕರು

TAN

3

ERI

ERIP ನಂತರ 6 ಅಂಕೆಯ ಸಂಖ್ಯೆ

4

ಬಾಹ್ಯ ಸಂಸ್ಥೆ

EXTA ನಂತರ 6 ಅಂಕೆಯ ಸಂಖ್ಯೆ

5

ITDREIN ಬಳಕೆದಾರ

ವರದಿ ಘಟಕದ PAN/TAN ನಂತರ 2 ಅಕ್ಷರಗಳು ಮತ್ತು 3 ಅಂಕೆಗಳು;

ಹಂತ 3: ನಿಮ್ಮ ಸುರಕ್ಷಿತ ಪ್ರವೇಶ ಸಂದೇಶವನ್ನು ದೃಢೀಕರಿಸಿ. ನಿಮ್ಮ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಮುಂದುವರಿಯಲು ಕೆಳಗಿನ ಪಟ್ಟಿಯನ್ನು ನೋಡಿ:

ಇ-ಸಲ್ಲಿಕೆ ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿ ಸೆಕ್ಷನ್ 3.1 ಅನ್ನು ನೋಡಿ
ಆಧಾರ್ OTP ಬಳಸಿಕೊಂಡು ಲಾಗಿನ್ ಮಾಡಿ ಸೆಕ್ಷನ್ 3.2 ಅನ್ನು ನೋಡಿ<
ನೆಟ್ ಬ್ಯಾಂಕಿಂಗ್ ಬಳಸಿ ಲಾಗಿನ್ ಮಾಡಿ ಸೆಕ್ಷನ್ 3.3 ಅನ್ನು ನೋಡಿ
ಬ್ಯಾಂಕ್ ಖಾತೆ / ಡಿಮ್ಯಾಟ್ ಖಾತೆ ಇವಿಸಿ ಬಳಸಿ ಲಾಗಿನ್ ಮಾಡಿ ಸೆಕ್ಷನ್ 3.4 ಅನ್ನು ನೋಡಿ
ಇ-ಸಲ್ಲಿಕೆ DSC ಬಳಸಿ ಲಾಗಿನ್ ಮಾಡಿ ಸೆಕ್ಷನ್ 3.5 ಅನ್ನು ನೋಡಿ

4. ಸಂಬಂಧಿತ ವಿಷಯಗಳು