1. ನಾನು ನನ್ನ CA ಅನ್ನು ಇ-ಸಲ್ಲಿಕೆ ಖಾತೆಗೆ ಹೇಗೆ ಸೇರಿಸಬಹುದು?
ನೀವು ಲಾಗಿನ್ ಮಾಡಿದ ನಂತರ "ಲಭ್ಯವಿರುವ ಈ ಸೇವೆಯನ್ನು ಬಳಸಿ" ನಿಮ್ಮ ಚಾರ್ಟರ್ಡ್ ಅಕೌಂಟೆಂಟ್(ಗಳನ್ನು) ನಿಮ್ಮ ಇ-ಸಲ್ಲಿಕೆ ಖಾತೆಗೆ ಸೇರಿಸಬಹುದು. "ನನ್ನ CA" ಸೇವೆಯು ನಿಮಗೆ ಕೆಳಗಿನವುಗಳನ್ನು ಮಾಡಲು ಅವಕಾಶ ನೀಡುತ್ತದೆ:
- ನೀವು ಅನುಮೋದಿಸಿರುವ ಸಕ್ರಿಯ ಮತ್ತು ನಿಷ್ಕ್ರಿಯ CAಗಳ ಪಟ್ಟಿಯನ್ನು ನಿಮ್ಮ ಇ-ಸಲ್ಲಿಕೆ ಪೋರ್ಟಲ್ನಲ್ಲಿ ವೀಕ್ಷಿಸಿ.
- CAಯನ್ನು ಸೇರಿಸಿ
- CAಯವರಿಗೆ ಫಾರ್ಮ್ಗಳನ್ನು ನಿಯೋಜಿಸಿ
- ನಿಯೋಜಿಸಿದ ಫಾರ್ಮ್ಗಳನ್ನು ಹಿಂಪಡೆಯಿರಿ.
- CAಯನ್ನು ಸಕ್ರಿಯಗೊಳಿಸಿ
- CAಯನ್ನು ನಿಷ್ಕ್ರಿಯಗೊಳಿಸಿ
2. "ನನ್ನ CA" ಸೇವೆಯನ್ನು ಯಾರು ಪ್ರವೇಶಿಸಬಹುದು?
ಕೆಳಗಿನ ವರ್ಗಗಳಲ್ಲಿ ಒಂದರಲ್ಲಿ ಬರುವ ಇ-ಸಲ್ಲಿಕೆ ಪೋರ್ಟಲ್ನ ಎಲ್ಲಾ ನೋಂದಾಯಿತ ಬಳಕೆದಾರರು ಈ ಸೇವೆಯನ್ನು ಪ್ರವೇಶಿಸಬಹುದು:
- ವೈಯಕ್ತಿಕ ತೆರಿಗೆದಾರ
- HUF
- ಕಂಪನಿ, AOP, BOI, AJP, ಟ್ರಸ್ಟ್, ಸರ್ಕಾರ, ಸ್ಥಳೀಯ ಪ್ರಾಧಿಕಾರ, ವ್ಯಾವಹಾರಿಕ ಸಂಸ್ಥೆ
- ತೆರಿಗೆ ಕಡಿತದಾರರು ಮತ್ತು ಸಂಗ್ರಹಣಾಕಾರರು
3. CAಗೆ ನಿಯೋಜಿಸಿದ ಫಾರ್ಮ್ಗಳನ್ನು ನಾನು ಹಿಂಪಡೆಯಬಹುದೇ?
ಹೌದು, CAಗೆ ನಿಯೋಜಿಸಿದ ನಂತರ ಫಾರ್ಮ್ಗಳನ್ನು ಹಿಂಪಡೆಯಬಹುದು. CAಗೆನಿಯೋಜಿಸಿದ ಎಲ್ಲಾ ಫಾರ್ಮ್ಗಳನ್ನು ಬಳಕೆದಾರರು ವೀಕ್ಷಿಸಬಹುದು ಮತ್ತು ಅಗತ್ಯವಿದ್ದರೆ ಅವುಗಳನ್ನು ಹಿಂಪಡೆಯಬಹುದು.
4. ನಾನು CA ಅವರಿಗೆ ಅಧಿಕಾರ ನೀಡುವುದು ಏಕೆ?
CA ನಿಮ್ಮ ಪರವಾಗಿ ಇ-ಸಲ್ಲಿಕೆ ಪೋರ್ಟಲ್ನಲ್ಲಿ ಯಾವುದೇ ಫಾರ್ಮ್ಗಳನ್ನು ಸಲ್ಲಿಸುವುದು ಅಥವಾ ಸಲ್ಲಿಕೆ ಮಾಡುವ ಮೊದಲು, ಅವರನ್ನು ನೀವು ಅನುಮೋದಿಸಬೇಕು. ಜೊತೆಗೆ, ಕೆಲವು ಕಾನೂನುಬದ್ಧ ಫಾರ್ಮ್ಗಳಿಗೆ CA ಪ್ರಮಾಣೀಕರಣ ಅಗತ್ಯವಿರುತ್ತದೆ. ಈ ಸೇವೆಯ ಮೂಲಕ ನೀವು CA ಅನ್ನು ಸೇರಿಸಬಹುದು, ಮತ್ತು ನಿಮ್ಮ ITRಗಳು / ಫಾರ್ಮ್ಗಳನ್ನು ಸಲ್ಲಿಸಲು, ಸೇರಿಸುವ ವಿನಂತಿಯನ್ನು CA ಸ್ವೀಕರಿಸಬೇಕು.