Do not have an account?
Already have an account?

ಕುಂದುಕೊರತೆಗಳನ್ನು ಸಲ್ಲಿಸುವುದು ಹೇಗೆ- ಬಳಕೆದಾರರ ಕೈಪಿಡಿ

 

1.ಅವಲೋಕನ

ಇ-ನಿವಾರಣವು ಇ-ಸಲ್ಲಿಕೆ ಪೋರ್ಟಲ್‌ನಲ್ಲಿರುವ ಕುಂದುಕೊರತೆ ಪರಿಹಾರ ಘಟಕವಾಗಿದ್ದು, ತೆರಿಗೆದಾರರ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ಬಳಸಲಾಗುತ್ತದೆ. ಅವುಗಳೆಂದರೆ, ಇ-ಸಲ್ಲಿಕೆ, CPC-ITR, ಮೌಲ್ಯಮಾಪನ ಅಧಿಕಾರಿ (AO) ಮತ್ತು CPC-TDS.

2. ಕುಂದುಕೊರತೆಯನ್ನು ಯಾರು ದಾಖಲಿಸಬಹುದು?

ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತ ಅಥವಾ ನೋಂದಾಯಿಸದ ಬಳಕೆದಾರರು.

3. ಇ-ನಿವಾರಣದಲ್ಲಿ ಕುಂದುಕೊರತೆಗಳನ್ನು ದಾಖಲಿಸಬಹುದಾದ ವಿಭಾಗಗಳು

a. ಇ-ಸಲ್ಲಿಕೆ: ಆದಾಯ ತೆರಿಗೆ ರಿಟರ್ನ್ ಅಥವಾ ಶಾಸನಬದ್ಧ ನಮೂನೆಗಳ ಇ-ಸಲ್ಲಿಕೆ ಮತ್ತು ಇ-ಪರಿಶೀಲನೆ, ಇ-ಕಾರ್ಯವಿಧಾನಗಳು ಮುಂತಾದ ಮೌಲ್ಯವರ್ಧಿತ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಕೆಳಗಿನ ವರ್ಗಗಳ ಅಡಿಯಲ್ಲಿ ಇ-ಸಲ್ಲಿಕೆ ವಿಭಾಗದಲ್ಲಿ ದಾಖಲಿಸಬಹುದು:

ಇ-ಸಲ್ಲಿಕೆ ವಿಭಾಗದಲ್ಲಿನ ವರ್ಗಗಳು:
 

ಸಂವಹನ DCS ಸಂಬಂಧಿತ ಇ-PAN ITR ಸಲ್ಲಿಸುವಿಕೆ ಸಂಬಂಧಿತ ಫಾರ್ಮ್‌ಗಳು
ITDREIN ತ್ವರಿತ ಇ-PAN (ಆಧಾರ್ ಮೂಲಕ ತ್ವರಿತ e-PAN) JSON ಉಪಯುಕ್ತತೆಗೆ ಸಂಬಂಧಿತ ಮೊಬೈಲ್ ಅಪ್ಲಿಕೇಶನ್ ಪಾಸ್‌ವರ್ಡ್
ಪ್ರೊಫೈಲ್ ತಿದ್ದುಪಡಿ ಸಂಬಂಧಿತ ನೋಂದಣಿ TAN ಸಂಬಂಧಿತ TIN 2.0
ಟ್ಯಾಕ್ಸ್‌ಜೀನಿ/ಚಾಟ್‌ಬಾಟ್ ಸೇವೆಗಳು ಪರಿಶೀಲನೆ/ಇ-ಪರಿಶೀಲನೆ ಸಾಧ್ಯವಿಲ್ಲ ಇ-ಸಲ್ಲಿಕೆ ಪೋರ್ಟಲ್ ಪ್ರವೇಶ ಇ-ನಡಾವಳಿಗಳು  

b. ಮೌಲ್ಯಮಾಪನ ಅಧಿಕಾರಿ (AO): ಮೌಲ್ಯಮಾಪನ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ತೆರಿಗೆದಾರರ ಮೌಲ್ಯಮಾಪನವನ್ನು ನಿರ್ವಹಿಸುವ ನಿಯೋಜಿತ ಆದಾಯ ತೆರಿಗೆ ಅಧಿಕಾರಿಗಳಾಗಿದ್ದು, ಕೆಳಗಿನ ವರ್ಗಗಳ ಅಡಿಯಲ್ಲಿ ಬೇಡಿಕೆ, ಮೇಲ್ಮನವಿ ಮತ್ತು PAN ಗೆ ಸಂಬಂಧಿಸಿದ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು:


ಮೌಲ್ಯಮಾಪನ ಅಧಿಕಾರಿ (AO) ವಿಭಾಗದಲ್ಲಿನ ವರ್ಗಗಳು:

ಮೇಲ್ಮನವಿ ಪರಿಣಾಮ ಆದೇಶ ಸ್ವೀಕರಿಸಲಾಗಿಲ್ಲ ಮೂಲದಲ್ಲೇ ತೆರಿಗೆ ಕಡಿತ (TDS) ಮಾಡಬೇಕಾದವರಿಂದ ಕರ್ತವ್ಯಲೋಪ ಮೌಲ್ಯಮಾಪನ ಅಧಿಕಾರಿ (AO) ಮೂಲಕ ಸರಿಪಡಿಸಬೇಕಾದ ತಪ್ಪಾದ ಬೇಡಿಕೆ ಮೌಲ್ಯಮಾಪನ ಅಧಿಕಾರಿ (AO) ಅವರಿಂದ ಸರಿಪಡಿಸಬೇಕಾದ ತಪ್ಪಾದ ಬೇಡಿಕೆ ಇತರೆ ಅರ್ಜಿ ಬಾಕಿ ಇದೆ
ಮೌಲ್ಯಮಾಪನ ಅಧಿಕಾರಿ (AO) ಅವರ ಬಳಿ ಇರುವ PAN ಸಂಬಂಧಿತ ಅರ್ಜಿ PAN ಸ್ಥಿತಿ ಮೌಲ್ಯಮಾಪನ ಅಧಿಕಾರಿ (AO) ಅವರ ಬಳಿ ಬಾಕಿ ಇರುವ ದೋಷ ತಿದ್ದುಪಡಿ ವಿಷಯಗಳು ಮರುಪಾವತಿ ಸ್ವೀಕರಿಸಲಾಗಿಲ್ಲ ಇತರೆ

c. CPC-ITR: ಈ ವಿಭಾಗವು ಆದಾಯ ತೆರಿಗೆ ರಿಟರ್ನ್‌ಗಳ ಸಂಸ್ಕರಣೆಯನ್ನು ನಿರ್ವಹಿಸುತ್ತದೆ. ITR-V, ಮರುಪಾವತಿ, ಆದಾಯ ತೆರಿಗೆ ರಿಟರ್ನ್ ಸಂಸ್ಕರಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಕೆಳಗಿನ ವರ್ಗಗಳ ಅಡಿಯಲ್ಲಿ CPC-ITR ವಿಭಾಗದಲ್ಲಿ ಸಲ್ಲಿಸಬಹುದು:

CPC-ITR ವಿಭಾಗದಲ್ಲಿನ ವರ್ಗಗಳು:

ಸಂವಹನ ಬೇಡಿಕೆ ITR-V
ಸಂಸ್ಕರಣೆ ತಿದ್ದುಪಡಿ ಮರುಪಾವತಿ

d. CPC-TDS: ಈ ವಿಭಾಗವು ಇ-TDS ಯೋಜನೆಗೆ ಸಂಬಂಧಿಸಿದೆ. TAN ಗಾಗಿ TDS ಮರುಪಾವತಿ, 26QB/26QC/26QD/26QE, ಫಾರ್ಮ್ 26AS/ATS ಸಂಬಂಧಿತ ವಿಷಯಗಳು, ಕರ್ತವ್ಯಲೋಪಗಳು, TDS/TCS ಹೇಳಿಕೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಆಸ್ತಿ ಮಾರಾಟದ ಮೇಲಿನ TDS ಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳನ್ನು ಕೆಳಗಿನ ವರ್ಗಗಳ ಅಡಿಯಲ್ಲಿ ಈ ವಿಭಾಗದಲ್ಲಿ ಸಲ್ಲಿಸಬಹುದು.

CPC-TDS ವಿಭಾಗದಲ್ಲಿನ ವರ್ಗಗಳು:

26QB/26QC/26QD/26QE ಸಂಬಂಧಿತ ಸಮಸ್ಯೆಗಳು ಚಲನ್/BIN ಸಂಬಂಧಿತ ಕರ್ತವ್ಯಲೋಪಕ್ಕೆ ಸಂಬಂಧಿತ TDS/TCS ಪ್ರಮಾಣಪತ್ರಗಳ ಡೌನ್‌ಲೋಡ್ ಸಂಬಂಧಿತ ಸಮಸ್ಯೆಗಳು
ಫಾರ್ಮ್ 13 / ಫಾರ್ಮ್ 15E / ಫಾರ್ಮ್ 15C&15D ಫಾರ್ಮ್ 26A/27BA ಫಾರ್ಮ್ 26AS/ATS ಸಂಬಂಧಿಸಿದ KYC
TAN ಗಾಗಿ TDS ಮರುಪಾವತಿ TDS/TCS ಹೇಳಿಕೆಯ ಸಂಬಂಧಿತ ಸಮಸ್ಯೆಗಳು RACES ನೋಂದಣಿ/ಲಾಗಿನ್ ಸಂಬಂಧಿತ ಪ್ರಶ್ನೆಗಳು ಇತರೆ
ತೆರಿಗೆ ಕಡಿತ / ಸಂಗ್ರಹಣೆಯ ತ್ರೈಮಾಸಿಕ ಹೇಳಿಕೆಯ ಸಂಸ್ಕರಣೆ TRACES ಪೋರ್ಟಲ್‌ನಲ್ಲಿ ಡೌನ್‌ಲೋಡ್‌ಗೆ ಸಂಬಂಧಿಸಿದ ವಿಷಯಗಳು TRACES ಪೋರ್ಟಲ್‌ನಲ್ಲಿ ಡೌನ್‌ಲೋಡ್‌ಗೆ ಸಂಬಂಧಿಸಿದ ಸಮಸ್ಯೆಗಳು ಫಾರ್ಮ್ 26AS/ವಾರ್ಷಿಕ ತೆರಿಗೆ ಹೇಳಿಕೆಯಲ್ಲಿ TDS/TCS ನಲ್ಲಿನ ನಿಖರತೆಯ ಕೊರತೆ
ತೆರಿಗೆ ಕಡಿತದ ಚಲನ್ ಸಹಿತ ಹೇಳಿಕೆಯ ವಿರುದ್ಧ ಬಾಕಿ ಇರುವ ಬೇಡಿಕೆ ತೆರಿಗೆ ಕಡಿತದ ಚಲನ್ ಸಹಿತ ಹೇಳಿಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆ ತೆರಿಗೆ ಕಡಿತ / ಸಂಗ್ರಹಣೆಯ ತ್ರೈಮಾಸಿಕ ಹೇಳಿಕೆಯನ್ನು ಸಲ್ಲಿಸುವಲ್ಲಿ ಎದುರಾಗುವ ಸಮಸ್ಯೆಗಳು ತೆರಿಗೆ ಕಡಿತದ ಚಲನ್ ಸಹಿತ ಹೇಳಿಕೆಗೆ ಸಂಬಂಧಿಸಿದ ಮರುಪಾವತಿ
TDS/TCS BIN ಸಂಬಂಧಿತ ಸಮಸ್ಯೆ TDS/TCS ಚಲನ್ ಸಂಬಂಧಿತ ಸಮಸ್ಯೆ ತೆರಿಗೆ ಕಡಿತ / ಸಂಗ್ರಹಣೆಯ ತ್ರೈಮಾಸಿಕ ಹೇಳಿಕೆಗೆ ಸಂಬಂಧಿಸಿದ TDS/TCS ಬೇಡಿಕೆ ಇತರೆ

4. ಕುಂದುಕೊರತೆಯನ್ನು ದಾಖಲಿಸುವುದು ಮತ್ತು ಸಲ್ಲಿಕೆ ಮಾಡುವುದು ಹೇಗೆ

4.1. ನೀವು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದರೆ:

ಹಂತ 1: ಇ-ಸಲ್ಲಿಕೆ ಪೋರ್ಟಲ್ ಗೆ ಹೋಗಿ ಮತ್ತು ಲಾಗಿನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಲಾಗಿನ್ ಪುಟದಲ್ಲಿ ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

Data responsive

ಹಂತ 3: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, 'ಕುಂದುಕೊರತೆಗಳು ಪರಿವಿಡಿ' > 'ಕುಂದುಕೊರತೆ ಸಲ್ಲಿಸಿ' ಗೆ ಹೋಗಿ.

Data responsive

ಹಂತ 4: 'ಕುಂದುಕೊರತೆ' ಪುಟದಲ್ಲಿ, ಸಂಬಂಧಿತ ವಿಭಾಗವನ್ನು ಆಯ್ಕೆ ಮಾಡಿ ಪರ್ಯಾಯವಾಗಿ, ಕುಂದುಕೊರತೆಯನ್ನು ದಾಖಲಿಸಲು ಸರ್ಚ್ ಬಾಕ್ಸ್‌ನಲ್ಲಿ ಸಮಸ್ಯೆಯನ್ನು ಹುಡುಕಿ.

Data responsive

ಹಂತ 5: ಸಂಬಂಧಿತ ವಿಭಾಗವನ್ನು ಆಯ್ಕೆ ಮಾಡಿದ ನಂತರ, ಡ್ರಾಪ್‌ಡೌನ್ ಮೆನುವಿನಿಂದ ಕುಂದುಕೊರತೆಯ ವರ್ಗ, ಅನ್ವಯವಾಗುವ ಕಾಯಿದೆ (ಆದಾಯ ತೆರಿಗೆ ಕಾಯಿದೆ, 2025 ಅಥವಾ ಆದಾಯ ತೆರಿಗೆ ಕಾಯಿದೆ, 1961) ಮತ್ತು ಉಪವರ್ಗವನ್ನು ಆಯ್ಕೆ ಮಾಡಿ ಮತ್ತು ‘ಮುಂದುವರಿಸಿ’ ಮೇಲೆ ಕ್ಲಿಕ್ ಮಾಡಿ. ವರ್ಗ ಮತ್ತು ಉಪವರ್ಗವನ್ನು ತಿಳಿದುಕೊಳ್ಳಲು, ದಯವಿಟ್ಟು ಮೇಲಿನ ಪ್ಯಾರಾ 3 ಅನ್ನು ನೋಡಿ.

Data responsive

ಹಂತ 6: ಕುಂದುಕೊರತೆಯ ವರ್ಗದ ಆಧಾರದ ಮೇಲೆ ಇತರೆ ಮಾಹಿತಿಯನ್ನು (AY/TY ಇತ್ಯಾದಿ) ನಮೂದಿಸಿ, ‘ಕುಂದುಕೊರತೆಯ ವಿವರಣೆ’ ಬಾಕ್ಸ್‌ನಲ್ಲಿ ಕುಂದುಕೊರತೆಯ ವಿವರಣೆಯನ್ನು (ಕನಿಷ್ಠ 100 ಅಕ್ಷರಗಳಲ್ಲಿ) ಬರೆಯಿರಿ ಮತ್ತು ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಕಡ್ಡಾಯವಲ್ಲ) ಹಾಗೂ ‘ಕುಂದುಕೊರತೆ ಸಲ್ಲಿಸಿ’ ಮೇಲೆ ಕ್ಲಿಕ್ ಮಾಡಿ.

Data responsive


ಹಂತ 7: ಈಗ, ಕುಂದುಕೊರತೆಯನ್ನು ಸಲ್ಲಿಸಲಾಗಿದೆ. ಕುಂದುಕೊರತೆಯ ಸ್ಥಿತಿಯನ್ನು ಪರಿಶೀಲಿಸಲು ಕುಂದುಕೊರತೆ ಸ್ವೀಕೃತಿ ಸಂಖ್ಯೆಯನ್ನು ಗಮನಿಸಿ.

Data responsive

ಇದಲ್ಲದೆ, ಆದಾಯ ತೆರಿಗೆ ಕುಂದುಕೊರತೆ ಇಮೇಲ್ ವಿಳಾಸದ ಮೂಲಕವೂ ನಿಮ್ಮ ಸಮಸ್ಯೆಗಳನ್ನು ಪರಿಹರಿಸಬಹುದು. ಇಮೇಲ್ ವಿಳಾಸ: webmanager@incometax.gov.in.


ಸೂಚನೆ: ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಕುಂದುಕೊರತೆ ಕಾರ್ಯವಿಧಾನವನ್ನು ಬಳಸಿಕೊಂಡು ಲಾಗಿನ್ ನಂತರ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಕುಂದುಕೊರತೆಯನ್ನು ಸಲ್ಲಿಸಲು ಶಿಫಾರಸು ಮಾಡುತ್ತದೆ.

4.2. ನೀವು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿಲ್ಲದಿದ್ದರೆ:


ಹಂತ 1: ಇ-ಸಲ್ಲಿಕೆ ಪೋರ್ಟಲ್‌ಗೆ ಹೋಗಿ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ನಮ್ಮನ್ನು ಸಂಪರ್ಕಿಸಿ' ವಿಭಾಗದ ಅಡಿಯಲ್ಲಿ 'ಕುಂದುಕೊರತೆಗಳು' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: 'ನನ್ನ ಬಳಿ PAN/TAN ಇಲ್ಲ' ಅನ್ನು ಆಯ್ಕೆ ಮಾಡಿ ಮತ್ತು 'ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ಹೆಸರು, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ವಿವರಗಳನ್ನು ನಮೂದಿಸಿ ಮತ್ತು 'ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 4: ಮೇಲಿನ ಹಂತದಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ಸ್ವೀಕರಿಸಿದ ಒಂದು ಬಾರಿಯ ಪಾಸ್‌ವರ್ಡ್ (OTP) ಅನ್ನು ನಮೂದಿಸಿ ಮತ್ತು 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 5: ಈಗ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರಂತೆ ಕುಂದುಕೊರತೆಯನ್ನು ದಾಖಲಿಸಿ.

Data responsive

5. ಕುಂದುಕೊರತೆಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ

ಕುಂದುಕೊರತೆಯ ಸ್ಥಿತಿಯನ್ನು ಲಾಗಿನ್ ಪೂರ್ವ ಮತ್ತು ಲಾಗಿನ್ ನಂತರದ ವಿಧಾನದಲ್ಲಿ ಪರಿಶೀಲಿಸಬಹುದು.

ಲಾಗಿನ್ ಪೂರ್ವ ವಿಧಾನ

ಹಂತ 1: ಇ-ಸಲ್ಲಿಕೆ ಪೋರ್ಟಲ್ ಗೆ ಹೋಗಿ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ನಮ್ಮನ್ನು ಸಂಪರ್ಕಿಸಿ' ವಿಭಾಗದ ಅಡಿಯಲ್ಲಿ 'ಕುಂದುಕೊರತೆಯನ್ನು ನೋಡಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಕುಂದುಕೊರತೆ ಸ್ವೀಕೃತಿ ಸಂಖ್ಯೆಯನ್ನು ಮತ್ತು ಕುಂದುಕೊರತೆಯನ್ನು ಸಲ್ಲಿಸುವಾಗ ಬಳಸಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಲಾಗಿನ್ ನಂತರದ ವಿಧಾನ

ಹಂತ 1: ಇ-ಸಲ್ಲಿಕೆ ಪೋರ್ಟಲ್ ಗೆ ಹೋಗಿ ಮತ್ತು 'ಲಾಗಿನ್' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಲಾಗಿನ್ ಪುಟದಲ್ಲಿ ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

Data responsive

ಹಂತ 3: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, 'ಕುಂದುಕೊರತೆಗಳು ಮೆನು' > 'ಕುಂದುಕೊರತೆ ಸ್ಥಿತಿಯನ್ನು ನೋಡಿ' ಗೆ ಹೋಗಿ.

Data responsive



ಹಂತ 4: ನಿಮ್ಮ ಕುಂದುಕೊರತೆಯ ಸ್ಥಿತಿಯನ್ನು ಪರಿಶೀಲಿಸಿ. ನೀವು 'ಸಲ್ಲಿಸಿದ ದಿನಾಂಕ', 'ವಿಭಾಗ' ಮತ್ತು 'ಸ್ಥಿತಿ' ಫಿಲ್ಟರ್‌ಗಳನ್ನು ಸಹ ಬಳಸಬಹುದು.

Data responsive

6. ಸಂಬಂಧಿತ ವಿಷಯಗಳು

 

ಪದಕೋಶ

ಸಂಕ್ಷಿಪ್ತ ರೂಪ/ಸಂಕ್ಷೇಪಣೆ

ವಿವರಣೆ / ವಿಸ್ತೃತ ರೂಪ

ITR

ಆದಾಯ ತೆರಿಗೆ ರಿಟರ್ನ್‌ಗಳು

DSC

ಡಿಜಿಟಲ್ ಸಹಿ ಪ್ರಮಾಣಪತ್ರ

TY/AY

ತೆರಿಗೆ/ಮೌಲ್ಯಮಾಪನ ವರ್ಷ

PY

ಹಿಂದಿನ ವರ್ಷ

FY

ಹಣಕಾಸಿನ ವರ್ಷ